ನೊಗ
ಗೋಚರ
ನೊಗವು ಸಾಮಾನ್ಯವಾಗಿ ಭಾರವನ್ನು ಒಟ್ಟಾಗಿ ಎಳೆಯುವುದನ್ನು ಸಾಧ್ಯವಾಗಿಸಲು ಎತ್ತುಗಳು ಅಥವಾ ಇತರ ಪ್ರಾಣಿಗಳ ಜೋಡಿಗಳ ನಡುವೆ ಬಳಸಲಾದ ಒಂದು ಮರದ ತೊಲೆ, ಎತ್ತುಗಳಿಗೆ ನೊಗ ಹೂಡುವುದು ಅತ್ಯಂತ ಸಾಮಾನ್ಯವಾಗಿದೆ; ಕೆಲವು ನೊಗಗಳನ್ನು ಪ್ರತ್ಯೇಕ ಪ್ರಾಣಿಗಳಿಗೆ ಹೂಡಲಾಗುತ್ತದೆ. ಭಿನ್ನ ಸಂಸ್ಕೃತಿಗಳಲ್ಲಿ, ಮತ್ತು ಭಿನ್ನ ಪ್ರಕಾರಗಳ ಎತ್ತುಗಳಿಗೆ ಬಳಸಲಾದ ಹಲವು ಬಗೆಗಳ ನೊಗಗಳಿವೆ. ನೊಗ ಹೂಡಬಹುದಾದ ಇತರ ಪ್ರಾಣಿಗಳಲ್ಲಿ ಕುದುರೆಗಳು, ಹೇಸರಗತ್ತೆಗಳು, ಕತ್ತೆಗಳು ಮತ್ತು ಎಮ್ಮೆಗಳು ಸೇರಿವೆ.
ಸ್ಕಂದ ನೊಗ
[ಬದಲಾಯಿಸಿ]ಸ್ಕಂದ ನೊಗವು ಎತ್ತುಗಳ ಸ್ಕಂದದ, ಅಥವಾ ಹೆಗಲ ಮೂಳೆಗಳ ಸ್ವಲ್ಪ ಮುಂದೆ ಸರಿಕೂಡುವ ನೊಗ. ಒಂಟಿಯಾಗಿರುವ ಅಥವಾ ಎತ್ತಿನ ಸ್ಕಂದದ ಎರಡೂ ಬದಿಗಳಲ್ಲಿರುವ ಕಟ್ಟಿಗೆಯ ಜೋಡಿ ಪಟ್ಟಿಗಳನ್ನು ಬಳಸಿ ನೊಗವನ್ನು ಸ್ಥಳದಲ್ಲಿ ಹಿಡಿದಿಡಲಾಗುತ್ತದೆ; ಆದರೆ ಎಳೆತವು ಸ್ವತಃ ನೊಗದಿಂದ ಇರುತ್ತದೆ, ಪಟ್ಟಿಗಳಿಂದಲ್ಲ. ಸ್ಕಂದ ನೊಗಗಳು ವಿಶೇಷವಾಗಿ ಸ್ಕಂದದ ಮೇಲೆ ಎತ್ತರದ ಡುಬ್ಬಗಳನ್ನು ಹೊಂದಿರುವ ಜ಼ೆಬು ದನಗಳಿಗೆ ಸೂಕ್ತವಾಗಿವೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Information on how a yoke is carved (ISCOWP)
- Information on how a bow is crafted (ISCOWP)