ಚೇತನ್ ಸಾಸ್ಕ
Jump to navigation
Jump to search
ಚೇತನ್ ಸಾಸ್ಕ ಮೂಲತಃ ಹಿಂದೂಸ್ತಾನಿ ಸಂಗೀತ ಶೈಲಿಯಲ್ಲಿ ಪರಿಣತಿ ಹೊಂದಿದ ಗಾಯಕರು. ಚೇತನ್ ಅವರನ್ನು ಗುರುತಿಸಿದ್ದು ಹಂಸಲೇಖ. ಕುರಿಗಳು ಸಾರ್ ಕುರಿಗಳು, ಧರ್ಮ, ಜೋಗುಳ, ನಂಜುಂಡಿ ಚಿತ್ರಗಳಲ್ಲದೆ ಇನ್ನು ಹಲವಾರು ಚಿತ್ರಗಳಲ್ಲಿ ಹಂಸಲೇಖ ಇವರಿಗೆ ಅವಕಾಶ ಮಾಡಿಕೊಟ್ಟರು.
ಇವರು ಬಹಳ ಜನಪ್ರಿಯರಾದದ್ದು ನೆನಪಿರಲಿ ಚಿತ್ರದ ಗೀತೆಗಳಿಂದ. ನೆನಪಿರಲಿ ಚಿತ್ರದ "ಒಲವು ಒಂಟಿಯಲ್ಲ" ಗೀತೆಗೆ ಟ್ರಾಕ್ ಸಿಂಗರ್ ಆಗಿ ಇವರ ಧ್ವನಿಯಲ್ಲಿ ಹಾಡಿಸಲಾಯಿತು. ನಂತರ ಹಂಸಲೇಖ ಮತ್ತು ನಿರ್ದೇಶಕ ರತ್ನಜ ಅವರು ಇವರ ಧ್ವನಿಯನ್ನೆ ಉಳಿಸಿಕೊಳ್ಳಬೇಕೆಂದು ನಿರ್ಧರಿಸಿದರು. ಇವರು ಮೇಲೆ ಹೇಳಿದ ಚಿತ್ರಗಳಲ್ಲದೆ ಹಂಸಲೇಖರ ಬಳಿ ಟ್ರಾಕ್ ಸಿಂಗರ್ ಆಗಿಯೂ ಕೆಲಸ ಮಾಡುತ್ತಾರೆ.