ವಿಷಯಕ್ಕೆ ಹೋಗು

ಸನಾದಿ ಅಪ್ಪಣ್ಣ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸನಾದಿ ಅಪ್ಪಣ್ಣ ಇಂದ ಪುನರ್ನಿರ್ದೇಶಿತ)

ಟೆಂಪ್ಲೇಟು:Testcases other

ಸನಾದಿ ಅಪ್ಪಣ್ಣ

ಈ ಚಿತ್ರವು ಕೃಷ್ಣಮೂರ್ತಿ ಪುರಾಣಿಕ ರ ಅದೇ ಹೆಸರಿನ ಕಾದಂಬರಿ ಆಧಾರಿತವಾಗಿದೆ.ಚಿತ್ರದ ನಾಯಕ ಅಪ್ಪಣ್ಣ ಶಹನಾಯಿ ವಾದಕ. ಅಪ್ಪಣ್ಣ ಮತ್ತು ಬಸಂತಿ (ನಾಟ್ಯ ಕಲಾವಿದೆ) ಒಬ್ಬರನ್ನೊಬ್ಬರು ಮೆಚ್ಚಿ ಮದುವೆಯಾಗುತ್ತಾರೆ. ಇವರಿಬ್ಬರ ಪ್ರ್ರೇಮಕ್ಕೆ ಜಾತಿ ಅಡ್ಡಗೋಡೆಯಾದರೂ ಅದನ್ನು ಮೀರಿ ನಿಲ್ಲುತ್ತಾರೆ. ಕಾಲಾನುಕ್ರಮದಲ್ಲಿ ಬಸಂತಿ ಒಂದು ಗಂಡು ಮಗುವಾದ ನಂತರ ಮರಣವನ್ನಪ್ಪುತ್ತಾಳೆ. ಆದರೆ ಮಗುವಿಗೆ ಪರಂಪರೆಯಿಂದ ಬಂದಿರುವ ಶಹನಾಯಿ ವಾದನವನ್ನು ಕಲಿಸದೆ ದೊಡ್ಡ ವಿದ್ಯಾವಂತನನ್ನಾಗಿ ಮಾಡಬೇಕೆಂದು ಅಪ್ಪಣ್ಣನಿಂದ ಭಾಷೆ ತೆಗೆದುಕೊಂಡಿರುತ್ತಾಳೆ.ಆದರೆ ಮುಂದೆ ಮಗನು ವಿದ್ಯೆ ಮತ್ತು ಹಣದ ಅಹಂನಿಂದ ತಂದೆಯನ್ನು ಕಡೆಗಣಿಸುತ್ತಾನೆ. ಮುಂದಿನ ಕಥೆ ತಿಳಿಯಲು ಚಿತ್ರ ನೋಡಿ.