ವಿಷಯಕ್ಕೆ ಹೋಗು

ಕಲ್ಯಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೋಗಾನಂದೀಶ್ವರ ದೇವಸ್ಥಾನದ ಕಲ್ಯಾಣಿ

ಭಾರತೀಯ ದೇವಾಲಯಗಳ ಮುಂಭಾಗದಲ್ಲಿ ಅಥವಾ ದೇವಾಲಯ ಸಂಕೀರ್ಣದ ಭಾಗವಾಗಿ ನೀರನ್ನು ಸಂಗ್ರಹಿಸುವ ಒಂದು ವ್ಯವಸ್ಥೆ. ಭಾರತದ ವಿವಿಧ ಭಾಷೆಗಳಲ್ಲಿ ಕಲ್ಯಾಣಿಗಳನ್ನು ಪುಷ್ಕರಿಣಿ, ತೀರ್ಥ, ಕುಂಡ, ಸರೋವರ ಎಂಬ ವಿವಿಧ ಹೆಸರುಗಳಿಂದ ಕೂಡ ಕರೆಯಲಾಗುತ್ತದೆ. ಹಿಂದೂ ದೇವಾಲಯಗಳಿಗೂ ಕಲ್ಯಾಣಿಗಳಿಗೂ ಒಂದು ವಿಶೇಷ ನಂಟು ಇದೆ ಎನ್ನಬಹುದು. ಕೆಲವು ಬದಿಗಳಲ್ಲಿ ಹಲವು ಮೆಟ್ಟಿಲುಗಳನ್ನು ಹೊಂದಿರುವ ಜಲಾಶಯಗಳು ಇವಾಗಿವೆ. ದೇವಾಲಯಗಳಲ್ಲಿ ಪ್ರಾರ್ಥನೆಗೆ ಮೊದಲು ಸ್ನಾನ ಮಾಡಲು ಇವುಗಳ ಬಳಕೆ ಮಾಡಲಾಗುತ್ತದೆ.

ಕಲ್ಯಾಣಿಗಳ ವಿನ್ಯಾಸ

[ಬದಲಾಯಿಸಿ]
ಹಂಪಿಯಲ್ಲಿರುವ ಕೃಷ್ಣ ಕಲ್ಯಾಣಿ

ಪ್ರಾಚೀನ ಕಾಲದಿಂದಲೂ ಭಾರತದ ದೇವಾಲಯಗಳ ವಾಸ್ತುಶಿಲ್ಪದಲ್ಲಿ ನೀರಿನ ಸಂಗ್ರಹದ ವಿನ್ಯಾಸವು ಮಹತ್ವದ್ದಾಗಿದೆ. ವಿಶೇಷವಾಗಿ ಪಶ್ಚಿಮ ಭಾರತದಲ್ಲಿ ಬೇಸಿಗೆ ಮತ್ತು ಮಳೆಗಾಲಗಳು ಪರ್ಯಾಯವಾಗಿರುವದರಿಂದ ಕಲ್ಯಾಣಿಗಳ ಬಳಕೆ ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕಲ್ಯಾಣಿಗಳ ವಿನ್ಯಾಸವು ಸ್ವತಃ ಒಂದು ಕಲಾ ಪ್ರಕಾರ []. ಆಧುನಿಕ ನಗರವಾದ ಹಂಪಿಯನ್ನು ಸುತ್ತುವರೆದಿರುವ, ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ, ವಿಜಯನಗರದ ಅವಶೇಷಗಳಲ್ಲಿರುವ ಜ್ಯಾಮಿತೀಯವಾಗಿ ಅದ್ಭುತವಾದ ಕೃಷ್ಣ ಕಲ್ಯಾಣಿಯು ಕಲ್ಯಾಣಿಗಳ ವಿನ್ಯಾಸದ ಕಲೆಗೆ ಒಂದು ಉದಾಹರಣೆಯಾಗಿದೆ.

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಕಲ್ಯಾಣಿ&oldid=1250010" ಇಂದ ಪಡೆಯಲ್ಪಟ್ಟಿದೆ