ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ

ವಿಕಿಪೀಡಿಯ ಇಂದ
Jump to navigation Jump to search

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯವು ಬೆಂಗಳೂರಿನ ಒಂದು ಪ್ರಮುಖ ಪ್ರವಾಸಿ ಸ್ಥಳ ಹಾಗು ಭಾರತದ ಅತ್ಯುನ್ನತ ವಸ್ತುಸಂಗ್ರಹಾಲಯಗಳಲ್ಲಿ ಒಂದು. ಇದು ಭಾರತ ಸರ್ಕಾರದ 'ರಾಷ್ಟ್ರೀಯ ವೈಜ್ಞಾನಿಕ ಸಂಗ್ರಹಾಲಯಗಳ ಸಭಾ'ಗೆ ಸೇರಿದೆ. ಬೆಂಗಳೂರಿನ ಕಸ್ತೂರ್ಬಾ ರಸ್ತೆಯಲ್ಲಿ ಈ ಸಂಗ್ರಹಾಲಯದ ಕಟ್ಟಡವು ನಿಂತಿದೆ. ಕಬ್ಬನ್ ಉದ್ಯಾನವನ್ನು ಸೇರಿದಂತಯೇ ಇದೆ. ವಿಶ್ವೇಶ್ವರಯ್ಯರವರ ಜನ್ಮ ಶತಾಬ್ದಿ ಆಚರಣೆಯ ಅಂಗವಾಗಿ ೧೯೬೨ ಇಸವಿಯಲ್ಲಿ ಸ್ಥಾಪಿಸಲಾಗಿದೆ. ಅಂದಿನಿಂದ ಇಲ್ಲಿಯ ವರಗೆ ಈ ಸಂಗ್ರಹಾಲಯವು ಮಕ್ಕಳ ಶಿಕ್ಷಣ ಪ್ರವಾಸಗಳಿಗೆ ನೆರವಾಗಿದೆ. ಪ್ರತಿ ವರುಷ ಈ ಸಂಗ್ರಹಾಲಯಕ್ಕೆ ಹತ್ತು ಲಕ್ಷ ಜನ ಬರುತ್ತಾರೆ ಎಂದು ಹೇಳಲಾಗಿದೆ.

ಈ ಕಟ್ಟಡವು, ಕಬ್ಬನ್ ಪಾರ್ಕ್ ನ ೪೦೦೦ ಮೀ ಚದರಡಿ ಪ್ರದೇಶದಲ್ಲಿ ನಿರ್ಮಿಸಲಾಯಿತು. ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ಮತ್ತು ಎಂಜಿನ್‍ಗಳನ್ನು, ಭಾರತದ ಮೊದಲ ಪ್ರಧಾನಿ, ಪಂಡಿತ್ ಜವಾಹರಲಾಲ್ ನೆಹರೂ ರವರು ೧೪ನೇ ಜುಲೈ ೧೯೬೨ ರಲ್ಲಿ ಪ್ರಾರಂಭಿಸಲಾಯಿತು. ಸಂಗ್ರಹಾಲಯದ ಮೊದಲ ಗ್ಯಾಲರಿ 'ಎಲೆಕ್ಟ್ರಿಸಿಟಿ' ವಿಷಯದ ಮೇಲೆ ಸಾರ್ವಜನಿಕರಿಗೆ ೨೭ ಜುಲೈ ೧೯೬೫ ರಂದು ತೆರೆಯಲಾಯಿತು.