ಜಗ್ಗೇಶ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜಗ್ಗೇಶ್
ಜಗ್ಗೇಶ್
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1965-03-17) ಮಾರ್ಚ್ ೧೭, ೧೯೬೫(ವಯಸ್ಸು ೫೧)
ಬೇರೆ ಹೆಸರುಗಳು ನವರಸ ನಾಯಕ ಮಾತಿನ ಮಲ್ಲ
ವೃತ್ತಿ ನಟ


ಜಗ್ಗೇಶ್' (ಮಾರ್ಚ್ ೧೭, ೧೯೬೩) ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾದವರು. ಇವರ ಸ್ವಂತ ಸ್ಥಳ, ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಎಂಬ ಊರು.

ಚಲನಚಿತ್ರ ಜೀವನ[ಬದಲಾಯಿಸಿ]

ಜೀವನದಲ್ಲಿ ಕಷ್ಟ ಪಟ್ಟು ಮೇಲೆ ಬಂದ ಜಗ್ಗೇಶ್ ಮೊದ ಮೊದಲಿಗೆ ಸಣ್ಣ ಪುಟ್ಟ ಹಾಸ್ಯ, ಖಳ ಪಾತ್ರಧಾರಿಯಾಗಿ ನಟಿಸಿ ಮುಂದೆ ಪ್ರಸಿದ್ಧ ನಟರಾಗಿ ಬೆಳೆದಿದ್ದಾರೆ.

ಇವರ ಮೊದಲನೆಯ ಚಿತ್ರ - ಇಬ್ಬನಿ ಕರಗಿತು. ನೂರನೆಯ ಚಿತ್ರ ಮಠ. ಮೇಕಪ್ ಎಂಬ ಚಿತ್ರ ನಿರ್ಮಿಸಿ,ನಿರ್ಮಾಪಕರೂ ಆಗಿದ್ದಾರೆ. ತಮ್ಮ ಕೆಲವು ಚಿತ್ರಗಳಲ್ಲಿ ತಾವೇ ಹಾಡಿದ್ದಾರೆ.

ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ತರ್ಲೆ ನನ್ ಮಗ. ಈ ಚಿತ್ರವನ್ನು ಉಪೇಂದ್ರ ನಿರ್ದೇಶಿಸಿದ್ದಾರೆ.

ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾಗಿರುವ ಜಗ್ಗೇಶ್ ಅವರು,ತಮ್ಮ ವಿಶಿಷ್ಟ ಹಾವಭಾವದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಚಿತ್ರರಂಗದಲ್ಲಿ ಇವರು ನವರಸ ನಾಯಕ ನೆಂದು ಪ್ರಸಿದ್ಧಿ ಪಡೆದಿದ್ದಾರೆ.

ರಾಜಕೀಯ ರಂಗದಲ್ಲಿ[ಬದಲಾಯಿಸಿ]

ಜಗ್ಗೇಶ್ ತುರುವೇಕೆರೆ ಕ್ಷೇತ್ರದಲ್ಲಿ ಶಾಸಕರಾಗಿದ್ದರು. ಫೆ.೩, ೨೦೧೦ರಂದು ಕರ್ನಾಟಕ ವಿಧಾನ ಪರಿಷತ್ತಿಗೆ ಜಗ್ಗೇಶ್ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.

ಜಗ್ಗೇಶ್ ಅಭಿನಯದ ಚಿತ್ರಗಳು[ಬದಲಾಯಿಸಿ]

"https://kn.wikipedia.org/w/index.php?title=ಜಗ್ಗೇಶ್&oldid=737613" ಇಂದ ಪಡೆಯಲ್ಪಟ್ಟಿದೆ