ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
Geography
Location ಬೆಂಗಳೂರು, ಕರ್ನಾಟಕ, ಭಾರತ
Coordinates 12°56′15″N 77°35′53″E / 12.9375°N 77.5981°E / 12.9375; 77.5981
Organisation
Funding ಕರ್ನಾಟಕ ಸರ್ಕಾರದ ಸ್ವಾಯತ್ತತ ಸಂಸ್ಥೆ
Affiliated university ಸಂಶೋಧನ ಮತ್ತು ಚಿಕಿತ್ಸಾ ಕೇಂದ್ರ
History
Founded 26 ಜೂನ್ 1973[೧]
Links
Website www.kmio.org

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ (ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ) (Kidwai Memorial Institute of Oncology) ಬೆಂಗಳೂರು, ಕರ್ನಾಟಕ ಸರ್ಕಾರದ ಸ್ವಾಯತ್ತತ ಸಂಸ್ಥೆ ಮತ್ತು ಭಾರತದ ಸರಕಾರದ ಪ್ರಾದೇಶಿಕ ಅರ್ಬುದ ಸಂಶೋಧನ ಮತ್ತು ಚಿಕಿತ್ಸಾ ಕೇಂದ್ರ ಆಗಿದೆ.[೨][೩][೪][೫]ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆನ್ಕಾಲಜಿ ಆಸ್ಪತ್ರೆಯಲ್ಲಿ ಬಡ ಕ್ಯಾನ್ಸರ್ ರೋಗಿಗಳಿಗೆ ಉಚಿತ ಸೇವೆಗಳನ್ನು ಒದಗಿಸುತ್ತದೆ . ಬಡ ರೋಗಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು ಇನ್ಸ್ಟಿಟ್ಯೂಟ್, ಕರ್ನಾಟಕದ ಮುಖ್ಯಮಂತ್ರಿ ವೈದ್ಯಕೀಯ ಪರಿಹಾರ ನಿಧಿ, ಬಡ ರೋಗಿಗಳ ಕಲ್ಯಾಣ ನಿಧಿ, ಮಕ್ಕಳ ಕಲ್ಯಾಣ ನಿಧಿ, ಕಿದ್ವಾಯಿ ಕ್ಯಾನ್ಸರ್ ಡ್ರಗ್ ಫೌಂಡೇಶನ್ ವಿವಿಧ ಯೋಜನೆಗಳಿಂದ ಸಹಾಯ ಮಾಡಲಾಗುತ್ತದೆ.

ಇತಿಹಾಸ[ಬದಲಾಯಿಸಿ]

ಈ ಸಂಸ್ಥೆಯ 26 ಜೂನ್ 1973 ರಂದು 50 ಹಾಸಿಗೆ ಸೌಲಭ್ಯದೊಂದಿಗೆ ಆರಂಭವಾಯಿತು.ಜನವರಿ 1980 ರಲ್ಲಿ ಸಂಸ್ಥೆಯು ಸ್ವಾಯತ್ತತಾ ಸಂಸ್ಥೆಯಾಗಿ ಬದಲಾಯಿತು,ನವೆಂಬರ್ ೧ ೧೯೮೦ ರಂದು ಭಾರತ ಸರ್ಕಾರ ಇದನ್ನು ಪ್ರಾದೇಶಿಕ ಕ್ಯಾನ್ಸರ್ ಸೆಂಟರ್ ನ ಸ್ಥಾನಮಾನ ನೀಡಿತು . ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಈ ಸಂಸ್ಥೆಗೆ ರಿಸರ್ಚ್ ಅಸೋಸಿಯೇಷನ್ ಮಾನ್ಯತೆ ನೀಡಿದೆ. ಇದು ಅತ್ಯಾಧುನಿಕ ಡೈಜಿನೊಸ್ಟಿಕ್ ಮತ್ತು ಚಿಕಿತ್ಸೆಯನ್ನು ಕರ್ನಾಟಕ ,ಆಂಧ್ರಪ್ರದೇಶ ,ತಮಿಳುನಾಡು ಮತ್ತು ಮಹಾರಾಷ್ಟ್ರ ಜನಗಳಿಗೆ ಸೇವೆಯನ್ನು ನೀಡುತ್ತಿದೆ.[೬],[೭],[೮]

ವಿಭಾಗಗಳು[ಬದಲಾಯಿಸಿ]

 • ಸರ್ಜರಿ
 • ರೇಡಿಯೋಥೆರಪಿ
 • ಪೀಡಿಯಾಟ್ರಿಕ್ ಆನ್ಕಾಲಜಿ
 • ವೈದ್ಯಕೀಯ ಆನ್ಕಾಲಜಿ
 • ಹೆಡ್ & ನೆಕ್ ಸರ್ಜರಿ
 • ಒರಲ್ ಸರ್ಜರಿ
 • Gynaecologic ಆನ್ಕಾಲಜಿ
 • Anaesthetic & ನೋವು ಪರಿಹಾರ
 • ರೇಡಿಯೋ ರೋಗನಿರ್ಣಯ
 • ಪೆಥಾಲಜಿ
 • ಮೈಕ್ರೋಬಯಾಲಜಿ.

ಕಿದ್ವಾಯಿ ಕಲಬುರಗಿ ಘಟಕ[ಬದಲಾಯಿಸಿ]

ಕಿದ್ವಾಯಿ ಕ್ಯಾನ್ಸರ್‌ ಕಲಬುರಗಿ ಘಟಕ (ಪೆರಿಫೆರಲ್‌) ಆಸ್ಪತ್ರೆ ಇದೆ. 1990ರಿಂದ ವಿಕಿರಣ ಚಿಕಿತ್ಸೆ ಆಸ್ಪತ್ರೆಯಲ್ಲಿ ಲಭ್ಯವಾಗುತ್ತಿತ್ತು. ಇದೀಗ ಹೊಸ ಲೀನಿಯರ್‌ ಆಕ್ಸಲರೇಟರ್‌, ಸಿಮ್ಯುಲೇಟರ್‌, ಹಾಗೂ ಸುಸಜ್ಜಿತ ಶಸ್ತ್ರ ಚಿಕಿತ್ಸಾ ಘಟಕ ಆರಂಭಿಸಲಾಗಿದೆ. ಇದರ ಜತೆಗೆ, ರಾಜ್ಯ ಸರಕಾರದ ವಿವಿಧ ಆರೋಗ್ಯ ವಿಮಾ ಯೋಜನೆಗಳನ್ನು ಬಳಸಿಕೊಂಡು ಇಲ್ಲಿನ ಕ್ಯಾನ್ಸರ್‌ ಪೀಡಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವದು.[೯]

ಆನ್ಕಾಲಜಿ ಕಾಲೇಜ್[ಬದಲಾಯಿಸಿ]

ಈ ಇನ್ಸ್ಟಿಟ್ಯೂಟ್ ಪದವಿ ವಿದ್ಯಾರ್ಥಿಗಳು, ಪದವಿಪೂರ್ವ ವಿದ್ಯಾರ್ಥಿಗಳು,ಇಂಟರ್ನೀಗಳು (ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ), ರಾಜ್ಯ ,ದೇಶ ಮತ್ತು ಅಂತರ್ರಾಷ್ಟ್ರೀಯ ಅಲೈಡ್ ಸೈನ್ಸಸ್ನ ಮತ್ತು ವೈದ್ಯಕೀಯ ಸಂಸ್ಥೆಗಳ ದಾದಿಯರು ಮತ್ತು ವಿಜ್ಞಾನಿಗಳಿಗೆ ಆನ್ಕಾಲಜಿಯ ವಿವಿಧ ವಿಷಯದ ಬಗ್ಗೆ ತರಬೇತಿ ನೀಡುತ್ತದೆ.[೧೦].

ಇದನ್ನು ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]