ಎಸ್‌ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಹಾಗೂ ರಾಜೀವ್ ಗಾಂಧಿ ಎದೆರೋಗ ಸಂಸ್ಥೆ

ವಿಕಿಪೀಡಿಯ ಇಂದ
Jump to navigation Jump to search
ಎಸ್‌ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಹಾಗೂ ರಾಜೀವ್ ಗಾಂಧಿ ಎದೆರೋಗ ಸಂಸ್ಥೆ
SDS Tuberculosis and Rajiv Gandhi Institute of Chest diseases
Geography
ಸ್ಥಳಬೆಂಗಳೂರು, ಕರ್ನಾಟಕ, ಭಾರತ
Organisation
Fundingಕರ್ನಾಟಕ ಸರ್ಕಾರದ ಸ್ವಾಯತ್ತತ ಸಂಸ್ಥೆ
ಅಂಗಸಂಸ್ಥೆಸಂಶೋಧನ ಮತ್ತು ಚಿಕಿತ್ಸಾ ಕೇಂದ್ರ
History
ಸ್ಥಾಪನೆ1948 [೧]
Links
ಜಾಲತಾಣwww.sdstrcrgicd.org

ಎಸ್‌ಡಿಎಸ್ ಕ್ಷಯ ಮತ್ತು ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ (ಹಿಂದೆ ಎಸ್‌ಡಿಎಸ್ ಕ್ಷಯರೋಗ ಆರೋಗ್ಯ ಕೇಂದ್ರ ,ಶಾಂತಾಬಾಯಿ ದೇವರಾವ್ ಶಿವರಾಮ್ ಕ್ಷಯ ಮತ್ತು ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ)ಯು ಕರ್ನಾಟಕ ಸರಕಾರದ ಸ್ವಾಯತ್ತತಾ ಸಂಸ್ಥೆಯಾಗಿದೆ (ಆಸ್ಪತ್ರೆ).ಬೆಂಗಳೂರು ವೈದ್ಯಕೀಯ ಮಹಾವಿದ್ಯ್ಲಾಲಯ ಮತ್ತು ಸಂಶೋಧನಾ ಕೇಂದ್ರದೊಂದಿಗೆ ಸಂಯೋಜಿತಗೊಂಡಿದೆ.ಕ್ಷಯರೋಗ ಮತ್ತು ಎದೆಯ ರೋಗಗಳ ಚಿಕಿತ್ಸೆಯಲ್ಲಿ ವಿಶೇಷ ಚಿಕಿತ್ಸಾ ಸೌಲಭ್ಯ ಹೊಂದಿರುವ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವಾಗಿದೆ.ಈ ಸಂಸ್ಥೆ ಬೆಂಗಳೂರಿನ ಹೊಸೂರು ರಸ್ತೆಯಲ್ಲಿದೆ.[೨]

ಹಿನ್ನಲೆ[ಬದಲಾಯಿಸಿ]

ಎಸ್‌ಡಿಎಸ್ ಕ್ಷಯರೋಗ ಆರೋಗ್ಯ ಕೇಂದ್ರಕ್ಕೆ ದಾನಿಗಳಾದ ದೇವರಾವ್ ಶಿವರಾಮರ ಪತ್ನಿ ಶಾಂತಾಬಾಯಿ ಶಿವರಾಮ ದೇವರಾವ್ ರವರ ಸ್ಮರಣಾರ್ಥ ಹೆಸರಿಡಲಾಗಿದೆ. ನಂತರ, ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಸಂಯೋಜನೆಗೊಂಡು ತರಬೇತಿ ಆಸ್ಪತ್ರೆಯಾಗಿ ಬದಲಾಯಿತು. ಕರ್ನಾಟಕ ಸರ್ಕಾರದ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಾಜೀವ್ ಗಾಂಧಿ ರಾಜೀವ್ ಗಾಂಧಿ ಎದೆರೋಗ ಸಂಸ್ಥೆ ಎಂದು ಹೆಸರಿಡಲಾಗಿದೆ.ಆದಾಗ್ಯೂ ಸ್ಥಳೀಯರು ಇದನ್ನು ಇನ್ನೂ ಟಿಬಿ ಆಸ್ಪತ್ರೆ ಎಂದು ಕರೆಯುತ್ತಾರೆ.[೩]

ಸೌಲಭ್ಯಗಳು[ಬದಲಾಯಿಸಿ]

ಎದೆಗೂಡಿಗೆ ಸಂಬಂಧಿತ ರೋಗಗಳ ಕ್ಷೇತ್ರದಲ್ಲಿ ಅತ್ಯುತ್ತಮ ಪರಿಣತಿ ಹೊಂದಿರುವ ಈ ಭಾಗದ ಮೊದಲ ಆಸ್ಪತ್ರೆಯಾಗಿದೆ .ಕ್ಷಯ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಪ್ರಕಾರದ ರೋಗಗಳಿಗೆ ವೈದ್ಯಕೀಯವಾಗಿ ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸುವ ಸೌಲಭ್ಯವನ್ನು ಹೊಂದಿದೆ . ಎದೆಯ ಗಾಯ ಮತ್ತು ಆಘಾತ ರಕ್ಷಣೆ ಉಲ್ಲೇಖಿತ ಆಸ್ಪತ್ರೆಯಾಗಿದೆ.[೪]

ವಿಭಾಗಗಳು[ಬದಲಾಯಿಸಿ]

  • ಡಿಪಾರ್ಟ್ಮೆಂಟ್ ಆಫ್ ಪಲ್ಮೋನೊಲೊಜಿ
  • ಡಿಪಾರ್ಟ್ಮೆಂಟ್ ಆಫ್ ಕಾರ್ಡಿಒ ತೋರಸಿಕ್ ಸರ್ಜರಿ

ಉಲ್ಲೇಖಗಳು[ಬದಲಾಯಿಸಿ]