ಜಿತೇಂದ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Jeetendra
Jeetendra 2012 ekta birthday.jpg
ಜನನ Ravi Kapoor
(1942-04-07) ೭ ಏಪ್ರಿಲ್ ೧೯೪೨(ವಯಸ್ಸು ೭೪)
Amritsar, Punjab Province, British India
(now in Punjab, India)
ಇತರೆ ಹೆಸರುಗಳು Jumping Jack
ವೃತ್ತಿ Actor
(Chairman)Balaji Telefilms
ಸಂಗಾತಿ(ಗಳು) Shobha Kapoor
ಮಕ್ಕಳು Ekta Kapoor
Tusshar Kapoor


ಜಿತೇಂದ್ರ (1942 ರ ಏಪ್ರಿಲ್ 7 ರಂದು ಜನನ), ಇವರು ಭಾರತೀಯನಟರಾಗಿದ್ದಾರೆ.

ಆರಂಭಿಕ ಜೀವನ[ಬದಲಾಯಿಸಿ]

ಜಿತೇಂದ್ರ, 1942 ರಲ್ಲಿ ರವಿ ಕಪೂರ್ ಎಂಬ ಜನ್ಮನಾಮದೊಂದಿಗೆ ಪಂಜಾಬ್ಅಮೃತ್ ಸರ ದಲ್ಲಿ ಅಮರ್ ನಾಥ್ ಮತ್ತು ಕೃಷ್ಣಾ ಕಪೂರ್ ರವರ ಪುತ್ರನಾಗಿ ಜನಿಸಿದರು. ರವಿ ಕಪೂರ್, ಕೃತಕ ಆಭರಣಗಳ ವ್ಯಾಪಾರ ಮಾಡುತ್ತಿದ್ದ ಪಂಜಾಬೀ ವ್ಯಾಪಾರಸ್ಥ ಕುಟುಂಬದಲ್ಲಿ ಜನಿಸಿದರು. ವಿ. ಶಾಂತಾರಾಮ್/0} ರವರಿಗೆ ಆಭರಣಗಳನ್ನು ಸರಬರಾಜು ಮಾಡುವಾಗ, ನಟಿ ಸಂಧ್ಯಾ ರವರ 'ಬದಲಿ'ಪಾತ್ರ ನಿರ್ವಹಣೆಗೆ ನಟಿ 1959 ರ "ನವರಂಗ್" ಚಿತ್ರಕ್ಕೆ ಇವರನ್ನು ಆಯ್ಕೆಮಾಡಲಾಯಿತು.

ವೃತ್ತಿಜೀವನ[ಬದಲಾಯಿಸಿ]

ವಿ. ಶಾಂತಾರಾಮ್ ರವರು ನವರಂಗ್ (1959) ಚಿತ್ರದಲ್ಲಿ ನಟಿ ಸಂಧ್ಯಾ ರ[disambiguation needed] ಯುಗಳ ಜೋಡಿಯಾಗಿ ಅಭಿನಯಿಸಲು ಅವಕಾಶ ನೀಡಿದಾಗ, ಜಿತೇಂದ್ರ ಬಾಲಿವುಡ್ ನಲ್ಲಿ ತಮ್ಮ ವೃತ್ತಿ ಜೀವನವನ್ನು 1950 ರ ಉತ್ತರಾರ್ಧದದಿಂದ ಪ್ರಾರಂಭಿಸಿದರು. ಆದರೆ ಶಾಂತಾರಾಮ್ 1963 ರಲ್ಲಿ ಸೆಹ್ರಾ ಮತ್ತು ಗೀತ್ ಗಾಯಾ ಪತ್ಥರೋನೆ (1964) ಚಲನಚಿತ್ರಗಳಲ್ಲಿ ಇವರನ್ನು ನಾಯಕರನ್ನಾಗಿಸಿದಾಗ ಇವರ ಮೊದಲ ಅದೃಷ್ಟ ಖುಲಾಯಿಸಿತು. ಅಲ್ಲಿಂದ ಅವರು ಸುಮಾರು 200 ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಿತೇಂದ್ರ, 1967 ರಲ್ಲಿ ರವಿಕಾಂತ್ ನಾಗೈಚ್ ರ ಫರ್ಜ್ ಚಲನಚಿತ್ರದ ಮೂಲಕ ಬೆಳಕಿಗೆ ಬಂದರು. ಅಲ್ಲದೇ ಈ ಚಲನಚಿತ್ರ ಗೊಲ್ಡನ್ ಜುಬ್ಲೀ ಆಚರಣೆ ಕಂಡಿತು. ಫರ್ಜ್ ನ "ಮಸ್ತ್ ಬಹಾರೊಂಕಾ ಮೈ ಆಶಿಕ್"(ಇದನ್ನು ಪ್ರಸಿದ್ಧ ಗಾಯಕ ಮೊಹಮ್ಮದ್‌ ರಫಿ ಹಾಡಿದ್ದಾರೆ) ಎಂಬ ಹಾಡಿಗಾಗಿ ಕಿರುಕುಳ ಮಳಿಗೆಯೊಂದರಿಂದ ಅವರು ಕೊಂಡುಕೊಂಡ ಟೀ ಶರ್ಟ್ ಮತ್ತು ಶೂಗಳು ಅವರ ಬ್ರ್ಯಾಂಡ್ ಎಂದು ಹೆಗ್ಗುರುತೆನಿಸಿದವು. ಫರ್ಜ್ ಮತ್ತು ಬನ್ ಫೂಲ್ ನಂತಹ ಸಿನಿಮಾಗಳಲ್ಲಿನ ಇವರ ಉತ್ಸಾಹದ ನೃತ್ಯ ಇವರಿಗೆ ಜಂಪಿಂಗ್ ಜ್ಯಾಕ್ ಎಂಬ ಉಪನಾಮವನ್ನು ತಂದುಕೊಟ್ಟಿತು.

1980ರಲ್ಲಿ ಜಿತೇಂದ್ರ, ದಕ್ಷಿಣ ಭಾರತದ ನಿರ್ದೇಶಕರಾದ ರಾಮ ರಾವ್ ತಾತಿನೆನಿ, ಕೆ. ಬಪ್ಪಯ್ಯ ಮತ್ತು ಕೆ. ರಾಘವೇಂದ್ರ ರಾವ್ ರವರ ರೀಮೇಕ್ ಚಿತ್ರಗಳ ಕೃಪೆಯಿಂದಾಗಿ, ಮತ್ತೆ ಮತ್ತೆ ಜನಪ್ರಿಯ ನಟಿಯರಾದ ಶ್ರೀದೇವಿ ಅಥವಾ ಜಯಪ್ರದಾರವರ ಜೋಡಿಯಾಗಿ ಅಭಿನಯಿಸುತ್ತಿದ್ದರು; ಇವುಗಳಲ್ಲಿ ಕೆಲವು ಚಲನಚಿತ್ರಗಳನ್ನು ಪದ್ಮಾಲಯ ಪ್ರೋಡಕ್ಷನ್ ನಿರ್ಮಿಸಿದೆ. ವರ್ಣರಂಜಿತ ಮಣ್ಣಿನ (ಮಡಕೆ)ಬಿಂದಿಗೆಗಳೊಂದಿಗೆ ಸುದೀರ್ಘ ದೃಶ್ಯಾವಳಿಗಳನ್ನು, ಬಪ್ಪಿ ಲಹರಿಯವರ ರಭಸದ ಎಲೆಕ್ಟಾನಿಕ್ ಸಂಗೀತವನ್ನೊಳಗೊಂಡಿದ್ದವು. ಅಲ್ಲದೇಇಂದೀವರ್ ರವರ ಸಾಹಿತ್ಯವನ್ನು ಒಳಗೊಂಡಿರುವ, ಇವರ ಜಸ್ಟೀಸ್ ಚೌಧರಿ (1982), ಮವಾಲಿ (1983), ಹಿಮ್ಮತ್ ವಾಲಾ (1983), ಜಾನಿ ದುಷ್ಮನ್,ಮತ್ತು ತೋಫಾ (1984) ದಂತಹ ಚಲನಚಿತ್ರಗಳು ವಿಮರ್ಶಕರ ಮೆಚ್ಚುಗೆಯನ್ನು ಗಳಿಸದಿದ್ದರೂ ಕೂಡ ಬಾರಿ ಯಶಸ್ಸನ್ನು ಕಂಡವು.

TV ಧಾರಾವಾಹಿಯಾದ ಕ್ಯೂ ಕಿ ಸಾಸ್ ಭಿ ಕಭಿ ಬಹೂ ಥಿ ಯಲ್ಲಿ ಹಿರಿಯ ವಯಸ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸೋನಿ ಎಂಟರ್ ಟೈನ್ಮೆಂಟ್ ಟೆಲಿವಿಷನ್ ನಲ್ಲಿ ಪ್ರಸಾರವಾದ ಜಲಕ್ ದಿಖಲಾ ಜಾ ಎಂಬ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ವೈಯಕ್ತಿಕ ಜೀವನ[ಬದಲಾಯಿಸಿ]

ಇವರು ಭಾರತಪಂಜಾಬ್ಅಮೃತ್ ಸರದಲ್ಲಿ ಜನಿಸಿದರು. ಇಲ್ಲಿ ಅವರು ಅಮೃತ್ ಸರದಲ್ಲೇ ಜನಿಸಿದ ರಾಜೇಶ್ ಖನ್ನಾ ರವರ ಸ್ನೇಹಿತರಾಗಿದ್ದರು. ಇವರಿಬ್ಬರ ತಾಯಿಂದಿರು ಒಟ್ಟಿಗೇ ಸೇರಿ ಒಂದೇ ಸ್ಥಳದಲ್ಲಿ ನಡೆಯುತ್ತಿದ್ದ ಕೀರ್ತನೆಯ ಕಾರ್ಯಕ್ರಮಕ್ಕೆ ಹಾಜರಿರುತ್ತಿದ್ದರು. ಜಿತೇಂದ್ರ, ಅವರ ಬಾಲ್ಯವನ್ನು ಮುಂಬೈನ ಗಿರ್ಗಾವ್ ನಲ್ಲಿ ಕಳೆದರು. ಇವರು, ಮಧ್ಯಮ ವರ್ಗದವರು ವಾಸಿಸುವ ರಾಮಚಂದ್ರ ವಸತಿ ಕಟ್ಟಡದಲ್ಲಿ ವಾಸವಾಗಿದ್ದರು. ಅವರು ಇನ್ನೂ ಕೂಡ ಅಲ್ಲಿಯ ನೆನಪುಗಳನ್ನು ಮರೆತಿಲ್ಲ. ಅಲ್ಲದೇ ಪ್ರತಿವರ್ಷ ಗಣಪತಿ ಹಬ್ಬದ ಸಂದರ್ಭದಲ್ಲಿ ಅವರು ಈ ಸ್ಥಳಕ್ಕೆ ಭೇಟಿನೀಡುತ್ತಾರೆ. ಹೇಮಾ ಮಾಲಿನಿಯವರ ಅನುಮತಿ ಪಡೆದು ರಚಿಸಲಾದ ಅವರ ಜೀವನಚರಿತ್ರೆಯಲ್ಲಿ ಕೆಳಕಂಡಂತೆ ಹೇಳಿಕೊಂಡಿದ್ದಾರೆ: ಜಿತೇಂದ್ರ ಅವರೊಂದಿಗೆ ವಿವಾಹ ಇನ್ನೇನು ನಡೆದೇ ಹೋಗುತ್ತದೆ ಎಂದಾಗ, ಹೇಮಾ ಮಾಲಿನಿಯೇ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.[೧] ಅನಂತರ ಅವರ ಬಾಲ್ಯದ ಪ್ರಿಯತಮೆ ಶೋಭಾ ಕಪೂರ್ ರನ್ನು ಮದುವೆಯಾದರು. ಇವರಿಗೆ ತುಷಾರ್ ಕಪೂರ್ ಎಂಬ ಪುತ್ರನಿದ್ದು, ಇವರೂ ಕೂಡ ನಟರಾಗಿದ್ದಾರೆ. ಅಲ್ಲದೇ ಏಕ್ತಾ ಕಪೂರ್ ಎಂಬ ಪುತ್ರಿಯನ್ನೂ ಹೊಂದಿದ್ದಾರೆ. ಅದಲ್ಲದೇ ಇವರು ಬಾಲಾಜಿ ಟೆಲಿಫಿಲ್ಮ್ಸ್ ಅನ್ನು ನಡೆಸುತ್ತಿದ್ದಾರೆ. ಇವರು ಜನಪ್ರಿಯ TV ಧಾರಾವಾಹಿಗಳನ್ನು ಹಿಂದಿ, ತಮಿಳು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಿಸುತ್ತಾರೆ. ಇವರು ಐದು ಬಾಲಿವುಡ್ ಚಲನಚಿತ್ರಗಳನ್ನು ಕೂಡ ನಿರ್ಮಿಸಿದ್ದು, ಎರಡರಲ್ಲಿ ತುಷಾರ್ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜಿತೇಂದ್ರ, ಅವರ ಪುತ್ರಿ ನಿರ್ಮಿಸಿದ ಕುಚ್ ತೋ ಹೈ (2002) ಚಲನಚಿತ್ರದಲ್ಲಿ ಅವರ ಪುತ್ರ ತುಷಾರ್ ರೊಂದಿಗೆ ತುಸು ಹೊತ್ತು ಕಾಣಿಸಿಕೊಂಡಿದ್ದಾರೆ.

ಪ್ರಶಸ್ತಿಗಳು, ಗೌರವಗಳು ಮತ್ತು ಮನ್ನಣೆಗಳು[ಬದಲಾಯಿಸಿ]

ಜಿತೇಂದ್ರ, ಅವರ ಕಾಲದಲ್ಲಿ ಬಾಲಿವುಡ್ ನಲ್ಲಿದ್ದ ಬಿರುಸಿನ ಸ್ಪರ್ಧೆಯಿಂದಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಬಿಟ್ಟರೆ,ಇತರ ಯಾವ ಪ್ರಶಸ್ತಿಗಳನ್ನು ಅವರು ಗಳಿಸಿಲ್ಲ.

 • 1998- 18ನೇ ಉಜಾಲ ಸಿನಿಮಾ ಎಕ್ಸ್ ಪ್ರೆಸ್ ಪ್ರಶಸ್ತಿಗಳ ಸಂದರ್ಭದಲ್ಲಿ ಗೆಸ್ಟ್ ಆಫ್ ಹಾನರ್ ಪ್ರಶಸ್ತಿ.[೨]
 • 2000– ಚಲನಚಿತ್ರದ ಹೆಸರಾಂತ ವ್ಯಕ್ತಿಗಳಲ್ಲಿ ಜೀವಮಾನ ಸಾಧನೆ ಪ್ರಶಸ್ತಿ[೩]
 • 2008 - ಫಿಲ್ಮ್ ಫೇರ್ ಜೀವಮಾನ ಸಾಧನೆ ಪ್ರಶಸ್ತಿ
 • 2002 – ನ್ಯೂಯಾರ್ಕ್ ನಲ್ಲಿ ನಡೆದ ಬಾಲಿವುಡ್ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ.[೪]
 • 2004 - ಅಟ್ಲಾಂಟಿಕ್‌ ನಗರದಲ್ಲಿ (ಅಮೇರಿಕ ಸಂಯುಕ್ತ ಸಂಸ್ಥಾನಗಳು) ನೀಡಲಾದ "ಭಾರತೀಯ ಸಿನಿಮಾದ ದಂತಕಥೆ"ಯಾದ ಹಿಂದಿ ಚಿತ್ರರಂಗ ಪರಂಪರೆಯ ಐತಿಹ್ಯ ನಿರ್ಮಿಸಲು ನೀಡುವ ಪ್ರಶಸ್ತಿ.[೫]
 • 1996 - ಸ್ಟಾರ್‌ ಸ್ಕ್ರೀನ್‌ ಜೀವಮಾನ ಸಾಧನೆ ಪ್ರಶಸ್ತಿ
 • 2007 – ದಾದಾ ಸಾಹೇಬ್ ಪಾಲ್ಕೆ ಅಕ್ಯಾಡಮಿ ಪ್ರಶಸ್ತಿ [೬]
 • 2008 – ಸ್ಯಾನ್ಸುಯ್ ದೂರದರ್ಶನದ ಜೀವಮಾನ ಸಾಧನೆ ಪ್ರಶಸ್ತಿ[೭]

ಆಯ್ದ ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

1959 - 1965
 • ನವರಂಗ್ (1959)
 • ಗೀತ್ ಗಾಯಾ ಪತ್ಥರೋ ನೇ (1964) … ವಿಜಯ್
1966 - 1970
 • ಫರ್ಜ್ (1967) … ಗೋಪಾಲ್
 • ಬೂಂದು ಜೋ ಬನ್ ಗಯಿ ಮೋತಿ (1967)
 • ಸುಹಾಗ್ ರಾತ್ (1968)
 • ಪರಿವಾರ್ (1968)
 • ಔಲಾದ್ (1968)
 • ಜಿಗ್ರಿ ದೋಸ್ತ್ (1969) … ಗೋಪಿ/ ವಕೀಲ ಆನಂದ್ (ದ್ವಿಪಾತ್ರದಲ್ಲಿ)
 • ವಾರಿಸ್ (1969)
 • ಅನ್ ಮೋಲ್ ಮೋತಿ (1969)
 • ಬಡಿ ದೀದಿ (1969)
 • ಮೇರೆ ಹುಜೂರ್ (1969)… ಅಖ್ತರ್
 • ಜೀನೆ ಕಿ ರಾಹ್ (1969)
 • ಧರ್ತಿ ಕಹೆ ಪುಕಾರ್ ಕೇ (1969)
 • ದೋ ಬಾಯ್ (1969)- SP ವಿಜಯ್ ವರ್ಮ
 • ನಯಾ ರಾಸ್ತಾ (1970)
 • ಮೇರೆ ಹಂಸಫರ್ (1970)
 • ಹಮ್ ಜೋಲಿ (1970) … ರಾಜೇಶ್
 • ಖಿಲೋನ (1970) … ಮೋಹನ್ ಸಿಂಗ್
 • ಯಾರ್ ಮೇರಾ (1970)
 • ಗುನಾಹೋ ಕಾ ದೇವ್ತಾ
 • ಜವಾಬ್ (1970)
 • ಹಿಮ್ಮತ್ (1970)
 • ಮಾ ಔರ್ ಮಮತಾ (1970)
1971 - 1975
 • ಕಾರ್ವಾ (1971) … ಮೋಹನ್
 • ಬಿಖ್ರೆ ಮೋತಿ (1971)
 • ಕಟ್ ಪುಥ್ಲಿ (1971)
 • ಪರಿಚಯ್ (1972)
 • ಏಕ್ ಹಸೀನಾ ದೋ ದಿವಾನೇ
 • ಷಾದಿ ಕೇ ಬಾದ್ (1972 … ವಕೀಲ ಶ್ಯಾಮ್ ಬಿ. ರಾಮ್
 • ಬನ್ ಫೂಲ್ (1973)
 • ಏಕ್ ನಾರಿ ಏಕ್ ಬ್ರಹ್ಮಚಾರಿ (1973)
 • ಗೆಹ್ರಿ ಚಾಲ್ …ಸಾಗರ್
 • ರೂಪ್ ತೇರಾ ಮಸ್ತಾನಾ
 • ಭಾಯ್ ಹೊ ತೋ ಐಸಾ ….ಭರತ್ ಸಿಂಗ್
 • ಅನೋಖಿ ಅದಾ (1973) … ರವಿ
 • ಬಿದಾಯಿ (1974) … ಸುಧಾಕರ್
 • ದುಲ್ಹನ್ (1974)……ಅಶೋಕ್/ವಿಜಯ್
 • ಖುಷ್ಬೂ … ಡಾಕ್ಟರ್. ಬೃಂದಬನ್
 • ಆಖ್ರಿ ದಾವ್ (1975)…ರವಿ
1976 - 1980
 • ಉಧಾರ್ ಕ ಸಿಂಧೂರ್ (1976)-ರಾಜ್ ಕುಮಾರ್ "ರಾಜಾ"
 • ನಾಗಿನ್ (1976) … ನಾಗ್
 • ಧರಮ್ ವೀರ್ (1977) … ವೀರ್
 • ಪ್ರಿಯತಮ (1977) … ರವಿ
 • ಜಯ್ ವಿಜಯ್ (1977)
 • ಕಿನಾರಾ (1977)…
 • ಕಸಮ್ ಖೂನ್ ಕಿ (1977)
 • ಏಕ್ ಹಿ ರಾಸ್ತಾ (1977)
 • ದಿಲ್ದಾರ್ (1977)
 • ಅಪ್ನಾಪನ್ (1977)
 • ಕರಮ್ ಯೋಗಿ (1978)
 • ದಿಲ್ ಔರ್ ದಿವಾರ್
 • ತುಮ್ಹಾರಿ ಕಸಮ್
 • ಬದಲ್ತೆ ರಿಷ್ತೆ (1978) … ಸಾಗರ್
 • ಸ್ವರ್ಗ್ ನರಕ್ (1978) … ಮೋಹನ್
 • ನಾಲಾಯಕ್ (1979)
 • ಜಾನಿ ದುಷ್ಮನ್ (1979) … ಅಮರ್
 • ಲೋಕ್ ಪರ್ಲೋಕ್ (1979) … ಶ್ಯಾಮ್ / ರಾಮ್ ಗುಲಾಮ್
 • ಜಲ್ ಮಹಲ್ (1980)
 • ಹಮ್ ತೇರೆ ಆಶಿಕ್ ಹೈ …ಡಾಕ್ಟರ್. ಆನಂದ್
 • ದಿ ಬರ್ನಿಂಗ್ ಟ್ರ್ಯೇನ್ (1980) … ಕಳ್ಳ
 • ಟಕ್ಕರ್ (1980)
 • ಜುದಾಯಿ (1980)
 • ಆಷಾ (1980)
 • ಮಾಂಗ್ ಭರೋ ಸಜನಾ (1980)-ರಾಮ್ ಕುಮಾರ್/ ಚಂದ್ರು
 • ಜ್ಯೋತಿ ಬನೆ ಜ್ವಾಲಾ (1980)- ಸೂರಜ್/ಜ್ಯೋತಿ/ಜ್ವಾಲಾ
 • ಮೇರಿ ಆವಾಜ್ ಸುನೋ …ಸಬ್ ಇನ್ ಸ್ಪೆಕ್ಟರ್ ಸುಶೀಲ್ ಕುಮಾರ್
1981 - 1985
 • ಪ್ಯಾಸಾ ಸಾವನ್ (1981)
 • ರಕ್ಷಾ (1981)
 • ಜ್ಯೋತಿ (1981)…ಗೋವಿಂದ್
 • ವಕ್ತ್ ಕಿ ದೀವಾರ್ (1981) - ಅಮರ್ ಖಾನ್
 • ಕಹಾನಿ ಏಕ್ ಚೋರ್ ಕಿ (1981)-ರಾಮ್
 • ಮೆಹೆಂದಿ ರಂಗ್ ಲಾಯೇಗಿ
 • ಜಸ್ಟೀಸ್ ಚೌಧರಿ (1982) … ನ್ಯಾಯಾದೀಶ RK ಚೌಧರಿ
 • ಏಕ್ ಹಿ ಭೂಲ್ (1982)…ರಾಮ್ ಕುಮಾರ್ ಶ್ರೀವಾಸ್ತವ್
 • ಬದ್ಲೆ ಕಿ ಆಗ್ (1982)- ಅಮರ್ ವರ್ಮ
 • ಧರಮ್ ಕಾಂತ (1982)
 • ಫರ್ಜ್ ಔರ್ ಕಾನೂನ್ (1982)
 • ಇನ್ ಸಾನ್ (1982)-ರವಿ
 • ನಿಷಾನ್ (1983)
 • ಜಾನಿ ದೋಸ್ತಿ (1983)
 • ಮವಾಲಿ (1983) … ರಮೇಶ್/ ಗಂಗು (ದ್ವಿಪಾತ್ರ)
 • ಹಿಮ್ಮತ್ ವಾಲಾ' (1983) … ರವಿ
 • ಗೋಲ್ಡ್ ಮೆಡಲ್ (1984)
 • ಖೈದಿ (1984) --- ಸೂರಜ್
 • ಹಯ್ಸಿಯತ್ (1984)
 • ಅಕಲ್ಮನ್ದ್ (1984)
 • ತೋಫಾ (1984) … ರಾಮು
 • ಕಾಮ್ ಯಾಬ್ (1984)
 • ಪಾತಾಳ್ ಭೈರವಿ (1985).. ರಾಮ್ ಚಂದ್ರ
 • ಬಾಂಡ್ 303 (1985)
 • ಸರ್ಫರೋಷ್ (1985)
 • ಹಕೀಕತ್ (1985)
1986 - 1990
 • ದೋಸ್ತಿ ದುಷ್ಮನಿ (1986)
 • ಸದಾ ಸುಹಾಗನ್ (1986)
 • ಧರಮ್ ಅಧಿಕಾರಿ (1986) -ಪ್ರಕಾಶ್
 • ಸ್ವರ್ಗ್ ಸೆ ಸುಂದರ್ (1986)…
 • ಹೋಷಿಯಾರ್
 • ಸಾಮ್ರಾಟ್
 • ಜಾಲ್‌ (1986)
 • ಲಾಕೆಟ್ (1986)
 • ಆಗ್ ಔರ್ ಶೋಲಾ (1986) -ವಿಶಾಲ್
 • ಮದದ್ಗಾರ್ (1987)- ಆನಂದ್
 • ನ್ಯೂ ಡೆಲ್ಲಿ (1987)
 • ಅಪ್ನೆ ಅಪ್ನೆ (1987) - ರವಿ ಕಪೂರ್
 • ಜಾನ್ ಹತೇಲಿ ಪೆ (1987)…ರಾಮ್
 • ಇನ್ ಸಾಫ್ ಕಿ ಪುಕಾರ್ (1987)-ಅಜಯ್
 • ಖುದ್ಗರ್ಜ್ (1987)
 • ಔಲಾದ್ (1987)
 • ಮಜಾಲ್ (1987)
 • ಖಳನಾಯಿಕಾ
 • ತಮಾಚಾ (1988) … ರಾಜೀವ್
 • ಮುಲ್ಜಿಮ್ (1988) --ವಿಜಯ್ ಕುಮಾರ್
 • ಕನ್ ವರ್ಲಾಲ್ (1988)
 • ಸೋನೆ ಪೆ ಸುಹಾಗಾ
 • ಅರ್ಪಣ್
 • ಆಸ್ಮಾನ್ ಸೇ ಊಂಚಾ (1989)
 • ದಾವ್ ಪೇಚ್-
 • ನಫರತ್ ಕಿ ಆಂದಿ (1989)- ಇನ್ ಸ್ಪೆಕ್ಟರ್ ರವಿ ಕಪೂರ್
 • ಸೌತೇನ್ ಕಿ ಬೇಟಿ (1989)- ಡಾಕ್ಟರ್. ಶ್ಯಾಮ್ ಶಂಕರ್ ವರ್ಮ
 • ಜಹರೀಲೆ (1990) … ನಿವೃತ್ತ ಸೈನ್ಯಾಧಿಕಾರಿ
 • ಹಾತಿಮ್ ತಾಯ್ (1990)
 • ಥಾಣೆದಾರ್ (1990)
 • ಮಜ್ಬೂರ್
 • ಅಮಿರೀ ಗರಿಬೀ
1991 - 1995
 • ದಿಲ್ ಆಶನಾ ಹೈ (1992) … ರಾಜಕುಮಾರ ಅರ್ಜುನ್
 • ಮಾ (1992)
 • ಸಂತಾನ್ (1993) … ಸರ್ಜು ಕಾವಲುಗಾರ
 • ರಂಗ್ (1993) … ಅಜಯ್ ಮಲ್ಹೋತ್ರ
 • ಆದ್ಮಿ ಖಿಲೋನ ಹೈ (1993) ....ವಿಜಯ್ ವರ್ಮ
 • ಉಧಾರ್ ಕಿ ಜಿಂದಗಿ (1994)…ಸೀತರಾಮ್
 • ಪಾಪಿ ದೇವ್ತಾ (1995)
 • ಜನಮ್ ಕುಂಡಲಿ (1995)
 • ಜಮಾನಾ ದೀವಾನಾ (1995) … ಮದನ್ ಲಾಲ್ ಮಲ್ಹೋತ್ರ
1996 - ಪ್ರಸ್ತುತದ
 • ದುಷ್ಮನ್ ದುನಿಯಾ ಕಾ (1996) … ಮಹೇಶ್
 • ಮಹಾಂತಾ
 • ಲವ್ ಕುಶ್ (1997)
 • ಮದರ್ (1999) …
 • ಕುಚ್ ತೋ ಹೈ (2003) .. ಕರಣ್ ನ ಅಪ್ಪ
 • ಓಂ ಶಾಂತಿ ಓಂ (2007)ಗೌರವ ನಟ

ಉಲ್ಲೇಖಗಳು[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. [೧][dead link]
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಅಕಲ್ಮಂದ್1984

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಜಿತೇಂದ್ರ&oldid=571772" ಇಂದ ಪಡೆಯಲ್ಪಟ್ಟಿದೆ