ಗವಿ ಗಂಗಾಧರೇಶ್ವರ ದೇವಾಲಯ, ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಂಗಳೂರು ಗವಿಗಂಗಾಧರೇಶ್ವರ ಶಿವಾಲಯ
ಓಂ ನಮಃ ಶಿವಾಯ
ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ
ಧಾರ್ಮಿಕತೆ
ಧರ್ಮಹಿಂದೂ
ಪಂಥಕನ್ನಡ ಶೈವ
ದೇವರುಪರಶಿವ (ಲಿಂಗದೇವ)
ಹಬ್ಬಗಳುಸೋಮವಾರ, ಸಂಕ್ರಾಂತಿ, ಶಿವರಾತ್ರಿ, ಶ್ರಾವಣ ಮಾಸ
ಉತ್ಸವಗಳುಮಕರಸಂಕ್ರಾತಿ
ಸ್ಥಳ
Map
ಶಿವಾಲಯ
12°56′53″N 77°33′47″E / 12.948156°N 77.562942°E / 12.948156; 77.562942
ರಾಜ್ಯಕರ್ನಾಟಕ
ಜಿಲ್ಲೆಬೆಂಗಳೂರು ನಗರ
ತಾಲೂಕುಬೆಂಗಳೂರು ದಕ್ಷಿಣ
ಊರುಗವಿಪುರ, ಕೆಂಪೇಗೌಡ ನಗರ, ಬೆಂಗಳೂರು
ಇತಿಹಾಸ
ಸ್ಥಾಪನೆ೯ನೇ ಶತಮಾನ
ಶಿಲ್ಪಕಲೆ
ಶೈಲಿದ್ರಾವಿಡ
ಸಂಪರ್ಕ
ಜಾಲತಾಣkarnataka.gov.in
ಕನ್ನಡ ವಚನ ಸಾಹಿತ್ಯ

ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ,
ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ,
ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ,
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ,
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ,
ಕೂಡಲಸಂಗಮದೇವ ಶ್ವಪಚನ ಮೆರೆದಡೆ,
ಜಾತಿಭೇದವ ಮಾಡಲಮ್ಮವು.
 - ಗುರು ಬಸವಣ್ಣ

ಬೆಂಗಳೂರಿನ ಕೆಂಪೇಗೌಡನಗರ (ಗವಿಪುರಂ ಗುಟ್ಟಹಳ್ಳಿ) ಯಲ್ಲಿರುವ ಈ ದೇವಾಲಯ, ಬೆಂಗಳೂರಿನ ಬಸವನಗುಡಿ ವಲಯದಲ್ಲಿದೆ. ಶ್ರೀಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಭಾರತದಲ್ಲಿರುವ ಕೆಲವೇ ಕೆಲವು ಪ್ರಾಚೀನ ಗುಹಾಂತರ ದೇವಾಲಯಗಳಲ್ಲೊಂದು. ಹಲವು ವೈಶಿಷ್ಟ್ಯಗಳಿಂದ ಕೂಡಿದ, ಈ ಪ್ರಾಚೀನ ದೇವಾಲಯದ ವಾಸ್ತು ವಿನ್ಯಾಸ ಅತ್ಯಂತ ಮನಮೋಹಕವಾಗಿದೆ, ಬೆಂಗಳೂರಿನಲ್ಲಿರುವ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪ್ರತಿವರ್ಷ 'ಮಕರ ಸಂಕ್ರಾತಿಯ ದಿನ' ಸಂಜೆ ಸೂರ್ಯನ ಕಿರಣಗಳು ಲಿಂಗದ ಮುಂದಿರುವ ನಂದಿಯ ಕೊಂಬಿನಿಂದ ಹಾದು, ಶಿವಲಿಂಗವನ್ನು ಸ್ಪರ್ಶಿಸುತ್ತದೆ. ಈ ದೃಷ್ಯವನ್ನು ವೀಕ್ಷಿಸಲು ಸಾವಿರಾರು ಶ್ರದ್ಧಾಳುಗಳು ಬಹಳ ದೂರ ಪ್ರದೇಶಗಳಿಂದ ಬರುತ್ತಾರೆ. 'ಸ್ವಯಂಭು'ವೆಂದು ಪ್ರಸಿದ್ಧಿಪಡೆದ ಈಕ್ಷೇತ್ರದಲ್ಲಿ 'ಗೌತಮ ಮಹರ್ಷಿ'ಗಳು ಈ ಗುಹಾಂತರ ದೇವಾಲಯದಲ್ಲಿ ತಪಸ್ಸನ್ನು ಆಚರಿಸಿದರೆಂದು ಇತಿಹಾಸವಿದೆ. ಇಲ್ಲಿನ ಶಿವಲಿಂಗಕ್ಕೆ ತ್ರಿಕಾಲ ಪೂಜೆ ಸಲ್ಲಿಸುತ್ತಿದ್ದರೆಂದು ಸ್ಥಳ ಪುರಾಣ ಸಾರುತ್ತದೆ. ಹೀಗಾಗಿ ಇದಕ್ಕೆ ಗೌತಮ ಕ್ಷೇತ್ರ ಎಂದೂ ಹೆಸರು ಬಂದಿದೆ. ಈ ದೇವಾಲಯ ಗರ್ಭಗುಡಿಯ ಸುತ್ತ ಇರುವ ಗುಹಾ ಮಾರ್ಗದಲ್ಲಿ ಗೌತಮ ಮಹರ್ಷಿಗಳ ಹಾಗೂ ಭಾರದ್ವಾಜರ ಶಿಲಾಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿದೆ. ಮಾರ್ಗದಲ್ಲಿ ಸಪ್ತ ಮಾತೃಕೆಯರಾದ 'ಬ್ರಾಹ್ಮೀ', 'ಮಾಹೇಶ್ವರಿ', 'ವಾರಾಹಿ', 'ಚಾಮುಂಡಿ', 'ವೈಷ್ಣವಿ' ಹಾಗೂ 'ಶ್ರೀದೇವಿ', 'ಭೂದೇವಿ'ಯ ವಿಗ್ರಹಗಳೂ ಇವೆ. ಸುಮಾರು ೨೦ ಸಾವಿರವರ್ಷಗಳ ಐತಿಹ್ಯವಿರುವ ಈದೇವಾಲಯದ ಶಿವಲಿಂಗ ದಕ್ಷಿಣಾಭಿಮುಖವಾಗಿರುವುದೇ ಇಲ್ಲಿಯ ವಿಶೇಷತೆಗಳಲ್ಲೊಂದು.

'ಶಿವನ ಬಲಭಾಗದಲ್ಲಿ ಪಾರ್ವತಿ'[ಬದಲಾಯಿಸಿ]

ಮತ್ತೊಂದು ವಿಶೇಷ, ಪಾರ್ವತಿದೇವಿಯು ಶಿವನ ಬಲಭಾಗದಲ್ಲಿ ಆಸೀನಳಾಗಿರುವುದು. ಈ ದೇವಾಲಯದ ವಿಶಾಲ ಪ್ರಾಂಗಣದಲ್ಲಿ ಬಹಳ ಅಪರೂಪವಾದ ಹಾಗೂ ಅತ್ಯಂತ ಸುಂದರವಾದ ಶಿಲಾರಚನೆಗಳಿವೆ. ಅತ್ಯಂತ ಸುಂದರ ಹಾಗೂ ರಮಣೀಯವಾದ ಈ ದೇವಾಲಯದ ಮುಂಭಾಗದಲ್ಲಿ ವಿಜಯನಗರ ಶೈಲಿಯ ೧೪ ಕಂಬಗಳಿರುವ ಮಂಟಪವಿದೆ. ಈ ಪೈಕಿ 'ಎರಡು ಸೂರ್ಯಪಾನ', 'ಡಮರುಗ' ಹಾಗೂ 'ತ್ರಿಶೂಲದ ಎತ್ತರದ ಸ್ತಂಭಗಳು' ಈ ದೇವಾಲಯದ ಕೀರ್ತಿಗೆ ಕಳಶದಂತಿವೆ. ಈ ಗುಹಾಂತರ ದೇವಾಲಯದಲ್ಲಿ ಎರಡು ಸುರಂಗ ಮಾರ್ಗಗಳಿದ್ದು, ಒಂದು ಸುರಂಗವು ವಿಶ್ವನಾಥನ ನೆಲೆವೀಡಾದ ಕಾಶಿಗೂ ಹೋಗುತ್ತದೆಂಬುದು ನಂಬಿಕೆ. ಇನ್ನೊಂದು ತುಮಕೂರು ರಸ್ತೆಯಲ್ಲಿರುವ ಶಿವಗಂಗೆಗೆ ಹೋಗುತ್ತದೆ. ಕಾರ್ತೀಕ ಮಾಸದ ಎಲ್ಲ ಸೋಮವಾರ ಹಾಗೂ ಶಿವರಾತ್ರಿಯ ದಿನ ಇಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ. ದೇವಾಲಯದ ಪಕ್ಕದಲ್ಲೇ ಇರುವ ತಿಮ್ಮೇಶಪ್ರಭು ಉದ್ಯಾನದಲ್ಲಿ 'ಸಂಗೀತ, ನೃತ್ಯ ಕಾರಂಜಿ'ಯೂ ಇದೆ. ಪ್ರತಿ ರವಿವಾರದ ಸಂಜೆ ೭ರ ನಂತರ ಇಲ್ಲಿ 'ನೃತ್ಯಕಾರಂಜಿ'ಯನ್ನೂ ವೀಕ್ಷಿಸಲು ಎಲ್ಲ ಕಡೆಯಿಂದಲೂ ಜನರು ಬರುತ್ತಾರೆ.

'ಮಕರ ಸಂಕ್ರಾಂತಿ ದಿನ ಕಾಣುವ ಸೂರ್ಯ ರಷ್ಮಿ'
'ಮಕರ ಸಂಕ್ರಾಂತಿ ದಿನ ಕಾಣುವ ಸೂರ್ಯ ರಷ್ಮಿ'

ಇತಿಹಾಸದ ಪ್ರಕಾರ ಮಾಗಡಿ ಕೆಂಪೇಗೌಡರು ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೊಂಡರು. ಸಮೀಪದಲ್ಲೇಇರುವ ಗೋಸಾಯಿ ಮಠದಲ್ಲಿ ಅವಾನಿಪೀಠ ವಿದೆ. ಕಲ್ಲಿನಲ್ಲಿ ನಿರ್ಮಿಸಿರುವ ಚಂದ್ರಪಾನ, ಪೀನಪಾನ ಹಾಗೂ ಡಮರುಗಳು ಇಲ್ಲಿನ ಆಕರ್ಷಣೆಗಳಲ್ಲೊಂದು. ಇಲ್ಲಿ ಹರಕೆಹೊತ್ತವರಿಗೆ ಅನುಗ್ರಹ ಖಂಡಿತವೆಂದು ಜನರ ನಂಬಿಕೆಯಿದೆ. ಹಾಗಾಗಿ, ಈ ಸ್ಥಳ ಬಹಳ ಪ್ರಸಿದ್ದಿಪಡೆದಿದೆ.

ಚಿತ್ರ ಪಟಗಳು[ಬದಲಾಯಿಸಿ]