ವಿಷಯಕ್ಕೆ ಹೋಗು

ನಸೀರುದ್ದೀನ್ ಷಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಸೀರುದ್ದಿನ್ ಶಾಹ್
ನಾಸೀರುದ್ದಿನ್ ಶಾಹ್
ಜನನ
ವೃತ್ತಿಚಿತ್ರನಟ
ಸಕ್ರಿಯ ವರ್ಷಗಳು1975 - present
ಸಂಗಾತಿರತ್ನ ಪಾಠಕ್ ಶಾಹ್

ನಾಸೀರುದ್ದೀನ್ ಷಾ (ಉರ್ದು: نصیرالدین شاه , ಹಿಂದಿ:नसीरुद्दीन शाह) (1950 ಜುಲೈ 20ರಂದು ಜನನ) ಭಾರತೀಯಚಲನಚಿತ್ರ ನಟ ಮತ್ತು ನಿರ್ದೇಶಕ. ಅವರನ್ನು ಭಾರತೀಯ ಸಿನೆಮಾದ ಅತ್ಯುತ್ತಮ ನಟರಲ್ಲೊಬ್ಬರೆಂದು ಪರಿಗಣಿಸಲಾಗಿದೆ. ಭಾರತೀಯ ಸಿನೆಮಾಕ್ಕೆ ಅವರು ನೀಡಿದ ಕೊಡುಗೆಗಳನ್ನು ಗುರುತಿಸಿ 2003ರಲ್ಲಿ ಭಾರತ ಸರ್ಕಾರಅವರಿಗೆ ಪದ್ಮ ಭೂಷಣ್ ಪ್ರಶಸ್ತಿ ನೀಡಿ ಗೌರವಿಸಿತು.

ಆರಂಭಿಕ ಜೀವನ

[ಬದಲಾಯಿಸಿ]
  • ಭಾರತದ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಜನಿಸಿದ ಅವರು 19ನೇ ಶತಮಾನದ ಆಫ್ಘನ್ ಸೇನಾನಿ ಜಾನ್ ಫಿಷನ್ ಖಾನ್ ಅವರ ವಂಶಸ್ಥರಾಗಿದ್ದು, ಆಪ್ಘನ್ ಲೇಖಕ ಇಡ್ರೀಸ್ ಷಾ,ಪ್ರಖ್ಯಾತ ಪಾಕಿಸ್ತಾನಿ ನಟ, ಸೈಯದ್ ಕಮಲ್ ಷಾ , ಪಾಕಿಸ್ತಾನ IBಯ ಮಹಾ ನಿರ್ದೇಶಕ, ಶಾಹ್ ಮಹಬೂಬ್ ಅಲಾಂ ಮತ್ತು ಕ್ರಿಕೆಟ್ ಆಟಗಾರ ಓವೈಸ್ ಷಾ ಅವರ ಸಂಬಂಧಿಯಾಗಿದ್ದಾರೆ.[]
  • ನಾಸೀರುದ್ದೀನ್ ಷಾ ಸೇಂಟ್ ಆನ್‌ಸೆಲ್ಮ್`ಸ್ ಆಜ್ಮಿರ್‌ಮತ್ತು ಸೇಂಟ್ ಜೋಸೆಫ್`ಸ್ ಕಾಲೇಜ್, ನೈನಿತಾಲ್‌ನಲ್ಲಿ ತಮ್ಮ ಶಾಲಾಜೀವನವನ್ನು ಕಳೆದರು. ಅಲಿಗಢ್ ಮುಸ್ಲಿಂ ಯೂನಿವರ್ಸಿಟಿಯಿಂದ 1971 ರಲ್ಲಿ ಕಲಾ ಪದವಿಯನ್ನು ಗಳಿಸಿದರು ಮತ್ತು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬೇತಿ ಪಡೆದರು. ಮುಖ್ಯವಾಹಿನಿ ಬಾಲಿವುಡ್ ಸಿನೆಮಾ ಮತ್ತು ಕಲಾತ್ಮಕ ಸಿನೆಮಾ ಎರಡರಲ್ಲೂ ಅವರು ಯಶಸ್ಸನ್ನು ಕಂಡಿದ್ದಾರೆ. ಅನೇಕ ಅಂತಾರಾಷ್ಟ್ರೀಯ ಚಲನಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇವುಗಳ ಪೈಕಿ ಗಮನಾರ್ಹವಾದುದು ಹಾಲಿವುಡ್ ಕಾಮಿಕ್ ಪುಸ್ತಕ ರೂಪಾಂತರ ದಿ ಲೀಗ್ ಆಫ್ ಎಕ್ಟ್ರಾಆರ್ಡಿನೆರಿ ಜೆಂಟಲ್‌ಮನ್‌ ನಲ್ಲಿ ಕ್ಯಾಪ್ಟನ್ ನೆಮೊ ಪಾತ್ರವನ್ನು ನಿರ್ವಹಿಸಿದ್ದಾರೆ.
  • ಅವರ ಹಿರಿಯ ಸಹೋದರ ಲೆಫ್ಟಿನೆಂಟ್ ಜನರಲ್ ಜಮೀರುದ್ದೀನ್ ಶಾಹ್ PVSM, SM, VSM, ಸೇಂಟ್ ಜೋಸೆಫ್`ಸ್ ನೈನಿತಾಲ್‌ನ ಹಳೆಯ ವಿದ್ಯಾರ್ಥಿಯಾಗಿದ್ದು, 2008ರ ಪೂರ್ವದಲ್ಲಿ ಸೇನಾ ಸಿಬ್ಬಂದಿ(ಯೋಜನೆ ಮತ್ತು ವ್ಯವಸ್ಥೆ)ಯ ಉಪ ಮುಖ್ಯಸ್ಥರಾಗಿ ಭಾರತೀಯ ಸೇನೆಯಿಂದ ನಿವೃತ್ತರಾದರು ಹಾಗು ದಿಮಪುರ್ ಮೂಲದ 3 ಕಾರ್ಪ್ಸ್ ಪಡೆಯ ಆಧಿಪತ್ಯ ವಹಿಸಿದ್ದರು. ಅವರು ಫೆಬ್ರವರಿ 1994 -ಏಪ್ರಿಲ್ 1997ರವರೆಗೆ ಸೌದಿ ಅರೇಬಿಯಕ್ಕೆ ಇಂಡಿಯನ್ ಡಿಫೆನ್ಸ್ ಅಟ್ಯಾಷೇಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.[][]

ವೃತ್ತಿ ಜೀವನ

[ಬದಲಾಯಿಸಿ]
  • ಶಾಹ್ ಅವರು ನಿಶಾಂತ್, ಆಕ್ರೋಶ್, ಸ್ಪರ್ಶ್, ಮಿರ್ಚ್ ಮಸಾಲ, ಆಲ್ಬರ್ಟ್ ಪಿಂಟೊ ಕೊ ಗುಸ್ಸಾ ಕ್ಯೂಂ ಆತಾ ಹೈ, ತ್ರಿಕಾಲ್, ಭಾವ್ನಿ ಭವಾಯಿ, ಜುನೂನ್, ಮಂಡಿ, ಮೋಹನ್ ಜೋಷಿ ಹಾಜಿರ್ ಹೊ!, ಅರ್ಧ್ ಸತ್ಯ, ಕಥಾ, ಜಾನೆ ಬಿ ದೊ ಯಾರೊ, ಇತರೆ[] ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ರಾಖಿ ಜತೆ ಜೋಡಿಯಾಗಿ ಚಿತ್ರವೊಂದರಲ್ಲಿ ನಟಿಸಿದ್ದರು. ಅದರಲ್ಲಿ ರಾಖಿ ಕುಸುಮ್ಜಿ ಪಾತ್ರವನ್ನು ನಿರ್ವಹಿಸಿದ್ದು, ರಾಖಿ ಜತೆ ಅವರಿಗೆ ಇಷ್ಟವಿಲ್ಲದಿದ್ದರೂ ಬಲವಂತದಿಂದ ಮದುವೆಯಾಗುತ್ತಾರೆ(ಚಲನಚಿತ್ರದಲ್ಲಿ).
  • ಅವರ ಅತೀ ಮುಖ್ಯ ಚಲನಚಿತ್ರ ಮಾಸೂಮ್(1983 )ನ್ನು ನೈನಿತಾಲ್‌ನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಚಿತ್ರೀಕರಿಸಲಾಯಿತು. 1980ರ ಚಲನಚಿತ್ರ ಹಮ್ ಪಾಂಚ್‌ ವೊಂದಿಗೆ ಅವರು ಮುಖ್ಯವಾಹಿನಿ ಬಾಲಿವುಡ್ ಸಿನೆಮಾದಲ್ಲಿ ಸಕ್ರಿಯರಾಗಿ ತೊಡಗಿಸಿ ಕೊಂಡರು. ಅವರ ಮುಖ್ಯವಾಹಿನಿ ಚಲನಚಿತ್ರಗಳ ಮುಖ್ಯ ಯಶಸ್ಸು 1986ರ ಬಹುತಾರಾ ಚಲನಚಿತ್ರ ಕರ್ಮ ದಿಂದ ಸಿಕ್ಕಿತು. ಅದರಲ್ಲಿ ಅವರು ಹಿರಿಯ ನಟ ದಿಲೀಪ್ ಕುಮಾರ್ ಜತೆಗೆ ನಟಿಸಿದರು. ಚಲನಚಿತ್ರಗಳ ಮುಖ್ಯ ಪಾತ್ರಗಳಾದ, ಇಜಾಜತ್ (1987), ಜಾಲ್ವಾ (1988) ಮತ್ತು ಹೀರೊ ಹೀರಾಲಾಲ್ (1988) ಅನುಸರಿಸಿದವು.
  • 1988ರಲ್ಲಿ ಅವರು ತಮ್ಮ ಪತ್ನಿ ರತ್ನ ಪಾಠಕ್ ಎದುರಾಗಿ ಇನ್ಸ್‌ಪೆಕ್ಟರ್ ಘೋಟೆ ಪಾತ್ರವನ್ನು ನಿರ್ವಹಿಸಿದರು. ಇದು H. R. F.ಕೀಟಿಂಗ್'ಸ್ ಕಾದಂಬರಿಗಳ ಕಾಲ್ಪನಿಕ ಪತ್ತೇದಾರಿ ಪಾತ್ರವಾಗಿದೆ. ಮರ್ಚೆಂಟ್ ಐವರಿ ನಿರ್ಮಾಣದ ಇಂಗ್ಲೀಷ್ ಭಾಷೆಯ ಚಲನಚಿತ್ರ ದಿ ಪರ್ಫೆಕ್ಟ್ ಮರ್ಡರ್‌ ನಲ್ಲಿ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಅನೇಕ ಬಹುತಾರಾ ಬಳಗದ ಬಾಲಿವುಡ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಉದಾಹರಣೆಗೆ, ಗುಲಾಮಿ (1985), ತ್ರಿದೇವ್ (1989) ಮತ್ತು ವಿಶ್ವಾತ್ಮಾ (1992). 1994ರಲ್ಲಿ ಅವರು ಮೊಹರಾ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದರು. ಇದು ನಟರಾಗಿ ಅವರ 100ನೇ ಚಿತ್ರವಾಗಿದೆ.
  • ವಿಶೇಷವಾಗಿ ಕಲಾತ್ಮಕ ಚಿತ್ರಗಳ ನಿರ್ದೇಶಕರು ವಾಣಿಜ್ಯ ಚಿತ್ರಗಳನ್ನು ನಿರ್ಮಿಸುವುದರೊಂದಿಗೆ ಕಲಾತ್ಮಕ ಮತ್ತು ವಾಣಿಜ್ಯ ಚಿತ್ರಗಳ ನಡುವೆ ವ್ಯತ್ಯಾಸವು ಬಹುಮಟ್ಟಿಗೆ ಕಡಿಮೆಯಾಗಿದೆ ಎಂದು ಅವರು ಬಲವಾಗಿ ನಂಬಿದ್ದಾರೆ. 2000ದಲ್ಲಿ ಅವರು ಕಮಲ್ ಹಾಸನ್ ಅವರ ವಿಮರ್ಶಾತ್ಮಕ ಪ್ರಶಂಸೆಗೆ ಒಳಗಾದ ಹೇ ರಾಂನಲ್ಲಿ ಅವರು ಗಾಂಧಿ ಪಾತ್ರವನ್ನು ನಿರ್ವಹಿಸಿದಾಗ, ಮಹಾತ್ಮಾ ಗಾಂಧಿ ಪಾತ್ರದಲ್ಲಿ ನಟಿಸುವ ಅವರ ಕನಸು ನನಸಾಯಿತು. ಹೇ ರಾಂ ಚಿತ್ರವು ದುಷ್ಕರ್ಮಿಯ ದೃಷ್ಟಿಕೋನದಿಂದ ಗಾಂಧಿ ಹತ್ಯೆಯ ಮೇಲೆ ಗಮನಹರಿಸಿದೆ. ಅವರು ಇಕ್ಬಾಲ್( ಚಲನಚಿತ್ರ)ದಲ್ಲಿ ಕಿವುಡ ಮತ್ತು ಮೂಕ ಬಾಲಕನ ಕುಡುಕ ತರಬೇತುದಾರ ಮೋಹಿತ್ ಪಾತ್ರದಲ್ಲಿ ನಟಿಸುವ ಮೂಲಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದ್ದಾರೆ.
  • ಈ ಕಥೆಯನ್ನು ವಿಪುಲ್ ಕೆ. ರಾವಲ್ ವಿಶೇಷವಾಗಿ ಷಾ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತಿಭಾಪೂರ್ಣವಾಗಿ ಬರೆದಿದ್ದಾರೆ. ಅವರು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ ಚಿತ್ರ "ಎ ವೆಡ್ನಸ್‌ಡೇ"(2008)ನಲ್ಲಿ ಕೂಡ ನಟಿಸಿದ್ದಾರೆ. ನಂತರ, ಅವರು 2001ರಲ್ಲಿ ಮಾನ್ಸೂನ್ ವೆಡ್ಡಿಂಗ್ ಮತ್ತು 2003ರಲ್ಲಿ ಹಾಲಿವುಡ್ ಕಾಮಿಕ್ ಪುಸ್ತಕದ ರೂಪಾಂತರ ದಿ ಲೀಗ್ ಆಫ್ ಎಕ್ಟ್ರಾಆರ್ಡಿನಿರಿ ಜೆಂಟಲ್‌ಮನ್ (ಸೀನ್ ಕಾನರಿ ಸಹನಟನೆ)ನಲ್ಲಿ ಕ್ಯಾಪ್ಟನ್ ನೆಮೊ ಪಾತ್ರ ಮುಂತಾದ ಅಂತಾರಾಷ್ಟ್ರೀಯ ಚಿತ್ರ ಯೋಜನೆಗಳಲ್ಲಿ ಪಾತ್ರ ವಹಿಸಿದರು. ಅವರ ನೆಮೊ ಪಾತ್ರವು ಅತೀ ಕಡಿಮೆ ಉನ್ಮಾದತೆಯಿಂದ ಕೂಡಿದ್ದರೂ, ಅದರ ಚಿತ್ರಣವು ಗ್ರಾಫಿಕ್ ಚಿತ್ರದ ಕಾದಂಬರಿಯ ವಿನ್ಯಾಸಕ್ಕೆ ತೀರಾ ಹತ್ತಿರದಲ್ಲಿದೆ.
  • ಅವರು 2004ರಲ್ಲಿ ಶೇಕ್ಸ್‌ಪಿಯರ್ ಮ್ಯಾಕ್‌ಬೆತ್‌ ನ ಭಾರತದ ರೂಪಾಂತರ ಮಕ್ಬೂಲ್. ಹೆಸರಿನ ಚಿತ್ರದಲ್ಲಿ ನಟಿಸಿದರು. ನಂತರ ಅವರು ದಿ ಗ್ರೇಟ್ ನಿವ್ ವಂಡರ್‌ಫುಲ್‌ ಚಿತ್ರದ ಪಾತ್ರ ನಿರ್ವಹಣೆಗೆ ತೆರಳಿದರು. ತೀರಾ ಇತ್ತೀಚೆಗೆ ಅವರು ಇಶ್ಕಿಯಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಷಾ ಅವರ ಮುಂಬರುವ ಚಿತ್ರಗಳು ದಿ ಹಂಟ್(2010 ಚಲನಚಿತ್ರ) ಅದರಲ್ಲಿ ಅವರು ಅರಣ್ಯದ ಆಶ್ರಯಧಾಮದಲ್ಲಿ ಮರಿಜುವಾನಾ ಬೆಳೆಯುತ್ತಿದ್ದ ಏಕಾಂತವಾಸಿ ಪಾತ್ರವನ್ನು ನಿರ್ವಹಿಸಿದರು. ಅವರು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ ವಿವಾದಾತ್ಮಕ ಖುದಾ ಕೆ ಲಿಯೆ ಪಾಕಿಸ್ತಾನಿ ಚಿತ್ರದಲ್ಲಿ ಚೊಚ್ಚಲ ಪ್ರವೇಶ ಕೂಡ ಮಾಡಿದ್ದಾರೆ. ಶೋಯಬ್ ಮನ್ಸೂರ್ ಅವರ ಈ ಚಿತ್ರದಲ್ಲಿ ಅವರು ಚಿಕ್ಕ ಅತಿಥಿ ಪಾತ್ರ(ಸಂಕ್ಷಿಪ್ತ) ಪಾತ್ರ ನಿರ್ವಹಿಸಿದ್ದಾರೆ.

ಇತರೆ ಮಾಧ್ಯಮ ಮತ್ತು ಕಲಾ ಸ್ವರೂಪಗಳು

[ಬದಲಾಯಿಸಿ]
  • 1977ರಲ್ಲಿ ಅವರು ಟಾಮ್ ಆಲ್ಟರ್ ಮತ್ತು ಬೆಂಜಮಿನ್ ಗಿಲಾನಿ ಜತೆ ಮಾಟ್ಲಿ ಪ್ರೊಡಕ್ಷನ್ಸ್ ಎಂದು ಕರೆಯುವ ನಾಟಕ ತಂಡವನ್ನು ರಚಿಸಿದರು. ಅವರ ಪ್ರಥಮ ನಾಟಕವು ಸ್ಯಾಮ್ಯುಯೆಲ್ ಬೆಕ್ಕೆಟ್ ಅವರ ನಾಟಕ ವೇಟಿಂಗ್ ಫಾರ್ ಗೋಡೊ. ಇದನ್ನು 1979ರ ಜುಲೈ 29ರಂದು ಪ್ರಥ್ವಿ ರಂಗಮಂದಿರದಲ್ಲಿ ಪ್ರದರ್ಶಿಸಲಾಯಿತು.[] 1988ರಲ್ಲಿ ಅವರು ಮಿರ್ಜಾ ಘಾಲಿಬ್ ಅವರ ಜೀವನ, ಕಾಲದ ಆಧಾರದ ಮೇಲೆ ನಿರ್ಮಿಸಿದ ಎಪೋನಿಮ್‌ಸ್ (ಸ್ಥಳ ಅಥವಾ ಜನಕ್ಕೆ ವ್ಯಕ್ತಿಯಿಂದ ಹುಟ್ಟಿದ ಹೆಸರು) ಟೆಲಿವಿಷನ್ ಸರಣಿಯಲ್ಲಿ ಅವರು ಪಾತ್ರವಹಿಸಿದರು. ಈ ಚಿತ್ರವನ್ನು ಗುಲ್ಜಾರ್ ನಿರ್ದೇಶಿಸಿದ್ದು, DD ನ್ಯಾಷನಲ್‌ನಲ್ಲಿ ಪ್ರಸಾರವಾಗಿದೆ.
  • 1989ರಲ್ಲಿ ಅವರು ಮರಾಠ ರಾಜ ಶಿವಾಜಿಯ ಪಾತ್ರವನ್ನು ಇನ್ನೊಂದು ಎಪಾನಿಮಸ್ ಟೆಲಿವಿಷನ್ ಸರಣಿ ಭಾರತ್ ಏಕ್ ಖೋಜ್ ಚಿತ್ರದಲ್ಲಿ ವಹಿಸಿದರು. ಇದು ಜವಾಹರಲಾಲ್ ನೆಹರು ಅವರ ಪುಸ್ತಕ ಡಿಸ್ಕವರಿ ಆಫ್ ಇಂಡಿಯವನ್ನು ಆಧರಿಸಿದ್ದು, ಹೆಸರಾಂತ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನೆಗಲ್ ಇದನ್ನು ನಿರ್ದೇಶಿಸಿದ್ದಾರೆ. ಔರಂಗಜೇಬ್‌ನ ಪಾತ್ರವನ್ನು ಓಂ ಪುರಿ ನಿರ್ವಹಿಸಿದರು. ಶಿವಾಜಿಯ ಕಥೆಯು ಎರಡು ಸಂಚಿಕೆಗಳಲ್ಲಿ ಹರಡಿದೆ. 1999ರಲ್ಲಿ ಅವರು TVಸರಣಿ ತಾರ್ಕಾಶ್‌ನಲ್ಲಿ ವಿಶೇಷ ಏಜೆಂಟ್ ಪಾತ್ರವನ್ನು ನಿರ್ವಹಿಸಿದರು. ಇದು ಜೀ TVಯಲ್ಲಿ ಪ್ರಸಾರವಾಯಿತು.
  • ಇದರಲ್ಲಿ ಅವರು ದ್ವುಸ್ವಪ್ನಗಳಿಂದ ಬಾಧಿತರಾದ ನಿವೃತ್ತ ಏಜೆಂಟ್ ಪಾತ್ರವನ್ನು ನಿರ್ವಹಿಸಿದರು. ಅವರ ಹಿಂದಿನ ಜೀವನಕ್ಕೆ ಹೇಗೊ ಸಂಬಂಧ ಹೊಂದಿದ ಉಗ್ರ ಭಯೋತ್ಪಾದಕನ ಬಗ್ಗೆ ಕೆಲವು ಮಾಹಿತಿ ತಿಳಿದಿದ್ದರಿಂದ ಅವರನ್ನು ಮರುಸೇರ್ಪಡೆ ಮಾಡಲಾಗಿತ್ತು. 1998ರಲ್ಲಿ ಅವರು ಮಹಾತ್ಮ ಗಾಂಧಿ ಪಾತ್ರವನ್ನು ಮಹಾತ್ಮ Vs. ಗಾಂಧಿ ನಾಟಕದಲ್ಲಿ ನಿರ್ವಹಿಸಿದರು(ಅದು ಮಹಾತ್ಮ ಗಾಂಧಿಯವರ ಪ್ರಥಮ ಪುತ್ರ ಹರಿಲಾಲ್ ಗಾಂಧಿ ಜತೆ ಗಾಂಧಿಯವರ ಸಂಬಂಧವನ್ನು ಕುರಿತದ್ದಾಗಿದೆ). ಇದರೊಂದಿಗೆ, ಅವರು ಮಹಾತ್ಮ ಗಾಂಧಿಯನ್ನು ಚಿತ್ರಿಸುವ ತಮ್ಮ ಉದ್ದೇಶವನ್ನು ಸಾಧಿಸಿದರು. ಮಹಾತ್ಮ ಗಾಂಧಿ ಪಾತ್ರಕ್ಕಾಗಿ ರಿಚರ್ಡ್‌ ಅಟೆನ್‌ಬರೋ ಅವರ ಗಾಂಧಿ ಚಿತ್ರದಲ್ಲಿ ಅಭಿನಯ ಪರೀಕ್ಷೆಗೆ ಒಳಗಾಗಿದ್ದರು.
  • ಪ್ರಾಸಂಗಿಕವಾಗಿ 2000ದಲ್ಲಿ ಅವರು ಪುನಃ ಮಹಾತ್ಮ ಗಾಂಧಿಯ ಪಾತ್ರದಲ್ಲಿ ಅಭಿನಯಿಸಿದರು. ಈ ಬಾರಿ ಹೇ ರಾಮ್ ಚಲನಚಿತ್ರದಲ್ಲಿ ಈ ಪಾತ್ರ ನಿರ್ವಹಿಸಿದರು. ಸಾರ್ಫರೋಷ್‌ನಲ್ಲಿ(1999 ) ಅವರ ಅಭಿನಯವು ವ್ಯಾಪಕ ಪ್ರಶಂಸೆಗೆ ಒಳಗಾಯಿತು. ಗಝಲ್ ಗಾಯಕ ಮತ್ತು ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನದ ಬೇಹುಗಾರನ ಉಭಯ ವ್ಯಕ್ತಿತ್ವದ ಖಳನಾಯಕನ ಪಾತ್ರವನ್ನು ಅವರು ನಿರ್ವಹಿಸಿದರು. ಅವರು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ ಇಕ್ಬಾಲ್(ಚಲನಚಿತ್ರ)ದಲ್ಲಿ ಕುಡುಕ ತರಬೇತುದಾರ ಮೊಹಿತ್ ಪಾತ್ರವು ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಈ ಪಾತ್ರವನ್ನು ಇಕ್ಬಾಲ್(ಚಲನಚಿತ್ರ)ಕಥೆಯ ಲೇಖಕ ವಿಪುಲ್ ಕೆ.ರಾವಲ್ ನಸಿರುದ್ದೀನ್ ಅವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವಿಶೇಷವಾಗಿ ಬರೆದಿದ್ದಾರೆ.
  • ಈ ಪಾತ್ರವು ವ್ಯಾಪಕ ವಿಮರ್ಶೆಗಳಿಗೆ ಒಳಗಾಯಿತು. ಆದರ್ಶ ತರಬೇತಿ ಮತ್ತು ಪ್ರೇರಣೆಯ ವಸ್ತು ಎಂದು ಪರಿಗಣಿತವಾದ ಹತ್ತು ಹಿಂದಿ ಚಲನಚಿತ್ರಗಳ ಪೈಕಿ ಒಂದಾಗಿ ಇತ್ತೀಚೆಗೆ ಈ ಚಿತ್ರವನ್ನು ಆಯ್ಕೆ ಮಾಡಲಾಗಿದೆ.[]

ಅವರು ಅನೇಕ ಪ್ರಸಿದ್ಧ ನಟರಲ್ಲಿ ಮೊದಲಿಗರಾಗಿದ್ದು, ಮಕ್ಕಳಿಗಾಗಿ ಜನಪ್ರಿಯ ಆಡಿಯೊಪುಸ್ತಕ ಸರಣಿ ಕರಾಡಿ ಟೇಲ್ಸ್‌ ನಲ್ಲಿ ನಿರೂಪಕನ ಪಾತ್ರವನ್ನು ವಹಿಸಿದ್ದಾರೆ. ಚಲನಚಿತ್ರ ಪಹೇಲಿಯಲ್ಲಿ ಕೂಡ ಅವರು ನಿರೂಪಕರಾಗಿದ್ದರು-ಇದು 2006ನೇ ಅಕಾಡೆಮಿ ಪ್ರಶಸ್ತಿಯನ್ನು ಪ್ರವೇಶಿಸಿದ ಭಾರತೀಯ ಚಿತ್ರವೆಂಬ ಹೆಗ್ಗಳಿಕೆ ಹೊಂದಿದೆ. ಅವರಿಗೆ ಏಷ್ಯನ್ ಅಕಾಡೆಮಿ ಆಫ್ ಫಿಲ್ಮ್ & ಟೆಲಿವಿಷನ್‌ನ ಅಂತಾರಾಷ್ಟ್ರೀಯ ಚಲನಚಿತ್ರ ಮತ್ತು ಟೆಲಿವಿಷನ್ ಕ್ಲಬ್‌ನ ಆಜೀವ ಸದಸ್ಯತ್ವವನ್ನು ನೀಡಲಾಗಿದೆ.

ನಿರ್ದೇಶಕರಾಗಿ

[ಬದಲಾಯಿಸಿ]
  • ನಾಸೀರುದ್ದೀನ್ ಷಾ ಅವರು ನವದೆಹಲಿ, ಮುಂಬಯಿ, ಬೆಂಗಳೂರು ಮತ್ತು ಲಾಹೋರ್ ಮಂತಾದ ಸ್ಥಳಗಳಲ್ಲಿ ತಮ್ಮ ನಾಟಕ ತಂಡದೊಂದಿಗೆ ಪ್ರದರ್ಶನಗಳನ್ನು ನೀಡಿದ್ದಾರೆ. ಅವರು ಲಾವೆಂದರ್ ಕುಮಾರ್ ಇಸ್ಮತ್ ಚುಕ್ತಾಯಿ ಮತ್ತು ಸಾದತ್ ಹಸನ್ ಮಾಂಟೊ ಅವರು ಬರೆದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಚಲನಚಿತ್ರದಲ್ಲಿ ಅವರ ಚೊಚ್ಚಲ ನಿರ್ದೇಶನವು ಯೂ ಹೋತಾ ತೊ ಕ್ಯಾ ಹೋತಾ 2006ರಲ್ಲಿ ಬಿಡುಗಡೆಯಾಯಿತು.
  • ಈ ಚಲನಚಿತ್ರವು ಚಿತ್ರರಂಗದಲ್ಲಿ ಭದ್ರವಾಗಿ ನೆಲೆನಿಂತ ಹಲವು ನಟರಾದ ಕೊಂಕಣ ಸೇನ್ ಶರ್ಮಾ, ಪರೇಶ್ ರಾವಲ್, ಇರ್ಫಾನ್ ಖಾನ್, ಹೊಸಬರಾದ ಆಯೇಶ ಟಾಕಿಯ,ಅವರ ಪುತ್ರ ಇಮಾದ್ ಷಾ ಮತ್ತು ಅವರ ಹಳೆಯ ಸ್ನೇಹಿತ ರವಿ ಬಾಸ್ವಾನಿ ಮುಂತಾದವರನ್ನು ಒಳಗೊಂಡಿದೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ಅವರು ಬಾಲಿವುಡ್ ನಟಿ ರತ್ನ ಪಾಠಕ್ ಷಾ ಅವರನ್ನು ವಿವಾಹವಾದರು. ಅವರಿಗೆ ಪುತ್ರಿ ಹೀಬಾ ಮತ್ತು ಇಬ್ಬರು ಪುತ್ರರಾದ ಇಮಾದ್ ಮತ್ತು ವಿವಾನ್ ಇದ್ದಾರೆ. ಅವರು ಜಾನೆ ತು. ಯಾ ಜಾನೆ ನಾ, ಮಿರ್ಚ್ ಮಸಾಲಾ ಮತ್ತು ದಿ ಪರ್ಫೆಕ್ಟ್ ಮರ್ಡರ್ ಮುಂತಾದ ಚಲನಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಹೀಬಾ ಷಾ ಅವರು ನಸೀರುದ್ದೀನ್ ಷಾ ಅವರ ಮುಂಚಿನ ವಿವಾಹದಿಂದ ಜನಿಸಿದ ಪುತ್ರಿಯಾಗಿದ್ದಾರೆ. ಅವರು ರತ್ನ ಪಾಠಕ್ ಷಾ ಅವರ ಪುತ್ರಿಯಲ್ಲ. ಹೀಬಾ ಷಾ ಅವರ ತಾಯಿಯ ಮರಣದ ನಂತರ ನಸೀರುದ್ದೀನ್ ಷಾ ಅವರು ರತ್ನಾ ಪಾಠಕ್ ಅವರನ್ನು ವಿವಾಹ ವಾದರು.[][]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]
  • 1980: ವಿಜೇತ : ಅತ್ಯುತ್ತಮ ನಟರಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 'ಸ್ಪರ್ಶ' ಚಿತ್ರಕ್ಕೆ.
  • 1981: ವಿಜೇತ : ಫಿಲಂಫೇರ್ ಅತ್ಯುತ್ತಮ ನಟ ಪ್ರಶಸ್ತಿ 'ಆಕ್ರೋಶ್' ಚಿತ್ರಕ್ಕೆ.
  • 1982: ವಿಜೇತ : ಫಿಲಂಫೇರ್ ಅತ್ಯುತ್ತಮ ನಟ ಪ್ರಶಸ್ತಿ ' ಚಕ್ರಾ'ಚಿತ್ರಕ್ಕಾಗಿ.
  • 1984: ವಿಜೇತ : ಫಿಲಂಫೇರ್ ಅತ್ಯುತ್ತಮ ನಟ ಪ್ರಶಸ್ತಿ 'ಮಾಸೂಮ್' ಚಿತ್ರಕ್ಕಾಗಿ.
  • 1985: ವಿಜೇತ : ಫಿಲಂಫೇರ್ ಅತ್ಯುತ್ತಮ ನಟ ಪ್ರಶಸ್ತಿ ಪಾರ್
  • 1984: ವಿಜೇತ : ದಿ ವೋಲ್ಪಿ ಕಪ್(ಅತ್ಯುತ್ತಮ ನಟ ಪ್ರಶಸ್ತಿ) ವೆನೈಸ್ ಚಲನಚಿತ್ರೋತ್ಸವ ಪಾರ್ ಚಿತ್ರಕ್ಕಾಗಿ.
  • 1987: ವಿಜೇತ : ಪದ್ಮಶ್ರೀ, ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.
  • 1994: ನಾಮನಿರ್ದೇಶನ : ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸರ್ ಚಿತ್ರಕ್ಕೆ.
  • 1995: ನಾಮನಿರ್ದೇಶನ : ಫಿಲ್ಮ್‌ಫೇರ್ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಮೊಹ್ರ ಚಿತ್ರಕ್ಕಾಗಿ.
  • 1996: ನಾಮನಿರ್ದೇಶನ : ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ನಾಜಾಯಜ್ ಚಿತ್ರಕ್ಕಾಗಿ.
  • 1998: ನಾಮನಿರ್ದೇಶನ : ಫಿಲ್ಮ್‌ಫೇರ್ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಚಾಹಾತ್ ಚಿತ್ರಕ್ಕಾಗಿ.
  • 1999: ನಾಮನಿರ್ದೇಶನ : ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಚೈನಾ ಗೇಟ್‌ಗೆ
  • 2000: ವಿಜೇತ : ಸಂಗೀತ ನಾಟಕ್ ಅಕಾಡೆಮಿ ಪ್ರಶಸ್ತಿ
  • 2000: ವಿಜೇತ : IIFA (ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕ್ಯಾಡೆಮಿ) ಪ್ರಶಸ್ತಿ 

ಸರ್ಫರೋಷ್‌ ನಲ್ಲಿ ನೆಗೆಟಿವ್(ಖಳನಾಯಕ)ಪಾತ್ರದಲ್ಲಿ ಅವರ ಅಭಿನಯದ ಕಲಾತ್ಮಕ ಶ್ರೇಷ್ಠತೆ.

  • 2000: ನಾಮನಿರ್ದೇಶನ : ಫಿಲ್ಮ್‌ಫೇರ್ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಸರ್ಫರೋಷ್
  • 2007: ವಿಜೇತ : ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:ಅತ್ಯುತ್ತಮ ಪೋಷಕ ನಟ ಇಕ್ಬಾಲ್ ಚಿತ್ರಕ್ಕಾಗಿ
  • 2007: ನಾಮನಿರ್ದೇಶನ : ಫಿಲ್ಮ್‌ಫೇರ್ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಕೃಿಷ್ ಚಿತ್ರಕ್ಕಾಗಿ.
  • 2008: ನಾಮನಿರ್ದೇಶನ : ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಎ ವೆಡ್ನಸ್‌ಡೇ ಗಾಗಿ

ಆಯ್ದ ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

(ಸಹನಟರನ್ನು ತೋರಿಸಲಾಗಿದೆ)

  • ನಿಶಾಂತ್ (1975) — ಸ್ಮಿತಾ ಪಾಟೀಲ್, ಶಬಾನಾ ಅಜ್ಮಿ
  • ಮಂಥನ್ (1976) — ಸ್ಮಿತಾ ಪಾಟೀಲ್
  • ಭೂಮಿಕಾ (1977) — ಸ್ಮಿತಾ ಪಾಟೀಲ್...ಸುನಿಲ್ ವರ್ಮಾಸುನಿಲ್ ವರ್ಮಾ
  • ತಬ್ಬಲಿಯು ನೀನಾದೆ ಮಗನೆ (1977) (ಕನ್ನಡ) — ಶಾಸ್ತ್ರಿ ಪಾತ್ರದಲ್ಲಿ
  • ಜುನೂನ್ (1978) — ಶಬಾನಾ ಅಜ್ಮಿ ...ಸರ್ಫರಾಜ್ ಖಾನ್
  • ಸ್ಪರ್ಶ್ (1979) — ಶಬಾನಾ ಅಜ್ಮಿ ...ಅನಿರುಧ್ ಪರ್ಮಾರ್.ಅನಿರುದ್ ಪರ್ಮಾರ್
  • ಆಕ್ರೋಶ್' (1980) — ಸ್ಮಿತಾ ಪಾಟೀಲ್
  • ಆಲ್ಬರ್ಟ್ ಪಿಂಟೊ ಕೊ ಗುಸ್ಸಾ ಕ್ಯೊನ್ ಆತಾ ಹೈ (1980) — ಶಬಾನಾ ಅಜ್ಮಿ
  • ಭಾವ್ನಿ ಭಾವೈ (1980) — ಸ್ಮಿತಾ ಪಾಟೀಲ್
  • ಚಕ್ರಾ (1981) — ಸ್ಮಿತಾ ಪಾಟೀಲ್
  • ಉಮ್ರಾವ್ ಜಾನ್ (1981) — ರೇಖಾ
  • ಬಾಜಾರ್ (1982) — ಸ್ಮಿತಾ ಪಾಟೀಲ್
  • ಜಾನೆ ಭಿ ದೊ ಯಾರೋನ್ (1983) — ಭಕ್ತಿ ಭಾರ್ವೆ
  • ಕಥಾ (1983) – ದೀಪ್ತಿ ನೇವಲ್
  • ಮಸೂಮ್ (1983) — ಶಬಾನಾ ಅಜ್ಮಿ
  • ವೋಹ್ ಸಾತ್ ದಿನ್ (1983) — ಪದ್ಮಿನಿ ಕೊಲ್ಲಾಪುರಿ
  • ಪಾರ್ (1984) — ಶಬಾನಾ ಅಜ್ಮಿ
  • ಮೋಹನ್ ಜೋಷಿ ಹಾಜಿರ್ ಹೊ! (1984)
  • ಹೋಲಿ (1984)
  • ಗುಲಾಮಿ (1985) — ಸ್ಮಿತಾ ಪಾಟೀಲ್
  • ತ್ರಿಕಾಲ್ (1985)
  • ಮಿರ್ಚ್ ಮಸಾಲಾ (1985) — ಸ್ಮಿತಾ ಪಾಟೀಲ್
  • ಕರ್ಮ (1986)-
  • ಜಲ್ವಾ (1987) — ಅರ್ಚನಾ ಪುರಾನ್ ಸಿಂಗ್
  • ತಮಸ್ (1987)
  • ಇಜಾಜತ್ (1987) — ರೇಖಾ
  • ಹೀರೊ ಹೀರಾಲಾಲ್ (1988) — ಸಂಜನಾ ಕಪೂರ್
  • ಮಾಲಾಮಾಲ್ (1988)
  • ಪೆಸ್ಟೋಂಜೀ (1988) —ಶಬಾನಾ ಅಜ್ಮಿ
  • ದಿ ಪರ್ಫೆಕ್ಟ್ ಮರ್ಡರ್ (1988) —ರತ್ನ ಪಾಠಕ್
  • ತ್ರಿದೇವ್ (1989) — ಸೋನಂ
  • ಏಕ್ ಘರ್ (1991)
  • ವಿಶ್ವಾತ್ಮಾ (1992) — ಸೋನಂ
  • ಎಲೆಕ್ಟ್ರಿಕ್ ಮೂನ್ (1992) - ಗೋಸ್ವಾಮಿ
  • ಚಮತ್ಕಾರ್ (1992)
  • ಕಭಿ ಹಾನ್ ಕಭೀ ನಾ (1993)
  • ಸರ್ (1993)
  • ಪೊಂಥಾನ್ ಮಾದಾ (1994)- ಮಲಯಾಳಂ
  • ಮೊಹ್ರಾ (1994)- Mr. ಜಿಂಡಾಲ್
  • ನಾಜಾಯಜ್ (1995) — ರೀಮಾ ಲಾಗೂ
  • ಚಾಹತ್ (1996)
  • ಬಾಂಬೆ ಬಾಯ್ಸ್ (1997)
  • ಚೈನಾಗೇಟ್ (1998)
  • ಸಚ್ ಎ ಲಾಂಗ್ ಜರ್ನಿ (1998)
  • ಸರ್ಫರೋಷ್ (1999) -ಗುಲ್ಫಾಮ್ ಹಸನ್
  • ಹೇ ರಾಂ (2000) ಮಹಾತ್ಮ ಗಾಂಧಿ
  • ಮಾನ್ಸೂನ್ ವೆಡ್ಡಿಂಗ್ (2001) — ಲಲಿತ್ ವರ್ಮಾ
  • ದಿ ಲೀಗ್ ಆಫ್ ಎಕ್ಸ್‌ಟ್ರಾಆರ್ಡಿನೆರಿ ಜಂಟಲ್‌ಮನ್ (2003) ಕ್ಯಾಪ್ಟನ್ ನೆಮೊಪಾತ್ರದಲ್ಲಿ.
  • Encounter: The Killing (2002) — ತಾರಾ ದೇಶ್‌ಪಾಂಡೆ - ಇನ್ಸ್‌ಪೆಕ್ಟರ್
  • ಮಕ್ಬೂಲ್ (2003)
  • 3 ದೀವಾರೈನ್ (2003) — ಸುಜಾತ ಮೆಹ್ತಾ
  • ಮೇನ್ ಹೂನ್ ನಾ (2004) — ಬ್ರಿಗೇಡಿಯರ್ ಶೇಖರ್ ಶರ್ಮಾ
  • ಪಹೇಲಿ (2005) ನಿರೂಪಕನ ಧ್ವನಿ
  • ಇಕ್ಬಾಲ್ (2005)
  • ಬೀಯಿಂಗ್ ಸೈರಸ್ (2006) — ದಿನ್ಶಾ ಸೇತ್ನಾ
  • ಕೃಿಶ್ (2006)
  • ಓಂಕಾರ (2006)
  • ಬನಾರಸ್ (2006)
  • ಪರ್ಜಾನಿಯ (2007) — ಸಾರಿಕಾ
  • ಅಮಲ್ (2007)
  • ಖುದೆ ಕೆ ಲಿಯೇ (ಒಂದು ಪಾಕಿಸ್ತಾನಿ ಚಿತ್ರ) (2007)
  • ದಸ್ ಕಹಾನಿಯನ್ (2007)
  • ಮಿಥ್ಯಾ (2008)
  • ಶೂಟ್ ಆನ್ ಸೈಟ್ (2008)
  • ಜಾನೆ ತು ಯಾ ಜಾನೆ ನಾ (2008) - ಅಮರ್ ಸಿಂಗ್ ರಾಥೋರ್
  • ಎ ವೆಡ್ನಸ್ಡೆ (2008) - ಅಜ್ಞಾತ
  • ಮಹಾರಥಿ (2008) ಜೈಸಿಂಗ್ ಅಡೆನ್‌ವಾಲಾ
  • ಬಾರಾ ಆನಾ (2009) ಶುಕ್ಲಾ ಪಾತ್ರದಲ್ಲಿ
  • ಫಿರಾಖ್ (2009) ಖಾನ್ ಸಾಹಬ್ ಪಾತ್ರದಲ್ಲಿ
  • ಟುಡೇಸ್ ಸ್ಪೆಷಲ್ (2009) ಅಕ್ಬರ್ ಪಾತ್ರದಲ್ಲಿ.
  • ಇಶ್ಕಿಯಾ (2010) ಖಾಲು ಜಾನ್ ಪಾತ್ರ.
  • 7 ಖೂನ್ ಮಾಫ್ (2011) ತರಫ್‌ದಾರ್ ಪಾತ್ರ... 2011 ಫೆಬ್ರವರಿ 18ರಂದು ಬಿಡುಗಡೆ.
  • ರಾಜನೀತಿ (2010)
  • ಅಲ್ಲಾ ಕೆ ಬಂದೆ (2010)
  • ದೆಟ್ ಗರ್ಲ್ ಇನ್ ಯೆಲ್ಲೊ ಬೂಟ್ಸ್ (2010)
  • ದಿ ಹಂಟ್ - ಚಲನಚಿತ್ರ - ಭಾರತ (2010) ನಿರ್ಮಾಣ ತರುವಾಯ
  • ದಿ ಡರ್ಟಿ ಪಿಚ್ಚರ್ (೨೦೧೧)
  • ಜಾನ್ ಡೇ (೨೦೧೩)

ಸಹ-ನಿರ್ಮಾಪಕ

[ಬದಲಾಯಿಸಿ]
  • ರಘು ರೋಮಿಯೊ (2003) (ಬಿಡುಗಡೆಯಾಗಿದೆ)

ನಿರ್ದೇಶಕ

[ಬದಲಾಯಿಸಿ]
  • ಯೂ ಹೋತಾ ತೊ ಕ್ಯಾ ಹೋತಾ (2006)

ಉಲ್ಲೇಖಗಳು

[ಬದಲಾಯಿಸಿ]
  1. Narayanan, Renuka. "The way of the goofy". Indian Express. Retrieved 2009-05-31.
  2. "ಆರ್ಕೈವ್ ನಕಲು". Archived from the original on 2012-10-17. Retrieved 2011-01-11.
  3. "ಆರ್ಕೈವ್ ನಕಲು". Archived from the original on 2008-12-01. Retrieved 2011-01-11.
  4. "Naseeruddin Shah". Retrieved 22 Sept, 2009. {{cite web}}: Check date values in: |accessdate= (help)
  5. "Still waiting, for Mr Godot". The Indian Express. August 21, 1997. Archived from the original on ಏಪ್ರಿಲ್ 24, 2008. Retrieved ಜನವರಿ 11, 2011.
  6. http://www.biggyan.com/iqbal
  7. "ಆರ್ಕೈವ್ ನಕಲು". Archived from the original on 2018-12-26. Retrieved 2011-01-11.
  8. "Naseeruddin Shah's son falls off train". The Times Of India. 24 November 2006. Archived from indiatimes.com/ india/ Nasee ruddin-Shahs-son-falls-off-train/articleshow/548379.cms the original on 22 ಜುಲೈ 2013. Retrieved 16 ಆಗಸ್ಟ್ 2021. {{cite news}}: Check |url= value (help)
Awards and achievements
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
Preceded by Best Actor
for Sparsh

1980
Succeeded by
Preceded by Best Actor
for Paar

1985
Succeeded by
Preceded by Best Supporting Actor
for Iqbal

2006
Succeeded by

ಬಾಹ್ಯ ಕೊಂಡಿಗಳು

[ಬದಲಾಯಿಸಿ]