ವಿಷಯಕ್ಕೆ ಹೋಗು

ಸುನಿಲ್ ದತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುನಿಲ್ ದತ್

ಸುನಿಲ್ ದತ್ (ಜೂನ್ ೬, ೧೯೨೯ಮೇ ೨೫, ೨೦೦೫) ಭಾರತೀಯ ನಟ, ರಾಜಕಾರಣಿ. ಬಾಲಿವುಡ್ ಎಂದೇ ಖ್ಯಾತವಾದ ಹಿಂದಿ ಚಿತ್ರರಂಗದಲ್ಲಿ ನಾಯಕ ನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದವರು. ಪ್ರಸ್ತುತ ಮನಮೋಹನ್ ಸಿಂಗ್ ನಾಯಕತ್ವದ ಸರಕಾರದಲ್ಲಿ ಕೇಂದ್ರ ಮಂತ್ರಿಯಾಗಿ ಕ್ರೀಡೆ ಹಾಗೂ ಯುವಜನ ಖಾತೆಯನ್ನು ವಹಿಸಿಕೊಂಡಿದ್ದರು.

೧೯೨೯ರಲ್ಲಿ ಖರ್ಡ್ ಹಳ್ಳಿಯಲ್ಲಿ (ಇಂದಿನ ಪಾಕಿಸ್ತಾನ, ಅಂದಿನ ಭಾರತ) ಹುಟ್ಟಿದ ಇವರು ೧೯೪೭ರಲ್ಲಿ ಭಾರತದ ವಿಭಜನೆಯಾದ ನಂತರ ಹುಟ್ಟೂರನ್ನು ತೊರೆದರು. ಇವರು ವಿದ್ಯಾಭ್ಯಾಸ ಮಾಡಿದ್ದು ಮುಂಬೈನ ಜಯ್ ಹಿಂದ್ ಕಾಲೇಜಿನಲ್ಲಿ.

ವಿವಾಹದ ಚಿತ್ರ

ಹಿಂದಿ ಚಿತ್ರರಂಗದಲ್ಲಿ ಅಪಾರ ಯಶಸ್ಸು ಪಡೆದಿದ್ದ ನಟಿ ನರ್ಗಿಸ್ ಜೊತೆ "ಮದರ್ ಇಂಡಿಯಾ" ಚಿತ್ರದಲ್ಲಿ ಆಕೆಯ ಮಗನ ಪಾತ್ರದಲ್ಲಿ ಸುನಿಲ್ ದತ್ ನಟಿಸಿದರು. ಸುನಿಲ್ ದತ್ ಮತ್ತು ನರ್ಗಿಸ್ ೧೧-೦೩-೧೯೫೮ರಂದು ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳು. ಮಗ ಸಂಜಯ್ ದತ್ ಕೂಡ ಬಾಲಿವುಡ್ ತಾರೆ. ಸುನಿಲ್ ದತ್ ೨೫-೦೫-೨೦೦೫ರಂದು ಬಾಂದ್ರಾ, ಮುಂಬೈನಲ್ಲಿ ಹೃದಯಾಘಾತದಿಂದ ನಿದ್ರೆಯಲ್ಲಿಯೇ ಮರಣ ಹೊಂದಿದರು.

ಬಾಲಿವುಡ್

[ಬದಲಾಯಿಸಿ]

ಆಕಾಶವಾಣಿಯಲ್ಲಿ ಕೆಲಸ ಪ್ರಾರಂಭಿಸಿದ ಇವರು ಹಿಂದಿ ಸಿನೆಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು. ೧೯೫೬ರ ಹೊತ್ತಿಗೆ ಯಶಸ್ವಿ ನಟರಾದರು. ಮದರ್ ಇಂಡಿಯಾ ಚಿತ್ರದಲ್ಲಿ ಶ್ರೀಮಂತ ಜಮೀನುದಾರನ ವಿರುದ್ಧ ಬಂಡಾಯ ಹೂಡುವ ಬಡರೈತನ ಮಗನಾಗಿ ಕಾಣಿಸಿಕೊಂಡರು. ತಮ್ಮ ಪಾತ್ರದಲ್ಲಿ ಅತ್ಯಂತ ಸಹಜವಾಗಿ ನಟಿಸಿ ಎಲ್ಲರ ಗಮನ ಸೆಳೆದರು. ಮುಂದೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಜನಪ್ರಿಯ ನಟರಾದರು. "ಪಡೋಸನ್" ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿ ಜನಮನವನ್ನು ಗೆದ್ದರು. "ರೇಷ್ಮಾ ಔರ್ ಶೇರಾ" ಚಿತ್ರದಲ್ಲಿ ಬಹಳ ಗಂಭೀರ ಪಾತ್ರವನ್ನೂ ಅಷ್ಟೇ ಸಹಜವಾಗಿ ನಿರ್ವಹಿಸಿದರು. ಪ್ರಖ್ಯಾತ ಬಾಲಿವುಡ್ ನತಿಯರಾದ ಆಶಾ ಪರೇಖ್, ವಹೀದಾ ರಹಮಾನ್, ಸಾಧನಾ, ಸಾಯಿರಾ ಬಾನು ಮೊದಲಾದವರ ಜೊತೆ ನಟಿಸಿದ್ದಾರೆ.

ರಾಜಕೀಯ

[ಬದಲಾಯಿಸಿ]

೧೯೮೪ರಲ್ಲಿ ಇವರು ಕಾಂಗ್ರೆಸ್ (ಐ) ಪಕ್ಷವನ್ನು ಸೇರಿದರು, ಹಾಗೂ ಮುಂಬೈನ ವಾಯುವ್ಯ ಚುನಾವಣಾ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿ ಬಂದರು.

ಸಿನೆಮಾಗಳು

[ಬದಲಾಯಿಸಿ]

ಸಮಕಾಲೀನ ನಟರು: ನರ್ಗೀಸ್, ಜಾನಿ ವಾಲ್ಕರ್, ವಹೀದಾ ರಹ್ಮಾನ್, ಸಾಧನಾ, ಮೀನಾ ಕುಮಾರಿ, ನೂತನ್