ಧಾರಾವಾಹಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪತ್ರಿಕೆಗಳಲ್ಲಿ ಕಾದಂಬರಿಯನ್ನು ಕಂತುಗಳಲ್ಲಿ ಪ್ರಕಟಿಸುವುದಕ್ಕೆ ಧಾರಾವಾಹಿ ಎಂಬ ಹೆಸರಿದೆ. ಇದು ಕಾದಂಬರಿಗಳು ಜನಪ್ರಿಯವಾಗತೊಡಗಿದಾಗ ಇಂಗ್ಲೆಂಡ್ ದೇಶದಲ್ಲಿ ಮಾತು ಫ್ರಾನ್ಸ್ ದೇಶದಲ್ಲಿ ಈ ಸಂಪ್ರದಾಯ ಮೊದಲು ರೂಢಿಗೆ ಬಂದಿತು. ಪ್ರಸಿದ್ಧ ಕಾದಂಬರಿಕಾರರಾದ ಚಾರ್ಲ್ಸ್ ಡಿಕನ್ಸ್, ವಿಕ್ಟರ್ ಹ್ಯೂಗೋ ಮೊದಲಾದ ಲೇಖಕರ ಕಾದಂಬರಿಗಳು ಧಾರಾವಾಹಿ ರೂಪದಲ್ಲಿ ಪ್ರಕಟವಾದವು. ಧಾರಾವಾಹಿಗಳಲ್ಲಿ ಕುತೂಹಲಕರ ತಿರುವಿನಲ್ಲಿ ಒಂದು ಕಂತನ್ನು ನಿಲ್ಲಿಸಲಾಗುತ್ತದೆ. ಇದರಿಂದ ಮುಂದಿನ ಕಂತಿನಲ್ಲಿ ಏನಾಗುತ್ತದೋ ಎಂಬ ಕುತೂಹಲ ಓದುಗರನ್ನು ಕಾಡುತ್ತದೆ. ಹೀಗಾಗಿ ಓದುಗರ ಸಂಖ್ಯೆ ಹೆಚ್ಚುತ್ತದೆ. ಕನ್ನಡದಲ್ಲಿ ಅನೇಕ ಲೇಖಕ-ಲೇಖಕಿಕರ ಕಾದಂಬರಿಗಳು "ಸುಧಾ," "ಪ್ರಜಾಮತ," "ಕರ್ಮವೀರ" ಮೊದಲಾದ ಪತ್ರಿಕೆಗಳಲ್ಲಿ ಧಾರಾವಾಹಿ ರೂಪದಲ್ಲಿ ಅಚ್ಚಾದವು. ಉದಾಹರಣೆಗೆ ವಾಣಿ, ಅನುಪಮಾ ನಿರಂಜನ, ಟಿ.ಕೆ. ರಾಮರಾವ್, ಭಾರತೀಸುತ ಮೊದಲಾದ ಕನ್ನಡ ಲೇಖಕ-ಲೇಖಕಿಯರ ಕಾದಂಬರಿಗಳನ್ನು ಓದುಗರು ಧಾರಾವಾಹಿ ರೂಪದಲ್ಲಿ ಓದಿ ಆನಂತರ ಅಚ್ಚಾದ ಪುಸ್ತಕದ ರೂಪದಲ್ಲಿ ಓದಿದರು. ಧಾರಾವಾಹಿಗಳ ಜನಪ್ರಿಯತೆಯಿಂದ ಅವುಗಳನ್ನು ಸಿನಿಮಾ ರೂಪದಲ್ಲಿ ತರಲು ಕೆಲವು ನಿರ್ಮಾಪಕರು ಸಾಹಸ ಮಾಡಿದ್ದಾರೆ - ಉದಾ. "ಅಂತ" ಎಂಬ ಕಾದಂಬರಿ "ಸುಧಾ" ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಜನಪ್ರಿಯವಾಗಿ ಆನಂತರ ಪ್ರಸಿದ್ಧ ಸಿನಿಮಾ ಕೂಡಾ ಆಯಿತು.

ದೂರದರ್ಶನ ಮತ್ತು ರೇಡಿಯೋದಲ್ಲಿ, ಧಾರಾವಾಹಿಗಳು ಅನುಕ್ರಮಿತ ಶೈಲಿಯಲ್ಲಿ ಒಂದು ಸಂಚಿಕೆಯ ನಂತರ ಮತ್ತೊಂದು ಸಂಚಿಕೆಯಂತೆ ಪ್ರಕಟವಾಗುವ, ಮುಂದುವರಿಯುವ ಕಥಾವಸ್ತುವಿನ ಮೇಲೆ ಅವಲಂಬಿಸಿರುವ ಸರಣಿಗಳು. ಧಾರಾವಾಹಿಗಳು ವಿಶಿಷ್ಟವಾಗಿ ಸಂಪೂರ್ಣ ಪ್ರದರ್ಶನದ ಕಾಲಕ್ಕೆ ಅಥವಾ ಸರಣಿಯ ಸಂಪೂರ್ಣ ಅವಧಿಗೆ ವಿಸ್ತರಿಸುವ ಮುಖ್ಯ ಕಥಾ ವಿಪಥಗಳನ್ನು (ಸ್ಟೋರಿ ಆರ್ಕ್) ಅನುಸರಿಸುತ್ತವೆ, ಮತ್ತು ಹಾಗಾಗಿ ಅವು ಒಂಟಿ ಸಂಚಿಕೆಗಳ ಮೇಲೆ ಅವಲಂಬಿಸುವ ಸಾಂಪ್ರದಾಯಿಕ ಸಂಚಿಕೆಯುಳ್ಳ ದೂರದರ್ಶನಕ್ಕಿಂತ ಬೇರೆಯಾಗಿವೆ. ವಿಶ್ವಾದ್ಯಂತ, ಸಾಮಾಜಿಕ ಧಾರಾವಾಹಿಯು ಧಾರಾವಾಹಿಯ ಒಂದು ಗಮನಾರ್ಹ ನಿಷ್ಪನ್ನವಾಗಿದೆ.