ರಾಮ್ ಪ್ರಸಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಮ್ ಪ್ರಸಾದ್: ಇವರು ಮೂಡಲ್ ಕುಣಿಗಲ್ ಕೆರೆ ರಾಮ್ ಪ್ರಸಾದ್ ಎಂದೇ ಬಹು ಮಂದಿಗೆ ಪರಿಚಿತರು. 'ಮೂಡಲ್ ಕುಣಿಗಲ್ ಕೆರೆ' ಎಂಬ ಜಾನಪದ ಹಾಡನ್ನು "ನನ್ನ ಪ್ರೀತಿಯ ಹುಡುಗಿ" ಚಿತ್ರದಲ್ಲಿ ಮನೋ ಮೂರ್ತಿ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರು ಬಳಸಿಕೊಂಡರು. ಈ ಹಾಡನ್ನು ಹಾಡಿದವರು ಈ ರಾಮ್ ಪ್ರಸಾದ್. ಇವರ ಸಂಪೂರ್ಣ ಹೆಸರು ಎಚ್.ವಿ.ರಾಮ್ ಪ್ರಸಾದ್. ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿದರು. ನಂತರ ಅಮೆರಿಕಾದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು. ತಮ್ಮ ಸಂಗೀತದ ಹವ್ಯಾಸವನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ಮುಂದುವರೆಸಲು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ನನ್ನ ಪ್ರೀತಿಯ ಹುಡುಗಿ ಚಿತ್ರ ಅಲ್ಲದೆ, ಪ್ರೀತಿ ಪ್ರೇಮ ಪ್ರಣಯ, ಅಮೃತ ಧಾರೆ ಚಿತ್ರಗಳಲ್ಲೂ ಹಾಡಿದ್ದಾರೆ. ಮತ್ತು ಹಲವು ಭಾವಗೀತೆಗಳ ಕ್ಯಾಸೆಟ್ಟುಗಳನ್ನು ಹೊರ ತಂದಿದ್ದಾರೆ. ಅವುಗಳಲ್ಲಿ ಪ್ರಮುಖವೆಂದರೆ "ನಿನ್ನ ಕನಸುಗಳಲ್ಲಿ" .