ಲತಾ ಮಂಗೇಶ್ಕರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಲತಾ ಮಂಗೇಶ್ಕರ್.

ಲತಾ ದೀನಾನಾಥ್ ಮಂಗೇಶ್ಕರ್ (ಸೆಪ್ಟೆಂಬರ್ ೨೮, ೧೯೨೯-)

ಲತಾ ಮಂಗೇಶ್ಕರ್ (ಸೆಪ್ಟೆಂಬರ್ ೨೮, ೧೯೨೯) ಭಾರತದ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು. ಹಿಂದಿ ಚಿತ್ರರಂಗದಲ್ಲಿ ಬಹಳ ಹಾಡುಗಳನ್ನು ಹಾಡಿರುವುದಲ್ಲದೆ ಹಲವಾರು ಭಾರತೀಯ ಭಾಷೆಗಳಲ್ಲಿಯೂ ಹಾಡಿದ್ದಾರೆ. ೧೯೬೭ರಲ್ಲಿ ಬಿಡುಗಡೆಯಾದ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ" ಎಂಬ ಕನ್ನಡ ಚಲನಚಿತ್ರದಲ್ಲಿನ "ಬೆಳ್ಳನೆ ಬೆಳಗಾಯಿತು" ಎಂಬ ಗೀತೆಯನ್ನು ಹಾಡಿದ್ದಾರೆ.

ಹುಟ್ಟು ಮತ್ತು ಬಾಲ್ಯ[ಬದಲಾಯಿಸಿ]

ಶಾಸ್ತ್ರೀಯ-ಸಂಗೀತಕಾರ ಮತ್ತು ರಂಗ-ನಟ ಪಂಡಿತ್. ದೀನಾನಾಥ್ ಮಂಗೇಶ್ಕರ್ ರವರ ಪುತ್ರಿ, ಲತಾ ಮಧ್ಯಪ್ರದೇಶದ ಇಂದೂರಿನಲ್ಲಿ ಜನಿಸಿದರು. ತಾಯಿಯವರ ಹೆಸರನ್ನು 'ಮಾಯಿ,' ಯೆಂದೇ ಕರೆಯಲಾಗುತ್ತಿತ್ತು. ತಾಯಿಯ ತವರಿನ ಹೆಸರು ಶೇವಂತಾ. ದೀನಾನಾಥರದು ಎರಡನೆಯ ಮದುವೆ. ಮೊದಲ ಮದುವೆ, 'ನರ್ಮದಾ' ಜೊತೆ. ಆಕೆಯ ಮರಣದ ನಂತರ, ತಂಗಿ, ಶೇವಂತಾರ ಜೊತೆಗೆ ಮದುವೆಯಾಯಿತು. ಈಕೆಯ ಹೆಸರನ್ನು 'ಶುದ್ಧಮತಿ,' ಯೆಂದು ಹೆಸರಿಟ್ಟರು. ಮುಂದೆ ಅವರೇ ಶ್ರೀಮತಿ ಮಾಯಿಯೆಂದೇ ಕರಯಲ್ಪಟ್ಟರು. ಬಲವಂತ್ ಸಂಗೀತ್ ಮಂಡಳಿ, ದೀನಾನಾಥ್ ರು ನಡೆಸುತ್ತಿದ್ದರು. ದೀನಾನಾಥ್, ಒಳ್ಳೆಯ ನಟ, ಗಾಯಕ, ಕೃತಿಶೀಲ ಸಮಾಜಸೇವಕ. ಕೆಲವು ಕಾರಣಗಳಿಂದ ಕಂಪೆನಿ ಮುಚ್ಚಿತು. ಲತಾ ಮಂಗೇಶ್ಕರ್ ರವರ ಮೊದಲ ಹೆಸರು, "ಹೇಮಾ" ಎಂದು. ಹೇಮಾಳ ಬಹುಮುಖಪ್ರತಿಭೆಯನ್ನು ತಂದೆ ಗುರುತಿಸಿ, ಒಮ್ಮೊಮ್ಮೆ 'ಹೃದಯಾ', 'ಟಾಟಾಬಾಬಾ,' ಎನ್ನುತ್ತಿದ್ದರು. ಭಾವ್ ಬಂಧನ್, ನಾಟಕದಲ್ಲಿ ಮಾಡಿದ ಅಭಿನಯನದ ನಂತರ ಅವರ ಹೆಸರು 'ಲತಾ,' ಯೆಂದಾಯಿತು. ಲತಾಗೆ ಔಪಚಾರಿಕ ಶಿಕ್ಷಣವೇನೂ ದೊರೆಯಲಿಲ್ಲ. ಒಂದು ದಿನ ಶಾಲೆಗೆ ಹೋಗಿದ್ದರು. ಮರುದಿನ ತಮ್ಮ ತಂಗಿ ಆಶಾಳ ಜೊತೆ ಶಾಲೆಗೆ ಹೋದಾಗ ಶಿಕ್ಷಕರು ಗದರಿದರಂತೆ. ಸರಿ. ಲತಾ ಮುಂದೆ ಎಂದೂ ಶಾಲೆಯ ಮೆಟ್ಟಿಲು ಹತ್ತುವುದಿಲ್ಲವೆಂದು ಪಣತೊಟ್ಟರು. ಸಣ್ಣ-ಪುಟ್ಟ ನಾಟಕಗಳಲ್ಲಿ ಕಾಣಿಸಿಕೊಂಡರು.

ರಂಗಭೂಮಿಯಲ್ಲಿ[ಬದಲಾಯಿಸಿ]

 • ೧. 'ತ್ರಾಟಿಕಾ',
 • ೨. 'ಪುಣ್ಯಪ್ರಭಾವ್',
 • ೩. 'ಸಂಗೀತ್ ಸೌಭದ್ರ್,' ದಲ್ಲಿ ನಾರದನಪಾತ್ರ.
 • ೪. 'ಗುರುಕುಲ್,'

'ಸಂಗೀತ್ ಸೌಭದ್ರ್', ನಾಟಕದ ನಾರದನ ಪಾತ್ರಧಾರಿ, ಏನೋ ಕಾರಣದಿಂದ ಬರಲಿಲ್ಲ. ಲತಾ, ತಂದೆಯವರಿಗೆ ಸಮಜಾಯಿಸಿ ತಾವೇ ಅದನ್ನು ಮಾಡಿದರು. ೮ ವರ್ಷದ ಲತಾ ಒನ್ಸ್ ಮೊರ್, ಗಿಟ್ಟಿಸಿಕೊಂಡರು. ತಂದೆಯೇ ಅವರ ಪ್ರಥಮ ಗುರು. ನಂತರ, 'ರಾಮಕೃಷ್ಣ ಬುವಾವಚೆ' ಮತ್ತು, ' ಉಸ್ತಾದ್ ಅಮಾನತ್ ಖಾ'. ಸಂಗೀತ ಶಿಕ್ಷಣ ಪಡೆದರು. ಶಾಸ್ತ್ರೀಯಸಂಗೀತ ಗಾಯಕಿಯಾಗುವ ಹಂಬಲವಿತ್ತು. ತಂದೆ, ೪೧ ನೇ ವರ್ಷದಲ್ಲೇ ತೀರಿಕೊಂಡರು. ೧೨-೧೩ ವರ್ಷದ ಬಲಕಿ ಲತಾಗೆ ಜವಬ್ದಾರಿ ಬಿತ್ತು. ತಾಯಿ, ೪ ಜನ ತಂಗಿಯರು, ಒಬ್ಬ ತಮ್ಮ, ಇವರುಗಳ ದೊಡ್ಡ ಪರಿವಾರವನ್ನು ನೋಡಿಕೊಳ್ಳಬೇಕಾಗಿ ಬಂತು. ಆದರೂ ಹೆದರದೆ, ತಮ್ಮ ೭೪ ವರ್ಷಗಳ ಜೀವನದಲ್ಲಿ, ೬೨ ವರ್ಷ ಜೀವನ ಸಂಘರ್ಷ, ಹಾಗೂ ಕಲಾ-ಸಂಘರ್ಷ ಮಾಡಿದರು. ೧೯೪೨ ರಲ್ಲಿ ಪ್ರಾರಂಭಮಾಡಿದ ಮರಾಠಿ ಚಿತ್ರ, ಕಿತೀ ಹಸಾಲ್ ನಲ್ಲಿ ಹಾಡುಗಾರಿಕೆ. ಕಾರಣಾಂತರಗಳಿಂದ ಅವರ ಗಾಯನ ಸೇರ್ಪಡೆಯಾಗಲಿಲ್ಲ. 'ಮಂಗಳಗೌರ್' ಚಿತ್ರದಲ್ಲಿ ನಟಿಸಿದ್ದರು. ೧೯೪೭ ರಲ್ಲಿ ಹಿಂದೀ ಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಮೊದಲಿಗೆ ಹಾಡಿದರು. 'ಆಪ್ ಕಿ ಸೇವಾಮೆ', ಪಾಂ ಲಾಗೂ ಕರ್ ಚೋರಿರೇ..'ಹುಸ್ನ್ ಲಾಲ್ ಭಗತ್ ರಾಮ್', ಆಕೆಯ ಕಂಠಶ್ರೀಯನ್ನು ಕೇಳಿ ಮೆಚ್ಚಿ, ಸರಿಯಾದ ಅವಕಾಶಗಳನ್ನು ಕೊಟ್ಟು, ಉಪಯೋಗಿಸಿಕೊಂಡರು.

 • ೧. ಹುಸ್ನ್ ಲಾಲ್ ಭಗತ್ ರಾಮ್, '(ಬಡಿ ಬಹೆನ್)'
 • ೨. ಶ್ಯಾಮಸುಂದರ್,'(ಲಾಹೋರ್)',
 • ೩. ನೌಶಾದ್, '[ಅಂದಾಜ್],'
 • ೪. ಖೇಮ್ ಚಂದ್ ಪ್ರಕಾಶ್, '(ಮಹಲ್),'
 • ೫. ಶಂಕರ್ ಜೈಕಿಷನ್, ಮತ್ತು ಅನಿಲ್ ಬಿಸ್ವಾಸ್, [ಗರ್ಲ್ಸ್ ಸ್ಕೂಲ್'],

ಲತಾ ರವರಿಂದಲೇ ಕೆಲವು ಮೆಚ್ಚಿಗೆ ಪಡೆದ ಹಾಡುಗಳೆಂದರೆ :[ಬದಲಾಯಿಸಿ]

 • ೧. ಚುಪ್ ಚುಪ್ ಖಡೀ ಹೋ, ಜರೂರ್ ಕೊಯಿ ಬಾತ್ ಹೈ,...
 • ೨. ಆಯೆಗಾ ಆನೆವಲ...,
 • ೩. ಉಠಾಯೇ ಜಾ ಉನ್ಕೆ ಸಿತಮ್....
 • ೪. ಹವಾಮೆ ಉಡ್ತಾ ಜಾಯೆ, ಮೆರಾ ಲಾಲ್ ದುಪಟ್ಟ....
 • ೫. ಯಾದ್ ರಖನಾ ಆಂದ್ ತಾರೊಂ ಯೆ, ಸುಹಾನಿ ರಾತ್ ಹೈ...

'ಇಂದೂರ್' ನಿಂದ, ಪುಣೆ, ಕೊಲ್ಲಾಪುರ ನಂತರ, ಮುಂಬೈ[ಬದಲಾಯಿಸಿ]

ಇಂದೋರ್ ನಿಂದ ಪುಣೆ ಗೆ ಬಂದರು. ಕೊಲ್ಲಾಪುರ ದಲ್ಲಿ ಸ್ವಲ್ಪ ದಿನವಿದ್ದು, ೧೯೪೭ ರಲ್ಲಿ ಪರಿವಾರದೊಡನೆ ಮುಂಬೈ ನ ನಾನಾ ಚೌಕ್ ನಲ್ಲಿ ಬಂದಿಳಿದರು. ಆನಂದ್ ಧನ್, ಎಂಬ ಹೆಸರಿನಿಂದ ಮರಾಠಿಚಿತ್ರಗಳ ಸಂಗೀತನಿರ್ದೇಶನ ಮಾಡುತ್ತಿದ್ದರು. ಸುಮಾರು ೧೦,೦೦೦ ಹಾಡುಗಳನ್ನು ೨೨ ಭಾಷೆಗಳಲ್ಲಿ ಲತಾದೀದಿ, ಹಾಡಿದ್ದಾರೆ. ಅಮೆರಿಕ, ಯೂರೊಪ್ ಸುತ್ತಿದ್ದಾರೆ. ಆಕೆಯ ಹಾಡುಗಳ ವಿಶೇಶವೆಂದರೆ, ಅಸಾಧಾರಣ ಸ್ಪಷ್ಟಶಬ್ದೋಚ್ಚಾರ, ಶಾಸ್ತ್ರೀಯ ಸಂಗೀತದ ಸ್ವರಬದ್ಧ ಸಂಸ್ಕಾರ, ಗೀತೆಗಳ ಗುಣಮಟ್ಟ, ಸನ್ನಿವೇಶಕ್ಕೆ ನಟಿಯರ ಕಂಠಕ್ಕೆ ಸರಿಯಾಗಿ ಅಳವಡಿಸಿಹಾಡುವ ಕಲೆ. "ಪುಲೆ ವೇಚಿತಾ"- ಲತಾರವರ ಆತ್ಮ ಚರಿತ್ರೆ.

ಪ್ರಶಸ್ತಿಗಳು[ಬದಲಾಯಿಸಿ]

 • ೬ ವಿಶ್ವವಿದ್ಯಾಲಯಗಳ ಗೌರವ ಡಾಕ್ಟೊರೇಟ್ (ನ್ಯೂಯಾರ್ಕ್ ವಿಶ್ವ-ವಿದ್ಯಾಲಯವೂ ಸೇರಿದಂತೆ).
 • ಪುಣೆ ವಿದ್ಯಾಪೀಠದ ಗೌ. ಡಾಕ್ಟೊರೇಟ್

'ಜನಪ್ರಿಯತೆಯ ಶಿಖರವೆನ್ನಿಸಿರುವ ಲತಾಜಿಯವರು ಹಾಡದ ಭಾಷೆಯ ಗೀತೆಗಳಿಲ್ಲ[ಬದಲಾಯಿಸಿ]

ಅಪಾರ ಜನಮನ್ನಣೆ ಗಳಿಸಿರುವ ಲತಾಮಂಗೇಶ್ಕರ್ ಸಿನಿಮಾ ಗೀತೆಗಳಲ್ಲದೆ, ಭಜನ್, ಗಝಲ್ ಆಧುನಿಕ ಕವಿತಾ,ಗಳನ್ನು ಹಾಡುತ್ತಾರೆ. ಆಕೆಗೆ ಪ್ರಿಯವಾದ ಕೆಲವು ಗೀತೆಗಳು ಹೀಗಿವೆ

 • ರಸಿಕ ಬಲಮಾ...(ಚೋರಿ ಚೋರಿ).
 • ಜ್ಯೋತಿ ಕಲಷ್ ಛಲ್ ಕೆ (ಭಾಭೀ ಕಿ ಚುಡಿಯ).
 • ಯೆ ದಿಲ್ ಔರ್ ಉನ್ ಕೀ ನಿಗಾಹೋಂಕೆ ಸಾಯೇ (ಪ್ರೇಮ್ ಪರ್ಬತ್),
 • ಕುಹೂ ಕುಹೂ ಬೋಲೇ ಕೋಯಲಿಯಾಂ. (ಸುವರ್ಣ ಸುಂದರಿ).
 • ಪಂಖ್ ಹೋತೀ ತೊ, ಉಡ್ ಜಾತಿ ರೇ..(ಸೆಹರಾ)
 • ನೈನೋಂ ಮೆ ಬದ್ ರಾ ಛಾಯೆ..(ಮೆರಾ ಸಾಯ)
 • ಜಾನೆ ಕೈಸೆ ಸಪನೋಂಮೆ..ಖೋಗಯೀ ಅಖಿಯಾಂ ..(ಅನುರಾಧ)
 • ತುಮ್ ನ ಜಾನೆ, ಕಿಸ್ ಜಹಾಂ..ಮೆ ಖೋ ಗಯೆಂ..(ಸಝಾ)
 • ಯೆರೇ ಮೈ ತೊ, ಪ್ರೇಮ್ ದಿವಾನಿ.ನೌ (ಬಹಾರ್),
 • ಯೂಂ ಹಸ್ ರತೋಂ ಕಿ ಧಾಗ್. (ಅದಾಲತ್),
 • ಯೆ ಜಿಂದಗೀ ಉಸೀಕಿ ಹೈ. (ಅನಾರ್ ಕಲೀ),
 • ಮೋಹೆ ಭೂಲ್ ಗಯೇ ಸಾವರಿಯಾಂ-(ಬೈಜೂ ಬವ್ರಾ)
 • ಧೀರೆಸೆ ಆಜಾರೆ ಅಖಿಯೋಮೆ ನಿಂದಿಯಾ-ರೈನಾ ಭೀತ್ ಜಾಯೆಂ-(ಗುಡ್ಡಿ)
 • ಪವನ್ ದಿವಾನಿ ಕೈಸೆ ಜಾಂವು ಜಮುನಾ ಕೆ ತೀರ್..

ಮರಾಠಿಗೀತೆಗಳು[ಬದಲಾಯಿಸಿ]

 • ಘನಶ್ಯಾಮ ಸುಂದರಾ, ಶ್ರೀಧರಾ, ಅರುಣೋದಯ ಝಾಲ, (ಅಮರ್ ಭೂಪಾಲಿ)
 • ಏರಣಿಚಾ ದೆವ ತುಲ ಠಿಣ್ಗಿ ಠಿಣ್ಗಿ ವಾಹೂಂ, ದೇಸಾದೀ (ಮಾಣಸಾ)
 • ಲೇಕ್ ಲಾಡ್ ಇದು. ಕಿ ಯಾ ಘರ್ ಚೀ.

ಲತಾದೀದಿಯವರು, ಜೀವನದ ಬಗ್ಗೆ ಕೊಟ್ಟ ವ್ಯಾಖ್ಯಾನ[ಬದಲಾಯಿಸಿ]

ಸಮರ್ಪಣೆ, ತ್ಯಾಗ, ಮಾಡುವ ಕೆಲಸದಲ್ಲಿ ನಿಷ್ಠೆ, ಶ್ರದ್ಧೆ, ನಿರಂತರ ಅಭ್ಯಾಸ, ಇತ್ಯಾದಿ. 'ಮಜ್ ರೂಹ್ ಸುಲ್ತಾನ್ ಪುರಿ,' ಯವರು 'ಸುಜಾತಾ', ಚಿತ್ರಕ್ಕೆ ಬರೆದ ಹಾಡು, ಎಸ್. ಡಿ ಬರ್ಮನ್ ಸಂಗೀತ ಒದಗಿಸಿದ್ದಾರೆ. ಲತಾರವರ ತಂಗಿ, ಆಶಾ ಭೌನ್ಸ್ಲೆ, ಮಧುರವಾಗಿ ಹಾಡಿದ್ದಾರೆ. "ತುಮ್ ಜೀಯೋಂ ಹಝಾರೋಂ ಸಾಲ್. ಸಾಲ್ ಕೆ ದಿನ್ ಹೊ ಪಚಾಸ್ ಹಝಾರ್" ಎಂದು ಅವರ ಗೀತಾ-ಸಕ್ತರು ಹೇಳುತ್ತಾರೆ. ಮರಥಿ ಲತ

’ಹಾಡುಹಕ್ಕಿಯ ಹೃದಯಗೀತೆ’-' ಕನ್ನಡದಲ್ಲಿ’[ಬದಲಾಯಿಸಿ]

'ವಿಶ್ವಕರ್ನಾಟಕ ಸುದ್ದಿಸಂಪಾದಕ', 'ವಸಂತ ನಾಡಿಗೇರ್' ರಚಿಸಿರುವ, 'ಸುಮುಖ ಪ್ರಕಾಶನ' ಪ್ರಕಟಿಸಿರುವ 'ಲತಾ ಮಂಗೇಶ್ಕರ್ ರವರ ಜೀವನ ಚರಿತ್ರೆ'-’ಹಾಡುಹಕ್ಕಿಯ ಹೃದಯಗೀತೆ’ ಪುಸ್ತಕದ ಲೋಕಾರ್ಪಣ ಸಮಾರಂಭ’, ೨೭, ಮಂಗಳವಾರ, ಅಕ್ಟೋಬರ್, ೨೦೦೯ ದಂದು, ಬೆಂಗಳೂರು ನಗರದ, ’ಆನಂದ್ ರಾವ್ ವೃತ್ತ’ದ ಬಳಿಯಿರುವ, ’ಕೆ. ಇ. ಬಿ. ಇಂಜಿನಿಯರ್ಸ್ ಸಂಘದ ಸಭಾಂಗಣ’ದಲ್ಲಿ ಸಂಜೆ ೬-೩೦ ಕ್ಕೆ ಜರುಗಿತು. ಈ ಸಮಾರಂಭದ ಅಧ್ಯಕ್ಷತೆಯನ್ನು 'ವಿಶ್ವಕರ್ನಾಟಕ ಪತ್ರಿಕೆಯ ಪ್ರಧಾನಸಂಪಾದಕ', 'ಶ್ರೀ.ವಿಶ್ವೇಶ್ವರ್ ಭಟ್,' ನಡೆಸಿಕೊಟ್ಟರು. 'ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ', ಖ್ಯಾತನಟಿ, 'ಡಾ. ಜಯಮಾಲಾ', ಹಾಗೂ ಖ್ಯಾತ ನಟ ಹಾಗೂ ನಿರ್ದೆಶಕ, ’ರಮೇಶ್ ಅರವಿಂದ್’ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.