ಬೆಂಗಳೂರು ಉಪನಗರ ರೈಲು ಸೇವೆ
ಬೆಂಗಳೂರು ಪ್ರಯಾಣಿಕ ರೈಲು | |
---|---|
Info | |
Locale | ಬೆಂಗಳೂರು,ಕರ್ನಾಟಕ, ಭಾರತ |
Transit type | Suburban Rail |
Number of lines | ೧ |
Number of stations | ೬ |
Operation | |
Began operation | ಏಪ್ರಿಲ್ ೩೦, ೨೦೧೩ |
Operator(s) | ಬೆಂಗಳೂರು ಉಪನಗರ ರೈಲು ಸಂಸ್ಥೆ ನಿಯಮಿತ |
Technical | |
System length | [convert: needs a number] |
Track gauge | ೧,೬೭೬ mm (5 ft 6 in) (broad gauge) |
ಬೆಂಗಳೂರು ಸುತ್ತಮುತ್ತಲಿನ ಪುರ ಮತ್ತು ಪಟ್ಟಣಗಳಿಗೆ ಈಗಾಗಲೇ ಇರುವ ರೈಲುಹಳಿಗಳನ್ನು ಉಪಯೋಗಿಸಿಕೊಂಡು ಸಂಪರ್ಕ ಕಲ್ಪಿಸುವ ವ್ಯವಸ್ಥೆಯೇ ಬೆಂಗಳೂರು ಉಪನಗರ ರೈಲು ಸೇವೆ. ಉಪನಗರ ರೈಲಿನ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಬೇಕೆಂದು ಬಹಳ ದಿನಗಳಿಂದ ಬೇಡಿಕೆಯಿದೆ.
ಈ ರೈಲು ಸೇವೆಯನ್ನು ಒಂದು ಪ್ರತ್ಯೇಕ ಸಂಸ್ಥೆ ಯು ನಡೆಸಬೇಕೆಂದು ನಿರ್ಧರಿತವಾಗಿ, ಅದಕ್ಕಾಗಿ ಬೆಂಗಳೂರು ಉಪನಗರ ರೈಲು ನಿಗಮ ಸ್ಥಾಪಿಸಲಾಗಿದೆ.
೪೦೫ ಕಿಲೋಮೀಟರನಷ್ಟು ಹಳಿಗಳನ್ನೊಳಗೊಂಡ ಈ ಯೋಜನೆಯನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುವುದು: ಹಂತ ೧ ಹಂತ ೨ ಹಂತ ೩
ಇತಿಹಾಸ
[ಬದಲಾಯಿಸಿ]೧೯೬೩ - ಹಿಂದುಸ್ತಾನ ಏರೋನಾಟಿಕ್ಸ್ ನಿಯಮಿತದ ಕಾರ್ಮಿಕರಿಗಾಗಿ ನಗರದಿಂದ ವಿಮಾನಪುರ ರೈಲು ನಿಲ್ದಾಣಕ್ಕೆ ರೈಲು ಸಂಚಾರ ವ್ಯವಸ್ಥೆಯಿದ್ದಿತು.
೧೯೮೩– ದಕ್ಷಿಣ ರೈಲ್ವೆಯ ತಂಡ ೫೮ ಕಿಲೋಮೀಟರ್ ಉದ್ದದ ಮೂರು ಪ್ರಯಾಣಿಕ ವರ್ತುಲ ರೈಲು ಹಳಿಗಳನ್ನು ೨೫ವರ್ಷಗಳ ಅವಧಿಯಲ್ಲಿ ನಿರ್ಮಾಣಕ್ಕೆ ಶಿಫಾರಸು ಮಾಡುತ್ತದೆ.
೧೯೮೮ – ಪ್ರಯಾಣಿಕ ರೈಲು ಹಳಿಗಳ ಅಭಿವೃದ್ಧಿ ಪಡಿಸಬೇಕೆಂಬ ವರದಿಯನ್ನು ರೈಟ್ಸ್ ಸಂಸ್ಥೆ ನೀಡಿತು.
೧೯೯೩ – ದಕ್ಷಿಣ ರೈಲ್ವೆಯ ೧೯೮೩ ಯ ಶಿಫಾರಸಿನಂತ ತ್ವರಿತ ಸಮೂಹ ಸಾರಿಗೆಯ ವರ್ತುಲ ರೈಲು ನಿರ್ಮಾಣಕ್ಕೆ ರಾಜ್ಯ ಸರಕಾರ ಸಮಿತಿಯನ್ನು ನೇಮಿಸುತ್ತದೆ.
೧೯೯೮ – ವಿಶ್ವ ಬ್ಯಾಂಕ್ ನೆರವಿನೊಂದಿಗೆ ಸ್ಥಳೀಯ ರೈಲು ಸೇವೆಗೆ ರೈಟ್ಸ್ ಸಂಸ್ಥೆ ಸರ್ವೇ ಕಾರಯ ಕೈಗೊಳ್ಳುತ್ತದೆ.
೨೦೦೩ – ಸ್ಥಳೀಯ ರೈಲು ಸೇವೆಯ ಸರ್ವೇ ಕಾರ್ಯವನ್ನು ರೈಟ್ಸ್ ಸಂಸ್ಥೆ ಸಲ್ಲಿಸುತ್ತದೆ.
೨೦೦೭ – ರೈಟ್ಸ್ ಸರ್ವೇ ಕಾರ್ಯವನ್ನು ಸಿಟಿಟಿಪಿ೨೦೦೭ರ ಭಾಗವಾಗಿ, ಪ್ರಯಾಣಿಕ ರೈಲು ಸೇವೆಯನ್ನು ಬೆಂಗಳೂರಿನ ಸುತ್ತಮುತ್ತಲಿನ ಪಟ್ಟಣಗಳನ್ನು ಸಂಪರ್ಕಿಸಲು ವ್ಯಾಪಕವಾಗಿ ಬಳಸಬೇಕೆಂದು ಶಿಫಾರಸ್ಸು ಮಾಡುತ್ತದೆ.
ಜನವರಿ ೨೦೦೮ – ಮೂಲ ಸೌಕರ್ಯ ನಿರ್ದೇಶನಾಲಯ ಎರಡು ಡೀಸಲ್ ಯಂತ್ರ ಬಹು ಘಟಕ (ಡೆಮು) ಸೇವೆಯನ್ನು ಆರಂಭಿಸಲು ಹಣಕಾಸಿನ ನೆರವು ನೀಡಲು ಒಪ್ಪುತ್ತದೆ.
ನವೆಂಬರ ೨೦೦೯ – ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಪ್ರಯಾಣಿಕರ ರೈಲಿನ ಅಧ್ಯಯನವನ್ನು ಮೂಲ ಸೌಕರ್ಯ ನಿರ್ದೇಶನಾಲಯಕ್ಕೆ ವಹಿಸುತ್ತದೆ.
೧೪ ಡಿಸೆಂಬರ ೨೦೦೯ – ನೈಋತ್ಯ ರೈಲ್ವೆಯು ಆನೇಕಲ್/ದೇವನಹಳ್ಳಿ, ಕೆಂಗೇರಿಗೆ ಉಪನಗರ ರೈಲು ಪ್ರಾರಂಭಿಸಲು ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಗೆ ಸೂಚಿಸುತ್ತದೆ.
ಡಿಸೆಂಬರ ೨೦೦೯ – ರಾಜ್ಯದ ರೈಲ್ವೆ ಸಚಿವರಾದ ಕೆ ಹೆಚ್ ಮುನಿಯಪ್ಪನವರು ರಾಜ್ಯ ಸರ್ಕಾರ ಉಪನಗರ ರೈಲಿನಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಲ್ಲವೆಂದು ತಿಳಿಸುತ್ತಾರೆ.
೨ ಜನವರಿ ೨೦೧೦ – ರಾಜ್ಯದ ರೈಲ್ವೆ ಸಚಿವರಾದ ಕೆ ಹೆಚ್ ಮುನಿಯಪ್ಪನವರು ಯಶವಂತಪುರದಿಂದ ಆನೇಕಲ್ ಮತ್ತು ದೇವನಹಳ್ಳಿಗೆ ಉಪನಗರ ರೈಲುಗಳನ್ನು ಘೋಶಿಸುತ್ತಾರೆ.
ಫೆಬ್ರವರಿ – ಬೆಂಗಳೂರು ದಕ್ಷಿಣದ ಶಾಸಕರಾದ ಹೆಚ್ ಎನ್ ಅನಂತ ಕುಮಾರ್ ರವರು ರೈಲ್ವೆ ಸಚಿವರನ್ನು ಮುಂಬಯಿ ಮಾದರಿಯಲ್ಲಿ ಉಪನಗರ ರೈಲು ಪ್ರಾರಂಭಿಸಬೇಕೆಂದು ಮನವಿ ಮಾಡುತ್ತಾರೆ.
೩ ಮಾರ್ಚ ೨೦೧೦ – ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ರೈಲ್ವೆ ಮಂತ್ರಿಗಳಿಗೆ ಶೇಕಡ ೫೦ರ ರಾಜ್ಯದ ಪಾಲುದಾರಿಕೆಯಲ್ಲಿ ಉಪನಗರ ರೈಲು ಪ್ರಾರಂಭಿಸಬೇಕೆಂದು ಪತ್ರ ಬರೆಯುತ್ತಾರೆ.
ಮಾರ್ಚ ೨೦೧೩ - "ಬೆಂಗಳೂರು ಉಪನಗರ ರೈಲು ಸಂಸ್ಥೆ ನಿಯಮಿತ" ಸಂಸ್ಥೆ ನೊಂದಾಯಿಸಲಾಯಿತು.
೩೦ ಏಪ್ರಿಲ್, ೨೦೧೩ - ಯಶವಂತಪುರ ಮತ್ತು ನೆಲಮಂಗಲದ ನಡುವೆ ರೈಲು ಸಂಚಾರ ಪ್ರಾರಂಭವಾಯಿತು.[೧]
ಪ್ರಯಾಣ ದರ
[ಬದಲಾಯಿಸಿ]ಪ್ರಸ್ತುತ ರೈಲುಗಳು
[ಬದಲಾಯಿಸಿ]ಮಿಂಚು (ವಿದ್ಯುತ್) ಬಂಡಿಗಳು:
- ಬೆಂಗಳೂರು ನಗರ - ರಾಮನಗರ
- ಬೆಂಗಳೂರು ನಗರ - ಮಾರಿ ಕುಪ್ಪೆ
ಡೀಸಲ್ ಬಂಡಿಗಳು:
- ಬೆಂಗಳೂರು ದಂಡು - ಬಂಗಾರಪೇಟೆ
- ಬೆಂಗಳೂರು ನಗರ - ಚಿಕ್ಕಬಳ್ಳಾಪುರ
- ಯಶವಂತಪುರ - ತುಮಕೂರು
- ಯಶವಂತಪುರ - ಚಿಕ್ಕಬಳ್ಳಾಪುರ[೨]
- ಯಶವಂತಪುರ - ನೆಲಮಂಗಲ
- ಯಶವಂತಪುರ - ಹೊಸೂರು
ಹೊಸ ಮಾರ್ಗಗಳು
[ಬದಲಾಯಿಸಿ]ಬೆಂಗಳೂರಿನ ಸುತ್ತಮುತ್ತ ಸರ್ವೇ ಕಾರ್ಯ ಮುಗಿದಿರುವ ಹೊಸ ಹಳಿಬಂಡಿ ಮಾರ್ಗಗಳು ಮುಂದಿನ ದಿನಗಳಲ್ಲಿ ಉಪನಗರ ರೈಲು ಸೇವೆಗೆ ಸಹಕಾರಿಯಾಗಲಿದ್ದು, ಆ ಮಾರ್ಗಗಳ ಪಟ್ಟಿ ಕೆಳಗಿನಂತಿದೆ.
- ಹೆಜ್ಜಾಲ - ಕನಕಪುರ [೩]
- ಬಿಡದಿ – ಆನೇಕಲ್ [೪]
- ವೈಟ್‌ಫೀಲ್ಡ್ - ಕೋಲಾರ[೫]
- ನೆಲಮಂಗಲ - ಕುಣಿಗಲ್[೬]
- ಕುಣಿಗಲ್ - ತುಮಕೂರು[೭]
- ತುಮಕೂರು - ಮಧುಗಿರಿ[೮]
- ಮಧುಗಿರಿ - ಗೌರಿಬಿದನೂರು[೯]
- ಗೌರಿಬಿದನೂರು - ಚಿಕ್ಕಬಳ್ಳಾಪುರ[೧೦]
ನಿಲ್ದಾಣಗಳು
[ಬದಲಾಯಿಸಿ]ಹೆಸರು | ಚಿತ್ರ | ಕೋಡ್ | ಹಳಿ | ಸೌಲಭ್ಯಗಳು | ಟಿಪ್ಪಣಿ | |
---|---|---|---|---|---|---|
ಟೆಂಪ್ಲೇಟು:Pms | 12 | 1 | 18 | 31 October 1912 | ||
ಟೆಂಪ್ಲೇಟು:Pms | 12 | 1 | 18 | 31 October 1912 |
ಉಲ್ಲೇಖಗಳು
[ಬದಲಾಯಿಸಿ]- ↑ http://www.prajavani.net/article/%E0%B2%A8%E0%B3%86%E0%B2%B2%E0%B2%AE%E0%B2%82%E0%B2%97%E0%B2%B2%E0 %B2%95%E0%B3%8D%E0%B2%95%E0%B3%86-%E0%B2%95%E0%B3%8A%E0%B2%A8%E0%B3%86%E0%B2%97%E0%B3%82-%E0%B2%B0%E0%B3%88%E0%B2%B2%E0%B3%81-%E0%B2%AC%E0%B2%82%E0%B2%A4%E0%B3%81
- ↑ http://vijaykarnataka.indiatimes.com/district/bengalurucity/-/articleshow/48115203.cms
- ↑ "ಆರ್ಕೈವ್ ನಕಲು". Archived from the original on 2014-03-31. Retrieved 2014-08-05.
- ↑ http://www.swr.indianrailways.gov.in/view_section.jsp?lang=0&id=0,1,828,831,927
- ↑ http://www.thehindubusinessline.com/industry-and-economy/logistics/railways-opens-12000crore-worth-projects-for-private-foreign-investment/article6587625.ece
- ↑ http://www.thehindubusinessline.com/news/states/kanara-chamber-calls-for-doubling-of-railway-line-to-improve-freight-movement/article6145355.ece
- ↑ http://www.thehindu.com/todays-paper/tp-national/tp-karnataka/survey-soon-for-pandavapuratumkur-rail-link/article3698825.ece
- ↑ http://www.thehindu.com/todays-paper/tp-national/tp-karnataka/work-on-new-rail-lines-yet-to-start-for-want-of-land/article5584918.ece
- ↑ "ಆರ್ಕೈವ್ ನಕಲು". Archived from the original on 2016-03-14. Retrieved 2014-08-05.
- ↑ http://www.thehindu.com/todays-paper/tp-features/tp-propertyplus/vital-link-restored/article5431320.ece