ವಿಷಯಕ್ಕೆ ಹೋಗು

ಜಾಕಿ ಶ್ರಾಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾಕಿ ಶ್ರಾಫ್
Jackie Shroff
2011 ರಲ್ಲಿ ಶ್ರಾಫ್
ಜನನ
ಜೈಕಿಶೆನ್ ಕಾಕುಭಾಯ್ ಜಾಕಿ ಶ್ರಾಫ್

(1957-02-01) ೧ ಫೆಬ್ರವರಿ ೧೯೫೭ (ವಯಸ್ಸು ೬೭)
ಮಹಾರಾಷ್ಟ್ರದ ಉದ್ಗೀರ್ ಜಿಲ್ಲೆಯ ಲಾಥೂರ್
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಜಾಕಿ ಶ್ರಾಫ್
ವೃತ್ತಿನಟ
Years active1978-ಇಂದಿನವರೆಗೆ
Known forಹೀರೋ,ಯುದ್ದ್ ಮತ್ತು ಕರ್ಮ.
ಸಂಗಾತಿಆಯೆಷಾ ದತ್ (ವಿವಾಹ 1987)
ಮಕ್ಕಳುಟೈಗರ್ ಶ್ರಾಫ್
ಕೃಷ್ಣಾ ಶ್ರಾಫ್
ಜಾಲತಾಣwww.jackieshroff.in

ಜಾಕಿ ಶ್ರಾಫ್ (ಜೈಕಿಶೆನ್ ಕಾಕುಭಾಯ್ ಜಾಕಿ ಶ್ರಾಫ್) (ಜನನ 1 ಫೆಬ್ರುವರಿ 1957) ಭಾರತೀಯ ಚಿತ್ರ ನಟ.ಇವರು ಪ್ರಮುಖವಾಗಿ ಸುಮಾರು ನಾಲ್ಕು ದಶಕಗಳಿಂದ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುತಿದ್ದಾರೆ.ಕೊಂಕಣಿ, ಕನ್ನಡ, ಮರಾಠಿ, ಒರಿಯಾ, ಪಂಜಾಬಿ, ಬಂಗಾಳಿ, ಮಲಯಾಳಂ, ತಮಿಳು, ತೆಲುಗು ಭಾಷೆ ಸೇರಿ 200ರಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.[೧]

ಬಾಲ್ಯ ಮತ್ತು ವೈಯಕ್ತಿಕ ಜೀವನ[ಬದಲಾಯಿಸಿ]

ಜಾಕಿ ಶ್ರಾಫ್ ರವರು ಕಾಕುಭೈ ಹರಿಲಾಲ್ ಶ್ರಾಫ್ ಮತ್ತು ರೀಟಾರ ಮಗನಾಗಿ ಫೆ. 1. 1957 ರಲ್ಲಿ ಮಹಾರಾಷ್ಟ್ರದ ಉದ್ಗೀರ್ ಜಿಲ್ಲೆಯ ಲಾಥೂರ್ ನಲ್ಲಿ ಜನಿಸಿದರು.ಜಾಕಿ ಶ್ರಾಫ್ ಆಯೆಷಾ ದತ್ ರನ್ನು 1987ರಲ್ಲಿ ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ,ಪುತ್ರ ಬಾಲಿವುಡ್ ನಟ ಟೈಗರ್ ಶ್ರಾಫ್ ಮತ್ತು ಮಗಳು ಕೃಷ್ಣ .[೨]

ವೃತ್ತಿಜೀವನ[ಬದಲಾಯಿಸಿ]

1982 ರಲ್ಲಿ, ಶ್ರಾಫ್, ದೇವ್ ಆನಂದ್ ಜೊತೆ ಸ್ವಾಮಿ ದಾದಾ ಚಿತ್ರದಲ್ಲಿ ಖಳ ನಟನಾಗಿ ಮೊದಲ ಚಲನಚಿತ್ರದಲ್ಲಿ ನಟಿಸಿದರು.1983 ರಲ್ಲಿ ಸುಭಾಷ್ ಘಾಯ್ ರವರು ಹೀರೋ ಚಿತ್ರದಲ್ಲಿ ನಟನ ಪಾತ್ರ ನೀಡಿದರು.ಚಿತ್ರ ಯಶಸ್ವಿಯಾಯಿತು,ನಂತರ ಇತರ ಹಲವಾರು ಚಲನಚಿತ್ರಗಳು ಯಶಸ್ವಿಯಾದವು.ಅವುಗಳ ಪೈಕಿ ಅಂದರ್ ಬಾಹರ್ ,ಜಾನೂ,ಕರ್ಮ ಮತ್ತು ಯುದ್ದ್ .

ಲಭಿಸಿದ ಪ್ರಶಸ್ತಿಗಳು[ಬದಲಾಯಿಸಿ]

  • 1990 ರಲ್ಲಿ ಪರಿಂದಾ ಚಿತ್ರದಲ್ಲಿ ಉತ್ತಮ ನಟ ಪ್ರಶಸ್ತಿ.[೩]
  • 1994 ರಲ್ಲಿ ಫೀಲ್ಮ್ ಫೇರ್ ಅವಾರ್ಡ್ ಪ್ರಶಸ್ತಿ.
  • 1995 ರಲ್ಲಿ ಎ ಲವ್ ಸ್ಟೋರಿ ಸಿನಿಮಾದ ಉತ್ತಮ ಸಪೋರ್ಟಿಂಗ್ ಅಕ್ಟರ್ ಪ್ರಶಸ್ತಿ.
  • 1996 ರಲ್ಲಿ ರಂಗೀಲಾ ಚಿತ್ರದ ಉತ್ತಮ ಸಪೋರ್ಟಿಂಗ್ ಅಕ್ಟರ್ ಪ್ರಶಸ್ತಿ.
  • 1997 ರಲ್ಲಿ ಅಗ್ನಿ ಸಾಕ್ಷಿ ಚಿತ್ರದಲ್ಲಿ ಉತ್ತಮ ಸಪೋರ್ಟಿಂಗ್ ಅಕ್ಟರ್ ಪ್ರಶಸ್ತಿ.

ಕನ್ನಡದ ಚಿತ್ರಗಳು[ಬದಲಾಯಿಸಿ]

ಜಾಕಿ ಶ್ರಾಫ್, ಕೇರ್ ಆಫ್ ಫುಟ್ ಪಾತ್, ಅಣ್ಣ ಬಾಂಡ್ ಮತ್ತು ಅಮಾನುಷ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. [೪]

ಉಲ್ಲೇಖಗಳು[ಬದಲಾಯಿಸಿ]