ವಿಷಯಕ್ಕೆ ಹೋಗು

ಲಗ್ನಪತ್ರಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೀನೀ ಮತ್ತು ಪಾಶ್ಚಾತ್ಯ ಶೈಲಿಗಳ ಲಗ್ನಪತ್ರಿಕೆಗಳ ಮಿಶ್ರಣ

ಲಗ್ನಪತ್ರಿಕೆಯು (ಮದುವೆ ಕರೆಯೋಲೆ) ವಿವಾಹಕ್ಕೆ ಬರುವಂತೆ ಸ್ವೀಕರಿಸುವವನಿಗೆ ಕೇಳಿಕೊಳ್ಳುವ ಪತ್ರ. ಸಾಮಾನ್ಯವಾಗಿ ಇದನ್ನು ವಿಧ್ಯುಕ್ತ, ಮೂರನೇ ವ್ಯಕ್ತಿಯ ಭಾಷೆಯಲ್ಲಿ ಬರೆದಿರಲಾಗಿರುತ್ತದೆ. ಇದನ್ನು ವಿವಾಹದ ದಿನಾಂಕಕ್ಕೆ ಐದರಿಂದ ಎಂಟು ವಾರಗಳ ಮೊದಲು ಅಂಚೆ ಮೂಲಕ ಕಳುಹಿಸಲಾಗುತ್ತದೆ.

ಯಾವುದೇ ಇತರ ಆಹ್ವಾನ ಪತ್ರಿಕೆಯಂತೆ, ಲಗ್ನಪತ್ರಿಕೆಗಳನ್ನು ಕಳುಹಿಸುವುದು ಆತಿಥೇಯನ ಹಕ್ಕು ಮತ್ತು ಕರ್ತವ್ಯವಾಗಿರುತ್ತದೆ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ, ಮದುಮಗಳ ತಾಯಿಯು ಮದುಮಗಳ ಕುಟುಂಬದ ಪರವಾಗಿ ಲಗ್ನಪತ್ರಿಕೆಗಳನ್ನು ಖುದ್ದಾಗಿ ಅಥವಾ ಇತರರ ಮೂಲಕ (ಅತಿಥಿಗಳ ಪಟ್ಟಿಯನ್ನು ಆಯ್ಕೆಮಾಡಲು ಮತ್ತು ಪತ್ರಗಳ ಮೇಲೆ ವಿಳಾಸ ಬರೆಯಲು ಸಂಬಂಧಿಕರು, ಸ್ನೇಹಿತರು, ಸಾಮಾಜಿಕ ಕಾರ್ಯದರ್ಶಿಯ ಸಹಾಯ ಪಡೆದು, ಅಥವಾ ಸೇವಾಸಂಸ್ಥೆಯನ್ನು ಗೊತ್ತುಮಾಡಿ) ಕಳುಹಿಸುತ್ತಾಳೆ. ಭಾರತದಲ್ಲಿ, ತೀರ ಹತ್ತಿರದ ಸಂಬಂಧಿಕರಿಗೆ ಲಗ್ನಪತ್ರಿಕೆಯನ್ನು ಮನೆಗೆ ಹೋಗಿ ಕೊಡಲಾಗುತ್ತದೆ.