ವಿಷಯಕ್ಕೆ ಹೋಗು

ಬೆಂಗಳೂರು ಲತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಂಗಳೂರು ಲತಾ
ಜನನ
ಬಿ. ಆರ್. ಲತಾ

೧೯೪೧
ಮರಣಮಾರ್ಚ್ ೨೬, ೧೯೯೦
ರಾಷ್ಟ್ರೀಯತೆಭಾರತೀಯ
ವೃತ್ತಿಹಿನ್ನೆಲೆ ಗಾಯಕಿ
ಸಕ್ರಿಯ ವರ್ಷಗಳು೧೯೬೨ - ೧೯೯೦
ಸಂಗಾತಿಟೊಮ್ಯಾಟೋ ಸೋಮು (ನಟ)

ಬೆಂಗಳೂರು ಲತಾ (English:Bangalore Latha), ಕನ್ನಡ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕಿಯರಲ್ಲಿ ಒಬ್ಬರು. ಕನ್ನಡ ಮಾತ್ರವೇ ಅಲ್ಲದೆ ತೆಲುಗು, ತುಳು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಹಾಡಿದ್ದಾರೆ. ಚಿತ್ರಗೀತೆಗಳೇ ಅಲ್ಲದೆ, ಅಸಂಖ್ಯಾತ ಭಾವಗೀತೆ, ಭಕ್ತಿಗೀತೆ ಮತ್ತು ಜನಪದ ಗೀತೆಗಳನ್ನು ಲತಾ ಹಾಡಿದ್ದಾರೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ಲತಾ ಹುಟ್ಟಿದ್ದು ಬೆಂಗಳೂರಿನಲ್ಲಿ. ಇವರು ಚಿಂತನಪಲ್ಲಿ ಕೃಷ್ಣಮೂರ್ತಿ ಅವರ ಬಳಿ ಸಂಗೀತ ಕಲಿತರು. ಹಾಸ್ಯ ನಟ ಟೊಮ್ಯಾಟೋ ಸೋಮು ಅವರನ್ನು ಲತಾ ಮದುವೆಯಾಗಿದ್ದರು. ಮಾನಸಿಕ ಒತ್ತಡ ಮತ್ತು ಕೌಟುಂಬಿಕ ಕಾರಣಗಳಿಂದ ಮಾರ್ಚ್ ೨೬, ೧೯೯೦ರಂದು ನಿದ್ದೆ ಗುಳಿಗೆಗಳನ್ನು ನುಂಗಿ, ಲತಾ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದರು.

ಚಿತ್ರರಂಗದಲ್ಲಿ

[ಬದಲಾಯಿಸಿ]

ವೇದಿಕೆ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದ ಲತಾ ಒಮ್ಮೆ ಬೆಂಗಳೂರಿನ ಪುರಭವನದ ಕಾರ್ಯಕ್ರಮದಲ್ಲಿ ಹಾಡಿದುದನ್ನು ಜಿ.ಕೆ.ವೆಂಕಟೇಶ್ ಗಮನಿಸಿದರು. ಅವರು ತಾವು ಸಂಗೀತ ನೀಡುತ್ತಿದ್ದ ಕಣ್ತೆರೆದು ನೋಡು (೧೯೬೧) ಸಿನಿಮಾದಲ್ಲಿ ಲತಾ ಅವರಿಗೆ ಅವಕಾಶ ನೀಡಿದರು. ಅನಂತರ ಡಾ.ರಾಜ್‍ಕುಮಾರ್, ಕೃಷ್ಣಕುಮಾರಿ ಅಭಿನಯಿಸಿದ್ದ ಮಹಾತ್ಮ ಕಬೀರ(೧೯೬೨) ಚಿತ್ರದ ಮೂಲಕದಲ್ಲಿ ಅನಸೂಯಾ ದೇವಿ ಅವರ ಸಂಗೀತದಲ್ಲಿ ಹಾಡಿದರು.[]. ಅಲ್ಲಿಂದ ಲತಾ ಅವರ ಸಿನಿಪಯಣ ಆರಂಭವಾಗಿ ನಾಲ್ಕು ದಶಕಗಳ ಕಾಲ ಮುಂದುವರೆಯಿತು.

ಸತ್ಯಂ, ಘಂಟಸಾಲ, ವಿಜಯ ಭಾಸ್ಕರ್, ಎಂ.ರಂಗರಾವ್, ಜಿ.ಕೆ.ವೆಂಕಟೇಶ್, ಉಪೇಂದ್ರಕುಮಾರ್, ರಾಜನ್-ನಾಗೇಂದ್ರ ಹೀಗೆ ತಮ್ಮ ಕಾಲದ ಎಲ್ಲಾ ಸಂಗೀತ ನಿರ್ದೇಶಕರೊಂದಿಗೆ ಲತಾ ಕೆಲಸ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಎಂ. ರಂಗರಾವ್ ಅವರು ಲತಾ ಅವರಿಗಾಗಿ ಸಾಕಷ್ಟು ಹಾಡುಗಳನ್ನು ಸಂಯೋಜಿಸಿದ್ದಾರೆ.

ಜನಪ್ರಿಯ ಹಾಡುಗಳು

[ಬದಲಾಯಿಸಿ]

ಲತಾ ಸಾಕಷ್ಟು ಹಾಡುಗಳನ್ನು ಎಸ್. ಪಿ. ಬಾಲಸುಬ್ರಹ್ಮಣ್ಯಂ, ಪಿ.ಬಿ.ಶ್ರೀನಿವಾಸ್, ಡಾ. ರಾಜ್ ಕುಮಾರ್ ಅವರೊಂದಿಗೆ ಹಾಡಿದ್ದಾರೆ.

ಜ್ವಾಲಾಮುಖಿ ಚಿತ್ರದ ಮತ್ತೊಂದು ಪ್ರಸಿದ್ಧ ಹಾಡು "ಹೇಳುವುದು ಒಂದು ಮಾಡುವುದು ಇನ್ನೊಂದು". ನಾಯಕ ನಾಯಕಿಯರು ಒಬ್ಬರನ್ನೊಬ್ಬರು ಛೇಡಿಸುವ ಹಾಡಾಗಿದೆ.

ಲತಾ ಅವರ ಆಲಾಪ (ಹಮ್ಮಿಂಗ್) ಜನಪ್ರಿಯವಾಗಿವೆ.

  • ಅದೇ ಕಣ್ಣು ಚಿತ್ರದ "ನಯನ ನಯನ ಮಿಲನ"
  • "ಆ ರತಿಯೇ ಧರೆಗಿಳಿದಂತೆ" (ಧ್ರುವ ತಾರೆ)
  • ರಾಗತಾಳ ಚಿತ್ರದ ಎಸ್.ಪಿ.ಬಿ. ಅವರೊಂದಿಗೆ ಹಾಡಿದ "ಓ ಚೆಲುವೆ ನಾಟ್ಯದ ಸಿರಿನವಿಲೇ"
  • ನಾಗ ಕಾಳ ಭೈರವ ಚಿತ್ರದ, ಕೆ. ಜೆ. ಯೇಸುದಾಸ್ ಅವರೊಂದಿಗೆ ಹಾಡಿದ "ನಮ್ಮೀ ಬಾಳೇ ರಸಮಯ ಕಾವ್ಯ" ಮುಂತಾದವು.

ಲತಾ - ಎಸ್. ಜಾನಕಿ ಜೋಡಿ ಕೂಡ ಸಾಕಷ್ಟು ಹಾಡುಗಳನ್ನು ನೀಡಿದೆ. ಮುಖ್ಯವಾಗಿ

  • "ಚೆಲುವರಲ್ಲಿ ಚೆಲುವ" (ಗಂಗೆ ಗೌರಿ)
  • "ಚಂದ್ರಮುಖಿ ಪ್ರಾಣಸಖಿ" (ನಾಂದಿ)

ಹಾಡುಗಳ ಪಟ್ಟಿ

[ಬದಲಾಯಿಸಿ]

ಬೆಂಗಳೂರು ಲತಾ ಅವರು ಹಾಡಿರುವ ಆಯ್ದ ಚಿತ್ರಗೀತೆಗಳ ಪಟ್ಟಿ.

ವರ್ಷ ಚಿತ್ರ ಭಾಷೆ ಹಾಡು ಸಂಗೀತ ನಿರ್ದೇಶನ ಸಹ-ಗಾಯಕರು
1962 ಮಹಾತ್ಮ ಕಬೀರ್ ಕನ್ನಡ "ಅಂದದ ಸುಂದರ ಕಂದನೆ" ಎ. ಅನಸೂಯಾ ದೇವಿ ಎಸ್. ಜಾನಕಿ
1963 ಶ್ರೀರಾಮಾಂಜನೇಯ ಯುದ್ಧ ಕನ್ನಡ "ಝಣ ಝಣ ಜಂಜಣ" ಸಿ. ಸತ್ಯಂ ಎಸ್. ಜಾನಕಿ
ಮನ ಮೆಚ್ಚಿದ ಮಡದಿ "ಯೇಸು ನದಿಗಳ ದಾಟಿ" ವಿಜಯ್ ಭಾಸ್ಕರ್ ಪಿ.ಬಿ.ಶ್ರೀನಿವಾಸ್, ಎಲ್. ಆರ್. ಈಶ್ವರಿ
ನರ್ತನಶಾಲಾ ತೆಲುಗು "ಸಲಲಿತ ರಾಗ ಸುಧಾರಸ ಸಾರ" ಎಸ್. ದಕ್ಷಿಣಾಮೂರ್ತಿ ಎಂ. ಬಾಲಮುರಳಿ ಕೃಷ್ಣ
"ಶೀಲವತಿ"
1964 ಪ್ರತಿಜ್ಞೆ ಕನ್ನಡ "ದೀಪಾವಳಿಯು ಕುಣಿಯುತ ಬಂತು" ಎಸ್. ಹನುಮಂತರಾವ್
ನಾಂದಿ "ಚಂದ್ರಮುಖಿ ಪ್ರಾಣಸಖಿ" ವಿಜಯ್ ಭಾಸ್ಕರ್ ಎಸ್. ಜಾನಕಿ
1965 ಮಹಾಸತಿ ಅನಸೂಯ ಕನ್ನಡ "ಸಮನಾರಿಹರು ಎನ್ನ" ಎಸ್. ಹನುಮಂತರಾವ್ ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ
ಚಂದ್ರಹಾಸ "ಯಾವ ಕವಿಯ ಶೃಂಗಾರ ಕಲ್ಪನೆಯೋ" ಎಸ್. ಹನುಮಂತರಾವ್ ಘಂಟಸಾಲ
1966 ಮಂತ್ರಾಲಯ ಮಹಾತ್ಮೆ ಕನ್ನಡ "ಶ್ರವಣ ಕೀರ್ತನ" ರಾಜನ್ ನಾಗೇಂದ್ರ
ಮನೆ ಕಟ್ಟಿ ನೋಡು "ಚಾಮರಾಜಪೇಟೆ" ಆರ್. ರತ್ನ ಕೆ. ಎಸ್. ಎಲ್. ಸ್ವಾಮಿ
ಮಧುಮಾಲತಿ "ಅಂಜಿಕೆ ನಾಚಿಕೆ ಏತಕೆ ಜಿ. ಕೆ. ವೆಂಕಟೇಶ್ ಎಸ್. ಜಾನಕಿ
"ಈ ಭಾವ ಈ ಭಂಗಿ ನಿನಗಾಗಿ"
ದುಡ್ಡೇ ದೊಡ್ಡಪ್ಪ "ಮಾತಾಡೆ ಏಕೋ ನಲ್ಲ" ಟಿ. ಜಿ. ಲಿಂಗಪ್ಪ
"ನೋಡು ಕಣ್ಣಾರ ಹೆಣ್ಣ ವಯ್ಯಾರ" ರೇಣುಕಾ
ಬಾಲ ನಾಗಮ್ಮ "ಕಾಲ ಬಂದಿದೆ ನಿನಗೆ ಎಸ್. ರಾಜೇಶ್ವರ ರಾವ್ ಎಲ್. ಆರ್. ಈಶ್ವರಿ
1967 ಪಾರ್ವತಿ ಕಲ್ಯಾಣ ಕನ್ನಡ "ವನಮಾಲೇ ವೈಕುಂತಪತೇ" ಜಿ. ಕೆ. ವೆಂಕಟೇಶ್ ಪಿ. ಬಿ. ಶ್ರೀನಿವಾಸ್
ಲಗ್ನ ಪತ್ರಿಕೆ "ಇಲ್ಲಿ ಯಾರೂ ಇಲ್ಲ" ವಿಜಯ್ ಭಾಸ್ಕರ್ ಪಿ. ಬಿ. ಶ್ರೀನಿವಾಸ್, ಎಲ್. ಆರ್. ಈಶ್ವರಿ
ಗಂಗೆ ಗೌರಿ "ಚೆಲುವರಲ್ಲಿ ಚೆಲುವ" ಟಿ. ಜಿ. ಲಿಂಗಪ್ಪ ಎಸ್. ಜಾನಕಿ
ಚಂಕ್ರತೀರ್ಥ "ಓಡಿ ಬಾ ಓಡೋಡಿ ಬಾ" ಬಿ. ಕೆ. ಸುಮಿತ್ರ
ಬೀದಿ ಬಸವಣ್ಣ "ಬೇಡ ಬೇಡ ಬಾಗಿಲು ಹಾಕಬೇಡ" ನಾಗೇಶ್ವರ ರಾವ್
1968 ಸರ್ವಮಂಗಳ ಕನ್ನಡ "ಶ್ರೀ ಪಾರ್ವತಿಯ" ಸತ್ಯಂ
ನಮ್ಮ ಊರು "ಚೆಲುವಿನ ಗಣಿಯಾಗಿ" ಆರ್. ರತ್ನ ಪಿ. ಬಿ. ಶ್ರೀನಿವಾಸ್
"ಸುಂದರಲೋಕಕೆ ಸ್ವಾಗತವು"
ಲಕ್ಷಾಧೀಶ್ವರ "ಪ್ರೇಮಕ್ಕೆ ಕಣ್ಣಿಲ್ಲ" ಸತ್ಯಂ
ಚಿನ್ನಾರಿ ಪುಟ್ಟಣ್ಣ "ಹೂವ ತಂದು ಮಾರಿದಳು" ಟಿ. ಜಿ. ಲಿಂಗಪ್ಪ ಎಸ್. ಜಾನಕಿ, ರೇಣುಕಾ
"ಮದುಮಗಳು ನೀನಮ್ಮ"
ಅಮ್ಮ "ಎಂಥ ಚೆಲುವ ನಗುವೋ" ಟಿ. ಜಿ. ಲಿಂಗಪ್ಪ ಪಿ. ಬಿ. ಶ್ರೀನಿವಾಸ್
ಗೋವುಲ ಗೋಪಣ್ಣ ತೆಲುಗು "ಈ ವಿರಿತೋಲಲ" ಘಂಟಸಾಲ ಪಿ. ಸುಶೀಲ, ರಾಘವುಲು, ಘಂಟಸಾಲ
"ಡಮ್ ಡಮ್ ಡ್ರೈ ಕ್ಲೀನಿಂಗ್" ಘಂಟಸಾಲ
1969 ಗಂಡೊಂದು ಹೆಣ್ಣಾರು ಕನ್ನಡ "ಮುಟ್ಟಬೇಡ ಮಾತಾಡಬೇಡ" ಟಿ. ಜಿ. ಲಿಂಗಪ್ಪ ನಾಗೇಶ್ವರರಾವ್
ಚೂರಿ ಚಿಕ್ಕಣ್ಣ "ನೀ ಮೊದಲು ಮೊದಲು ನನ್ನ ನೋಡಿದಾಗ" ಸಿ. ಸತ್ಯಂ ಎಸ್. ಪಿ. ಬಾಲಸುಬ್ರಹ್ಮಣ್ಯಂ
1970 ಮೃತ್ಯುಪಂಜರದಲ್ಲಿ ಗೂಢಚಾರಿ 555 ಕನ್ನಡ "ಕಾಮನ ಬಿಲ್ಲಿಂದಿಳಿದು" ಸಿ. ಸತ್ಯಂ ಪಿ. ಬಿ. ಶ್ರೀನಿವಾಸ್
1971 ಅಳಿಯ ಗೆಳೆಯ ಕನ್ನಡ "ಏರಿ ಬನ್ನಿ ನೋಡಿ" ಟಿ. ಜಿ. ಲಿಂಗಪ್ಪ ಪಿ. ನಾಗೇಶ್ವರರಾವ್, ಟಿ. ಜಿ. ಲಿಂಗಪ್ಪ
1972 ಮಾಲತಿ ಮಾಧವ ಕನ್ನಡ "ಆಹಾ ನಾ ಮರೆಯಲಾರೆ" ಟಿ. ಜಿ. ಲಿಂಗಪ್ಪ ಎಸ್. ಪಿ. ಬಾಲಸುಬ್ರಹ್ಮಣ್ಯಂ
ಬುಲ್ಲಮ್ಮ ಬುಲ್ಲೋಡು ತೆಲುಗು "ಅಮ್ಮ ಅನ್ನದಿ ಒಕ ಕಮ್ಮನಿ" ಸಿ. ಸತ್ಯಂ ರಮಣ, ಎಸ್. ಪಿ. ಬಾಲಸುಬ್ರಹ್ಮಣ್ಯಂ
1975 ಕಾವೇರಿ ಕನ್ನಡ "ಶಿಲ್ಪ ಚತುರ ಕಲ್ಪನ" ಎಂ. ರಂಗರಾವ್ ಎನ್. ಎಸ್. ರಮಣ್
1977 ಮನಸಿನಂತೆ ಮಾಂಗಲ್ಯ ಕನ್ನಡ "ಇವನೇನಮ್ಮಿ ದುಡ್ಡಲ್ಲ" ರಮೇಶ್ ನಾಯ್ಡು
1978 ಮುಯ್ಯಿಗೆ ಮುಯ್ಯಿ ಕನ್ನಡ "ಬೆಳ್ಳಿಚುಕ್ಕಿ ಬೆಳ್ಳಿಚುಕ್ಕಿ ಬಿಂಕ ತೋರಿ" ಸಿ. ಸತ್ಯಂ ಎಸ್. ಪಿ. ಬಾಲಸುಬ್ರಹ್ಮಣ್ಯಂ, ಪಿ. ಸುಶೀಲ, ಪಿ. ಬಿ. ಶ್ರೀನಿವಾಸ್
ಭಲೇ ಹುಡುಗ "ಬಾರೆ ಬಾರೆ ಹೆಣ್ಣೆ" ಜಿ. ಕೆ. ವೆಂಕಟೇಶ್ ಎಸ್. ಜಾನಕಿ
1979 ಅತ್ತೆಗೆ ತಕ್ಕ ಸೊಸೆ ಕನ್ನಡ "ಧಾನ್ಯ ಲಕುಮಿ ಬಂದವಳೇ" ಎಂ. ರಂಗರಾವ್ ಎಸ್. ಜಾನಕಿ
1980 ಪಟ್ಟಣಕ್ಕೆ ಬಂದ ಪತ್ನಿಯರು ಕನ್ನಡ "ಶಂಕರ ಗಂಗಾಧರ" ಎಂ. ರಂಗರಾವ್ ಪಿ. ಬಿ. ಶ್ರೀನಿವಾಸ್, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ಉಲ್ಲೇಖಗಳು

[ಬದಲಾಯಿಸಿ]
  1. "ಮಹಾತ್ಮ ಕಬೀರ ಚಿತ್ರತಂಡ". chiloka.com.
  2. "ನೀ ಮೊದಲು ಮೊದಲು:ಎಸ್.ಪಿ.ಬಿ., ಬೆಂಗಳೂರು ಲತಾ". jiosaavn.com.[ಶಾಶ್ವತವಾಗಿ ಮಡಿದ ಕೊಂಡಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಬೆಂಗಳೂರು ಲತಾ ಐ ಎಮ್ ಡಿ ಬಿನಲ್ಲಿ