ಬನಶಂಕರಿ
ಬನಶಂಕರಿ' ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಒಂದು ಬಡಾವಣೆ. ಬನಶಂಕರಿ ಪ್ರದೇಶ ಬೆಂಗಳೂರಿನ ದೊಡ್ಡ ಪ್ರದೇಶಗಳಲ್ಲಿ ಒಂದಾಗಿದೆ. ಬನಶಂಕರಿ ದೇವಾಲಯ ಇರುವ ಪ್ರದೇಶವನ್ನು 'ಬನಶಂಕರಿ' ಎಂದು ಕರೆಯಲ್ಪಟ್ಟರೂ, ಅದು ಪ್ರಸ್ತುತ ಜಯನಗರ 8ನೇ ಬ್ಲಾಕ್ ಗೆ ಸೇರಿರುತ್ತದೆ. ಬನಶಂಕರಿ ಬಡಾವಣೆ ಒಟ್ಟು 5 ಹಂತಗಳನ್ನು ಹೊಂದಿದೆ.
- 1ನೇ ಹಂತ: ಶ್ರೀನಿವಾಸನಗರ, ಮೈಸೂರು ಬ್ಯಾಂಕ್ ಕಾಲೊನಿ, ಸೀತಾ ವೃತ್ತ.
- 2ನೇ ಹಂತ: ಮೋನೋಟೈಪ್, ಕದಿರೇನಹಳ್ಳಿ, ಟೀಚರ್ಸ್ ಕಾಲೋನಿ
- 3ನೇ ಹಂತ: ಕತ್ರಿಗುಪ್ಪೆ, ದತ್ತಾತ್ರೆಯನಗರ, ಹೊಸಕೆರೆಹಳ್ಳಿ, ಇಟ್ಟಮಡು
- 5ನೇ ಹಂತ: ಇಸ್ರೋ ಬಡಾವಣೆ, ಬಿಕಾಸೀಪುರ, ವಸಂತಪುರ, ಚನ್ನಸಂದ್ರ, ಪೂರ್ಣ ಪ್ರಜ್ಞ ಬಡಾವಣೆ.
- 6ನೇ ಹಂತ: ಗಾಣಕಲ್ಲು, ಕರಿಯಣ್ಣನಪಾಳ್ಯ, ಹೊಸ ಬಿ ಡಿ ಎ ಬಡಾವಣೆ, ವಾಜಾರಹಳ್ಳಿ, ಕರಿಷ್ಮಾ ಹಿಲ್ಸ್, ತುರಹಳ್ಳಿ

Banashankari ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.