ವಿಷಯಕ್ಕೆ ಹೋಗು

ಹೊನ್ನಪ್ಪ ಭಾಗವತರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊನ್ನಪ್ಪ ಭಾಗವತಾರ್

ಹೊನ್ನಪ್ಪ ಭಾಗವತರ್ - ೧೯೫೦ರ ದಶಕದ ಹೆಸರಾಂತ ರಂಗ ಕಲಾವಿದರು, ಗಾಯಕರು, ಹಾಗು ಚಿತ್ರನಟರು.

೧೯೧೬ ರ ಜನವರಿ ೧೫ ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ಜನಿಸಿದರು,ನೇಯ್ಗೆ ಮನೆತನದ ವ್ರತ್ತಿಯಾಗಿತ್ತು,ಐದನೆಯ ವಯಸ್ಸಿನಲ್ಲಿಯೇ ತಂದೆ ಚಿಕ್ಕಲಿಂಗಪ್ಪನವರನ್ನು ಕಳೆದುಕೊಂಡ ಹೊನ್ನಪ್ಪ ನವರಿಗೆ ತಾಯಿ ಹೇಳುತ್ತಿದ್ದ ಭಜನೆ,ಸಂಗೀತವೆಂದರೆ ಭಾರೀ ಆಕರ್ಷಣೆ.ಕೆಲ ವರ್ಷಾನಂತರ ಬೆಂಗಳೂರಿಗೆ ಬಂದ ಹೊನ್ನಪ್ಪ ನೌಕರಿ ಹಿಡಿದರು.ಮೊದಲು ಸಂಬಂಧ ಮೂರ್ತಿ ಭಾಗವತರ ಶಿಷ್ಯ ವ್ರತ್ತಿ ಹಿಡಿದರು,ನಂತರ ಹಾರ್ಮೋನಿಯಂ ಅರುಣಾಚಲಪ್ಪ ನವರಿಂದಲೂ ಶಿಷ್ಯ ವ್ರತ್ತಿ ಪಡೆದರು.

ಒಮ್ಮೆ ಸೇಲಂನಲ್ಲಿ ಹೊನ್ನಪ್ಪ ನವರ ಕಛೇರಿ ಏರ್ಪಾಡಾಯಿತು.ಆಗ ಎಂ.ಕೆ.ತ್ಯಾಗರಾಜ ಭಾಗವತರ್ ನಾಯಕರಾಗಿದ್ದ "ಅಂಬಿಕಾಪತಿ" ತಮಿಳು ಸಿನಿಮಾಕ್ಕೆ ನಾಯಕನ ಗೆಳೆಯನ ಪಾತ್ರಕ್ಕೆ ಕಲಾವಿದನನ್ನು ಹುಡುಕುತಿದ್ದರು.ಹೊನ್ನಪ್ಪನವರನ್ನು ಕಂಡ ನಂತರ ಆ ಪಾತ್ರಕ್ಕೆ ಇವರೇ ಸೂಕ್ತ ಎಂದು ನಿರ್ಧರಿಸಿದರು. ಸೇಲಂನಲ್ಲಿ ಅದ್ಭುತ ಕಚೇರಿ ಮಾಡಿದ ಕನ್ನಡಿಗ .ಹೊನ್ನಪ್ಪ ಎಲ್ಲರ ಮೆಚುಗೆಗೆ ಪಾತ್ರವಾದರು...ಹೊನ್ನಪ್ಪ ನವರನ್ನು ಸನ್ಮಾನಿಸಿ ಅವರ ಹೆಸರಿನ ಮುಂದೆ "ಭಾಗವತರ್"ಎಂಬ ಬಿರುದನ್ನೂ ಸೇರಿಸಿ ಗೌರವಿಸಿದರು.ಅಲ್ಲಿಂದ ಮುಂದೆ ಬೆಂಗಳೂರಿನ ಹೊನ್ನಪ್ಪನವರು "ಅಂಬಿಕಾಪತಿ"ಯ ಹೊನ್ನಪ್ಪ ಭಾಗವತರ್ ಆದರು.

ಕನ್ನಡ ಚಿತ್ರರಂಗಕ್ಕೆ ಬಿ.ಸರೋಜಾದೇವಿ ಅವರನ್ನು ಪರಿಚಯಿಸಿದ ಗೌರವ ಇವರಿಗೆ ಸಲ್ಲುತ್ತದೆ.೧೯೬೦ರಲ್ಲಿ ಭಾಗವತರು "ನಾದಬ್ರಹ್ಮ ಸಂಗೀತ ವಿದ್ಯಾಲಯ" ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅನೇಕ ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ.ಕರ್ನಾಟಕ ರಾಜ್ಯ ಚಲನಚಿತ್ರ ಸಲಹಾಮಂಡಳಿಯ ಸದಸ್ಯರಾಗಿ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆಸಲ್ಲಿಸಿದ್ದಾರೆ.

೧೯೭೬ರಲ್ಲಿ ಕರ್ನಾಟಕ ಗಾನ ಕಲಾಪರಿಷತ್ತು ತನ್ನ ಆರನೇ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರನ್ನಾಗಿ ಚುನಾಯಿಸಿ ಚಿನ್ನದ ಪದಕೊಂದಿಗೆ ಗಾನ ಕಲಾಭೂಷಣ ಎಂಬ ಬಿರುದನ್ನಿತ್ತು ಗೌರವಿಸಿದೆ. . ಹೊನ್ನಪ್ಪ ಭಾಗವತರ್ ನಟಿಸಿದ ಮಹಾಕವಿ ಕಾಳಿದಾಸ ಮತ್ತು ಜಗಜ್ಯೋತಿ ಬಸವೇಶ್ವರ ಚಿತ್ರಗಳ ನಟನೆಗಾಗಿ ಕೇಂದ್ರ ಸರ್ಕಾರವು ಕ್ರಮವಾಗಿ ೧೯೫೫ ಮತ್ತು ೧೯೫೯ರಲ್ಲಿ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಿದೆ.೧೯೯೧ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಇವರ ಸಂಗೀತ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿದೆ. ಅದೇವರ್ಷವೇ ರಂಗ ಸಂಗೀತ ಕ್ಷೇತ್ರದ ಪ್ರಶಸ್ತಿಯೂ ಇವರಿಗೆ ಲಭಿಸಿದೆ.೧೯೫೬ರಲ್ಲಿ ನಿರ್ಮಾಣಗೊಂಡ ಕನ್ನಡ ಚಲನಚಿತ್ರಗಳಲ್ಲಿ ಹೊನ್ನಪ್ಪ ಭಾಗವತರು ನಟಿಸಿರುವ ಚಿತ್ರವನ್ನು ಪರಿಗಣಿಸಿ ಅತ್ಯುತ್ತಮ ನಟ ಎಂದು ಮದ್ರಾಸ್‌ ಸಿನ ಪ್ಯಾನ್ಸ್ ಅಸೋಸಿಯೇಷನ್ಸ್ ಪ್ರಶಸ್ತಿ ನೀಡಿ ಗೌರವಿಸಿದೆ.೧೯೭೮ರಲ್ಲಿ ಮೈಸೂರು ಸಂಸ್ಥಾನದ ವಿದ್ವಾಂಸರು ಗಾನಕಲಾಗಂಧರ್ವ ಎಂಬ ಬಿರುದನ್ನು ಇವರಿಗೆ ನೀಡಿ ಗೌರವಿಸಿದ್ದಾರೆ.೧೯೮೬ರಲ್ಲಿ ಕರ್ನಾಟಕ ಸರ್ಕಾರವು ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. "ನಮನ"

==ಹೊನ್ನಪ್ಪ ಭಾಗವತರ್ ನಟಿಸಿರುವ ಕೆಲವು ಚಿತ್ರಗಳು== ಹೊನ್ನಪ್ಪ ಭಗವತರ್ ಅವರ ಜನನ ೧೯೧೫

ವರ್ಷ ಚಿತ್ರ
೧೯೫೫ ಮಹಾಕವಿ ಕಾಳಿದಾಸ
೧೯೫೯ ಜಗಜ್ಯೋತಿ ಬಸವೇಶ್ವರ
-- ಪಂಚರತ್ನ
೧೯೪೯ ಗೋರ ಕುಂಬಾರ
೧೯೪೫ ಹೇಮರೆಡ್ಡಿ ಮಲ್ಲಮ್ಮ

ಹೊನ್ನಪ್ಪ ಭಾಗವತರ್ ೧.೧೦.೧೯೯೭ರಂದು ನಿಧನರಾದರು.