ವಿಷಯಕ್ಕೆ ಹೋಗು

ರುದ್ರ ತಾಂಡವ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರುದ್ರ ತಾಂಡವ - ಇದು ಗುರು ದೇಶಪಾಂಡೆ ನಿರ್ದೇಶಿಸಿದ 2015 ರ ಕನ್ನಡ ಭಾಷೆಯ ಸಾಹಸ ಚಲನಚಿತ್ರವಾಗಿದೆ ಮತ್ತು ಇದು 2013 ರ ತಮಿಳು ಚಲನಚಿತ್ರ ಪಾಂಡಿಯ ನಾಡು ದ ರೀಮೇಕ್ ಆಗಿದೆ. ಇದರಲ್ಲಿ ಚಿರಂಜೀವಿ ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪಿ. ರವಿಶಂಕರ್, ಗಿರೀಶ್ ಕಾರ್ನಾಡ್ ಮತ್ತು ಕೃಷ್ಣ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ವ್ಯಕ್ತಿ ಶಿವರಾಜ್ ತನ್ನ ಸಹೋದರನನ್ನು ಕೊಂದ ಸೇಡನ್ನು ಸ್ಥಳೀಯ ಮಾಫಿಯಾ ಮೇಲೆ ಹೇಗೆ ತೀರಿಸಿಕೊಳ್ಳುತ್ತಾನೆ ಎಂಬುದರ ಕುರಿತು ಚಿತ್ರವು ಕಥೆಯನ್ನು ಹೇಳುತ್ತದೆ. 27 ಫೆಬ್ರವರಿ 2015 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು.

ಪಾತ್ರವರ್ಗ

[ಬದಲಾಯಿಸಿ]

ಹಿನ್ನೆಲೆಸಂಗೀತ

[ಬದಲಾಯಿಸಿ]

V. ಹರಿಕೃಷ್ಣ ಚಿತ್ರದ ಹಿನ್ನೆಲೆ ಸಂಗೀತವನ್ನು ಹಾಡುಗಳ ಸಾಹಿತ್ಯವನ್ನು ಧನಂಜಯ್ ಅಡಿಗ, ಪುನೀತ್ ಆರ್ಯ ಮತ್ತು ಕೆ. ಕಲ್ಯಾಣ್ ಬರೆದಿದ್ದಾರೆ . ಸೌಂಡ್‌ಟ್ರ್ಯಾಕ್ ಆಲ್ಬಂ ಐದು ಹಾಡುಗಳನ್ನು ಒಳಗೊಂಡಿದೆ ಮತ್ತು ಡಿ.ಇಮ್ಮಾನ್ ಸಂಯೋಜಿಸಿದ ತಮಿಳು ಚಲನಚಿತ್ರದ ಎಲ್ಲಾ ಹಾಡುಗಳನ್ನು ಇಲ್ಲಿ ಉಳಿಸಿಕೊಳ್ಳಲಾಗಿದೆ. "ಟ್ರೈ ಟ್ರೈ ಟ್ರೈ" ಟ್ರ್ಯಾಕ್ ಅನ್ನು ನಟಿ ರಮ್ಯಾ ನಂಬೀಸನ್ ಅವರು ಹಾಡಿ ಆ ಮೂಲಕ ಹಿನ್ನೆಲೆ ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. [೧] "ಒಂದೂರಲ್ಲಿ ಒಬ್ಬ" ಹಾಡು ಅನ್ನು ನಟ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ, [೨] ಇತರ ಮೂರು ಹಾಡುಗಳನ್ನು ಶಂಕರ್ ಮಹದೇವನ್ (ಎರಡು) ಮತ್ತು ರಾಜೇಶ್ ಕೃಷ್ಣನ್ (ಒಂದು) ಹಾಡಿದ್ದಾರೆ. ಈ ಆಲ್ಬಂ ಅನ್ನು 2015 ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. [೩]

ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಈ ಬಾಳ ಬೆಳಗೋ"ಧನಂಜಯ್ ಅಡಿಗಶಂಕರ್ ಮಹದೇವನ್ 
2."ಒಂದೂರಲ್ಲಿ ಒಬ್ಬ"ಪುನೀತ್ ಆರ್ಯಪುನೀತ್ ರಾಜ್‍ಕುಮಾರ್ 
3."Yaare Yaare"ಕೆ. ಕಲ್ಯಾಣ್ರಾಜೇಶ್ ಕೃಷ್ಣನ್ 
4."ಟ್ರೈ ಟ್ರೈ ಟ್ರೈ"ಕೆ. ಕಲ್ಯಾಣ್ರಮ್ಯಾ ನಂಬೀಸನ್ 
5."ಶಾಂತ ಶಿವನೇ"ಧನಂಜಯ್ ಅಡಿಗಶಂಕರ್ ಮಹದೇವನ್ 

ಉಲ್ಲೇಖಗಳು

[ಬದಲಾಯಿಸಿ]
  1. "Remya Croons for Rudratandava". The New Indian Express. Archived from the original on 2015-07-15. Retrieved 2022-01-16.
  2. "Puneeth lends his voice to three actors in Rudratandava". Archived from the original on 2014-12-30. Retrieved 2022-01-16.
  3. "Rudra Tandava Audio Release". indiaglitz.com. 12 January 2015. Archived from the original on 12 ಆಗಸ್ಟ್ 2015. Retrieved 13 July 2015.

 

ಬಾಹ್ಯ ಕೊಂಡಿಗಳು

[ಬದಲಾಯಿಸಿ]