ಸಿಂಗ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಂಗ
ಚಿತ್ರದ ಭಿತ್ತಿಪತ್ರ
ನಿರ್ದೇಶನವಿಜಯ್ ಕಿರಣ್
ನಿರ್ಮಾಪಕಉದಯ್ ಕೆ ಮೆಹ್ತಾ
ಕಥೆಎಂ ಮುತ್ತಯ್ಯ
ಪಾತ್ರವರ್ಗ
ಸಂಗೀತಧರ್ಮ ವಿಶ್
ಛಾಯಾಗ್ರಹಣಕಿರಣ್ ಹಂಪಾಪುರ
ಸಂಕಲನಗಣೇದ್ ಮಲ್ಲಯ್ಯ
ಸ್ಟುಡಿಯೋಯು ಕೆ ಎಂ ಸ್ಟುಡಿಯೋಸ್
ಉದಯ್ ಕೆ ಮೆಹ್ತಾ ಪ್ರೊಡಕ್ಷನ್ಸ್
ಬಿಡುಗಡೆಯಾಗಿದ್ದು
  • 19 ಜುಲೈ 2019 (2019-07-19)
ದೇಶಭಾರತ
ಭಾಷೆಕನ್ನಡ

ಸಿಂಗ 2019ರ ಕನ್ನಡ ಭಾಷೆಯ ಚಲನಚಿತ್ರ, ವಿಜಯ್ ಕಿರಣ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿರಂಜೀವಿ ಸರ್ಜಾ,ಅಧಿತಿ ಪ್ರಭುದೇವ, ತಾರಾ ಮತ್ತು ಅರುಣಾ ಬಾಲರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ [೧] . ಈ ಚಿತ್ರವು ಸಿಂಗ (ಚಿರಂಜೀವಿ ಸರ್ಜಾ), ಅವರ ತಾಯಿ ಜಾನಕಮ್ಮ (ತಾರಾ), ಅವರ ಪ್ರೇಯಸಿ ಗೀತಾ (ಅದಿತಿ ಪ್ರಭುದೇವ) ಮತ್ತು ಖಳನಾಯಕ ರುದ್ರಸ್ವಾಮಿ (ರವಿಶಂಕರ್) ಅವರ ಜೀವನವನ್ನು ಆಧರಿಸಿದೆ..ಈ ಚಿತ್ರವು 2013 ರ ತಮಿಳು ಚಿತ್ರ ಕುಟ್ಟಿ ಪುಲಿಯ ರಿಮೇಕ್ ಆಗಿದೆ. [೨]

ಪಾತ್ರವರ್ಗ[ಬದಲಾಯಿಸಿ]

ಧ್ವನಿಪಥ[ಬದಲಾಯಿಸಿ]

ಚೇತನ್ ಕುಮಾರ್, ಕವಿರಾಜ್ ಮತ್ತು ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯಕ್ಕೆ ಧರ್ಮ ವಿಶ್ ಧ್ವನಿಪಥವನ್ನು ಸಂಯೋಜಿಸಿದ್ದಾರೆ.

ಹಾಡುಗಳು
ಸಂ.ಹಾಡುಸಾಹಿತ್ಯಹಾಡುಗಾರ(ರು)ಸಮಯ
1."ಶಾನೆ ಟಾಪ್ ಆಗವ್ಳೆ"ಚೇತನ್ ಕುಮಾರ್ವಿಜಯ್ ಪ್ರಕಾಶ್3:48
2."ವಾಟ್ ಎ ಬ್ಯೂಟಿಫುಲ್ಲು"ಕವಿರಾಜ್ನವೀನ್ ಸಜ್ಜು, ಮೇಘನಾ ರಾಜ್4:15
3."ಪುಟ್ಟ ಪುಟ್ಟ ಆಸೆ"ಕವಿರಾಜ್ಅನುರಾಧ ಭಟ್3:55
4."ಅಮ್ಮ ಅಮ್ಮ ಅಮ್ಮ"ವಿ ನಾಗೇಂದ್ರ ಪ್ರಸಾದ್ಪ್ರೇಮ್4:03
5."ಆಟ ಹಾಕು"ಚೇತನ್ ಕುಮಾರ್ಶಶಾಂಕ್ ಶೇಷಗಿರಿ3:51
6."ಶಾನೆ ಟಾಪ್ ಆಗವ್ಳೆ"ಚೇತನ್ ಕುಮಾರ್ಸಂಗೀತ ರಾಜೀವ3:24
ಒಟ್ಟು ಸಮಯ:23:16

ಬಿಡುಗಡೆ[ಬದಲಾಯಿಸಿ]

ಚಿತ್ರದ ಅಧಿಕೃತ ಟ್ರೈಲರ್ ಅನ್ನು ಆನಂದ್ ಆಡಿಯೋ 14 ಜೂನ್ 2019 ರಂದು ಬಿಡುಗಡೆ ಮಾಡಿತು. [೩]

ಈ ಚಿತ್ರವು 19 ಜುಲೈ 2019 ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು. [೪]

ಪ್ರತಿಕ್ರಿಯೆ[ಬದಲಾಯಿಸಿ]

ವಿಮರ್ಶಾತ್ಮಕ ಪ್ರತಿಕ್ರಿಯೆ[ಬದಲಾಯಿಸಿ]

ತಾರಾ ಅವರ ಅಭಿನಯವನ್ನು ಶ್ಲಾಘಿಸಿದ ಟೈಮ್ಸ್ ಆಫ್ ಇಂಡಿಯಾದ ವಿನಯ್ ಲೋಕೇಶ್ ಈ ಚಿತ್ರಕ್ಕೆ ಐದರಲ್ಲಿ ಎರಡೂವರೆ ಸ್ಟಾರ್ ಗಳನ್ನು ನೀಡಿದರು, "ಮಾಸ್ ಚಲನಚಿತ್ರಗಳನ್ನು ಇಷ್ಟಪಡುವವರಿಗೆ ಸಿಂಗ ಒಂದು ಬಾರಿ ವೀಕ್ಷಿಸಬಹುದಾದ ಚಿತ್ರ" ಎಂದು ಬರೆದಿದ್ದಾರೆ. [೫]

ಉಲ್ಲೇಖಗಳು[ಬದಲಾಯಿಸಿ]

  1. "Sinnga: Director Vijay Kiran is glad to have Chiranjeevi Sarja on board as the lead". Pinkvilla. 18 July 2019. Archived from the original on 6 ಆಗಸ್ಟ್ 2019. Retrieved 26 ಅಕ್ಟೋಬರ್ 2019.
  2. "Sinnga movie review: Prem's would be proud of this Kutty". Bangalore Mirror. 19 July 2019. Retrieved 6 August 2019.
  3. "Sinnga – Kannada 2K Trailer – Chirranjeevi Sarja – Aditi – Dharma Vish – Vijay Kiran – Uday K Mehta". YouTube. Anand Audio. 14 June 2019.
  4. "SINNGA MOVIE REVIEW". Times of India. 19 July 2019. Retrieved 6 August 2019.
  5. Lokesh, Vinay (19 July 2019). "Sinnga Movie Review". The Times of India. Retrieved 22 August 2019.

ಬಾಹ್ಯ ಕೊಂಡಿಗಳು[ಬದಲಾಯಿಸಿ]