ಕಾನನ್‌ ದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾನನ್‌ ದೇವಿ

ಕಾನನ್‌ ದೇವಿ (ಜನನ: 1916 - ಮರಣ: 17 ಜುಲೈ 1992) ಭಾರತೀಯ ಚಲನಚಿತ್ರರಂಗದ ಆರಂಭಿಕ ಕಾಲದಲ್ಲಿ, ಹಾಡುಗಾರಿಕೆಯ ಮೂಲಕ ಚಿರಪರಿಚಿತರಾಗಿದ್ದರು. ಬಂಗಾಳಿ ಚಲನಚಿತ್ರರಂಗದ ಮೊದಲ ತಾರೆ ಎಂದೂ ಪ್ರಸಿದ್ಧರಾಗಿದ್ದರು.[೧] ಅವರದ್ದು ವೇಗಗತಿಯ ರಾಗ ಮತ್ತು ಸಾಮಾನ್ಯವಾಗಿ ಧೃತಗತಿಯ ಹಾಡುಗಾರಿಕೆಯ ಶೈಲಿಯಾಗಿತ್ತು. ಇದರಿಂದಾಗಿ, ಇಂತಹ ಶೈಲಿಯನ್ನು ಬಳಸಿದ ಕೊಲ್ಕತ್ತಾದ ನ್ಯೂ ಥಿಯೆಟರ್ಸ್‌ನ ಚಿತ್ರಗಳ ಭಾರೀ ಯಶಸ್ಸುವಿಗೆ ಕಾರಣವಾಗಿತ್ತು.

ಜೀವನಚರಿತ್ರೆ[ಬದಲಾಯಿಸಿ]

ಕಾನನ್‌ ದೇವಿ 1916ರಲ್ಲಿ ಅಥವಾ ಅದರ ಆಸುಪಾಸಿನಲ್ಲಿ, ಪಶ್ಚಿಮ ಬಂಗಾಳದ ಹೌರಾದಲ್ಲಿ ಕಾನನ್‌ ದಾಸಿ ಯಾಗಿ ಜನಿಸಿದರು. ತಮ್ಮ ಆತ್ಮಚರಿತ್ರೆಯಲ್ಲಿ, ತಾವು ಅಕ್ರಮ ಸಂತಾನ ಎಂದು ಕಾನನ್‌ ದೇವಿ ಹೇಳಿಕೊಂಡಿದ್ದಾರೆ. ಆವರದು ಬಡ ಕುಟುಂಬವಾಗಿತ್ತು. ತಮ್ಮ ಸಾಕುತಂದೆಯ ಮರಣಾನಂತರ, ಅವರು ಮತ್ತು ಅವರ ತಾಯಿ ತಮ್ಮ ಪಾಡಿಗೆ ಜೀವನ ನಡೆಸಿಕೊಂಡು ಹೋಗಲು ಎಲ್ಲಾ ತರಹದ ಕೆಲಸಗಳನ್ನೂ ಮಾಡುತ್ತಲಿದ್ದರು.

ಅವರ ಹೆಸರನ್ನು ಅದೇ ಸಮಯದಲ್ಲಿ ಕಾನನ್‌ ಬಾಲಾ ಎಂದು ಬದಲಿಸಲಾಯಿತು. ಆವರು ಕೇವಲ ಹತ್ತು ವರ್ಷ ವಯಸ್ಸಿನವರಾಗಿದ್ದಾಗ, ಹಿತೈಷಿಯೊಬ್ಬರು ಅವರನ್ನು ಜ್ಯೋತಿ ಸ್ಟುಡಿಯೊಗೆ ಕರೆತಂದರು. ಅಲ್ಲಿ ಜಯದೇವ್ ‌ (1926) ಚಲನಚಿತ್ರದಲ್ಲಿ ಕಾನನ್‌ರಿಗೆ ಬಾಲಕಿಯ ಕಿರುಪಾತ್ರ ನೀಡಲಾಯಿತು. ಆನಂತರ, ರಾಧಾ ಫಿಲ್ಮ್ಸ್‌ ಸಂಸ್ಥೆಯೊಂದಿಗೆ ತಮ್ಮ ವೃತ್ತಿ ಮುಂದುವರೆಸಿದರು. ಇವುಗಳಲ್ಲಿ ಹಲವು ಚಲನಚಿತ್ರಗಳನ್ನು ಜ್ಯೋತೀಶ್‌ ಬಾನರ್ಜಿ ನಿರ್ದೇಶಿಸಿದ್ದರು. ಖೂನೀ ಕೌನ್ ‌ ಮತ್ತು ಮಾ ಚಲನಚಿತ್ರಗಳಲ್ಲಿ ತಮ್ಮ ನಟನಾ ಪ್ರತಿಭೆಯಿಂದ ಗುರುತಿಸಿಕೊಂಡ ಕಾನನ್‌ ಕೋಲ್ಕತ್ತಾದ ನ್ಯೂ ಥಿಯೆಟರ್ಸ್‌ ಸೇರಿದರು. ರಾಯಚಂದ್ ಬೊರಾಲ್‌ ಎಂಬ ಮೇರು ಸಂಗೀತಗಾರರೊಂದಿಗೆ ಭೇಟಿಯಾದರು. ಇವರು ಕಾನನ್‌ ದೇವಿಗೆ ತರಬೇತಿ ನೀಡಿದರಲ್ಲದೆ, ಹಿಂದಿ ಭಾಷೆಯ ಉಚ್ಚಾರಣೆಯೊಂದಿಗೂ ಚಿರಪರಿಚಿತಗೊಳಿಸಿದರು. ಅವರು ಉಸ್ತಾದ್ ಅಲ್ಲಾಹ್‌ ರಖಾ ಅವರಿಂದ ಆರಂಭಿಕ ಸಂಗೀತ ತರಬೇತಿ ಪಡೆದರು. ಮೆಗಾಫೋನ್‌ ಗ್ರಾಮೊಫೋನ್ ಕಂಪೆನಿಯಲ್ಲಿ ಅವರು ಒಬ್ಬ ಗಾಯಕಿಯಾಗಿ ಸೇವೆ ಸಲ್ಲಿಸಿ, ಭೀಷ್ಮದೇವ್ ಚಟರ್ಜಿಯವರಿಂದ ಹೆಚ್ಚುವರಿ ತರಬೇತಿ ಪಡೆದರು. ನಂತರ, ಅವರು ಅನಾದಿ ದಸ್ತಿದರ್‌ ಅವರ ಮಾರ್ಗದರ್ಶನದಲ್ಲಿ ರವೀಂದ್ರ ಸಂಗೀತ್‌ ಕಲಿತರು. ಚಲನಚಿತ್ರಗಳಲ್ಲಿ ನಮೂದಿಸುವ ಉದ್ದೇಶಕ್ಕಾಗಿ ಅವರ ಹೆಸರನ್ನು ಪುನಃ ಕಾನನ್‌ ದೇವಿ ಎಂದು ಬದಲಾಯಿಸಲಾಯಿತು.

ತಮ್ಮ ಚಲನಚಿತ್ರ ದೇವದಾಸ್ ‌(1935)ನಲ್ಲಿ ಪ್ರಧಾನ ನಟಿಯಾಗಬೇಕೆಂದು ನ್ಯೂ ಥಿಯೆಟರ್ಸ್‌ನ ಪಿ.ಸಿ. ಬರುವಾ ಕಾನನ್ ದೇವಿಯವರನ್ನು ಕೇಳಿಕೊಂಡರು. ಆದರೆ, ಕೆಲವು ಕಾರಣದಿಂದಾಗಿ ಅವರು ಚಲನಚಿತ್ರದಲ್ಲಿ ನಟಿಸಲಾಗಲಿಲ್ಲ. ಆನಂತರ, ಅವರು ಬರುವಾರ ಮುಕ್ತಿ (1937) ಚಲನಚಿತ್ರದಲ್ಲಿ ಪ್ರಮುಖ ನಟಿಯಾದರು. ಬಹುಶಃ ಇದು ಅವರ ಅತ್ಯುತ್ತಮ ಪಾತ್ರ ನಿರ್ವಹಣೆಯಾಗಿದ್ದು, ಸ್ಟುಡಿಯೊದ ಅತಿ ಜನಪ್ರಿಯ ತಾರೆಯಾದರು. ನ್ಯೂ ಥಿಯೆಟರ್ಸ್‌ನ ಚಲನಚಿತ್ರಗಳಿಂದಾಗಿ ಕಾನನ್‌ ದೇವಿ ಭಾರೀ ಬೇಡಿಕೆಯಲ್ಲಿರುವ ಗಾಯಕಿಯೆನಿಸಿದರು. ಕೆ. ಸಿ. ಡೇಯವರೊಂದಿಗಿನ ಸಹಯೋಗದಿಂದಾಗಿ ಕಾನನ್‌ ದೇವಿ ಬಹಳಷ್ಟು ಜನಪ್ರಿಯತೆ ಗಳಿಸಿದರು. 1941ರಲ್ಲಿ ತಮ್ಮ ಹಾಡುಗಾರಿಕೆಯ ಕರಾರು ಗುತ್ತಿಗೆಯಿಂದ ರಾಜೀನಾಮೆ ನೀಡುವ ತನಕ, ಕಾನನ್‌ ದೇವಿ ನ್ಯೂ ಥಿಯೇಟರ್ಸ್‌ನ ಮೇರುನಟಿಯಾಗಿ ಉಳಿದರು. 1941ರಿಂದ ಅವರು ಬಂಗಾಳಿ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಸ್ವತಂತ್ರವಾಗಿ ನಟನಾ ವೃತ್ತಿ ಮಾಡಲಾರಂಭಿಸಿದರು. ಎಂ. ಪಿ. ಪ್ರೊಡಕ್ಷನ್ಸ್‌ ಸಂಸ್ಥೆ ನಿರ್ಮಿಸಿ, ಬಿಡುಗಡೆಗೊಳಿಸಿದ ಜವಾಬ್ ,‌ ಕಾನನ್‌ ದೇವಿಯವರ ಭಾರಿ ಯಶಸ್ಸು ಗಳಿಸಿದ ಚಲನಚಿತ್ರವಾಗಿತ್ತು. ಈ ಚಲನಚಿತ್ರದಲ್ಲಿ ಅವರ ಹಾಡು ಯೆ ದುನಿಯಾ ಹೈ ತೂಫಾನ್‌ ಮೇಯ್ಲ್‌ ನೊಂದಿಗೆ, ಬಹಳಷ್ಟು ಹಾಡುಗಳು ಮೆಚ್ಚುಗೆ ಗಳಿಸಿದವು. ಇದೇ ರೀತಿ, ಹಾಸ್ಪಿಟಲ್‌ (1943), ಬನ್‌ಫೂಲ್‌ (1945) ಮತ್ತು ರಾಜಲಕ್ಷ್ಮಿ (1946) ಚಲನಚಿತ್ರಗಳಲ್ಲಿ ಇದೇ ರೀತಿ ಹಾಡಿ ಜನಪ್ರಿಯತೆಯನ್ನು ಪುನಃ ಹೆಚ್ಚಿಸಿಕೊಂಡರು.

1948ರಲ್ಲಿ ಅವರು ಮುಂಬಯಿಗೆ ಸ್ಥಳಾಂತರಗೊಂಡರು. ಕಾನನ್‌ ದೇವಿ ಮೊದಲ ಬಾರಿಗೆ ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡದ್ದು 1948ರಲ್ಲಿ. ಆ ವರ್ಷ ಅಶೋಕ್‌ ಕುಮಾರ್‌ರೊಂದಿಗೆ ನಟಿಸಿದ ಚಂದ್ರಶೇಖರ್ ‌ಚಿತ್ರ ಬಿಡುಗಡೆಯಾಯಿತು. 1949ರಲ್ಲಿ ಕಾನನ್‌ ದೇವಿ ಶ್ರೀಮತಿ ಪಿಕ್ಚರ್ಸ್ ಎಂಬ ತಮ್ಮದೇ ಆದ ಚಲನಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿ ಚಲನಚಿತ್ರ ನಿರ್ಮಾಪಕಿಯಾದರು. 1949ರಲ್ಲಿ ಅನನ್ಯಾ ಎಂಬ ಚಲನಚಿತ್ರದೊಂದಿಗೆ ಸಬ್ಯಸಾಚಿ ಕಲೆಕ್ಟಿವ್‌ ಎಂಬುದನ್ನು ಪರಿಚಯಿಸಿದರು. ಅವರ ಸ್ವಂತ ಚಲನಚಿತ್ರ ನಿರ್ಮಾಣಗಳು ಮುಖ್ಯವಾಗಿ ಶರತ್‌ ಚಂದ್ರ ಚಟ್ಟೋಪಾಧ್ಯಾಯ ಅವರ ಕಥೆಗಳನ್ನು ಆಧರಿಸಿದ್ದವು. ಕಾನನ್‌ ದೇವಿ ತಮ್ಮ ಮೊದಲ ಪತಿ ಶ್ರೀ ಅಶೋಕ್‌ ಮೈತ್ರಾ ಅವರನ್ನು ವಿವಾಹವಾದರು. ಆದರೆ ಈ ವಿವಾಹವು ಅಲ್ಪಕಾಲಿಕವಾಗಿದ್ದು, ವಿಚ್ಛೇದನದಲ್ಲಿ ಕೊನೆಗೊಂಡಿತು. ಆದರೂ, ಜೀವನದಲ್ಲಿ ಮೊದಲ ಬಾರಿಗೆ ತಮಗೆ ಸಾಮಾಜಿಕ ಸ್ಥಾನಮಾನ ನೀಡಿದ್ದಕ್ಕಾಗಿ ಅಶೋಕ್‌ ಮೈತ್ರಾಗೆ ಕೃತಜ್ಞತೆ ಸೂಚಿಸಿದರು. ಆನಂತರ, ತಮ್ಮ ಎರಡನೆಯ ಪತಿ ಹರಿದಾಸ್‌ ಭಟ್ಟಾಚಾರ್ಯರನ್ನು ವಿವಾಹವಾದರು. ಏಕೈಕ ಮಗು - ಸಿದ್ಧಾರ್ಥ ಭಟ್ಟಾಚಾರ್ಯ ಎಂಬ ಮಗನಿಗೆ ಜನ್ಮವಿತ್ತರು. ಕಾನನ್‌ ದೇವಿ ತಮ್ಮ ಕುಟುಂಬದೊಂದಿಗೆ ಕೋಲ್ಕತ್ತಾದಲ್ಲಿ ನೆಲೆಸಿದರು. ವಯೋವೃದ್ಧ ಮತ್ತು ಆರ್ಥಿಕ ತೊಂದರೆಯಲ್ಲಿದ್ದ ಕಲಾವಿದೆಯರಿಗೆ ಬೆಂಬಲ ನೀಡಲು ಹಾಗೂ ಬಂಗಾಳಿ ಚಲನಚಿತ್ರರಂಗದ ಏಳ್ಗೆಗಾಗಿ ಮಹಿಳಾ ಶಿಲ್ಪಿ ಮಹಲ್‌ ಎಂಬ ಸಂಸ್ಥೆ ಸ್ಥಾಪಿಸಿ, ಅದರ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದರು. ಬಂಗಾಳಿ ಚಿತ್ರರಂಗದ ಮೊಟ್ಟಮೊದಲ ನಾಯಕಿನಟಿ ಕಾನನ್ ದೇವಿಗೆ, ಭಾರತೀಯ ಚಿತ್ರರಂಗಕ್ಕೆ ನೀಡಿದ ಅಮೂಲ್ಯ ಕೊಡುಗೆಗೆ ಮನ್ನಣೆ ನೀಡಿದ ಭಾರತ ಸರ್ಕಾರವು ಅವರಿಗೆ 1976ರಲ್ಲಿ ದಾದಾಸಾಹೆಬ್‌ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿತು. 1992ರ ಜುಲೈ 17ರಂದು ಕಾನನ್‌ ದೇವಿ ತಮ್ಮ ಎಪ್ಪತ್ತಾರನೆಯ ವಯಸ್ಸಿನಲ್ಲಿ, ಕೋಲ್ಕತ್ತಾದ ಆಸ್ಪತ್ರೆ ಬೆಲ್ಲೆ ವ್ಯೂ ಕ್ಲಿನಿಕ್‌ನಲ್ಲಿ ನಿಧನರಾದರು.

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ನಟನೆ[ಬದಲಾಯಿಸಿ]

ವರ್ಷ ಚಲನಚಿತ್ರದ ಹೆಸರು ನಿರ್ದೇಶನ ಸಹನಟ ಟಿಪ್ಪಣಿ
1926 ಜಯದೇವ್‌ ಜ್ಯೋತೀಶ್‌ ಬಾನರ್ಜಿ ನಟ
1931 ಋಷಿರ್‌ ಪ್ರೇಮ್‌ ಜ್ಯೋತೀಶ್‌ ಬಾನರ್ಜಿ ನಟ
1931 ಜೊರೆ ಬರಾತ್‌ ಜ್ಯೋತೀಶ್‌ ಬಾನರ್ಜಿ ನಟ ಕಿರು ಅವಧಿಯ ಚಲನಚಿತ್ರ
1932 ಬಿಷ್ಣುಮಯ ಜ್ಯೋತೀಶ್‌ ಬಂಡ್ಯೋಪಾಧ್ಯಾಯ್‌ ನಟ
1932 ಪ್ರಹ್ಲಾದ್‌ ಪ್ರಿಯನಾಥ್‌ ಗಾಂಗೂಲಿ ನಟ
1932 ವಿಷ್ಣು ಮಾಯ ಜ್ಯೋತೀಶ್‌ ಬಾನರ್ಜಿ ನಟ
1933 ಶ್ರೀ ಗೌರಂಗ ಪ್ರಫುಲ್ಲ ಘೋಷ್‌ ನಟ
1933 ಚಾರ್ ದೇವೇಶ್‌ ಪ್ರಫುಲ್ಲ ಘೋಷ್‌ ನಟ ಅತಿರೇಕದ ಕಲ್ಪನೆಯ ಚಲನಚಿತ್ರ
1934 ಮಾಂ ಪ್ರಫುಲ್ಲ ಘೋಷ್‌ ನಟ
1934 ಹರಿ ಭಕ್ತಿ ಪ್ರಫುಲ್ಲ ಘೋಷ್‌ ನಟ
1935 ಕಂಠಹಾರ್‌ ಜ್ಯೋತೀಶ್‌ ಬಾನರ್ಜಿ ನಟ
1935 ಮನ್ಮಯಿ ಗರ್ಲ್ಸ್‌ ಸ್ಕೂಲ್‌ ಜ್ಯೋತೀಶ್‌ ಬಾನರ್ಜಿ ನಟ
1935 ಬಾಸಬದತ್ತ ಸತೀಶ್‌ ದಾಸಗುಪ್ತ ನಟ
1936 ಬಿಷಬೃಕ್ಷ ಫಣಿ ಬರ್ಮಾ ನಟ
1936 ಕೃಷ್ಣ ಸುಧಾಮ ಫಣಿ ಬರ್ಮಾ ನಟ
1936 ಖೂನೀ ಕೌನ್‌ ಜಿ. ಆರ್‌. ಸೇಠಿ ನಟ
1936 ಮಾಂ ಪ್ರಫುಲ್ಲ ಘೋಷ್‌ ನಟ
1937 ವಿದ್ಯಾಪತಿ ದೇಬಕಿ ಬೋಸ್‌ ನಟ
1937 ಮುಕ್ತಿ ಪ್ರಮಥೇಶ್‌ ಚಂದ್ರ ಬರುವಾ ನಟ
1937 ಮುಕ್ತಿ ಪ್ರಮಥೇಶ್‌ ಚಂದ್ರ ಬರುವಾ ನಟ
1937 ಬಿದ್ಯಾಪತಿ ದೇಬಕಿ ಬೋಸ್‌ ನಟ
1938 ಸಾಥಿ ಫಣಿ ಮಜುಮ್ದರ್‌ ನಟ
1938 ಸ್ಟ್ರೀಟ್‌ ಸಿಂಗರ್‌ ಫಣಿ ಮಜುಮ್ದರ್‌ ನಟ
1939 ಸಪೇರಾ ದೇಬಕಿ ಬೋಸ್‌ ನಟ
1939 ಜವಾನೀ ಕೀ ರಾತ್‌ ಹೇಮಚಂದ್ರ ಚುಂದರ್‌ ನಟ
1939 ಸಪೂರೆಯ್ ದೇಬಕಿ ಬೋಸ್‌ ನಟ
1940 ಪರಾಜಯ್‌ ಹೇಮಚಂದ್ರ ಚುಂದರ್‌ ನಟ
1940 ಹಾರ್‌ ಜೀತ್‌ ಅಮರ್‌ ಮಲ್ಲಿಕ್‌ ನಟ
1940 ಅಭಿನೇತ್ರಿ ಅಮರ್‌ ಮಲ್ಲಿಕ್‌ ನಟ
1941 ಪರಿಚಯ್‌ ನಿತಿನ್‌ ಬೋಸ್‌ ನಟ
1941 ಲಗನ್‌ ನಿತಿನ್‌ ಬೋಸ್‌ ನಟ
1942 ಶೇಷ್‌ ಉತ್ತರ್‌ ಪ್ರಮಥೇಶ್‌ ಚಂದ್ರ ಬರುವಾ ನಟ
1942 ಜವಾಬ್‌ ಪ್ರಮಥೇಶ್ ಚಂದ್ರ ಬರುವಾ ನಟ
1943 ಜೋಗಾಜೋಗ್ ಸುಶೀಲ್‌ ಮಜುಮ್ದರ್‌ ನಟ
1943 ಜೋಗಾಜೋಗ್ ಸುಶೀಲ್ ಮಜುಮ್ದರ್‌ ನಟ
1944 ಬಿದೇಶಿನಿ ಪ್ರೇಮೇಂದ್ರ ಮಿತ್ರ ನಟ
1945 ಪಥ ಬೇಂಧೆ ದಿಲೊ ಪ್ರೇಮೇಂದ್ರ ಮಿತ್ರ ನಟ
1945 ಬನ್‌ಫೂಲ್‌ ನೀರೇನ್‌ ಲಹಿರಿ ನಟ
1945 ರಾಜ್‌ ಲಕ್ಷ್ಮಿ ಪ್ರೇಮೇಂದ್ರ ಮಿತ್ರ ನಟ
1946 ತುಮಿ ಆರ್‌ ಆದ್ಮಿ ಅಪೂರ್ವ ಕುಮಾರ ಮಿತ್ರ ನಟ
1946 ಕೃಷ್ಣ ಲೀಲಾ ದೇಬಕಿ ಬೋಸ್‌ ನಟ
1946 ಅರಬಿಯನ್ ನೈಟ್ಸ್‌ ನೀರೆನ್‌ ಲಹಿರಿ ನಟ
1947 ಚಂದ್ರಶೇಖರ್‌ ದೇಬಕಿ ಬೋಸ್‌ ನಟ
1947 ಚಂದ್ರಶೇಖರ್‌ ದೇಬಕಿ ಬೋಸ್‌ ನಟ
1947 ಫೈಸಲಾ ಅಪೂರ್ಬ ಕುಮಾರ್‌ ಮಿತ್ರಾ ನಟ
1948 ಬಂಕಲೇಖಾ ಚಿತ್ತಾ ಬೋಸ್‌ ನಟ
1948 ಅನಿರ್ಬಾನ್‌ ಸೌಮ್ಯನ್‌ ಮುಖರ್ಜಿ ನಟ
1949 ಅನನ್ಯ ಸಬ್ಯಸಾಚಿ ನಟ
1949 ಅನುರಾಧಾ ಪ್ರಣಬ್‌ ರಾಯ್‌ ನಟ
1950 ಮೆಜದೀದಿ ಅಜಯ್‌ ಕರ್‌ ನಟ
1952 ದರ್ಪಚೂರ್ಣ ನಟ
1954 ನಬಬಿಧಾನ್‌ ಹರಿದಾಸ್‌ ಭಟ್ಟಾಚಾರ್ಯ ನಟ
1955 ದೇಬತ್ರ ಹರಿದಾಸ್‌ ಭಟ್ಟಾಚಾರ್ಯ ನಟ
1956 ಆಶಾ ಹರಿದಾಸ್‌ ಭಟ್ಟಾಚಾರ್ಯ ನಟ
1959 ಇಂದ್ರನಾಥ್‌ ಶ್ರಿಕಾಂತ್‌-ಓ-ಅನ್ನದದೀದಿ ಹರಿದಾಸ್‌ ಭಟ್ಟಾಚಾರ್ಯ ನಟ

ಹಿನ್ನೆಲೆ ಗಾಯಿಕೆಯಾಗಿ[ಬದಲಾಯಿಸಿ]

 1. ಆಶಾ (1956) (ಹಿನ್ನೆಲೆ ಗಾಯಕಿ)
 2. ದೇಬತ್ರ (1955) (ಹಿನ್ನೆಲೆ ಗಾಯಕಿ)
 3. ನಬ ಬಿಧಾನ (1954) (ಹಿನ್ನೆಲೆ ಗಾಯಕಿ)
 4. ದರ್ಪಚೂರ್ಣ (1952) (ಹಿನ್ನೆಲೆ ಗಾಯಕಿ)
 5. ಮೇಜದೀದಿ (1950) (ಹಿನ್ನೆಲೆ ಗಾಯಕಿ)
 1. ಅನನ್ಯ (1949) (ಹಿನ್ನೆಲೆ ಗಾಯಕಿ)
 2. ಅನಿರ್ಬಾನ್‌ (1948) (ಹಿನ್ನೆಲೆ ಗಾಯಕಿ)
 3. ಬಂಕಲೇಖಾ (1948) (ಹಿನ್ನೆಲೆ ಗಾಯಕಿ)

... ಕುಹಕ ಬರಹ ಎಂದೂ ಹೇಳಲಾಗಿದೆ

 1. ಫೈಸಲಾ (1947) (ಹಿನ್ನೆಲೆ ಗಾಯಕಿ)
 2. ಚಂದ್ರಶೇಖರ್‌ (1947) (ಹಿನ್ನೆಲೆ ಗಾಯಕಿ)
 3. ಅರಬಿಯನ್‌ ನೈಟ್ಸ್‌ (1946) (ಹಿನ್ನೆಲೆ ಗಾಯಕಿ)
 4. ಕೃಷ್ಣ ಲೀಲಾ (1946) (ಹಿನ್ನೆಲೆ ಗಾಯಕಿ)

... ರಾಧಾ ಕೃಷ್ಣ ಪ್ರೇಮ ಎಂದೂ ಹೇಳಲಾಗಿದೆ ... ಶ್ರೀ ಕೃಷ್ಣನ ಕಥೆ ಎಂದೂ ಹೇಳಲಾಗಿದೆ

 1. ತುಮ್‌ ಔರ್‌ ಮೈಂ (1946) (ಹಿನ್ನೆಲೆ ಗಾಯಕಿ)
 2. ತುಮೀ ಆರ್‌ ಅಮಿ (1946) (ಹಿನ್ನೆಲೆ ಗಾಯಕಿ)
 3. ಬನ್‌ ಫೂಲ್ (1945) (ಹಿನ್ನೆಲೆ ಗಾಯಕಿ)
 4. ಪಥ್‌ ಬೆಂಧೆ ದಿಲೊ (1945) (ಹಿನ್ನೆಲೆ ಗಾಯಕಿ)
 5. ರಾಜಲಕ್ಷ್ಮಿ (1945) (ಹಿನ್ನೆಲೆ ಗಾಯಕಿ)
 6. ಬಿದೇಶಿನಿ (1944) (ಹಿನ್ನೆಲೆ ಗಾಯಕಿ)
 7. ಜೋಗಾಜೋಗ್‌ (1943) (ಹಿನ್ನೆಲೆ ಗಾಯಕಿ)
 8. ಜವಾಬ್‌ (1942) (ಹಿನ್ನೆಲೆ ಗಾಯಕಿ)

... ಶೇಷ್‌ ಉತ್ತರ್‌ ಎಂದೂ ಹೇಳಲಾಗಿದೆ (ಭಾರತ: ಬಂಗಾಳಿ ಶೀರ್ಷಿಕೆ) ... ಅಥವಾ ಅಂತಿಮ ಉತ್ತರ

 1. ಲಗನ್‌ (1941) (ಹಿನ್ನೆಲೆ ಗಾಯಕಿ)
 2. ಪರಿಚಯ್‌ (1941) (ಹಿನ್ನೆಲೆ ಗಾಯಕಿ)

... ಪರಿಚಯ ಎಂದೂ ಹೇಳಲಾಗಿದೆ ... ಅಥವಾ ವಿವಾಹ

 1. ಅಭಿನೇತ್ರಿ (1940) (ಹಿನ್ನೆಲೆ ಗಾಯಕಿ)
 2. ಹಾರ್‌ ಜೀತ್‌ (1940) (ಹಿನ್ನೆಲೆ ಗಾಯಕಿ)
 1. ಜವಾನೀ ಕೀ ರೀತ್‌ (1939) (ಹಿನ್ನೆಲೆ ಗಾಯಕಿ)
 2. ಪರಾಜಯ (1939) (ಹಿನ್ನೆಲೆ ಗಾಯಕಿ)
 3. ಸಪೆರಾ (1939) (ಹಿನ್ನೆಲೆ ಗಾಯಕಿ)

... aka The Snake-Charmer (India: English title)

 1. ಸಪೂರೆ (1939) (ಹಿನ್ನೆಲೆ ಗಾಯಕಿ)

... aka The Snake-Charmer (India: English title)

 1. ಬಿದ್ಯಾಪತಿ (1937) (ಹಿನ್ನೆಲೆ ಗಾಯಕಿ)
 2. ಮುಕ್ತಿ (1937/I) (ಹಿನ್ನೆಲೆ ಗಾಯಕಿ)

... aka Freedom ... aka The Liberation of the Soul

 1. ಮುಕ್ತಿ (1937/II) (ಹಿನ್ನೆಲೆ ಗಾಯಕಿ)
 2. ವಿದ್ಯಾಪತಿ (1937) (ಹಿನ್ನೆಲೆ ಗಾಯಕಿ)
 3. ಬಿಷಬೃಕ್ಷ (1936) (ಹಿನ್ನೆಲೆ ಗಾಯಕಿ)

... aka The Poison Tree

 1. ಕೃಷ್ಣ ಸುದಾಮ (1936) (ಹಿನ್ನೆಲೆ ಗಾಯಕಿ)

... aka Krishna and Sudama

 1. ಮನ್ಮಯಿ ಗರ್ಲ್ಸ್‌ ಸ್ಕೂಲ್‌ (1935) (ಹಿನ್ನೆಲೆ ಗಾಯಕಿ)
 2. ಮಾಂ (1934) (ಹಿನ್ನೆಲೆ ಗಾಯಕಿ)
 3. ಚಾರ್‌ ದರ್ವೇಶ್‌ (1933) (ಹಿನ್ನೆಲೆ ಗಾಯಕಿ)

... aka Merchant of Arabia (India: English title)

 1. ವಿಷ್ಣುಮಾಯ (1932) (ಹಿನ್ನೆಲೆ ಗಾಯಕಿ)

... aka Doings of Lord Vishnu

 1. ಜೋರೆ ಬರಾತ್‌ (1931) (ಹಿನ್ನೆಲೆ ಗಾಯಕಿ)
 2. ಪ್ರಹ್ಲಾದ್‌ (1931/I) (ಹಿನ್ನೆಲೆ ಗಾಯಕಿ)

ನಿರ್ಮಾಪಕ[ಬದಲಾಯಿಸಿ]

 1. ಅಭಯ ಓ ಶ್ರೀಕಾಂತ (1965) (ನಿರ್ಮಾಪಕಿ)
 1. ಇಂದ್ರನಾಥ್‌ ಶ್ರೀಕಾ (1959) (ನಿರ್ಮಾಪಕಿ)
 2. ರಾಜಲಕ್ಷ್ಮಿ ಓ ಶ್ರೀಕಾಂತ (1958) (ನಿರ್ಮಾಪಕಿ)
 3. ಅಂಧರೆ ಆಲೊ (1957) (ನಿರ್ಮಾಪಕಿ)
 4. ಆಶಾ (1956) (ನಿರ್ಮಾಪಕಿ)
 5. ದೇಬತ್ರ (1955) (ನಿರ್ಮಾಪಕಿ)
 6. ನಬ ಬಿಧಾನ್‌ (1954) (ನಿರ್ಮಾಪಕಿ)
 7. ದರ್ಪಚೂರ್ಣ (1952) (ನಿರ್ಮಾಪಕಿ)
 8. ಮೇಜದೀದಿ (1950) (ನಿರ್ಮಾಪಕಿ)
 1. ಅನನ್ಯ (1949) (ನಿರ್ಮಾಪಕಿ)
 2. ಬಮುನರ್‌ ಮೆಯೆ (1949) (ನಿರ್ಮಾಪಕಿ)

ಉಲ್ಲೇಖಗಳು[ಬದಲಾಯಿಸಿ]

 1. "ಬಂಗಾಳ ಸಿನೆಮಾ, ಕೋಲ್ಕತ್ತಾ ವೆಬ್‌". Archived from the original on 20 ಏಪ್ರಿಲ್ 2013. Retrieved 14 ಜನವರಿ 2011.

ಬಾಹ್ಯ ಕೊಂಡಿಗಳು[ಬದಲಾಯಿಸಿ]