ಮೃಣಾಲ್‌ ಸೇನ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Mrinal Sen
মৃনাল সেন

Mrinal Sen
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1923-05-14) ೧೪ ಮೇ ೧೯೨೩ (ವಯಸ್ಸು ೧೦೧)
ಫರೀದ್ ಪುರ್, ಪೂರ್ವ ಬಂಗಾಳ, ಬ್ರಿಟಿಷ್ ಭಾರತ
ನಿಧನ December 30, 2018(2018-12-30) (aged 95) [೧]
ಕೊಲ್ಕತ್ತಾದ ತಮ್ಮ ಸ್ವಗೃಹದಲ್ಲಿ ನಿಧನರಾದರು.


ಮೃಣಾಲ್‌ ಸೇನ್‌‌‌ ರವರು (೧೯೨೩, ಮೇ, ೧೪-೨೦೧೮, ಡಿಸೆಂಬರ್, ೩೦) (ಬಂಗಾಳಿ:মৃনাল সেন, ಇವರ ಹೆಸರನ್ನು ಮೃಣಾಲ್‌ ಶೇನ್‌ ಎಂಬುದಾಗಿಯೂ ಬರೆಯಲಾಗುತ್ತದೆ) ಬಂಗಾಳದ ಓರ್ವ ಭಾರತೀಯ ಚಲನಚಿತ್ರ ನಿರ್ದೇಶಕರಾಗಿದ್ದಾರೆ.[೨] ಈಗ ಬಾಂಗ್ಲಾದೇಶದಲ್ಲಿರುವ ಫರೀದ್‌ಪುರ ಪಟ್ಟಣದಲ್ಲಿ 1923ರ ಮೇ ತಿಂಗಳ 14ರಂದು ಹಿಂದೂ ಕುಟುಂಬವೊಂದರಲ್ಲಿ ಅವರು ಜನಿಸಿದರು. ಅಲ್ಲಿ ತಮ್ಮ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸಂಪೂರ್ಣಗೊಳಿಸಿದ ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಕಲ್ಕತ್ತಾಗೆ ತೆರಳಿದ ಅವರು, ಹೆಸರಾಂತ ಸ್ಕಾಟಿಷ್‌ ಚರ್ಚ್‌ ಕಾಲೇಜಿನಲ್ಲಿ ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡಿದರು. ಓರ್ವ ವಿದ್ಯಾರ್ಥಿಯಾಗಿ ಅವರು ಕಮ್ಯುನಿಸ್ಟ್‌ ಪಕ್ಷದ ಸಾಂಸ್ಕೃತಿಕ ವಿಭಾಗದೊಂದಿಗೆ ತಮ್ಮನ್ನು ತೊಡಗಿಸಿಕೊಂಡರು. ಅವರು ಎಂದಿಗೂ ಪಕ್ಷದ ಓರ್ವ ಸದಸ್ಯರಾಗಲಿಲ್ಲವಾದರೂ, ಸಮಾಜವಾದಿ ಧೋರಣೆಯನ್ನು ಹೊಂದಿದ್ದ ಇಂಡಿಯನ್‌ ಪೀಪಲ್‌'ಸ್‌ ಥಿಯೇಟರ್‌ ಅಸೋಸಿಯೇಷನ್‌ (IPTA) ಜೊತೆಗಿನ ಅವರ ಸಹಯೋಗವು, ಸಾಂಸ್ಕೃತಿಕವಾಗಿ ಸಹಯೋಗವನ್ನು ಹೊಂದಿದ್ದ ಹಲವಾರು ಸಮಾನ-ಮನಸ್ಕ ಜನರ ನಿಕಟ ಸಂಪರ್ಕವನ್ನು ಅವರಿಗೆ ದೊರಕಿಸಿಕೊಟ್ಟಿತು.

ಆರಂಭಿಕ ಜೀವನ[ಬದಲಾಯಿಸಿ]

ಚಲನಚಿತ್ರ ಕಲಾಮೀಮಾಂಸೆಯ ಕುರಿತಾದ ಪುಸ್ತಕವೊಂದನ್ನು ಅವರು ಅಕಸ್ಮಾತ್ತಾಗಿ ಓದಿದ ನಂತರ ಅವರಿಗೆ ಚಲನಚಿತ್ರಗಳಲ್ಲಿ ಆಸಕ್ತಿಯು ಶುರುವಾಯಿತು. ಆದಾಗ್ಯೂ ಅವರ ಆಸಕ್ತಿಯು ಬಹುತೇಕವಾಗಿ ಬೌದ್ಧಿಕ ಮಟ್ಟದಲ್ಲಿಯೇ ಉಳಿದುಕೊಂಡಿತು, ಮತ್ತು ಅವರು ಔಷಧೀಯ ಉತ್ಪನ್ನಗಳ ಪ್ರತಿನಿಧಿಯ ಉದ್ಯೋಗಕ್ಕೆ ಬಲವಂತವಾಗಿ ಸೇರಬೇಕಾಗಿಬಂತು. ಇದರಿಂದಾಗಿ ಅವರು ಕಲ್ಕತ್ತಾದಿಂದ ಆಚೆಗೆ ತಮ್ಮ ಕಾರ್ಯಕ್ಷೇತ್ರವನ್ನು ಬದಲಿಸಿಕೊಳ್ಳಬೇಕಾಯಿತು. ಈ ಉದ್ಯೋಗದಲ್ಲಿ ಅವರು ಬಹಳ ಕಾಲ ಮುಂದುವರಿಯಲಿಲ್ಲ. ಹೀಗಾಗಿ ನಗರಕ್ಕೆ ಮರಳಿದ ಅವರು ಕೊನೆಗೆ ಕಲ್ಕತ್ತಾದ ಚಲನಚಿತ್ರ ಸ್ಟುಡಿಯೋ ಒಂದರಲ್ಲಿ ಶ್ರವ್ಯಮಾಧ್ಯಮ ತಂತ್ರಜ್ಞನ ಉದ್ಯೋಗವೊಂದಕ್ಕೆ ಸೇರಿಕೊಂಡರು. ಈ ಸ್ಟುಡಿಯೋ ಅಂತಿಮವಾಗಿ ಅವರ ಚಲನಚಿತ್ರ ವೃತ್ತಿಜೀವನಕ್ಕೆ ಓಂಕಾರವನ್ನು ಹಾಡಿತು.

ನಿರ್ದೇಶಕನಾಗಿ ಅವರ ಪ್ರಥಮ ಪ್ರವೇಶ[ಬದಲಾಯಿಸಿ]

1955ರಲ್ಲಿ, ರಾತ್‌‌ಭೋರ್‌‌ ಎಂಬ ತಮ್ಮ ಮೊದಲ ಸುದೀರ್ಘ ಚಿತ್ರವನ್ನು ಮೃಣಾಲ್‌ ಸೇನ್‌ ರೂಪಿಸಿದರು. ಜನರಿಂದ ಆರಾಧಿಸಲ್ಪಡುತ್ತಿದ್ದ ಉತ್ತಮ್‌ ಕುಮಾರ್‌ ಈ ಚಿತ್ರದಲ್ಲಿ ನಟಿಸಿದ್ದರಾದರೂ, ಆಗಿನ್ನೂ ಅವರೊಬ್ಬ ತಾರೆಯಾಗಿರಲಿಲ್ಲ.ಸದರಿ ಚಲನಚಿತ್ರದ ಫಲಿತಾಂಶವು ನಿರಾಶಾದಾಯಕವಾಗಿತ್ತು. ಅವರ ಮುಂದಿನ ಚಲನಚಿತ್ರವಾದ ನೀಲ್‌ ಆಕಾಶೆರ್‌ ನೀಚೆ (ಅಂಡರ್‌ ದಿ ಬ್ಲೂ ಸ್ಕೈ) ಅವರಿಗೆ ಸ್ಥಳೀಯ ಮಾನ್ಯತೆಯನ್ನು ಗಳಿಸಿಕೊಟ್ಟರೆ, ಅವರ ಮೂರನೇ ಚಲನಚಿತ್ರವಾದ ಬೈಶೇ ಶ್ರಾವಣ್‌ (ರವೀಂದ್ರನಾಥ ಟ್ಯಾಗೋರ್‌ ಮರಣಿಸಿದಾಗಿನ ದಿನ) ಅವರಿಗೆ ಅಂತರರಾಷ್ಟ್ರೀಯ ಪ್ರಸಿದ್ಧಿಯನ್ನು ತಂದುಕೊಟ್ಟ ಅವರ ಮೊದಲ ಚಲನಚಿತ್ರವಾಯಿತು.

ಸೇನ್‌ ಮತ್ತು ಭಾರತದಲ್ಲಿನ ಹೊಸ ಅಲೆಯ ಸಿನೆಮಾ[ಬದಲಾಯಿಸಿ]

ಮತ್ತೆ ಐದು ಚಲನಚಿತ್ರಗಳನ್ನು ನಿರ್ದೇಶಿಸಿದ ನಂತರ, ಭಾರತ ಸರ್ಕಾರದಿಂದ ಒದಗಿಸಲ್ಪಟ್ಟ ಒಂದು ಅತ್ಯಲ್ಪ-ಪ್ರಮಾಣದ ಬಂಡವಾಳದೊಂದಿಗೆ ಅವರು ಚಲನಚಿತ್ರವೊಂದನ್ನು ಮಾಡಿದರು. ಭುವನ್ ಶೋಮ್‌ (ಮಿ. ಶೋಮ್‌) ಎಂಬ ಈ ಚಲನಚಿತ್ರವು ಅವರನ್ನು ಅಂತಿಮವಾಗಿ ಓರ್ವ ಪ್ರಮುಖ ಚಲನಚಿತ್ರ ನಿರ್ದೇಶಕನನ್ನಾಗಿ ಪರಿಚಯಿಸಿತು. ಈ ಚಿತ್ರದಿಂದಾಗಿ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಗಳೆರಡರಲ್ಲೂ ಪ್ರಸಿದ್ಧಿ ಪಡೆದರು. ಭುವನ್ ಶೋಮ್‌ ಚಿತ್ರವು ಭಾರತದಲ್ಲಿ "ಹೊಸ ಅಲೆಯ ಸಿನೆಮಾ" ಎಂಬ ಚಲನಚಿತ್ರ ಆಂದೋಲನಕ್ಕೂ ಚಾಲನೆಯನ್ನು ನೀಡಿತು.[೩]

ಸಾಮಾಜಿಕ ಸಂದರ್ಭ ಮತ್ತು ಅದರ ರಾಜಕೀಯ ಪ್ರಭಾವ[ಬದಲಾಯಿಸಿ]

ಅವರು ಮುಂದೆ ನಿರ್ದೇಶಿಸಿದ ಚಲನಚಿತ್ರಗಳು ಕಣ್ಣಿಗೆ ಕಾಣುವ ರೀತಿಯಲ್ಲಿ ರಾಜಕೀಯ ಛಾಯೆಯನ್ನು ಹೊಂದಿದ್ದವು, ಮತ್ತು ಓರ್ವ ಮಾರ್ಕ್ಸ್‌‌ವಾದಿ ಕಲಾವಿದನಾಗಿ ಅವರಿಗೆ ಪ್ರಸಿದ್ಧಿಯನ್ನು ಗಳಿಸಿಕೊಟ್ಟವು.[೪] ಅದು ಭಾರತದ ಉದ್ದಗಲಕ್ಕೂ ರಾಜಕೀಯ ಅಶಾಂತಿಯು ದೊಡ್ಡ-ಪ್ರಮಾಣದಲ್ಲಿ ಹಬ್ಬಿದ್ದ ಕಾಲವಾಗಿತ್ತು. ನಿರ್ದಿಷ್ಟವಾಗಿ ಹೇಳುವುದಾದರೆ, ಕಲ್ಕತ್ತಾ ಮತ್ತು ಅದರ ಸುತ್ತಮುತ್ತಲಲ್ಲಿ, ಈಗ ನಕ್ಸಲರ ಆಂದೋಲನ ಎಂದು ಹೆಸರಾಗಿರುವ ಆಂದೋಲನಕ್ಕೆ ಈ ಅವಧಿಯು ಒಳಗಾಯಿತು. ಈ ಹಂತವನ್ನು ತತ್‌ಕ್ಷಣದಲ್ಲಿ ಅನುಸರಿಸಿಕೊಂಡು ಬಂದ ಚಲನಚಿತ್ರಗಳ ಒಂದು ಸರಣಿಯೆಡೆಗೆ ಅವರು ತಮ್ಮ ಗಮನವನ್ನು ವರ್ಗಾಯಿಸಿದರು; ಅಷ್ಟೇ ಅಲ್ಲ, ಹೊರಗಡೆಯ ಶತ್ರುಗಳಿಗಾಗಿ ನೋಡುವ ಬದಲಾಗಿ, ತಮ್ಮದೇ ಮಧ್ಯಮ ವರ್ಗ ಸಮಾಜದೊಳಗೆ ವ್ಯಾಪಿಸಿರುವ ಶತ್ರುಗಳ ಕಡೆಗೆ ಅವರು ಗಮನಹರಿಸಿದರು. ಇದು ಚರ್ಚಾಯೋಗ್ಯವಾದ ರೀತಿಯಲ್ಲಿ ಅವರ ಅತ್ಯಂತ ಸೃಜನಶೀಲ ಹಂತವಾಗಿತ್ತು.

ಕೋಲ್ಕತಾದ ಚಿತ್ರಣ[ಬದಲಾಯಿಸಿ]

ಪುನಸ್ಚದಿಂದ ಮೊದಲ್ಗೊಂಡು ಮಹಾಪೃಥಿಬಿಯವರೆಗಿನ ಮೃಣಾಲ್‌ ಸೇನ್‌ರವರ ಅನೇಕ ಚಲನಚಿತ್ರಗಳಲ್ಲಿ ಕೋಲ್ಕತಾ ನಗರವು ಎದ್ದುಕಾಣುವಂತೆ ಕಾಣಿಸಿಕೊಂಡಿದೆ. ಕೋಲ್ಕತಾ ನಗರವನ್ನು ಅವರು ಒಂದು ಪಾತ್ರವಾಗಿ, ಮತ್ತು ಒಂದು ಪ್ರೇರಣೆಯಾಗಿ ತೋರಿಸಿದ್ದಾರೆ. ಈ ನಗರದ ಜನರು, ಮೌಲ್ಯ ಪದ್ಧತಿ, ವರ್ಗ ಭಿನ್ನತೆ ಮತ್ತು ರಸ್ತೆಗಳನ್ನು ತಮ್ಮ ಚಲನಚಿತ್ರಗಳೊಳಗೆ ಅವರು ಸುಂದರವಾಗಿ ಹೆಣೆದಿದ್ದಾರೆ ಮತ್ತು ಅವರ ಎಲ್‌-ಡೊರಾಡೊ ಆಗಿರುವ ಕೋಲ್ಕತಾಗೆ ಸಂಬಂಧಿಸಿದಂತೆ ಪ್ರಬುದ್ಧತೆಯ ಕನಸು ಕಂಡಿದ್ದಾರೆ.[೫]

ಪ್ರಯೋಗಶೀಲತೆ, ಮಾನ್ಯತೆ ಮತ್ತು ಮೆಚ್ಚುಗೆ[ಬದಲಾಯಿಸಿ]

ಈ ಅವಧಿಯ ಸಂದರ್ಭದಲ್ಲಿ, ಅವರು ದೊಡ್ಡ ಸಂಖ್ಯೆಯಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡರು. ಅಸ್ತಿತ್ವ ಸಿದ್ಧಾಂತ, ಅತಿ ವಾಸ್ತವಿಕತಾ ವಾದ, ಮಾರ್ಕ್ಸ್‌ವಾದ, ಜರ್ಮನ್‌ ಅಭಿವ್ಯಕ್ತಿವಾದ , ಫ್ರೆಂಚ್‌ ಹೊಸ ಅಲೆ ಮತ್ತು ಇಟಲಿಯ ನವ-ವಾಸ್ತವತಾವಾದ ಇವುಗಳಿಂದ ಪಡೆದ ಪರಿಕಲ್ಪನೆಗಳ ಬೆಳವಣಿಗೆಯನ್ನು ಅವರ ಚಲನಚಿತ್ರಗಳು ಶೈಲಿಗೆ ಸಂಬಂಧಿಸಿದ ಅವುಗಳ ಸೂಕ್ಷ್ಮ ವ್ಯತ್ಯಾಸಗಳಲ್ಲಿ ತೋರಿಸುತ್ತವೆ ಎಂಬುದಾಗಿ ವಾದಿಸಬಹುದಾದರೂ, ಈ ಚಲನಚಿತ್ರಗಳು ಅನೇಕವೇಳೆ ವುಡಿ ಅಲೆನ್‌ ಸೃಷ್ಟಿಸಿದ ಚಲನಚಿತ್ರಕ್ಕೆ ಸಮಾನಾಂತರವಾಗಿವೆ ಎನ್ನಬಹುದು.[ಸೂಕ್ತ ಉಲ್ಲೇಖನ ಬೇಕು] ಅಲೆನ್‌ನ ಚಲನಚಿತ್ರಗಳ ರೀತಿಯಲ್ಲಿಯೇ, ಸೇನ್‌ರ ಚಲನಚಿತ್ರಗಳು ಬಹುಮಟ್ಟಿಗೆ ಒಂದು ಸುಖಾಂತ್ಯ ಅಥವಾ ಒಂದು ನಿರ್ಣಾಯಕ ತೀರ್ಮಾನವನ್ನು ಒದಗಿಸುವುದಿಲ್ಲ (ಸೇನ್‌ರ ಸಮಕಾಲೀನ ಎಂದು ಪ್ರಸಿದ್ಧರಾಗಿರುವ ಸತ್ಯಜಿತ್‌‌ ರೇಯವರ ಬಹುತೇಕ ಚಲನಚಿತ್ರಗಳಿಗಿಂತ ಅವು ಭಿನ್ನವಾಗಿವೆ). ನಂತರದಲ್ಲಿ ಬಂದ ಸೇನ್‌ರವರ ಅನೇಕ ಚಲನಚಿತ್ರಗಳಲ್ಲಿ, ಕಥಾವಸ್ತುವಿನ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಪ್ರೇಕ್ಷಕನು ಓರ್ವ ಸಹಭಾಗಿಯಾಗುತ್ತಾನೆ. ಅದೇ ಸಮಯಕ್ಕೆ, ಅನನ್ಯ ಮತ್ತು ವಿಭಿನ್ನವಾಗಿರುವ ಅನೇಕ ತೀರ್ಮಾನಗಳನ್ನು ರೂಪಿಸುವುದರ ಒಂದು ಹಂಚಿಕೊಂಡ ಪ್ರಕ್ರಿಯೆಯೊಳಗೆ ಪ್ರೇಕ್ಷಕರನ್ನು ನಿರ್ದೇಶಕನು ಆಹ್ವಾನಿಸುತ್ತಾನೆ ಮತ್ತು ಪ್ರಚೋದಿಸುತ್ತಾನೆ. ನಿರ್ದೇಶಕನು ಇಲ್ಲಿ ದೇವರ ಪಾತ್ರವನ್ನು ನಿರ್ವಹಿಸುವುದಿಲ್ಲ, ಅವನ ಪ್ರೇಕ್ಷಕ ನಿರ್ವಹಿಸುತ್ತಾನೆ. ಪಾಶ್ಚಾತ್ಯ ವಿದ್ವಜ್ಜನರು ಮತ್ತು ಅಭಿಮಾನಿಗಳಲ್ಲಿ ಒಂದು ಏಕಪ್ರಕಾರವಾಗಿರುವ ಅಥವಾ ವಿಶ್ವಾಸಾರ್ಹ ನೆಲೆಯ ಪ್ರೇಕ್ಷಕರನ್ನು ಹೊಂದಿರುವ ಅಲೆನ್‌ಗಿಂತ ಭಿನ್ನವಾಗಿರುವ, ಸಮಾನಾಂತರ ಚಲನಚಿತ್ರದೊಂದಿಗಿನ ಸೇನ್‌ರವರ ಪ್ರಯೋಗಶೀಲತೆಯು, ಕಲ್ಕತ್ತಾ ಮೂಲದ ಪಾಶ್ಚಾತ್ಯೀಕರಿಸಲ್ಪಟ್ಟ ಬುದ್ಧಿಜೀವಿಗಳ ವರ್ಗದ ಬಹುಪಾಲನ್ನು ಒಳಗೊಂಡಿರುವ ಒಂದು ಸಮರ್ಪಿಸಿಕೊಂಡ ಪ್ರೇಕ್ಷಕವರ್ಗದ ಬಹುಭಾಗಕ್ಕೆ ಗಮನಾರ್ಹವಾಗಿ ಮೀಸಲಾಗಿರಿಸಿಕೊಂಡಿದ್ದು ವಾಸ್ತವವಾಗಿ ಆಶ್ಚರ್ಯಕರವಾಗಿ ಕಾಣುವುದಿಲ್ಲ.

1982ರಲ್ಲಿ ನಡೆದ 32ನೇ ಬರ್ಲಿನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರು ಜ್ಯೂರಿಯ ಓರ್ವ ಸದಸ್ಯರಾಗಿದ್ದರು.[೬]

ತಮ್ಮ ಮಾಧ್ಯಮದೊಂದಿಗೆ ಪ್ರಯೋಗ ನಡೆಸುವುದನ್ನು ಮೃಣಾಲ್‌ ಸೇನ್‌ ಎಂದಿಗೂ ನಿಲ್ಲಿಸಲಿಲ್ಲ. ತಮ್ಮ ನಂತರದ ಚಲನಚಿತ್ರಗಳಲ್ಲಿ ನಿರೂಪಣಾತ್ಮಕ ಸ್ವರೂಪದಿಂದ ಆಚೆಗೆ ಸರಿಯಲು ಅವರು ಪ್ರಯತ್ನಿಸಿದರು ಮತ್ತು ಅತ್ಯಂತ ತೆಳುವಾದ ಕಥೆಯ ಎಳೆಗಳೊಂದಿಗೆ ಕೆಲಸ ಮಾಡಿದರು. ಎಂಟು ವರ್ಷಗಳ ಒಂದು ಸುದೀರ್ಘ ಅಂತರದ ನಂತರ, ತಮ್ಮ ಎಂಬತ್ತನೇ ವಯಸ್ಸಿನಲ್ಲಿ ಅವರು ಆಮಾರ್‌ ಭುವನ್‌ ಎಂಬ ತಮ್ಮ ಹೊಚ್ಚ ಹೊಸ ಚಲನಚಿತ್ರವನ್ನು 2002ರಲ್ಲಿ ಬೆಳ್ಳಿತೆರೆಗೆ ಅರ್ಪಿಸಿದರು.

ಅವರ ವೃತ್ತಿಜೀವನದ ಅವಧಿಯಲ್ಲಿ ಮೃಣಾಲ್‌ ಸೇನ್‌ರವರ ಚಲನಚಿತ್ರಗಳು ಹೆಚ್ಚೂಕಮ್ಮಿ ಎಲ್ಲಾ ಪ್ರಮುಖ ಚಲನಚಿತ್ರೋತ್ಸವಗಳಿಂದಲೂ ಪ್ರಶಸ್ತಿಗಳನ್ನು ಸ್ವೀಕರಿಸಿವೆ. ಅಂಥ ಚಿತ್ರೋತ್ಸವಗಳೆಂದರೆ: ಕ್ಯಾನೆಸ್‌, ಬರ್ಲಿನ್‌, ವೆನಿಸ್‌, ಮಾಸ್ಕೋ, ಕಾರ್ಲೋವಿ ವಾರಿ, ಮಾಂಟ್ರಿಯಲ್‌, ಚಿಕಾಗೊ, ಮತ್ತು ಕೈರೋ. ಅವರ ಚಲನಚಿತ್ರಗಳ ಸಿಂಹಾವಲೋಕನದ ಪ್ರದರ್ಶನಗಳು, ಪ್ರಪಂಚದ ಎಲ್ಲಾ ಪ್ರಮುಖ ನಗರಗಳಲ್ಲಿ ತೋರಿಸಲ್ಪಟ್ಟಿವೆ. ಹಲವಾರು ವಿಶ್ವವಿದ್ಯಾಲಯಗಳಿಂದ ಅವರು ಅನೇಕ ಗೌರವಾರ್ಥ ಡಾಕ್ಟರೇಟ್‌ ಪದವಿಗಳನ್ನೂ (ಡಿ.ಲಿಟ್‌ ಆನರಿಸ್‌ ಕೌಸಾ) ಸಹ ಸ್ವೀಕರಿಸಿದ್ದಾರೆ. ಇಂಟರ್‌‌ನ್ಯಾಷನಲ್‌ ಫೆಡರೇಷನ್‌ ಆಫ್‌ ದಿ ಫಿಲ್ಮ್‌ ಸೊಸೈಟೀಸ್‌ನ ಅಧ್ಯಕ್ಷರಾಗಿಯೂ ಮೃಣಾಲ್‌ ಸೇನ್‌ ಚುನಾಯಿಸಲ್ಪಟ್ಟಿದ್ದರು. ಚಲನಚಿತ್ರ ಪ್ರಪಂಚಕ್ಕೆ ಅವರು ನೀಡಿದ ಒಂದು ಜೀವಿತಾವಧಿ ಕೊಡುಗೆಯನ್ನು ಪರಿಗಣಿಸಿ ನೀಡಲ್ಪಟ್ಟ ತಾಜ್‌ ಎನ್‌ಲೈಟನ್‌ ತಾರೀಫ್‌ ಪ್ರಶಸ್ತಿಯನ್ನು ಅವರು 2008ರಲ್ಲಿ ಸ್ವೀಕರಿಸಿದರು. 2008ರಲ್ಲಿ ನಡೆದ ಓಷಿಯನ್‌‌ನ ಸಿನಿಫೆಸ್ಟ್‌ ಚಲನಚಿತ್ರೋತ್ಸವದ 10ನೇ ಆವೃತ್ತಿಯಲ್ಲಿ ಅವರು ಜೀವಿತಾವಧಿ ಸಾಧನೆಗಾಗಿ ನೀಡಿದ ಪ್ರಶಸ್ತಿಯನ್ನೂ ಸ್ವೀಕರಿಸಿದರು.

ನಿಧನ[ಬದಲಾಯಿಸಿ]

೯೫ ವರ್ಷ ವಯಸ್ಸಿನ ಮೃಣಾಲ್ ಸೇನ್ ಕೊಲ್ಕತ್ತಾದ ಭೌನಿಫೋರ್‌ನಲ್ಲಿರುವ ತಮ್ಮ ನಿವಾಸದಲ್ಲಿ ೩೦, ಡಿಸೆಂಬರ್, ೨೦೧೮ ರಂದು, ನಿಧನರಾದರು.[೭] ಅವರ ಮಗ ಕುನಾಲ್ ಸೇನ್ ಅಮೆರಿಕದಲ್ಲಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

ರಾಷ್ಟ್ರೀಯ ಪ್ರಶಸ್ತಿಗಳು[ಬದಲಾಯಿಸಿ]

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

Best Director
1969 Bhuvan Shome
1979 Ek Din Pratidin
1980 Akaler Sandhane
1984 Khandhar
Best Screenplay
1974 Padatik
1983 Akaler Sandhane
1984 Kharij

ಫಿಲ್ಮ್‌ಫೇರ್ ಪ್ರಶಸ್ತಿಗಳು

Critics Award for Best Film
1976 Mrigayaa
Best Screenplay
1984 Khandhar

ಅಂತರರಾಷ್ಟ್ರೀಯ ಪ್ರಶಸ್ತಿಗಳು[ಬದಲಾಯಿಸಿ]

Moscow International Film Festival - Silver Prize
1975 Chorus
1979 Parashuram

Karlovy Vary International Film Festival - Special Jury Prize
1977 Oka Oori Katha

ಬರ್ಲಿನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
Interfilm Award
1979 Parashuram
1981 Akaler Sandhane
Grand Jury Prize[೮]
1981 Akaler Sandhane

Cannes Film Festival - Jury Prize
1983 Kharij

Valladolid International Film Festival - Golden Spike
1983 Kharij

Chicago International Film Festival - Gold Hugo
1984 Khandhar

Montreal World Film Festival - Special Prize of the Jury
1984 Khandhar

Venice Film Festival - Honorable Mention
1989 Ek Din Achanak

Cairo International Film Festival - Silver Pyramid for Best Director
2002 Aamaar Bhuvan

ಸರ್ಕಾರದ ಗೌರವಗಳು[ಬದಲಾಯಿಸಿ]

ಸರ್ಕಾರದಿಂದ-ನೀಡಲ್ಪಟ್ಟ ಅನೇಕ ಗೌರವಗಳಿಂದಲೂ ಅವರು ಪುರಸ್ಕೃತರಾಗಿದ್ದಾರೆ.

 • 1981ರಲ್ಲಿ, ಭಾರತ ಸರ್ಕಾರವು ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
 • ಫ್ರಾನ್ಸ್‌‌ನ ಅಧ್ಯಕ್ಷ‌‌ರಾದ ಫ್ರಾಂಕೋಯಿಸ್‌ ಮಿತ್ತೆರಾಂಡ್‌ 1985ರಲ್ಲಿ ಅವರಿಗೆ ಕಮಾಂಡೆಯುರ್‌ ಡಿ ಆರ್ಡ್ರೆ ಡೆಸ್‌ ಆರ್ಟ್ಸ್‌ ಎಟ್‌ ಡೆಸ್‌ ಲೆಟ್ರೆಸ್‌ (ಕಲೆ ಮತ್ತು ಸಾಹಿತ್ಯದ ದರ್ಜೆಯ ಅಧಿಪತಿ ಅಥವಾ ಕಮಾಂಡರು) ಎಂಬ ಗೌರವವನ್ನು ಅರ್ಪಿಸಿದರು. ಇದು ಆ ದೇಶದಿಂದ ಪ್ರದಾನ ಮಾಡಲ್ಪಡುವ ಅತ್ಯುನ್ನತ ನಾಗರಿಕ ಗೌರವವಾಗಿದ್ದು, ಕಲೆ, ಸಾಹಿತ್ಯ ಕ್ಷೇತ್ರಗಳಿಗೆ ನೀಡಿದ ಗಮನಾರ್ಹ ಕೊಡುಗೆಗಳು ಅಥವಾ ಈ ಕ್ಷೇತ್ರಗಳ[೯] ಪ್ರಸರಣಕ್ಕೆ ನೀಡಿದ ಕೊಡುಗೆಗಳನ್ನು ಮಾನ್ಯಮಾಡಿ ಈ ಗೌರವವನ್ನು ಸಲ್ಲಿಸಲಾಗುತ್ತದೆ.
 • ಓರ್ವ ಭಾರತೀಯ ಚಲನಚಿತ್ರೋದ್ಯಮಿಗೆ ನೀಡಲಾಗುವ ಅತ್ಯುನ್ನತ ಗೌರವವಾದ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಭಾರತ ಸರ್ಕಾರವು ಅವರಿಗೆ 2005ರಲ್ಲಿ ನೀಡಿತು.
 • 1998ರಿಂದ 2003ರವರೆಗೆ ಅವರಿಗೆ ಭಾರತದ ಸಂಸತ್ತಿನ ಓರ್ವ ಗೌರವ ಸದಸ್ಯನ ಸ್ಥಾನವನ್ನು ನೀಡಿ ಗೌರವಿಸಲಾಗಿತ್ತು.
 • ರಷ್ಯಾದ ಒಕ್ಕೂಟದ ಅಧ್ಯಕ್ಷರಾದ ವ್ಲಾದಿಮಿರ್‌‌ ಪುಟಿನ್‌ 2000ರಲ್ಲಿ ಅವರಿಗೆ ಆರ್ಡರ್‌ ಆಫ್‌ ಫ್ರೆಂಡ್‌ಷಿಪ್‌ ಎಂಬ ಮಾನ್ಯತೆಯನ್ನು ನೀಡಿ ಗೌರವಿಸಿದರು.

ಚಿಕ್ಕ-ಚೊಕ್ಕ ವಿಷಯಗಳು[ಬದಲಾಯಿಸಿ]

 • ಅವರು ಗೇಬ್ರಿಯಲ್‌ ಗಾರ್ಸಿಯಾ ಮಾರ್ಕ್ವೆಜ್‌‌‌ರವರ ಓರ್ವ ಸ್ನೇಹಿತರಾಗಿದ್ದಾರೆ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿನ ಓರ್ವ ತೀರ್ಪುಗಾರರಾಗಿ ಅನೇಕವೇಳೆ ಆಹ್ವಾನಿತರಾಗಿದ್ದಾರೆ.
 • ಆಲ್ವೇಸ್‌ ಬೀಯಿಂಗ್‌ ಬಾರ್ನ್‌ ಎಂಬ ಶೀರ್ಷಿಕೆಯ ತಮ್ಮ ಆತ್ಮಕಥೆಯ ಪುಸ್ತಕವನ್ನು 2004ರಲ್ಲಿ ಮೃಣಾಲ್‌ ಸೇನ್‌ ಪೂರ್ಣಗೊಳಿಸಿದರು.

ಉದ್ಧರಣಗಳು[ಬದಲಾಯಿಸಿ]

 • ಚಲನಚಿತ್ರ ತರಬೇತಿ ಸಂಸ್ಥೆಯೊಂದರಿಂದ ತಯಾರು ಮಾಡಲ್ಪಟ್ಟ ನಂತರ ನೀವು ಈ ಪ್ರಪಂಚದೊಳಗೆ ಕಾಲಿಡುತ್ತಿದ್ದಂತೆ, ಒಂದು ಕಷ್ಟಕರ ಸಮಯವು ನಿಮ್ಮದಾಗಲಿ ಎಂದು ನಾನು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.
 • ಎಲ್ಲಾ ಚಲನಚಿತ್ರ ತಯಾರಕರೂ ಸಾಮಾಜಿಕ ವಿಜ್ಞಾನಿಗಳಾಗಿರಬೇಕಾದ ಅಗತ್ಯವಿದೆ.
 • ನೀವು ಬಹಳಷ್ಟು ಸಂಗತಿಗಳನ್ನು ನೋಡಬೇಕಾಗುತ್ತದೆ...ನೀವು ಆಶುಕಾರ್ಯವನ್ನಷ್ಟೇ ನಡೆಸುತ್ತಾ ಹೋಗಬೇಕಾಗುತ್ತದೆ...ಅಕಾಲೆರ್‌ ಸಂಧಾನೆ ಚಿತ್ರದ ಅಂತಿಮ ಚಿತ್ರಕಥೆಯ ಸರಿಸುಮಾರು 60%ನಷ್ಟು ಭಾಗವು ಪೂರ್ವಸಿದ್ಧತೆಯಿಲ್ಲದೆ ಆಶುಸ್ವರೂಪದಲ್ಲಿ ಅನುಗೊಳಿಸಲ್ಪಟ್ಟಿತು.
 • ನೀವು ಪ್ರತಿಯೊಂದಕ್ಕೂ ಹೋರಾಡಬೇಕಾಗುತ್ತದೆ...ಸಾಮಾನ್ಯವಾಗಿ ಎಲ್ಲಾ ಚಲನಚಿತ್ರ ತಯಾರಕರೂ ತಾವು ವಾಸ್ತವಿಕತಾವಾದಿಗಳು ಎಂದೇ ಹೇಳಿಕೊಳ್ಳುತ್ತಾರೆ; ಆದರೆ ಅವರು ವಾಸ್ತವವಾಗಿ ಎಲ್ಲ ಸಮಯಗಳಲ್ಲಿಯೂ ಕಾಲ್ಪನಿಕವಾಗಿ ಚಿತ್ರಿಸುತ್ತಿರುತ್ತಾರೆ.
 • ನನ್ನ ಚಲನಚಿತ್ರವು ಮೆಚ್ಚಲ್ಪಟ್ಟಾಗ ನನಗದು ಇಷ್ಟವಾಗುತ್ತದೆ. ಒಂದು ವೇಳೆ ಅದನ್ನು ಜನಸಮೂಹವು ಇಷ್ಟಪಟ್ಟಲ್ಲಿ, ಅದು ವಾಣಿಜ್ಯ ಸ್ವರೂಪದಲ್ಲಿ ಕಾರ್ಯಸಾಧ್ಯವಾಗುತ್ತದೆ.ಒಂದು ವೇಳೆ ಹಾಗಾಗದಿದ್ದಲ್ಲಿ, ಒಂದೋ ನೀವು ನನ್ನಂತೆ ಕುಸಿದು ಹೋಗುತ್ತೀರಿ ಅಥವಾ "ನಾನು ಇದಕ್ಕೆಲ್ಲಾ ಹೆದರುವುದಿಲ್ಲ" ಎಂದು ಹೇಳುತ್ತೀರಿ. ಅದೊಂದು ರಕ್ಷಣಾ ತಂತ್ರವಾಗಿದೆ.
 • ಒಂದು ಚಲನಚಿತ್ರವು ಅನುಭವಕ್ಕೆ ತಂದುಕೊಳ್ಳಬೇಕಾಗಿರುವ ಒಂದು ಅನುಭೂತಿಯಾಗಿರಬೇಕು, ಅದರ ಕುರಿತು ಕೇವಲ ಚರ್ಚೆಮಾಡುವುದರಿಂದ ಪ್ರಯೋಜನವಿಲ್ಲ.

ಚಲನಚಿತ್ರಗಳ ಪಟ್ಟಿ[೧೦][ಬದಲಾಯಿಸಿ]

ಸುದೀರ್ಘ ಚಿತ್ರಗಳು[ಬದಲಾಯಿಸಿ]

 • ರಾತ್‌‌ಭೋರ್‌‌ (ದಿ ಡಾನ್‌) (1955)
 • ನೀಲ್‌ ಆಕಾಶೆರ್‌ ನೀಚೆ (ಅಂಡರ್‌ ದಿ ಬ್ಲೂ ಸ್ಕೈ) (1958)
 • ಬೈಶೇ ಶ್ರಾವಣ್ (ವೆಡ್ಡಿಂಗ್‌ ಡೇ) (1960)
 • ಪುನಸ್ಚ (ಓವರ್‌ ಎಗೇನ್‌) (1961)
 • ಅಬಾಶೆಶೆ (ಅಂಡ್‌ ಅಟ್‌ ಲಾಸ್ಟ್‌) (1963)
 • ಪ್ರತಿನಿಧಿ (ದಿ ರೆಪ್ರೆಸೆಂಟೆಟಿವ್‌) (1964)
 • ಆಕಾಶ್‌ ಕುಸುಮ್ (ಅಪ್‌ ಇನ್‌ ದಿ ಕ್ಲೌಡ್ಸ್‌) (1965)
 • ಮಾಟಿರಾ ಮನಿಷಾ (ಮ್ಯಾನ್‌ ಆಫ್‌ ದಿ ಸಾಯಿಲ್‌) (1966)
 • ಭುವನ್ ಶೋಮ್‌ (ಮಿ. ಭುವನ್ ಶೋಮ್‌) (1969)
 • ಇಂಟರ್‌‌ವ್ಯೂ (1971 ಫಿಲ್ಮ್‌) (1971)
 • ಏಕ್‌ ಅಧೂರಿ ಕಹಾನಿ (ಆನ್‌ ಅನ್‌ಫಿನಿಶ್ಡ್‌ ಸ್ಟೋರಿ) (1971)
 • ಕಲ್ಕತ್ತಾ 71 (1972)
 • ಪದಾತಿಕ್ (ದಿ ಗೆರಿಲ್ಲಾ ಫೈಟರ್‌) (1973)
 • ಕೋರಸ್ (1974 ಫಿಲ್ಮ್‌) (1974)
 • ಮೃಗಯಾ (ದಿ ರಾಯಲ್‌ ಹಂಟ್‌) (1976)
 • ಒಕ ಊರಿ ಕಥಾ (ದಿ ಔಟ್‌ಸೈಡರ್ಸ್‌) (1977)
 • ಪರಶುರಾಮ್ (ದಿ ಮ್ಯಾನ್‌ ವಿತ್‌ ದಿ ಆಕ್ಸ್‌) (1978)
 • ಏಕ್‌ ದಿನ್‌ ಪ್ರತಿದಿನ್ (ಅಂಡ್‌ ಕ್ವಯೆಟ್‌ ರೋಲ್ಸ್‌ ದಿ ಡಾನ್‌) (1979)
 • ಅಕಾಲೆರ್‌ ಸಂಧಾನೆ (ಇನ್‌ ಸರ್ಚ್‌ ಆಫ್‌ ಫೆಮೈನ್‌) (1980)
 • ಚಲಚಿತ್ರ (ದಿ ಕೆಲಿಡೋಸ್ಕೋಪ್‌) (1981)
 • ಖಾರಿಜ್ (ದಿ ಕೇಸ್‌ ಈಸ್‌ ಕ್ಲೋಸ್ಡ್‌) (1982)
 • ಕಂದಹಾರ್ (ದಿ ರೂಯಿನ್ಸ್‌) (1983)
 • ಜೆನೆಸಿಸ್ (1986)
 • ಏಕ್‌ ದಿನ್‌ ಅಚಾನಕ್‌ (ಸಡನ್ಲಿ, ಒನ್‌ ಡೇ) (1989)
 • ಮಹಾಪೃಥಿವಿ (ವರ್ಲ್ಡ್‌ ವಿತಿನ್‌, ವರ್ಲ್ಡ್‌ ವಿತೌಟ್‌)(1991)
 • ಅಂತರೀನ್ (ದಿ ಕನ್‌ಫೈನ್ಡ್‌)(1993)
 • ಆಮಾರ್‌ ಭುವನ್‌ (ದಿಸ್‌, ಮೈ ಲ್ಯಾಂಡ್‌)(2002)

ಕಿರುಚಿತ್ರಗಳು[ಬದಲಾಯಿಸಿ]

 • ಇಚ್ಛಾಪೂರಣ್ (ದಿ ವಿಶ್‌ ಫುಲ್‌ಫಿಲ್‌ಮೆಂಟ್‌) (1970)
 • ತಸ್ವೀರ್‌ ಅಪ್ನಿ ಅಪ್ನಿ (ಪೋರ್ಟ್ರೇಟ್‌ ಆಫ್‌ ಆನ್‌ ಆವರೇಜ್‌ ಮ್ಯಾನ್‌) (1984)
 • ಅಪರಾಜಿತ್ (ಅನ್‌ಕ್ಯಾವೆಂಡಿಷ್ಡ್‌) (1986-87)
 • ಕಭಿ ದೂರ್‌ ಕಭಿ ಪಾಸ್ (ಸಮ್‌ಟೈಮ್ಸ್‌ ಫಾರ್‌, ಸಮ್‌ಟೈಮ್ಸ್‌ ನಿಯರ್‌) (1986-87)
 • ‌‌ಸ್ವಯಂವರ್ (ದಿ ಕೋರ್ಟ್‌ಷಿಪ್‌) (1986-87)
 • ಆಯಿನಾ (ದಿ ಮಿರರ್‌) (1986-87)
 • ರವಿವಾರ್ (ಸಂಡೆ) (1986-87)
 • ಆಜ್‌ಕಾಲ್ (ದೀಸ್‌ ಡೇಸ್‌) (1986-87)
 • ದೋ ಬಹೆನೆ (ಟೂ ಸಿಸ್ಟರ್ಸ್‌) (1986-87)
 • ಜೀತ್ (ವಿನ್‌) (1986-87)
 • ಸಾಲ್‌ಗಿರಾ (ಆನಿವರ್ಸರಿ) (1986-87)
 • ಶಾಲ್ (1986-87)
 • ಅಜ್‌ನಬಿ (ದಿ ಸ್ಟ್ರೇಂಜರ್‌) (1986-87)
 • ದಸ್‌ ಸಾಲ್‌ ಬಾದ್‌ (ಟೆನ್‌ ಇಯರ್ಸ್‌ ಲೇಟರ್‌) (1986-87)

ಸಾಕ್ಷ್ಯಚಿತ್ರಗಳು[ಬದಲಾಯಿಸಿ]

 • ಮೂವಿಂಗ್‌ ಪರ್‌ಸ್ಪೆಕ್ಟಿವ್ಸ್ (1967)
 • ತ್ರಿಪುರ ಪ್ರಸಂಗ (1982)
 • ಸಿಟಿ ಲೈಫ್‌ - ಕಲ್ಕತ್ತಾ ಮೈ ಎಲ್‌ ಡೊರೆಡೊ (1989)
 • ಅಂಡ್‌ ದಿ ಷೋ ಗೋಸ್‌ ಆನ್‌ - ಇಂಡಿಯನ್‌ ಚಾಪ್ಟರ್‌ (1999)

ಮೃಣಾಲ್‌ ಸೇನ್‌ ಕುರಿತಾದ ಚಲನಚಿತ್ರಗಳು[ಬದಲಾಯಿಸಿ]

 • ಟೆನ್‌ ಡೇಸ್‌ ಇನ್‌ ಕಲ್ಕತ್ತಾ - ಎ ಪೋರ್ಟ್ರೇಟ್‌ ಆಫ್ ಮೃಣಾಲ್‌ ಸೇನ್‌ (ರೀನ್‌ಹಾರ್ಡ್‌ ಹೌಫ್‌ನಿಂದ ನಿರ್ದೇಶಿಸಲ್ಪಟ್ಟಿತು) (1984)
 • ವಿತ್‌ ಮೃಣಾಲ್‌ ಸೇನ್‌ (ಸಂಜಯ್‌ ಭಟ್ಟಾಚಾರ್ಯ ಮತ್ತು ರಾಹುಲ್‌ ಬೋಸ್‌ರಿಂದ ನಿರ್ದೇಶಿಸಲ್ಪಟ್ಟಿತು‌) (1989)
 • ಪೋರ್ಟ್ರೇಟ್‌ ಆಫ್‌ ಎ ಫಿಲ್ಮ್‌ಮೇಕರ್‌ (ರೊಮೇಶ್‌ ಶರ್ಮಾರಿಂದ ನಿರ್ದೇಶಿಸಲ್ಪಟ್ಟಿತು) (1999)

ಉಲ್ಲೇಖಗಳು[ಬದಲಾಯಿಸಿ]

 1. Rakesh Sharma (December 30, 2018). "The Dadasaheb Phalke award-winning film director Mrinal Sen Passed away on Sunday at the age of 95". Bollywood Galiyara. BollywoodGaliyara.com. Archived from the original on ಜನವರಿ 1, 2019. Retrieved December 30, 2018.
 2. "Memories from Mrinalda". Rediff. Rediff.com. February 1, 2005. Retrieved January 27, 2010.
 3. Vasudev, Aruna (1986). The New Indian Cinema. Macmillan India. ISBN 0333909283. {{cite book}}: Cite has empty unknown parameter: |coauthors= (help)
 4. Thorval, Yves (2000). Cinemas of India. Macmillan India. ISBN 0333934105. {{cite book}}: |access-date= requires |url= (help); Cite has empty unknown parameter: |coauthors= (help)
 5. "Mrinal Sen movies and Kolkata". Archived from the original on 2010-01-16. Retrieved 2011-01-07.
 6. "Berlinale 1982: Juries". berlinale.de. Archived from the original on 2013-10-23. Retrieved 2010-09-02.
 7. Mrinal Sen, legendary filmmaker and Phalke awardee, passes away at 95, The Indian express, 31st, Dec, 2018
 8. "Berlinale 1981: Prize Winners". berlinale.de. Archived from the original on 2013-10-12. Retrieved 2010-08-22.
 9. ದಿ ಇಂಟರ್‌‌ನ್ಯಾಷನಲ್‌ ಹೂ ಈಸ್‌ ಹೂ 2004
 10. "Mrinal Sen". IMDb. Retrieved January 27, 2010.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:NationalFilmAwardBestDirection