ವಿಷಯಕ್ಕೆ ಹೋಗು

ದೇವ್ ಆನಂದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Dev Anand

Dev Anand (the blood pushy)in (1954)
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Dharam Dev Pishorimal Anand
(1923-09-26) ೨೬ ಸೆಪ್ಟೆಂಬರ್ ೧೯೨೩ (ವಯಸ್ಸು ೧೦೦)
Shakargarh Tehsil, Gurdaspur district, Punjab province, British India
ವೃತ್ತಿ Actor, producer, director -
ವರ್ಷಗಳು ಸಕ್ರಿಯ 1946-2011

(ಹುಟ್ಟಿದ್ದು 1923ರ ಸೆಪ್ಟೆಂಬರ್‌ 26 ರಂದು),(ಮರಣ : 2011ರ ಡಿಸೆಂಬರ್,3 ರಂದು)

ಧರಮ್‌ ದೇವ್‌ ಪಿಶೋರಿಮಲ್‌ ಆನಂದ್‌ (ಹಿಂದಿ:धर्मदेव आनन्द ಸರಳವಾಗಿ ದೇವ್ ಆನಂದ್‌ देव आनन्द ಎಂಬ ಹೆಸರಿನಿಂದಲೇ ಚಿರಪರಿಚಿತರಾಗಿದ್ದು, ಭಾರತದ ಓರ್ವ ಸುಪ್ರಸಿದ್ಧ ಬಾಲಿವುಡ್‌ ನಟ,ನಿರ್ದೇಶಕ ಮತ್ತು ಚಲನಚಿತ್ರ ನಿರ್ಮಾಪಕನಾಗಿದ್ದರು. ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದ ಮೂವರು ಸೋದರರ ಪೈಕಿ ದೇವ್‌ ಎರಡನೆಯವರು. ಅವರ ಹಿರಿಯ ಸೋದರ ಚೇತನ್‌ ಆನಂದ್‌ ಹಾಗೂ ಕಿರಿಯ ಸೋದರ ವಿಜಯ್‌ ಆನಂದ್‌ ಇಬ್ಬರೂ ಚಲನಚಿತ್ರ ನಿರ್ದೇಶಕರಾಗಿದ್ದರು. ಆತನ ಸೋದರಿ, ಶೀಲ್‌ ಕಾಂತಾ ಕಪೂರ್‌, ಸುಪ್ರಸಿದ್ಧ ಹಿಂದಿ ಮತ್ತು ಇಂಗ್ಲಿಷ್‌ ಚಲನಚಿತ್ರ ನಿರ್ದೇಶಕ ಶೇಖರ‍್ ಕಪೂರ್‌‌ ತಾಯಿಯಾಗಿದ್ದಾರೆ.

ಜೀವನ ಚರಿತ್ರೆ

[ಬದಲಾಯಿಸಿ]

ಧರಮ್‌ ದೇವ್‌ ಕುಂದನ್‌ ಲಾಲ್‌ ಪಿಶೋರಿಮಲ್‌ ಆನಂದ್‌ [೧] ಎಂಬ ಹೆಸರಿನೊಂದಿಗೆ, ಅವಿಭಜಿತ ಪಂಜಾಬ್‌ನಲ್ಲಿನ ಗುರುದಾಸ್‌ಪುರ ಜಿಲ್ಲೆಯಲ್ಲಿ ಪಿಶೋರಿಮಲ್‌ ಆನಂದ್‌ ಎಂಬ ಓರ್ವ ಅನುಕೂಲಸ್ಥ ವಕೀಲರ ಮಗನಾಗಿ ದೇವ್‌ ಜನಿಸಿದರು. ಲಾಹೋರ್‌ನ ಸರ್ಕಾರಿ ಕಾಲೇಜಿನಿಂದ (ಈಗ ಪಾಕಿಸ್ತಾನದಲ್ಲಿದೆ) ಇಂಗ್ಲಿಷ್‌ ಸಾಹಿತ್ಯದಲ್ಲಿ ಅವರು ಪದವಿ ಶಿಕ್ಷಣವನ್ನು ಪಡೆದರು. ನಟನೆಯೆಡೆಗೆ ಅವರಿಗಿದ್ದ ಒಲವು ಅವರನ್ನು ತನ್ನ ಹುಟ್ಟಿದೂರನ್ನು ಬಿಟ್ಟು ಹಿಂದಿ ಚಲನಚಿತ್ರೋದ್ಯಮದ ಕೇಂದ್ರವಾದ ಮುಂಬಯಿಗೆ ಬರುವಂತೆ ಮಾಡಿತು. ಮುಂಬಯಿಯ ಚರ್ಚ್‌‌ಗೇಟ್‌ನಲ್ಲಿರುವ ಸೇನಾ ಸೆನ್ಸಾರ್‌ ಕಚೇರಿಯಲ್ಲಿ ತನ್ನ ವೃತ್ತಿಜೀವನವನ್ನು ದೇವ್‌ ಪ್ರಾರಂಭಿಸಿದರು. ಆಗ ಅವರಿಗೆ ನಿಗದಿಯಾದ ಸಂಬಳ ರೂ. 160 ಮಾತ್ರ.

ಕೆಲವೇ ದಿನಗಳಲ್ಲಿ ಪ್ರಭಾತ್‌ ಟಾಕೀಸ್‌ ಸಂಸ್ಥೆಯು ತನ್ನ ಹಂ ಏಕ್‌ ಹೈ (1946) ಚಿತ್ರದಲ್ಲಿ ಓರ್ವ ನಟನಾಗಿ ಕಾರ್ಯನಿರ್ವಹಿಸಲು ಅವರಿಗೆ ಆಹ್ವಾನವಿತ್ತಾಗ, ಅವರ ಬದುಕಿಗೊಂದು ತಿರುವು ಸಿಕ್ಕಂತಾಯಿತು.

ಈ ಚಲನಚಿತ್ರಕ್ಕಾಗಿ ಪುಣೆಯಲ್ಲಿ ಚಿತ್ರೀಕರಣವನ್ನು ನಡೆಸುತ್ತಿದ್ದಾಗ, ಸಹವರ್ತಿ ನಟರಾಗಿದ್ದ ಗುರುದತ್‌ ಜೊತೆಯಲ್ಲಿ ದೇವ್‌ಗೆ ಸ್ನೇಹವುಂಟಾಯಿತು.

ಅಶೋಕ್‌ ಕುಮಾರ್‌ರಿಂದ ದೇವಾನಂದ್‌ಗೆ ಅವರ ಮೊಟ್ಟಮೊದಲ ವೃತ್ತಿ ಜೀವನದ ದೊಡ್ಡ ತಿರುವು ಸಿಕ್ಕಿತು. ಸ್ಟುಡಿಯೋಗಳಲ್ಲಿ ಸುಳಿದಾಡುತ್ತಿದ್ದ ದೇವ್‌ರನ್ನು ಗುರುತಿಸಿದ ಅಶೋಕ್‌ ಕುಮಾರ್‌, ಬಾಂಬೆ ಟಾಕೀಸ್‌ ನಿರ್ಮಾಣದ ಜಿದ್ದಿ ಚಿತ್ರದ ನಾಯಕ ಪಾತ್ರಕ್ಕಾಗಿ ಆರಿಸಿದರು. ದೇವಾನಂದ್‌ ಜೊತೆಯಲ್ಲಿ ಕಾಮಿನಿ ಕೌಶಲ್‌ (1948) ನಟಿಸಿದ್ದ ಈ ಚಿತ್ರ ಒಂದು ದೊಡ್ಡ ಯಶಸ್ಸನ್ನು ದಾಖಲಿಸಿತು. 1949ರಲ್ಲಿ, ದೇವ್‌ ನಿರ್ಮಾಪಕರಾಗಿ ಮಾರ್ಪಟ್ಟು ತನ್ನದೇ ಸ್ವಂತದ ನವಕೇತನ್‌ ಕಂಪನಿಯನ್ನು ಪ್ರಾರಂಭಿಸಿದರು. ಇದು ಚಲನಚಿತ್ರಗಳ ನಿರ್ಮಾಣವನ್ನು ಈಗಲೂ ಮುಂದುವರೆಸಿದೆ.

ಇದಾದ ನಂತರ ದೇವ್‌ರದ್ದು ಯಶಸ್ಸಿನ ಹಾದಿ. ಪತ್ತೆದಾರಿ ರೋಮಾಂಚಕ ಚಿತ್ರವಾದ ಬಾಝಿ ಗೆ (1951) ಸಂಬಂಧಿಸಿ ದೇವ್‌ ಓರ್ವ ನಿರ್ದೇಶಕನಾಗಿ ಗುರುದತ್‌‌ ಮೇಲೆ ಭರವಸೆ ಇರಿಸಿದರು. ಈ ಸೃಜನಶೀಲ ಸಹಯೋಗದ ಪರವಾಗಿ ದಾಳವು ಉರುಳಿತು. ಗೀತಸಾಹಿತಿ ಸಾಹಿರ‍್ ಲುಧಿಯಾನ್ವಿ ಬರೆದ ಗೀತೆಯಾದ ತಡಬೀರ್‌ ಸೆ ಬಿಗ್ಡೀ ಹುಯೀ ತಕ್ದೀರ್‌ ಬನಾ ದೇ , ಭವಿಷ್ಯಸೂಚಕವಾಗಿತ್ತು ಹಾಗೂ ದೇವಾನಂದ್‌ ಓರ್ವ ನಿಜವಾದ ತಾರೆಯಾಗಿ ಮಾರ್ಪಟ್ಟರು.

ಜಾಲ್‌ (1952) ಚಿತ್ರದಲ್ಲಿ ನಿಷೇಧಾತ್ಮಕ ಛಾಯೆಯ ಪಾತ್ರಗವನ್ನೂ ಅವರು ನಿರ್ವಹಿಸಿದ್ದಾರೆ. ಅವರ ರಾಹೀ ಮತ್ತು ಆಂಧಿಯಾನ್‌ ಚಲನಚಿತ್ರಗಳನ್ನು ರಾಜ್‌ ಕಪೂರ್‌‌ಆವಾರಾ ಚಿತ್ರದ ಜೊತೆಯಲ್ಲಿಯೇ ಬಿಡುಗಡೆ ಮಾಡಲಾಗಿತ್ತು. ಅದೇ ವರ್ಷ, ಟ್ಯಾಕ್ಸಿ ಡ್ರೈವರ್‌ ಚಿತ್ರವು ಜಯಭೇರಿ ಬಾರಿಸಿತು. ಕಲ್ಪನಾ ಕಾರ್ತಿಕ್‌ ಈ ಚಿತ್ರದ ನಾಯಕಿ. ದೇವಾನಂದ್‌ ಕಲ್ಪನಾ ಕಾರ್ತಿಕ್‌ ಚಿತ್ರೀಕರಣದ ಸೆಟ್‌ನಲ್ಲೆ ಹೆಚ್ಚಿನ ಸದ್ದು ಗದ್ದಲವಿಲ್ಲದ ಸಮಾರಂಭದಲ್ಲಿ ಮದುವೆಯಾದರು.

ಮದುವೆಯಿಂದಾಗಿ ಹಾಗೂ 1956ರಲ್ಲಿ ಮಗ ಸುನೀಲ್‌ ಹುಟ್ಟಿದ್ದರಿಂದಾಗಿ ದೇವಾನಂದ್‌ ವೃತ್ತಿಜೀವನಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಸುರಿಮಳೆಯ ಶೈಲಿಯಲ್ಲಿ ಸಂಬಾಷಣೆ ಹೇಳುವಿಕೆ, ಟೋಪಿಗಳ ಒಂದು ಶ್ರೇಣಿಯನ್ನು ಹೊಂದಿರುವುದು (ಉದಾಹರಣೆಗಾಗಿ ಏ ಮೇರೀ ಟೋಪಿ ಪಲಟ್‌ ಕೆ ಆ ಗೀತೆಯನ್ನು ನೋಡಿ), ಮತ್ತು ಮಾತನಾಡುವಾಗ ತಲೆಯನ್ನಾಡಿಸುವ ಪ್ರವೃತ್ತಿ ಮುನಿಮ್‌ಜಿ , C.I.D. ಮತ್ತು ಪೇಯಿಂಗ್‌ ಗೆಸ್ಟ್‌ ನಂಥ ಚಿತ್ರಗಳಲ್ಲಿ ದೇವಾನಂದ್‌ ಶೈಲಿಯಾಗಿಹೋಯಿತು. ದೇವ್ ಶೈಲಿಯನ್ನು ಪ್ರೇಕ್ಷಕರು ಪ್ರೀತಿಯಿಂದ ಸ್ವೀಕರಿಸಿದರು ಮತ್ತು ಈ ಶೈಲಿಯು ವ್ಯಾಪಕ ಅನುಕರಣೆಗೆ ಒಳಗಾಯಿತು. 1950ರ ದಶಕದ ಉಳಿದ ಭಾಗದಲ್ಲಿ ದೇವ್‌ ನಟಿಸಿದ ಚಿತ್ರಗಳು ಗಲ್ಲಾಪೆಟ್ಟಿಗೆಯ ಯಶಸ್ಸಿನ ಸರಮಾಲೆಯನ್ನೇ ಧರಿಸಿದವು. 1955ರಲ್ಲಿ ಬಂದ ಇನ್‌ಸಾನಿಯತ್‌ ಚಿತ್ರದಲ್ಲಿ ದೇವ್ ದಿಲೀಪ್‌ ಕುಮಾರ್ ಜೊತೆಯಲ್ಲಿ ನಟಿಸಿದರು.

ದೇವಾನಂದ್‌ ತನ್ನದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿದ್ದರೂ ಸಹ, ಅವರ ಟೀಕಾಕಾರರು ಅವರ ಅಭಿನಯ ಸಾಮರ್ಥ್ಯದ ಕುರಿತು ದೋಷಾರೋಪಣೆ ಮಾಡುತ್ತಾರೆ. ಆದಾಗ್ಯೂ, ಕಾಲಾ ಪಾನಿ (1958) ಚಿತ್ರದಲ್ಲಿ ದೇವ್‌ ನೀಡಿದ ಅಭಿನಯದಿಂದಾಗಿ ದೇವ್‌ರಿಗೆ ಅತ್ಯುತ್ತಮ ನಟ ಪ್ರಶಸ್ತಿಯು ಲಭಿಸಿತು. ಈ ಚಿತ್ರದಲ್ಲಿ ದೇವ್ ಆಪಾದನೆ ಹೊರಿಸಲ್ಪಟ್ಟು ಪಿತೂರಿಗೊಳಗಾದ ತನ್ನ ತಂದೆಯ ಮೇಲಿನ ಕಳಂಕವನ್ನು ತೊಡೆದುಹಾಕಲು ಯಾವುದೇ ಮಟ್ಟಕ್ಕೂ ಹೋಗುವ ಮಗನ ಪಾತ್ರದಲ್ಲಿ ನಟಿಸಿದ್ದಾರೆ.

ಗಾಯಕಿ-ನಟಿ ಸುರೈಯಾ ಜೊತೆಗಿನ ಪ್ರಣಯ ಸಂಬಂಧದಲ್ಲಿ ಅವರಿದ್ದರು, ಅವರಿಬ್ಬರೂ ಆರು ಚಲನಚಿತ್ರಗಳಲ್ಲಿ ಒಟ್ಟಿಗೇ ನಟಿಸಿದರು. ಚಲನಚಿತ್ರದಲ್ಲಿನ ಒಂದು ಹಾಡಿನ ಸನ್ನಿವೇಶದ ಚಿತ್ರೀಕರಣದ ಸಂದರ್ಭದಲ್ಲಿ ದೋಣಿಯೊಂದು ತಲೆಕೆಳಗಾದಾಗ, ಮುಳುಗುತ್ತಿದ್ದ ಸುರೈಯಾಳನ್ನು ದೇವಾನಂದ್‌ ರಕ್ಷಿಸಿದ್ದರು. ಈ ಘಟನೆಯಿಂದಾಗಿ ದೇವ್ ಬಗ್ಗೆ ಸುರೈಯಾಗೆ ಒಲವು ಮೂಡಿತು. ಆದರೆ ಸುರೈಯಾ ಮುಸ್ಲಿಂರಾಗಿದ್ದರಿಂದ ಅವಳ ಅಜ್ಜಿ ಈ ಸಂಬಂಧಕ್ಕೆ ತನ್ನ ವಿರೋಧವನ್ನು ವ್ಯಕ್ತಪಡಿಸಿದರು. ಆದ್ದರಿಂದ ಸುರೈಯಾ ತನ್ನ ಜೀವನಪರ್ಯಂತ ಅವಿವಾಹಿತೆಯಾಗಿಯೇ ಉಳಿದಳು. [ಸೂಕ್ತ ಉಲ್ಲೇಖನ ಬೇಕು]

ದೇವ್‌ರ ಮೊಟ್ಟಮೊದಲ ವರ್ಣಚಿತ್ರ ಗೈಡ್‌‌ ನಲ್ಲಿ ಅವರ ನಾಯಕಿಯಾಗಿ ವಹೀದಾ ರೆಹಮಾನ್‌ ನಟಿಸಿದ್ದರು. ಈ ಚಿತ್ರವು R. K. ನಾರಾಯಣ್‌ ಬರೆದಿದ್ದ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿತ್ತು. ಈ ಕಾದಂಬರಿಯನ್ನು ಚಲನಚಿತ್ರವನ್ನಾಗಿಸುವಲ್ಲಿ ಸ್ವತಃ ದೇವ್ ಆನಂದ್‌ ಪ್ರಚೋದಕ ಶಕ್ತಿಯಾಗಿದ್ದರು. ಈ ಕುರಿತು ಕಾದಂಬರಿಕಾರ ನಾರಾಯಣ್‌ರನ್ನು ಭೇಟಿಯಾದ ದೇವ್, ಈ ಯೋಜನೆಗೆ ತಮ್ಮ ಒಪ್ಪಿಗೆ ನೀಡುವಂತೆ ಅವರ ಮನವೊಲಿಸಿದರು. ಇಂಡೋ-US ಸಹನಿರ್ಮಾಣದ ಈ ಯೋಜನೆಯನ್ನು ಪ್ರಾರಂಭಿಸಲು ದೇವ್‌ ಹಾಲಿವುಡ್‌ನಲ್ಲಿದ್ದ ತನ್ನ ಸ್ನೇಹಿತರನ್ನು ಸಂಪರ್ಕಿಸಿದ್ದರು. ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಏಕಕಾಲಿಕವಾಗಿ ಚಿತ್ರೀಕರಣಗೊಂಡ ಈ ಚಿತ್ರ 1965ರಲ್ಲಿ ಬಿಡುಗಡೆಯಾಯಿತು. ಈ ಚಿತ್ರ ದೇವ್‌ರ ಸಾರ್ವಕಾಲಿಕ ಅತ್ಯುತ್ತಮ ಚಿತ್ರ ಎಂದು ಅನೇಕರಿಂದ ಪರಿಗಣಿಸಲ್ಪಟ್ಟಿದೆ.[ಸೂಕ್ತ ಉಲ್ಲೇಖನ ಬೇಕು]

ದೇವ್ ಕಿರಿಯ ಸೋದರ ವಿಜಯ್‌ ಆನಂದ್‌‌ರಿಂದ ನಿರ್ದೇಶಿಸಲ್ಪಟ್ಟ ಗೈಡ್ ಚಿತ್ರ‌, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ರಾಜು ಎಂಬ ಓರ್ವ ಪ್ರವಾಸಿ ಮಾರ್ಗದರ್ಶಿಯ ಪಾತ್ರವನ್ನು ದೇವ್‌ ನಿರ್ವಹಿಸಿದ್ದರು. ಸ್ವಾತಂತ್ರಕ್ಕಾಗಿ ಹಾತೊರೆಯುವ ರೋಸಿಗೆ (ವಹೀದಾ) ಬೆಂಬಲವಾಗಿ ನಿಲ್ಲುವ ಪಾತ್ರ ಇದಾಗಿತ್ತು. ವೈಯಕ್ತಿಕ ಲಾಭಕ್ಕಾಗಿ ಅವಳನ್ನು ಬಳಸಿಕೊಳ್ಳುವ ಇರದ ಗೌರವಾನ್ವಿತ ಪಾತ್ರವಾಗಿತ್ತು. ಪಾತ್ರದ ಗಟ್ಟಿತನದೊಂದಿಗೆ ತನ್ನ ಶೈಲಿಯನ್ನೂ ಹದವಾಗಿ ಬೆರೆಸಿ ದೇವ್ ಒಂದು ಪ್ರಭಾವಪೂರ್ಣ ಅಭಿನಯವನ್ನು ನೀಡಿದರು. ಪ್ರೀತಿ, ಅವಮಾನ ಹಾಗೂ ಸಂರಕ್ಷಣೆಯ ಮೂಲಕವಿರುವ ತನ್ನ ಹಾದಿಯಲ್ಲಿ ತನ್ನ ಭಾವನೆಗಳೊಂದಿಗೆ ಜಯಸಾಧಿಸಲು ಪ್ರಯತ್ನಿಸುವ ಓರ್ವ ವ್ಯಕ್ತಿಯಾಗಿ ದೇವ್‌ನ ಅಭಿನಯ ಹೃದಯಂಗಮವಾಗಿತ್ತು.

ಜ್ಯೂಯೆಲ್‌ ಥೀಫ್‌ ಚಿತ್ರಕ್ಕಾಗಿ ದೇವ್, ವಿಜಯ್‌ ಆನಂದ್‌ ಜೊತೆಗೆ ಮತ್ತೊಮ್ಮೆ ಕೈಜೋಡಿಸಿದರು. ಜ್ಯೂಯೆಲ್‌ ಥೀಫ್‌ ಚಿತ್ರದಲ್ಲಿ ವೈಜಯಂತಿಮಾಲಾ ನೇತೃತ್ವದಲ್ಲಿನ ಸುಂದರಿಯರ ಒಂದು ತಂಡವೇ ಜಮಾವಣೆಗೊಂಡಿದ್ದು, ತನುಜಾ, ಅಂಜು ಮಹೇಂದ್ರು, ಫರ್ಯಾಲ್‌ ಮತ್ತು ಹೆಲೆನ್‌ ಅವರಲ್ಲಿ ಸೇರಿದ್ದರು.

ಅವರ ಸಹಯೋಗದ ನಂತರದ ಚಿತ್ರವಾದ ಜಾನಿ ಮೇರಾ ನಾಮ್‌ (1970) ಅಭೂತಪೂರ್ವ ಯಶಸ್ಸನ್ನು ಗಳಿಸಿತು. ಎಪ್ಪತರ ದಶಕದಲ್ಲಿ ಭರಾಟೆಯನ್ನು ತಗ್ಗಿಸಿಕೊಂಡ ರಾಜ್‌ಕಪೂರ‍್ ಮತ್ತು ದಿಲೀಪ್‌ ಕುಮಾರ್‌ಗಿಂತ ಭಿನ್ನವಾಗಿ, ದೇವ್‌ ಓರ್ವ ಪ್ರಣಯ ನಾಯಕನಾಗಿ ಮುಂದುವರಿದುಕೊಂಡು ಬಂದರು.

ನಿರ್ದೇಶಕರಾಗಿ ಮೊಟ್ಟಮೊದಲ ಪ್ರಯತ್ನದ ಗೂಢಚಾರಿಕೆಯ ನಾಟಕೀಯ ಚಿತ್ರವಾದ ಪ್ರೇಮ್‌ ಪೂಜಾರಿ ವಿಫಲಗೊಂಡಿತಾದರೂ, ಅವರ ನಿರ್ದೇಶನದ 1971ರಲ್ಲಿ ಹೊರಬಂದ ಹರೇ ರಾಮ ಹರೇ ಕೃಷ್ಣ ಚಿತ್ರ ದೇವ್‌ರಿಗೆ ಯಶಸ್ಸನ್ನು ಹೊತ್ತುತಂದಿತು. ಆಗ ಚಾಲ್ತಿಯಲ್ಲಿದ್ದ ಹಿಪ್ಪೀ ಸಂಸ್ಕೃತಿಯ ಕುರಿತು ಈ ಚಿತ್ರವು ಬೆಳಕು ಚೆಲ್ಲಿತು. ತುಂಡುಲಂಗವನ್ನು ಧರಿಸಿ ಆಟವಾಡುವ, ಗಾಂಜಾ-ಸೇದುವ ಜಾನೀಸ್‌ ಪಾತ್ರದಲ್ಲಿ ನಟಿಸಿದ್ದ ಝೀನತ್‌ ಅಮಾನ್‌, ರಾತ್ರೋರಾತ್ರಿಯಲ್ಲಿ ಒಂದು ಸಂಚಲನೆಯನ್ನೇ ಸೃಷ್ಟಿಸಿದ್ದಳು. ಹರಿತವಾದ ಪ್ರಚಲಿತ ವಸ್ತು-ವಿಷಯಗಳ ಕುರಿತಾಗಿ ಚಲನಚಿತ್ರಗಳನ್ನು ಮಾಡುವವರು ಎಂಬ ಹೆಸರಿನಿಂದ ದೇವಾನಂದ್‌ ಗುರುತಿಸುವಂತಾದರು. ಅದೇ ವರ್ಷ, ತೇರೇ ಮೇರೇ ಸಪ್ನೆ ಚಿತ್ರದಲ್ಲಿ ಅವರುಮುಮ್ತಾಜ್‌ ಜೊತೆಯಲ್ಲಿ ನಟಿಸಿದರು. ಇದು A. J. ಕ್ರೋನಿನ್‌ದಿ ಸಿಟಡೆಲ್‌ ಕಾದಂಬರಿಯನ್ನು ಆಧರಿಸಿದ ಚಿತ್ರವಾಗಿತ್ತು. ದೇವ್ ಸೋದರ ವಿಜಯ್‌ ಈ ಚಿತ್ರವನ್ನು ನಿರ್ದೇಶಿಸಿದರು.

ದೇವ್ ಶೋಧಗಳಾದ ಝೀನತ್‌ ಹಾಗೂ ನಂತರದಲ್ಲಿ ಬಂದ ಟೀನಾ ಮುನಿಮ್‌ರ (ದೇವ್‌ನ ಅದ್ಭುತ ಯಶಸ್ಸಿನ ಚಿತ್ರಗಳಲ್ಲಿ ಕೊನೆಯದು ಎಂದು ಗುರುತಿಸಲ್ಪಟ್ಟಿರುವ, 1978ರಲ್ಲಿ ಬಂದ ದೇಸ್‌ ಪರದೇಸ್‌ ಚಿತ್ರದ ನಾಯಕಿ) ಹಾಜರಿಯಿಂದಾಗಿ ಐವತ್ತರ ವಯಸ್ಸಿಗೆ ಕಾಲಿಡುತ್ತಿದ್ದ ದೇವಾನಂದ್‌ ನಿತ್ಯನೂತನ ತಾರೆಯೆಂಬ ಹಣೆಪಟ್ಟಿಗೆ ಮತ್ತಷ್ಟು ಹುರುಪು ತುಂಬಿದಂತಾಯಿತು.

ರಾಜಕೀಯವಾಗಿ ಅರಿವನ್ನು ಮೂಡಿಸಿಕೊಂಡಿರುವ ಮತ್ತು ಸಕ್ರಿಯರಾಗಿರುವ ಕೆಲವೇ ಭಾರತೀಯ ನಟರು/ಚಲನಚಿತ್ರೋದ್ಯಮಿಗಳ ಪೈಕಿ ದೇವ್‌ ಆನಂದ್‌ ಒಬ್ಬನಾಗಿದ್ದರು. ಆಗಿನ ಭಾರತದ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರಿಂದ ಹೇರಲ್ಪಟ್ಟ ಆಂತರಿಕ ತುರ್ತುಪರಿಸ್ಥಿತಿಯ ವಿರುದ್ಧ ಎದ್ದುನಿಂತ ಚಲನಚಿತ್ರರಂಗದ ಪ್ರಸಿದ್ಧವ್ಯಕ್ತಿಗಳ ಒಂದು ಗುಂಪಿನ ನೇತೃತ್ವವನ್ನು ಅವರು ವಹಿಸಿದ್ದರು. 1977ರಲ್ಲಿ ನಡೆದ ಭಾರತೀಯ ಸಂಸತ್ತಿನ ಚುನಾವಣೆಗಳಲ್ಲಿ ತನ್ನ ಬೆಂಬಲಿಗರೊಂದಿಗೆ ಅವರೂ ಇಂದಿರಾಗಾಂಧಿಯ ವಿರುದ್ಧ ಸಕ್ರಿಯವಾಗಿ ಪ್ರಚಾರ ನಡೆಸಿದರು. ಇದರಲ್ಲಿ ಚಲನಚಿತ್ರರಂಗದ ಕೆಲವೇ ಮಂದಿ ಭಾಗವಹಿಸಿದ್ದರು. ನ್ಯಾಷನಲ್‌ ಪಾರ್ಟಿ ಆಫ್‌ ಇಂಡಿಯ ಎಂಬ ಒಂದು ಪಕ್ಷವನ್ನೂ ಕೂಡ ದೇವ್ ರೂಪಿಸಿದರೂ, ನಂತರದಲ್ಲಿ ಅದನ್ನು ವಿಸರ್ಜಿಸಿದರು.

ದೇವ್‌ರ ಬಹುತೇಕ ಚಲನಚಿತ್ರಗಳು ಸಾಮಾಜಿಕವಾಗಿ ಸಮಂಜಸವಾದ ವಿಷಯಗಳನ್ನು ಚರ್ಚಿಸಿವೆ, ಮತ್ತು ದೇವ್ ಇದರ ಕುರಿತು ಸಂದರ್ಶನಗಳಲ್ಲಿ ಪದೇ ಪದೇ ಒತ್ತಿಹೇಳುತ್ತಾರೆ; ದೇವ್ ಚಲನಚಿತ್ರಗಳು ಅವರ ವೈಯಕ್ತಿಕ ದೃಷ್ಟಿಕೋನಗಳನ್ನು ಪ್ರತಿನಿಧಿಸುತ್ತವೆ ಎಂಬುದು ಆವರ ಭಾವನೆ.[ಸೂಕ್ತ ಉಲ್ಲೇಖನ ಬೇಕು]

1978ರಲ್ಲಿ ಬಂದ ದೇಸ್‌ ಪರದೇಸ್‌ ಚಿತ್ರವು ಯಶಸ್ಸು ಕಂಡಾಗಿನಿಂದ 1980ರ ದಶಕ, 1990ರ ದಶಕ ಮತ್ತು 2000ರ ದಶಕದಲ್ಲಿ ಬಂದ ದೇವ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲಗೊಂಡವು. 2005ರಲ್ಲಿ ಬಂದ ಮಿ. ಪ್ರೈಮ್‌ ಮಿನಿಸ್ಟರ್‌ ಎಂಬ ಚಲನಚಿತ್ರವು ಆತನ ಅತ್ಯಂತ ಇತ್ತೀಚಿನ ಕಾಣಿಸಿಕೊಳ್ಳುವಿಕೆಗೆ ಸಾಕ್ಷಿಯಾಯಿತು.

ದೇವ್ ಆನಂದ್‌ ಚಲನಚಿತ್ರಗಳು ಅವುಗಳಲ್ಲಿನ ಯಶಸ್ವೀ ಗೀತೆಗಳಿಗಾಗಿ ಹೆಸರಾಗಿವೆ. ಬಾಲಿವುಡ್‌ನ ಅತ್ಯಂತ ಜನಪ್ರಿಯ ಹಾಡುಗಳ ಪೈಕಿ ಕೆಲವೊಂದು ದೇವ್ ಚಲನಚಿತ್ರಗಳಿಗೇ ಸೇರಿದ್ದವು.[ಸೂಕ್ತ ಉಲ್ಲೇಖನ ಬೇಕು] ಸಂಗೀತ ಸಂಯೋಜಕರಾದ ಶಂಕರ‍್-ಜೈಕಿಶನ್‌, O. P. ನಯ್ಯರ್‌, ಸಚಿನ್‌ ದೇವ್‌ ಬರ್ಮನ್‌ ಮತ್ತು ಆತನ ಮಗ ರಾಹುಲ್‌ ದೇವ್‌ ಬರ್ಮನ್‌, ಗೀತಸಾಹಿತಿಗಳಾದ ಹಸ್ರತ್‌ ಜೈಪುರಿ, ಮಜ್ರೂಹ್‌ ಸುಲ್ತಾನ್‌ಪುರಿ, ನೀರಜ್‌‌, ಶೈಲೇಂದ್ರ, ಆನಂದ್‌ ಬಕ್ಷಿ, ಮತ್ತು ಹಿನ್ನೆಲೆ ಗಾಯಕರಾದ ಮೊಹಮ್ಮದ್‌ ರಫಿ, ಮುಕೇಶ್‌ ಮತ್ತು ಕಿಶೋರ್‌ ಕುಮಾರ್ ಮೊದಲಾದವರೊಂದಿಗಿನ ದೇವ್ ಸಹಯೋಗವು ಒಂದಷ್ಟು ಅತ್ಯಂತ ಜನಪ್ರಿಯ ಹಾಡುಗಳನ್ನು ಹುಟ್ಟುಹಾಕಿದವು ಎಂದು ಹೇಳಬಹುದು.

2007ರ ಸೆಪ್ಟೆಂಬರ್‌ನಲ್ಲಿ, "ರೋಮಾನ್ಸಿಂಗ್‌ ವಿತ್‌ ಲೈಫ್‌" ಎಂಬ ಹೆಸರಿನ ದೇವ್‌ರ ಆತ್ಮಕಥೆಯು ಭಾರತದ ಪ್ರಧಾನ ಮಂತ್ರಿ ಡಾ. ಮನ್‌ಮೋಹನ್‌ ಸಿಂಗ್‌ರವರೊಂದಿಗಿನ ಒಂದು ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಬಿಡುಗಡೆಯಾಯಿತು. [೧]

ಪ್ರಶಸ್ತಿಗಳು, ಗೌರವಗಳು ಮತ್ತು ಮನ್ನಣೆಗಳು

[ಬದಲಾಯಿಸಿ]

ಫಿಲ್ಮ್‌ಫೇರ್ ಪ್ರಶಸ್ತಿಗಳು

[ಬದಲಾಯಿಸಿ]

ರಾಷ್ಟ್ರೀಯ ಗೌರವಗಳು ಹಾಗೂ ಮನ್ನಣೆಗಳು

[ಬದಲಾಯಿಸಿ]
 • 1996 - ಸ್ಟಾರ್‌ ಸ್ಕ್ರೀನ್‌ ಜೀವಮಾನ ಸಾಧನೆಯ ಪ್ರಶಸ್ತಿ
 • 1997 - ಭಾರತೀಯ ಚಲನಚಿತ್ರೋದ್ಯಮಕ್ಕೆ ಆತ ನೀಡಿರುವ ಮಹೋನ್ನತ ಸೇವೆಗಾಗಿ ದೊರೆತಿರುವ "ಮುಂಬಯಿ ಅಕಾಡೆಮಿ ಆಫ್ ಮೂವಿಂಗ್ ಇಮೇಜಸ್‌ ಪ್ರಶಸ್ತಿ". [೪]
 • 1998 - ಕಲ್ಕತ್ತಾದಲ್ಲಿನ ಉಜಾಲಾ ಆನಂದ್‌ಲೋಕ್‌ ಚಲನಚಿತ್ರ ಪ್ರಶಸ್ತಿಗಳ ಸಮಿತಿಯಿಂದ ನೀಡಲ್ಪಟ್ಟ "ಜೀವಮಾನ ಸಾಧನೆಯ ಪ್ರಶಸ್ತಿ". [೫]
 • 1999 - ಭಾರತೀಯ ಸಿನಿಮಾಕ್ಕೆ ಆತ ನೀಡಿದ ಅಗಾಧವಾದ ಕೊಡುಗೆಗಾಗಿ' ನವದೆಹಲಿಯಲ್ಲಿ ಆತನಿಗೆ ನೀಡಲಾದ ಸ್ಯಾನ್‌ಸುಯಿ "ಜೀವಮಾನ ಸಾಧನೆಯ ಪ್ರಶಸ್ತಿ". [೬]
 • 2000 - ಮುಂಬಯಿಯಲ್ಲಿ ಚಿತ್ರರಸಿಕರ ವತಿಯಿಂದ ನೀಡಲಾದ "ಮೆಗಾ ಮೂವಿ ಮೇಸ್ಟ್ರೋ ಆಫ್ ದಿ ಮಿಲೆನಿಯಂ" ಪ್ರಶಸ್ತಿ. [೭]
 • 2001 - ಪದ್ಮಭೂಷಣ ಪ್ರಶಸ್ತಿ (ಭಾರತ ಸರ್ಕಾರದಿಂದ ನೀಡಲಾಗುವ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ). [೮]
 • 2001 - ಭಾರತೀಯ ಸಿನಿಮಾಕ್ಕೆ ಆತ ನೀಡಿದ ಕೊಡುಗೆಗಾಗಿ ನೀಡಲಾದ "ವಿಶೇಷ ಸ್ಕ್ರೀನ್‌ ಪ್ರಶಸ್ತಿ". [೯]
 • 2001 - ಝೀ ಗೋಲ್ಡ್‌ ಬಾಲಿವುಡ್‌ ಪ್ರಶಸ್ತಿ ಸಮಾರಂಭದಲ್ಲಿ ನೀಡಲಾದ "ಎವರ್‌ಗೋಲ್ಡ್‌ ಸ್ಟಾರ‍್ ಆಫ್‌ ದಿ ಮಿಲೆನಿಯಂ" ಪ್ರಶಸ್ತಿ [೧೦]
 • 2002 - ಚಲನಚಿತ್ರರಂಗದಲ್ಲಿ ಶ್ರೇಷ್ಠತೆಯನ್ನು ಮೆರೆದವರಿಗಾಗಿ ನೀಡಲಾಗುವ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ.
 • 2003 - ದಕ್ಷಿಣ ಆಫ್ರಿಕಾಜೋಹಾನ್ಸ್‌ಬರ್ಗ್‌ನಲ್ಲಿ, IIFA ಪ್ರಶಸ್ತಿ [೧೧] ಸಮಾರಂಭದಲ್ಲಿ ನೀಡಲಾದ ’ಭಾರತೀಯ ಸಿನಿಮಾ ರಂಗದಲ್ಲಿನ ಮಹೋನ್ನತ ಸಾಧನೆಗಾಗಿ ನೀಡಲಾಗುವ "ಜೀವಮಾನ ಸಾಧನೆಯ ಪ್ರಶಸ್ತಿ". [೧೨]
 • 2004 - ಅಟ್ಲಾಂಟಿಕ್‌ ಸಿಟಿಯಲ್ಲಿ (ಅಮೆರಿಕಾ ಸಂಯುಕ್ತ ಸಂಸ್ಥಾನಗಳು) ನೀಡಲಾದ "ಭಾರತೀಯ ಸಿನಿಮಾದ ದಂತಕಥೆ" ಪ್ರಶಸ್ತಿ. [೧೩] Archived 2006-05-08 ವೇಬ್ಯಾಕ್ ಮೆಷಿನ್ ನಲ್ಲಿ.
 • 2004 - ಭಾರತೀಯ ಮನರಂಜನಾ ಉದ್ಯಮಕ್ಕೆ[29] ಅವರು ನೀಡಿದ ಕೊಡುಗೆಯನ್ನು ಗುರುತಿಸುವುದಕ್ಕಾಗಿ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್‌ ಇಂಡಸ್ಟ್ರಿ (FICCI) ವತಿಯಿಂದ ನೀಡಲಾದ "ಜೀವಂತ ದಂತಕಥೆ ಪ್ರಶಸ್ತಿ". [೧೪] Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ.
 • 2005 - "ಸೋನಿ ಗೋಲ್ಡನ್‌ ಗ್ಲೋರಿ ಪ್ರಶಸ್ತಿ" [೧೫] Archived 2007-09-30 ವೇಬ್ಯಾಕ್ ಮೆಷಿನ್ ನಲ್ಲಿ.
 • 2006 - ಅಕ್ಕಿನೇನಿ ಇಂಟರ್‌ನ್ಯಾಷನಲ್‌ ಫೌಂಡೇಷನ್‌ ವತಿಯಿಂದ ನೀಡಲಾದ "ANR ಪ್ರಶಸ್ತಿ". [೧೬]
 • 2006 - ಲಂಡನ್‌‌ನ IIAF ವತಿಯಿಂದ ನೀಡಲಾದ "ಗ್ಲೋರಿ ಆಫ್ ಇಂಡಿಯಾ ಪ್ರಶಸ್ತಿ". [೧೭]
 • 2007 - ಕಲೆ ಮತ್ತು ಮನರಂಜನಾ ಕ್ಷೇತ್ರದಲ್ಲಿ ಆತ ನೀಡಿದ ಮಹೋನ್ನತ ಕೊಡುಗೆಗಾಗಿ ವಿಶ್ವ ಪಂಜಾಬಿ ಸಂಘಟನೆಯ (ಐರೋಪ್ಯ ವಿಭಾಗ) ವತಿಯಿಂದ ನೀಡಲಾದ "ಪಂಜಾಬ್‌ ರತನ್‌" (ಪಂಜಾಬಿನ ಆಭರಣ) ಪ್ರಶಸ್ತಿ. [೧೮]
 • 2008 - ವಿನ್‌ಮ್ಯೂಸಿಕ್‌ ಕ್ಲಬ್‌ [೧೯] ಸಹಯೋಗದೊಂದಿಗೆ ರಮ್ಯ ಕಲ್ಚರಲ್‌ ಅಕಾಡೆಮಿ ವತಿಯಿಂದ ನೀಡಲಾದ "ಜೀವಮಾನ ಸಾಧನೆಯ ಪ್ರಶಸ್ತಿ".
 • 2008 - ರೋಟರಿ ಕ್ಲಬ್‌ ಆಫ್‌ ಬಾಂಬೆ [೨೦] ವತಿಯಿಂದ ನೀಡಲಾದ "ಜೀವಮಾನ ಸಾಧನೆಯ ಪ್ರಶಸ್ತಿ".
 • 2008 - IIJS ಸಾಲಿಟೇರ್‌ ಪ್ರಶಸ್ತಿ [೨೧] ಸಮಾರಂಭದಲ್ಲಿ ಪ್ರಶಸ್ತಿಗೆ ಪಾತ್ರನಾದ.
 • 2009 - ಭಾರತೀಯ ಸಿನಿಮಾಕ್ಕೆ ನೀಡಿದ ಮಹೋನ್ನತ ಕೊಡುಗೆಗೆ ಸಂಬಂಧಿಸಿದಂತೆ ಮ್ಯಾಕ್ಸ್‌ ಸ್ಟಾರ್‌ಡಸ್ಟ್‌ ಪ್ರಶಸ್ತಿ ಸಮಾರಂಭದಲ್ಲಿ ಪುರಸ್ಕೃತ [೨೨] Archived 2011-08-12 ವೇಬ್ಯಾಕ್ ಮೆಷಿನ್ ನಲ್ಲಿ. [೨೩]
 • ಆತ ರಾಷ್ಟ್ರೀಯ ಗೌರವ ಪ್ರಶಸ್ತಿಯ ಗೌರವಕ್ಕೂ ಪಾತ್ರನಾಗಿದ್ದಾನೆ [೨೪]

ಅಂತರರಾಷ್ಟ್ರೀಯ ಗೌರವಗಳು ಹಾಗೂ ಮನ್ನಣೆಗಳು

[ಬದಲಾಯಿಸಿ]
 • 2000ರ ಜುಲೈ ತಿಂಗಳಲ್ಲಿ, ನ್ಯೂಯಾರ್ಕ್‌ ನಗರದಲ್ಲಿ, ಆಗಿನ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಮೊದಲ ಮಹಿಳೆಯಾದ ಶ್ರೀಮತಿ ಹಿಲರಿ ರೊಧಾಮ್‌ ಕ್ಲಿಂಟನ್‌ಳಿಂದ, ’ಭಾರತೀಯ ಸಿನಿಮಾಕ್ಕೆ ತಾನು ನೀಡಿದ ಮಹೋನ್ನತ ಕೊಡುಗೆಗಾಗಿ’ ಒಂದು ಪ್ರಶಸ್ತಿಯಿಂದ ಅವನು ಗೌರವಿಸಲ್ಪಟ್ಟ. [೨೫]
 • 2000ದಲ್ಲಿ, ಕ್ಯಾಲಿಫೋರ್ನಿಯಾದ ಸಿಲಿಕಾನ್‌ ಕಣಿವೆಯಲ್ಲಿ ಇಂಡೋ-ಅಮೆರಿಕನ್‌ ಅಸೋಸಿಯೇಷನ್‌ ವತಿಯಿಂದ "ಸಹಸ್ರಮಾನದ ತಾರೆ" ಎಂಬ ಪ್ರಶಸ್ತಿಯನ್ನು ಆತನಿಗೆ ನೀಡಿ ಗೌರವಿಸಲಾಯಿತು. [೨೬]
 • ನ್ಯೂಯಾರ್ಕ್‌ ಸಂಸ್ಥಾನದ ಶಾಸನಸಭೆಯ ಸದಸ್ಯನಾದ ಡೊನ್ನಾ ಫೆರಾರ್‌ ಎಂಬಾತ 2001ರ ಮೇ 1ರಂದು "ನ್ಯೂಯಾರ್ಕ್‌ ಸ್ಟೇಟ್‌ ಅಸೆಂಬ್ಲಿ ಪ್ರಶಸ್ತಿಪಠಣ‌"ದೊಂದಿಗೆ ಆತನನ್ನು ಗೌರವಿಸಿದ. ’ನ್ಯೂಯಾರ್ಕ್‌ನ ಮಹಾಸಂಸ್ಥಾನದ ಮಾನ್ಯತೆ ಹಾಗೂ ಕೃತಜ್ಞತೆಯ ಸ್ಮರಣಾರ್ಹವಾಗಿರುವ, ಸಿನಿಮೀಯ ಕಲೆಗಳಿಗೆ ನೀಡಿರುವ ಮಹೋನ್ನತ ಕೊಡುಗೆಗಾಗಿ’ ಈ ಪ್ರಶಸ್ತಿಯನ್ನು ಆತನಿಗೆ ನೀಡಲಾಯಿತು. [೨೭]
 • 2005ರಲ್ಲಿ, ನೇಪಾಳದ ಮೊಟ್ಟಮೊದಲ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೇಪಾಳ ಸರ್ಕಾರದ ವತಿಯಿಂದ ಒಂದು "ವಿಶೇಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ"ಯನ್ನು ಆತನಿಗೆ ನೀಡಿ ಗೌರವಿಸಲಾಯಿತು. ಚಲನಚಿತ್ರರಂಗಕ್ಕೆ ಆತ ನೀಡಿದ ಕೊಡುಗೆಗಾಗಿ ಈ ಗೌರವವು ಅವನಿಗೆ ಸಂದಿತು.
 • 2007ರಲ್ಲಿ, ಸ್ಟಾಕ್‌ಹೋಮ್‌ನಲ್ಲಿ ಸ್ವೀಡನ್‌ ಇಂಡಿಯಾ ಫಿಲ್ಮ್‌ ಅಸೋಸಿಯೇಷನ್‌‌ (SIFA) ವತಿಯಿಂದ ನಡೆದ ಭಾರತೀಯ ಚಲನಚಿತ್ರೋತ್ಸವದಲ್ಲಿ ಆತ ಗೌರವಾನ್ವಿತ ಅತಿಥಿಯಾಗಿದ್ದ.
 • 2008ರಲ್ಲಿ, ಸ್ಕಾಟ್ಲೆಂಡ್‌ಇನ್ವರ್‌ನೆಸ್‌ನಲ್ಲಿ ಬೆಟ್ಟದ ಸೀಮೆಯ ಪರಿಷತ್ತಿನ‌ ಪುರಸಭಾಧ್ಯಕ್ಷನಿಂದ ಆಯೋಜಿಸಲ್ಪಟ್ಟಿದ್ದ ಔತಣಕೂಟವೊಂದರಲ್ಲಿ ಆತ ಗೌರವಾನ್ವಿತ ಅತಿಥಿಯಾಗಿದ್ದ. ಸ್ಕಾಟ್ಲೆಂಡ್‌ನ ಬೆಟ್ಟದ ಸೀಮೆಗಳಲ್ಲಿ ಮೊಟ್ಟಮೊದಲಬಾರಿಗೆ ಕೆಲಸ ಮಾಡಿದಂದಿನಿಂದ 10 ವರ್ಷಗಳು ಆದುದರ ಸಂಭ್ರಮಾಚರಣೆಗಾಗಿ ಈ ಔತಣಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಕೇನ್ಸ್‌ ಚಿತ್ರೋತ್ಸವದ ಮಾರ್ಗದಲ್ಲಿ, ಆ ಪ್ರದೇಶದಲ್ಲಿ, ಬೆಟ್ಟದ ಸೀಮೆಗಳ ಮತ್ತು ದ್ವೀಪಗಳ ಚಲನಚಿತ್ರ ಆಯೋಗದ ಓರ್ವ ಅತಿಥಿಯಾಗಿ ಆತ ಹಲವಾರು ದಿನಗಳನ್ನು ಅಲ್ಲಿ ಕಳೆದ. [೨೮].

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 'ದೇವಾನಂದ'ರು ತಮ್ಮ ಪುತ್ರ 'ಸುನಿಲ್' ಜೊತೆ, ಚಿಕಿತ್ಸೆಗಾಗಿ 'ಲಂಡನ್ ನಗರ'ಕ್ಕೆ ಹೋಗಿದ್ದರು. 'ದೇವಾನಂದ್' ಬಾಲಿವುಡ್ ನಲ್ಲಿ 'ಚಿರ ಯುವನಟ'ನೆಂದು ಎಂದು ಖ್ಯಾತರಾಗಿದ್ದರು. ೮೮ ವರ್ಷ ವಯಸ್ಸಿನ 'ದೇವಾನಂದ್', ಲಂಡನ್ ನಲ್ಲಿ ೨೦೧೧ ನೇ ಇಸವಿ, ಶನಿವಾರ , ಡಿಸೆಂಬರ್, ೩ ನೇ ತಾರೀಖಿನ ರಾತ್ರಿ, ೧೦ ಗಂಟೆಗೆ 'ಹೃದಯಾಘಾತ'ದಿಂದ ನಿಧನರಾದರು. 'ದೇವಾನಂದ'ರು ತಮ್ಮ ಪ್ರೀತಿಯ ಪತ್ನಿ 'ಕಲ್ಪನಾ ಕಾರ್ತಿಕ್' ಹಾಗು ಒಬ್ಬ ಮಗ, ಮತ್ತು ಒಬ್ಬ ಮಗಳು, ದೇವಿನಾ ರನ್ನು ಅಗಲಿದ್ದಾರೆ. ೧೮ ತಿಂಗಳ ಹಿಂದೆ ಅವರು ತಮ್ಮ ಪರಿವಾರದ ಸದಸ್ಯರೊಂದಿಗೆ ಮಾತನಾಡುತ್ತ, 'ತಮ್ಮ ಮರಣದ ಬಳಿಕ ಅಂತ್ಯ ಸಂಸ್ಕಾರಗಳನ್ನು ಭಾರತದಿಂದ ಹೊರಗೆ ನೆರವೇರಿಸುವಂತೆ ತಮ್ಮ ಆಶಯ ವ್ಯಕ್ತಪಡಿಸಿದ್ದರು'. ತಮ್ಮ ಅಸಂಖ್ಯಾತ ರಸಿಕರು ತಮ್ಮನ್ನು ಒಬ್ಬ ನಗುಮುಖದ ನಾಯಕ ನಟನಾಗಿಯೇ ನೆನೆಸಲಿ. ವೃದ್ಧಾಪ್ಯದಿಂದ ಸೊರಗಿದ ದೇಹದ ವ್ಯಕ್ತಿಯಾಗಿ ಅಲ್ಲ. ತಮ್ಮ ಆಪ್ತ ಗೆಳೆಯ, ವಿಧು ವಿನೋದ್ ಚೋಪ್ರರೊಂದಿಗೆ ಹಂಚಿಕೊಂಡ ತರಹ, ಅವರು 'ತಮ್ಮ ಬಿಡುವಿಲ್ಲದ ಕಾರ್ಯಗಳಲ್ಲಿ ವ್ಯಸ್ತರಾಗಿರುವಾಗಲೇ ತಮ್ಮ ಕೊನೆಯುಸಿರೆಳೆಯುವ ಆಶೆ ಇದೆಯೆಂದರು.' ದೇವಾನಂದರ ಸೋದರಿ, ಶೀಲಾ ಕಾಂತ್ ಕಪೂರ್ ಲಂಡನ್ ನ ಸರ್ರೆ ಯಲ್ಲಿ ವಾಸ್ತವ್ಯದಲ್ಲಿದ್ದಾರೆ.

ಅಂತ್ಯ ಸಂಸ್ಕಾರ

[ಬದಲಾಯಿಸಿ]

೧೦ ನೆಯ ತಾರೀಖು, ಶನಿವಾರ, ಡಿಸೆಂಬರ್, ೨೦೧೧ ರಂದು, ಲಂಡನ್ ನಗರದ ಪುಟ್ನೆ ವೇಲ್ ಕ್ರೆಮೆಟೋರಿಯಂ ನಲ್ಲಿ ಸುಮಾರು ೭೦-೮೦ ಜನ ಆಪ್ತ-ಗೆಳೆಯರು, ಬಂಧುಗಳು ಹಾಗೂ ಹಿತೈಷಿಗಳ ಆಗಮನದೊಂದಿಗೆ 'ದೇವ 'ಆನಂದ್' ರವರ ಕಳೇಬರಕ್ಕೆ ಅಗ್ನಿ ಸಂಸ್ಕಾರ'ವನ್ನು ಅವರ ಮಗ ಸುನಿಲ್ ನೆರೆವೇರಿಸಿದರು. ಮುಂಬೈನಿಂದ ಬಾಲಿವುಡ್ ನ ಗೆಳೆರ್ಯಾರು ಉಪಸ್ಥಿತರಿರಲಿಲ್ಲ. ಅವರ ಪತ್ನಿ, ಕಲ್ಪನಾ ಕಾರ್ತಿಕ್ ದೇವ್ ನಿಧನರಾಗಿದ್ದ ವಾಶಿಂಗ್ಟನ್ ಮೇ ಫೇರ್ ಹೋಟೆಲ್ ಕೋಣೆಯೊಳಗೇ ಕುಳಿತು ಮೌನವಾಗಿ ಪ್ರಾರ್ಥನೆ ಸಲ್ಲಿಸಿದರು. ಹೆಚ್ಚು ರಕ್ತದೊತ್ತಡದಿಂದ ಅವರು ನರಳುತ್ತಿದ್ದಾರೆ. ಸಹಾರಾ ಗ್ರೂಪ್ ಛೇರ್ಮನ್, ಸುಬ್ರಟ ರಾಯ್ ಮತ್ತು ಲಂಡನ್ ನಲ್ಲಿ ಭಾರತದ ರಾಯಭಾರಿ, ರಾಜೇಶ್ ಪ್ರಸಾದ್, ಲಾರ್ಡ್ ಮೇಘನಾದ್ ದೇಸಾಯ್, ಸೋದರಿ ದೇವಿನ, ಹೆಸರಾಂತ ಸಿನಿ ನಿರ್ದೇಶಕ ಶೇಖರ್ ಕಪೂರ್ ರ, ತಾಯಿ, ಶೀಲ ಕಾಂತಾ ಕಪೂರ್, ಗೆಳೆಯ ಕರ್ತಾರ್ ಲಾಲ್ವಾನಿ, ಲಾರ್ಡ್ ಕರನ್ ಬಿಲ್ಲಿಮೊರಿಯ, ಬರೊನೆಸ್ ಶ್ರೀಲ ಫ್ಲಾಥೆರ್, ಮುಂತಾದ ಗಣ್ಯರು 'ಸಂತಾಪ ಸಮಾರಂಭ'ದಲ್ಲಿ ಬಂದು ಸೇರಿದರು. ಲಂಡನ್ ನಗರದ ಉಪನಗರವಾದ, 'ಕೆನ್ಸಿಂಗ್ ಟನ್' ನಲ್ಲಿರುವ 'ಭಾರತೀಯ ವಿದ್ಯಾಭವನ'ದಲ್ಲಿ 'ಮೆಮೋರಿಯಲ್ ಸರ್ವೀಸ್' ನಿಯೋಜಿಸಲಾಗಿತ್ತು. ಅದರಲ್ಲಿ ಸುಮಾರು ೨೦೦ ಜನ 'ದೇವ್ ಪ್ರೇಮಿ'ಗಳು ಆಗಮಿಸಿದ್ದರು. 'ದೇವ್ ಆನಂದ್' ರ ಅಸ್ತಿಗಳನ್ನು 'ಗುಜರಾತ್ ನ 'ಗೋದಾವರಿ ನದಿ'ಯಲ್ಲಿ ಸೇರಿಸಲಾಗುವುದು.

ಆಕರಗಳು

[ಬದಲಾಯಿಸಿ]
 1. ದೇವ್ ಆನಂದ್‌ ಬರೆದಿರುವ ರೋಮಾನ್ಸಿಂಗ್‌ ವಿತ್‌ ಲೈಫ್‌ -ಆನ್‌ ಆಟೋಬಯಾಗ್ರಫಿ , ಪುಟ 1, ಪೆಂಗ್ವಿನ್‌ ಬುಕ್ಸ್‌ ಭಾರತ 2007

ಹೊರಗಿನ ಕೊಂಡಿಗಳು

[ಬದಲಾಯಿಸಿ]