ವಿಷಯಕ್ಕೆ ಹೋಗು

ಅಂಬಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಿರುವಾಂಕೂರು ಮಹಾರಾಜನ ಆನೆಗಳ ಅಂಬಾರಿ

ಅಂಬಾರಿ ಆನೆ, ಅಥವಾ ಸಂದರ್ಭಾನುಸಾರ ಒಂಟೆಗಳಂತಹ ಇತರ ಯಾವುದೇ ಪ್ರಾಣಿಯ ಬೆನ್ನಿನ ಮೇಲೆ ಇರಿಸಲಾದ ಒಂದು ಬಂಡಿ, ಮತ್ತು ಇದನ್ನು ಹಿಂದೆ ಬಹುತೇಕ ಹಲವುವೇಳೆ ಶ್ರೀಮಂತ ಜನರನ್ನು ಸಾಗಿಸಲು ಅಥವಾ ಬೇಟೆ ಅಥವಾ ಯುದ್ಧದಲ್ಲಿ ಬಳಸಲಾಗುತ್ತಿತ್ತು. ಅದು ಮಾಲೀಕನ ಸಂಪತ್ತಿನ ಸಂಕೇತವೂ ಆಗಿತ್ತು, ಹಾಗಾಗಿ ಅದು ದುಬಾರಿ ರತ್ನಗಳಿಂದ ಅಲಂಕೃತವಾಗಿರುತ್ತಿತ್ತು.

ಚಿನ್ನದ ಅಂಬಾರಿ, ತಿರುವಾಂಕೂರು ರಾಜರು ಬಳಸಿದ್ದು ತಿರುವನಂತಪುರಂನೇಪಿಯರ್ ಸಂಗ್ರಹಾಲಯದಲ್ಲಿ ಪ್ರದರ್ಶನದಲ್ಲಿರುವುದು, ಮತ್ತು ಸಾಂಪ್ರದಾಯಿಕವಾಗಿ ಪ್ರಸಿದ್ಧ ಮೈಸೂರು ದಸರಾಜಂಬೂಸವಾರಿಯಲ್ಲಿ ಬಳಸಲಾಗುವ ಅಂಬಾರಿ ಅತ್ಯಂತ ಗಮನಾರ್ಹವಾಗಿವೆ. ರಾಜಸ್ಥಾನಜೋಧ್‍ಪುರ್‍ನ ಮೆಹ್ರನ್‍ಗಢ್ ಕೋಟೆಯ ಸಂಗ್ರಹಾಲಯ ಅರಸೊತ್ತಿಗೆಯ ಅಂಬಾರಿಗಳ ಮಂದಿರವನ್ನು ಹೊಂದಿದೆ.

ಪ್ರಸ್ತುತ ಸಮಯದಲ್ಲಿ, ಆಗ್ನೇಯ ಏಷ್ಯಾದಲ್ಲಿ ಅಂಬಾರಿಗಳನ್ನು ಮುಖ್ಯವಾಗಿ ಪ್ರವಾಸಿ ಅಥವಾ ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇವು ವಿವಾದದ ವಸ್ತುವಾಗಿವೆ ಏಕೆಂದರೆ ಪ್ರಾಣಿ ಹಕ್ಕುಗಳ ಗುಂಪುಗಳು ಮತ್ತು ಮಿಲೇನಿಯಮ್ ಎಲಿಫೆಂಟ್ ಫೌಂಡೇಶನ್‍ನಂತಹ ಸಂಸ್ಥೆಗಳು, ಅಂಬಾರಿಗಳು ಆನೆಯ ಬೆನ್ನುಹುರಿ, ಶ್ವಾಸಕೋಶಗಳು, ಮತ್ತು ಇತರ ಅಂಗಗಳಿಗೆ ಶಾಶ್ವತ ಹಾನಿ ಉಂಟುಮಾಡಬಹುದು ಮತ್ತು ಪ್ರಾಣಿಯ ಆಯಸ್ಸನ್ನು ಗಣನೀಯವಾಗಿ ಕಡಿಮೆಮಾಡಬಹುದು ಎಂಬ ಮಾಹಿತಿಯನ್ನು ಉದಾಹರಿಸಿ, ಅಂಬಾರಿಯ ಬಳಕೆಯನ್ನು ಮುಕ್ತವಾಗಿ ಟೀಕಿಸುತ್ತವೆ. [೧]

ಉಲ್ಲೇಖಗಳು[ಬದಲಾಯಿಸಿ]

  1. http://www.millenniumelephantfoundation.com/projects/howdah-not-to-do-it/[ಶಾಶ್ವತವಾಗಿ ಮಡಿದ ಕೊಂಡಿ]
"https://kn.wikipedia.org/w/index.php?title=ಅಂಬಾರಿ&oldid=1150172" ಇಂದ ಪಡೆಯಲ್ಪಟ್ಟಿದೆ