ಶ್ರೇಯಾ ಘೋಷಾಲ್

ವಿಕಿಪೀಡಿಯ ಇಂದ
Jump to navigation Jump to search
ಶ್ರೇಯಾ ಘೋಷಾಲ್
Shreya Ghoshal at Filmfare Awards South.jpg
ಹಿನ್ನೆಲೆ ಮಾಹಿತಿ
ಮೂಲಸ್ಥಳರಾವಟ್ಭಾಟ, ರಾಜಸ್ಥಾನ
ಶೈಲಿ/ಗಳುಹಿನ್ನೆಲೆ ಗಾಯನ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ವೃತ್ತಿಗಳುಗಾಯಕಿ
ಸಕ್ರಿಯ ವರುಷಗಳು೨೦೦೨ - ಇಂದಿನವರೆಗೆ

ಶ್ರೇಯಾ ಘೋಷಾಲ್ (ಹುಟ್ಟು: ಮಾರ್ಚ್ ೧೨, ೧೯೮೪) ಭಾರತದ ಒಬ್ಬ ಹಿನ್ನೆಲೆ ಗಾಯಕಿ. ಬಾಲಿವುಡ್, ದೂರದರ್ಶನ ಮತ್ತು ಅನೇಕ ಪ್ರಾಂತೀಯ ಭಾಷೆಯ ಚಲನಚಿತ್ರಗಳಲ್ಲಿ ಈಕೆ ಹಿನ್ನೆಲೆ ಗಾಯನ ನೀಡಿದ್ದಾರೆ. ಭಾರತದ ದೂರದರ್ಶನದಲ್ಲಿ 'ಸ ರೆ ಗ ಮ ಪ' ಕಾರ್ಯಕ್ರಮದಲ್ಲಿ ಮೂಡಿಬಂದ 'ಧೃವತಾರೆ' ಎಂದು ಹೆಸರಾದವರು. ಆಗ ಮತ್ತೊಬ್ಬ ಪ್ರತಿಭಾವಂತ, 'ಸೋನು ನಿಗಂ' ಸ್ಪರ್ಧೆಯ ಚಾಲಕರು. ಶ್ರೇಯಾ ಘಾಷಾಲ್, ತನ್ನ, ಇಂಪಾದ ಕಂಟ ಸಿರಿ ಮತ್ತು ಮುಘ್ದಸೌಂದರ್ಯದಿಂದ ನೆರೆದಿದ್ದ ಸಭಿಕರೆಲ್ಲರ ಮನಸ್ಸನ್ನು ಸಂತೋಷಗೊಳಿಸಿ ಆ ಪ್ರತಿಯೋಗಿತೆಯಲ್ಲಿ ಜಯಗಳಿಸಿದರು. ಈ ಮುಘ್ದ ಬೆಡಗಿ, ಹಿಂದಿ ಚಲನಚಿತ್ರರಂಗದಲ್ಲಿ ನೆಲೆನಿಂತು ಹಲವಾರು ಸುಂದರ ಚಿತ್ರಗೀತೆಗಳಿಗೆ ತಮ್ಮ ಇಂಪಾದ ದ್ವನಿ ನೀಡಿ, ಇಷ್ಟು ಕಡಿಮೆ ಸಮಯದಲ್ಲಿ ಒಬ್ಬ 'ಸೆಲೆಬ್ರಿಟಿ'ಯಾಗಿ ಮೆರೆಯುತ್ತಿದ್ದಾರೆ.[೧]

ಜನನ,ವಿದ್ಯಾಭ್ಯಾಸ[ಬದಲಾಯಿಸಿ]

ಮಾರ್ಚ್, ೧೨, ೧೯೮೪ ರಲ್ಲಿ ಬಂಗಾಳದ 'ಬೆಹ್ರಾಮ್ ಪುರ' ದಲ್ಲಿ ಒಂದು ಸುಶಿಕ್ಷಿತ ಬ್ರಾಹ್ಮಣ ಪರಿವಾರದಲ್ಲಿ ಜನಿಸಿದರು. ತಂದೆ, 'ಬಿಸ್ವಜಿತ್ ಘೋಷಾಲ್', ಪರಮಾಣು ವಿಜ್ಞಾನಿ, ಬಿ .ಎ.ಆರ್.ಸಿಯ ನ್ಯೂಕ್ಲಿಯರ್ ಪವರ್ ಪ್ಲಾಂಟ್ ನಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ತಾಯಿ, ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದ್ದಾರೆ. ೩ ತಿಂಗಳ ಬಳಿಕ, ರಾಜಾಸ್ಥಾನದ ಕೋಟ ಹತ್ತಿರದ 'ರವರ್ ಭಾಟ' ಎಂಬ ಚಿಕ್ಕ ಗ್ರಾಮ ಕ್ಕೆ ವರ್ಗವಾಗಿ ಹೋದ ಬಿಸ್ವಜಿತ್, ತಮ್ಮ ಮಗಳನ್ನು . ೮ ನೆಯ ಗ್ರೇಡ್ ಮುಗಿಯುವ ವರೆಗೆ ೧೩ ವರ್ಷಗಳ ಕಾಲ 'ಆಟೋಮಿಕ್ ಎನರ್ಜಿಕೆಲಸಗಾರರ ಶಾಲೆಯಲ್ಲಿ ವಿದ್ಯಾರ್ಜನೆ ಮಾಡಲು ನೆರವಾದರು. ಶ್ರೇಯಾ ರಿಗೆ ೭ ವರ್ಷ ಚಿಕ್ಕವರಾದ 'ಸೌಮ್ಯ ಘೋಷಾಲ್' ಎನ್ನುವ ತಮ್ಮ ನಿದ್ದಾನೆ. 'ರವರ್ ಭಾಟ' ಒಂದು ಸುಂದರ ಹಾಗೂ ಸಂಗೀತ, ನಾಟಕ, ಮೊದಲಾದ ಕಾರ್ಯಕ್ರಮಗಳಿಗೆ ಬಹಳ ಅನುಕೂಲವಾದ ಸ್ಥಳವಾಗಿತ್ತು. ಶ್ರೇಯಾ ೪ ನೆಯ ವಯಸ್ಸಿನಲ್ಲಿದ್ದಾಗಲೇ ತಾಯಿಯವರ ಹಾಡಿಗೆ ಹಾರ್ಮೋನಿಯಂ ಶೃತಿ-ಸಾಂಗತ್ಯ ನೀಡುತ್ತಿದ್ದರು. ತಂದೆಯವರಿಗೆ ೧೯೯೭ ರಲ್ಲಿ ಬೊಂಬಾಯಿನ ಶಾಖೆಗೆ ವರ್ಗವಾಯಿತು. ಆಗ ಅಣುಶಕ್ತಿನಗರದಲ್ಲಿದ್ದ 'ಆಟೋಮಿಕ್ ಎನರ್ಜಿ ಕಾಲೇಜ್ ನಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಂಡು ತಮ್ಮ ಪದವಿಯನ್ನು ಪಡೆಯಲು ಮುಂದಿನ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಆಗಲೇ ಬಾಲಿವುಡ್ ಕ್ಷೇತ್ರದಲ್ಲಿ ಹಾಡುಗಾರಿಕೆಯನ್ನು ಆರಂಭಿಸಿದ ಶ್ರೇಯಾ, ವಿಜ್ಞಾನದ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಅಸಮರ್ಥರಾದರು. ಆಗ ಅವರ ತಂದೆಯವರು, ಬೊಂಬಾಯಿನ ಉಪನಗರದ ಸಯಾನ್ ನಲ್ಲಿದ್ದ ಎಸ್. ಐ. ಇ. ಎಸ್. ಕಾಲೇಜಿನಲ್ಲಿ ಆರ್ಟ್ ವಿಷಯವನ್ನು ಅಭ್ಯಸಿಸಲು ಪ್ರೋತ್ಸಾಹಿಸಿದರು. ತನ್ನ ಮಾತೃಭಾಷೆ ಬೆಂಗಾಳಿ. ಇದಲ್ಲದೆ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಮರಾಠಿ, ಅಸ್ಸಾಮಿ, ಪಂಜಾಬಿ, ಇಂಗ್ಲೀಷ್, ಮತ್ತು ಬೆಂಗಾಲಿಯಲ್ಲಿ ಹಾಡುಗಳನ್ನು ಅತಿ ಸುಲಭವಾಗಿ ಹಾಡುವ ಕಲೆಯನ್ನು ಶ್ರೇಯಾ ರಕ್ತಗತ ಮಾಡಿಕೊಂಡಿದ್ದಾರೆ. . ಹಿಂದೂಸ್ಥಾನಿ ಸಂಗೀತವನ್ನು ಕೋಟಾದ 'ಮಹೇಶ್ಚಂದ್ರ ಶರ್ಮಾ'ರ ಬಳಿ ಅಭ್ಯಾಸ ಮಾಡಿದರು. ಶ್ರೇಯಾ ತನ್ನ ಹಾಡುಗಾರಿಕೆಯನ್ನು ಆರಂಭಿಸಿ ಹಾಡಿದ ಪ್ರಥಮ ಗೀತೆ ಹಿಂದಿ ಚಲನಚಿತ್ರದ 'ದೇವದಾಸ್ ಚಿತ್ರ'ದಲ್ಲಿ. ಹಾಡುಗಾರಿಕೆಗೆ 'ರಾಷ್ಟ್ರಪ್ರಶಸ್ತಿ', ಹಾಗೂ 'ಫಿಲಂ ಫೇರ್ ಪ್ರಶಸ್ತಿ' ದೊರೆಯಿತು. 'ಶ್ರೇಯಾ ಘೋಷಾಲ್' ಒಟ್ಟಾರೆ ಚಿತ್ರಗಳಲ್ಲಿ ಹಾಡಿದ ಹಾಡುಗಳ ಸಂಖ್ಯೆ, ೨೫೦ ಕ್ಕೂ ಮೀರಿದೆ.[೨]

ಸ ರಿ ಗ ಮ ಪ ವೇದಿಕೆಯಲ್ಲಿ[ಬದಲಾಯಿಸಿ]

ಬಾಲಪ್ರತಿಭೆಯಾಗಿ ಸ ರೆ ಗ ಮ ಪ ದ ತೀರ್ಪುಗಾರಾಲ್ಲಿ ಒಬ್ಬರಾಗಿದ 'ಕಲ್ಯಾಣ್ಜಿ ಆನಂದ್ಜಿ'. ಬಾಲಕಿ ಶ್ರೇಯಾ ಘೋಷಾಲರ ತಂದೆತಾಯಿಯರಿಗೆ ಮನಒಲಿಸಿ ಅವಳನ್ನು ಮುಂಬೈನಗರಕ್ಕೆ ಬರಲು ಆಹ್ವಾನಿಸಿ, ಅಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ಅನುವುಮಾಡಿಕೊಡುವುದಾಗಿ ಭರವಸೆಇತ್ತರು. ಅವರೇ ೧೮ ತಿಂಗಳು ತರೆಬೇತಿ ನೀಡಿದರು. 'ಮುಕ್ತಾ ಭಿಡೆ'ಯವರ ಶಾಸ್ತ್ರೀಯ ಸಂಗೀತ ಅಭ್ಯಾಸ. ಓದಿನಲ್ಲೂ ಹಿಂದೆ ಬೀಳದೆ, 'ಆಟೋಮಿಕ್ ಎನರ್ಜಿ ಸಿಬ್ಬಂದಿ ವ'ರ್ಗದ ಮಕ್ಕಳಿಗಾಗಿ ನಿರ್ಮಿಸಿದ ಶಾಲೆಗಳಲ್ಲಿ ಓದಿಪದವಿ ಗಳಿಸಿದರು.[೩] ಬಾಲಕಿ ಸರೆಗಮಪ ಪ್ರಶಸ್ತಿ ಗೆದ್ದಿದ್ದ ಶ್ರೇಯಾ ಎರಡನೆಯ ಬಾರಿಗೆ ಪ್ರೌಢ ಗಾಯಕಿಯಾಗಿ ಸರೆಗಮಪ ವೇದಿಕೆಗೆ ಸ್ಪರ್ದಾರ್ಥಿಯಾಗಿ ಬಂದಾಗ ಪ್ರಸಿದ್ಧ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲ್ ಪ್ರತಿಭೆಗೆ ಮಾರುಹೋದರು. ಅವರ ಚಿತ್ರದಲ್ಲಿ ಹಾಡಲು ಅವಕಾಶ ಕೊಟ್ಟರು. ಐಶ್ವರ್ಯ ರಾಯ್ ರಿಗೆ ೫ ಹಾಡುಗಳಿಗೆ ಧ್ವನಿ ನೀಡಿದ್ದರು. ಎ. ಆರ್. ರೆಹಮಾನ್, ಇಳಯರಾಜ, ಮತ್ತಿತರ ಚಿತ್ರ ನಿರ್ದೇಶಕರನ್ನು ಆಕರ್ಶಿಸಿದರು. ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡಿರುವ ಘೋಷಾಲ್,ಕನ್ನಡದಲ್ಲಿ ಹಾಡಿದ ಹಾಡುಗಳು ಹೀಗಿವೆ.

 • ಏನೋ ಒಂಥರ ಏನೋ ಒಂಥರ ಈ ಪ್ರೀತಿಯು ಈ ರೀತಿಯು ಶುರುವಾದ ಅನಂತರ,
 • ಓಗುಣವಂತ ! ನೀನೆಂದು ನನ ಸ್ವಂತ,
 • ಆಹಾ ಎಂಥ ಆ ಕ್ಷಣ
 • ಉಲ್ಲಾಸ ಹೂ ಮಳೆ,
 • ನಿನ್ನ ನೋಡಲೆಂತೋ ಮಾತನಾಡಲೆಂತೊ
 • ತನ್ಮಳಾದೆನು ತಿಳಿಯುವ ಮುನ್ನವೆ
 • ಹೇ ಹೂವೆ ನೀ ಅರಳೋ ಮುಂಜಾನೆ
 • ಸವಿಯೋ ಸವಿಯೋ ಒಲವಿನ ನೆನಪು,
 • ದೂರದಿಂದ ನೋಡ್ತಾರೋ
 • ಸೂರಿ ಸೂರಿ
 • ಶುರು ಶುರು

ಪ್ರಶಸ್ತಿಗಳ ಸುರಿಮಳೆ[ಬದಲಾಯಿಸಿ]

 • ದೇವದಾಸ್ ಚಿತ್ರದ ಬೈರಿ ಪಿಯಾ,
 • ಪಹೇಲಿ ಚಿತ್ರದ ಧೀರೇ ಜೈನಾ
 • ಬಬ್ ವಿ ಮೆಟ್ ಚಿತ್ರದ ಯೇ ಇಷ್ಕ್ ಹೈ ಅಲ್ಲದೆ

ಬಂಗಾಳಿ ಮತ್ತು ಮರಾಠಿ ಚಿತ್ರಗಳ ಗಾಯನಕ್ಕಾಗಿ ೪ ಬಾರಿ ಪ್ರಶಸ್ತಿಗಳಿಸಿದ್ದಾರೆ. ಉಳಿದ ಭಾಷೆಗಳಿಗೂ ಲೆಕ್ಕವಿಲ್ಲದಷ್ಟು ಗೀತೆಗಳನ್ನು ಹಾಡಿದ್ದಾರೆ.

ಅಮೆರಿಕದ ಒಹೈ ನಗರದಲ್ಲಿ[ಬದಲಾಯಿಸಿ]

ಅಮೆರಿಕದ 'ಒಹೈ ರಾಜ್ಯ'ದ ಅದೇ ಹೆಸರಿನ ನಗರದಲ್ಲಿ ಗೌರವಾರ್ಥವಾಗಿ ಆಯೋಜಿಸಿದ್ದ ಆ ಪ್ರಾಂತ್ಯದ ರಾಜ್ಯಪಾಲ, 'ಟೆಡ್ ಸ್ಟ್ರಿಕ್ ಲ್ಯಾಂಡ್ 'ಜೂನ್ ೨೬ ರ ದಿನವನ್ನು 'ಶ್ರೇಯಾಘೋಷಾಲ್ ದಿನ'ವೆಂದು ಘೋಷಿಸಿದರು. ೨೯ ರ ಹರೆಯದಲ್ಲಿ ಇಷ್ಟು ದೊಡ್ಡ ಸಾಧನೆ. ಘೋಷಾಲ್ ಹಾಡಿದ ಸುಶ್ರಾವ್ಯ ಹಾಡುಗಳು ರಾಷ್ಟ್ರದ ಮತ್ತು ವಿದೇಶದ ಸರ್ವಭಾಷೀಯರೂ ತಮ್ಮ ಏಕಾಂತದ ಕ್ಷಣಗಳಲ್ಲಿ ಗುನುಗಲು ಅನುವುಮಾಡಿಕೊಟ್ಟ ಅಪರೂಪದ ಹಾಡುಗಾತಿಯಾಗಿ ಮೆರೆದ ಶ್ರೇಯಸ್ಸು, ಶ್ರೇಯಾರವರದು.ಸಿನಿಮಾಗಳಲ್ಲಿ ಧ್ವನಿಮುದ್ರಿಕೆಗಳಲ್ಲಿ ಹಾಡುವುದರ ಜೊತೆಗೆ ,ವಿವಿಧ ಪ್ರತಿಭಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಸಾಕಷ್ಟು ಗಾಂಭೀರ್ಯದಿಂದ ಕಾಣಿಸಿಕೊಳ್ಳುವಸೌಜನ್ಯವತಿ ಎಂದು ಗುರುತಿಸಲ್ಪಟ್ಟಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]