ಆರ್.ಎನ್.ಸುದರ್ಶನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆರ್. ಎನ್. ಸುದರ್ಶನ್
R. N. Sudarshan
ಜನನ ಆರ್. ಎನ್. ಸುದರ್ಶನ್
2 ಮೇ 1939
ಕರ್ನಾಟಕ, ಬ್ರಿಟಿಷ್ ಭಾರತ
ನಿಧನ 8 ಸಪ್ಟೆಂಬರ್ 2017(2017-09-08) (ವಯಸ್ಸು 78)
ಬೆಂಗಳೂರು, ಕರ್ನಾಟಕ, ಭಾರತ
ರಾಷ್ಟ್ರೀಯತೆ ಭಾರತೀಯ
ವೃತ್ತಿ ನಟ,ಗಾಯಕ,ನಿರ್ಮಾಪಕ
ವರ್ಷಗಳು ಸಕ್ರಿಯ 1961–2017
ಬಾಳ ಸಂಗಾತಿ ಶಿಲಾಶ್ರಿ
Parent(s) ಆರ್. ನಾಗೇಂದ್ರ ರಾವ್ ,
ರತ್ನಾಬಾಯಿ
Family

ಆರ್. ಎನ್. ಕೃಷ್ಣ ಪ್ರಸಾದ್ (ಸಹೋದರ)

ಆರ್. ಎನ್. ಜಯಗೋಪಾಲ್ (ಸಹೋದರ)
ಆರ್ ಅರುಣ್ ಕುಮಾರ್ (ಮಗ)

ಆರ್.ಎನ್.ಸುದರ್ಶನ್ (೨ ಮೇ ೧೯೩೯ - ೮ ಸೆಪ್ಟೆಂಬರ್ ೨೦೧೭)ಭಾರತೀಯ ನಟ, ಕಂಠದಾನ ಕಲಾವಿದ , ನಿರ್ಮಾಪಕರಾಗಿದ್ದರು.ಕನ್ನಡ, ತೆಲುಗು, ತಮಿಳು, ಹಾಗೂ ಮಲಯಾಳಂ ಭಾಷೆಗಳಲ್ಲಿ 250ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಸಿದ್ದಾರೆ. [೧][೨]

ಬಾಲ್ಯ[ಬದಲಾಯಿಸಿ]

ಮೇ 2, 1939ರಲ್ಲಿ ಜನಿಸಿದ ರಟ್ಟಿಹಳ್ಳಿ ನಾಗೇಂದ್ರ ಸುದರ್ಶನ್ ಬಾಲ್ಯದಿಂದಲೂ ತಮ್ಮ ತಂದೆ ದಿವಂಗತ ಆರ್.ಎನ್.ನಾಗೇಂದ್ರರಾವ್ ಅವರಿಂದ ಪ್ರಭಾವಿತರಾಗಿ ಸಿನಿಮಾ ಮತ್ತು ನಾಟಕದ ಬಗ್ಗೆ ಅಪಾರ ಒಲವು ಹೊಂದಿದ್ದರು.

ಚಿತ್ರಗಳು[ಬದಲಾಯಿಸಿ]

1961ರ ವಿಜಯನಗರದ ವೀರಪುತ್ರ ಸುದರ್ಶನ್ ರವರ ಮೊದಲ ಚಿತ್ರ.ನಂತರ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು.2006ರಲ್ಲಿ ತೆರೆಕಂಡ ಮಠ ಚಿತ್ರದಲ್ಲಿ ಸುದರ್ಶನ್ ಅವರ ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಇದಾದ ಬಳಿಕ ಉಪೇಂದ್ರ ಅಭಿನಯದ ಸೂಪರ್ ಚಿತ್ರದಲ್ಲಿ ಉಪೇಂದ್ರರ ತಂದೆಯ ಪಾತ್ರದಲ್ಲಿ ಅಭಿನಯಿಸಿದರು. 2012ರಲ್ಲಿ ತೆರೆಕಂಡ ಚಾರುಲತಾ ಚಿತ್ರದ ಸುದರ್ಶನ್ ರವರ ಕೊನೆಯ ಚಿತ್ರ.

ನಾಯಕನಾಗಿ[ಬದಲಾಯಿಸಿ]

 • ವಿಜಯನಗರದ ವೀರಪುತ್ರ [೩]
 • ನಗುವ ಹೂವು,
 • ಮರೆಯದ ದೀಪಾವಳಿ
 • ಲಕ್ಷ್ಮೀ-ಸರಸ್ವತಿ,
 • ಕಾಡಿನ ರಹಸ್ಯ,
 • ತಂದೆ-ಮಕ್ಕಳು,
 • ನಾಡಿನ ಭಾಗ್ಯ,
 • "ನಗುವ ಹೂವು ಮುಂತಾದ 60 ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು.[೪]

ಖಳನಟ ಮತ್ತು ಪೋಷಕ ನಟ[ಬದಲಾಯಿಸಿ]

 • ಚಾಣಕ್ಯ
 • ಕರ್ತವ್ಯ
 • ಬ್ರಹ್ಮ ವಿಷ್ಣು ಮಹೇಶ್ವರ
 • ಪ್ರಚಂಡ ಕುಳ್ಳ
 • ಗುರು ಜಗದ್ಗುರು
 • ಹೃದಯ ಪಲ್ಲವಿ
 • ಸೂಪರ್‌
 • ಮಠ
 • ದಶಮುಖ
 • ಚಾರುಲತಾ

ಧಾರಾವಾಹಿ[ಬದಲಾಯಿಸಿ]

 • ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸ್ವಾಮೀಜಿಯ ಪಾತ್ರದಲ್ಲಿ ನಟಿಸಿದ್ದಾರೆ.

ನಿಧನ[ಬದಲಾಯಿಸಿ]

೦೮ಸೆಪ್ಟೆಂಬರ್೨೦೧೭ ರಂದು ಶುಕ್ರವಾರ ನಿಧನರಾದರು. ಅವರಿಗೆ ೭೮ ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ತಿಲಕನಗರದ ಸಾಗರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.[೫]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]