ಜೋಧಾ ಅಕ್ಬರ್
This article has an unclear citation style.(September 2009) |
Jodhaa Akbar | |
---|---|
ಚಿತ್ರ:Jodhaaakbar poster.jpg | |
ನಿರ್ದೇಶನ | Ashutosh Gowariker |
ನಿರ್ಮಾಪಕ | Ronnie Screwvala Ashutosh Gowariker |
ಲೇಖಕ | Haidar Ali Ashutosh Gowariker |
ಪಾತ್ರವರ್ಗ | Hrithik Roshan Aishwarya Rai-Bachchan Kulbhushan Kharbanda Sonu Sood Ila Arun |
ಸಂಗೀತ | A. R. Rahman |
ಛಾಯಾಗ್ರಹಣ | Kiran Deohans |
ಸಂಕಲನ | Ballu Saluja |
ವಿತರಕರು | UTV Motion Pictures |
ಬಿಡುಗಡೆಯಾಗಿದ್ದು | February 15, 2008 |
ಅವಧಿ | 213 minutes |
ದೇಶ | India |
ಭಾಷೆ | ಹಿಂದಿ / Urdu |
ಬಂಡವಾಳ | Rs 400,000,000 (estimated)[೧] |
ಬಾಕ್ಸ್ ಆಫೀಸ್ | Rs 590,300,000 (estimated)[೨] $ 26,845,090 (worldwide)[೩] |
ಜೋಧಾ-ಅಕ್ಬರ್ (ಹಿಂದಿ: जोधा-अकबर, ಉರ್ದು: جودھا اکبر) ಫೆಬ್ರವರಿ 15, 2008ರಂದು ಬಿಡುಗಡೆಯಾದ ಐತಿಹಾಸಿಕ ಪ್ರೇಮ ಕಥಾನಕವುಳ್ಳ ಭಾರತದ ಮಹೋನ್ನತ ಚಿತ್ರ[೪].
ಅಕ್ಯಾಡೆಮಿ ಪ್ರಶಸ್ತಿ(ಆಸ್ಕರ್ ಪ್ರಶಸ್ತಿ)ಗೆ ನಾಮನಿರ್ದೇಶನಗೊಂಡಿದ್ದ ಲಗಾನ್ (2001) ಚಿತ್ರದ ನಿರ್ದೇಶಕರಾದ ಭಾರತದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ಆಶುತೋಷ್ ಗೋವಾರಿಕರ್ ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ತಾರೆಯರಾದ ಹೃತಿಕ್ ರೋಷನ್ ಮತ್ತು ಐಶ್ವರ್ಯರೈ ಬಚ್ಚನ್ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅಬೀರ್ ಅಬ್ರಾರ್ ಎಂಬ ಹೊಸಮುಖದ ಪರಿಚಯವಿದೆ. ವ್ಯಾಪಕ ಸಂಶೋಧನೆ ಮಾಡಿ ಈ ಚಿತ್ರದ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರ ಮೊದಲ ಚಿತ್ರೀಕರಣ ಆರಂಭವಾಗಿದ್ದು, ಕರ್ಜಾತ್ ನಗರದಲ್ಲಿ.[೫]
ಮೊಘಲ್ ಸಾಮ್ರಾಜ್ಯದ ಮುಸ್ಲಿಂ ಮಹಾ ಚಕ್ರವರ್ತಿ ಅಕ್ಬರ್ ಮತ್ತು ಇವನ ಹಿಂದೂ ಪತ್ನಿ ಜೋಧಾಬಾಯಿ ಇವರ ನಡುವಿನ ಪ್ರಣಯದ ಸುತ್ತ ಈ ಚಿತ್ರ ಕೇಂದ್ರೀಕೃತವಾಗಿದೆ. ಇದರಲ್ಲಿ ಚಕ್ರವರ್ತಿ ಅಕ್ಬರನ ಪಾತ್ರವನ್ನು ಹೃತಿಕ್ ರೋಷನ್ ಹಾಗೂ ಜೋಧಾಬಾಯಿ ಪಾತ್ರವನ್ನು ಐಶ್ವರ್ಯರೈ ಬಚ್ಚನ್ ನಿರ್ವಹಿಸಿದ್ದಾರೆ. ಈ ಚಿತ್ರದ ಸಂಗೀತವನ್ನು ಶ್ರೇಷ್ಠ ಸಂಗೀತ ನಿರ್ದೇಶಕ A. R. ರೆಹಮಾನ್ ಸಂಯೋಜಿಸಿದ್ದಾರೆ. ಚಿತ್ರದ ಧ್ವನಿಸುರುಳಿ ಜನವರಿ 19, 2008ರಂದು ಬಿಡುಗಡೆಯಾಯಿತು.[೬] ಈ ಚಿತ್ರ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಬಾಚಿಕೊಂಡಿದೆ. ಸಾವೋ ಪೌಲೋ ಅಂತರರಾಷ್ಟ್ರೀಯ ಚಿತ್ರೋತ್ಸವ[೭] ದಲ್ಲಿ ಶ್ರೇಷ್ಠ ವಿದೇಶಿ ಚಿತ್ರಕ್ಕೆ ನೀಡಲಾಗುವ ಆಡಿಯನ್ಸ್ ಪ್ರಶಸ್ತಿ (=ವೀಕ್ಷಕ ಪ್ರಶಸ್ತಿ) ದೊರೆತಿದೆ; ಗೋಲ್ಡನ್ ಮಿನ್‌ಬಾರ್ ಅಂತರರಾಷ್ಟ್ರೀಯ ಚಿತ್ರೋತ್ಸವ[೮] ದಲ್ಲಿ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ; ಏಳು ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳುಗಳು ಇದರ ಮಡಿಲಿಗೆ ಬಿದ್ದಿವೆ; ಐದು ಫಿಲ್ಮ್‌ಫೇರ್ ಪ್ರಶಸ್ತಿಸ್ ಇದರ ಪಾಲಾಗಿವೆ; ಇವುಗಳ ಜೊತೆಗೆ 3ನೇ ಏಷಿಯನ್ ಫಿಲ್ಮ್ ಅವಾರ್ಡ್ಸ್[೯] ಗೆ ಇದು ಎರಡು ಬಾರಿ ನಾಮನಿರ್ದೇಶನಗೊಂಡಿದೆ. ದಿ ಚಾರ್ಲೋಟ್ ಅಬ್ಸರ್ವರ್ ಎಂಬ ಪತ್ರಿಕೆ 2008ರಲ್ಲಿ ವಿಶ್ವದಾದ್ಯಂತ ಬಿಡುಗಡೆ ಮಾಡಿದ ಟಾಪ್ ಟೆನ್ ಚಿತ್ರಗಳ ಪಟ್ಟಿಯಲ್ಲಿ ಜೋಧಾ ಅಕ್ಬರ್ 2ನೇ ಸ್ಥಾನದಲ್ಲಿದೆ.[೧೦]
ಕಥೆಯ ಸಂಕ್ಷಿಪ್ತ ವಿವರಣೆ
[ಬದಲಾಯಿಸಿ]ಜೋಧಾ ಅಕ್ಬರ್- ಇದು ಹದಿನಾರನೇ ಶತಮಾನದ ಒಂದು ಪ್ರೇಮ ಕಥೆ. ರಾಜಕೀಯ ಲಾಭಕ್ಕಾಗಿ ಜರುಗಿದ ಮದುವೆ ಮುಂದೆ ಮೊಘಲ್ ಚಕ್ರವತಿ ಅಕ್ಬರ್ ಮತ್ತು ರಜಪೂತ ರಾಣಿ ಜೋಧಾಳ ನಡುವಿನ ಅಮರ ಪ್ರೇಮವಾಗಿ ಬೆಳೆಯುವುದೇ ಈ ಕಥೆಯ ಜೀವಾಳ.
ರಾಜಕೀಯ ಯಶಸ್ಸಿಗೆ ಯಾವುದೇ ಎಲ್ಲೆಯಿಲ್ಲ ಎಂಬುದು ಚಕ್ರವರ್ತಿ ಅಕ್ಬರ್‌ಗೆ (ಹೃತಿಕ್ ರೋಷನ್) ತಿಳಿದಿತ್ತು. ಸುರಕ್ಷಿತವಾದ ಹಿಂದೂ ಕುಷ್ ಪರ್ವತ ಶ್ರೇಣಿಯನ್ನು ವಶಪಡಿಸಿಕೊಂಡ ನಂತರ ಅವನು ದಂಡೆತ್ತಿ ಹೋಗಿ ಸುತ್ತಮುತ್ತಲ ರಾಜರ ವಿರುದ್ಧ ಗೆಲುವು ಸಾಧಿಸುತ್ತಾ ಆಫ್ಘಾನಿಸ್ತಾನದಿಂದ ಬಂಗಾಳಕೊಲ್ಲಿಯವರೆಗೆ ಮತ್ತು ಹಿಮಾಯಲಯದಿಂದ ನರ್ಮದಾ ನದಿಯವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ರಾಜತಂತ್ರ, ಬೆದರಿಕೆ ಮತ್ತು ಪಶುಬಲ ಇವೆಲ್ಲವುಗಳು ತೀಕ್ಷ್ಣವಾಗಿ ಸಮ್ಮಿಶ್ರಣಗೊಂಡ ಚಾತುರ್ಯದಿಂದ ಅಕ್ಬರ್ ರಜಪೂತರ ರಾಜನಿಷ್ಠೆಯನ್ನು(=ಸ್ವಾಮಿನಿಷ್ಠೆಯನ್ನು) ಗಳಿಸಿದನು. ಅದರೆ ಈ ರಾಜನಿಷ್ಠೆ ಸಾರ್ವತ್ರಿಕವಾಗಿರಲಿಲ್ಲ. ಮಹಾರಾಣ ಪ್ರತಾಪ್‌ಮತ್ತು ಇತರೆ ಹಲವು ರಜಪೂತರು ಅಕ್ಬರ್‌ನನ್ನು ಒಬ್ಬ ವಿದೇಶಿ ಆಕ್ರಮಣಕಾರ ಎಂದು ಯಾವಾಗಲೂ ಪರಿಗಣಿಸಿದ್ದರು. ತಮ್ಮ ಪುತ್ರಿಯರನ್ನು ಮೊಘಲರಿಗೆ ಕೊಟ್ಟಿರುವ ಹಾಗೂ ಕೊಡದಿರುವ ರಜಪೂತ ಕುಟುಂಬಗಳ ನಡುವಿನ ಅಂತರ್ವಿವಾಹಗಳನ್ನು ಮಹಾರಾಣ ಪ್ರತಾಪ್ ನಿಷೇಧಿಸಿದ. ರಜಪೂತರೊಂದಿಗಿನ ತನ್ನ ಸಂಬಂಧಗಳನ್ನು ದೃಢಗೊಳಿಸಲು ಅಕ್ಬರ್‌ನು ಜೋಧಾ (ಐಶ್ವರ್ಯರೈ) ಎಂಬ ಚುರುಕಿನ ರಜಪೂತ ರಾಜಕುಮಾರಿಯನ್ನು ವಿವಾಹವಾದಾಗ, ತಾನು ನೈಜ ಪ್ರೇಮವೆಂಬ ಹೊಸ ಪಯಣವನ್ನು ಆರಂಭಿಸಲಿರುವುದರ ಕುರಿತು ಆತನಿಗೆ ಅರಿವಿರಲಿಲ್ಲ.
ಈ ಮೈತ್ರಿಯ ವಿವಾಹದಲ್ಲಿ ತನ್ನನ್ನು ಕೇವಲ ರಾಜಕೀಯ ದಾಳದ ರೂಪದಲ್ಲಿ ಬಳಸಿಕೊಳ್ಳಲಾಯಿತೆಂದು ಅಮೆರ್‌ನ ರಾಜ ಭರ್ಮಲ್‌ನ ಮಗಳಾದ ಜೋಧಾ ಅಸಮಾಧಾನಗೊಂಡಳು. ಹಾಗಾಗಿ, ಕೇವಲ ಯುದ್ಧಗಳಲ್ಲಿ ಗೆಲ್ಲುವುದಕ್ಕಿಂತಲೂ ಹೆಚ್ಚಾಗಿ, ಜೋಧಾಳ (ತೀವ್ರ ಅಸಮಾಧಾನತೆ ಮತ್ತು ಪೂರ್ವಾಗ್ರಹಗಳನ್ನು ಮುಚ್ಚಿಟ್ಟ) ಪ್ರೀತಿಯನ್ನು ಸಂಪಾದಿಸುವುದು ಅಕ್ಬರ್‌ನ ಮುಂದಿದ್ದ ಸವಾಲಾಗಿತ್ತು. ಜೋಧಾ-ಅಕ್ಬರ್ ಚಿತ್ರವೇ ಇವರಿಬ್ಬರ ಅಪ್ರಕಟಿತ ಪ್ರೇಮದ ಕಥೆ.[೧೧]
ಐತಿಹಾಸಿಕ ನಿಖರತೆ
[ಬದಲಾಯಿಸಿ]ಲ.[೧೨]
ಮೊಘಲರ ಆಳ್ವಿಕೆಯ ಕಾಲದಲ್ಲಿ ಅಕ್ಬರನ ರಜಪೂತ ಪತ್ನಿ ಎಂದಿಗೂ ”ಜೋಧಾಭಾಯಿ" ಎಂದು ಹೆಸರಾಗಿರಲಿಲ್ಲ ಎಂದು ಹಲವು ಇತಿಹಾಸ ತಜ್ಞರು ವಾದಿಸಿದ್ದಾರೆ.
ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಇತಿಹಾಸ ತಜ್ಞರಾದ ಪ್ರೊಫೆಸರ್ ಶಿರಿನ್ ಮೂಸ್ವಿ ಅಕ್ಬರ್‌ನಾಮಾ(ಸ್ವತಃ ಅಕ್ಬರನೇ ಬರೆಸಿದ ಅಕ್ಬರನ ಜೀವನಚರಿತ್ರೆ) ಆಗಲಿ ಅಥವಾ ಆ ಕಾಲದ ಯಾವುದೇ ಐತಿಹಾಸಿಕ ದಾಖಲೆಗಳಾಗಲೀ ಅವಳನ್ನು ಜೋಧಾಬಾಯಿ ಎಂದು ಉಲ್ಲೇಖಿಸಿಲ್ಲ ಎಂದು ಹೇಳುತ್ತಾರೆ.[೧೩] ಮೂಸ್ವಿ ಉಲ್ಲೇಖಿಸುವ ಪ್ರಕಾರ, ಅಕ್ಬರನ ಹೆಂಡತಿಯನ್ನು ಸೂಚಿಸಲು "ಜೋಧಾಬಾಯಿ" ಎನ್ನುವ ಹೆಸರು ಮೊದಲು ಬಳಕೆಯಾಗಿದ್ದು 18 ಮತ್ತು 19ನೇ ಶತಮಾನದ ಐತಿಹಾಸಿಕ ಬರಹಗಳಲ್ಲಿ.[೧೩] ತುಝ್ಕ್-ಎ-ಜಹಾಂಗಿರಿಯಲ್ಲಿ ಇವಳನ್ನು ಮರಿಯಮ್ ಝಮಾನಿ ಎಂದು ಉಲ್ಲೇಖಿಸಲಾಗಿದೆ.[೧೩]
'ಜೋಧಾ' ಎನ್ನುವ ಹೆಸರು ಮೊಟ್ಟಮೊದಲ ಬಾರಿಗೆ ಲೆಫ್ಟಿನೆಂಟ್ ಕಲೋನೆಲ್ ಜೇಮ್ಸ್ ಟೋಡ್ ಎಂಬುವವರ ಅನಲ್ಸ್ ಅಂಡ್ ಆಂಟಿಕ್ವಿಟೀಸ್ ಆಫ್ ರಾಜಾಸ್ಥಾನ್ ಎಂಬ ಕೃತಿಯಲ್ಲಿ ಬಳಕೆಯಾಗಿದೆ ಎಂದು ಪಟನಾದ ಖುದಾ ಬಕ್ಷ್ ಓರಿಯಂಟಲ್ ಲೈಬ್ರರಿಯ ನಿರ್ದೇಶಕರಾದ ಇಮ್ತಿಯಾಜ್ ಅಹ್ಮದ್ ಹೇಳುತ್ತಾರೆ. ಅಹ್ಮದ್ ಅವರ ಪ್ರಕಾರ ಟೋಡ್ ವೃತ್ತಿಪರ ಇತಿಹಾಸ ತಜ್ಞರಾಗಿರಲಿಲ್ಲ.[೧೪] N R ಫಾರೂಖಿ ಹೇಳುವಂತೆ, ಜೋಧಾಬಾಯಿ ಎಂಬ ಹೆಸರು ಅಕ್ಬರನ ರಜಪೂತ ರಾಣಿಯದ್ದಲ್ಲ; ಇದು ಜಹಾಂಗೀರನ ರಜಪೂತ ಪತ್ನಿಯದ್ದಾಗಿತ್ತು.[೧೫]
ಆಶುತೋಷ್ ಗೊವಾರಿಕರ್ ಅವರ ಪ್ರತಿಕ್ರಿಯೆ ಹೀಗಿತ್ತು,
“ | While making the film I did my best to go by the book. I consulted the best historians and went through the most rigorous research. And there are different names used for Akbar's wife, Jodhaa being one of them. In fact, there's a disclaimer about the Rajput queen's name at the beginning of the film. But to see that, the protesters have to see the film. | ” |
ಪ್ರತಿಭಟನೆಗಳು ಮತ್ತು ಕಾನೂನು ವಿವಾದಗಳು
[ಬದಲಾಯಿಸಿ]ಹಾದಿ ತಪ್ಪಿಸುವ, ರಜಪೂತರ ಇತಿಹಾಸವನ್ನು ಮಿತಿಗೊಳಿಸಿಸುವ, ಅವರನ್ನು ಅನರ್ಥಕಾರಿಯೆಂಬತೆ ಚಿತ್ರಿಸಿ ಬಲಿಪಶುಗಳನ್ನಾಗಿಸಿದ ರಾಜಕೀಯ ಪ್ರೇರಿತ ಐತಿಹಾಸಿಕ ಪರಿಷ್ಕರಣಾವಾದದಂತೆ ರಜಪೂತ ಜನಾಂಗವನ್ನು ಈ ಚಲನಚಿತ್ರದಲ್ಲಿ ಚಿತ್ರಿಸಲಾಗಿದೆ ಎಂದು ರಜಪೂತ ಸಮುದಾಯ ಟೀಕಿಸಿದೆ. http://www.ibosnetwork.com/newsmanager/templates/template1.aspx?articleid=21147&zoneid=4. ರಜಪೂತ ಸಮುದಾಯ ಕೆಲವು ರಾಜ್ಯಗಳಲ್ಲಿ ಈ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿತು. ಅಲ್ಲದೆ ಉತ್ತರಪ್ರದೇಶ, ರಾಜಾಸ್ಥಾನ, ಹರಿಯಾಣ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಇದನ್ನು ನಿಷೇಧಿಸಲಾಗಿತ್ತು. ನಿಷೇಧವನ್ನು ವಿರೋಧಿಸಿ ಚಿತ್ರದ ನಿರ್ಮಾಪಕರು ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.[೧೬][೧೭] [೧೮]
ಪಾತ್ರವರ್ಗ
[ಬದಲಾಯಿಸಿ]ಚಿತ್ರತಂಡ
[ಬದಲಾಯಿಸಿ]- ಕಥೆ : ಹೈದರ್ ಅಲಿ
- ನಿರೂಪಣೆ : ಹೈದರ್ ಅಲಿ ಮತ್ತು ಆಶುತೋಷ್ ಗೋವಾರಿಕರ್
- ಸಂಭಾಷಣೆ : K.P.ಸಕ್ಸೇನ
- ಪ್ರಸಾದನ : ಜೇಮೀ ವಿಲ್ಸನ್
- ನಿರ್ಮಾಣ ವಿನ್ಯಾಸ : ನಿತಿನ್ ಚಂದ್ರಕಾಂತ್ ದೇಸಾಯಿ
- ದೃಶ್ಯ ವೈಭವ : ಪಂಕಜ್ ಖಾಂದ್‌ಪುರ್(ಟಾಟಾ ಎಲ್‌ಕ್ಸಿ- ವಿಷುಯಲ್ ಕಂಪ್ಯೂಟಿಂಗ್ ಲ್ಯಾಬ್ಸ್ )
- ಮುಖ್ಯ ಸಹಾಯಕ ನಿರ್ದೇಶಕ : ಕರನ್ ಮಲ್ಹೋತ್ರ
- ಛಾಯಾಚಿತ್ರಣ : ಕಿರಣ್ ದೇವಹಂಸ್
ನಿರ್ಮಾಣ
[ಬದಲಾಯಿಸಿ]ಈ ಚಿತ್ರದಲ್ಲಿ ಮೂಡಿಬರುವ ಘಟನೆ ಅಥವಾ ಯಾವುದೇ ಅಂಶಗಳು ಐತಿಹಾಸಿಕವಾಗಿ ನಿಖರವಾಗಿವೆ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಲು ಮತ್ತು ಚಿತ್ರ ನಿರ್ಮಾಣದಲ್ಲಿ ಅವರಿಗೆ ಸಲಹೆ-ಸಹಕಾರ ನೀಡಲು ದೆಹಲಿ, ಅಲಿಘರ್, ಲಕ್ನೋ, ಆಗ್ರಾ, ಜೈಪುರ ನಗರಗಳಿಂದ ಇತಿಹಾಸತಜ್ಞರ ಮತ್ತು ವಿದ್ವಾಂಸರ ಸಂಶೋಧನಾ ತಂಡವನ್ನು ಆಶುತೋಷ್ ಗೋವಾರಿಕರ್ ನೇಮಿಸಿಕೊಂಡಿದ್ದರು. ಮಾಧ್ಯಮದ ವಿವಿಧ ಭಾಗಗಳಲ್ಲಿ ವರದಿಯಾಗಿರುವಂತೆ ಚಿತ್ರದ ಹೆಸರು ಅಕ್ಬರ‍್-ಜೋಧಾ ಅಲ್ಲ, ಬದಲಿಗೆ ಜೋಧಾ-ಅಕ್ಬರ್ ಎಂದೇ ಉಳಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು. 80ಕ್ಕೂ ಹೆಚ್ಚು ಆನೆಗಳು, 100ಕ್ಕೂ ಹೆಚ್ಚಿನ ಕುದುರೆಗಳು ಮತ್ತು 55ಕ್ಕೂ ಹೆಚ್ಚಿನ ಒಂಟೆಗಳನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು. "ಅಝೀಮ್ ಓ ಷಾನ್, ಷಾಹೀನ್‌ಷಾ" ಎಂಬ ಪ್ರಮುಖವಾದ ಹಾಡೊಂದರಲ್ಲಿ ಪಾರಂಪರಿಕ ವಸ್ತ್ರಗಳನ್ನು ತೊಟ್ಟಿದ್ದ, ಖಡ್ಗಗಳನ್ನು ಹಾಗೂ ಗುರಾಣಿಗಳನ್ನು ಹಿಡಿದಿರುವ ಸುಮಾರು ಒಂದು ಸಾವಿರ ನೃತ್ಯಗಾರರು ಕರ್ಜಾತ್‌ನ ಅದ್ಭುತ ಪ್ರದೇಶದಲ್ಲಿ, ಅಮೋಘ ನೃತ್ಯ ಮಾಡುತ್ತಿರುವ ದೃಶ್ಯವು ಚಿತ್ರದಲ್ಲಿದೆ. ಚಿತ್ರದ ಒಟ್ಟು ವೆಚ್ಚ 37 ಕೋಟಿ ರೂಪಾಯಿಗಳು.(ಅಂದಾಜು 7.42 ದಶಲಕ್ಷ USD)
ಕಿರುತೆರೆಯಲ್ಲಿ ಈ ಚಿತ್ರದ ಮೊದಲ ಪ್ರಚಾರವನ್ನು ಡಿಸೆಂಬರ್ 9, 2007ರಂದು ಪ್ರಸಾರ ಮಾಡಲಾಯಿತು.
ಇದರಲ್ಲಿ ಸುಮಾರು 4000 ಕೆ.ಜಿಗೂ ಹೆಚ್ಚು ಚಿನ್ನಾಭರಣಗಳನ್ನು ಬಳಸಲಾಗಿದ್ದು, ಇವುಗಳನ್ನು 'ತನಿಷ್ಕ್' ಚಿನ್ನಾಭರಣ ಸಂಸ್ಥೆ ರೂಪಿಸಿತ್ತು.[೧೯]
ಚಲನಚಿತ್ರಕ್ಕೆ ಪ್ರತಿಕ್ರಿಯೆ
[ಬದಲಾಯಿಸಿ]ಗಲ್ಲಾ ಪೆಟ್ಟಿಗೆ
[ಬದಲಾಯಿಸಿ]ಈ ಚಿತ್ರಕ್ಕೆ US ಮತ್ತು UK ದೇಶಗಳ ಗಲ್ಲಾಪೆಟ್ಟಿಗೆಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆಯಿತು. http://www.rediff.com/movies/2008/feb/19jodhaa.htm ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ, ಉತ್ತರ ಅಮೆರಿಕದ ಗಲ್ಲಾಪೆಟ್ಟಿಗೆಯೊಂದರಲ್ಲೇ $1.3 ದಶಲಕ್ಷ ಡಾಲರ್ ಹಣವನ್ನು ಇದು ಬಾಚಿಕೊಂಡಿತ್ತು. ಇದರ ಪ್ರದರ್ಶನಗಳಿಂದ, ದೇಶೀಯ ಮಾರುಕಟ್ಟೆಯಲ್ಲಿ ಇದುವರೆಗೂ ಒಟ್ಟು $3,440,718 ಗಳಿಕೆಯನ್ನು ದಾಖಲಿಸಿದೆ.[೩] ಈ ಚಿತ್ರ ಭಾರತದ ಚಿತ್ರಮಂದಿರಗಳಲ್ಲಿ ನೀರಸ ಆರಂಭ ಕಂಡರೂ, ಬಾಯಿ ಪ್ರಚಾರದಿಂದಲೇ ಚೇತರಿಸಿಕೊಂಡು ಕೊನೆಗೆ 62 ಕೋಟಿ ವ್ಯವಹಾರ ನಡೆಸಿ ಸೂಪರ್‌ಹಿಟ್ ಎಂದು ಘೋಷಣೆಯಾಯಿತು.[೨೦][೨೧]
ವಿಮರ್ಶಾತ್ಮಕ ಸ್ವಾಗತ
[ಬದಲಾಯಿಸಿ]ದಿ ಚಾರ್ಲೋಟ್ ಅಬ್ಸರ್ವರ್ ಪತ್ರಿಕೆಯ ಚಿತ್ರ ವಿಮರ್ಶಕ ಲಾರೆನ್ಸ್ ಟಾಪ್‌ಮನ್, 2008ರಲ್ಲಿ ಬಿಡುಗಡೆಯಾದ ಟಾಪ್ ಟೆನ್ ಚಿತ್ರಗಳ ಪಟ್ಟಿಯಲ್ಲಿ ಜೋಧಾ ಅಕ್ಬರ್ ಚಿತ್ರಕ್ಕೆ 2ನೇ ಸ್ಥಾನ ನೀಡಿದ್ದರು.[೧೦] ರಾಟನ್ ಟೊಮ್ಯಾಟೋಸ್ ಎಂಬ ಅಂತರಜಾಲ ಚಿತ್ರ ವಿಮರ್ಶಾ ಸಂಸ್ಥೆಯು ಈ ಚಿತ್ರಕ್ಕೆ 8 ಫ್ರೆಶ್ ಮತ್ತು 2 ರಾಟನ್ ವಿಮರ್ಶೆಗಳನ್ನು ಹೊಂದಿದ 75% ರೇಟಿಂಗ್ ನೀಡಿದೆ.[೨೨]
ದಿ ಟೈಮ್ಸ್ ಪತ್ರಿಕೆಯ ಅನಿಲ್ ಸಿನಾನನ್ ಈ ಚಿತ್ರಕ್ಕೆ ಐದು ಸ್ಟಾರ್‌ಗಳಲ್ಲಿ ನಾಲ್ಕು ಸ್ಟಾರ‍್ಗಳ ರೇಟಿಂಗ್ ನೀಡಿ, "ಆಸ್ಕರ್ ನಾಮನಿರ್ದೇಶಿತ ಲಗಾನ್ ಚಿತ್ರದ ನಿರ್ದೇಶಕರಾದ ಆಶುತೋಷ್ ಗೋವಾರಿಕರ್ ಅವರ ಈ ಅದ್ದೂರಿ ಚಾರಿತ್ರಿಕ ಮಹಾಕಾವ್ಯ ಸೀಸಿಲ್ B.ಡಿಮಿಲ್ಲೆರ ಮನರಂಜನಾ ಚಿತ್ರದ ಎಲ್ಲ ಅಂಶಗಳನ್ನೂ ಒಳಗೊಂಡಿದೆ [...].ಭಾರತದಲ್ಲಿನ ಎಲ್ಲಾ ಧರ್ಮಗಳು ಸಹನೆಯಿಂದಿರುವಂತೆ ಭಾವೋದ್ರಿಕ್ತ ಮನವಿ ಮಾಡುವುದರೊಂದಿಗೆ ಈ ಚಿತ್ರ ಅಂತ್ಯವಾಗುತ್ತದೆ. ಆಧುನಿಕ ಭಾರತಕ್ಕೆ ಅನುಕರಣೀಯ ಸಂದೇಶವನ್ನು ಚಿತ್ರ ನೀಡಿದೆ." ಎಂದು ಪ್ರತಿಕ್ರಿಯಿಸಿದ್ದಾರೆ.[೨೩]CNN-IBN ಚಾನೆಲ್‌ನ ರಾಜೀವ್ ಮಸಂದ್ ಕೂಡ ಈ ಚಿತ್ರಕ್ಕೆ ಐದರಲ್ಲಿ ನಾಲ್ಕು ಸ್ಟಾರ್ ರೇಟಿಂಗ್ ನೀಡಿ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ: "ಬೇರೆ ಯಾವುದೇ ಚಿತ್ರದಲ್ಲಿ ನನಗೆ ಈ ರೀತಿಯ ಅನುಭವ ಸಿಕ್ಕಿರಲಿಲ್ಲ. ನನ್ನ ಆಸನದಲ್ಲಿ ಕುಳಿತು ಜೋಧಾ ಅಕ್ಬರ್ ನೋಡುತ್ತಾ, ಚಿತ್ರವೀಕ್ಷಕನಾಗಿರುವುದು ನನ್ನ ಪುಣ್ಯ ಎನಿಸಿತು. ಇಂಥ ಚಿತ್ರವೊಂದು ತಯಾರಾಗಿರುವುದೇ ಒಂದು ಪುಣ್ಯ ಮತ್ತು ಇಂಥದ್ದೊಂದು ಚಿತ್ರ ನಮ್ಮ ಕಾಲದಲ್ಲಿ ತಯಾರಾಗಿರುವುದು ಮತ್ತೊಂದು ಪುಣ್ಯ, ಇದರಿಂದ ಅತ್ಯಂತ ಹಳೆಯ ಪಾರಂಪರಿಕ ಚಿತ್ರಗಳನ್ನು ನೋಡುವಾಗ ಪರಿವರ್ತನೆಯಿಲ್ಲದೆ ಹೊಂದಿರಲೇಬೇಕಾದ ಹಿಂದಿನ ಪೀಳಿಗೆಯ ಅಭಿಪ್ರಾಯಗಳಿಗಿಂತ ನಮ್ಮದೇ ಸ್ವಂತ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಬಹುದು."[೨೪] BBCಯ ತಾಜ್‌ಪಾಲ್ ರಾಥೋರ್ ಈ ಚಿತ್ರಕ್ಕೆ ಐದರಲ್ಲಿ ನಾಲ್ಕು ಸ್ಟಾರ್ ಕೊಟ್ಟು ಹೀಗೆ ಹೇಳಿದ್ದಾರೆ "ಇದು 16ನೇ ಶತಮಾನದ ಬಹಳ ಹಿಂದೆಯೇ ಮರೆತು ಹೋದ ಪ್ರೇಮ ಕಥೆಯಾದರೂ, ಅಕ್ಕರೆಯುಂಟು ಮಾಡುವ ನಿರೂಪಣೆಯು ತನ್ನ ಇಡೀ ಗಾತ್ರದಲ್ಲಿ ಮತ್ತು ಅಳತೆಯೊಂದರಲ್ಲೇ ನಮ್ಮ ಮನಸ್ಸುಗಳಿಗೆ ಬರೆ ಎಳೆಯುತ್ತದೆ [...] ಓಡುತ್ತಿರುವ ಕಾಲ ನಿಸ್ಸಂಕೋಚವಾದ ಈ ಭವ್ಯ ಕಥೆಯನ್ನು ನೋಡುತ್ತಿರುವ ನಿಮ್ಮನ್ನು ಮುಂದೂಡದಿರಲಿ."[೨೫]
ದಿ ಟೈಮ್ಸ್ ಆಫ್ ಇಂಡಿಯಾ ದ ನಿಖತ್ ಕಾಝ್ಮಿ ಇದಕ್ಕೆ ಮೂರು ಸ್ಟಾರ್‌ಗಳ ರೇಟಿಂಗ್ ನೀಡಿ, ಈ ರೀತಿ ಉಲ್ಲೇಖಿಸುತ್ತಾರೆ "ಇದರ ತಿರುಳು ಸರಿಯಾದ ಜಾಗದಲ್ಲಿರುವದರಿಂದಲೇ ಜೋಧಾ ಅಕ್ಬರ್ ನಡೆಯುತ್ತದೆ. ಈ ಚಿತ್ರ ಲಿಂಗ, ಧರ್ಮ, ಸಂಸ್ಕೃತಿಗಳಿಗೂ ಅತೀತವಾದ ಪ್ರೀತಿಯ ಕಥೆಯನ್ನು ಸಾರಿ -- ಜಾತ್ಯಾತೀತತೆ ಮತ್ತು ಸಹನೆ ಎರಡು ಅಧಾರ ಸ್ತಂಭಗಳನ್ನು ಹೊಂದಿರುವ ಭಾರತ ದೇಶದ ಕನಸನ್ನು ಕಾಣುತ್ತದೆ. ಅಕ್ಬರ್ ಮತ್ತು ಜೋಧಾ ಈ ಕನಸಿನ ಮನ ಮೋಹಕ ನಿರೂಪಣೆಗಳು.""ಇತಿಹಾಸದ ಎಲ್ಲ ಅಲಂಕಾರಿಕ ಭೂಷಣಗಳನ್ನು ನೀವು ತ್ಯಜಿಸಲು ಸಿದ್ಧರಿದ್ದರೆ, ಆಗ ಮಾತ್ರ ಜೋಧಾ ಅಕ್ಬರ್ ನಿಮ್ಮ ಮೇಲೆ ಪರಿಣಾಮ ಬೀರಲು ಸಾಧ್ಯ" ಎಂದು ಕಾಝ್ಮಿ ಸೂಚಿಸುತ್ತಾರೆ.[೨೬] ಹೀಗೆ ಸೂಚಿಸುವಾಗ, ಅವರು "ಇದು ತುಂಬ ದೀರ್ಘವಾಗಿದೆ" ಆದರೆ "ಇತಿಹಾಸ ಪಾಠದ ಪ್ರವಚನವಲ್ಲ" ಎನ್ನುತ್ತಾರೆ. ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ರೇಚಲ್ ಸಾಝ್ "ಚಕ್ರವರ್ತಿಯೊಬ್ಬನ ಮತ್ತು ಮುಸ್ಲಿಂ-ಹಿಂದೂ ಪ್ರೇಮ ಕಥೆಯೊಂದನ್ನು ನಿರೂಪಣೆಗೆ ಆಯ್ದುಕೊಳ್ಳುವುರದಲ್ಲಿ ಮಿ.ಗೋವಾರಿಕರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅಕ್ಬರ್ ಹೇಳುವ ಹಾಗೆ ’ಪ್ರತಿಯೊಬ್ಬರ ಧರ್ಮಗಳನ್ನು ಗೌರವಿಸಿ ಇದು ಹಿಂದೂಸ್ತಾನವನ್ನು ಸಮೃದ್ಧಗೊಳಿಸುತ್ತದೆ.’" ಎಂದು ಉಲ್ಲೇಖಿಸುತ್ತಾರೆ. ಹಿಂದೂಸ್ತಾನ್ ಟೈಮ್ಸ್ ನ ಖಾಲಿದ್ ಮೊಹಮ್ಮದ್ ಈ ಚಿತ್ರಕ್ಕೆ 2 ಸ್ಟಾರ್ ನೀಡಿದ್ದಾರೆ. ಅವರು ಉಲ್ಲೇಖಿಸುತ್ತಾ, "ನೀವಿದನ್ನು ಒಪ್ಪಿ ಇಲ್ಲವೇ ಬಿಡಿ, ಅತ್ಮಸಾಕ್ಷಿಯಂತೆ ನಡೆಯುವ ನಿರ್ದೇಶಕರಾದ ಆಶುತೋಷ್ ಗೋವಾರಿಕರ್ ತಾಂತ್ರಿಕ ಅಳವಡಿಕೆಯಲ್ಲಿ ಮತ್ತು ಚಾರಿತ್ರಿಕ ವಸ್ತುವಿನ ಭಾವನಾತ್ಮಕ ಸರಕನ್ನು ನಿರೂಪಿಸುವಲ್ಲಿ ಎಡವಿದ್ದಾರೆ. ನಿರ್ಣಾಯಕ ಅಂಶಗಳನ್ನು ವಿವರಿಸುವುದು ಇಲ್ಲಿನ ಋಜುತ್ವವಲ್ಲ" ಎಂದಿದ್ದಾರೆ.[೨೭]
ಫಿಲ್ಮ್‌ಫೇರ್ ಪ್ರಶಸ್ತಿಗಳು
[ಬದಲಾಯಿಸಿ]- ಅತ್ಯುತ್ತಮ ಚಿತ್ರ - ರೋನೀ ಸ್ಕ್ರ್ಯೂವಾಲ ಮತ್ತು ಆಶುತೋಷ್ ಗೋವಾರಿಕರ್
- ಅತ್ಯುತ್ತಮ ನಿರ್ದೇಶಕ - ಆಶುತೋಷ್ ಗೋವಾರಿಕರ್
- ಅತ್ಯುತ್ತಮ ನಟ - ಹೃತಿಕ್ ರೋಷನ್
- ಅತ್ಯುತ್ತಮ ಸಾಹಿತ್ಯ - ಜಾವೇದ್ ಅಖ್ತರ್
- ಅತ್ಯುತ್ತಮ ಹಿನ್ನೆಲೆ ಸಂಗೀತ - A. R. ರೆಹಮಾನ್
ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳು
[ಬದಲಾಯಿಸಿ]- ಅತ್ಯುತ್ತಮ ಚಿತ್ರ - ರೋನೀ ಸ್ಕ್ರ್ಯೂವಾಲ ಮತ್ತು ಆಶುತೋಷ್ ಗೋವಾರಿಕರ್
- ಅತ್ಯುತ್ತಮ ನಟ - ಹೃತಿಕ್ ರೋಷನ್
- ಅತ್ಯುತ್ತಮ ಹಿನ್ನೆಲೆ ಸಂಗೀತ - A. R. ರೆಹಮಾನ್
- ಅತ್ಯುತ್ತಮ ನೃತ್ಯ ಸಂಯೋಜಕ - ರಾಜು ಖಾನ್, "ಖ್ವಾಜ ಮೇರೆ ಖ್ವಾಜ" ಹಾಡಿಗೆ
- ಅತ್ಯುತ್ತಮ ನಿರ್ದೇಶಕ - ಆಶುತೋಷ್ ಗೋವಾರಿಕರ್
- ಅತ್ಯಂತ ಜನಪ್ರಿಯ ನಟಿ - ಐಶ್ವರ್ಯ ರೈ ಬಚ್ಚನ್
- ಅತ್ಯುತ್ತಮ ನಟಿ - ಐಶ್ವರ್ಯ ರೈ ಬಚ್ಚನ್
- ಅತ್ಯುತ್ತಮ ಸಾಹಸ - ರವಿ ದೆವನ್
- ಖಳನಟನ ಪಾತ್ರದಲ್ಲಿ ಅತ್ಯುತ್ತಮ ನಟ - ಇಲಾ ಅರುಣ್
- ಅತ್ಯುತ್ತಮ ಕಲಾ ನಿರ್ದೇಶನ - ನಿತಿನ್ ಚಂದ್ರಕಾಂತ್ ದೇಸಾಯಿ
- ಅತ್ಯುತ್ತಮ ಸಾಹಿತ್ಯ - ಖಾಸಿಫ್, "ಖ್ವಾಜ ಮೇರೆ ಖ್ವಾಜ" ಹಾಡಿಗೆ
- ಅತ್ಯುತ್ತಮ ಸಂಗೀತ - A. R. ರೆಹಮಾನ್
- ಅತ್ಯುತ್ತಮ ಹಿನ್ನೆಲೆ ಗಾಯಕ - A. R. ರೆಹಮಾನ್ "ಖ್ವಾಜ ಮೇರೆ ಖ್ವಾಜ" ಹಾಡಿಗೆ
- ಅತ್ಯುತ್ತಮ ದೃಷ್ಯ ವೈಭವ - ಪಂಕಚ್ ಖಾಂದ್‌ಪುರ್
ಸ್ಟಾರ್‌ಡಸ್ಟ್ ಪ್ರಶಸ್ತಿಗಳು
[ಬದಲಾಯಿಸಿ]- ಗೆದ್ದಿದೆ , ವರ್ಷದ ತಾರೆ - ಹೃತಿಕ್ ರೋಷನ್
- ಗೆದ್ದಿದೆ , ಕನಸಿನ ನಿರ್ದೇಶಕ - ಆಶುತೋಷ್ ಗೋವಾರಿಕರ್
- ಗೆದ್ದಿದೆ , ಹೊಸ ಉಪದ್ರವಿ- ನಿಕಿತಿನ್ ಧೀರ್[೨೮]
IIFA ಪ್ರಶಸ್ತಿ
[ಬದಲಾಯಿಸಿ]- ಅತ್ಯುತ್ತಮ ಚಿತ್ರ
- ಅತ್ಯುತ್ತಮ ನಿರ್ದೇಶಕ
- ಅತ್ಯುತ್ತಮ ನಟ
- ಅತ್ಯುತ್ತಮ ಸಂಗೀತ ನಿರ್ದೇಶಕ
- ಅತ್ಯುತ್ತಮ ಗೀತಸಾಹಿತಿ
- ಅತ್ಯುತ್ತಮ ಹಿನ್ನೆಲೆ ಗಾಯಕ
- ಅತ್ಯುತ್ತಮ ಕಲಾ ನಿರ್ದೇಶನ
- ಅತ್ಯುತ್ತಮ ಹಿನ್ನೆಲೆ ಸಂಗೀತ
- ಅತ್ಯುತ್ತಮ ವೇಷಭೂಷಣ ವಿನ್ಯಾಸ
- ಅತ್ಯುತ್ತಮ ಸಂಕಲನ
- ಅತ್ಯುತ್ತಮ ಪ್ರಸಾದನ
V ಶಾಂತಾರಾಮ್ ಪ್ರಶಸ್ತಿ
[ಬದಲಾಯಿಸಿ]- ಗೆದ್ದಿದೆ , ಅತ್ಯುತ್ತಮ ನಿರ್ದೇಶಕ ಕಂಚಿನ ಪ್ರಶಸ್ತಿ- ಆಶುತೋಷ್ ಗೋವಾರಿಕರ್
- ಗೆದ್ದಿದೆ , ಅತ್ಯುತ್ತಮ ನಟಿ - ಐಶ್ವರ್ಯ ರೈ
- ಗೆದ್ದಿದೆ , ಅತ್ಯುತ್ತಮ ಸಂಗೀತ - A. R. ರೆಹಮಾನ್
ಅಂತರರಾಷ್ಟ್ರೀಯ
[ಬದಲಾಯಿಸಿ]- ಗೆದ್ದಿದೆ , ಅತ್ಯುತ್ತಮ ಚಿತ್ರ (ಗ್ರ್ಯಾಂಡ್ ಪ್ರಿಕ್ಸ್) - ಆಶುತೋಷ್ ಗೋವಾರಿಕರ್
- ಗೆದ್ದಿದೆ , ಅತ್ಯುತ್ತಮ ನಟ ಪ್ರಶಸ್ತಿ - ಹೃತಿಕ್ ರೋಷನ್
- ಗೆದ್ದಿದೆ , ಅತ್ಯುತ್ತಮ ವಿದೇಶಿ ಭಾಷಾ ಚಿತ್ರಕ್ಕಾಗಿ ನೀಡುವ ಅಡಿಯನ್ಸ್ ಪ್ರಶಸ್ತಿ - ಆಶುತೋಷ್ ಗೋವಾರಿಕರ್
- ಛಾಯಾಚಿತ್ರಣದಲ್ಲಿ ಸಾಧನೆ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ - ಕಿರಣ್ ಡಿಯೋಹನ್ಸ್
- 3ನೇ ಏಷಿಯನ್ ಫಿಲ್ಮ್ ಪ್ರಶಸ್ತಿಗಳು
- ಅತ್ಯುತ್ತಮ ನಿರ್ಮಾಣ ವಿನ್ಯಾಸಕ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ - ನಿತಿನ್ ಚಂದ್ರಕಾಂತ್ ದೇಸಾಯಿ
- ಅತ್ಯುತ್ತಮ ಸಂಯೋಜನೆ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ - A. R. ರೆಹಮಾನ್
ಸಂಗೀತ
[ಬದಲಾಯಿಸಿ]Untitled | |
---|---|
ಅಧಿಕೃತ ಸಂಗೀತ ಸರುಳಿ ಐದು ಹಾಡುಗಳನ್ನು ಮತ್ತು ಎರಡು ವಾದ್ಯಸಂಗೀತವನ್ನು ಒಳಗೊಂಡಿದೆ. ಜನವರಿ 18, 2008ರಂದು ಇದರ ಸಂಗೀತ ಸರುಳಿ ಬಿಡುಗಡೆಯಾಯಿತು.
ಗೀತೆ | ಹಾಡುಗಾರ(ರು) | ಅವಧಿ | ಟಿಪ್ಪಣಿಗಳು |
---|---|---|---|
ಅಝೀಮ್-ಓ-ಷಾನ್ ಷಾಹೀನ್‌ಷಾ | ಮೊಹಮ್ಮದ್ ಅಸ್ಲಾಂ, ಬೊನ್ನೀ ಚಕ್ರಬೋರ್ತಿ ಮತ್ತು ಸಂಗಡಿಗರು | 5:54 | ಹೃತಿಕ್ ರೋಷನ್ ಮತ್ತು ಐಶ್ವರ್ಯ ರೈಐಶ್ವರ್ಯ ರೈ(/1) ಅವರ ಮೇಲೆ ಚಿತ್ರೀಕರಿಸಲಾಗಿದೆ. |
ಜಷ್ನ್-ಎ-ಬಹಾರಾ | ಜಾವೇದ್ ಅಲಿ | 5:15 | ಹೃತಿಕ್ ರೋಷನ್ ಮತ್ತು ಐಶ್ವರ್ಯ ರೈ ಅವರ ಮೇಲೆ ಚಿತ್ರೀಕರಿಸಲಾಗಿದೆ |
ಖ್ವಾಜ ಮೇರೆ ಖ್ವಾಜ | A.R.ರೆಹಮಾನ್ (ಸಾಹಿತ್ಯ: ಖಾಸಿಫ್) | 6:56 | ಹೈದರ್ ಅಲಿ [ಅಮೀನ್ ಹಾಜೀ] [ಕರೀಮ್ ಹಾಜೀ] ಹೃತಿಕ್ ರೋಷನ್ ಮತ್ತು ಐಶ್ವರ್ಯ ರೈ
ಅವರ ಮೇಲೆ ಚಿತ್ರೀಕರಿಸಲಾಗಿದೆ |
ಇನ್ ಲಮ್ಹಾನ್ ಕೆ ದಾಮನ್ ಮೇನ್ | ಸೋನು ನಿಗಮ್ ಮತ್ತು ಮಧುಶ್ರೀ | 6:37 | ಹೃತಿಕ್ ರೋಷನ್ ಮತ್ತು ಐಶ್ವರ್ಯ ರೈ
ಅವರ ಮೇಲೆ ಚಿತ್ರೀಕರಿಸಲಾಗಿದೆ. |
ಮನ್ ಮಹೋನಾ | ಬೇಲಾ ಷೆಂಡೆ | 6:50 | ಹೃತಿಕ್ ರೋಷನ್ ಮತ್ತು ಐಶ್ವರ್ಯ ರೈ ಅವರ ಮೇಲೆ ಚಿತ್ರೀಕರಣಗೊಂಡಿದೆ. |
ಜಷ್ನ್-ಎ-ಬಹಾರಾ | ವಾದ್ಯಸಂಗೀತ- ಕೊಳಲು | 5:15 | ವಾದ್ಯಸಂಗೀತ |
ಕ್ವಾಜ ಮೇರೆ ಕ್ವಾಜ | ವಾದ್ಯಸಂಗೀತ- ಓಬೋ | 2:53 | ವಾದ್ಯಸಂಗೀತ |
ಆಕರಗಳು
[ಬದಲಾಯಿಸಿ]- ↑ Business data for Jodhaa Akbar from IMDb
- ↑ "Box Office earnings in 2008". Archived from the original on 2012-05-25. Retrieved 2009-11-12.
- ↑ ೩.೦ ೩.೧ http://www.boxofficemojo.com/movies/?id=jodhaaakbar.htm
- ↑ "January 25, 2008". IndiaFM. 2007-09-12. Archived from the original on 2019-04-21. Retrieved 2008-01-09.
- ↑ "Aishwarya gets summons by Customs Department". IndiaFM. 2006-11-15. Retrieved 2007-10-03.
- ↑ "December 27, 2008". JodhaaAkbar.com. 2008-12-03. Archived from the original on 2008-12-29. Retrieved 2007-12-05.
- ↑ ೭.೦ ೭.೧ "odhaa Akbar wins Audience Award at Sao Paulo International Film Fest". Business of Cinema. 2008-11-03. Archived from the original on 2009-02-14. Retrieved 2009-11-12.
{{cite web}}
: Unknown parameter|accesdsate=
ignored (help) - ↑ ೮.೦ ೮.೧ "Jodhaa Akbar, Hrithik win awards at Golden Minbar Film Festival in Russia". Bollywood Hungama. October 23, 2008.
{{cite web}}
: Text "2009-01-31" ignored (help) - ↑ ೯.೦ ೯.೧ "Awards for Jodhaa Akbar (2008)". Internet Movie Database. Retrieved 2009-01-31.
- ↑ ೧೦.೦ ೧೦.೧ "Film Critic Top Ten Lists: 2008 Critics' Picks". Metacritic. Archived from the original on 2010-02-24. Retrieved 2009-04-25.
- ↑ "Jodhaa Akbar :: Official Website". Jodhaaakbar.com. Archived from the original on 2009-05-12. Retrieved 2008-10-27.
- ↑ "Jodhaa Akbar not being screened in Rajasthan". IndiaFM. 2008-02-16. Archived from the original on 2008-02-17. Retrieved 2008-02-20.
- ↑ ೧೩.೦ ೧೩.೧ ೧೩.೨ Ashley D'Mello (2005-12-10). "Fact, myth blend in re-look at Akbar-Jodha Bai". ದಿ ಟೈಮ್ಸ್ ಆಫ್ ಇಂಡಿಯಾ. Retrieved 2008-02-15.
- ↑ Syed Firdaus Ashraf (2008-02-05). "Did Jodhabai really exist?". Rediff.com. Retrieved 2008-02-15.
- ↑ Atul Sethi (2007-06-24). "'Trade, not invasion brought Islam to India'". ದಿ ಟೈಮ್ಸ್ ಆಫ್ ಇಂಡಿಯಾ. Retrieved 2008-02-15.
- ↑ "UP bans screening of Jodhaa Akbar". NDTV. 2008-03-02. Retrieved 2008-03-02.
- ↑ "Court moved against ban on film". The Hindu. 2008-03-02. Archived from the original on 2008-03-05. Retrieved 2008-03-02.
- ↑ "Supreme Court lifts ban on Jodhaa Akbar, for now". Reuters. 2008-03-03. Archived from the original on 2008-03-05. Retrieved 2008-03-04.
- ↑ [javascript:void(0); Oneindia.in]
- ↑ "BoxOffice India.com". Boxofficeindia.com. Archived from the original on 2012-07-28. Retrieved 2008-10-27.
- ↑ "And the rest isn't history- Hindustan Times". Hindustantimes.com. Archived from the original on 2013-01-03. Retrieved 2008-10-27.
- ↑ ರಾಟನ್ ಟೊಮ್ಯಾಟೋಸ್‌ನಲ್ಲಿ ಜೋಧಾ ಅಕ್ಬರ್
- ↑ "ಜೋಧಾ ಅಕ್ಬರ್". Archived from the original on 2008-05-17. Retrieved 2009-11-12.
- ↑ "ಮಸಂದ್ ಅವರ ತೀರ್ಪು: ಜೋಧಾ ಅಕ್ಬರ್". Archived from the original on 2008-11-13. Retrieved 2009-11-12.
- ↑ ಜೋಧಾ ಅಕ್ಬರ್
- ↑ ಜೋಧಾ ಅಕ್ಬರ್
- ↑ ಹಾಗಿದ್ದರೆ ಉಳಿದದ್ದು ಇತಿಹಾಸವಲ್ಲವೇ
- ↑ http://www.bollywoodhungama.com/features/2009/02/16/4855/index.html
- ↑ http://www.indiantelevision.com/aac/y2k8/aac796.php
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಅಧಿಕೃತ ವೆಬ್ಸೈಟ್: ಜೋಧಾ ಅಕ್ಬರ್ Archived 2009-05-12 ವೇಬ್ಯಾಕ್ ಮೆಷಿನ್ ನಲ್ಲಿ.
- ಜೋಧಾ ಅಕ್ಬರ್ at IMDb
- Jodhaa Akbar at AllMovie
- ಬಾಕ್ಸ್ ಆಫ಼ೀಸ್ ಮೋಜೊದಲ್ಲಿ ಜೋಧಾ ಅಕ್ಬರ್
- Pages using the JsonConfig extension
- CS1 errors: unsupported parameter
- CS1 errors: unrecognized parameter
- Pages using duplicate arguments in template calls
- Wikipedia references cleanup from September 2009
- Articles with invalid date parameter in template
- All articles needing references cleanup
- Articles covered by WikiProject Wikify from September 2009
- All articles covered by WikiProject Wikify
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Music infoboxes with unknown value for type
- Articles using infobox templates with no data rows
- Album articles with non-standard infoboxes
- Articles with hAudio microformats
- Album articles lacking alt text for covers
- Pages using infobox album with empty type parameter
- Pages using infobox album with unknown parameters
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- 2008ರ ಚಲನಚಿತ್ರಗಳು
- ಭಾರತೀಯ ಚಲನಚಿತ್ರಗಳು
- ಹಿಂದಿ-ಭಾಷೆಯ ಚಲನಚಿತ್ರಗಳು
- ಉರ್ದು-ಭಾಷೆಯ ಚಲನಚಿತ್ರಗಳು
- ವ್ಯಕ್ತಿಚಿತ್ರಕ್ಕೆ ಸಂಬಂಧಿಸಿದ ಚಲನಚಿತ್ರಗಳು
- ಆಶುತೋಷ್ ಗೋವಾರಿಕರ್ ನಿರ್ದೇಶಿಸಿದ ಚಿತ್ರಗಳು
- ಫಿಲ್ಮಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ವಿಜೇತರು
- A. R. ರೆಹಮಾನ್ ಆಲ್ಬಮ್ಗಳು