ಸನಾದಿ ಅಪ್ಪಣ್ಣ (ಚಲನಚಿತ್ರ)
Jump to navigation
Jump to search
ಸನಾದಿ ಅಪ್ಪಣ್ಣ (ಚಲನಚಿತ್ರ) | |
---|---|
ಸನಾದಿ ಅಪ್ಪಣ್ಣ | |
ನಿರ್ದೇಶನ | ವಿಜಯ್ |
ನಿರ್ಮಾಪಕ | ವಿ.ಎಸ್.ಮುರಳಿ |
ಕಥೆ | ಕ್ರಿಶ್ನಮೂರ್ತಿ ಪುರನಿಕ್ |
ಪಾತ್ರವರ್ಗ | ಡಾ.ರಾಜ್‍ಕುಮಾರ್ ಜಯಪ್ರದ ಪ್ರಾಪಮ್ಮ, ತೂಗುದೀಪ ಶ್ರೀನಿವಾಸ್ |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಆರ್.ಚಿಟ್ಟಿಬಾಬು |
ಬಿಡುಗಡೆಯಾಗಿದ್ದು | ೧೯೭೭ |
ಚಿತ್ರ ನಿರ್ಮಾಣ ಸಂಸ್ಥೆ | ಆನಂದ ಲಕ್ಷ್ಮೀ ಎಂಟರ್ಪ್ರೈಸಸ್ |
ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್,ಎಸ್.ಜಾನಕಿ,ಉಡುಪಿ ಜಯರಾಂ |
ಇತರೆ ಮಾಹಿತಿ | "ಅಭಿನಯ" ಚಿತ್ರ ಮಂದಿರದಲ್ಲಿ ಬಿಡುಗಡೆಯಾದ ಮೊದಲ ಚಲನಚಿತ್ರ. ಭಾರತದ ಪ್ರಖ್ಯಾತ ಶಹನಾಯಿ ವಾದಕ [ಬಿಸ್ಮಿಲ್ಲಾ ಖಾನ್] ಈ ಚಿತ್ರದಲ್ಲಿ ಅಪ್ಪಣ್ಣನ ಸನಾದಿಗೆ ಉಸಿರನ್ನು ತುಂಬಿರುವುದು ವಿಶೇಷ."ನಮನ" |
ಈ ಚಿತ್ರವು ಕೃಷ್ಣಮೂರ್ತಿ ಪುರಾಣಿಕ ರ ಅದೇ ಹೆಸರಿನ ಕಾದಂಬರಿ ಆಧಾರಿತವಾಗಿದೆ.ಚಿತ್ರದ ನಾಯಕ ಅಪ್ಪಣ್ಣ ಶಹನಾಯಿ ವಾದಕ. ಅಪ್ಪಣ್ಣ ಮತ್ತು ಬಸಂತಿ (ನಾಟ್ಯ ಕಲಾವಿದೆ) ಒಬ್ಬರನ್ನೊಬ್ಬರು ಮೆಚ್ಚಿ ಮದುವೆಯಾಗುತ್ತಾರೆ. ಇವರಿಬ್ಬರ ಪ್ರ್ರೇಮಕ್ಕೆ ಜಾತಿ ಅಡ್ಡಗೋಡೆಯಾದರೂ ಅದನ್ನು ಮೀರಿ ನಿಲ್ಲುತ್ತಾರೆ. ಕಾಲಾನುಕ್ರಮದಲ್ಲಿ ಬಸಂತಿ ಒಂದು ಗಂಡು ಮಗುವಾದ ನಂತರ ಮರಣವನ್ನಪ್ಪುತ್ತಾಳೆ. ಆದರೆ ಮಗುವಿಗೆ ಪರಂಪರೆಯಿಂದ ಬಂದಿರುವ ಶಹನಾಯಿ ವಾದನವನ್ನು ಕಲಿಸದೆ ದೊಡ್ಡ ವಿದ್ಯಾವಂತನನ್ನಾಗಿ ಮಾಡಬೇಕೆಂದು ಅಪ್ಪಣ್ಣನಿಂದ ಭಾಷೆ ತೆಗೆದುಕೊಂಡಿರುತ್ತಾಳೆ.ಆದರೆ ಮುಂದೆ ಮಗನು ವಿದ್ಯೆ ಮತ್ತು ಹಣದ ಅಹಂನಿಂದ ತಂದೆಯನ್ನು ಕಡೆಗಣಿಸುತ್ತಾನೆ. ಮುಂದಿನ ಕಥೆ ತಿಳಿಯಲು ಚಿತ್ರ ನೋಡಿ.