ವಿಷಯಕ್ಕೆ ಹೋಗು

ಪಿ.ರವಿ ಶಂಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿ.ರವಿ ಶಂಕರ್
ಜನನ
ಪುಡಿಪೆಡ್ಡಿ ರವಿ ಶಂಕರ್

೨೮ ನವೆಂಬರ್ ೧೯೬೬
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಆರುಮುಗ ರವಿ ಶಂಕರ್,ಕೆಂಪೇಗೌಡ ರವಿ
ವೃತ್ತಿ(ಗಳು)ನಟ, ನಿರ್ದೇಶಕ
ಸಂಗಾತಿಸುಚಿಲ್
ಮಕ್ಕಳುಅಧ್ವೆ
ಪೋಷಕ(ರು)ಪಿ.ಜೆ.ಸರ್ಮ (ತಂದೆ),ಕೃಷ್ಣ ಜ್ಯೋತಿ(ತಾಯಿ)
ಸಂಬಂಧಿಕರುಸಾಯಿ ಕುಮಾರ್(ಅಣ್ಣ)

ಪುಡಿಪೆಡ್ಡಿ ರವಿ ಶಂಕರ್ ಅವರು ಒಬ್ಬ ನಟ, ಡಬ್ಬಿಂಗ್ ಆರ್ಟಿಸ್ಟ್, ನಿರ್ದೇಶಕ ಹಾಗೂ ಬರಹಗಾರ. ಇವರನ್ನು ಕೆಂಪೇಗೌಡ ರವಿ ಅಥವ ಆರುಮುಗ ರವಿ ಶಂಕರ್ ಎಂದು ಕರೆಯುತ್ತಾರೆ. ಇವರು ೩೦೦೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಇವರಿಗೆ ಕೆಂಪೇಗೌಡ ಚಿತ್ರವು ಬೇಕಾದ ಯಶಸ್ಸನ್ನು ನೀಡಿತು. ಈಗ ರವಿಯವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಪ್ರಭಾವಿತ ನಟರಾಗಿದ್ದಾರೆ. ಇವರು ನಟನೆ ಹಾಗೂ ಡಬ್ಬಿಂಗ್ ಮಾಡುತ್ತಾ ಬಹಳ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ವಯಕ್ತಿಕ ಜೀವನ ಹಾಗೂ ಬಾಲ್ಯ[ಬದಲಾಯಿಸಿ]

ಇವರು ಹುಟ್ಟಿದ್ದು ಆಂಧ್ರದಲ್ಲಿ ಆದರೆ ತಮ್ಮ ಯೌವನವನ್ನು ತಮಿಳು ನಾಡಿನ ಚೆನ್ನೈಯಲ್ಲಿ ಕಳೆದರು.ಇವರ ತಂದೆಯ ಹೆಸರು ಪಿ.ಜೆ.ಸರ್ಮ ಹಾಗೂ ತಾಯಿಯ ಹೆಸರು ಕೃಷ್ಣ ಜ್ಯೋತಿ. ಇವರ ತಂದೆ ಒಬ್ಬ ನಟ ಹಾಗೂ ಡಬ್ಬಿಂಗ್ ಆರ್ಟಿಸ್ಟ್. ಇವರು ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ತಾಯಿ ಯು ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ರವಿಯವರು ಸುಚಿಲ್ ಎಂಬ ಪಂಜಾಬಿ ಮಹಿಳೆಯೊಡನೆ ಮುದುವೆ ಮಾಡಿಕೊಂಡಿದ್ದಾರೆ ಹಾಗೂ ಇವರಿಗೆ ಅಧ್ವೆ ಎಂಬ ಮಗ ಕೂಡ ಇದ್ದಾರೆ. ಇವರ ಅಣ್ಣನಾದ ಸಾಯಿ ಕುಮಾರ್ ಅವರು ರವಿಗಿಂತ ಮುಂಚೆನೆ ಸಿನೇಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಕೂಡ ತಮ್ಮ ತಂದೆಯಂತೆ ಡಬ್ಬಿಂಗ್ ಹಾಗೂ ನಟನೆಯನ್ನು ಮಾಡಿದ್ದಾರೆ. ರವಿಯವರು ತೆಲುಗು ಕುಟುಂಬದವರಾದರೂ, ಇವರ ತಾಯಿಯ ಮೂಲಕ ಕನ್ನಡವನ್ನು ಕಲಿತರು. ೧೯೭೫ರಲ್ಲಿ ಬಾಲ ನಟನಾಗಿ ಚಿತ್ರಗಳಲ್ಲಿ ನಟಿಸಿದ್ದಾರೆ.

ನಟನೆಯ ಜೀವನ[ಬದಲಾಯಿಸಿ]

ರವಿಯವರು ೧೯೮೬ರಲ್ಲಿ ಮುಖ್ಯ ನಟನಾಗಿ ಆರ್ ನಾರಾಯಣ ಮೂರ್ತಿಯವರ ಆಲೋಚಿಂಚಂದಿ [೧]ಎಂಬ ಚಿತ್ರದಲ್ಲಿ ನಟನೆ ಮಾಡಿದರು. ಅದು ಅವರ ಮೊದಲನೆಯ ಚಿತ್ರವಾಗಿತ್ತು. ೧೯೯೧ರಲ್ಲಿ ಹಳ್ಳಿ ಕೃಷ್ಣ ಡೆಲ್ಲಿ ರಾಧ[೨] ಎಂಬ ಚಿತ್ರವು ಇವರ ಮೊದಲನೆಯ ಕನ್ನಡ ಚಿತ್ರವಾಗಿತ್ತು. ಅದಾದನಂತರ ಮಧುರ ನಾಗರಿಲು ಮತ್ತು ಕೀಚರಿಲು ಎಂಬ ಚಿತ್ರಗಳಲ್ಲಿ ಪ್ರಮುಖ ಪಾತ್ರವನ್ನು ಮಾಡಿದರು. ೨೦೦೧ರಲ್ಲಿ ಮತ್ತೆ ಎಂಟ್ರಿ ಕೊಟ್ಟ ರವಿ, ವಿಲ್ಲನ್ ಆಗಿ ಗೋಪಿ ಚಂದ್ ಆವರ ಮೊದಲನೆಯ ಚಿತ್ರ ಥೊಲಿ ವಲಪುನಲ್ಲಿ ನಟನೆ ಮಾಡಿದ್ದರು. ಇವರ ಡಬ್ಬಿಂಗ್ ಹಾಗೂ ನಟನೆಗೂ ತುಂಬಾ ಮೆಚ್ಚುಗೆ ಬಂದಿತ್ತು. ಆದರೆ ಆ ಚಿತ್ರ ಫ್ಲಾಪ್ ಆದ ಕಾರಣ ರವಿಯವರು ಡಬ್ಬಿಂಗ್ ಮಾತ್ರ ಮಾಡಿದರು.ಅದಾದನಂತರ ೨೦೧೧ರಲ್ಲಿ ಸುದೀಪ್ ಅವರೊಡನೆ ಕೆಂಪೇಗೌಡ ಎಂಬ ಚಿತ್ರದಲ್ಲಿ ಆರುಮುಗ ಎಂಬ ವಿಲ್ಲನ್ ಪಾತ್ರ ಮಾಡಿದರು. ಈ ಚಿತ್ರ ರವಿಯವರಿಗೆ ಬೇಕಾದ ಯಶಸ್ಸನ್ನು ನೀಡಿತು. ಒಬ್ಬ ಅತ್ಯುತ್ತಮ ನಟ ಎಂದು ತೋರಿಸಿಕೊಳ್ಳಲು ಇವರಿಗೆ ೨೫ ವರ್ಷ ಬೇಕಾಯಿತು ಈ ಚಿತ್ರ ಅದನ್ನು ಪಡೆಯಲು ಇವರಿಗೆ ಸಹಾಯ ಮಾಡಿತು. ಕೆಂಪೇಗೌಡ ಚಿತ್ರದ ನಂತರ ರವಿಯವರನ್ನು ಕೆಂಪೇಗೌಡ ರವಿ ಶಂಕರ್ ಅಥವಾ ಆರುಮುಗಂ ರವಿ ಶಂಕರ್ ಎಂದು ಕರೆಯಲು ಪ್ರಾರಂಭಿಸಿದರು. ಈ ಚಿತ್ರದ ನಂತರ ರವಿ ಶಂಕರ್ ರವರು ಕನ್ನಡ ಫಿಲಂ ಇಂಡಸ್ಟ್ರಿಯಲ್ಲಿ ತುಂಬಾ ಬೇಕಾದ ನಟರಾದರು. ಇವರಿಗೆ ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳನ್ನು ಸಿಗಲು ಪ್ರಾರಂಭವಾಯಿತು. ೨೦೧೧ರ ನಂತರ ಇವರು ಮಾಣಿಕ್ಯ, ದಂಡುಪಾಳ್ಯ, ಅಧ್ಯಕ್ಷ, ಚಾರುಲತ, ಬಛನ್, ವರದನಾಯಕ, ಎದೆಗಾರಿಕೆ, ವಿಕ್ಟ್ರಿ, ಬಹದ್ದೂರ್ ಮುಂತಾದ ಕನ್ನಡ ಚಿತ್ರಗಳಲ್ಲಿ ಕಾಣಿಸಿಕ್ಕೊಂಡರು. ತೆಲುಗು ಚಿತ್ರಗಳಾದ ಕುರಡು, ಹ್ಯಾಪಿ ಹ್ಯಾಪಿ ಗಾ ಹಾಗು ತಮಿಳಿನಲ್ಲಿ ವೆಟೈಕಾರನ್, ಕೊಲೈಕಾರನ್ ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೆ ರವಿಯವರು ಸುಮಾರು ನಾಲ್ಕು ವರ್ಷದೊಳಗೆ ೬೦ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ೨೦೧೧ರ ನಂತರ ಇವರಿಗೆ ಅಭಿಮಾನಿಗಳು ಹೆಚ್ಚಾಗುತ್ತಾ ಹೋಯಿತು. ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ಸಕಾಲಕಾಲವಲ್ಲಭ ರವಿಶಂಕರ್ ಅಭಿಮಾನಿಗಳ ಸಂಘ ಎಂಬ ಸಂಘವನ್ನು ಇವರ ಅಭಿಮಾನಿಗಳು ಪ್ರಾರಂಭ ಮಾಡಿದರು.

ಕಲಾವಿದ[ಬದಲಾಯಿಸಿ]

ರವಿಯವರು ೪೦೦೦ಕ್ಕೂ ಹೆಚ್ಚು ಚಿತ್ರಗಳಿಗೆ ತಮ್ಮ ಸ್ವರವನ್ನು ನೀಡಿದ್ದಾರೆ ಅದರಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಳಂ ಸಿನಿಮಾಗಳು ಸೇರಿವೆ. ಇವರು ದೊಡ್ಡ ದೊಡ್ಡ ನಟರಿಗೆ ತಮ್ಮ ಸ್ವರವನ್ನು ನೀಡುತ್ತಿದ್ದರು, ಅದರಲ್ಲಿ ರಘುವರನ್, ದೆವರಾಜ್, ಪ್ರಕಾಶ್ ರಾಜ್, ಚರಣ್ ರಾಜ್, ಸೋನು ಸೂದ್, ನಸ್ಸಾರ್ ಮುಂತಾದ ನಟರಿಗೆ ಡಬ್ಬಿಂಗ್ ಮಾಡಿದ್ದಾರೆ. ೨೦೦೨ರಲ್ಲಿ ದುರ್ಗಿ ಎಂಬ ಚಿತ್ರಕ್ಕೆ ನಿರ್ದೇಶನ ಮಾಡಿದರು. ೨೦೦೯ರಲ್ಲಿ ಅರುಂದತಿ ಎಂಬ ಚಿತ್ರಕ್ಕೆ ಸೋನು ಸೂದ್ ರವರಿಗೆ ಡಬ್ಬಿಂಗ್ ಮಾಡಿದ್ದಾಗ ಇವರಿಗೆ ಬೇರೆ ಬೇರೆ ಮಾಧ್ಯಮಗಳಿಂದ ಮೆಚ್ಚುಗೆಗಳು ಬರತೊಡಗಿದವು. ಅಂದಿನಿಂದ ಇವರಿಗೆ ಬೊಮ್ಮಾಲಿ ರವಿ ಶಂಕರ್ ಎಂಬ ಹೆಸರು ಬಂತು.

ಪ್ರಶಸ್ತಿಗಳು[ಬದಲಾಯಿಸಿ]

ರವಿಯವರಂತ ಅತ್ಯುತ್ತಮ ನಟ ಹಾಗೂ ಕಲಾವಿದನಿಗೆ ಪ್ರಶಸ್ತಿ ದೊರಕುವುದು ಸಹಜ ಹಾಗಾಗಿ, ೧೯೯೯ರಲ್ಲಿ ಪ್ರೇಮ ಕಥ, ೨೦೦೨ರಲ್ಲಿ ಇಂದ್ರ, ೨೦೦೪ರಲ್ಲಿ ಸೈ, ೨೦೦೬ರಲ್ಲಿ ಪೋಕಿರಿ, ೨೦೦೭ರಲ್ಲಿ ಅಥಿದ್ದಿ, ೨೦೦೮ರಲ್ಲಿ ಅರುಂಧತಿ, ೨೦೦೯ರಲ್ಲಿ ಆಂಜನೆಯುಳು, ೨೦೧೨ರಲ್ಲಿ ಜುಲೈ, ೨೦೧೩ರಲ್ಲಿ ಮಿರ್ಚಿ ಎಂಬ ಚಿತ್ರಗಳಿಗೆ ಇವರಿಗೆ ನಂದಿ ಪ್ರಶಸ್ತಿ ಬಂದಿದೆ. ಹಾಗೂ ೨೦೧೧ರಲ್ಲಿ ಕೆಂಪೇಗೌಡ ಚಿತ್ರದಲ್ಲಿ ವಿಲ್ಲನ್ ಪಾತ್ರಕ್ಕೆ ಬೆಂಗಳೂರು ಟೈಮ್ಸ್ ಫಿಲಂ ಪ್ರಶಸ್ತಿ[೩], ೨೦೧೫ರಲ್ಲಿ ಮಾಣಿಕ್ಯ ಚಿತ್ರದಲ್ಲಿ ವಿಲ್ಲನ್ ಪಾತ್ರಕ್ಕೆ ಸೀಮಾ ಪ್ರಶಸ್ಸಿ ದೊರೆತಿದೆ. ೨೦೦೨ರಲ್ಲಿ ಧಿಲ್ಲ್ ಎಂಬ ತಮಿಳು ಚಿತ್ರದಲ್ಲಿ ಇವರ ಡಬ್ಬಿಂಗ್ ಗೆ ಪ್ರಶಸ್ತಿ ಬಂದಿದೆ.

ಯಶಸ್ಸಿನ ಪ್ರಯಾಣ[ಬದಲಾಯಿಸಿ]

ರವಿ ಶಂಕರ್ ರವರು ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮದಲ್ಲಿ ತಮ್ಮ ಜೀವನದ ಕಷ್ಟ ಸುಖಗಳನ್ನು ಹಂಚಿಕೊಂಡರು. ಅರುಂದತಿ ಚಿತ್ರದ ನಂತರ ರವಿ ಶಂಕರ್ ರವರಿಗೆ ಇನ್ನೂ ಹೆಚ್ಚು ಚಿತ್ರಗಳಲ್ಲಿ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಿದರು ಆದರೆ ಯಾವ ಅವಕಾಶವು ಸಿಗಲಿಲ್ಲ, ಈ ವಿಚಾರವನ್ನು ಕುರಿತು ತುಂಬಾ ಬೇಸರಪಟ್ಟುಕ್ಕೊಂಡರು. ಆದರೆ ೨೦೧೧ರಲ್ಲಿ ಮತ್ತೊಮ್ಮೆ ಅವಕಾಶ ಸಿಕ್ತು, ಈ ಅವಕಾಶವನ್ನು ಇವರು ಸರಿಯಾಗಿ ಉಪಯೋಗಮಾಡಿಕ್ಕೊಂಡರು. ಈ ಕಾರಣದಿಂದ ರವಿಯವರು ಈಗ ಈ ಸ್ಥಾನದಲ್ಲಿದ್ದಾರೆ. ತಮ್ಮ ಯಶಸ್ಸನ್ನು ಪಡೆಯಲು ಸಹಾಯ ಮಾಡಿದ ಕಿಚ್ಚ ಸುದೀಪ್ ರನ್ನು ತುಂಬಾ ಹೊಗಳಿದ್ದಾರೆ. ಇವರು ತಮ್ಮ ಮಾತೃ ಭಾಷೆ ತೆಲುಗು ಆದರೂ ಜೀವನದ ಭಾಷೆ ಕನ್ನಡ ಎಂದಿದ್ದಾರೆ. ಇವರ ಕನಸನ್ನು ಪೂರೈಸಿದು ಕರ್ನಾಟಕ, ಆದ್ದರಿಂದ ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ ಕೊಡುವುದಾಗಿ ಹೇಳಿದ್ದಾರೆ. ತನ್ನ ೨೫ ವರ್ಷದ ಕನಸನ್ನು ಹಾಗೂ ಅವರ ತಾಯಿಯ ಕನಸು ನೆನಸು ಮಾಡಿದ್ದನ್ನು ಹೇಳಿ ತುಂಬಾ ಆನಂದಪಟ್ಟರು.

ಉಲ್ಲೇಖಗಳು[ಬದಲಾಯಿಸಿ]

  1. http://www.idlebrain.com/celeb/interview/pravishankar.html
  2. http://www.vijaykarnatakaepaper.com/Details.aspx?id=12459&boxid=55817989
  3. http://photogallery.indiatimes.com/awards/filmfare-awards/59th-idea-filmfare-awards-2011south/59th-idea-filmfare-awards-2011south-winners/Best-Supporting-Actor-Male-Kannada/articleshow/14743268.cms