ಮಾಸ್ಟರ್ ಕಿಶನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಿಶನ್ - ಪ್ರಪಂಚದ ಅತ್ಯಂತ ಕಿರಿಯ ವಯಸ್ಸಿನ ಚಿತ್ರ ನಿರ್ದೇಶಕನೆಂದು ಗಿನ್ನೆಸ್ ದಾಖಲೆಗೆ ಸೇರಿದ್ದಾರೆ.

ಕಿಶನ್

ಕೇರಾಫ್ ಫುಟ್‍ಪಾತ್ ಚಿತ್ರವನ್ನು ನಿರ್ದೇಶಿಸಿರುವ ಕಿಶನ್‍ ವಯಸ್ಸು ಹನ್ನೊಂದು ವರ್ಷ. ಈ ಚಿತ್ರದಲ್ಲಿ ಹಿಂದಿ ಚಿತ್ರನಟ ಜಾಕಿ ಶ್ರಾಫ್, ಕನ್ನಡಚಿತ್ರನಟರಾದ ಅಂಬರೀಶ್,ಸುದೀಪ್, ಬಿ.ಜಯಶ್ರೀ ಮುಂತಾದ ನಟನಟಿಯರು ಅಭಿನಯಿಸಿದ್ದಾರೆ. ಕಿಶನ್, ಈ ಚಿತ್ರದಲ್ಲಿ ನಟಿಸಿರುವುದಲ್ಲದೆ ಹಲವಾರು ಚಿತ್ರಗಳಲ್ಲಿ ಬಾಲನಟರಾಗಿ ಕಾಣಿಸಿಕೊಂಡಿದ್ದಾರೆ. ಕಿಶನ್ ಕೇರಾಫ್ ಫುಟ್‍ಪಾತ್ ಚಿತ್ರದಲ್ಲಿ ಹಿನ್ನಲೆಗಾಯನವನ್ನೂ ಮಾಡಿದ್ದಾರೆ.

ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪಾ.ಪ.ಪಾಂಡು ಧಾರಾವಾಹಿಯಲ್ಲಿಯೂ ಕಿಶನ್ ನಟಿಸಿದ್ದರು.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಬಿಬಿಸಿಯಲ್ಲಿ ಪ್ರಸಾರವಾಗಿರುವ ಕಿಶನ್ ಸಂದರ್ಶನ