ವಿಷಯಕ್ಕೆ ಹೋಗು

ಅವಸ್ಥೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅವಸ್ಥೆ (ಚಲನಚಿತ್ರ)
ಅವಸ್ಥೆ
ನಿರ್ದೇಶನಕೃಷ್ಣ ಮಸಡಿ
ನಿರ್ಮಾಪಕಮಹಿಮಾ ಪಟೇಲ್
ಕಥೆಯು.ಆರ್.ಅನಂತಮೂರ್ತಿ
ಪಾತ್ರವರ್ಗಅನಂತನಾಗ್ ಅರ್ಚನ ವಿಶ್ವನಾಥ್, ಎಂ.ಭಕ್ತವತ್ಸಲ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಎಸ್.ರಾಮಚಂದ್ರ
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆಚಿಗುರು ಮೂವೀಸ್
ಇತರೆ ಮಾಹಿತಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ಅವರ ಅವಸ್ಥೆ ಕಾದಂಬರಿ ಆಧಾರಿತ ಚಿತ್ರ

ಅವಸ್ಥೆ - ೧೯೮೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ರಾಜಕೀಯ ನಾಟಕ ಚಿತ್ರವಾಗಿದೆ. ನಿರ್ದೇಶನ ಮತ್ತು ಸಹ ನಿರ್ಮಾಣ ಕೃಷ್ಣ ಮಸಡಿಯವರು ಮಾಡಿದ್ದಾರೆ. ಈ ಚಿತ್ರವು ಪ್ರಸಿದ್ಧ ಲೇಖಕರಾದ ಯು ಆರ್ ಅನಂತಮೂರ್ತಿ ಬರೆದ ಕಾದಂಬರಿ ಆಧಾರಿತವಾಗಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಅನಂತ್ ನಾಗ್ ನಟಿಸಿದ್ದಾರೆ, ಅವರೊಂದಿಗೆ ನೈಜ ರೀತಿಯ ರಾಜಕಾರಣಿಗಳಾದ ಜೆ.ಎಚ್.ಪಟೇಲ್, ಡಿ.ಬಿ.ಚಂದ್ರೆ ಗೌಡ, ಎಂ.ಪಿ.ಪ್ರಕಾಶ್ ಮತ್ತು ಬಿ.ಕೆ.ಚಂದ್ರಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತರ ನಿರ್ಣಾಯಕ ಪಾತ್ರಗಳನ್ನು ಬಿ.ವಿ.ಕಾರಂತ್, ಎಂ.ಭಕ್ತವತ್ಸಲಂ, ಅರ್ಚನಾ ಮತ್ತು ಭಾರ್ಗವಿ ನಾರಾಯಣ್ ನಿರ್ವಹಿಸಿದ್ದಾರೆ.

ಪಾತ್ರ

[ಬದಲಾಯಿಸಿ]
  • ಅನಂತ್ ನಾಗ್
  • ಎಂ.ಪಿ.ಪ್ರಕಾಶ್
  • ಜೆ.ಎಚ್.ಪಟೇಲ್
  • ಎಂ.ಭಕ್ತವತ್ಸಲಂ
  • ಬಿ.ವಿ.ಕಾರಂತ್
  • ಡಿ.ಬಿ.ಚಂದ್ರೆ ಗೌಡ
  • ಅರ್ಚನಾ
  • ಭಾರ್ಗವಿ ನಾರಾಯಣ್
  • ಲಕ್ಷ್ಮಿ ಚಂದ್ರಶೇಖರ್
  • ಬಿ.ಕೆ.ಚಂದ್ರಶೇಖರ್'
  • ಅಬ್ದುಲ್ ನಜಿರ್ ಸಾಬ್