ಪಿ.ಕಾಳಿಂಗರಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿ. ಕಾಳಿಂಗರಾಯರು

ಪಿ. ಕಾಳಿಂಗರಾಯ - (ಪಿ.ಕಾಳಿಂಗರಾವ್)(ಜನನ ೩೧-೮-೧೯೧೪-ನಿಧನ ೨೨-೯ ೧೯೮೧) ಅವರು ಹೆಸರಾಂತ ಹಿನ್ನೆಲೆ ಗಾಯಕರೊಲ್ಲಬ್ಬರು, ಸಂಗೀತ ನಿರ್ದೇಶಕರು ಹಾಗು ಕನ್ನಡದಲ್ಲಿನ ಸುಗಮ ಸಂಗೀತ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದವರು. ಇವರ ಪೂರ್ಣ ಹೆಸರು, ಪಾಂಡೇಶ್ವರ ಕಾಳಿಂಗರಾಯ.ಮೂಲತಃ ಇವರು ಬಾರಕೂರಿನ ಮೂಡುಕೆರೆಯವರು. ೧೯೧೪ರಆಗಸ್ಟ್ ೩೧ರಂದು ಜನಿಸಿದ ಕಾಳಿಂಗರಾಯರ ತಂದೆ(ಪಾಂಡೇಶ್ವರ ಪುಟ್ಟಯ್ಯ) ನಾರಾಯಣರಾವ್ ಯಕ್ಷಗಾನದಲ್ಲಿ ಹೆಸರು ಮಾಡಿದವರು. ಕಾಳಿಂಗರಾಯರಿಗೆ ಸಾಹಿತ್ಯಾಭಿರುಚಿ ಮೂಡಿದ್ದು ತನ್ನ ಸೋದರ ಮಾವನಿಂದ.

ಶಾಲಾವಾರ್ಷಿಕೋತ್ಸವದಲ್ಲಿ ಕಾರ್ಯಕ್ರಮದ ಅತಿಥಿಯಾಗಿದ್ದ ಬ್ರಿಟಿಷ್‌ ಅಧಿಕಾರಿ ಗೌನ್ ಸಾಹೇಬರು ಕಾಳಿಂಗರಾಯರ "ಚಂದ್ರಹಾಸ"ನ ಪಾತ್ರಾಭಿನಯಕ್ಕೆ ಮಾರುಹೋಗಿ ಚಿನ್ನದ ಪದಕವನ್ನು ನೀಡಿದರು. ಚಿನ್ನದ ಪದಕ ಪಡೆದ ಹುಡುಗನನ್ನುಅಲ್ಲೇ ಇದ್ದ ರಂಗಭೂಮಿಯ ಸುಪ್ರಸಿದ್ಧ ನಟ ಮುಂಡಾಜೆ ರಂಗನಾಥಭಟ್ಟರು ತಮ್ಮ 'ಅಂಬಾಪ್ರಸಾದ ನಾಟಕ ಮಂಡಳಿ'ಗೆ ಸೇರಿಸಿಕೊಂಡು, ವಿವಿಧ ಕ್ಷೇತ್ರಗಲ್ಲಿ ಪರಿಣಿತಿ ಕೊಡಿಸಿದರು. ಅದರಲ್ಲೂ ರಾಮಚಂದ್ರ ಬುವಾ ಅವರ ಸಂಗೀತ ಪಾಠ ಕಾಳಿಂಗರಾಯರನ್ನು ಶಾಸ್ತ್ರೀಯವಾಗಿ ಬೆಳೆಸಿತು. ಬಾಲಕನ ಪ್ರತಿಭೆ ನಾಟಕ ಮಂಡಳಿಯಲ್ಲಿಯೇ ವ್ಯರ್ಥವಾಗಬಾರದೆಂದು ಬುವಾ ಅವರು ಮದ್ರಾಸಿಗೆ ಕರೆದೊಯ್ದು ಸಂಗೀತ ಶಾಲೆಯೊಂದರಲ್ಲಿ, ಶಿಕ್ಷಕನಾಗಿ ಸೇರಿಸಿದರು. ಅಲ್ಲೂ ಯಶಸ್ವಿಯಾದ ಕಾಳಿಂಗರಾಯರು ಕಾಲಕ್ರಮೇಣ ಆ ಶಾಲೆಯ ಪ್ರಾಂಶುಪಾಲರೂ ಆದರು. ಆಗ ಮದ್ರಾಸ್, ಚಿತ್ರರಂಗದ ಕೇಂದ್ರಸ್ಥಾನ. ಅಲ್ಲಿಂದಲೇ ಕಾಳಿಂಗರಾಯರಿಗೆ ಸಿನೆಮಾ ಒಡನಾಟ ಪ್ರಾರಂಭವಾದದ್ದು.ಮುಂದೆ ಇವರು ತಮ್ಮ ಸಂಬದಿಯಾದ ಮೀನಾಕ್ಷಿಯೆಂಬ ೧೨ ವರ್ಷದ ಸುಂದರ ಹುಡುಗಿಯನ್ನು ಇಪ್ಪತ್ತೆರಡರ ಕಾಳಿಂಗರಾಯರು ಮದುವೆಯಾದರು.

ಇವರು ಸಂಗೀತ ನೀಡಿದ ಮೊದಲ ಚಿತ್ರ ಹಿಂದಿಯ 'ಪ್ರೇಮ್‍ಸಾಗರ್'. ಇದೇ ಸಮಯದಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕರಾದ ನಾಗೇಂದ್ರರಾಯರಿಗೆ ಕಾಳಿಂಗರಾಯರು ಪರಿಚಿತರಾದರು.

೧೯೫೫ರ ವೇಳೆಗೆ ಕಾಳಿಂಗರಾಯರನ್ನು ಗುರುತಿಸಿದ್ದ ನಾಟಕರತ್ನ ಗುಬ್ಬಿ ವೀರಣ್ಣನವರು ಒಂದು ಮಹಾನಾಟಕ ‘ದಶಾವತಾರ’ವನ್ನು ರಂಗಕ್ಕೆ ತಂದರು. ಅದಕ್ಕೆ ಸಂಗೀತ ನಿರ್ದೇಶನ ಮಾಡಲು ವೀರಣ್ಣನವರು ಕಾಳಿಂಗರಾಯರನ್ನು ನಿಯೋಜಿಸಿಕೊಂಡರು.ಗುಬ್ಬಿ ಕಂಪನಿಯಲ್ಲಿ ಕಾಳಿಂಗರಾಯರು ಸುಮರು ಐದಾರು ವರ್ಷ ಸಂಗೀತ ನಿರ್ದೇಶಕರಾಗಿ ದುಡಿದರು. ರಂಗನಾಟಕಗಳಿಗೂ ವಿನೂತನ ಶೈಲಿಯ ಹೊಚ್ಚ ಹೊಸ ರಾಗರೂಪವನ್ನು ಕೊಟ್ಟು ಪ್ರಸಿದ್ಧರಾದರು.ಈ ಮಧ್ಯೆ ಕಾಳಿಂಗರಾಯರಿಗೂ ವೀರಣ್ಣನವರ ಮಗಳಾದ ಸ್ವರ್ಣಮ್ಮನಿಗೂ ಅದು ಬೆಳೆದು ಸಖ್ಯ ಪ್ರೇಮಕ್ಕೆ ತಿರುಗಿ ಮದುವೆಯಾದರು,

ನಾಗೇಂದ್ರರಾಯರು ನಿರ್ಮಿಸಿದ ವಸಂತಸೇನಾ ಕನ್ನಡ ಚಲನಚಿತ್ರಕ್ಕೆ ಸಂಗೀತ ನಿರ್ದೇಶಿಸಿದ ಕಾಳಿಂಗರಾಯರು, ಅದೇ ಚಿತ್ರದಲ್ಲಿ ಜೈನ ಸನ್ಯಾಸಿಯ ಪಾತ್ರವನ್ನೂ ನಿರ್ವಹಿಸಿದರು.ಅನಂತರ ಪಿ.ಕಾಳಿಂಗರಾಯರು ತೆರೆಯ ಮೇಲೆ ಕಾಣಿಸಿಕೊಂಡದ್ದು ತುಂಬಿದ ಕೊಡ ಚಿತ್ರದಲ್ಲಿ "ಅಂತಿಂಥ ಹೆಣ್ಣು ನೀನಲ್ಲ" ಅನ್ನುವ ಕವನವನ್ನು ಹಾಡುವ ದೃಶ್ಯದಲ್ಲಿ. ನಂತರ, ನವಜ್ಯೋತಿ ಸ್ಟುಡಿಯೋದ ಮುಖ್ಯಸ್ಥರಾಗಿದ್ದ ಜಿ.ಆರ್.ರಾಮಯ್ಯನವರ ಕೋರಿಕೆ ಮೇರೆಗೆ ಅಲ್ಲಿ ತಯಾರಾದ ಚಿತ್ರಗಳಿಗೆ ಸಂಗೀತ ನೀಡಲು ಒಪ್ಪಿದರು. ಆದರೆ ಹೀಗೆ ಸಂಗೀತ ನೀಡಿದ್ದು ಕೃಷ್ಣಲೀಲಾ ಚಿತ್ರಕ್ಕೆ ಮಾತ್ರ. ಈ ಚಿತ್ರದಿಂದ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರು ಗೀತರಚನೆಕಾರರಾಗಿ ಪರಿಚಿತರಾದರೆ, ಡಾ.ರಾಜ್ ಕುಮಾರ್ ಅವರ ಸಹೋದರ ವರದರಾಜ್ ಮತ್ತು ಸಹೋದರಿ ಶಾರದಮ್ಮ ಬೆಳ್ಳಿತೆರೆಗೆ ಬಂದರು.

ಭಕ್ತ ರಾಮದಾಸ ಚಿತ್ರದಲ್ಲಿ ಸಂಗೀತ ನೀಡುವಾಗ, ಭಿಕ್ಷೆ ಬೇಡುತ್ತಿದ್ದ ಹುಡುಗಿಯೊಬ್ಬಳ ಕಂಠಸಿರಿಗೆ ಮನಸೋತ ಕಾಳಿಂಗರಾಯರು ಆಕೆಯಿಂದಲೂ ಹಾಡೊಂದನ್ನು ಆ ಚಿತ್ರದಲ್ಲಿ ಹಾಡಿಸಿದ್ದರು. ೧೯೫೪ರಲ್ಲಿ ಸಿ.ವಿ.ರಾಜು ಅವರ ನಟಶೇಖರ ಚಿತ್ರಕ್ಕೆ ಸಂಗೀತ ನೀಡಿದರು. ಈ ಚಿತ್ರಕ್ಕೆ ನಾಡಿಗೇರ ಕೃಷ್ಣರಾಯರ ಸಾಹಿತ್ಯವಿದ್ದು, ಗೀತೆಗಳು ಜನಪ್ರಿಯವಾದವು. ನಂತರ, ಅ.ನ. ಕೃಷ್ಣರಾಯರ ಸಲಹೆಯಂತೆ ಕಾಳಿಂಗರಾಯರು ಕನ್ನಡ ಕಾವ್ಯವನ್ನು ಜನರಿಗೆ ತಲುಪಿಸುವ ಮಹತ್ವದ ಜವಾಬ್ದಾರಿಗೆ ತಮ್ಮನ್ನು ಒಪ್ಪಿಸಿಕೊಂಡರು. ಚಿತ್ರರಂಗದ ನಂಟು ಮುಂದುವರೆಯಿತು.

ಅಬ್ಬಾ ಆ ಹುಡುಗಿ (೧೯೫೯) ಮತ್ತು ಮಹಾಶಿಲ್ಪಿ (೧೯೬೬) ಚಿತ್ರಗಳಿಗೆ ಸಂಗೀತ ನೀಡಿದರೂ ರಾಯರ ಪ್ರತಿಭೆ ಹೆಚ್ಚಾಗಿ ಬೆಳಗಿದ್ದು ಸುಗಮ ಸಂಗೀತ ಕ್ಷೇತ್ರದಲ್ಲಿಯೇ. ಓಂ ನಮೋ ನಾರಾಯಣ(ಕೈವಾರ ಮಹಾತ್ಮೆ), ತಾಯಿ ದೇವಿಯನು ಕಾಣೆ ಹಂಬಲಿಸಿ (ಕಿತ್ತೂರು ಚೆನ್ನಮ್ಮ) ಮೊದಲಾದ ಜನಪ್ರಿಯ ಗೀತೆಗಳನ್ನು ತಮ್ಮ ಕಂಠಸಿರಿಯಿಂದ ಬೆಳ್ಳಿತೆರೆಗೆ ನೀಡಿದ ರಾಯರು ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗ ಅವರ ಪ್ರಸಿದ್ಧ ಗೀತೆ 'ಅಂತಿಂಥ ಹೆಣ್ಣು ನಾನಲ್ಲ' ವನ್ನು ಅವರೇ ಹಾಡುತ್ತಿರುವಂತೆ ತುಂಬಿದ ಕೊಡ ಚಿತ್ರದಲ್ಲಿ ತೋರಿಸಲಾಗಿತ್ತು.

೧೯೪೬ರಲ್ಲಿ ಹುಯಿಲಗೋಳ ನಾರಾಯಣರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಎಂಬ ಗೀತೆಯನ್ನು ಸ್ವರ ಸಂಯೋಜಿಸಿ ಹಾಡಿದರು. ಕನ್ನಡ ರಾಜ್ಯೋದಯದ ನಂತರ ಈ ಹಾಡನ್ನು ಹಾಡಿದ್ದ ಕಾಳಿಂಗರಾಯರಿಗೆ ಕರ್ನಾಟಕ ಸರ್ಕಾರ ಸನ್ಮಾನ ಮಾಡಿತು."ನಮನ"

೧೯೮೧ರ ಸೆಪ್ಟೆಂಬರ್ ೨೨ರಂದು ಕಾಳಿಂಗರಾಯರು ನಿಧನ ಹೊಂದಿದರು.

ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು[ಬದಲಾಯಿಸಿ]

ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್‌ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ