ವಿಷಯಕ್ಕೆ ಹೋಗು

ಶಮ್ಮಿ ಕಪೂರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Shammi Kapoor
ಜನನ
Shamsher Raj Kapoor

(೧೯೩೧-೧೦-೨೧)೨೧ ಅಕ್ಟೋಬರ್ ೧೯೩೧
ಸಕ್ರಿಯ ವರ್ಷಗಳು೧೯೫೨- present
ಎತ್ತರ೬ ಅಡಿ [] 14 August 2011(2011-08-14) (aged 79)
ಸಂಗಾತಿ(s)Geeta Bali (೧೯೫೫-೧೯೬೫) (due to her death)
Neela (೧೯೬೯ - Present)
ಜಾಲತಾಣjunglee.org.in

ಶಮ್ಮಿ ಕಪೂರ್ ಹಿಂದಿ: शम्मी कपूरಉರ್ದು: شمّی کپُور ಒಬ್ಬ ಶ್ರೇಷ್ಠ ಭಾರತೀಯ ಹಿಂದಿ ಸಿನಿಮಾ ರಂಗದ ಖ್ಯಾತ ನಟ ಮತ್ತು ನಿರ್ದೇಶಕರು. ಇವರು ೨೧ ಅಕ್ಟೋಬರ್ ೧೯೩೧ರಲ್ಲಿ ಪಂಜಾಬಿ ಕಾತ್ರಿ ಕುಟುಂಬದಲ್ಲಿ ಜನಿಸಿದರು. ಇವರು ೧೯೫೦ರ ದಶಕದ ಅಂತ್ಯ ಹಾಗೂ ೧೯೬೦ರ ದಶಕದಲ್ಲಿನ ಹಿಂದಿ ಸಿನೇಮಾ ರಂಗದ ಪ್ರಖ್ಯಾತ ನಟರಾಗಿದ್ದರು.

ಇವರು ನಾಟಕಕಾರರಾದ ಪೃಥ್ವಿರಾಜ್ ಕಪೂರ್ ಮಗನಾಗಿ ಮುಂಬೈಯಲ್ಲಿ ಜನಿಸಿದರು.ಇವರ ಮೊದಲ ಹೆಸರು ಶಮ್ಶೇರ್ ರಾಜ್ ಕಪೂರ್ . ಪೃಥ್ವಿರಾಜ್ ಕಪೂರರ ಮೂರು ಮಕ್ಕಳಲ್ಲಿ ಎರಡನೇಯ ಮಗನಾಗಿದ್ದು (ಇತರರೆಂದರೆ ರಾಜ್ ಕಪೂರ್ ಮತ್ತು ಶಶಿ ಕಪೂರ್) ತಂದೆಯಂತೆಯೆ ಇವರೆಲ್ಲರೂ ಬಾಲಿವುಡ್‌‌ನಲ್ಲಿ ಯಶಸ್ವಿ ನಟರಾಗಿದ್ದರು. ಇವರು ಮುಂಬೈದಲ್ಲಿ ಹುಟ್ಟಿದಾಗ್ಯೂ ಇವರ ಬಾಲ್ಯದ ಹೆಚ್ಚಿನ ದಿನಗಳನ್ನು ತಂದೆಯವರು ಕೊಲ್ಕತ್ತಾದಲ್ಲಿ ನಟನೆಯಲ್ಲಿ ತೊಡಗಿಕೊಂಡು ನ್ಯೂ ಥಿಯೇಟರ್ ಸ್ಟೂಡಿಯೋಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರಿಂದಾಗಿ ಅಲ್ಲಿಯೇ ಕಳೆದರು. ಕೊಲ್ಕತ್ತಾದಲ್ಲಿದ್ದಾಗ ಮೊಂಟೆಸರಿ ಮತ್ತು ಕಿಂಡರ್‌ಗಾರ್ಟನ್‌ಗಳಲ್ಲಿ ಕಲಿತರು. ಮುಂಬೈಗೆ ವಾಪಸಾದ ಬಳಿಕ ಪ್ರಥಮವಾಗಿ ಸೆಂಟ್‌ಜೋಸೆಫ್‌ರ ಕಾನ್ವೆಂಟ್(ವಾಡಲಾ) ನಂತರ ಡಾನ್ ಬಾಸ್ಕೋ ಸ್ಕೂಲ್‌ಗಳಲ್ಲಿ ವಿಧ್ಯಾಬ್ಯಾಸಗಳನ್ನು ಮಾಡಿದರು. ಹಗ್ಸ್ ರಸ್ತೆಯಲ್ಲಿರುವ 'ನ್ಯೂ ಎರಾ ಸ್ಕೂಲ್'ನಲ್ಲಿ ಕಲಿಯುವುದರೊಂದಿಗೆ ತಮ್ಮ ಶಿಕ್ಷಣ ಮುಗಿಸಿದರು.

ಹಿಂದಿ ಚಿತ್ರರಂಗ ಕಂಡ ಅತ್ಯಂತ ಶ್ರೇಷ್ಠ ಚಿತ್ರನಟರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಶಮ್ಮಿ ಕಪೂರರು ಪಾತ್ರರಾಗಿದ್ದಾರೆ. ೧೯೫೦ರ ದಶಕದ ಉತ್ತರಾರ್ಧ ಹಾಗೂ ೧೯೬೦ರ ದಶಕದ ಅತ್ಯುತ್ತಮ ನಟರಾಗಿ ಹಿಂದಿ ಚಿತ್ರರಂಗ ಕಂಡ ಅತ್ಯಂತ ಶ್ರೇಷ್ಠ ಚಿತ್ರನಟ ಎಂಬ ಹೆಗ್ಗಳಿಕೆಗೆ ಶಮ್ಮಿ ಕಪೂರ್‌ರವರು ಪಾತ್ರರಾಗಿದ್ದಾರೆ. ಪೃಥ್ವಿರಾಜ ಕಪೂರ್‌ ಇವರ ಸಾಧಕ ಮಕ್ಕಳಲ್ಲೊಬ್ಬರಾದ ಇವರು ಬಹುಮುಖ ಪ್ರತಿಭೆ ಹೊಂದಿದವರಾಗಿದ್ದರು. ಇವರು ೧೯೫೩ರಲ್ಲಿ ಜೀವನ ಜ್ಯೋತಿ ಎಂಬ ಚಿತ್ರದೊಂದಿಗೆ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ಇದರ ನಂತರ ಸಾಲು ಸಾಲಾಗಿ ಜನಪ್ರಿಯ ಚಿತ್ರಗಳಾದ ತುಮ್ಸಾ ನಹಿ ದೇಖಾ , ದಿಲ್ ದೇಖೆ ದೇಕೊ , ಜಂಗ್ಲಿ , ದಿಲ್ ತೇರಾ ದಿವಾನಾ , ಪ್ರೊಫೇಸರ್ , ಚೈನಾ ಟೌನ್ , ರಾಜಕುಮಾರ , ಕಶ್ಮೀರ್ ಕಿ ಕಲಿ , ಜಾನ್ವರ್ , ತಿಸರಿಮಂಜಿಲ್ , ಆನ್ ಇವನಿಂಗ್ ಇನ್ ಪ್ಯಾರಿಸ್ , ಬ್ರಹ್ಮಚಾರಿ , ಮತ್ತು ಅಂದಾಜ್ ಮತ್ತು ವಿಧಾತಾ ಗಳಂತಹ ಚಿತ್ರಗಳನ್ನು ನೀಡಿ ಪ್ರೇಕ್ಷಕರ ಮನಸೂರೆಗೊಂಡರು. ಬ್ರಹ್ಮಚಾರಿ ಚಿತ್ರಕಾಗಿ ಇವರಿಗೆ ೧೯೬೮ರಲ್ಲಿ ಫಿಲ್ಮ್‌ಫೇರ್ ಉತ್ತಮ ನಟ ಪ್ರಶಸ್ತಿ ದೊರಕಿತು ಮತ್ತು ವಿಧಾತಾ ಚಿತ್ರಕ್ಕಾಗಿ ಇವರಿಗೆ ೧೯೮೨ರಲ್ಲಿ ಫಿಲ್ಮ್‌ಫೇರ್ ಉತ್ತಮ ಸಹನಟ ಪ್ರಶಸ್ತಿಗಳು ದೊರಕಿದವು.

ಬಾಲ್ಯದ ದಿನಗಳು ಮತ್ತು ಚಿತ್ರರಂಗಕ್ಕೆ ಪ್ರವೇಶ

[ಬದಲಾಯಿಸಿ]

ಶಮ್ಮಿ ಕಪೂರ್ ಇವರು ಸ್ವಲ್ಪ ದಿನಗಳ ಕಾಲ ರುಯಿಯಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ತಂದೆಯವರ ಕಂಪನಿಯಾದ ಪೃಥ್ವಿ ಥಿಯೇಟರ್‌ನಲ್ಲಿ ಸೇರಿಕೊಂಡರು. ಇವರು ಚಿತ್ರ ಜಗತ್ತಿಗೆ ೧೯೪೮ರಲ್ಲಿ ಸಹನಟರಾಗಿ ಸೇರಿಕೊಂಡರು. ಆಗ ಅವರು ತಿಂಗಳಿಗೆ ಗಳಿಸುತ್ತಿದ್ದ ಸಂಬಳ ಕೇವಲ ರೂ.೫೦ ಮಾತ್ರ. ಮುಂದಿನ ೪ ವರ್ಷಗಳ ಕಾಲ ಪೃಥ್ವಿ ಥಿಯೇಟರ್‌ನಲ್ಲಿ ಕೆಲಸ ಮಾಡಿದ ಅವರು ೧೯೫೨ರಲ್ಲಿ ಕೆಲಸವನ್ನು ಬಿಡುವಾಗ ಪಡೆಯುತ್ತಿದ್ದ ಸಂಬಳ ತಿಂಗಳಿಗೆ ಕೇವಲ ರೂ.೩೦೦/-ಮಾತ್ರ. ೧೯೫೩ರಲ್ಲಿ ಬಾಲಿವುಡ್‌ಗೆ ಜೀವನ ಜ್ಯೋತಿ ಚಿತ್ರದೊಂದಿಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ನಿದರ್ದೇಶಕರು ಮಹೇಶ ಕೌಲ್‌ರವರು ಮತ್ತು ಚಾಂದ್ ಉಸ್ಮಾನಿಯವರು ಕಪೂರ್‌ರವರ ಪ್ರಥಮ ನಾಯಕ ನಟಿಯಾಗಿದ್ದರು.

ಚಿತ್ರರಂಗದ ವೃತ್ತಿಜೀವನ

[ಬದಲಾಯಿಸಿ]

ಕಪೂರ್ ಅಮಿತಾಭ್ ರೊಂದಿಗೆ ೧೯೫೭ರಲ್ಲಿ ನಾಸೀರ ಹುಸೇನ್‌ ಅವರು ನಿರ್ದೇಶಿಸಿದ ತುಮ್ಸಾ ನಹಿ ದೇಖಾ ಚಿತ್ರದೊಂದಿಗೆ ಗಂಭೀರ ಪಾತ್ರಗಳಲ್ಲಿ ಅಭಿನಯವನ್ನು ಪ್ರಾರಂಭಿಸಿದರು. ೧೯೫೯ರಲ್ಲಿ ದಿಲ್ ದೇಖೆ ದೇಖೋ ದಲ್ಲಿ ಆಶಾ ಪರೇಖ್‌ರೊಂದಿಗೆ ಹಗುರ ಹೃದಯದ ಹುಡುಗಾಟಿಕೆ ಬುದ್ದಿಯ ಹುಡುಗನಾಗಿ ನಟಿಸಿದರು.‍ ೧೯೬೧ರಲ್ಲಿ ಜಂಗ್ಲಿ ಚಿತ್ರದೊಂದಿಗೆ ಇವರ ಹೊಸ ಗತ್ತಿನ ಪಾತ್ರಗಳಿಗೆ ಸಾಕ್ಷಿಯಾದರು. ಇವರು ಮೊಹಮ್ಮದ ರಫೀಯವರನ್ನೇ ಇವರ ಹಿನ್ನೆಲೆ ಗಾಯಕರನ್ನಾಗಿ ಆಯ್ದುಕೊಳ್ಳುತ್ತಿದ್ದರು. ಮೊದಮೊದಲು ಹೆಚ್ಚಾಗಿ ಜನಪ್ರಿಯ ನಟಿಯರಾದ ಮಧುಬಾಲಾರಂತಹ ನಟಿಯರೊಂದಿಗೆ ರೈಲ್ ಕಾ ಡಿಬ್ಬಾ (೧೯೫೩) ದಂತಹ ಚಿತ್ರಗಳಲ್ಲಿ ಅಭಿನಯಿಸಿದರು. ನಂತರದ ದಿನಗಳಲ್ಲಿ ನಿರ್ದೇಶಕರು ಹೊಸ ನಾಯಕ ನಟಿಯರನ್ನು ಇವರೊಂದಿಗೆ ನಟಿಸುವುದಕ್ಕೆ ಪ್ರೋತ್ಸಾಹಿಸುತ್ತಿದ್ದರಾದರೂ ಆಶಾ ಫರೇಕ್, ಸಾಧನಾ, ಸಾಯಿರಾಬಾನು, ಶರ್ಮಿಳಾ ಠಾಗೋರ್ ಈ ನಾಲ್ವರು ಹೆಚ್ಚಿನ ಚಿತ್ರಗಳಲ್ಲಿ ನಾಯಕ ನಟಿಯರಾಗಿ ಕಾಣಿಸಿಕೊಂಡರು.[] ಕಪೂರರೇ ಹೇಳಿದಂತೆ ಶರ್ಮಿಳಾ ಠಾಗೋರ್, ರಾಜಶ್ರೀ, ಮತ್ತು ಆಶಾ ಫಾರೇಖ್‌ರೊಂದಿಗೆ ನಟಿಸುವುದು ಇವರಿಗೆ ಸಂತೋಷ ನೀಡುವ ಸಂಗತಿಯಾಗಿತ್ತು.[] ಆಶಾ ಫಾರೇಖ್ ಜೋಡಿಯಾಗಿ ನಾಲ್ಕು ಚಿತ್ರಗಳಲ್ಲಿ ನಟಿಸಿದರು. ಇವರ ಜೋಡಿ ನಟಿಸಿದ ಚಿತ್ರಗಳಲ್ಲಿ ತೀಸರಿ ಮಂಜಿಲ್ (೧೯೬೬) ಅತ್ಯಂತ ಜನಪ್ರಿಯ ಚಿತ್ರವಾಗಿದೆ. ೧೯೬೦ರ ದಶಕದ ಪೂರ್ವಾಧದಲ್ಲಿ ಕಪೂರ್ ಅವರ ಜನಪ್ರಿಯ ಚಿತ್ರಗಳಾದ ಪ್ರೊಫೇಸರ್ , ಚಾರ್ ದಿಲ್ ಚಾರ್ ರಾಹೆ , ರಾತ್ ಕೆ ರಾಹಿ , ದಿಲ್ ತೇರಾ ದಿವಾನಾ , ‘ಪ್ಯಾರ್ ಕಿಯಾ ತೊ ಡರನಾ ಕ್ಯಾ’, ಚೈನಾ ಟೌನ್ , ಕಶ್ಮೀರ್ ಕಿ ಕಲಿ , ಬ್ಲಫ್ ಮಾಸ್ಟರ್ , ಜಾನ್ವರ್ ಮತ್ತು ರಾಜಕುಮಾರ್‌ ಗಳನ್ನು ನೀಡಿದರು. ೧೯೬೮ರಲ್ಲಿ ನಾಮನಿರ್ದೇಶನ ಪಡೆದಿದ್ದರು ಬ್ರಹ್ಮಚಾರಿ ಚಿತ್ರಕ್ಕಾಗಿ ಉತ್ತಮ ನಟ ಪಿಲ್ಮಫೇರ್ ಪ್ರಶಸ್ತಿಯನ್ನು ಪಡೆದರು.

ಅವರ ಉತ್ತಮ ಗುಣ ಸೌಂದರ್ಯ, ಹಸಿರು ಕಂಗಳು, ಎತ್ತರ, ದೇಹದಾಢ್ಯ ಇವುಗಳು ಕೂಡ ಇವರ ಜನಪ್ರಿಯ ಉತ್ತುಂಗತೆಗೆ ಮತ್ತೊಂದು ಕಾರಣವಾಗಿದ್ದವು. ೧೯೭೦ರ ದಶಕದ ಪೂರ್ವಾರ್ಧದಲ್ಲಿ ಇವರ ಜನಪ್ರಿಯತೆಯ ಇಳಿಮುಖ ಪ್ರಾರಂಭವಾಯಿತು ಮತ್ತು ಪ್ರಣಯ ಪಾತ್ರಗಳಲ್ಲಿ ಸೋಲುಂಟಾಗತೊಡಗಿತು. ೧೯೭೧ರಲ್ಲಿ ನಟಿಸಿದ ಅಂದಾಜ್ ಚಿತ್ರವು ಕೊನೆಯ ಜನಪ್ರಿಯ ಚಿತ್ರವಾಯಿತು. ನಂತರ ಅವರು ಚಾರಿತ್ರಿಕ ಚಿತ್ರಗಳಾದ ಜಮೀರ್ , ಹೀರೋ , ವಿಧಾತಾ (೧೯೭೪)ಗಳಲ್ಲಿ ನಟಿಸಿದರು. ನಂತರ ಅವರು ನಿರ್ದೇಶರಾಗಿ ಲಮ್ರಾ ಲಾ ಡೋಸ್ ಇವರ ಕತೆಯನ್ನಾಧರಿಸಿದ ಮನೋರಂಜನ್ ಚಿತ್ರವನ್ನು ನಿರ್ಮಿಸಿದರು. ಅದಾದ ಎರಡು ವರ್ಷದ ನಂತರ ಬಂಡಲ್‌ಬಾಜ್ (೧೯೭೬)ರಲ್ಲಿ ನಿರ್ದೇಸಿದರು. ಆದರೆ ಇದೆರಡು ಚಿತ್ರಗಳು ಚಿತ್ರರಸಿಕರ ಮನಸೂರೆಗೊಳ್ಳಲು ವಿಫಲವಾದವು. ಇವರು ಕೊನೆಯದಾಗಿ ನಟಿಸಿದ ಚಿತ್ರ ಸಾಂಡ್ವಿಚ್ (೨೦೦೬).ಸದ್ಯದಲ್ಲಿ ಅವರು ತಮ್ಮ ಸಹೋದರನಾದ ರಾಜಕಪೂರ್ ಇವರ ಮೊಮ್ಮಗನಾದ ರನಬೀರ್ ಕಪೂರ್ ಜೊತೆ ಇಮ್ತಿಯಾಜ್ ಅಲಿಯವರ ಮುಂದಿನ ಚಿತ್ರದಲ್ಲಿ ನಟಿಸಲು ನಿರ್ಧರಿಸಿದ್ದಾರೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ಶಮ್ಮಿ ಕಪೂರ್ ಅವರು, ಮೊದಲು ಗೀತಾ ಬಾಲಿಯವರನ್ನು ಭೇಟಿಯಾದದ್ದು ೧೯೫೫ರಲ್ಲಿ. "ರಂಗೀನ್ ರಾತೇ" ಚಿತ್ರೀಕರಣದ ಸಂದರ್ಭದಲ್ಲಿ. ಇವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಂದರ್ಭದಲ್ಲಿ ಗೀತಾರವರು ಸಣ್ಣ ಪಾತ್ರವೊಂದರಲ್ಲಿ ನಟಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಅವರಿಬ್ಬರ ಮಧ್ಯೆ ಪ್ರೇಮಾಂಕುರವಾಯಿತು. ಆದರೆ ಗೀತಾರವರು ಶಮ್ಮಿ ಕಪೂರ್‌ ಇವರಿಗಿಂತ ಒಂದು ವರ್ಷ ದೊಡ್ಡವರಾಗಿದ್ದು ತಂದೆಯೊಂದಿಗೆ ಮತ್ತು ಅಣ್ಣನೊಂದಿಗೆ ನಟಿಸಿದ್ದರು. ಆದ್ದರಿಂದ ಮನೆಯಲ್ಲಿ ಗೀತಾರವರನ್ನು ಮದುವೆಯಾಗಲು ಶಂಕೆ ವ್ಯಕ್ತಪಡಿಸಿದರು. ನಾಲ್ಕು ತಿಂಗಳನಂತರ ಅವರು ಒಬ್ಬರಿಗೊಬ್ಬರು ಭೇಟಿಯಾದಾಗ ಮದುವೆಯಾಗಬೇಕೆಂದು ನಿರ್ಧರಿಸಿದರು. ಮತ್ತು ಮುಂಬೈದಲ್ಲಿರುವ ನೇಪಿಯನ್ ರಸ್ತೆಯಲ್ಲಿರುವ ಬಾನಗಂಗಾ ದೇವಸ್ಥಾನಕ್ಕೆ ಹೋಗಿ ಹರಿವಾಲಿಯಾರವರ ಸಮ್ಮುಖದಲ್ಲಿ ಮದುವೆಯಾದರು. ನಂತರ ತಮ್ಮ ಕುಟುಂಬವರ್ಗದವರಿಗೆ ವಿಷಯವನ್ನು ತಿಳಿಸಿದರು. ಈ ಜೋಡಿಯ ಸುಂದರ ದಾಂಪತ್ಯಕ್ಕೆ ೦೧-ಜುಲೈ-೧೯೫೬ರಲ್ಲಿ ಗಂಡುಮಗುವಿನ ಜನನವಾಯಿತು. ಮುಂಬೈನ ಶಿರೋಡಕರ್ ಆಸ್ಪತ್ರೆಯಲ್ಲಾಯಿತು ಆ ಮಗುವಿಗೆ ಆದಿತ್ಯರಾಜ್ ಕಪೂರ್‌ ಎಂದು ನಾಮಕರಣ ಮಾಡಲಾಯಿತು. ಐದು ವರ್ಷ ನಂತರ ೧೯೬೧ರಲ್ಲಿ ಮತ್ತೊಂದು ಮಗುವಾಯಿತು. ಅದು ಹೆಣ್ಣು ಮಗುವಾಗಿದ್ದು ಅದಕ್ಕೆ ಕಾಂಚನ ಎಂದು ನಾಮಕರಣ ಮಾಡಲಾಯಿತು. ೧೯೬೬ರಲ್ಲಿ ತೀಸರಿ ಮಂಜಿಲ್ ಚಿತ್ರದ ಚಿತ್ರಿಕರಣದ ಸಂದರ್ಭದಲ್ಲಿ ದುರಾದೃಷ್ಟ ಕಪೂರ್‌ರಿಗಾಗಿ ಕಾದಿತ್ತು. ಗೀತಾರರವು ಸಿಡುಬಿನಿಂದಾಗಿ ಕಪೂರ್‌ರವರನ್ನು ಮತ್ತು ಇಬ್ಬರು ಮಕ್ಕಳನ್ನು ಅಗಲಿ ತೀರಿಕೊಂಡರು. ಆ ನೋವೇ ೧೯೬೮ರ ಬ್ರಹ್ಮಚಾರಿ ಚಿತ್ರದಲ್ಲಿ ಮಮ್ತಾಜ್‌ರ ಜೊತೆಗೆ ಕಪೂರ್‌ರವರನ್ನು ನಟಿಸಲು ಪ್ರೆರೇಪಿಸಿತು.

೧೯೬೯ರಲ್ಲಿ ಗುಜರಾತಿನ ಬಾವನಗರದ ಉಚ್ಚಕುಟುಂಬದ ನೀಲಾದೇವಿ ಗೋಹಿಲ್‌ ಎರಡನೇ ಹೆಂಡತಿಯಾದರು. ಆದರೆ ಇವರ ಪ್ರಣಯ ಪಾತ್ರಗಳು ೧೯೭೦ರ ದಶಕದಲ್ಲಿ ಅಂದಾಜ್ (೧೯೭೧)ಜನಪ್ರಿಯ ಚಿತ್ರದೊಂದಿಗೆ ಕೊನೆಗೊಂಡಿತು. ನಂತರ ಅವರು ಹೆಚ್ಚಿನದಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. ೧೯೬೧ರಲ್ಲಿ ಜಂಗ್ಲಿ ಚಿತ್ರದಲ್ಲಿ, ಬ್ಲಪ್ ಮಾಸ್ಟರ್ (೧೯೬೪)ರಲ್ಲಿ ತನಗೆ ನಾಯಕಿಯಾಗಿ ನಟಿಸಿದ ಸಾಯಿರಾಬಾನುರವರ ತಂದೆಯಾಗಿ ಜಮೀರ್ (೧೯೭೫)ರಲ್ಲಿ ನಟಿಸಿದರು. ಪರ್ವಾರಿಶ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್‌ರ ತಂದೆಯಾಗಿ ನಟಿಸಿದರು. ಅವರು ನಿರ್ದೇಶಕರಾಗಿ ಮನೋರಂಜನ್(೧೯೭೪) ಮತ್ತು ಇಮ್ರಾ ಲಾ ಡೌಸ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಬಂಡಲ್‌ಬಾಜ್ (೧೯೭೬)ರಲ್ಲಿ ನಿರ್ದೇಶಕರಾಗಿಯೂ ಪೋಷಕ ನಟರಾಗಿಯೂ ನಟಿಸಿದ್ದಾರೆ. ಆದರೆ ಒಂದು ಕೂಡಾ ಜನಪ್ರಿಯವಾಗಿಲ್ಲ. ೧೯೮೦ ಮತ್ತು ೧೯೯೦ರ ದಶಕಗಳಲ್ಲಿ ಇವರು ಪೋಷಕ ನಟರಾಗಿಯೇ ನಟಿಸಿದರು. ಮತ್ತು ೧೯೮೨ರಲ್ಲಿ ವಿಧಾತಾ ಚಿತ್ರದ ನಟನೆಗಾಗಿ ಫಿಲ್ಮ್‌ಫೇರ್ ಉತ್ತಮ ಪೋಷಕ ನಟ ಪ್ರಶಸ್ತಿಗೂ ಭಾಜನರಾದರು. ಆದರೆ ಇವರ ಜನಪ್ರಿಯತೆ ೧೯೯೦ರ ಉತ್ತರಾರ್ಧದಲ್ಲಿ ಮತ್ತು ೨೦೦೦ರ ದಶಕದಲ್ಲಿ ದಿನದಿಂದ ದಿನಕ್ಕೆ ಕುಸಿಯಿತು. ೨೦೦೬ರಲ್ಲಿ ಇವರ ಕೊನೆಯ ಚಿತ್ರ ಸ್ಯಾಂಡ್ವಿಚ್ ಬಿಡುಗಡೆಯಾಯಿತು.

ಶಮ್ಮಿ ಕಪೂರ್‌ರವರು ಭಾರತದೇಶದ ಅತ್ಯಂತ ಹೆಚ್ಚು ಅಂತರಜಾಲ ಬಳಕೆದಾರರಲ್ಲಿ ಒಬ್ಬರಾಗಿದ್ದಾರೆ. ಮತ್ತು (ಐ.ಯು.ಸಿ.ಐ) ಭಾರತೀಯ ಅಂತರಜಾಲ ಬಳಕೆದಾರರ ವರ್ಗದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಎಥಿಕಲ್ ಹ್ಯಾಕರ್ಸ ಅಸೋಸಿಯೇಶನ್‌ಗಳಂತಹ ಅಂತರಜಾಲಕ್ಕೆ ಸಂಬಂಧಿಸಿದ ಸಂಸ್ಥೆಗಳ ಉಗಮದಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ. ಕಪೂರರು ಕಪೂರ್ ಕುಟುಂಬಕ್ಕೆ ಸಂಬಂಧಿಸಿದ ವೆಬ್‌ಸೈಟ್‌ನ್ನು ನಿರ್ವಹಿಸುತ್ತಿದ್ದಾರೆ. ೨೦೦೬ರಲ್ಲಿ ಅವರೇ ಸಂದರ್ಶನಕಾರರಲ್ಲಿ ಹೇಳಿರುವಂತೆ Archived 2010-07-24 ವೇಬ್ಯಾಕ್ ಮೆಷಿನ್ ನಲ್ಲಿ. ವಾರಕ್ಕೆ ೩ ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾರೆ. ಅದೂ ಸಹಾ ಅವರನ್ನು ಖಿನ್ನರಾಗಿಸಿಲ್ಲ. ಆದರೆ ಅವರು ತನಗೆ ಇಷ್ಟೇಲ್ಲವನ್ನು ನೀಡಿದ ದೇವರಿಗೆ ಕೃತಜ್ನತೆಯನ್ನು ಹೇಳಲು ಮರೆಯುವುದಿಲ್ಲ.

ಪ್ರಶಸ್ತಿಗಳು, ನಾಮನಿರ್ದೇಶನಗಳು ಮತ್ತು ಇನ್ನಿತರ ಸನ್ಮಾನಗಳು

[ಬದಲಾಯಿಸಿ]
  • ೧೯೬೨ - ಫಿಲ್ಮ್‌ಫೇರ್‌ಉತ್ತಮ ನಟ ಪ್ರಶಸ್ತಿಗೆ ನಾಮಕರಣ--ಪ್ರೊಫೇಸರ್ []
  • ೧೯೬೮ - ಫಿಲ್ಮ್‌ಫೇರ್‌ ಉತ್ತಮ ನಟ ಪ್ರಶಸ್ತಿ , ಬ್ರಹ್ಮಚಾರಿ []
  • ೧೯೮೨ - ಫಿಲ್ಮ್‌ಫೇರ್‌ ಉತ್ತಮ ಪೋಷಕ ನಟ, ವಿಧಾತಾ []
  • ೧೯೯೫ - ಜೀವಮಾನದ ಸಾಧನೆಗಾಗಿ ಫಿಲ್ಮ್‌ಫೇರ್‌ ಪ್ರಶಸ್ತಿ[]
  • ೧೯೯೮ - ಕಲಾಕಾರ್ ಪ್ರಶಸ್ತಿ - "ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ" ವಿಶೇಷ ಪ್ರಶಸ್ತಿ[]
  • ೧೯೯೯ - ಜೀವಮಾನದ ಸಾಧನೆಗಾಗಿ ಝೀ ಸಿನಿ ಪ್ರಶಸ್ತಿ
  • ೨೦೦೧ - ಸ್ಟಾರ್‌ ಸ್ಕ್ರೀನ್‌ ಜೀವಮಾನ ಸಾಧನೆಯ ಪ್ರಶಸ್ತಿ
  • ೨೦೦೧ - ಆನಂದಾಲೋಕ್ ಪ್ರಶಸ್ತಿ ಜೀವಮಾನದ ಸಾಧನೆಗಾಗಿ ಪ್ರಶಸ್ತಿ
  • ೨೦೦೨ - ಐಫಾದಲ್ಲಿ ಭಾರತೀಯ ಸಿನೆಮಾಗೆ ಅಮೂಲ್ಯ ಕಾಣಿಕೆ ನೀಡಿದ್ದಕ್ಕಾಗಿ .[]
  • ೨೦೦೫ - ಬಾಲಿವುಡ್‌ ಮೂವೀ ಪ್ರಶಸ್ತಿಯಲ್ಲಿ[೧೦] ಜೀವಮಾನ ಸಾಧನೆಗಾಗಿ ಪ್ರಶಸ್ತಿ
  • ೨೦೦೮ - ಪುಣೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ(ಪಿಐಎಫ್‌ಎಫ್) ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಜೀವಮಾನದ ಸಾಧನೆಗಾಗಿ ಪ್ರಶಸ್ತಿ .[೧೧]
  • ೨೦೦೯ -ದಾದಾ ಸಾಹೇಬ್ ಫಾಲ್ಕೆ ಅಕಾಡಮಿಯಿಂದ ಫಾಲ್ಕೆ ಲೆಂಜೆಂಡ್ ನಟ ಪ್ರಶಸ್ತಿ [೨]
  • ಭಾರತೀಯ ಮನೊರಂಜನಾ ಉದ್ಯಮಕ್ಕೆ ನೀಡಿದ ಮಹೋನ್ನತ ಕಾಣಿಕೆಗೆ ಗೌರವ ಪೂರ್ವಕವಾಗಿ ಫೆಡರೇಶನ್ ಆಫ್ ಇಂಡಿಯನ್ ಛೇಂಬರ್ ಆಫ್ ಕಾಮರ್ಸ್ ಆ‍ಯ್‌೦ಡ್ ಇಂಡಸ್ಟ್ರಿ(ಎಫ್‌ಐಸಿಸಿಐ)ಯಿಂದ ಲಿವಿಂಗ್ ಲೆಜೆಂಡ್ ಪ್ರಶಸ್ತಿ ಪಡೆದಿದ್ದಾರೆ.[೧೨]
  • ರಾಷ್ಟ್ರೀಯ ಗೌರವ ಪ್ರಶಸ್ತಿ[೧೩]

ಬಹುತೇಕ ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
  • ಜೀವನ ಜ್ಯೋತಿ (೧೯೫೩)
  • ರೇಲ್ ಕಾ ಡಿಬ್ಬಾ (೧೯೫೩)
  • ಥೋಕರ್ (೧೯೫೩)
  • ಲೈಲಾ ಮಜ್ನು (೧೯೫೩) ನೂತನ್
  • ಲಡ್ಕಿ (೧೯೫೩)
  • ಗುಲ್ ಸನೋಬರ್ (೧೯೫೩)
  • ಕೋಜ್ (೧೯೫೩)
  • ಶಮಾ ಪರ್ವಾನಾ (೧೯೫೪)
  • ಮೆಹಬೂಬಾ (೧೯೫೪)
  • ಎಹಸಾನ್ (೧೯೫೪)
  • ಚೋರ್ ಬಜಾರ್ (೧೯೫೪)
  • ಟಾಂಗೆವಾಲಿ (೧೯೫೫)
  • ನಕಾಬ್ (೧೯೫೫)
  • ಮಿಸ್ ಕೊಕಾ ಕೋಲಾ (೧೯೫೫)
  • ದಕು (೧೯೫೫)
  • ಸಿಪಹ್ಸಾಲಾರ್ (೧೯೫೬)
  • ರಂಗೀನ್ ರಾತೆ (೧೯೫೬) ಮಾಲಾ ಸಿನ್ಹಾ
  • ಮೆಮ್‌ಸಾಹಿಬ್ (೧೯೫೬)
  • ಹಮ್ ಸಬ್ ಚೋ ಹೇ (೧೯೫೬)
  • ತುಮ್ಸಾ ನಹಿ ದೇಖಾ (೧೯೫೭ ಚಿತ್ರ) ಅಮಿತಾ
  • ಮಹಾರಾಣಿ (೧೯೫೭)
  • ಕಾಫಿ ಹೌಸ್ (೧೯೫೭)
  • ಮಿರ್ಜಾ ಸಾಹಿಬಾನ್ (೧೯೫೭)
  • ಮುಜ್ರಿಮ್ (೧೯೫೮)
  • ದಿಲ್ ದೇಖೆ ದೇಕೊ (೧೯೫೮) ಆಶಾ ಫಾರೇಖ್
  • ಉಜಾಲಾ (೧೯೫೯) ಮಾಲಾ ಸಿನ್ಹಾ
  • ರಾತ್ ಕೆ ರಾಹಿ (೧೯೫೯)
  • ಮೊಹರ್ (೧೯೫೯)
  • ಬಸಂತ್ (೧೯೬೦)
  • ಕಾಲೇಜ್ ಗರ್ಲ್ (೧೯೬೦)
  • ಸಿಂಗಾಪೂರ್ (೧೯೬೦)
  • ಬಾಯ್‌ಫ್ರೆಂಡ್ (೧೯೬೧)
  • ಜಂಗ್ಲಿ (೧೯೬೧) ಸಾಯಿರಾ ಬಾನು
  • ದಿಲ್ ತೇರಾ ದಿವಾನಾ (೧೯೬೨) ಮಾಲಾ ಸಿನ್ಹಾ
  • ಪ್ರೊಫೇಸರ್ (೧೯೬೨) ಕಲ್ಪನಾ
  • ಚೈನಾ ಟೌನ್ (೧೯೬೨) ಶಕೀಲಾ/ಹೆಲನ್
  • ಬ್ಲಫ್ ಮಾಸ್ಟರ್ (೧೯೬೩)
  • ಶಹಿದ್ ಭಗತ್ ಸಿಂಗ್ (೧೯೬೩)
  • ಜಬ್ ಸೆ ತುಮ್ಹೆ ದೇಖಾ ಹೆ (೧೯೬೩)
  • ಪ್ಯಾರ್ ಕಿಯಾ ತೊ ಡರನಾ ಕ್ಯಾ (೧೯೬೩)
  • ರಾಜಕುಮಾರ (೧೯೬೪) ಸಾಧನಾ
  • ಕಶ್ಮೀರ್ ಕಿ ಕಲಿ (೧೯೬೪) ಶರ್ಮಿಳಾ ಠಾಗೋರ್
  • ಜಾನ್ವರ್ (೧೯೬೫) ರಾಜಶ್ರೀ
  • ತಿಸರಿಮಂಜಿಲ್ (೧೯೬೬) ಅನಿಲ್ ಕುಮಾರ್
  • ಪ್ರೀತ್ ನಾ ಜಾನೆ ರೀತ್ (೧೯೬೬)
  • ಬರ್ತಮೀಜ್ (೧೯೬೬)
  • ಆನ್ ಇವನಿಂಗ್ ಇನ್ ಪ್ಯಾರಿಸ್ (೧೯೬೭) ಶರ್ಮಿಳಾ ಠಾಗೋರ್
  • ಲಾತ್ ಸಾಹೇಬ್ (೧೯೬೭) ನೂತನ್
  • ಬ್ರಹ್ಮಚಾರಿ (೧೯೬೮) ರಾಜಶ್ರೀ
  • ಪ್ರಿನ್ಸ್ (೧೯೬೯) ವೈಜಯಂತಿ ಮಾಲಾ
  • ತುಮ್ಸೆ ಅಚ್ಚಾ ಕಾನ್ ಹೈ (೧೯೬೯) ಬಬಿತಾ
  • ಸಂಚಾರಿ (೧೯೬೯) ಸಾಧನಾ
  • ಪಗ್ಲಾ ಕಹಿ ಕಾ (೧೯೭೦) ಆಶಾ ಫಾರೇಖ್/ಹೆಲನ್
  • ಅಂದಾಜ್ (೧೯೭೧) ಹೇಮಾ ಮಾಲಿನಿ/ಸಿಮಿ
  • ಜವಾನ್ ಮೊಹಬ್ಬತ್ (೧೯೭೧) ಆಶಾ ಫಾರೇಖ್
  • ಜಾನೆ ಅಂಜಾನೆ (೧೯೭೧) ಲೀಲಾ ಚಂದಾವರ್ಕರ್
  • ಪರ್ವರಿಶ್ (೧೯೭೩)
  • ಜಮೀರ್ (೧೯೭೩)
  • ಮನೋರಂಜನ್ (೧೯೭೪) ಜೀನತ್ ಅಮಾನ್
  • ಚೋಟೆ ಸರ್ಕಾರ್ (೧೯೭೪) ಸಾಧನಾ
  • ಶಾಲಿಮರ್ (೧೯೭೮)
  • ಪ್ರೊಫೇಸರ್ ಪ್ಯಾರೆಲಾಲ್ (೧೯೮೧)
  • ರಾಕಿ (೧೯೮೧)
  • ನಸೀಬ್b (೧೯೮೧)
  • ಪ್ರೇಮ್ ರೋಗ್ (೧೯೮೨) ಸುಶ್ಮಾ ಸೇಠ್
  • ವಿಧಾತಾ (೧೯೮೨)
  • ದೇಶ್ ಪ್ರೇಮಿ (೧೯೮೨)
  • ಹೀರೋ (೧೯೮೩) ಊರ್ಮಿಳಾ ಭಟ್
  • ಬೇತಾಬ್ (೧೯೮೩)
  • ಸೋನಿ ಮಾಹಿವಾಲ್ (೧೯೮೪)
  • ಎರತಾಜ್ (೧೯೮೮)
  • ಅಜೂಬಾ (೧೯೯೧)
  • ಚಮತ್ಕಾರ್ (೧೯೯೨)
  • ಸುಖಮ್ ಸುಖಕರಮ್ (೧೯೯೪) (ಮಲಯಾಳಂ)
  • ಔರ್ ಪ್ಯಾರ್ ಹೋಗಯಾ (೧೯೯೬) ಶಮ್ಮಿ
  • ಕರೀಬ್ (೧೯೯೮)
  • ಜಾನಮ್ ಸಮ್ಜಾ ಕರೋ (೧೯೯೯)
  • ಈಸ್ಟ್ ಈಸ್ ಈಸ್ಟ್ (೧೯೯೯)
  • ಯೇ ಹೇ ಜಲ್ವಾ
  • ವ್ಹಾ! ತೇರಾ ಕ್ಯಾ ಕೆಹನಾ (೨೦೦೨)
  • ಬೋಲಾ ಇನ್ ಬಾಲಿವುಡ್‌ (೨೦೦೫)
  • ಸ್ಯಾಂಡ್ವಿಚ್ (೨೦೦೬)

ಹೆಚ್ಚಿಗೆ ಓದಲು

[ಬದಲಾಯಿಸಿ]
  • ದಿ ಕಪೂರ್‌ಸ್‌: ದಿ ಫರ್ಸ್ಟ್‌ ಫ್ಯಾಮಿಲಿ ಆಫ್‌ ಇಂಡಿಯನ್ ಸಿನೆಮಾ , ಲೇಖಕರು: ಮಧು ಜೈನ್‌. ಪೆಂಗ್ವಿನ್‌, ವೈಕಿಂಗ್‌, ೨೦೦೫. ISBN ೦೬೭೦೦೫೮೩೭೮.

ಉಲ್ಲೇಖಗಳು

[ಬದಲಾಯಿಸಿ]
  1. [೧]
  2. http://www.screenindia.com/news/shammi-kapoorl-lionheart/೩೮೮೩೩೯/
  3. "thirtymm.com - ಸೆಲೆಬ್ರಿಟಿ ಇಂಟರ್ವ್ಯೂಸ್ - ಪವರ್ಡ್ ಬೈ ರಿಯಾಕ್ಟ್ ಮೀಡಿಯಾ". Archived from the original on 2011-09-29. Retrieved 2011-01-20.
  4. "The Nominations - 1962". Filmfare Awards. Archived from the original on 8 ಜುಲೈ 2012. Retrieved 15 December 2010.
  5. "The Winners - 1968". Filmfare Awards. Archived from the original on 9 ಮಾರ್ಚ್ 2004. Retrieved 15 December 2010.
  6. "The Winners - 1982". Filmfare Awards. Archived from the original on 9 ಜುಲೈ 2012. Retrieved 15 December 2010.
  7. "Lifetime Achievement (Popular)". Filmfare Awards. Archived from the original on 12 ಫೆಬ್ರವರಿ 2008. Retrieved 15 December 2010.
  8. ಕಲಾಕಾರ್ ಪ್ರಶಸ್ತಿ
  9. "ಐಫಾ : ಐಫಾ ಅವಾರ್ಡ್ಸ್ - ಪಾಸ್ಟ್ ಅವಾರ್ಡ್ಸ್ - 2000 - ವಿನ್ನರ್ಸ್". Archived from the original on 2007-08-16. Retrieved 2011-01-20.
  10. ಬಾಲಿವುಡ್‌ ಅವಾರ್ಡ್ಸ್ | ಬಾಲಿವುಡ್‌ ಫ್ಯಾಶನ್ ಅವಾರ್ಡ್ಸ್ | ಬಾಲಿವುಡ್‌ ಮ್ಯೂಜಿಕ್ ಅವಾರ್ಡ್ಸ್
  11. ಶಮ್ಮಿ ಕಪೂರ್‌, ಶರ್ಮಿಳಾ ಠಾಗೋರ್ ಆನರ್ಡ್ ಎಟ್ ಪುಣೆ ಇಂಟರ್ನ್ಯಾಷನಲ್ ಫಿಲ್ಮ್ -ಹಿಂದೂಸ್ಥಾನ್ ಟೈಮ್ಸ್ Archived 2009-01-08 ವೇಬ್ಯಾಕ್ ಮೆಷಿನ್ ನಲ್ಲಿ.
  12. "ಎಫ್‌ಐಸಿಸಿಐ-ಫ್ರೇಮ್ಸ್ ಅವಾರ್ಡ್ ಫಾರ್ ಕಮಲ್ ಹಾಸನ್". Archived from the original on 2007-03-25. Retrieved 2011-01-20.
  13. "Environmentalist Ajay Jain awarded "Rashtriya Gaurav Award 2010"". i-Newswire. Retrieved 15 December 2010.

ಬಾಹ್ಯ ಕೊಂಡಿಗಳು

[ಬದಲಾಯಿಸಿ]