ಅರ್ಜುನ್ ಜನ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಅರ್ಜುನ್ ಜನ್ಯ ಅವರು ಜನಿಸಿದ್ದು ೧೩ ಮೇ ಬೆಂಗಳೂರಿನಲ್ಲಿ.[೧] ಇವರು ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಳ್ಳುವ ಮೊದಲು ವಿ.ಮನೋಹರ್ ಮತ್ತು ಕೆ.ಕಲ್ಯಾಣ್ ಅವರ ಜೊತೆಯಲ್ಲಿ ಕೀಬೋರ್ಡ್ ಕಲಿಯುತ್ತಿದ್ದರು. ಇವರು ಎ.ಆರ್ ರೆಹಮಾನ್ ಅವರ ಅಪ್ಪಟ ಅಭಿಮಾನಿ. ಎ.ಆರ್ ರೆಹಮಾನ್ ಅವರ ಭೇಟಿಯ ನಂತರ ಇವರು ತನ್ನ ಯೋಜನೆಯನ್ನು ರೂಪಿಸಿಕೊಂಡು ಒಂದು ಒಳ್ಳೆಯ ಸಂಗೀತ ಸಂಯೋಜನೆ ಮಾಡಬೇಕೆಂದು ಇವರಿಗೆ ಅಂದುಕೊಂಡರು.[೨]

ಸಂಗೀತ ನಿರ್ದೇಶಕರಾಗಿ[ಬದಲಾಯಿಸಿ]

 • ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರದಲ್ಲಿ ಅರ್ಜುನ್ ಅವರು ಸಂಗೀತ ಸಂಯೋಜನೆ ಮಾಡಿ, ಕನ್ನಡ ಚಿತ್ರ ರಂಗದಲ್ಲಿ ಒಳ್ಳೆಯ ಹೆಸರನ್ನು ಪಡೆಯುತ್ತಾರೆ.ಈ ಸಿನಿಮಾ ನಂತರ ಇವರು ಅರ್ಜುನ್ ಎಂಬ ಹೆಸರಿನ ಜೊತೆಯಲ್ಲಿ ಜನ್ಯ ಎಂಬುದನ್ನು ಸೇರಿಸಿಕೊಳ್ಳುತ್ತಾರೆ. ಇದನ್ನು ಸುದೀಪ್ ಅವರು ಸೂಚಿಸಿದ್ದು ಎಂದು ಸ್ವತಃ ಅವರೇ ಹೇಳಿದ್ದಾರೆ. ನಂತರ ವಿಕ್ಟರಿ ಚಿತ್ರದಲ್ಲಿ ಒಳ್ಳೆಯ ಸಂಗೀತ ಸಂಯೋಜನೆಯನ್ನು ಮಾಡಿ ಜನರನ್ನು ಮತ್ತೆ ಮೋಡಿ ಗೊಳಿಸಿದರು.
 • ಕನ್ನಡ ಚಿತ್ರರಂಗದ ಎ ಆರ್ ರೆಹಮಾನ್ ಎನ್ನುವ ಅಗ್ಗಳಿಕೆ ಪಡೆದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ತಮ್ಮ ಸಂಗೀತ ನಿರ್ದೇಶನದಿಂದ ಮನೆ ಮಾತಾಗಿರುವ ಪ್ರತಿಭಾವಂತ. ಇವರು ಸಂಗೀತ ನಿರ್ದೇಶಕರಾಗಿ ಬಿಡುಗಡೆಯಾದ ಮೊದಲ ಚಿತ್ರ,ಆಟೋಗ್ರಾಫ್ ಪ್ಲೀಸ್(2006). ಇದರಲ್ಲಿ ದಿಲೀಪ್ರಾಜ್ ಮತ್ತು ಸಂಜನಾ ನಟಿಸಿದ್ದಾರೆ.
 • ಅಲ್ಲಿಂದ ಮುಂದೆ ಹಲವಾರು ಚಿತ್ರಗಳಲ್ಲಿ ಮ್ಯೂಸಿಕ್ಕಂ ಪೋಸ್ ಮಾಡಿದ್ದರು ಯಶಸ್ಸು ಸಿಗಲಿಲ್ಲ.2009 ರಲ್ಲಿ ಬಿರುಗಾಳಿ ಚಿತ್ರದ ಮೂಲಕ ಅವರ ಹೆಸರು ಕರ್ನಾಟಕದೆಲ್ಲೆಡೆ ಪಸರಿಸಿತು .ಇದರ ಎಲ್ಲಾ ಹಾಡುಗಳು ಮೆಚ್ಚುಗೆಗೆ ಪಾತ್ರವಾಯಿತು. ಇದರ ನಂತರ 2010ರಲ್ಲಿ

ಬಂದ ಸಂಚಾರಿ ಚಿತ್ರದ ಹಾಡುಗಳು ಕನಾಟಕದ ಜನರ ಮನಸ್ಸಲ್ಲಿ ಅಚ್ಹೊತ್ತ್ತುವಂತೆ ಮಾಡಿತು.

ಪುರಸ್ಕಾರಗಳು[ಬದಲಾಯಿಸಿ]

 • ಕರ್ನಾಟಕ ರಾಜ್ಯ ಅತ್ತ್ಯುತ್ತಮ ಸಂಗೀತ ನಿರ್ದೇಶಕ - ಚಿತ್ರ ಅಲೆಮಾರಿ
 • ಸೀಮಾ ಅತ್ತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ
 • ಭಜರಂಗಿ ಚಿತ್ರದ ನಿರ್ದೇಶನಕ್ಕೆ ಫಿಲಂ ಫೇರ್ ಅತ್ತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿhttps://www.imdb.com/name/nm4507421/awards

ಗಾಯಕರಾಗಿ ಹಾಡಿದ ಹಾಡುಗಳು[ಬದಲಾಯಿಸಿ]

 • ಬೆಳಗಾಗೆದ್ದು ಕಾಫಿ - ರೋಮಿಯೋ
 • ಗೌರಮ್ಮ ಗೌರಮ್ಮ - ಲಕ್ಕಿ
 • ಮನೆತಂಕ ಬಾರೆ - ವಿಕ್ಟರಿ

ನಿರ್ದೇಶಕನಾಗಿ ಅತ್ಯಂತ ಯಶಸ್ಸು ಗಳಿಸಿದ ಹಾಡು[ಬದಲಾಯಿಸಿ]

 • ಕಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು - ವಿಕ್ಟರಿ

ಸ೦ಗೀತ ಸಂಯೋಜಕರಾಗಿ[ಬದಲಾಯಿಸಿ]

 • 2006-ಆಟೋಗ್ರಾಫ್ ಪ್ಲೀಸ್
 • 2007-ಬಾಬಾ
 • 2007-ಯುಗ
 • 2008- ಪಟ್ರೆ ಲವ್ಸ್ ಪದ್ಮ
 • 2008- ಧೀಮಾಕು
 • 2008- ಸ್ಲಂ ಬಾಲ
 • 2008-ಧೀನ
 • 2009- ಮಚ್ಚಾ
 • 2009- ಬಿರುಗಾಳಿ
 • 2010- ಜುಗಾರಿ
 • 2010- ಸಂಚಾರಿ
 • 2010- ನಮ್ ಏರೀಯಾಲಿ ಒಂದಿನ
 • 2010- ಗುಬ್ಬಿ
 • 2011- ಕೆಂಪೇಗೌಡ
 • 2011- ರಾಜಧಾನಿ
 • 2011- ಜರಾಸಂಧ
 • 2012- ತುಘಲಕ್
 • 2012- ಲಕ್ಕಿ
 • 2012- ಅಲೆಮಾರಿ
 • 2012- ದಂಡುಪಾಳ್ಯ
 • 2012- ರಾಂಬೋ
 • 2013- ವರದನಾಯಕ
 • 2013- ರಜನಿಕಾಂತ
 • 2013- ಚತ್ರಿಗಳು ಸಾರ್ ಚತ್ರಿಗಳು
 • 2013- ಆಟೋ ರಾಜ
 • 2013- ವಿಕ್ಟರಿ
 • 2013- ಜಯಮ್ಮನ ಮಗ
 • 2013- ಕೇಸ್ ನಂ. 18/9
 • 2013- ಬರ್ಫಿ
 • 2013- ದಿಲ್ವಾಲ
 • 2013- ಸ್ವೀಟಿ ನನ್ನ ಜೋಡಿ
 • 2013- ಚಡ್ಡಿ ದೋಸ್ತ್
 • 2013- ಡವ್
 • 2013- ಭಜರಂಗಿ
 • 2014-ದಿಲ್ ರಂಗೀಲ
 • 2014- ಡಾರ್ಲಿಂಗ್
 • 2014- ಅಂಗಾರಕ
 • 2014- ಮಾಣಿಕ್ಯ
 • 2014- ಪಾರು ವೈಫ್ ಆಫ್ ದೇವದಾಸ್
 • 2014- ಅಧ್ಯಕ್ಷ
 • 2014- ಸುಪರೋ ರಂಗ
 • 2014- ನೀನಾದೆ ನಾ
 • 2014- ಜೈ ಹಿಂದ್ (ತಮಿಳು )
 • 2014-,ಮರೆಯಲಾರೆ
 • 2015- ಜ್ಯಾಕ್ಸನ್
 • 2015- ರಾಜ ರಾಜೇಂದ್ರ
 • 2015- ಡಿಕೆ
 • 2015- ಗೋವಾ
 • 2016-ಕಲ್ಪನಾ 2
 • 2016-ಮುಕುಂದ ಮುರಾರಿ
 • 2017-ಪಟಾಕಿhttps://www.filmibeat.com/celebs/arjun-janya/filmography.html

ಉಲ್ಲೇಖನ[ಬದಲಾಯಿಸಿ]