ಭಾರತ ರತ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಭಾರತರತ್ನ ಇಂದ ಪುನರ್ನಿರ್ದೇಶಿತ)
ಭಾರತ ರತ್ನ
Bharat Ratna.jpg
ಪ್ರಶಸ್ತಿಯ ವಿವರ
ಮಾದರಿ ನಾಗರೀಕ
ವರ್ಗ ರಾಷ್ಟ್ರೀಯ
ಪ್ರಾರಂಭವಾದದ್ದು ೧೯೫೪
ಕಡೆಯ ಪ್ರಶಸ್ತಿ ೨೦೧೯
ಒಟ್ಟು ಪ್ರಶಸ್ತಿಗಳು ೪೮
ಪ್ರಶಸ್ತಿ ನೀಡುವವರು ಭಾರತ ಸರ್ಕಾರ
ವಿವರ ಸೂರ್ಯನ ಚಿತ್ರ ಮತ್ತು ಅರಳಿ ಎಲೆಯ ಚಿತ್ರದ ಮೇಲೆ ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ"
Ribbon Bharat Ratna Ribbon.svg
ಮೊದಲ ಪ್ರಶಸ್ತಿ ಪುರಸ್ಕೃತರು ೧೯೫೪

 • ಸರ್ವೆಪಲ್ಲಿ ರಾಧಾಕೃಷ್ಣನ್
 • ಸರ್ ಸಿ.ವಿ. ರಾಮನ್
 • ಸಿ. ರಾಜಗೋಪಾಲಚಾರಿ

ಕೊನೆಯ ಪ್ರಶಸ್ತಿ ಪುರಸ್ಕೃತರು ೨೦೧೯

 • ಪ್ರಣಬ್ ಮುಖರ್ಜಿ
 • ಭೂಪೇನ್ ಹಝಾರಿಕಾ
 • ನಾನಾಜಿ ದೇಶಮುಖ್

ಪ್ರಶಸ್ತಿಯ ಶ್ರೇಣಿ
ಯಾವುದೂ ಇಲ್ಲ ← ಭಾರತ ರತ್ನಪದ್ಮ ವಿಭೂಷಣ

ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಛ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೬೬ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದುವರೆಗೆ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೭ ರಲ್ಲಿ). ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.

ಭಾರತ ರತ್ನ ಪ್ರಶಸ್ತಿಯನ್ನು ಪಡೆದವರ ಪಟ್ಟಿ[ಬದಲಾಯಿಸಿ]

Key
   + ಭಾರತದ ಪೌರತ್ವ ಸ್ವೀಕೃತರು
    • ವಿದೇಶಿಯರು
   # ಮರಣೋತ್ತರ ಗೌರವ
ಭಾರತರತ್ನ ಪ್ರಶಸ್ತಿ ಪುರಸ್ಕೃತರು[೧]
ವರ್ಷ ಚಿತ್ರ ಸಮ್ಮಾನಿತರು ರಾಜ್ಯ / ರಾಷ್ಟ್ರ
1954 Chakravarthi Rajagopalachari 1973 stamp of India.jpg ಸಿ. ರಾಜಗೋಪಾಲಾಚಾರಿ ತಮಿಳುನಾಡು
Sarvepalli Radhakrishnan 1967 stamp of India.jpg ಸರ್ವೆಪಲ್ಲಿ ರಾಧಾಕೃಷ್ಣನ್ ಆಂಧ್ರಪ್ರದೇಶ
CV Raman 1971 stamp of India.jpg ಚಂದ್ರಶೇಖರ ವೆಂಕಟರಾಮನ್ ತಮಿಳುನಾಡು
1955 Bhagwan Das 1969 stamp of India.jpg ಭಗವಾನ್ ದಾಸ್ ಉತ್ತರ ಪ್ರದೇಶ
Mokshagundam Visvesvaraiah 1960 stamp of India.jpg ಮೋಕ್ಷಗುಂಡಂ ವಿಶ್ವೇಶ್ವರಯ್ಯ ಕರ್ನಾಟಕ
1989 CPA 6121.jpg ಜವಾಹರಲಾಲ್ ನೆಹರು ಉತ್ತರ ಪ್ರದೇಶ
1957 Govind Ballabh Pant 1988 stamp of India.jpg ಜಿ. ಬಿ. ಪಂತ್ ಉತ್ತರ ಪ್ರದೇಶ
1958 Dhondo Keshav Karve 1958 stamp of India.jpg ಧೊಂಡೊ ಕೇಶವ ಕರ್ವೆ ಮಹಾರಾಷ್ಟ್ರ
1961 Bidhan Chandra Roy 1982 stamp of India.jpg ಬಿಧಾನ್‌ ಚಂದ್ರ ರಾಯ್‌ ಪಶ್ಚಿಮ ಬಂಗಾಳ
Purushottam Das Tandon 1982 stamp of India.jpg ಪುರುಷೋತ್ತಮ್ ದಾಸ್ ಟಂಡನ್ ಉತ್ತರ ಪ್ರದೇಶ
1962 Food Minister Rajendra Prasad during a radio broadcast in Dec 1947 cropped.jpg ರಾಜೇಂದ್ರ ಪ್ರಸಾದ್ ಬಿಹಾರ
1963 President Zakir Husain 1998 stamp of India.jpg ಜಾಕಿರ್ ಹುಸೇನ್ ಉತ್ತರ ಪ್ರದೇಶ
ಪಿ. ವಿ. ಕಾಣೆ ಮಹಾರಾಷ್ಟ್ರ
1966 Lal Bahadur Shastri 1966 stamp of India.jpg ಲಾಲ್ ಬಹದ್ದೂರ್ ಶಾಸ್ತ್ರಿ[lower-roman ೧]# ಉತ್ತರ ಪ್ರದೇಶ
1971 1984 CPA 5588.jpg ಇಂದಿರಾ ಗಾಂಧಿ ಉತ್ತರ ಪ್ರದೇಶ
1975 VV Giri 1974 stamp of India.jpg ವಿ. ವಿ. ಗಿರಿ ಒಡಿಶಾ
1976 K Kamaraj 1976 stamp of India.jpg ಕೆ. ಕಾಮರಾಜ್[lower-roman ೨]# ತಮಿಳುನಾಡು
1980 Mutter Teresa von Kalkutta.jpg ಮದರ್ ತೆರೇಸಾ + ಪಶ್ಚಿಮ ಬಂಗಾಳ
[lower-alpha ೧]
1983 Vinoba Bhave 1983 stamp of India.jpg ವಿನೋಬಾ ಭಾವೆ[lower-roman ೩]# ಮಹಾರಾಷ್ಟ್ರ
1987 Khan Abdul Ghaffar Khan.jpg ಖಾನ್ ಅಬ್ದುಲ್ ಗಫಾರ್ ಖಾನ್ •  ಪಾಕಿಸ್ತಾನ
1988 MG Ramachandran 2017 stamp of India.jpg ಎಂ. ಜಿ. ರಾಮಚಂದ್ರನ್[lower-roman ೪]# ತಮಿಳುನಾಡು
1990 Ambedkar 1966 stamp of India.jpg ಬಿ. ಆರ್. ಅಂಬೇಡ್ಕರ್[lower-roman ೫]# ಮಹಾರಾಷ್ಟ್ರ
Nelson Mandela-2008 (edit).jpg ನೆಲ್ಸನ್ ಮಂಡೇಲಾ •  ದಕ್ಷಿಣ ಆಫ್ರಿಕಾ
1991 Rajiv Gandhi (1987).jpg ರಾಜೀವ್ ಗಾಂಧಿ[lower-roman ೬]# ಉತ್ತರ ಪ್ರದೇಶ
Vallabhbhai Patel 1975 stamp of India.jpg ವಲ್ಲಭ್‌ಭಾಯಿ ಪಟೇಲ್[lower-roman ೭]# ಗುಜರಾತ್
Morarji Desai 1997 stamp of India.jpg ಮೊರಾರ್ಜಿ ದೇಸಾಯಿ ಗುಜರಾತ್
1992 Maulana Abul Kalam Azad 1988 stamp of India.jpg ಮೌಲಾನಾ ಅಬುಲ್ ಕಲಾಂ ಆಜಾ಼ದ್[lower-roman ೮]# ಪಶ್ಚಿಮ ಬಂಗಾಳ
JRD Tata 1994 stamp of India.jpg ಜೆ. ಆರ್. ಡಿ. ಟಾಟಾ ಮಹಾರಾಷ್ಟ್ರ
Satyajit Ray in New York.jpg ಸತ್ಯಜಿತ್ ರೇ ಪಶ್ಚಿಮ ಬಂಗಾಳ
1997 Gulzarilal Nanda 1999 stamp of India.jpg ಗುಲ್ಜಾರಿಲಾಲ್ ನಂದಾ ಪಂಜಾಬ್
Aruna Asaf Ali 1998 stamp of India.jpg ಅರುಣಾ ಅಸಫ್ ಅಲಿ[lower-roman ೯]# ಪಶ್ಚಿಮ ಬಂಗಾಳ
Abdul Kalam 2015 stamp of India.jpg ಎ. ಪಿ. ಜೆ. ಅಬ್ದುಲ್ ಕಲಾಂ ತಮಿಳುನಾಡು
1998 M. S. Subbalakshmi in "Sevasadan".jpg ಎಂ. ಎಸ್. ಸುಬ್ಬುಲಕ್ಷ್ಮೀ ತಮಿಳುನಾಡು
Chidambaram Subramaniam 2010 stamp of India.jpg ಸಿ. ಸುಬ್ರಹ್ಮಣ್ಯಂ ತಮಿಳುನಾಡು
1999 Jayaprakash Narayan 1980 stamp of India bw.jpg ಜಯಪ್ರಕಾಶ್ ನಾರಾಯಣ್[lower-roman ೧೦]# ಬಿಹಾರ
Amartya Sen NIH.jpg ಅಮರ್ತ್ಯ ಸೇನ್ ಪಶ್ಚಿಮ ಬಂಗಾಳ
Gopinath Bordoloi 1991 stamp of India.jpg ಗೋಪಿನಾಥ್ ಬೋರ್ಡೊಲೋಯಿ[lower-roman ೧೧]# ಅಸ್ಸಾಂ
Ravi Shankar 2009 crop.jpg ರವಿಶಂಕರ್ ಪಶ್ಚಿಮ ಬಂಗಾಳ
2001 LataMangeshkar10.jpg ಲತಾ ಮಂಗೇಶ್ಕರ್ ಮಹಾರಾಷ್ಟ್ರ
Bismillah Khan 2008 stamp of India.jpg ಬಿಸ್ಮಿಲ್ಲಾ ಖಾನ್ ಉತ್ತರ ಪ್ರದೇಶ
2008 Pandit Bhimsen Joshi (cropped).jpg ಭೀಮಸೇನ ಜೋಶಿ ಕರ್ನಾಟಕ
2014 CNRrao2.jpg ಸಿ. ಎನ್. ಆರ್. ರಾವ್ ಕರ್ನಾಟಕ
Sachin Tendulkar 2013 stamp of India.jpg ಸಚಿನ್ ತೆಂಡೂಲ್ಕರ್ ಮಹಾರಾಷ್ಟ್ರ
2015 Madan Mohan Malaviya 1961 stamp of India.jpg ಮದನ ಮೋಹನ ಮಾಳವೀಯ[lower-roman ೧೨]# ಉತ್ತರ ಪ್ರದೇಶ
Atal Bihari Vajpayee 2002-06-12.jpg ಅಟಲ್ ಬಿಹಾರಿ ವಾಜಪೇಯಿ ಮಧ್ಯಪ್ರದೇಶ
2019 Pranab Mukherjee Portrait.jpg ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಳ
Bhupen Hazarika 2013 stamp of India.jpg ಭೂಪೇನ್ ಹಜಾರಿಕಾ[lower-roman ೧೩]# ಅಸ್ಸಾಂ
Nanaji Deshmukh 2017 stamp of India.jpg ನಾನಾಜಿ ದೇಶಮುಖ್[lower-roman ೧೪]# ಮಹಾರಾಷ್ಟ್ರ

ಉಲ್ಲೇಖಗಳು[ಬದಲಾಯಿಸಿ]

  1. "List of recipients of Bharat Ratna (1954–2015)" (PDF). Ministry of Home Affairs (India). Archived from the original (PDF) on 9 ಫೆಬ್ರವರಿ 2018. Retrieved 11 ಸೆಪ್ಟೆಂಬರ್ 2015.
  1. ಲಾಲ್ ಬಹದ್ದೂರ್ ಶಾಸ್ತ್ರಿಯವರು 11 ಜನವರಿ 1966ರಂದು ತಮ್ಮ 61ನೇ ವಯಸ್ಸಿನಲ್ಲಿ ನಿಧನರಾದರು.
  2. ಕೆ. ಕಾಮರಾಜ್ ಅವರು 2 ಅಕ್ಟೋಬರ್ 1975ರಂದು ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು.
  3. ವಿನೋಬಾ ಭಾವೆಯವರು 15 ನವೆಂಬರ್ 1982ರಂದು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.
  4. ಎಂ. ಜಿ. ರಾಮಚಂದ್ರನ್ ಅವರು 24 ಡಿಸೆಂಬರ್ 1987ರಂದು ತಮ್ಮ 70ನೇ ವಯಸ್ಸಿನಲ್ಲಿ ನಿಧನರಾದರು.
  5. ಬಿ. ಆರ್. ಅಂಬೇಡ್ಕರರು 6 ಡಿಸೆಂಬರ್ 1956ರಂದು ತಮ್ಮ 65ನೇ ವಯಸ್ಸಿನಲ್ಲಿ ನಿಧನರಾದರು.
  6. ರಾಜೀವ್ ಗಾಂಧಿಯವರು 21 ಮೇ 1991ರಂದು ತಮ್ಮ 46ನೇ ವಯಸ್ಸಿನಲ್ಲಿ ನಿಧನರಾದರು.
  7. ವಲ್ಲಭಭಾಯಿ ಪಟೇಲರು 15 ಡಿಸೆಂಬರ್ 1950ರಂದು ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು.
  8. ಅಬುಲ್ ಕಲಾಂ ಆಜಾದರು 22 ಫೆಬ್ರವರಿ 1958ರಂದು ತಮ್ಮ 69ನೇ ವಯಸ್ಸಿನಲ್ಲಿ ನಿಧನರಾದರು.
  9. ಅರುಣಾ ಅಸಫ್ ಅಲಿಯವರು 29 ಜುಲೈ 1996ರಂದು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.
  10. ಜಯಪ್ರಕಾಶ್ ನಾರಾಯಣ್ ಅವರು 8 ಅಕ್ಟೋಬರ್ 1979ರಂದು ತಮ್ಮ 76ನೇ ವಯಸ್ಸಿನಲ್ಲಿ ನಿಧನರಾದರು.
  11. ಗೋಪಿನಾಥ್ ಬೋರ್ಡೊಲೋಯಿಯವರು 5 ಆಗಸ್ಟ್ 1950ರಂದು ತಮ್ಮ 60ನೇ ವಯಸ್ಸಿನಲ್ಲಿ ನಿಧನರಾದರು.
  12. ಮದನ್ ಮೋಹನ್ ಮಾಳವೀಯ ಅವರು 12 ನವೆಂಬರ್ 1946ರಂದು ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು.
  13. ಭೂಪೇನ್ ಹಜಾರಿಕಾ ಅವರು 5 ನವೆಂಬರ್ 2011ರಂದು ತಮ್ಮ 85ನೇ ವಯಸ್ಸಿನಲ್ಲಿ ನಿಧನರಾದರು.
  14. ನಾನಾಜಿ ದೇಶ್‌ಮುಖ್‌ ಅವರು 27 ಫೆಬ್ರವರಿ 2010ರಂದು ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು.

ಹೊರಸಂಪರ್ಕ ಕೊಂಡಿಗಳು[ಬದಲಾಯಿಸಿ]


ಉಲ್ಲೇಖ ದೋಷ: <ref> tags exist for a group named "lower-alpha", but no corresponding <references group="lower-alpha"/> tag was found