ರಾಜನ್-ನಾಗೇಂದ್ರ

ವಿಕಿಪೀಡಿಯ ಇಂದ
Jump to navigation Jump to search

ರಾಜನ್-ನಾಗೇಂದ್ರ ಕನ್ನಡ ಚಿತ್ರರಂಗದ ಸಹೋದರ ಸಂಗೀತ ನಿರ್ದೇಶಕ ಜೋಡಿ. ಕನ್ನಡ,ತಮಿಳು,ತೆಲುಗು,ತುಳುಭಾಷೆಗಳ ಒಟ್ಟು ೩೭೫ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಒದಗಿಸಿದೆ. ೨೦೦ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಮತ್ತು ಉಳಿದಂತೆ ಒಟ್ಟಾರೆ ಸುಮಾರು ೧೭೫ ಚಿತ್ರಗಳು ತಮಿಳು, ತೆಲುಗು, ಸಿಂಹಳಿ ಭಾಷೆಯ ಚಿತ್ರಗಳಿಗೆ ರಾಜನ್-ನಾಗೇಂದ್ರ ಸಂಗೀತ ನೀಡಿದ್ದಾರೆ.

ರಾಜನ್-ನಾಗೇಂದ್ರ ಜೋಡಿ


ಬಾಲ್ಯದ ದಿನಗಳು[ಬದಲಾಯಿಸಿ]

ರಾಜನ್(೧೯೩೩)-ನಾಗೇಂದ್ರಪ್ಪ(೧೯೩೫) ಮೈಸೂರುಜಿಲ್ಲೆಯ ಶಿವರಾಂಪೇಟೆಯ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ರಾಜಪ್ಪ ಸಂಗೀತ ಬಲ್ಲವರಾಗಿದ್ದು, ಹಾರ್ಮೋನಿಯಂ ವಾದಕರಾಗಿದ್ದರು. ಅಂದಿನ ಕಾಲದ ಕೆಲವು ಮೂಕಿ(ಮಾತಿಲ್ಲದ ಚಿತ್ರ)ಚಿತ್ರಗಳಿಗೆ ಸಂಗೀತ ನೀಡಿದ್ದರು. ನಂತರ ಮಾತಿನ ಚಿತ್ರಗಳ ಕಾಲ ಪ್ರಾರಂಭವಾದಾಗ ನಿರುದ್ಯೋಗಿಯಾದ ರಾಜಪ್ಪನವರು ಮನೆಯಲ್ಲೇ ಸಂಗೀತ ಕಲಿಸಲು ಪ್ರಾರಂಭಿಸಿದರು. ಇವರ ಮನೆಯ ಸಮೀಪವೇ ಪ್ರಸಿಧ್ಧ ಸಂಗೀತರಾರರಲ್ಲೊಬ್ಬನಾದ ಬಿಡಾರಂ ಕೃಷ್ಣಪ್ಪ ವಾಸಿಸುತ್ತಿದ್ದರು ಮನೆಯಲ್ಲಿದ್ದ ಸಂಗೀತಮಯ ವಾತಾವರಣ ಪ್ರಭಾವದಿಂದ ರಾಜನ್ ವಯೊಲಿನ್ ವಾದ್ಯದಲ್ಲಿಯೂ, ನಾಗೇಂದ್ರ ಜಲ ತರಂಗ್ ವಾದ್ಯ ನುಡಿಸುವುದರಲ್ಲಿಯೂ ಪರಿಣತರಾದರು.


ಚಿತ್ರ ಬದುಕು[ಬದಲಾಯಿಸಿ]

ರಾಜನ್-ನಾಗೇಂದ್ರ ಸಂಗೀತ ನಿರ್ದೇಶಕರಾಗುವ ಮೊದಲು, ಆಗಲೇ ಪ್ರಸಿದ್ಧ ಗಾಯಕರಾಗಿದ್ದ ಪಿ.ಕಾಳಿಂಗರಾಯರ ತಂಡದೊಡನೆ ಸೇರಿ,ಆಕಾಶವಾಣಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ೧೯೫೨ ರಲ್ಲಿ ಸೌಭಾಗ್ಯ ಲಕ್ಷ್ನಿ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ನಂತರ ಸುಮಾರು ನಾಲ್ಕು ದಶಕಗಳು ವಿವಿಧ ಭಾಷೆಗಳಿಗೆ ಸಂಗೀತ ನೀಡಿ, ಯಶಸ್ವಿ ಜೋಡಿ ಎನಿಸಿಕೊಂಡಿದ್ದರು.ರಾಜನ್ ಮತ್ತು ನಾಗೇಂದ್ರ ಸಹೋದರರು ಸಂಗೀತ ಕಲಿತದ್ದು ಬಿಡಾರಂ ಕೃಷ್ಣಪ್ಪನಂತಹವರ ಬಳಿ. ರಾಜನ್ ಅವರು ಸ್ವಯಂ ಟಿ ಚೌಡಯ್ಯನವರಲ್ಲಿ ಪಿಟೀಲು ವಾದನ ಕಲಿತರು. ನಾಗೇಂದ್ರರು ಜಲತರಂಗ್ ವಾದನ ಕಲಿತರು. ಈ ಸೋದರರು ಕಾಳಿಂಗರಾಯರ ತಂಡ ಮತ್ತು ಇತರ ವಾದ್ಯ ತಂಡಗಳಲ್ಲಿ ಕಾರ್ಯ ನಿರ್ವಹಿಸಿ ೧೯೫೨ರ ವರ್ಷದಲ್ಲಿ ಸೌಭಾಗ್ಯಲಕ್ಷ್ಮಿ ಎಂಬ ಚಿತ್ರದ ಮೂಲಕ ಚಿತ್ರಸಂಗೀತ ನಿರ್ದೇಶನಕ್ಕೆ ಪಾದಾರ್ಪಣ ಮಾಡಿದರು.ಬಹು ಮಂದಿ ಸಂಗೀತ ಕೇಳುಗರು ಇಂದಿಗೂ ರಾಜನ್-ನಾಗೇಂದ್ರ ಅಂದರೆ ಒಬ್ಬರೇ ಎಂದುಕೊಂಡಿದ್ದಾರೆ!!!."ನಮನ"

ಇತರ ವಿಷಯಗಳು[ಬದಲಾಯಿಸಿ]

ರಾಜನ್-ನಾಗೇಂದ್ರ ಜೋಡಿಯಲ್ಲಿ, ನಾಗೇಂದ್ರ ಅವರು ನವೆಂಬರ್ ೪,೨೦೦೦ ನಿಧನ ಹೊಂದಿದರು. ಹಿಂದಿ ಚಿತ್ರರಂಗದ ಪ್ರಮುಖ ಗಾಯಕ ಕಿಶೋರ್ ಕುಮಾರ್ ಹಾಡಿರುವ ಕುಳ್ಳ ಏಜೆಂಟ್ ೦೦೦ ಚಿತ್ರಕ್ಕೂ ಈ ಜೋಡಿಯೇ ಸಂಗೀತ ನೀಡಿದ್ದರು. ರಾಜನ್ ಮತ್ತು ನಾಗೇಂದ್ರ ಅನ್ನಪೂರ್ಣ ಚಿತ್ರದ ಕನ್ನಡವೇ ತಾಯ್ನುಡಿಯು ಕರುನಾಡು ತಾಯ್ನುಡಿಯು ಹಾಡಿನಲ್ಲಿ ಬೆಳ್ಳಿತೆರೆಯ ಮೇಲೂ ಕಾಣಿಸಿಕೊಂಡಿದ್ದರು.

ಶ್ರೀ ರಾಘವೇಂದ್ರ ಸ್ವಾಮಿಗಳು ರಚಿಸಿದ "ಇಂದು ಎನಗೆ ಗೋವಿಂದ" ಕೃತಿಯನ್ನು ಎರಡು ಚಲನಚಿತ್ರಗಳಲ್ಲಿ ಉಪಯೋಗಿಸಿದರು, ಮಂತ್ರಾಲಯ ಮಹಿಮೆ ಹಾಗೂ ಎರಡು ಕನಸು.

ರಾಜನ್-ನಾಗೇಂದ್ರ ಜೋಡಿ ಸಂಗೀತ ನೀಡಿರುವ ಕೆಲವು ಪ್ರಮುಖ ಚಿತ್ರಗಳು[ಬದಲಾಯಿಸಿ]

೧. ನ್ಯಾಯವೇ ದೇವರು

೨. ಕುಳ್ಳ ಏಜೆಂಟ್ ೦೦೦

೩. ಕೌಬಾಯ್ ಕುಳ್ಳ

೪. ಬೋರೇಗೌಡ ಬೆಂಗಳೂರಿಗೆ ಬಂದ

೫. ರತ್ನಮಂಜರಿ

೬. ಭಾಗ್ಯವಂತರು

೭. ಮೇಯರ್ ಮುತ್ತಣ್ಣ

೮. ದೇವರಗುಡಿ

೯. ಭಲೇ ಹುಚ್ಚ

೧೦.ಸ್ವಯಂವರ (ಚಲನಚಿತ್ರ)

೧೧.ಕಳ್ಳ ಕುಳ್ಳ

೧೨.ಕಿಟ್ಟು ಪುಟ್ಟು

೧೩.ಕುಳ್ಳ ಕುಳ್ಳಿ

೧೪.ದೇವರ ದುಡ್ಡು

೧೫.ನಾರಿ ಮುನಿದರೆ ಮಾರಿ

೧೬.ಮಹಾತ್ಯಾಗ

೧೭.ಹೊಂಬಿಸಿಲು

೧೮.ರಾಮ ಲಕ್ಷ್ಮಣ (ಚಲನಚಿತ್ರ)

೧೯.ಪುಟಾಣಿ ಏಜೆಂಟ್ ೧೨೩

೨೦.ಯಾರಿವನು

೨೧.ನಾನೊಬ್ಬ ಕಳ್ಳ

೨೨.ಗಿರಿಕನ್ಯೆ

೨೩. ಚಂದನದ ಗೊಂಬೆ

೨೪. ನಾನಿರುವುದೆ ನಿನಗಾಗಿ (ಚಲನಚಿತ್ರ)

೩೫. ಗಂಧದ ಗುಡಿ

೨೬. ಗಂಧದ ಗುಡಿ - ೨

೨೭. ನಾನಿನ್ನ ಬಿಡಲಾರೆ

೨೮. ನಾನಿನ್ನ ಮರೆಯಲಾರೆ

೨೯. ಗಾಳಿ ಮಾತು

೩೦. ಮುನಿಯನ ಮಾದರಿ

೩೧. ಇಬ್ಬನಿ ಕರಗಿತು

೩೨. ಎರಡು ಕನಸು

33. ಬೆಟ್ಟದ ಹೂವು

34.ಅವಳ ಹೆಜ್ಜೆ

35.ಯಾವ ಹೂವು ಯಾರ ಮುಡಿಗೋ

36.ಅನ್ನಪೂರ್ಣ

37.ಅನುರಾಧ

38.ಮಂತ್ರಾಲಯ ಮಹಾತ್ಮೆ

39.ಸುಪ್ರಭಾತ (ಚಲನಚಿತ್ರ)

40.ಹೊಸಿಲು ಮೆಟ್ಟಿದ ಹೆಣ್ಣು

41.ಮಾಂಗಲ್ಯ ಭಾಗ್ಯ

42.ಪಾವನ ಗಂಗಾ

43.ಅನುರಾಗ ಸಂಗಮ

44.ಪ್ರೀತಿ ಮಾಡು ತಮಾಶೆ ನೋಡು

45.ಕರುಣಾಮಯಿ

46.ಜೀವನ ಚಕ್ರ

47.ನಮ್ಮೂರ ರಾಜ

48.ಜೀವಕ್ಕೆ ಜೀವ

49.ಆಟೋ ರಾಜ

50.ಒಂದು ಸಿನಿಮಾ ಕಥೆ

52.ಶ್ರೀನಿವಾಸ ಕಲ್ಯಾಣ

53.ಬಯಸದೇ ಬಂದ ಭಾಗ್ಯ

54.ಮಧುರ ಸಂಗಮ

55.ರಾಮ ಪರಶುರಾಮ

56.ಬೆಂಕಿಯ ಬಲೆ

57.ಕೂಡಿ ಬಾಳಿದರೆ ಸ್ವರ್ಗ ಸುಖ

58.ಪ್ರೇಮ ಪರ್ವ

59.ಪರಾಜಿತ

60.ಸತಿ ಸುಕನ್ಯ

61.ಮಂಕು ತಿಮ್ಮ

62.ಬಯಲು ದಾರಿ

63.ವೀರ ಸಂಕಲ್ಪ

64. ಗುರಿ

65. ಒಂದೇ ಗುರಿ

66. ಬಿಳಿಗಿರಿಯ ಬನದಲ್ಲಿ

67. ಮೃಗಾಲಯ

68. ಕನ್ನಿಕಾ ಪರಮೇಶ್ವರಿ ಕಥೆ

69. ಪರಸಂಗದ ಗೆಂಡೆ ತಿಮ್ಮ

70. ಚಲಿಸುವ ಮೋಡಗಳು

71. ಉಷ

72. ಪ್ರೇಮಾನುಬಂಧ

73. ಬೆಳುವಲದ ಮಡಿಲಲ್ಲಿ

74. ಹೃದಯ ಗೀತೆ

75. ಟೋನಿ

76. ಮೂರು ಜನ್ಮ

77. ಬೆತ್ತಲೆ ಸೇವೆ

78. ಪ್ರೇಮ ಪಲ್ಲವಿ

79. ಪ್ರೀತಿ ವಾತ್ಸಲ್ಯ

80. ವಿಜಯ ವಾಣಿ

81. ಮಧುರ ಸಂಗಮ

82. ಮರಳು ಸರಪಣಿ

83. ಯಮಕಿಂಕರ

84. ಗಣೇಶನ ಮದುವೆ

85. ಕಾಡಿನ ರಾಜ

ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು[ಬದಲಾಯಿಸಿ]

ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ | ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್-ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ.ಎಂ.ಕೀರವಾಣಿ | ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥನ್ | ಕೆ.ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ವಿ.ಹರಿ ಕೃಷ್ಣ | ಎಂ.ವೆಂಕಟರಾಜು ಉಪಾಸನ ಮೊಹನ ಯೋಗೀಶ್ ಕುಮಾರ್ ಸಿ