ವಿಷಯಕ್ಕೆ ಹೋಗು

ರಮ್ಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಮ್ಯಾ
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ದಿವ್ಯ ಸ್ಪಂದನ
ನವೆಂಬರ್ ೨೯, ೧೯೮೨
ಬೆಂಗಳೂರು, ಕರ್ನಾಟಕ, ಭಾರತ
ವೃತ್ತಿ ನಟಿ, ರಾಜಕಾರಣಿ
ವರ್ಷಗಳು ಸಕ್ರಿಯ ೨೦೦೩—ಪ್ರಸಕ್ತ

ರಮ್ಯಾ ಕನ್ನಡ ಮತ್ತು ತಮಿಳು ಚಿತ್ರರಂಗಗಳಲ್ಲಿ ಕೆಲಸ ಮಾಡಿರುವ ಒಬ್ಬ ನಟಿ. [] (ನವೆಂಬರ್ ೨೯, ೧೯೮೨ ರಂದು ಸದಾಶಿವನಗರದ ಐಡಿಯಲ್ ನರ್ಸಿಂಗ್ ಹೋಮ್ ನಲ್ಲಿ ಜನನ) ಹುಟ್ಟು ಹೆಸರು ದಿವ್ಯ ಸ್ಪಂದನ. ರಮ್ಯಾರವರು 'ಅಭಿ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಇವರು 'ತನನಂ ತನನಂ' ಮತ್ತು 'ಸಂಜು ವೆಡ್ಸ್ ಗೀತಾ' ಚಿತ್ರಗಳಿಗೆ ಎರಡು ಬಾರಿ ಬೆಸ್ಟ್ ಫಿಲಂಫೇರ್ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆರಂಭಿಕ ಜೀವನ

[ಬದಲಾಯಿಸಿ]

ದಿವ್ಯ ಸ್ಪಂದನ (ರಮ್ಯಾ) ಅವರು ೧೯೮೨ರ ನವೆಂಬರ್ ೨೯ರಂದು ಬೆಂಗಳೂರಿನ ಸದಾಶಿವನಗರದಲ್ಲಿನ ಐಡಿಯಲ್ ನರ್ಸಿಂಗ್ ಹೋಮ್‌ನಲ್ಲಿ ಜನಿಸಿದರು. ಅವರ ತಂದೆ ಆರ್. ಟಿ. ನಾರಾಯಣ್ ರಾಜಕೀಯ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ತಾಯಿ ರಂಜಿತಾ ಅವರು ಕೊಡಗು ಮೂಲದವರಾಗಿದ್ದಾರೆ. ರಮ್ಯಾ ಅವರು ತಮ್ಮ ಬಾಲ್ಯವನ್ನು ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ಕಳೆದಿದ್ದು, ಬಾಲವಿಹಾರ್ ಮತ್ತು ಸೇಂಟ್ ಹಿಲ್ಡಾ’ಸ್ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಸೇಂಟ್ ಜೋಸೆಫ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಪದವಿಪೂರ್ವ ಶಿಕ್ಷಣವನ್ನು ವಿಜಯ ಕಾಲೇಜಿನಲ್ಲಿ ಮುಗಿಸಿದ ಬಳಿಕ, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಪದವಿ ಪಡೆದರು.

ರಾಜಕೀಯ ಪ್ರವೇಶ

[ಬದಲಾಯಿಸಿ]

ರಮ್ಯಾ ಅವರು ಕರ್ನಾಟಕ ರಾಜ್ಯದ ಪ್ರದೇಶ ಕಾಂಗ್ರೆಸ್‌ನ ಸಕ್ರಿಯ ಸದಸ್ಯರಾಗಿದ್ದು[] ಮಂಡ್ಯ ಕ್ಷೇತ್ರದಿಂದ ಲೋಕಸಭೆ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ೨೩ ಆಗಸ್ಟ್ ೨೦೧೩ ರಂದು ನಡೆದ ಲೋಕಸಭಾ ಉಪ-ಚುನಾವಣೆಯಲ್ಲಿ ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಜಾತ್ಯಾತೀತ ಜನತಾದಳ ಪಕ್ಷದ ಪುಟ್ಟರಾಜು ಅವರನ್ನು ೬೭,೬೧೧ ಮತಗಳ ಅಂತರದಿಂದ ಸೋಲಿಸಿ ಪ್ರಥಮ ಪ್ರಯತ್ನದಲ್ಲೇ ಲೋಕಸಭೆಗೆ ಪ್ರವೇಶ ಮಾಡಿದ್ದರು. ರಾಜ್ಯದಿಂದ ಕನ್ನಡ ನಟಿಯೊಬ್ಬರು ಲೋಕಸಭೆಗೆ ಪ್ರವೇಶ ಮಾಡಿರುವುದರಲ್ಲಿ ರಮ್ಯಾ ಮೊದಲಿಗರು.

೨೦೧೪ರ ಚುನಾವಣೆ

[ಬದಲಾಯಿಸಿ]

ಲೋಕಸಭೆಗೆ ಏಪ್ರಿಲ್ ೧೭, ೨೦೧೪ರಲ್ಲಿ ಜರುಗಿದ ಚುನಾವಣೆಯಲ್ಲಿ ರಮ್ಯಾ ಅವರು ಸೋಲನ್ನನುಭವಿಸಿದರು. ಅವರನ್ನು ಜಾತ್ಯಾತೀತ ಜನತಾದಳ ಪಕ್ಷದ ಪುಟ್ಟರಾಜು ಅವರು ಸೋಲಿಸಿದರು.[]

ಚಿತ್ರಗಳು

[ಬದಲಾಯಿಸಿ]

ಕನ್ನಡ

[ಬದಲಾಯಿಸಿ]
#ವರ್ಷಚಿತ್ರಪಾತ್ರಸಹ-ನಟನಿರ್ದೇಶಕ
೨೦೦೩ಅಭಿಅಶ್ವಿನಿಪುನೀತ್ ರಾಜ್‌ಕುಮಾರ್ದಿನೇಶ್ ಬಾಬು
೨೦೦೩ಎಕ್ಸ್ ಕ್ಯೂಸ್ ಮಿಮಧುಮಿತಸುನೀಲ್ ರಾವ್ಪ್ರೇಮ್
೨೦೦೪ರಂಗ ಎಸ್.ಎಸ್.ಎಲ್.ಸಿಪದ್ಮಸುದೀಪ್ಯೋಗರಾಜ್ ಭಟ್
೨೦೦೪ಕಂಠಿರೀಮಾಮುರಳಿಭರತ್
೨೦೦೫ಆದಿಐಶ್ವರ್ಯಆದಿತ್ಯಎಮ್.ಎಸ್. ರಮೇಶ್
೨೦೦೫ಆಕಾಶ್ನಂದಿನಿಪುನೀತ್ ರಾಜ್‌ಕುಮಾರ್ಮಹೇಶ್ ಬಾಬು
೨೦೦೫ಗೌರಮ್ಮಗೌರಿಉಪೇಂದ್ರನಾಗಣ್ಣ
೨೦೦೫ಅಮೃತಧಾರೆಅಮೃತಧ್ಯಾನ್ನಾಗತಿಹಳ್ಳಿ ಚಂದ್ರಶೇಖರ್
೨೦೦೬ಸೇವಂತಿ ಸೇವಂತಿಸೇವಂತಿವಿಜಯ ರಾಘವೇಂದ್ರಎಸ್ ನಾರಾಯಣ್
೧೦೨೦೦೬ಜೂಲಿಜೂಲಿಕ್ರೀಸ್ಶ್ಪೂರ್ಣಿಮ ಮೋಹನ್
೧೧೨೦೦೬ದತ್ತದಿವ್ಯದರ್ಶನ್ ತೂಗುದೀಪ್ಚಿ ಗುರುದತ್ತ್
೧೨೨೦೦೬ಜೊತೆ ಜೊತೆಯಲಿದಿವ್ಯಪ್ರೇಮ್ದಿನಕರ್ ತೂಗುದೀಪ್
೧೩೨೦೦೬ತನನಂ ತನನಂವನಜಶ್ಯಾಮ್,ರಕ್ಷಿತಕವಿತ ಲಂಕೇಶ್
೧೪೨೦೦೭ಅರಸುಶೃತಿಪುನೀತ್ ರಾಜ್‌ಕುಮಾರ್ಮಹೇಶ್ ಬಾಬು
೧೫೨೦೦೭ಪ್ರಾರಂಭಕಿರುಚಿತ್ರ
೧೬೨೦೦೭ಮೀರಾ ಮಾಧವ ರಾಘವಮೀರಾದಿಗಂತ್ಟಿ.ಎನ್.ಸೀತಾರಾಂ
೧೭೨೦೦೮ಮುಸ್ಸಂಜೆ ಮಾತುತನುಸುದೀಪ್ಮಹೇಶ್
೧೮೨೦೦೮ಮೆರವಣಿಗೆಸ್ಪಂದನ (Guest appearance)ಪ್ರಜ್ವಲ್ಮಹೇಶ್ ಬಾಬು
೧೯೨೦೦೮ಬೊಂಬಾಟ್ಶಾಲಿನಿಗಣೇಶ್ಡಿ. ರಾಜೇಂದ್ರ ಬಾಬು
೨೦೨೦೦೮ಅಂತು ಇಂತು ಪ್ರೀತಿ ಬಂತುಪ್ರೀತಿಆದಿತ್ಯ ಬಾಬುವೀರ ಶಂಕರ್
೨೧೨೦೧೦ಜಸ್ಟ್ ಮಾತ್ ಮಾತಲ್ಲಿಸುದೀಪ್ಸುದೀಪ್
೨೨೨೦೧೦ಜೊತೆಗಾರಪ್ರೇಮ್ಸಿಂಗಮಣಿ
೨೩೨೦೧೦ಕಿಚ್ಚ ಹುಚ್ಚಸುದೀಪ್ಚಿ ಗುರುದತ್
೨೪೨೦೧೧ದಂಡಂ ದಶಗುಣಂಚಿರಂಜೀವಿ ಸರ್ಜಾ ಕೆ.ಮಾದೇಶ್
೨೫೨೦೧೧ಸಂಜು ವೆಡ್ಸ್ ಗೀತಾಗೀತಾಶ್ರೀನಗರ ಕಿಟ್ಟಿನಾಗಶೇಖರ್
೨೬೨೦೧೧ಜಾನಿ ಮೇರ ನಾಮ್ ಪ್ರೀತಿ ಮೇರ ಕಾಮ್ಪ್ರಿಯಾದುನಿಯಾ ವಿಜಯ್ ಪ್ರೀತಮ್ ಗುಬ್ಬಿ
೨೭೨೦೧೨ಸಿದ್ದಲಿಂಗುಮಂಗಳಾಯೋಗೀಶ್ ವಿಜಯ್ ಪ್ರಸಾದ್
೨೮೨೦೧೨ ಲಕ್ಕಿ ಗೌರಿಯಶ್ಡಾ.ಸೂರಿ
೨೯೨೦೧೨‍‍‍‌‌ಕಠಾರೀವೀರ ಸುರಸುಂದರಾಂಗಿಇಂದ್ರಜಉಪೇಂದ್ರ ಸುರೇಶ್ ಕೃಷ್ಣ
೩೦೨೦೧೩ದಿಲ್ ಕ ರಾಜಪ್ರಜ್ವಲ್ ದೇವರಾಜ್ಸೋಮನಾಥ್ ಪಾಟೀಲ್
೩೧೨೦೧೪ ಜಾನಿ ೨ದುನಿಯಾ ವಿಜಯ್ ಪ್ರೀತಮ್ ಗುಬ್ಬಿ
೩೨೨೦೧೪ ಆರ್ಯನ್ಶಿವರಾಜ್ ಕುಮಾರ್ ಡಿ. ರಾಜೇಂದ್ರ ಬಾಬು

ಹೊರಕೊಂಡಿಗಳು

[ಬದಲಾಯಿಸಿ]
  1. ಐಎಂಡಿಬಿಯಲ್ಲಿ ದಿವ್ಯ ಸ್ಪಂದನ
  2. ಕಾಂಗ್ರೆಸ್ಸಿನ 'ಸೋಷಿಯಲ್ ಪವರ್' ರಮ್ಯಾ

ಉಲ್ಲೇಖಗಳು

[ಬದಲಾಯಿಸಿ]
  1. "ನಟಿ ರಮ್ಯಾ ಹೊಸ ಸಿನಿಮಾಕ್ಕೆ ಯೋಗರಾಜ್ ಭಟ್ ಡೈರೆಕ್ಷನ್; 'ಸ್ಯಾಂಡಲ್‌ವುಡ್‌ ಕ್ವೀನ್' ಫ್ಯಾನ್ಸ್‌ಗೆ ಸಿಹಿ ಸುದ್ದಿ". ವಿಜಯ ಕರ್ನಾಟಕ. 2025-03-06. Retrieved 2025-05-28.
  2. Ramya joins Youth Congress Archived 2013-12-02 ವೇಬ್ಯಾಕ್ ಮೆಷಿನ್ ನಲ್ಲಿ., The New Indian Express, 19th April 2011
  3. "ಆರ್ಕೈವ್ ನಕಲು". Archived from the original on 2014-05-19. Retrieved 2014-05-17.



"https://kn.wikipedia.org/w/index.php?title=ರಮ್ಯಾ&oldid=1361140" ಇಂದ ಪಡೆಯಲ್ಪಟ್ಟಿದೆ