ಬಂಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೈಟಿಯಲ್ಲಿ ಕೈ ಬಂಡಿ.

ಬಂಡಿ ಎಂದರೆ ಎರಡು ಗಾಲಿಗಳಿರುವ, ಸಾಮಾನ್ಯವಾಗಿ ಒಂದು ಅಥವಾ ಜೋಡಿ ಭಾರ ಎಳೆಯುವ ಪ್ರಾಣಿಗಳಿಂದ ಎಳೆಯಲ್ಪಡುವ, ಸಾರಿಗೆಗಾಗಿ ವಿನ್ಯಾಸಗೊಳಿಸಲಾದ ವಾಹನ. ಕೈ ಬಂಡಿಯನ್ನು ಒಬ್ಬರು ಅಥವಾ ಹೆಚ್ಚು ಜನರು ಎಳೆಯುತ್ತಾರೆ ಅಥವಾ ನೂಕುತ್ತಾರೆ.

ಬಂಡಿಗಳಿಗೆ ಬಳಸಲಾಗುವ ಭಾರ ಎಳೆಯುವ ಪ್ರಾಣಿಗಳು ಕುದುರೆಗಳು, ಕತ್ತೆಗಳು ಅಥವಾ ಹೇಸರಗತ್ತೆಗಳು, ಎತ್ತುಗಳು, ಮತ್ತು ಮೇಕೆಗಳು ಅಥವಾ ದೊಡ್ಡ ನಾಯಿಗಳಂತಹ ಚಿಕ್ಕ ಪ್ರಾಣಿಗಳು ಕೂಡ ಆಗಿರಬಹುದು.

ಹಸ್ತಚಾಲಿತ ಗಾಲಿ ಬಂಡಿ, ಸಿಂಧೂತಟದ ನಾಗರೀಕತೆ (ಕ್ರಿ.ಪೂ. ೩೦೦೦-೧೫೦೦)

ಕ್ರಿ.ಪೂ. ಎರಡನೇ ಸಹಸ್ರಮಾನದಷ್ಟು ಹಿಂದಿನ ಸಾಹಿತ್ಯದಲ್ಲಿ ಬಂಡಿಗಳನ್ನು ಉಲ್ಲೇಖಿಸಲಾಗಿದೆ. ಭಾರತದ ಒಂದು ಪವಿತ್ರ ಗ್ರಂಥವಾದ ಋಗ್ವೇದವು ಪುರುಷರು ಮತ್ತು ಮಹಿಳೆಯರು ಬಂಡಿಯ ಎರಡು ಗಾಲಿಗಳಂತೆ ಸಮಾನವಾಗಿದ್ದಾರೆ ಎಂದು ಹೇಳುತ್ತದೆ. ಮನುಷ್ಯರು ನೂಕುವ ಕೈಬಂಡಿಗಳನ್ನು ಪ್ರಪಂಚದಾದ್ಯಂತ ಬಳಸಲಾಗಿದೆ. ಉದಾಹರಣೆಗೆ, ೧೯ನೇ ಶತಮಾನದಲ್ಲಿ, ಅಮೇರಿಕದ ಬಯಲುಗಳುದ್ದಕ್ಕೆ ೧೮೫೬ ಮತ್ತು ೧೮೬೦ರ ನಡುವೆ ಪ್ರಯಾಣಿಸುತ್ತಿದ್ದ ಕೆಲವು ಮೊರ್ಮನ್‌ಗಳು ಕೈಬಂಡಿಗಳನ್ನು ಬಳಸಿದ್ದರು.[೧]

Donkey cart most commonly used for transportation in Thar desert
ಥಾರ್ ಮರುಭೂಮಿಯಲ್ಲಿ ಸಾರಿಗೆಗಾಗಿ ಬಳಸಲ್ಪಡುವ ಕತ್ತೆ ಬಂಡಿ

ಉಲ್ಲೇಖಗಳು[ಬದಲಾಯಿಸಿ]

  1. Lyndia Carter, “Handcarts,” in Encyclopedia of Latter-day Saint History, 461–63.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಬಂಡಿ&oldid=1116075" ಇಂದ ಪಡೆಯಲ್ಪಟ್ಟಿದೆ