ಶಾಂತಿನಿಕೇತನ
ಶಾಂತಿನಿಕೇತನ
| |
---|---|
Town | |
Website | visva-bharati.ac.in/ |
ಶಾಂತಿನಿಕೇತನ ವು (ಬಾಂಗ್ಲ: শান্তিনিকেতন Archived 2010-12-20 ವೇಬ್ಯಾಕ್ ಮೆಷಿನ್ ನಲ್ಲಿ. ಶಾಂತಿನಿಕೇಟನ್ ) ಭಾರತದ ಪಶ್ಚಿಮ ಬಂಗಾಲದ ಬರ್ಭಮ್ ಜಿಲ್ಲೆಯ ಕೋಲ್ಕತ್ತಾ(ಹಿಂದಿನ ಕಲ್ಕತ್ತಾ) ನಗರದ ಉತ್ತರಕ್ಕೆ ಸುಮಾರು 180 ಕಿಲೋಮೀಟರ್‌ನಷ್ಟು ದೂರದಲ್ಲಿರುವ ಒಂದು ಸಣ್ಣ ಪಟ್ಟಣ. [೧][ಶಾಶ್ವತವಾಗಿ ಮಡಿದ ಕೊಂಡಿ]. ಇದನ್ನು ಪ್ರಸಿದ್ಧಿಗೆ ತಂದವರು ನೋಬಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟಾಗೋರ್‌ರವರು, ಅವರ ದೂರದೃಷ್ಟಿಯು ಪ್ರತೀ ವರ್ಷವೂ ಸಾವಿರಾರು ಜನರನ್ನು ಆಕರ್ಷಿಸುವ ಈಗಿನ ವಿಶ್ವವಿದ್ಯಾಲಯದ ನಗರವಾಗಲು (ವಿಶ್ವ-ಭಾರತಿ ವಿಶ್ವವಿದ್ಯಾಲಯ) ಕಾರಣವಾಯಿತು. ರವೀಂದ್ರನಾಥರು ತಮ್ಮ ಅನೇಕ ಅತ್ಯುತ್ಕೃಷ್ಟ ಸಾಹಿತ್ಯಕ ಗ್ರಂಥಗಳನ್ನು ಇಲ್ಲಿ ಬರೆದದ್ದರಿಂದ ಶಾಂತಿನಿಕೇತನ ಒಂದು ಪ್ರವಾಸೀ ಆಕರ್ಷಣೆಯೂ ಆಗಿದೆ, ಮತ್ತು ಅವರ ಮನೆಯು ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ.
ಇತಿಹಾಸ
[ಬದಲಾಯಿಸಿ]ಶಾಂತಿನಿಕೇತನ Archived 2010-12-20 ವೇಬ್ಯಾಕ್ ಮೆಷಿನ್ ನಲ್ಲಿ. ವನ್ನು ಹಿಂದೆ ಭುಬಾಂಡಂಗ (ಭುಬನ್ ಡಕಟ್ ಎಂಬ ಸ್ಥಳೀಯ ಡಕಾಯಿತನ ಹೆಸರು) ಎಂದು ಕರೆಯುತ್ತಿದ್ದರು, ಮತ್ತು ಇದು ಟಾಗೋರ್ ಕುಟುಂಬಕ್ಕೆ ಸೇರಿತ್ತು. ರವೀಂದ್ರನಾಥರ ತಂದೆ, ಮಹರ್ಷಿ ದೇವೇಂದ್ರನಾಥ ಟಾಗೋರ್, ಈ ಜಾಗವನ್ನು ಬಹಳ ಶಾಂತಿಯುತವಾದುದಾಗಿ ಕಂಡರು ಮತ್ತು ಶಾಂತಿನಿಕೇತನವೆಂದು ಮರುನಾಮಕರಣ ಮಾಡಿದರು, ಇದರ ಅರ್ಥ ಶಾಂತಿಯ (ಶಾಂತಿ ) ಬೀಡಾಗಿದೆಯೆಂದು (ನಿಕೇತನ ). ಇಲ್ಲಿ ರವೀಂದ್ರನಾಥ ಟಾಗೋರ್‌ರವರು ಪಾಠ ಭವನವನ್ನು ಆರಂಭಿಸಿದ್ದರು, ಅವರ ಧ್ಯೇಯಪರವಾದ ಶಾಲೆ, ಅದರ ಪ್ರಮುಖ ಪೂರ್ವ ಸಿಧ್ಧಾಂತವೆಂದರೆ ನೈಸರ್ಗಿಕ ಪರಿಸರದಲ್ಲಿ ಕಲಿಯುವುದು ಹೆಚ್ಚು ಸಂತೋಷಕರವಾಗಿರುತ್ತದೆ ಮತ್ತು ಫಲಕಾರಿಯಾಗಿರುತ್ತದೆ. ನೋಬಲ್ ಪ್ರಶಸ್ತಿಯನ್ನು (1913) ಗಳಿಸಿದ ನಂತರ, ಈ ಶಾಲೆಯು ವಿಶ್ವವಿದ್ಯಾಲಯವಾಗಿ 1921ರಲ್ಲಿ ವಿಸ್ತಾರಗೊಂಡಿತು, ಆದರೆ 1951ರಲ್ಲಿ, ಭಾರತದಲ್ಲಿಯೇ ಪ್ರಮುಖ ವಿಶ್ವವಿದ್ಯಾಲಯಗಳಲ್ಲೊಂದಾಯಿತು. ಅನೇಕ ವಿಶ್ವ ವಿಖ್ಯಾತ ಅಧ್ಯಾಪಕರು ಈ ವಿಶ್ವವಿದ್ಯಾನಿಲಯದ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ ಇಂದಿರಾ ಗಾಂಧಿ, ಸತ್ಯಜಿತ್ ರೇ, ಅಬ್ದುಲ್ ಘನಿ ಖಾನ್ ಮತ್ತು ನೋಬಲ್ ಪ್ರಶಸ್ತಿ ವಿಜೇತ ಅಮಾರ್ತ್ಯ ಸೇನ್ ಅವರುಗಳು ಇದರ ಸುಪ್ರಸಿಧ್ಧ ವಿದ್ಯಾರ್ಥಿಗಳಲ್ಲೊಬ್ಬರಾಗಿದ್ದಾರೆ,
ಕಾಲ ಭವನ್, ಶಾಂತಿನಿಕೇತನದ ಕಲಾ ಕಾಲೇಜು, ಈಗಲೂ ಪ್ರಪಂಚದಲ್ಲೇ ಶ್ರೇಷ್ಠ ಕಲಾ ಕಾಲೇಜುಗಳಲ್ಲಿ ಒಂದಾಗಿದೆ. ಇತರ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾ ಭವನ; ಮಾನವ ಶಾಸ್ತ್ರಗಳ ಸಂಸ್ಥೆ, ಶಿಕ್ಷಾ ಭವನ; ವಿಜ್ಞಾನ ಸಂಸ್ಥೆ, ಸಂಗೀತ್ ಭವನ; ನೃತ್ಯ, ನಾಟಕ ಮತ್ತು ಸಂಗೀತದ ಸಂಸ್ಥೆ, ವಿನಯ ಭವನ; ಶಿಕ್ಷಣ ಸಂಸ್ಥೆ, ರವೀಂದ್ರ ಭವನ, ಟಾಗೋರ್ ಶಿಕ್ಷಣ ಸಂಸ್ಥೆ ಮತ್ತು ಸಂಶೋಧನೆ, ಪಲ್ಲಿ-ಸಂಘಟನ ವಿಭಾಗ; ಗ್ರಾಮೀಣ ಪುನರ್ನಿರ್ಮಾಣ ಸಂಸ್ಥೆ, ಮತ್ತು ಪಲ್ಲಿ ಶಿಕ್ಷಾ ಭವನ; ಕೃಷಿ ವಿಜ್ಞಾನ ಸಂಸ್ಥೆ. ಇನ್ನೂ ಇತರ ಕೇಂದ್ರಗಳಿವೆ, ನಿಪ್ಪಾನ್ ಭವನ, ಇಂದಿರ ಗಾಂಧಿ ರಾಷ್ಟ್ರೀಯ ಸಮನ್ವಯ ಕೇಂದ್ರ, ಗ್ರಾಮೀಣ ವಿಸ್ತರಣಾ ಕೇಂದ್ರ, ಶಿಲ್ಪ ಸದನ; ಗ್ರಾಮೀಣ ಕರಕುಶಲ ಕೇಂದ್ರ, ತಾಂತ್ರಿಕ ವಿಜ್ಞಾನ ಮತ್ತು ವಿನ್ಯಾಸ, ಪಲ್ಲಿ-ಚರ್ಚಾ ಕೇಂದ್ರ; ಸಾಮಾಜಿಕ ಶಿಕ್ಷಣ ಮತ್ತು ಗ್ರಾಮೀಣ ಅಭಿವೃಧ್ಧಿ ಕೇಂದ್ರ, ಜೈವಿಕ ತಂತ್ರಜ್ಞಾನ ಕೇಂದ್ರ, ಗಣಿತಶಾಸ್ತ್ರ ಶಿಕ್ಷಣ ಕೇಂದ್ರ, ಪರಿಸರ ಶಿಕ್ಷಣ ಕೇಂದ್ರ, ಗಣಕಯಂತ್ರ ಕೇಂದ್ರ ಮತ್ತು ಇಂದಿರ ಗಾಂಧಿ ರಾಷ್ಟ್ರೀಯ ಸಮನ್ವಯ ಕೇಂದ್ರಗಳಂಥ ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಅಂಗಸಂಸ್ಥೆಗಳಾಗಿವೆ. ಪಾಠ-ಭವನದಲ್ಲಿ, ಎರಡು ಶಿಶುವಿಹಾರದ ಮಟ್ಟದ ಶಿಕ್ಷಣಗಳಿವೆ; ಮ್ರಿನಾಲಿನಿ ಆನಂದ ಪಾಠಶಾಲೆ, ಸಂತೋಷ್ ಪಾಠಶಾಲೆ; ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಶಾಲೆಯನ್ನು ಶಿಕ್ಷಾ ಸತ್ರವೆಂದು ಕರೆಯಲಾಗುತ್ತದೆ, ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣ ಶಾಲೆಯನ್ನು ಉತ್ತರ-ಶಿಕ್ಷಾ ಸದನವೆಂದು ಕರೆಯುತ್ತಾರೆ.
ಶಾಂತಿನಿಕೇತನ ಅಮಾರ್ತ್ಯ ಸೇನ್‌ರವರಿಗೂ ನಿವಾಸವಾಗಿದೆ, ಇವರು 1998ರ ಅರ್ಥಶಾಸ್ತ್ರದ ನೋಬಲ್ ಪ್ರಶಸ್ತಿ ವಿಜೇತರು.
ಭೂಗೋಳ ಶಾಸ್ತ್ರ/ಭೂ ವಿವರಣೆ
[ಬದಲಾಯಿಸಿ]ಶಾಂತಿನಿಕೇತನ 23°41′N 87°41′E / 23.68°N 87.68°E[೧] ರಲ್ಲಿ ನೆಲೆಸಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ 295 ಮೀಟರ್ (967 ಅಡಿ) ಎತ್ತರದಲ್ಲಿದೆ.
ಹವಾಗುಣ
[ಬದಲಾಯಿಸಿ]ತಾಪಮಾನ (ಡಿಗ್ರಿ ಸೆ) : ಬೇಸಿಗೆ- ಗರಿಷ್ಠ. 39.4, ಕನಿಷ್ಠ.34.3; ಚಳಿಗಾಲ-ಗರಿಷ್ಠ.15.7, ಕನಿಷ್ಠ.12.1.
ಮಳೆಸುರಿತ : 125 ಸೆಂ.ಮೀ (ಜೂನ್‌ನಿಂದ ಸೆಪ್ಟಂಬರ್‌ವರೆಗೆ). ಜುಲೈ-ಆಗಸ್ಟ್‌ನಲ್ಲಿ ಭಾರೀ ಮಳೆ.
ಶಾಂತಿನಿಕೇತನದಲ್ಲಿರುವ ಹವಾಮಾನವು ಸಾಮಾನ್ಯವಾಗಿ ಆಹ್ಲಾದಕರವಾಗಿರುತ್ತದೆ, ಬೇಸಿಗೆ, ಚಳಿಗಾಲ ಮತ್ತು ಮಳೆಗಾಲದ ಸಮಯದಲ್ಲಿ ಹವಾಮಾನ ಬದಲಾವಣೆಯಾಗುತ್ತದೆ. ಆದಾಗ್ಯೂ ವಸಂತಕಾಲದಲ್ಲಿ ಶಾಂತಿನಿಕೇತನವು ತನ್ನದೇ ಆದ ಸೊಬಗನ್ನು ಹೊಂದಿರುತ್ತದೆ, ಅದರ ಸ್ವಾಭಾವಿಕ ಸಮೃದ್ಧ ಹಸಿರು ಸೌಂದರ್ಯಕ್ಕಾಗಿ ಅಷ್ಟೇ ಅಲ್ಲ ಅದರ ವಸಂತಕಾಲದ ಆರಂಭದಲ್ಲಿ ಹೋಳಿ ಹಬ್ಬದ ಸಮಯದಲ್ಲಿ ನಡೆಯುವ ವಸಂತೋತ್ಸವಕ್ಕಾಗಿ ಖ್ಯಾತಿ ಪಡೆದಿದೆ.
ವರ್ಷದ ಯಾವುದೇ ಸಮಯದಲ್ಲಿಯೂ ಶಾಂತಿನಿಕೇತನಕ್ಕೆ ಭೇಟಿ ನೀಡಬಹುದು. ಕೊಲ್ಕತ್ತಾದ ತರಹವೇ ಇಲ್ಲಿಯ ಹವಾಮಾನವು ಸ್ವಲ್ಪ ಬೆಚ್ಚಗಿರುತ್ತದೆ, ಬೇಸಿಗೆಯಲ್ಲಿ ಉಷ್ಣಾಂಶವು ಸುಮಾರು 34-38 °C ಮತ್ತು ಚಳಿಗಾಲದಲ್ಲಿ ಸುಮಾರು 12-15 °C. ಜುಲೈ ಮತ್ತು ಆಗಸ್ಟ್‌ನಲ್ಲಿ ಹೆಚ್ಚಿನ ಮಳೆಯಾಗುತ್ತದೆ.
ಪ್ರಮುಖ ಸ್ಪರ್ಧೆಗಳು
[ಬದಲಾಯಿಸಿ]ಶಾಂತಿನಿಕೇತನದಲ್ಲಿ ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವರ್ಷದುದ್ದಕ್ಕೂ ನಡೆಯುತ್ತಿರುತ್ತವೆ.ಇದರಲ್ಲಿ - ವಸಂತ ಉತ್ಸವ, ಬರ್ಷ ಮಂಗಲ್, ಶಾರದೋತ್ಸವ್, ನಂದನ ಮೇಳಾ, ಪೌಶ್ ಮೇಳ, ಮಾಘ ಮೇಳ, ರವೀಂದ್ರ ಜಯಂತಿಗಳು ಪ್ರಮುಖವಾದವು. ಇವುಗಳಲ್ಲಿ ಪೌಶ್ ಮೇಳ ವು ವಿಶೇಷ ಸ್ಥಾನವನ್ನು ಹೊಂದಿದೆ, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ.ಇದು 3-ದಿನದ ಜಾತ್ರೆಯಾಗಿದೆ (ಬೆಂಗಾಳಿ, ಮೇಳ ಎಂದರೆ ಜಾತ್ರೆಯಾಗಿದೆ ), ಬೆಂಗಾಳಿ ತಿಂಗಳಾದ ಪೌಶ್ ನ ಏಳನೆಯ ದಿನದಿಂದ ಪ್ರಾರಂಭವಾಗುತ್ತದೆ (ಸಾಮಾನ್ಯವಾಗಿ ಡಿಸೆಂಬರ್ ಕೊನೆಯ ವಾರದಲ್ಲಿ).ಇದು ಪ್ರವಾಸಿಗರನ್ನು ಆಕರ್ಷಿಸುವುದಲ್ಲದೆ, ಕುಶಲಯಂತ್ರಕಾರರು, ಜಾನಪದ ಹಾಡುಗಾರರು, ನೃತ್ಯಗಾರರು, ಮತ್ತು ಸಾಂಪ್ರದಾಯಿಕ ಬಾಲ್ ತಂಡಗಳನ್ನು ನೆರೆಹೊರೆಯಿಂದ ಆಕರ್ಷಿಸುತ್ತದೆ.
ಇತ್ತೀಚಿನ ಬೆಳವಣಿಗೆಗಳು
[ಬದಲಾಯಿಸಿ]ಶಾಂತಿನಿಕೇತನವು ಟಾಗೂರರ ದಿನಗಳಿಗಿಂತ ಸ್ವಲ್ಪ ಬದಲಾವಣೆಗಳನ್ನು ಕಂಡಿದೆ. ಅಲ್ಲದೆ ವಿಶ್ವ-ಭಾರತಿ ವಿಶ್ವವಿದ್ಯಾನಿಲಯವು ಇಂದಿಗೂ ಸಕ್ರಿಯ ಪಾತ್ರವಹಿಸುತ್ತದೆ, ಶಾಂತಿನಿಕೇತನವು ಭಾರತದ ನವಶ್ರೀಮಂತರ ಧಾಮವಾಗಿದೆ: ಬರಡು ಭೂಮಿಯಾಗಿದ್ದ ಖೊವಾಯ್ (ಮರುಭೂಮಿ) ಮತ್ತು ಕೊಂಡೊಮಿನಿಯಮ್ಸ್‌ಗಳಲ್ಲಿ ಬೃಹತ್ ಬಂಗಲೆಗಳ ನಿರ್ಮಾಣ ಸರ್ವೇಸಾಮಾನ್ಯವಾಗಿದೆ. ಭಾರತದ ಹಳ್ಳಿಯಾಗಿದ್ದ ಇದರ ಬೆಳವಣಿಗೆ ಹೊರವಲಯಗಳಿಗೆ ಹರಡಿ ನಿರಂತರ ಬೆಳೆಯುತ್ತಿರುವ "ಸಣ್ಣ ನಗರ"ವಾಗಿದೆ.
ಟಾಗೂರರ ಕಲ್ಪನಾ ಲೋಕವಾದ ಗ್ರಾಮೀಣ ಕವನಕ್ಕೆ ತಕ್ಕ ವಸ್ತುವುಳ್ಳ ಶಾಂತಿನಿಕೇತನವು ಕ್ರಮೇಣವಾಗಿ ಕಾಣೆಯಾಗುತ್ತಿದೆ, ಆದರೂ ಇದು "ಕಾಲೇಜು ನಗರ" ಎಂಬ ಭಾವನೆಯನ್ನು ಉಳಿಸಿಕೊಂಡಿದೆ, ವಿದ್ಯಾರ್ಥಿಗಳು ಸೇರಬಹುದಾದಂತಹ ನೆರಳಿನಿಂದ ಕೂಡಿದ ಮುಕ್ತ ಪ್ರದೇಶಗಳು ಕ್ಯಾಂಪಸ್‌ನುದ್ದಕ್ಕೂ ಇವೆ. ವಿದ್ಯಾರ್ಥಿಗಳ ಸಂಖ್ಯೆಯು ಮೂಲತಃ ಅಂತರರಾಷ್ಟ್ರೀಯ ಮಟ್ಟದಲ್ಲಿದೆ, ಉತ್ತಮ ಗುಣಮಟ್ಟದ ಬೋಧಕರನ್ನು ಹೊಂದಿದೆ, ಹಾಗೂ ಭಾರತದ ಕೆಲವು ಉತ್ತಮ ಚಿಂತಕರು ಮತ್ತು ಬುದ್ಧಿಜೀವಿಗಳು ಶಾಂತಿನಿಕೇತನದ ತಮ್ಮ ಕಾಲೇಜು ಜೀವನವನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ.
ಆಕರ್ಷಣೆಗಳು
[ಬದಲಾಯಿಸಿ]- ಪ್ರಾರ್ಥನಾ ಸಭಾಂಗಣ
ಉಪಾಸನಾ ಗೃಹ: ಇದು ಪ್ರಾರ್ಥನಾ ಸಭಾಂಗಣ, ವಿವಿಧ ಬಣ್ಣಗಳ ಬೆಲ್ಜಿಯಮ್ ಗಾಜಿನಿಂದ ಮಾಡಿದ್ದಾಗಿದೆ, ಹಾಗೂ ಎಲ್ಲಾ ನಾಲ್ಕು ಕಡೆಗಳಲ್ಲಿ ಅಮೃತಶಿಲೆಯ ಮೆಟ್ಟಿಲುಗಳಿದ್ದು ಕವಿಯ ತಂದೆಯಿಂದ 1863ರಲ್ಲಿ ಕಟ್ಟಲ್ಪಟ್ಟಿದೆ. ಸಂಜೆಯ ಸೇವೆಯ ಸಮಯದಲ್ಲಿ, ಪ್ರಾರ್ಥನಾ ಸಭಾಂಗಣದಲ್ಲಿ ಮೇಣದ ಬತ್ತಿಯನ್ನು ಹತ್ತಿಸಲಾಗುತ್ತದೆ, ಮತ್ತು ಮಿನುಗುವ ಬೆಳಕಿನಲ್ಲಿ ಶೋಭಾಯಮಾನವಾಗಿ ಕಾಣುತ್ತದೆ. ಬುಧವಾರದಂದು ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ.
- ಡೆಹಾಲಿ
ಡೆಹಾಲಿ : ರವೀಂದ್ರನಾಥರು ತಮ್ಮ ಹೆಂಡತಿ ಮೃಣಾಲಿ ದೇವಿಯ ಜೊತೆ ಎರಡು ಅಂತಸ್ತಿನ ಕಟ್ಟಡದಲ್ಲಿ ವಾಸಿಸುತ್ತಿದ್ದರು.
- ಚೈನ ಭವನ
ಚೈನ ಭವನ : ಚೈನಾ ಶಿಕ್ಷಣದ ಕೇಂದ್ರವಿದು. ನಟಿರ್ ಪೂಜಾ, ಶ್ರೇಷ್ಟ ಭಾರತೀಯ ಕಲಾವಿದನಾದ ನಂದಲಾಲ್ ಬೋಸ್ ಅವರ ನೇತೃತ್ವದಲ್ಲಿ ಗೋಡೆಯ ಮೇಲೆ ಬಿಡಿಸಲಾದ ಟಾಗೂರರ ನೃತ್ಯರೂಪಕದ ವರ್ಣಚಿತ್ರ.
- ಕಪ್ಪು ಭವನ
ಕಪ್ಪು ಭವನ : ಉತ್ಸಾಹಶಾಲಿಗಳಾದ ರಾಮ್ ಕಿಂಕರ್ ಮತ್ತು ಪ್ರಭಾಸ್ ಸೇನ್ ಅವರುಗಳು ನಿರ್ಮಿಸಿದ ಒಂದು ಮಣ್ಣಿನ ಕಟ್ಟಡ. ಸಾಮಾನ್ಯವಾಗಿ ಇಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಇಲ್ಲಿ ವಾಸಿಸುತ್ತಾರೆ.
- ಶಾಂತಿನಿಕೇತನ ಗೃಹ
ಶಾಂತಿನಿಕೇತನ ಗೃಹ: ಶಾಂತಿನಿಕೇತನದ ಅತ್ಯಂತ ಹಳೆಯ ಕಟ್ಟಡ.
- ಕಲಾ ಭವನ
ಕಲಾ ಭವನ : ಕಾಲೇಜಿನ ಕಲೆ & ಕರಕುಶಲ ವಿಭಾಗವು ವಿವಿಧ ಶಿಲ್ಪಕಲಾಕೃತಿಗಳು, ಭಿತ್ತಿಚಿತ್ರಗಳ ವಸ್ತುಪ್ರದರ್ಶನವನ್ನು ಇಲ್ಲಿ ನಡೆಸುತ್ತದೆ ಮತ್ತು ಕಲಾಪುಸ್ತಕಗಳ ಗ್ರಂಥಾಲಯವೂ ಇಲ್ಲಿದೆ.
- ಉತ್ತರಾಯಣ ಸಂಕೀರ್ಣ
ಉತ್ತರಾಯಣ ಸಂಕೀರ್ಣ : ಈ ಸಂಕೀರ್ಣದ ಉತ್ತರ ಭಾಗದಲ್ಲಿರುವ ಹಲವಾರು ಕಟ್ಟಡಗಳಾದ ಉದಯನ, ಕೋನಾರ್ಕ, ಶ್ಯಾಮಲಿ, ಪುನಸ್ಚ ಮತ್ತು ಉಡಿಚಿಗಳಲ್ಲಿ ಕವಿಯು ನೆಲೆಸಿ ಕಾರ್ಯನಿರ್ವಹಿಸಿದ್ದರು. ಕವಿಯ ಮಗ ರತೀಂದ್ರನಾಥ ಟಾಗೂರ್ ಅವರು ವಿನ್ಯಾಸಗೊಳಿಸಿದ ಬಿಚಿತ್ರ ( ಅಥವಾ, ರವೀಂದ್ರ ಭವನ ).
- ಬಿಚಿತ್ರ
ಬಿಚಿತ್ರ: ಇದನ್ನು ರವೀಂದ್ರ ಭವನವೆಂದೂ ಕರೆಯಲಾಗುತ್ತದೆ, ಇಲ್ಲಿ ಕವಿಗೆ ಸೇರಿದಂತಹ ವಸ್ತುಗಳು, ವರ್ಣಚಿತ್ರಗಳು & ಅವರು ಬರೆದಂತಹ ಹಲವಾರು ಆವೃತ್ತಿಯ ಪುಸ್ತಕಗಳ ಪ್ರದರ್ಶನವು ಇದೆ ಹಾಗೂ ಇದು ಸಂಶೋಧನಾ ಕೇಂದ್ರವೂ ಆಗಿದೆ.
- ಸಂಗೀತ ಭವನ
ಸಂಗೀತ ಭವನ : ಸಂಗೀತ ಮತ್ತು ನೃತ್ಯಗಳ ಕಾಲೇಜು. ವಿಶ್ವವಿದ್ಯಾನಿಲಯವು ಕಲೆ, ಸಂಗೀತ ಮತ್ತು ಮಾನವೀಯತೆಯ ಮೇಲಿನ ಸಂಶೋಧನೆಗಳಿಂದ ತುಂಬಿದೆ.
- ಛಟಿಮ್ಟಲಾ
ಛಟಿಮ್ಟಲಾ : ರವೀಂದ್ರನಾಥ ಟಾಗೂರರ ತಂದೆ ಮಹರ್ಷಿ ದೇವೇಂದ್ರನಾಥರು ಇಲ್ಲಿ ಧ್ಯಾನ ಮಾಡುತ್ತಿದ್ದರು. ಸಾಮಾನ್ಯವಾಗಿ ಸಭೆಯ ಸಮಯದಲ್ಲಿ ಪ್ರಾರ್ಥನೆಗಳು ನಡೆಯುತ್ತವೆ. ವಿಶ್ವಭಾರತಿ ವಿಶ್ವವಿದ್ಯಾನಿಲಯದ ಯಶಸ್ವಿ ಪದವೀಧರರು ಆ ಪ್ರದೇಶದಲ್ಲಿರುವ ಸಪ್ತಪರ್ಣಿ ಮರಗಳಿಂದ ತೆಗೆದ ಐದು ಎಲೆಗಳ ಕೊಂಬೆಯನ್ನು ಕೊಡುಗೆಯಾಗಿ ನೀಡಿದ್ದಾರೆ.
- ಕಂಕಲಿತಲ
ಕಂಕಲಿತಲ: ಪವಿತ್ರ ಸತಿಪಿತಗಳಲ್ಲಿ ಒಂದಾದ ಕಂಕಲಿತಲವು ಕೊಪಾಯ್ ನದಿಯ ತೀರದಲ್ಲಿದೆ. ಅಲ್ಲಿ ಒಂದು ದೇವಾಲಯವಿದೆ.
- ಶಾಂತಿನಿಕೇತನದ ಕೈತೋಟಗಳು ಮತ್ತು ಉದ್ಯಾನವನಗಳು
ಡೀರ್ ಪಾರ್ಕ್ : ಶಾಂತಿ ನಿಕೇತನದಿಂದ 3 ಕಿಮೀ ದೂರದಲ್ಲಿ, ಶ್ರೀನಿಕೇತನದ ಬಳಿ ಇದೆ. ಮೂಲತಃ, ’ಖೊವಾಯ್’ ನಗರವನ್ನು ಆವರಿಸಿದೆ. ಜಿಂಕೆಯ ಗುಂಪುಗಳಿಂದ ಕೂಡಿದ ಹಾಗೂ ಸ್ವಾಭಾವಿಕ ಪಕ್ಷಿ ಧಾಮವಿರುವ ಈ ಪ್ರದೇಶವು ಹೆಚ್ಚಿನ ಮರಗಳಿಂದ ಕೂಡಿದೆ.
- ಶಾಂತಿನಿಕೇತನ ಮಾರುಕಟ್ಟೆ
ಗ್ರಾಮೀಣ್ (ಬೊಲ್ಪುರ್), ಸರ್ವೋದಯ ಆಶ್ರಮ (ಬೊಲ್ಪುರ್), (ಕರಕುಶಲವಸ್ತುಗಳು & ಕೈಮಗ್ಗಗಳು) ವಿಶ್ವಭಾರತಿ ಶಿಲ್ಪ ಸದನ (ಶಾಂತಿನಿಕೇತನ), ಶಾಂತಿನಿಕೇತನ ಕೋಆಪರೇಟೀವ್ ಸ್ಟೋರ್ಸ್ (ಶಾಂತಿನಿಕೇತನ).
- ಶಾಂತಿನಿಕೇತನದಲ್ಲಿ ಊಟಕ್ಕೆ ಪ್ರಸಿದ್ಧವಾದ ಸ್ಥಳಗಳು
ಇಲ್ಲಿ ಬೆಂಗಾಳಿ ಆಹಾರ ದೊರೆಯುತ್ತದೆ, ಮೀನು ಪಲ್ಯೆ ಹಾಗೂ ಬದನೆಕಾಯಿ ಪಲ್ಯೆಯನ್ನು ಸವಿಯಬಹುದು ಏಕೆಂದರೆ ಬೆಂಗಾಳಿಗಳು ಮೀನು ಪಲ್ಯ ಮಾಡುವಲ್ಲಿ ಬಹಳ ಪ್ರಸಿದ್ಧಿ ಪಡೆದಿದ್ದಾರೆ.
- ಶಾಂತಿನಿಕೇತನದಿಂದ ಇರುವ ನಡುವಣ ದೂರ(ಗಳು)
- ಪುಲ್ಲೊರ (40 ಕಿಮೀ)
- ನಲ್ಹತಿ (104 ಕಿಮೀ)
- ಕಂಕಲಿತಲ (7 ಕಿಮೀ)
- ಬಕ್ರೇಶ್ವರ್ (58 ಕಿಮೀ)
- ಮಸ್ಸಂಜೋರ್ (78 ಕಿಮೀ)
- ಕೆಂಡುಬಿಲ್ವ (42 ಕಿಮೀ)
- ನನೂರ್ (23 ಕಿಮೀ)
- ತಾರಾಪೀಠ್ (80 ಕಿಮೀ)
ಉಲ್ಲೇಖಗಳು
[ಬದಲಾಯಿಸಿ]ಇವನ್ನೂ ಗಮನಿಸಿ
[ಬದಲಾಯಿಸಿ]- ವಿಶ್ವ-ಭಾರತಿ ವಿಶ್ವಾವಿದ್ಯಾನಿಲಯ
- ಪಥ ಭವನ
- ದೇವೇಂದ್ರನಾಥ್ ಟಾಗೋರ್
- ರವೀಂದ್ರನಾಥ್ ಟಾಗೋರ್
- ಮುಕುಲ್ ಡೇ
- ಅಮರ್ತೃ ಸೇನ್
- ಪೌಶ್ ಮೇಳ
- ಶಾಂತಿದೇವ್ ಘೋಶ್
ಬಾಹ್ಯ ಕೊಂಡಿಗಳು
[ಬದಲಾಯಿಸಿ]Find more about Shantiniketan at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- ಶಾಂತಿನಿಕೇತನದ ಫೋಟೋಗಳು Archived 2010-12-20 ವೇಬ್ಯಾಕ್ ಮೆಷಿನ್ ನಲ್ಲಿ.
- ಶಾಂತಿನಿಕೇತನ ಚಿತ್ರಗಳು Archived 2010-12-20 ವೇಬ್ಯಾಕ್ ಮೆಷಿನ್ ನಲ್ಲಿ.
- ಕಲೆ ಮತ್ತು ಶಾಂತಿನಿಕೇತನ Archived 2008-10-02 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಶ್ವ-ಭಾರತಿ ವಿಶ್ವವಿದ್ಯಾನಿಲಯ: ಅಧಿಕೃತ ವೆಬ್ಸೈಟ್ Archived 2009-08-29 ವೇಬ್ಯಾಕ್ ಮೆಷಿನ್ ನಲ್ಲಿ.
- ಪಶ್ಚಿಮ ಬಂಗಾಳ ಸರ್ಕಾರದ ಅಧಿಕೃತ ಶಾಂತಿನಿಕೇತನ ವೆಬ್ಸೈಟ್ Archived 2009-02-27 ವೇಬ್ಯಾಕ್ ಮೆಷಿನ್ ನಲ್ಲಿ.
- ಶಾಂತಿನಿಕೇತನದಲ್ಲಿ ಮುಕುಲ್ ಡೇ ಅವರ ದಾಖಲೆಗಳು Archived 2008-01-04 ವೇಬ್ಯಾಕ್ ಮೆಷಿನ್ ನಲ್ಲಿ.
- ಅಧಿಕೃತ ಶಾಂತಿನಿಕೇತನ ವೆಬ್ಸೈಟ್
- ಶಾಂತಿನಿಕೇತನ
- ಶಾಂತಿನಿಕೇತನದ ಚಿತ್ರಗಳು Archived 2007-12-15 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಕಿಟ್ರಾವೆಲ್ ನಲ್ಲಿ ಶಾಂತಿನಿಕೇತನ ಪ್ರವಾಸ ಕೈಪಿಡಿ (ಆಂಗ್ಲ)
- Pages with unresolved properties
- Short description is different from Wikidata
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Pages using gadget WikiMiniAtlas
- ಬೀರ್ಭಮ್ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು
- ಶಾಂತಿನಿಕೇತನಕ್ಕೆ ಸಂಬಂಧಿಸಿದ ಜನರು
- ಸಂಸ್ಕೃತಿ
- ಶೈಕ್ಷಣಿಕ ಸಂಸ್ಥೆಗಳು