ವಿಷಯಕ್ಕೆ ಹೋಗು

ಪಲ್ಲಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಲ್ಲಕ್ಕಿ ಚಕ್ರರಹಿತ ವಾಹನಗಳ ಒಂದು ವರ್ಗ, ಜನರ ಸಾಗಾಟಕ್ಕಾಗಿ ಒಂದು ಬಗೆಯ ಮಾನವ ಚಾಲಿತ ಸಾರಿಗೆ. ಪಲ್ಲಕ್ಕಿ‌ ಹೊರುವವರನ್ನು ಭೋವಿಯಂದು ಕರೆಯುತ್ತಾರೆ.

ಸ್ವಲ್ಪ ಚಿಕ್ಕ ಪಲ್ಲಕ್ಕಿಗಳು ಇಬ್ಬರು ಅಥವಾ ಹೆಚ್ಚು ಸಾಗಾಳುಗಳಿಂದ ಹೊರಲಾದ ತೆರೆದ ಕುರ್ಚಿಗಳು ಅಥವಾ ಹಾಸಿಗೆಗಳ ರೂಪವನ್ನು ಹೊಂದಿರುತ್ತವೆ, ಮತ್ತು ಕೆಲವು ಪ್ರಾಕೃತಿಕ ಶಕ್ತಿಗಳಿಂದ ರಕ್ಷಣೆಗಾಗಿ ಆವೃತಗೊಂಡಿರುತ್ತವೆ. ಸ್ವಲ್ಪ ದೊಡ್ಡ ಪಲ್ಲಕ್ಕಿಗಳಲ್ಲಿ, ಉದಾಹರಣೆಗೆ ಪ್ರಾಚೀನ ಭಾರತದಲ್ಲಿಯವುಗಳಲ್ಲಿ, ರಾಣಿಯರು ಪ್ರಯಾಣಿಸುತ್ತಿದ್ದರು, ಮತ್ತು ಇವು ಸಾಕಷ್ಟು ವಿಶಾಲವಾಗಿದ್ದು ದೂರದ ಪ್ರಯಾಣವಿದ್ದರೆ ಮಲಗುವ ಸೌಲಭ್ಯ ಹಾಗೂ ತಿನಿಸುಗಳು ಹಾಗೂ ಇತರ ಅಗತ್ಯಗಳ ಲಭ್ಯತೆಯನ್ನು ಹೊಂದಿರುತ್ತವೆ. ಚೀನಾದ ಸಾಮ್ರಾಟರ ಪಲ್ಲಕ್ಕಿಗಳು, ಒಂದು ವೇದಿಕೆ ಮೇಲೆ ಚಿಕ್ಕ ಕೋಣೆಗಳನ್ನು ಹೋಲಬಹುದು ಮತ್ತು ಇದನ್ನು ಹನ್ನೆರಡು ಅಥವಾ ಹೆಚ್ಚು ಮಂದಿ ಹೆಗಲ ಮೇಲೆ ಹೊರುತ್ತಿದ್ದರು. ಪಲ್ಲಕ್ಕಿಯನ್ನು ಅತ್ಯಂತ ಸಮರ್ಥವಾಗಿ ಹೊರಲು, ಕೂಲಿಯಾಳುಗಳು ಭಾರವನ್ನು ತಮ್ಮ ಹೆಗಲುಗಳಿಗೆ ವರ್ಗಾಯಿಸಲು ಪ್ರಯತ್ನಿಸುತ್ತಾರೆ, ಸಾಗಿಸುವ ಕಂಬಗಳನ್ನು ತಮ್ಮ ಹೆಗಲ ಮೇಲೆ ಇರಿಸಿ, ಅಥವಾ ಭಾರವನ್ನು ಸಾಗಿಸುವ ಕಂಬಗಳಿಂದ ಹೆಗಲಿಗೆ ವರ್ಗಾಯಿಸಲು ಒಂದು ನೊಗವನ್ನು ಬಳಸಿ.

ಪಲ್ಲಕ್ಕಿಗಳನ್ನು ರಾಮಾಯಣದಷ್ಟು ಪ್ರಾಚೀನ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿದೆ.

ಮದುವೆಗಳಲ್ಲಿ ಡೋಲಿಗಳನ್ನು ವಧುಗಳನ್ನು ಹೊರಲು, ಮತ್ತು ಪಲ್ಲಕ್ಕಿಗಳನ್ನು ವರರನ್ನು ಹೊರಲು ಬಳಸಲಾಗುತ್ತದೆ.