ವಿಷಯಕ್ಕೆ ಹೋಗು

ಹೃತಿಕ್‌ ರೋಷನ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hrithik Roshan
Hrithik Roshan (2014)
Born
ಹೃತಿಕ್ ರೋಷನ್ ನಾಗರತ್

(1974-01-10) ಜನವರಿ ೧೦, ೧೯೭೪ (ವಯಸ್ಸು ೫೦)
Occupationನಟನೆ
Years active1980–1986 (child artist)
2000–present
Spouse

ಸುಸನ್ನೆ ಖಾನ್ (ವಿವಾಹ:2000) - div

Children2
Fatherರಾಕೇಶ್ ರೋಷನ್

ಹೃತಿಕ್‌ ರೋಷನ್ (ಹಿಂದಿ: ऋतिक रोशन [ˈrɪt̪ɪk ˈroːʃən]; 1974 ರ ಜನವರಿ 10 ರಂದು ಜನನ),[] ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟರಾಗಿದ್ದಾರೆ.

1980 ರ ಸಿನಿಮಾಗಳಲ್ಲಿ ಬಾಲನಟರಾಗಿ ಕಾಣಿಸಿಕೊಂಡ ನಂತರ ರೋಷನ್ ಮೊದಲ ಬಾರಿಗೆ ಕಹೋ ನಾ... ಪ್ಯಾರ್ ಹೈ (2000) ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದರು. ಇದಕ್ಕಾಗಿ ರೋಷನ್‌ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಪುರುಷ ವಿಭಾಗದಲ್ಲಿನ ಆರಂಭಿಕ ನಟನಿಗೆ ನೀಡುವ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಗಳಿಸಿದರು. 2001 ರಲ್ಲಿ ಭಾವಾವೇಶದ ಚಿತ್ರವಾದ ಕಭಿ ಖುಷಿ ಕಭಿ ಗಮ್... ನಲ್ಲಿ ಕಾಣಿಸಿಕೊಂಡರು. ಇದು ಸಾಗರೋತ್ತರ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಹಣಗಳಿಸಿದ ಭಾರತದ ಚಲನಚಿತ್ರವಾಯಿತು. ಅಲ್ಲದೇ ಅವರ ವಾಣಿಜ್ಯಿಕವಾಗಿ ದೊಡ್ಡ ಯಶಸ್ಸನ್ನು ಕಂಡ ಚಿತ್ರವಾಯಿತು.

ಅನಂತರ 2002–03 ರಿಂದ ಅನೇಕ ಗಮನಾರ್ಹ ಅಭಿನಯಗಳನ್ನು ನೀಡುವ ಮೂಲಕ, ವಾಣಿಜ್ಯಕವಾಗಿ ಯಶಸ್ವಿಯಾದ ಕೋಯಿ... ಮಿಲ್ ಗಯಾ ಚಲನಚಿತ್ರದಲ್ಲಿ ಮತ್ತು ಅದರ ಅನಂತರದ ಕ್ರಿಶ್ ನಲ್ಲಿ ಪ್ರಧಾನ ಭೂಮಿಕೆಯಲ್ಲಿ ಅಭಿನಯಿಸಿದರು. ಇವೆರೆಡು ಅವರಿಗೆ ಅನೇಕ ಅತ್ಯುತ್ತಮ ನಟ ಪ್ರಶಸ್ತಿಗಳನ್ನು ತಂದುಕೊಟ್ಟವು.[] ರೋಷನ್‌ , ಅವರ ಮೂರನೆಯ ಅತ್ಯುತ್ತಮ ನಟನಿಗೆ ನೀಡುವ ಫಿಲ್ಮ್ ಫೇರ್ ಪ್ರಶಸ್ತಿಯನ್ನು 2006 ರಲ್ಲಿ ಪಡೆದುಕೊಂಡರು. ಇದನ್ನು ಸಾಹಸಮಯ ಚಲನಚಿತ್ರ ಧೂಮ್ 2 ರಲ್ಲಿನ ಅವರ ಮನಮೋಹಕ ಅಭಿನಯಕ್ಕಾಗಿ ಗಳಿಸಿದರು. ತರುವಾಯ ಜೋಧಾ ಅಕ್ಬರ್ ಚಲನಚಿತ್ರದ,[] ಅವರ ಅಭಿನಯಕ್ಕಾಗಿ ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿದರು. ಈ ಚಿತ್ರಕ್ಕಾಗಿ ಗೋಲ್ಡನ್ ಮಿನ್ ಬಾರ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್(ಗೋಲ್ಡನ್ ಮಿನ್ ಬಾರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ) ನಲ್ಲಿ ಅವರ ಮೊಟ್ಟ ಮೊದಲ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡರು. ಈ ಸಾಧನೆಯು ಅವರನ್ನು ಹಿಂದಿ ಸಿನಿಮಾರಂಗದ ಸಮಕಾಲೀನ ನಾಯಕ ನಟರನ್ನಾಗಿಸಿತು.[]

ಬಯೋಗ್ರಫಿ(ಜೀವನ ಚರಿತೆ)

[ಬದಲಾಯಿಸಿ]

ಆರಂಭಿಕ ವೃತ್ತಿಜೀವನ , 1999 ರವರೆಗೆ

[ಬದಲಾಯಿಸಿ]

1980 ರ ಹೊತ್ತಿನ ಆಶಾ ಚಲನಚಿತ್ರದಲ್ಲಿ ಆರು ವರ್ಷದ ಬಾಲಕನ ಪಾತ್ರವು ರೋಷನ್‌ ಅಭಿನಯಿಸಿದ ಮೊದಲ ಚಲನಚಿತ್ರದ ಪಾತ್ರವಾಗಿದೆ. ಈ ಚಲನಚಿತ್ರದ ನೃತ್ಯದ ಸಂದರ್ಭದಲ್ಲಿ ಅವರು ಗೌರವ ನೃತ್ಯಗಾರನಾಗಿ ಕಾಣಿಸಿಕೊಂಡಿದ್ದಾರೆ. ಅನಂತರ ರೋಷನ್‌, ಆಪ್ ಕೆ ದಿವಾನೆ (1980) ಮತ್ತು ಭಗವಾನ್ ದಾದಾ (1986) ದಂತಹ ಚಿತ್ರಗಳಲ್ಲಿ ಸಣ್ಣ, ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡರು. ಇವೆರಡಲ್ಲೂ ಇವರ ತಂದೆ ರಾಕೇಶ್ ರೋಷನ್‌ ನಾಯಕ ನಟರಾಗಿ ಅಭಿನಯಿಸಿದ್ದಾರೆ. ತರುವಾಯ ಅವರ ತಂದೆಯ ಕರಣ್ ಅರ್ಜುನ್ (1995) ಮತ್ತು ಕೋಯ್ಲಾ (1997) ಚಿತ್ರಗಳ ನಿರ್ಮಾಣದಲ್ಲಿ ನೆರವಾಗುವ ಮೂಲಕ ಸಹಾಯಕ ನಿರ್ದೇಶಕರಾದರು.

ಅನಿರೀಕ್ಷಿತ ಜಯ, 2000–2002

[ಬದಲಾಯಿಸಿ]

2000 ನೆಯ ಇಸವಿಯಲ್ಲಿ ರೋಷನ್‌ ಮೊಟ್ಟ ಮೊದಲ ಬಾರಿಗೆ ಕಹೋ ನಾ... ಪ್ಯಾರ್ ಹೈ ಚಲನಚಿತ್ರದಲ್ಲಿ, ಮತ್ತೋರ್ವ ಆರಂಭಿಕ ನಟಿ ಅಮೀಶಾ ಪಟೇಲ್ ಎದುರು ನಾಯಕ ನಟನ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಲನಚಿತ್ರವನ್ನು ಅವರ ತಂದೆಯೇ ನಿರ್ದೇಶಿಸಿದ್ದು, ಇದರಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಗುವ ಮೂಲಕ 2000 ಇಸವಿಯ ಅತ್ಯಂತ ಹೆಚ್ಚು ಹಣ ಗಳಿಸಿದ ಚಿತ್ರವೆನಿಸಿತು.[] ಅಲ್ಲದೇ ಫಿಲ್ಮ್ ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ರೋಷನ್‌ ರ ಅಭಿನಯವನ್ನು ಹೆಚ್ಚಾಗಿ ಮೆಚ್ಚಿದರಲ್ಲದೇ, ಈ ಚಲನಚಿತ್ರ ರಾತ್ರೋರಾತ್ರಿ ಅವರನ್ನು ಜನಪ್ರಿಯ ತಾರೆಯನ್ನಾಗಿಸಿತು.[][][] ಅಂತಿಮವಾಗಿ ಈ ಪಾತ್ರದ ಅಭಿನಯಕ್ಕಾಗಿ ಅವರು ಫಿಲ್ಮ್ ಫೇರ್ ಅತ್ಯುತ್ತಮ ಆರಂಭಿಕ ನಟ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಎರಡನ್ನೂ ಪಡೆದುಕೊಂಡರು. ಇದು ಅತ್ಯಂತ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಬಾಲಿವುಡ್ ಚಲನಚಿತ್ರವಾಗುವ- 102 ಪ್ರಶಸ್ತಿಗಳ ಮೂಲಕ, ಇದರ ಹೆಸರು 2003 ರಲ್ಲಿ ಲಿಮ್ಕಾ ದಾಖಲೆಗಳ ಪುಸ್ತಕವನ್ನು ಸೇರಿತು.[]

ಆ ವರ್ಷದ ನಂತರ ರೋಷನ್‌ ಖಾಲೀದ್ ಮೊಹಮದ್ ರವರ ಫಿಜಾ ಚಲನಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತರೂ ಕೂಡ ಅವರ ಅಭಿನಯವನ್ನು ಪ್ರಶಂಸಿಸಲಾಯಿತು. ಅಲ್ಲದೇ ಇದು ಫಿಲ್ಮ್ ಫೇರ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ನಿಗಾಗಿರುವ ಮತ್ತೊಂದು ನಾಮನಿರ್ದೇಶನವನ್ನು ಗಳಿಸಿಕೊಟ್ಟಿತು. ಇಂಡಿಯಾFM ನಿಂದ ತರಣ್ ಆದರ್ಶ್, ರೋಷನ್ ರ ಅಭಿನಯದ ಬಗ್ಗೆ ಹೀಗೆ ಬರೆಯುತ್ತಾರೆ: "ನಿಸ್ಸಂದೇಹವಾಗಿ ಹೃತಿಕ್‌ ರೋಷನ್‌ ಈ ಚಲನಚಿತ್ರದ ಮೂಲಾಧಾರವಾಗಿದ್ದಾರೆ. ಅವರ ಆಂಗಿಕ ನಿಲುವು, ಮಾತಿನ ಶೈಲಿ, ಅಭಿವ್ಯಕ್ತಪಡಿಸುವ ರೀತಿ, ಒಟ್ಟಾಗಿ ಅವರ ಪಾತ್ರವು ಸಂಪೂರ್ಣ ಮೆಚ್ಚುಗೆಗೆ ಅರ್ಹವಾಗಿದೆ. ಈ ಚಿತ್ರದೊಂದಿಗೆ ಹೃತಿಕ್, ತಾವು ಕೇವಲ ಆಧುನಿಕ ಉತ್ಸಾಹದ, ರಭಸದ ಮತ್ತು ಬೇಡಿಕೆಯ ಲವರ್ ಬಾಯ್ (ಮಿಲ್ಸ್ ಅಂಡ್ ಬೂನ್ ನ ರೋಮಾಂಚಕ ಕಥಾನಕಗಳಿಗೆ) ಮಾತ್ರವಲ್ಲದೇ, ಅದಕ್ಕಿಂತ ಹೆಚ್ಚಿನ ಪ್ರತಿಭೆಯನ್ನೂ ಹೊಂದಿರುವುದಾಗಿ ಸಾಬೀತುಪಡಿಸಿದ್ದಾರೆ. ಇವರ ಪ್ರತಿಭೆ ಅನೇಕ ದೃಶ್ಯಗಳಲ್ಲಿ ಹೊರಬಂದಿದೆ, ಅದರಲ್ಲೂ ವಿಶೇಷವಾಗಿ ಕರಿಶ್ಮಾರೊಂದಿಗಿನ ದೃಶ್ಯಗಳಲ್ಲಿ ಕಾಣಬಹುದಾಗಿದೆ. ಫಿಜಾ ಸಂಪೂರ್ಣವಾಗಿ ಹೃತಿಕ್ ರವರಿಗೆ ಸೇರಿದ್ದು, ಅವರು ಇದನ್ನು ಬಹುಮಟ್ಟಿಗೆ ಯಶಸ್ಸಿಯ ಪ್ರಮಾಣಕ್ಕನುಗುಣವಾಗಿ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಸ್ಸಂದೇಹವಾಗಿ ಇದೊಂದು ಅದ್ಭುತ,ಪ್ರತಿಭಾಪೂರ್ಣ ಅಭಿನಯ!" ಎಂದು ಉದ್ಘರಿಸಿದ್ದಾರೆ.[೧೦]

ವರ್ಷದ ಕೊನೆಯಲ್ಲಿ ತೆರೆಕಂಡ ರೋಷನ್‌ ರ ಮಿಷನ್ ಕಾಶ್ಮೀರ್ ಚಲನಚಿತ್ರ, ಅತ್ಯಂತ ಹೆಚ್ಚು ಹಣಗಳಿಸಿದ ವರ್ಷದ ಮೂರನೆಯ ಚಿತ್ರವಾಗಿದೆ.[] ಒಬ್ಬ ವಿಮರ್ಶಕನಿಂದ, " ಭಯೋತ್ಪಾದನೆಯ ಸುಳಿಯಲ್ಲಿ ಸಿಕ್ಕ ಯುವಕನಂತೆ ಹೃತಿಕ್ ಮತ್ತೊಮ್ಮೆ ಗಂಭೀರವಾದ ಅಭಿನಯವನ್ನು ನೀಡಿದ್ದಾರೆ, ಎಂಬ ಹೊಗಳಿಕೆಯೊಂದಿಗೆ ಅವರ ಅಭಿನಯ ಮತ್ತೊಮ್ಮೆ ಮೆಚ್ಚುಗೆ ಗಳಿಸಿತು. ಇವರನ್ನು ಚಿತ್ರದ ಪೂರ್ವಾರ್ಧದಲ್ಲಿ ಸರ್ಕಾರದ ವಿರೋಧಿಯಂತೆ ಚಿತ್ರಿಸಲಾಗಿದೆ-- ಚಿತ್ರೋದ್ಯಮದಲ್ಲಿ ಇನ್ನೂ ಅರಳುತ್ತಿರುವ ಸೂಪರ್ ಸ್ಟಾರ್ ಈ ರೀತಿ ಅಭಿನಯಿಸಿದ್ದನ್ನು ನೋಡಿದರೆ ಒಬ್ಬ ಹಿರಿಯ,ವೃತ್ತಿಪರ ನಟರಿಗೂ ಕೂಡ ಇಂತಹ ದಿಟ್ಟ ಪಾತ್ರ ಕಷ್ಟಕರವಾಗಿರುತ್ತಿತ್ತು". ಈ ಎಲ್ಲಾ ಸಾಧನೆಗಳು ಚಿತ್ರೋದ್ಯಮದಲ್ಲಿ ಅವರನ್ನು ಅತ್ಯಂತ ದೊಡ್ಡ ತಾರೆಗಳಲ್ಲಿ ಒಬ್ಬರನ್ನಾಗಿಸಿದವು.[೧೧]

ಸುಭಾಷ್ ಘಾಯ್ ರ ಯಾದೇ 2001 ರಲ್ಲಿ ತೆರೆಕಂಡ ಅವರ ಮೊದಲ ಚಲನಚಿತ್ರವಾಗಿದೆ. ಅನಂತರ ಅವರು ಕರಣ್ ಜೋಹರ್ ರವರ ಭಾವಾವೇಶದ ಕಭಿ ಖುಷಿ ಕಭಿ ಗಮ್ ಚಲನಚಿತ್ರದಲ್ಲಿ ಕಾಣಿಸಿಕೊಂಡರು. ಇದು ಗಲ್ಲಾಪೆಟ್ಟಿಗೆಯಲ್ಲಿ ಅಮೋಘ ಸಾಧನೆಯನ್ನು ಕಂಡಿತು. ಅಲ್ಲದೇ ಇದು ಸಾಗರೋತ್ತರ ಪ್ರದೇಶಗಳಲ್ಲಿ ಅತ್ಯಂತ ಯಶಸ್ವಿಯಾದ ಮತ್ತು 2001 ರಲ್ಲಿ ಅತ್ಯಂತ ಹೆಚ್ಚು ಹಣ ಗಳಿಸಿದ ಚಿತ್ರವೆನಿಸಿತು.[೧೨][೧೩] ರೋಷನ್‌ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತಲ್ಲದೇ, ಅನೇಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿತು.

2002 ರೋಷನ್‌ ಗೆ ನಿಷ್ಫಲ ವರ್ಷವಾಗಿತ್ತು. ಈ ವರ್ಷದಲ್ಲಿ ತೆರೆಕಂಡ ಅವರ ಎಲ್ಲಾ ಮೂರು ಚಲನಚಿತ್ರಗಳು - ಮುಜ್ಸೆ ದೋಸ್ತಿ ಕರೋಗೆ! , ನಾ ತುಮ್ ಜಾನೋ ನಾ ಹಮ್ ಮತ್ತು ಆಪ್ ಮುಜೆ ಅಚ್ಛೆ ಲಗ್ನೆ ಲಗೇ - ಗಲ್ಲಾಪೆಟ್ಟಿಗೆಯಲ್ಲಿ ಸೋತವಲ್ಲದೇ, ಇವುಗಳನ್ನು ಯಶಸ್ವಿಯಾಗದಿರುವುದಕ್ಕಾಗಿ,ಫ್ಲಾಪ್ ಎಂದು ಪ್ರಕಟಿಸಲಾಯಿತು.[೧೪]

ಯಶಸ್ಸು, 2003–ಇಲ್ಲಿಯವರೆಗೆ

[ಬದಲಾಯಿಸಿ]

2003 ರಲ್ಲಿ, ಅವರು ವೈಜ್ಞಾನಿಕ ಕಾದಂಬರಿಯಾಧಾರಿತ ಕೋಯಿ... ಮಿಲ್ ಗಯಾ' ಎಂಬ ಚಲನಚಿತ್ರದೊಂದಿಗೆ ಮರಳಿದರು. ಈ ಸಿನಿಮಾದಲ್ಲಿ ಮಾನಸಿಕ ಅಸ್ವಸ್ಥ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.[] ಇದು ಕೂಡ ವರ್ಷದ ಅತ್ಯಂತ ಹೆಚ್ಚು ಹಣ ಗಳಿಸಿದ ಚಿತ್ರವಾಯಿತು. ಅಲ್ಲದೇ ಅವರ ಎರಡನೆಯ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಮೊದಲ ಫಿಲ್ಮ್ ಫೇರ್ ಅತ್ಯುತ್ತಮ ನಟ (ವಿಮರ್ಶಕರ) ಪ್ರಶಸ್ತಿಯನ್ನು ಒಳಗೊಂಡಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿತು.[೧೫] ತರಣ್ ಆದರ್ಶ್ ರೋಷನ್ ರ ಅಭಿನಯ ಕುರಿತು ಹೀಗೆ ಬರೆಯುತ್ತಾರೆ: "ಹೃತಿಕ್‌ ರೋಷನ್‌ ಚಿತ್ರದ ಮೇಲೆ ತಮ್ಮ ಗಾಢ ಪ್ರಭಾವ ಬೀರಿದ್ದಾರೆ, ಅಲ್ಲದೇ ಶಕ್ತಿಯುತವಾದ ಅಭಿನಯದೊಂದಿಗೆ ಚಿತ್ರವನ್ನು ಹಿಡಿದಿಟ್ಟಿದ್ದಾರೆ. ಮಾನಸಿಕ ವಿಕಲತೆ ಇರುವ ಪಾತ್ರವನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ, ಆದರೆ ಈ ನಟ, ಮೀನು ನೀರಿಗೆ ಧುಮುಕುವಂತೆ ಇದನ್ನು ತೆಗೆದುಕೊಂಡಿದ್ದಾರೆ. ಅವರು ಜಿರೋದಿಂದ ಹಿರೋ ಆಗಿ ಗೆಲ್ಲುವ ಪಾತ್ರವನ್ನು ಚೆನ್ನಾಗಿ, ಅಪವಾದವೆಂಬಂತೆ ಅಪರೂಪವಾಗಿ ನಿಭಾಯಿಸಿದ್ದಾರೆ. ಒಬ್ಬ ನಟನಾಗಿ ಹುರುಳಿರದ ಈ ಪಾತ್ರದಲ್ಲಿಯೂ ಅವರ ಈ ಅದ್ಭುತ ಅಭಿನಯದಿಂದ ಅಚ್ಚರಿಗೊಳಿಸಿದ್ದಾರೆ."[೧೬]

ಫರಾನ್ ಅಖ್ತರ್ ರ ಲಕ್ಷ್ಯ್ 2004 ರಲ್ಲಿ ತೆರೆಕಂಡ ರೋಷನ್ ರ ಒಂದೇ ಒಂದು ಚಿತ್ರವಾಗಿದೆ; ಇದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣುವಲ್ಲಿ ವಿಫಲವಾಯಿತು.[೧೭] ಅದೇನೇ ಆದರೂ ಕೂಡ ಅವರ ಅಭಿನಯವು ವಿಮರ್ಶಕರಿಂದ ಪ್ರಶಂಸಿಸಲ್ಪಟ್ಟಿತು.[೧೮]

ರೋಷನ್‌ ಸೂಪರ್ ಹಿರೋ ಚಲನಚಿತ್ರ ಕ್ರಿಶ್ ನೊಂದಿಗೆ ಮತ್ತೆ ಕಾಣಿಸಿಕೊಳ್ಳುವ ಮೊದಲು, ನಟನೆಯಿಂದ ಎರಡು ವರ್ಷಗಳ ಕಾಲ ವಿರಾಮ ತೆಗೆದುಕೊಂಡರು. ಇದು ಅವರ 2003 ರ ಕೋಯಿ... ಮಿಲ್ ಗಯಾ ಚಲನಚಿತ್ರದ ಮುಂದಿನ ಭಾಗವಾಗಿದ್ದು, 2006 ರ ಜೂನ್ ನಲ್ಲಿ ತೆರೆಕಂಡಿತು. ಇದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗುವುದರೊಂದಿಗೆ 2006 ರ ಎರಡನೆಯ ಅತ್ಯಂತ ಹೆಚ್ಚು ಹಣಗಳಿಸಿದ ಚಲನಚಿತ್ರವಾಯಿತು.[೧೯] ಸೂಪರ್ ಹಿರೋ ಪಾತ್ರದಲ್ಲಿ ಅವರ ಅಭಿನಯವನ್ನು ಮೆಚ್ಚಲಾಯಿತು. ಅಲ್ಲದೇ ಇದು ಅವರಿಗೆ ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಮತ್ತು ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕ್ಯಾಡಮಿ ಪುರಸ್ಕಾರಗಳನ್ನು ಒಳಗೊಂಡಂತೆ, ಹಲವು ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಅನೇಕ ಅತ್ಯುತ್ತಮ ನಟ ರಿಗಾಗಿ ಮೀಸಲಾದ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿತು.[] ಇಂಡಿಯಾFM ಕೆಳಕಂಡಂತೆ ಬರೆದಿದೆ: "ಹೃತಿಕ್ ಕ್ರಿಶ್ ನ ಆತ್ಮವೆಂದರೆ ಅದು ನ್ಯುನೋಕ್ತಿಯಾಗುತ್ತದೆ. ಹಾಗೆ ನೋಡಿದರೆ ಈ ನಟ ಕೋಯಿ... ಮಿಲ್ ಗಯಾ ದಲ್ಲಿ ಪಡೆದ ಎಲ್ಲಾ ಗಮನಾರ್ಹ ಪ್ರಶಸ್ತಿಗಳನ್ನು ಕ್ರಿಶ್ ನಲ್ಲಿಯೂ ಪಡೆದುಕೊಂಡರು. ದೃಢ ಆತ್ಮವಿಶ್ವಾಸದೊಂದಿಗೆ ಸಹಜ ಪ್ರತಿಭೆ ಹೊಂದಿರುವ ಮಗುವಿನ ಈ ಪಾತ್ರದಲ್ಲಿ, ಬೇರೆ ನಟರನ್ನು ನೀವು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಅವರ ನಿಲುವಂಗಿ ಮತ್ತು ಮುಖವಾಡ ಅವರನ್ನು ಅದ್ಭುತವಾಗಿ ತೋರಿದರೆ, ವಯಸ್ಸಾದ ತಂದೆಯ ಪಾತ್ರದಲ್ಲಿ ಅವರ ಅಲಂಕಾರ, ನಡಿಗೆ ಮತ್ತು ಹಾವಭಾವವನ್ನು ನೋಡಿದಲ್ಲಿ, ಭಾರತೀಯ ಚಲನಚಿತ್ರರಂಗದಲ್ಲಿರುವ ಅದ್ಭುತ ಪ್ರತಿಭೆಗಳಲ್ಲಿ ಇವರೂ ಕೂಡ ಒಬ್ಬರು ಎಂಬುದನ್ನು ನೀವೂ ಒಪ್ಪುತ್ತೀರ. ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸುವ ಅವರ ಚಲನಚಿತ್ರಗಳಲ್ಲಿ ಕ್ರಿಶ್ ಕೂಡ ಒಂದಾಗಿದೆ!"[೨೦]

ಅದೇ ವರ್ಷ ತೆರೆಕಂಡ ಇವರ ಮುಂದಿನ ಚಿತ್ರ ಧೂಮ್ 2 , 2004 ರ ಧೂಮ್ ಚಲನಚಿತ್ರದ ಮುಂದಿನ ಭಾಗವಾಗಿದೆ. ಇದರಲ್ಲಿ ಐಶ್ವರ್ಯಾ ರೈ ಬಚ್ಚನ್ ಎದುರು ನಾಯಕನ ಪಾತ್ರದಲ್ಲಿ ಅಭಿನಯಿಸಿದರು. ರೋಷನ್‌ ರ ಈ ಅಭಿನಯ ಅವರಿಗೆ ಕೇವಲ ವಿಮರ್ಶಕರ ಅಪಾರ ಮೆಚ್ಚುಗೆಯನ್ನು ಮಾತ್ರವಲ್ಲದೇ,[][೨೧] ಅವರ ಮೂರನೆಯ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಕೂಡ ಗಳಿಸಿಕೊಟ್ಟಿತು. ಇದು 2006 ರಲ್ಲಿ ಅತ್ಯಂತ ಹೆಚ್ಚು ಹಣ ಗಳಿಸಿದ ಚಲನಚಿತ್ರವಾಯಿತಲ್ಲದೇ, ಬಾಲಿವುಡ್ ನ ಬಹುಪಾಲು ಯಶಸ್ವಿ ಚಿತ್ರಗಳಲ್ಲಿ ಇದೂ ಕೂಡ ಒಂದಾಯಿತು.[೧೯][೨೨]

2008ರಲ್ಲಿ ರೋಷನ್‌, ಅಶುತೋಷ್ ಗೋವರಿಕರ್ ರ ಜೋಧಾ ಅಕ್ಬರ್ ಚಲನಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್ ಎದುರು ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅಕ್ಬರ್ ದಿ ಗ್ರೇಟ್ ಎಂಬ ಐತಿಹಾಸಿಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಲನಚಿತ್ರವು ಭಾರತ ಮತ್ತು ಹೊರದೇಶ ಎರಡೂ ಕಡೆಗಳಲ್ಲೂ ಯಶಸ್ವಿಯಾಯಿತು.[೧೩][೨೩] ಈ ಚಿತ್ರದಲ್ಲಿನ ಅಭಿನಯಕ್ಕಾಗಿ ವಿಮರ್ಶಕರು ಅವರನ್ನು ವ್ಯಾಪಕವಾಗಿ ಪ್ರಶಂಸಿಸಿದರು,[] ಅಲ್ಲದೇ ಇದು ಅವರ ನಾಲ್ಕನೆಯ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮತ್ತು ರಷ್ಯಾದ ಕಾಜಾನ್ ನಲ್ಲಿ ನಡೆದ ಗೋಲ್ಡನ್ ಮಿನ್ ಬಾರ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅವರ ಮೊದಲನೆಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು.[]

ಅನಂತರ ರೋಷನ್‌ ಜೋಯಾ ಅಖ್ತರ್ ರ ಲಕ್ ಬೈ ಚಾನ್ಸ್ (2009) ಚಲನಚಿತ್ರದಲ್ಲಿ ಗೌರವ ನಟರಾಗಿ ಕಾಣಿಸಿಕೊಂಡರು. ಇತ್ತೀಚೆಗೆ ಅವರು ಅನುರಾಗ್ ಬಸು ರವರ ಕೈಟ್ಸ್ ಚಲನಚಿತ್ರದಲ್ಲಿ ಮೆಕ್ಸಿಕನ್ ನಟಿ ಬಾರ್ಬರಾ ಮೋರಿ ಮತ್ತು ಕಂಗನಾ ರನಾವತ್ ನೊಂದಿಗೆ ಕಾಣಿಸಿಕೊಂಡರು. ಇದು 2010 ರ ಮೇ 21 ರಲ್ಲಿ ತೆರೆಕಂಡಿತು. ಅದ್ದೂರಿ ಆರಂಭ ಪಡೆದ ನಂತರ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೋತಿತಲ್ಲದೇ[೨೪] ಫ್ಲಾಪ್ ಆಯಿತು. ಆದರೂ ಕೂಡ ಚಿತ್ರದಲ್ಲಿ ರೋಷನ್‌ ರ ಅಭಿನಯವನ್ನೇ ಅತ್ಯಂತ ಹೆಚ್ಚು ಪ್ರಶಂಸಿಸಲಾಯಿತು.

2010 ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಯವರ ಗುಜಾರಿಶ್ ಚಿತ್ರದಲ್ಲಿ ಐಶ್ವರ್ಯಾ ರೈ ಎದುರು ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಸಾಧನೆ ಕಾಣಲಿಲ್ಲ. ಅಲ್ಲದೇ ಪ್ರಸ್ತುತ ಅವರು ಜೋಯಾ ಅಖ್ತರ್ ರ ಜಿಂದಗಿ ನಾ ಮಿಲೇಗಿ ದೊಬಾರ ಚಿತ್ರದಲ್ಲಿ ಕತ್ರಿನಾ ಕೈಫ್ ಎದುರು ನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.[೨೫] ರೋಷನ್‌, ಶೇಖರ್ ಕಪೂರ್ ನಿರ್ದೇಶನದ ಮುಂದಿನ ಚಿತ್ರ ಪಾನಿ ಯಲ್ಲಿ ಶ್ರಿಯಾ ಸರಾನ್ ಎದುರು ನಾಯಕನ ಪಾತ್ರದಲ್ಲಿ ಮತ್ತು 1990 ರ ಅಗ್ನಿಪಥ್ ಸಿನಿಮಾದ ರೀಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.[೨೬][೨೭]

ವೈಯಕ್ತಿಕ ಜೀವನ

[ಬದಲಾಯಿಸಿ]

thumb|ಚಿತ್ರದ ಬಲಭಾಗದಲ್ಲಿರುವ ಪತ್ನಿ ಸುಸೇನ್ ಮತ್ತು ಮಧ್ಯದಲ್ಲಿರುವ ಪತ್ನಿಯ ಸೋದರಿಯೊಡನಿರುವ ಹೃತಿಕ್. ರೋಷನ್‌, ಚಲನಚಿತ್ರ ರಂಗದಲ್ಲಿ ಹೆಸರಾಂತ ವ್ಯಕ್ತಿಗಳಾದ ಪಂಜಾಬೀ ಹಿಂದೂ ಕುಟುಂಬದ ಪುತ್ರರಾಗಿ ಮುಂಬಯಿನಲ್ಲಿ ಜನಿಸಿದರು. ಚಲನಚಿತ್ರ ನಿರ್ದೇಶಕರಾದ ಇವರ ತಂದೆ ರಾಕೇಶ್ ರೋಷನ್‌, ಸಂಗೀತ ನಿರ್ದೇಶಕ ರೋಷನ್‌ ರವರ ಪುತ್ರರಾಗಿದ್ದಾರೆ. ಇವರ ತಾಯಿಯಾದ ಪಿಂಕಿ, ನಿರ್ಮಾಪಕ ಮತ್ತು ನಿರ್ದೇಶಕ ಜೆ. ಓಂ ಪ್ರಕಾಶ್ ರವರ ಪುತ್ರಿಯಾಗಿದ್ದಾರೆ. ಹೃತಿಕ್ ಗೆ, ಸುನೈನಾ ಎಂಬ ಹಿರಿಯ ಸಹೋದರಿ ಇದ್ದಾರೆ. ಇವರ ಚಿಕ್ಕಪ್ಪ ರಾಜೇಶ್ ರೋಷನ್‌ ಪ್ರಸಿದ್ಧ ಸಂಗೀತ ನಿರ್ದೇಶಕರಾಗಿದ್ದಾರೆ. ಬಾಲ್ಯದಲ್ಲಿ ರೋಷನ್‌ ಬಾಂಬೆ ಸ್ಕಾಟಿಷ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದರು.[೨೮] ಅನಂತರ ಅವರು ಸಿಡನ್ ಹ್ಯಾಮ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸುವುದರೊಂದಿಗೆ ವಾಣಿಜ್ಯದಲ್ಲಿ ಪದವಿ ಗಳಿಸಿದರು.[೨೯]

ಒಂದು ಸಂದರ್ಶನದ ಸಂದರ್ಭದಲ್ಲಿ ಹೃತಿಕ್, ಬಿಕ್ಕಲುತನದ ಕಾರಣ ಬಾಲ್ಯದಲ್ಲಿ ಅವರಿಗೆ ಮಾನಸಿಕವಾಗಿ ಘಾಸಿಯುಂಟಾಗಿತ್ತು ಎಂದು ಹೇಳಿದ್ದಾರೆ. ಆರು ವರ್ಷದ ವಯಸ್ಸಿನಲ್ಲಿ ಕಾಣಿಸಿಕೊಂಡ ಈ ನ್ಯೂನತೆ ಇಂದೂ ಕೂಡ ಅವರಿಗೆ ಉಪದ್ರವವನ್ನುಂಟುಮಾಡುತ್ತಿದೆ. "ಶಾಲೆಯಲ್ಲಿ ಮೌಖಿಕ ಪರೀಕ್ಷೆ ಇದ್ದರೆ, ಅಂದು ನಾನು ಶಾಲೆಗೆ ಹೋಗುತ್ತಿರಲಿಲ್ಲ, ಉದ್ದೇಶಪೂರ್ವಕವಾಗಿಯೇ ಹುಷಾರ್ ತಪ್ಪುತ್ತಿದ್ದೆ, ನನ್ನ ಕೈ ಅನ್ನು ಮುರಿದುಕೊಳ್ಳುತ್ತಿದ್ದೆ, ಉಳುಕಿಸಿಕೊಳ್ಳುತ್ತಿದೆ" ಎಂದು ನಟ ಹೃತಿಕ್ ಹೇಳಿಕೊಂಡಿದ್ದಾರೆ.ಪ್ರತಿ ದಿನ ವಾಕ್ ಚಿಕಿತ್ಸೆಗಳನ್ನು ಅಭ್ಯಾಸಮಾಡಲು ಪ್ರಾರಂಭಿಸಿದ ನಂತರ ಕ್ರಮೇಣ ಎಲ್ಲವೂ ಸರಿಯಾದವು, ಎಂದು ಅವರು ಹೇಳಿದರು.[೩೦]

ರೋಷನ್‌ ಸುಸೇನ್ ರೋಷನ್ ರನ್ನು ಮದುವೆಯಾಗಿದ್ದು, ಇವರು ಸುಸೇನ್ ರೋಷನ್‌'ಸ್ ಹೌಸ್ ಆಫ್ ಡಿಸೈನ್ ನ ಒಡತಿ ಮತ್ತು ನಟ ಸಂಜಯ್ ಖಾನ್ ರ ಪುತ್ರಿಯಾಗಿದ್ದಾರೆ. ಇವರಿಗೆ ಇಬ್ಬರು ಪುತ್ರರಿದ್ದು, ಅವರಲ್ಲಿ ರೆಹಾನ್ 2006 ರಲ್ಲಿ ಮತ್ತು ರಿಧಾನ್ 2008ರಲ್ಲಿ ಜನಿಸಿದರು.[೩೧][೩೨] ರೋಷನ್‌ ಅವರ ಬಲಗೈಯಲ್ಲಿ ಎರಡು ಹೆಬ್ಬೆರೆಳುಗಳಿವೆ.[೩೩] ಸಾಮಾನ್ಯವಾಗಿ ಅದನ್ನು ಅವರ ಸಿನಿಮಾಗಳಲ್ಲಿ ತೋರದಂತೆ ನೋಡಿಕೊಂಡರೂ ಕೂಡ ಇದು ಕೋಯಿ... ಮಿಲ್ ಗಯಾ ಚಿತ್ರದಲ್ಲಿ ಕಾಣಿಸಿಕೊಂಡಿತು. ಅಲ್ಲದೇ ಹೊರಗ್ರಹದಿಂದ ಬಂದ ಪ್ರಾಣಿಗೂ ಎರಡು ಹೆಬ್ಬೆರೆಳುಗಳನ್ನು ಸೃಷ್ಟಿಸುವ ಮೂಲಕ ಇದನ್ನು ದೃಶ್ಯದ ಚಿಕ್ಕ ವಸ್ತುವಾಗಿ ಬಳಸಲಾಯಿತು.[೩೪]

ಪ್ರಶಸ್ತಿಗಳು

[ಬದಲಾಯಿಸಿ]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ಇತರ ಟಿಪ್ಪಣಿಗಳು
1980 ಆಶಾ ಬಾಲ ನಟನಾಗಿ
ಆಪ್ ಕೆ ದೀವಾನೆ ಬಾಲ ನಟನಾಗಿ
1986 ಭಗ್ವಾನ್ ದಾದಾ ಗೋವಿಂದ (ಬಾಲ ನಟನಾಗಿ)
2000 ಕಹೋ ನಾ... ಪ್ಯಾರ್ ಹೈ ರೋಹಿತ್/ ರಾಜ್ ಚೋಪ್ರಾ ಎರಡು ಪ್ರಶಸ್ತಿಗಳ-ವಿಜೇತ, ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಮತ್ತು
ಫಿಲ್ಮ್‌ಫೇರ್‌ ಅತ್ಯುತ್ತಮ ಆರಂಭಿಕ ನಟ ಪ್ರಶಸ್ತಿ
ಫಿಜಾ ಅಮನ್ ಇಕ್ರಾಮುಲ್ಲಾ ನಾಮನಿರ್ದೇಶಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ಮಿಷನ್ ಕಾಶ್ಮೀರ್ ಅಲ್ತಾಫ್ ಖಾನ್
2001 ಯಾದೇ ರೋನಿತ್ ಮಲ್ಹೋತ್ರ
ಕಭಿ ಖುಷಿ ಕಭಿ ಗಮ್ ರೋಹನ್ ರಾಯ್ ಚಂದ್ ನಾಮನಿರ್ದೇಶಿತ, ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ
2002 ಆಪ್ ಮುಜೆ ಅಚ್ಛೆ ಲಗ್ನೆ ಲಗೇ ರೋಹಿತ್
ನ ತುಮ್ ಜಾನೋ ನಾ ಹಮ್ (2002) ರಾಹುಲ್ ಶರ್ಮಾ
ಮುಜ್ಸೆ ದೋಸ್ತಿ ಕರೋಗೆ! ರಾಜ್ ಕನ್ನಾ
2003 ಮೈ ಪ್ರೇಂ ಕಿ ದಿವಾನಿ ಹ್ಞೂ ಪ್ರೇಮ್ ಕಿಶನ್ ಮಾಥೂರ್
ಕೋಯಿ... ಮಿಲ್ ಗಯಾ ರೋಹಿತ್ ಮೆಹ್ರಾ ಎರಡು ಪ್ರಶಸ್ತಿಗಳ-ವಿಜೇತ, ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಮತ್ತು
ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್‌ ವಿಮರ್ಶಕರ ಪ್ರಶಸ್ತಿ
2004 ಲಕ್ಷ್ಯ್ ಕರಣ್ ಷೆರ್ಗಿಲ್ ನಾಮನಿರ್ದೇಶಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
2006 ಕ್ರಿಶ್ ಕೃಷ್ಣ ಮೆಹ್ರಾ (ಕ್ರಿಶ್)/
ರೋಹಿತ್ ಮೆಹ್ರಾ
ನಾಮನಿರ್ದೇಶಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ಧೂಮ್ 2 ಆರ್ಯನ್ ವಿಜೇತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ಐ ಸೀ ಯು ಸುಬಹ್‌ ಸುಬಹ್‌ ಎಂಬ ಹಾಡಿನಲ್ಲಿ ಗೌರವ ನಟರಾಗಿ
2007 ಓಂ ಶಾಂತಿ ಓಂ ಸ್ವತಃ ಅವರೇ ಗೌರವ ವಿಶೇಷ ನಟರಾಗಿ
2008 ಜೋಧಾ ಅಕ್ಬರ್ ಜಲಾಲುದ್ಧೀನ್ ಮೊಹಮ್ಮದ್
ಅಕ್ಬರ್‌
ವಿಜೇತ, ಗೋಲ್ಡನ್ ಮಿನ್ ಬಾರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ
ವಿಜೇತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ಕ್ರೇಜಿ 4 ಶೀರ್ಷಿಕೆ ಗೀತೆಯಲ್ಲಿ ಗೌರವ ನಟರಾಗಿ ಅಭಿನಯಿಸಿದ್ದಾರೆ.
2009 ಲಕ್‌ ಬೈ ಚಾನ್ಸ್‌ ಜಾಫರ್ ಖಾನ್ ಗೌರವ ನಟರಾಗಿ
2010 ಕೈಟ್ಸ್ ಜೈ ಜೈ ಸಿಂಘಾನಿಯ "ಕೈಟ್ಸ್ ಇನ್ ದಿ ಸ್ಕೈ" ಹಾಡಿಗೆ ಹಿನ್ನೆಲೆ ಗಾಯಕ ಕೂಡ
ಗುಜಾರಿಶ್ ಈಥನ್ ಮ್ಯಾಸ್ ಕರನ್ಯಾಸ್
2011 ಜಿಂದಗಿ ನಾ ಮಿಲೆಗಿ ದೊಬಾರ ಅರ್ಜುನ್ ಸಲೂಜಾ
ಡಾನ್ 2 ಡಾನ್ ವಿಶೇಷ ಪಾತ್ರ
2012 ಅಗ್ನಿಪಥ್ ವಿಜಯ್ ದೀನನಾಥ್ ಚೌಹಾಣ್

ಇವನ್ನೂ ಗಮನಿಸಿ

[ಬದಲಾಯಿಸಿ]
  • ಭಾರತೀಯ ನಟರ ಪಟ್ಟಿ

ಉಲ್ಲೇಖಗಳು

[ಬದಲಾಯಿಸಿ]
  1. "Hrithik Roshan overview and filmography". IMDb. Retrieved 2009-04-20.
  2. ೨.೦ ೨.೧ ೨.೨ ೨.೩ "Hrithik the super hero…". Indiatimes Movies. 3 March 2009. Archived from the original on 2009-09-04. Retrieved 2009-08-15. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)
  3. ೩.೦ ೩.೧ "Jodhaa Akbar, Hrithik win awards at Golden Minbar Film Festival in Russia". Bollywood Hungama. 23 October 2008. {{cite web}}: Text "2009-01-31" ignored (help)
  4. N, Patcy (19 December 2006). "Mr Talented". Rediff.com. Retrieved 2009-05-08.
  5. ೫.೦ ೫.೧ "Box Office 2000". Archived from the original on 2012-07-07. Retrieved 2009-03-04.
  6. Rajendran, Girija (18 August 2000). "A perfect professional has come to stay". Chennai, India: ದಿ ಹಿಂದೂ. Archived from the original on 2011-06-29. Retrieved 2009-05-08. {{cite news}}: Italic or bold markup not allowed in: |publisher= (help)
  7. Mitlal, Madhur (7 January 2001). "A year of surprises and shocks". The Tribune. Retrieved 2009-08-15. {{cite web}}: Italic or bold markup not allowed in: |publisher= (help)
  8. ೮.೦ ೮.೧ Verma, Sukanya (15 December 2003). "Bollywood's top 5, 2003: Hrithik Roshan". Rediff.com. Retrieved 2009-05-08.
  9. "2003 tidbits". Archived from the original on 2007-09-29. Retrieved 2007-02-13. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)
  10. "Fiza: Movie Review". Retrieved 2000-12-15. {{cite news}}: Check date values in: |accessdate= (help)
  11. "Top Actors". Archived from the original on 2012-07-07. Retrieved 2009-03-04.
  12. "Box Office 2001". Archived from the original on 2012-07-12. Retrieved 2009-03-04.
  13. ೧೩.೦ ೧೩.೧ "Overseas Earnings (Figures in Ind Rs)". Archived from the original on 2012-12-04. Retrieved 2009-03-04.
  14. "Box Office 2002". Archived from the original on 2012-07-08. Retrieved 2009-03-04.
  15. "Box Office 2003". Archived from the original on 2012-07-09. Retrieved 2009-03-04.
  16. "Koi... Mil Gaya: Movie Review". Retrieved 2003-08-08.
  17. "Box Office 2004". Archived from the original on 2012-05-24. Retrieved 2009-03-04.
  18. "Lakshya: Movie Review". Retrieved 2004-06-18.
  19. ೧೯.೦ ೧೯.೧ "Box Office 2006". Archived from the original on 2012-06-30. Retrieved 2009-03-04.
  20. "Krrish: Movie Review". Retrieved 2006-06-22.
  21. "Dhoom 2: Movie Review". Retrieved 2006-11-24.
  22. "All Time Earners Inflation Adjusted". Archived from the original on 2012-07-07. Retrieved 2009-03-04.
  23. "Box Office 2008". Archived from the original on 2012-05-25. Retrieved 2009-03-04.
  24. http://economictimes.indiatimes.com/features/the-sunday-et/backpage/Kites-grosses-Rs-21-crore-on-opening-day/articleshow/5963726.cmsfrom=RHS. {{cite news}}: Missing or empty |title= (help)
  25. http://ibnlive.in.com/news/hrithikkatrina-in-zoya-akhtars-film/114110-8-66.html?from=RHS
  26. http://sify.com/movies/bollywood/fullstory.php?id=14939922
  27. Iyer, Meena (2010-09-20). "Hrithik to do the fire walk!". The Times Of India.
  28. "Chat". Archived from the original on 2016-03-03. Retrieved 2011-01-13.
  29. "Sydenham College". Archived from the original on 2011-07-20. Retrieved 2011-01-13. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  30. "Stammering made my childhood hell: Hrithik". indianexpress. 2009-09-24. Retrieved 22 december 2010. {{cite web}}: Check date values in: |accessdate= (help)
  31. "Another son for Hrithik and Suzanne". Rediff.com. Retrieved 1 May 2008.
  32. "Hrithik's son to be named Hridhaan". IANS, DNA News. Retrieved 23 March 2006.
  33. Ahmed, Afsana (2004-06-01). "'Impossible dreams can come true'". ಟೈಮ್ಸ್ ಆಫ್ ಇಂಡಿಯ. Retrieved 2009-10-18.
  34. "'Koi... Mil Gaya'". mjsimpson. Archived from the original on 2010-01-06. Retrieved 2010-09-09. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)


ಬಾಹ್ಯ ಕೊಂಡಿಗಳು

[ಬದಲಾಯಿಸಿ]