ಚಿರಂಜೀವಿ ಸರ್ಜಾ

ವಿಕಿಪೀಡಿಯ ಇಂದ
Jump to navigation Jump to search

ಚಿರಂಜೀವಿ ಸರ್ಜಾ ರವರು ೧೭ ಅಕ್ಟೋಬರ್ ೧೯೮೪ ರಲ್ಲಿ ಜನಿಸಿದರು. ಇವರನ್ನು ಜನ 'ಚಿರು' ಎಂದು ಕರೆಯುತ್ತಾರೆ. ಕನ್ನಡ ಚಲನಚಿತ್ರರಂಗದಲ್ಲಿ ನಟನಾಗಿ ಕಾಣಿಸಿಕೊಂಡಿದ್ದಾರೆ. ಇವರು ನಟ ದ್ರುವಸರ್ಜಾನ ಅಣ್ಣ ಮತ್ತು ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಸೋದರಳಿಯ ಅಷ್ಟಲ್ಲದೇ ಕನ್ನಡದ ಅನುಭವ ನಟ, ಶಕ್ತಿ ಪ್ರಸಾದ್ ರವರ ಮೊಮ್ಮಗ.

ಜೀವನ[ಬದಲಾಯಿಸಿ]

ಇವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಮ್ಮ ಬಾಲ್ಯ ಶಿಕ್ಷಣವನ್ನು ಬಾಲ್ಡ್ವಿನ್ ಬಾಲಕರ ಫ್ರೌಡ ಶಾಲೆಯಲ್ಲಿ ಪೂರ್ಣಗೊಳಿಸಿದರು. ಇವರು ಸುಮಾರು ೪ ವರ್ಷಗಳಿಂದ ಅವರ ಚಿಕ್ಕಪ್ಪರಾದ ಅರ್ಜುನ್ ಸರ್ಜಾ ರವರ ಸಹಾಯಕ ನಿರ್ದೇಶಕರಾಗಿ ಕೆಲಸವನ್ನು ಮಾಡಿದರು. ಇವರು ೨೦೦೯ ರಲ್ಲಿ ತೆರೆಗೆ ಬಂದ "ವಾಯುಪುತ್ರ" ಎಂಬ ಕನ್ನಡ ಚಲನಚಿತ್ರದಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಇವರು ಅಕ್ಟೋಬರ್ ೨೦೧೭ ರಲ್ಲಿ ನಟಿ ಮೇಘನಾ ರಾಜ್‌ ಜೊತೆ ನಿಶ್ಚಿತಾರ್ಥ ವನ್ನು ಮಾಡಿಕೊಂಡರು. ಇದಾದ ನಂತರ ಇವರು ೨ ಮೇ ೨೦೧೮ ರಲ್ಲಿ ಮದುವೆ ಮಾಡಿಕೊಂಡರು.[೧]

ಚಲನಚಿತ್ರಗಳು[ಬದಲಾಯಿಸಿ]

ವರ್ಷಗಳು ಚಿತ್ರಗಳು ಪಾತ್ರಗಳು ಟಿಪ್ಪಣಿಗಳು
೨೦೦೯ ವಾಯುಪುತ್ರ[೨] ಬಾಲು ಅತ್ಯುತ್ತಮ ನಟನಾಗಿ ಚಲನಚಿತ್ರ ಪ್ರಶಸ್ತಿ

(ಪುರುಷ)

೨೦೧೦ ಗಂಡೆದೆ ಕೃಷ್ಣ
೨೦೧೦ ಚಿರು ಚಿರು
೨೦೧೧ ದಂಡಂ ದಶಗುಣಂ ಸೂರ್ಯ ಐಪಿಎಸ್
೨೦೧೧ ಕೆಂಪೇಗೌಡ ರಾಮ್ ಕ್ಯಾಮಿಯೋ ನೋಟ
೨೦೧೩ ವರದನಾಯಕ ಹರಿ
೨೦೧೩ ವಿಜ಼ಲ್ ರಾಮ್
೨೦೧೪ ಚಂದ್ರಲೇಖ ಚಂದು
೨೦೧೪ ಅಜಿತ್ ಅಜಿತ್
೨೦೧೫ ರುದ್ರತಾಂಡವ[೩] ಶಿವರಾಜ್
೨೦೧೫ ಆಟಗಾರ ಮೃತ್ಯುಂಜಯ
೨೦೧೫ ರಾಮಲೀಲಾ ರಾಮ್
೨೦೧೭ ಆಕೆ ಅರ್ಜುನ್/ಶಿವ
೨೦೧೭ ಭರ್ಜರಿ ಸೈನಿಕ ಕ್ಯಾಮಿಯೋ ನೋಟ
೨೦೧೮ ಸಂಹಾರ ಶ್ರೀ ಶೈಲ
೨೦೧೮ ಸಿಜ಼ರ್ ಸಿಜ಼ರ್
೨೦೧೮ ಅಮ್ಮ ಐ ಲವ್ ಯು[೪] ಸಿದ್ದಾರ್ಥ

ಉಲ್ಲೇಖ[ಬದಲಾಯಿಸಿ]

  1. https://indianexpress.com/article/entertainment/regional/meghana-raj-chiranjeevi-sarja-church-wedding-5157039/
  2. https://www.thehindu.com/todays-paper/tp-features/tp-metroplus/the-bona-fide-actor/article22460333.ece
  3. https://www.imdb.com/name/nm5699216/bio?ref_=nm_ov_bio_sm
  4. https://www.filmibeat.com/kannada/reviews/2018/amma-i-love-you-review-this-chiranjeevi-sarja-movie-is-decent-watch-274483.html