ಬ್ಯೂಗಲ್ ರಾಕ್
ಬ್ಯೂಗಲ್ ರಾಕ್ Bugle Rock | |
---|---|
neighbourhood | |
Coordinates: 12°56′N 77°34′E / 12.94°N 77.57°E | |
Country | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಬೆಂಗಳೂರು ನಗರ ಜಿಲ್ಲೆ |
Metro | ಬೆಂಗಳೂರು |
Languages | |
• Official | ಕನ್ನಡ |
Time zone | UTC+5:30 (IST) |
ಬೆಂಗಳೂರು ನಿರ್ಮಾತೃ ಮಾಗಡಿ ಕೆಂಪೇಗೌಡನ ಒಂದು ಸರಹದ್ದು ಬ್ಯೂಗಲ್ ರಾಕ್ ಎಂಬ ಕಹಳೆ ಬಂಡೆಯಲ್ಲಿದೆ. ಗಡಿ ಕಾಯುವ ದಳಪತಿಗಳು ಬಸವನಗುಡಿ ಸಮೀಪದ ಗುಡ್ಡದ ಮೇಲಿನ ಸ್ತೂಪವೊಂದರ ಮೇಲೆ ಪರಿವೀಕ್ಷಣೆ ಮಾಡುತ್ತಿದ್ದರಂತೆ.ಸರತಿಯಂತೆ ಕಹಳೆ ಹೊತ್ತ ಯೋಧರು ಶತ್ರುಗಳ ಪ್ರವೇಶವನ್ನು ಕಹಳೆ ಮೊಳಗಿಸುವ ಮೂಲಕ ತಿಳಿಸುತ್ತಿದ್ದರಂತೆ. ಸುಮಾರು ಮೂರು-ನಾಲ್ಕು ದಶಕಗಳ ಹಿಂದೆ ಇಲ್ಲಿ ಸೇವಾದಳ ನಡೆಸಲಾಗುತ್ತಿತ್ತು. ಅಲ್ಲಿಗೆ ಬಡಾವಣೆಯ ಹುಡುಗರು ಹೋಗುತ್ತಿದ್ದುದರ ನೆನಪು, ಕಾನ್ಕಾನ ಹಳ್ಳಿ ಗೋಪಿಯವರು ತರಗತಿಗಳನ್ನು ನಡೆಸುತ್ತಿದ್ದುದು, ಆ ಶಿಸ್ತು....ಆ ಸ್ಫೂರ್ತಿ... ಆ ಪೀಳಿಗೆಯವರಿಗೆ ಅಲ್ಲಿಗೆ ಹೋದಾಗಲೆಲ್ಲ ನೆನಪಿಗೆ ಬರುವುದರಲ್ಲಿ ಸಂದೇಹವೇ ಇಲ್ಲ ![೧][೨] ಸದ್ಯಕ್ಕೆ ಇಲ್ಲಿನ ಉದ್ಯಾನವನ ಅಂದವಾಗಿ ನಿರ್ಮಾಣವಾಗಿದೆ. ಉಬ್ಬು -ತಗ್ಗು ಪ್ರದೇಶವಾದ ಕಾರಣ ಹಸಿರಿನ ಹರವು ಕಣ್ಮನಗಳನ್ನು ತಣಿಸುತ್ತಾ, ಮುಂಜಾನೆ-ಮುಸ್ಸಂಜೆ ವಾಯುವಿಹಾರಕ್ಕೂ , ಲಘು ವ್ಯಾಯಾಮಕ್ಕೆ ಸೂಕ್ತವಾದ ಸ್ಠಳವೂ ಆಗಿದೆ. ವಾರಾಂತ್ಯಗಳಲ್ಲಿ ಸಂಗೀತ ಕಾರಂಜಿಯ ವ್ಯವಸ್ಠೆ ಇದೆ. ಬಸವನಗುಡಿ ಹಾಗೂ ಹನುಮಂತನಗರದ ಸಾಂಸ್ಕೃತಿಕ ಸಂಘಟನಾ ಕೂಟಗಳು ಸಮೀಪದಲ್ಲಿವೆ. ಆಗ್ಗಾಗ್ಗೆ ವಾದ್ಯಗೋಷ್ಠಿಗಳು ಇಲ್ಲಿ ನಡೆಯುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ Bull Temple and Bugle Rock
- ↑ ನೆನಪಿನ ಕೋಟೆ ಬ್ಯೂಗಲ್ ರಾಕ್ www.prajavani.net[ಶಾಶ್ವತವಾಗಿ ಮಡಿದ ಕೊಂಡಿ]
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |