ವಿಷಯಕ್ಕೆ ಹೋಗು

ಮೆರವಣಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೆರವಣಿಗೆಯು ವಿಧ್ಯುಕ್ತ ಅಥವಾ ಔಪಚಾರಿಕ ರೀತಿಯಲ್ಲಿ ನಡೆಯುತ್ತಿರುವ ಜನರ ಸಂಘಟಿತ ಸಮೂಹ. ಎಲ್ಲ ಜನರಲ್ಲಿ ಮತ್ತು ಎಲ್ಲ ಕಾಲಗಳಲ್ಲಿ ಮೆರವಣಿಗೆಗಳು ಕ್ರಮಬದ್ಧ ಮತ್ತು ಪ್ರಭಾವಶಾಲಿ ಕಾರ್ಯಕ್ರಮದ ರೂಪದಲ್ಲಿನ ಸಾರ್ವಜನಿಕ ಆಚರಣೆಯ ಸಹಜ ರೂಪವಾಗಿವೆ. ಪ್ರಾಚೀನ ಸ್ಮಾರಕಗಳು ಧಾರ್ಮಿಕ ಮತ್ತು ವಿಜಯೋತ್ಸವದ ಮೆರವಣಿಗೆಗಳನ್ನು ಹೇರಳವಾಗಿ ಚಿತ್ರಿಸಿವೆ, ಉದಾ. ಈಜಿಪ್ಟ್‌ನ ಧಾರ್ಮಿಕ ಮೆರವಣಿಗೆಗಳು, ಕೆಲವು ಬಘಾಜ಼್-ಕೇಯಿಯ ಬಂಡೆ ಕೆತ್ತನೆಗಳಲ್ಲಿ ಚಿತ್ರಿಸಲ್ಪಟ್ಟಿವೆ, ಗ್ರೀಕ್ ಕಲೆಯಲ್ಲಿ ಮೆರವಣಿಗೆಗಳ ಅನೇಕ ನಿರೂಪಣಗಳು, ಇದು ಪಾರ್ಥೆನಾನ್ ಅಲಂಕರಣಪಟ್ಟಿಯ ಮಹಾ ಪ್ಯಾನ್ಯಾಥನೇಯಾ ಸಂಬಂಧಿ ಮೆರವಣಿಗೆಯಲ್ಲಿ ಅಂತ್ಯಗೊಂಡಿತು, ಮತ್ತು ಟೈಟಸ್‍ನ ಕಮಾನಿನಲ್ಲಿರುವಂತಹ ರೋಮನ್ ವಿಜಯೋತ್ಸವ ಸಂಬಂಧಿ ಉಬ್ಬುಕೆತ್ತನೆಗಳು.

ಒಂದು ಮೆರವಣಿಗೆಯನ್ನು ಕೇವಲ ಒಂದೇ ದಿಕ್ಕಿನಲ್ಲಿ ನಡೆಯುತ್ತಿರುವ ಜನರಿಗಿಂತ ಹೆಚ್ಚು ಅರ್ಥಪೂರ್ಣವಾಗಿಸಲು ಅನೇಕ ಅಂಶಗಳನ್ನು ಬಳಸಬಹುದು:

ವಿಧ್ಯುಕ್ತವಾದ ನಾವೆ, ಆನೆ ಅಂಬಾರಿ, ಕುದುರೆಯಿಂದ ಎಳೆಯಲ್ಪಟ್ಟ ಗಾಡಿ, ಅಥವಾ ಇತರರು ತಮ್ಮ ಹೆಗಲ ಮೇಲೆ ಹೊತ್ತ ಪಲ್ಲಕ್ಕಿಯಂತಹ ಅಥವಾ ಒಂದು ವಿಶೇಷವಾದ ಸಾರಿಗೆಯ ವಿಧಾನ; ಸಂಗೀತ, ಇದರಲ್ಲಿ ಇಗರ್ಜಿ ಮೆರವಣಿಗೆಯ ಗಾಯಕವೃಂದ, ಸೇನಾ ಮೆರವಣಿಗೆಯ ಪ್ರಯಾಣ ವಾದ್ಯಗೋಷ್ಠಿ ಎಲ್ಲವೂ ಸೇರಿರಬಹುದು. ಮೆರವಣಿಗೆಯ ಮುಂದೆ ಘೋಷಕರು ಅದಕ್ಕೆ ದಾರಿ ಬಿಡುವಂತೆ ಕೂಗುತ್ತ ನಡೆಯಬಹುದು; ಆದ್ಯತೆಯ ಕ್ರಮ: ಆಡಂಬರದ ಪ್ರದರ್ಶನವಿಲ್ಲದೇ ಕೂಡ, ಅವರ ಕ್ರಮ ಮತ್ತು ನಿಯೋಜನೆಯು ಸ್ಪಷ್ಟವಾಗಿ ಒಂದು ಶ್ರೇಣಿ ವ್ಯವಸ್ಥೆ ಅಥವಾ ಸಹಜೀವಿ ಸಂಬಂಧದಂತೆ ಕಣ್ಣಿಗೆ ಕಾಣಿಸಿದರೆ, ಮುಂದೆ ನಡೆಯುತ್ತಿರುವ ಜನರ ಒಂದು ಗುಂಪು ಮೆರವಣಿಗೆಯನ್ನು ರೂಪಿಸುತ್ತದೆ ಎಂದು ಹೇಳಬಹುದು; ಪತಾಕೆಗಳು, ಬೀಸಣಿಗೆಗಳು, ಸೂಚಕ ಸಂಕೇತಗಳು, ನಿಧಿ, ಅಥವಾ ಇತರ ಕಣ್ಸೆಳೆಯುವ ವಸ್ತುಗಳ ಧಾರಕರು ಅಥವಾ ಮುಂದೆ ನಡೆಯುವ ವಿದೇಶಿ ಪ್ರಾಣಿಗಳು. ಒಂದು ಸರಳ ಉದಾಹರಣೆಯೆಂದರೆ ವಿವಾಹದಲ್ಲಿನ ಉಂಗುರ ಧಾರಕ; ಹೂವು ಹೊತ್ತೊಯ್ಯುವವರು ಒದಗಿಸುವ ಸುಗಂಧದ್ರವ್ಯ ಅಥವಾ ಧೂಪದ್ರವ್ಯದ ಧೂಪದಾನಿ; ವಿಶೇಷ ವೇಷಭೂಷಣ: ಸಾಂಪ್ರದಾಯಿಕವಾಗಿ ಮೆರವಣಿಗೆ ಸಹಾಯಕರು, ಕಾಲಾಳುಗಳು, ಕಾರ್ಯಕ್ರಮದ ಕಾವಲು ಪಡೆಗಳು, ಅಥವಾ ಸೇವಕರ ವೇಷಭೂಷಣಗಳು ಮೆರವಣಿಗೆಯನ್ನು ಏರ್ಪಡಿಸುವ ವ್ಯಕ್ತಿಯ ಸಂಪತ್ತನ್ನು ಪ್ರದರ್ಶಿಸಲು ನೆರವಾಗುತ್ತವೆ; ವಿಶೇಷ ದೀಪ ವ್ಯವಸ್ಥೆ: ಮೃತರ ನೆನಪಿನಲ್ಲಿ ಅಥವಾ ರಾಜಕೀಯ ಐಕಮತ್ಯವನ್ನು ತೋರಿಸಲು ಮೇಣದ ಬತ್ತಿಯನ್ನು ಹೊತ್ತಿಸುವುದು. ಹಲವುವೇಳೆ ಇದರಲ್ಲಿ ಮೇಣದ ಬತ್ತಿ ಹೊತ್ತಿಸಿದ ಮೆರವಣಿಗೆ ಸೇರಿರುತ್ತದೆ. ಪಟಾಕಿಗಳು ಪಟ್ಟಾಭಿಷೇಕಗಳು, ಕವಾಯಿತುಗಳು, ಮತ್ತು ಥಾಯ್ ಅರಸು ನಾವೆ ಮೆರವಣಿಗೆಗಳಂತಹ ವೈವಿಧ್ಯಮಯ ಕಾರ್ಯಕ್ರಮಗಳನ್ನು ಬೆಳಗಿಸುತ್ತವೆ; ಸಾರ್ವಜನಿಕ ಪ್ರದರ್ಶನ, ಉದಾಹರಣೆಗೆ ಸ್ವಲ್ಪ ಕಡಿಮೆ ಎತ್ತರದಲ್ಲಿ ವಿಮಾನದ ಹಾರಾಟ, ನ್ಯೂ ಯಾರ್ಕ್ ಟಿಕರ್ ಟೇಪ್ ಕವಾಯತುಗಳ ಬಣ್ಣಬಣ್ಣದ ಕಾಗದದ ತುಂಡುಗಳು. ಉಡುಗೊರೆಗಳ ವಿತರಣೆ, ಒಂದು ಕಾಲದಲ್ಲಿ ಹಲವುವೇಳೆ ಆಹಾರ ಅಥವಾ ಹಣವಾಗಿತ್ತು. ಇಂದು, ಬಹುತೇಕ ಜನರು ಮರ್ಡಿ ಗ್ರಾಸ್‍ನಲ್ಲಿ ಮಣಿಗಳ ವಿತರಣೆ ಮತ್ತು ಸ್ಥಳೀಯ ಜಾತ್ರೆ ಕವಾಯತುಗಳಲ್ಲಿ ಸಿಹಿ ಮಿಠಾಯಿಗಳ ಎಸೆಯುವಿಕೆ ಬಗ್ಗೆ ಪರಿಚಿತವಾಗಿದ್ದಾರೆ.