ವಿಷಯಕ್ಕೆ ಹೋಗು

ಮಧುಬಾಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Madhubala

ಬರ್ಸಾತ್ ಕಿ ರಾದಲ್ಲಿ ಮಧುಬಾಲಾ
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Mumtaz Begum Jehan Dehlavi
(೧೯೩೩-೦೨-೧೪)೧೪ ಫೆಬ್ರವರಿ ೧೯೩೩
ನವ ದೆಹಲಿ, India
ನಿಧನ February 23, 1969(1969-02-23) (aged 36)
ಮುಂಬೈ, ಮಹಾರಾಷ್ಟ್ರ, India
ವೃತ್ತಿ Actress
ವರ್ಷಗಳು ಸಕ್ರಿಯ 1942-1969
ಪತಿ/ಪತ್ನಿ Kishore Kumar (ವಿವಾಹ 1960–ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".) (Her death)

ಮಧುಬಾಲಾ ರ (14 ಫೆಬ್ರವರಿ 1933 – 23 ಫೆಬ್ರವರಿ 1969), ಮೂಲ ಹೆಸರು ಮುಮ್ತಾಜ್ ಬೇಗಂ ಜೇಹನ್ ದೆಹ್ಲವಿ ಆಗಿದೆ. ಆಕೆ 1950ರ ಹಾಗೂ 1960ರ ಆರಂಭದಲ್ಲಿ ಹಲವು ಯಶಸ್ವೀ ಚಿತ್ರಗಳಲ್ಲಿ ಇಂದಿಗೂ ಎಷ್ಟೋ ಚಿತ್ರಗಳು ಶಾಸ್ತ್ರೀಯ ಹಾಗೂ ಆರಾಧನಾ ಸ್ಥಾನಮಾನಗಳನ್ನು ಹೊಂದಿದ್ದು, ಅಂತಹ ಚಿತ್ರಗಳನ್ನು ನೀಡಿದ ಪ್ರಖ್ಯಾತ ಹಿಂದಿ ಚಲನಚಿತ್ರ ನಟಿಯಾಗಿದ್ದಾರೆ. ನರ್ಗಿಸ್ ಹಾಗೂ ಮೀನಾಕುಮಾರಿಯವರುಗಳ ಸಮಕಾಲೀನರಾದ ಅವರು, ಹಿಂದಿ ಚಿತ್ರೋದ್ಯಮ ಕಂಡ ಓರ್ವ ಪ್ರತಿಭಾನ್ವಿತ ಹಾಗೂ ಪ್ರಭಾವಿ ನಟಿಯಾಗಿದ್ದರು.

ಪ್ರಾರಂಭದ ಜೀವನ[ಬದಲಾಯಿಸಿ]

ಮಧುಬಾಲಾ ಎಂದೇ ಪ್ರಸಿದ್ಧವಾಗಿರುವ ಮುಮ್ತಾಜ್ ಬೇಗಂ ಜೇಹನ್ ದೆಹ್ಲವಿ, 1933ರ ಫೆಬ್ರವರಿ 14ರಂದು ಭಾರತನವದೆಹಲಿಯಲ್ಲಿ ಜನಿಸಿದರು. ಅವರು ಮುಸಲ್ಮಾನರ ಸಂಪ್ರದಾಯವಾದಿ ಪಠಾಣರ ವಂಶದಲ್ಲಿ ಜನಿಸಿದ ಹನ್ನೊಂದು ಮಕ್ಕಳಲ್ಲಿ ಐದನೇ ಮಗುವಾಗಿದ್ದರು.

ಮಧುಬಾಲಾರ ತಂದೆ, ಅತಾವುಲ್ಲಾ ಖಾನ್‌ರು ಪೇಶಾವರದಲ್ಲಿನ‌ ಇಂಪೀರಿಯಲ್ ತಂಬಾಕು ಕಂಪೆನಿಯಲ್ಲಿ ಕೆಲಸ ಕಳೆದುಕೊಂಡ ನಂತರ,[೧] ಮಧುಬಾಲಾಳ ನಾಲ್ಕು ಸೋದರಿಯರು ಹಾಗೂ ಇಬ್ಬರು ಸೋದರರನ್ನು ಕಳೆದುಕೊಂಡದ್ದೂ ಸೇರಿದಂತೆ ಆ ಕುಟುಂಬವು ಹಲವಾರು ತೊಂದರೆಗಳನ್ನು ಅನುಭವಿಸಿತು. ಮಧುಬಾಲಾ ಮತ್ತು ಆಕೆಯ ನಾಲ್ಕು ಸೋದರಿಯರು ಮಾತ್ರ ಬದುಕಿದರು. ತನ್ನ ಕಡುಬಡತನಕ್ಕಿಳಿದ ಕುಟುಂಬಕ್ಕೆ ಉತ್ತಮ ಜೀವನ ನೀಡುವ ಉದ್ದೇಶದಿಂದ, ಅವರ ತಂದೆ ಕುಟುಂಬ ಸಮೇತರಾಗಿ ಮುಂಬಯಿಗೆ ಬಂದು ನೆಲೆಸಿದರು. ಅಲ್ಲಿ ಅವರು ಒಂದು ವರ್ಷಕ್ಕೂ ಹೆಚ್ಚು ಸಮಯ ಮುಂಬಯಿನ ಚಲನಚಿತ್ರ ಸ್ಟುಡಿಯೋಗಳಲ್ಲಿ ಕೆಲಸಕ್ಕಾಗಿ ಅಲೆದಾಡಿದರು. ಎಳೆಯ ಮುಮ್ತಾಜ್ ಒಂಬತ್ತನೇ ವಯಸ್ಸಿನಲ್ಲಿಯೇ ಚಿತ್ರರಂಗವನ್ನು ಪ್ರವೇಶಿಸಿದಳು.

ಆರಂಭಿಕ ವೃತ್ತಿ[ಬದಲಾಯಿಸಿ]

ಅವರು ಪ್ರಥಮ ಬಾರಿಗೆ ಸುಪ್ರಸಿದ್ಧ ಮುಮ್ತಾಜ್ ಶಾಂತಿಯವರ ಮಗಳಾಗಿ ಪಾತ್ರ ಮಾಡಿದ ಬಸಂತ್‌ (1942) [೨] ಚಿತ್ರ ಗಲ್ಲಾ ಪೆಟ್ಟಿಗೆ ಸೂರೆಮಾಡಿತು. ಅನಂತರ ಅವರು ಹಲವಾರು ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದರು. ಅವರ ನಟನಾ ಕೌಶಲ್ಯ ಹಾಗೂ ಸಾಮರ್ಥ್ಯದಿಂದ ಪ್ರಭಾವಕ್ಕೊಳಗಾದ ಹೆಸರಾಂತ ನಟಿ ದೇವಿಕಾ ರಾಣಿ, ಅವರ ಹೆಸರನ್ನು ಮಧುಬಾಲಾ[೩] ಎಂದು ಬದಲಾಯಿಸಿಕೊಳ್ಳುವಂತೆ ಸೂಚಿಸಿದರು. ತನ್ನ ಪ್ರತಿಭೆಯಿಂದಾಗಿ ಅವರು ವಿಶ್ವಾಸಾರ್ಹ ಹಾಗೂ ವೃತ್ತಿಪರ ನಟಿಯಾಗಿ ಹೊರ ಹೊಮ್ಮಲು ಸಾಧ್ಯವಾಯಿತು. ಅವರು ಯೌವನಕ್ಕೆ ಕಾಲಿಡುವಷ್ಟರಲ್ಲೇ, ಅವರ ಅಸಾಮಾನ್ಯ ಸೌಂದರ್ಯ ಹಾಗೂ ಎತ್ತರ, ಬಳುಕುವ ದೇಹ, ಪ್ರಮುಖ ಪಾತ್ರಗಳಿಗೆ ಹೇಳಿ ಮಾಡಿಸಿದಂತಿತ್ತು.

ಕಿದಾರ್‌ ಶರ್ಮಾರು ನಿರ್ಮಿಸಿದ ಚಿತ್ರ ನೀಲ್ ಕಮಲ್‌ ನಲ್ಲಿ(1947) ರಾಜ್‌ ಕಪೂರ್‌ನೊಂದಿಗೆ ನಟಿಯಾಗಿ ಅಭಿನಯಿಸಿದ ಚಿತ್ರದ ಮೂಲಕ ಅವರು ಪ್ರಥಮ ಯಶಸ್ಸು ಪಡೆದರು.[೨] ಅಲ್ಲಿಯವರೆವಿಗೂ ಅವರನ್ನು ಮುಮ್ತಾಜ್ ಎಂದು ಕರೆಯುತ್ತಿದ್ದವರು, ಚಿತ್ರದ ನಂತರ ಮಧುಬಾಲಾ ಎಂದು ಗುರುತಿಸಲು ಆರಂಭಿಸಿದರು. ಆಕೆಗಿನ್ನೂ ಕೇವಲ ಹದಿನಾಲ್ಕು ವರ್ಷವಿದ್ದಾಗಲೇ ಮಧುಬಾಲಾ ಭಾರತೀಯ ಚಿತ್ರರಂಗದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ಚಿತ್ರವು ಅಷ್ಟೇನೂ ಯಶಸ್ವಿಯಾಗದಿದ್ದರೂ, ಆಕೆಯ ನಟನೆ ಎಲ್ಲರ ಗಮನವನ್ನು ಆಕರ್ಷಿಸಿತು.

ಮುಂದಿನ ಎರಡು ವರ್ಷಗಳಲ್ಲಿ ಅವರು ಅಪೂರ್ವ ಸೌಂದರ್ಯದ ಗಣಿಯಾಗಿ ಹೊರಹೊಮ್ಮಿದರು (ಚಿತ್ರೋದ್ಯಮ ಹಾಗೂ ಅಭಿಮಾನಿಗಳು ಅವರನ್ನು ಬೆಳ್ಳಿತೆರೆಯ ವೀನಸ್ ಎಂದು ಬಣ್ಣಿಸಿದ್ದಾರೆ). ಹಾಗಿದ್ದರೂ 1949ರಲ್ಲಿ ಬಾಂಬೆ ಟಾಕೀಸ್‌ ನಿರ್ಮಾಣದ ಮಹಲ್‌ ನಲ್ಲಿ ಅತ್ಯಾಸೆಯ ಪ್ರಮುಖ ಪಾತ್ರ ನಿರ್ವಹಿಸಿದ ಮೇಲೆ, ಮಧುಬಾಲಾ ಪರಿಪೂರ್ಣ ತಾರೆ ಹಾಗೂ ಮನೆಮನಗಳಲ್ಲಿ ಹೆಸರು ಸಂಪಾದಿಸಿದ್ದು. ಮಧುಬಾಲಾರು ನಿಗೂಢವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದ ರೀತಿ ಹಾಗೂ ಅವರ ಸೌಂದರ್ಯಕ್ಕೆ ಪ್ರೇಕ್ಷಕರು ಮಾರುಹೋಗಿದ್ದರು. ಆಕೆಗಿನ್ನೂ ಹದಿನಾರು ವರ್ಷ ಮಾತ್ರವೇ ಆಗಿದ್ದರೂ, ವಿಮರ್ಶಕರ ಪ್ರಕಾರ ಆಕೆಯ ಚಾತುರ್ಯ ಹಾಗೂ ಕೌಶಲ್ಯಾತ್ಮಕ ಅಭಿನಯವು ಸಹನಟ, ಅಶೋಕ್‌ ಕುಮಾರ್‌ರನ್ನೂ ಮೀರಿಸುವಂತೆ ಇತ್ತು. ಚಿತ್ರವು ಪ್ರಚಂಡ ಯಶಸ್ಸನ್ನು ಕಂಡು, ಆಯೇಗಾ ಆನೇವಾಲಾ ಎಂಬ ಅದರ ಗೀತೆಯು ಮಧುಬಾಲಾ ಹಾಗೂ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್‌ ಎಂಬ ಎರಡು ಹೊಸ ಅಪ್ರತಿಮ ತಾರೆಯರು ಬರುವ ಮುನ್ಸೂಚನೆ ನೀಡಿತು.

ತೀವ್ರತರದ ಅನಾರೋಗ್ಯ[ಬದಲಾಯಿಸಿ]

ಸೆಟ್‌ಗಳಲ್ಲಿ ಮಧುಬಾಲಾ ಆಗಿಂದಾಗ್ಗೆ ಕೆಮ್ಮುತ್ತಿದ್ದು, ರಕ್ತವೂ ಬರುತ್ತಿದ್ದುದರಿಂದ 1950ರಲ್ಲಿ ಅವರಿಗೆ ಹೃದಯದ ತೊಂದರೆ ಇರುವುದು ತಿಳಿದುಬಂತು. ಅವರಿಗೆ ಹುಟ್ಟಿದಾಗಲೇ "ಹೃದಯದ ರಂಧ್ರ" ಎನ್ನಲಾಗುವ ಹೃದಯದ ತೊಂದರೆ ಇತ್ತು. ಆ ಸಮಯದಲ್ಲಿ, ಹೃದಯ ಶಸ್ತ್ರಚಿಕಿತ್ಸೆಯ ಸೌಲಭ್ಯವು ವ್ಯಾಪಕವಾಗಿ ಲಭ್ಯವಿರಲಿಲ್ಲ.

ಅವರ ಅನಾರೋಗ್ಯವನ್ನು ಚಿತ್ರರಂಗಕ್ಕೆ ತಿಳಿಯದಂತೆ ಹಲವಾರು ವರ್ಷಗಳ ಕಾಲ ಗುಪ್ತವಾಗಿ ಇರಿಸಲಾಗಿತ್ತು, ಆದರೂ 1954ರಲ್ಲಿ ನಡೆದ ಒಂದು ಘಟನೆ ಚಿತ್ರರಂಗದಾದ್ಯಂತ ಹರಡಿತು. ಆ ಸಮಯದಲ್ಲಿ ಮಧುಬಾಲಾ ಮದ್ರಾಸ್‌ನಲ್ಲಿ S.S. ವಾಸನ್‌ರ ಚಿತ್ರವಾದ ಬಹುತ್ ದಿನ್ ಹುಯೆ/ಹುವೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅವರು ತೀವ್ರ ಅಸ್ವಸ್ಥಗೊಂಡು, ಸೆಟ್‌ನಲ್ಲಿಯೇ ರಕ್ತವನ್ನು ವಾಂತಿ ಮಾಡಿಕೊಂಡರು. ಇದನ್ನರಿತ ವಾಸನ್ ಮತ್ತವರ ಪತ್ನಿ ಆಕೆ ಪುನಃ ಚೇತರಿಸಿಕೊಳ್ಳುವವರೆಗೂ ಚೆನ್ನಾಗಿ ನೋಡಿಕೊಂಡರು. ಇದಕ್ಕೆ ಕೃತಜ್ಞತಾಪೂರ್ವಕವಾಗಿ ಮಧುಬಾಲಾ ಚಲನಚಿತ್ರಗಳ ಪ್ರೀಮಿಯರ್‌ಗಳಲ್ಲಿ ತನ್ನದೇ ಆದರೂ ಯಾವತ್ತೂ ಪಾಲ್ಗೊಳ್ಳುವುದಿಲ್ಲ ಎನ್ನುವ ತನ್ನ ನಿಯಮಗಳನ್ನು ಮುರಿದು, ತಾನೇ ಖುದ್ದಾಗಿ ವಾಸನ್‌ರ ಚಿತ್ರಗಳಾದ ಬಹುತ್ ದಿನ್ ಹುಯೆ/ಹುವೆ (1954) ಹಾಗೂ ಮುಂದಿನ ವರ್ಷದಲ್ಲಿನ ಇನ್ಸಾನಿಯತ್‌ (1955) ಚಿತ್ರದ ಪ್ರೀಮಿಯರ್‌ನಲ್ಲಿ ಪಾಲ್ಗೊಂಡರು. ಮದ್ರಾಸ್‌ನಲ್ಲಿ ನಡೆದ ಈ ಘಟನೆಯನ್ನು ಮಧುಬಾಲಾ ಬಹುಬೇಗ ಮರೆತು, ತನ್ನ ಕೆಲಸಗಳನ್ನು ಮುಂದುವರೆಸಿ A-ದರ್ಜೆಯ ನಟಿಯಾಗಿ ಹೊರಹೊಮ್ಮಲು ಸಾಧ್ಯವಾಯಿತು.

ಇದನ್ನರಿತ ಮಧುಬಾಲಾಳ ಕುಟುಂಬವು ತೀವ್ರ ಎಚ್ಚರ ವಹಿಸಿತು. ಹಾನಿಕಾರಕ ಅಥವಾ ಸೋಂಕಿನ ಪರಿಣಾಮಗಳನ್ನು ಕಡಿಮೆ ಮಾಡುವ ಸಲುವಾಗಿ ಸ್ಟುಡಿಯೋಗಳಲ್ಲಿ ಚಿತ್ರೀಕರಣ ನಡೆಸುವಾಗ, ಮನೆಯಲ್ಲಿ ತಯಾರು ಮಾಡಿದ ಅಡುಗೆಯನ್ನೇ ತಿನ್ನುತ್ತಿದ್ದರು ಹಾಗೂ ನಿರ್ದಿಷ್ಟ ಬಾವಿಗಳಿಂದ ತಂದ ನೀರನ್ನಷ್ಟೇ ಕುಡಿಯಲು ಬಳಸುತ್ತಿದ್ದರು. ಅಂತಿಮವಾಗಿ ಅವರ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟು ಅವರ ಜೀವನ ಹಾಗೂ ವೃತ್ತಿ ಬದುಕನ್ನು ಮೊಟಕುಗೊಳಿಸಿತು, ಆದರೂ 1950ರ ಸಮಯದಲ್ಲಿ, ಅಂತಹ ಅನಾರೋಗ್ಯ ಹಾಗೂ ದೈಹಿಕ ದೌರ್ಬಲ್ಯದಿಂದ ಬಳಲುತ್ತಿದ್ದರೂ ಮಧುಬಾಲಾ ತಮ್ಮ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಹಾಲಿವುಡ್‌ನ ಆಸಕ್ತಿ[ಬದಲಾಯಿಸಿ]

ಮಧುಬಾಲಾ ಭಾರತದ ಅತ್ಯದ್ಭುತ ನಟಿಯಾದ ನಂತರ, 1950ರ ಆರಂಭದಲ್ಲಿ ಅವರ ಕಡೆಗೆ ಹಾಲಿವುಡ್‌ನ ಗಮನವೂ ಹರಿಯಿತು. ಅವರು ಥಿಯೇಟರ್ ಆರ್ಟ್ಸ್‌ ನಂತಹ ಹಲವು ಅಮೇರಿಕನ್ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡರು. ಅವರ 1952ರ ಆಗಸ್ಟ್‌ ಸಂಚಿಕೆಯಲ್ಲಿ, ಮಧುಬಾಲಾರ ಪೂರ್ಣಪುಟದ ಭಾವಚಿತ್ರದೊಂದಿಗೆ ದೊಡ್ಡದೊಂದು ಲೇಖನವನ್ನು ಪ್ರಕಟಿಸಿದರು. ಆ ಲೇಖನದ ಶೀರ್ಷಿಕೆಯು ಹೀಗಿತ್ತು : ದಿ ಬಿಗ್ಗೆಸ್ಟ್ ಸ್ಟಾರ್ ಇನ್ ದಿ ವರ್ಲ್ಡ್ (ಅಂಡ್ ಶಿ ಹೀಸ್ ನಾಟ್ ಇನ್ ಬೆವೆರ್ಲಿ ಹಿಲ್ಸ್) . ಅದರಲ್ಲಿ ಆಕೆಯನ್ನು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ರಹಸ್ಯಪ್ರಿಯ ಹಾಗೂ ಅಲೌಕಿಕ ಕಾಲ್ಪನಿಕ ಸುಂದರ ಮಹಿಳೆಯಂತೆ ಬಿಂಬಿಸಲಾಗಿತ್ತು.

ಈ ಸಂದರ್ಭಗಳಲ್ಲಿ ಅದೇ ಸಮಯದಲ್ಲಿ, ಮುಂಬಯಿ ಹಾಗೂ ಅಲ್ಲಿನ ಚಲನಚಿತ್ರ ಸ್ಟುಡಿಯೋಗಳಿಗೆ ಭೇಟಿ ನೀಡಲು ಪ್ರವಾಸ ಕೈಗೊಂಡ ವೇಳೆ, ಅಮೇರಿಕದ ಚಲನಚಿತ್ರೋದ್ಯಮಿ ಫ್ರಾಂಕ್ ಕಾಪ್ರರವರನ್ನು ಹಿಂದಿ ಚಿತ್ರರಂಗದ ಗಣ್ಯರು ಆದರದಿಂದ ಸ್ವಾಗತಿಸಿ ಉಪಚರಿಸಿದರು. ಇದೆಲ್ಲದರ ನಡುವೆ ಆತ ನಿಜವಾಗಿಯೂ ಭೇಟಿ ಮಾಡಬೇಕು ಎಂದುಕೊಂಡಿದ್ದು, ಅವರು ಬರದೇಹೋದದ್ದರಿಂದ ಗಮನ ಸೆಳೆದವರು ಎಂದರೆ, ಮಧುಬಾಲಾ. ಕಾಪ್ರ ಒಂದು ಸಭೆ ನಡೆಸಿ, ಹಾಲಿವುಡ್‌ನಲ್ಲಿ ಮಧುಬಾಲಾ ನಟಿಸಬೇಕೆಂಬ ಪ್ರಸ್ತಾಪವನ್ನು ಮುಂದಿಟ್ಟರು. ಮಧುಬಾಲಾರ ತಂದೆ ಅದನ್ನು ಸಾರಾಸಗಟಾಗಿ ತಿರಸ್ಕರಿಸಿದರು ಹಾಗೂ ಅವರ ಸಂಭಾವ್ಯ ಹಾಲಿವುಡ್ ಚಿತ್ರೋದ್ಯಮದ ವೃತ್ತಿಯ ಸಾಧ್ಯತೆಯನ್ನು ಕೊನೆಗಾಣಿಸಿದರು.

ತಾರೆಯಾಗಿ ಮಧುಬಾಲಾ[ಬದಲಾಯಿಸಿ]

ಮಹಲ್‌ ನಂತರ ಮಧುಬಾಲಾರ ಹಲವು ಚಿತ್ರಗಳು ಯಶಸ್ಸು ಕಂಡವು. ತನ್ನನ್ನು ಹಾಗೂ ಕುಟುಂಬವನ್ನು ಹಣಕಾಸಿನ ಬಿಕ್ಕಟ್ಟಿನಿಂದ ಪಾರು ಮಾಡುವ ಒತ್ತಡದ ಹಿನ್ನೆಲೆಯಲ್ಲಿ, ಅವರು ಪ್ರೌಢಾವಸ್ಥೆಯ ವೃತ್ತಿಯ ಪ್ರಥಮ ನಾಲ್ಕು ವರ್ಷಗಳಲ್ಲಿ ಸರಿಸುಮಾರು ಇಪ್ಪತ್ತನಾಲ್ಕು ಚಿತ್ರಗಳಲ್ಲಿ ನಟಿಸಿದ್ದರು. ಅದರ ಪರಿಣಾಮವಾಗಿ, ಮಧುಬಾಲಾಳ ನಟನಾ ಸಾಮರ್ಥ್ಯಕ್ಕಿಂತ ಆಕೆಯ ಸೌಂದರ್ಯವೇ ಹೆಚ್ಚು ಎನ್ನುವ ಟೀಕೆಗಳು ಆಗಿನ ವಿಮರ್ಶಕರಿಂದ ಕೇಳಿಬಂದವು. ಇದಕ್ಕೆ ಕಾರಣ ಆಕೆ ಚಿತ್ರಗಳ ಆಯ್ಕೆಯಲ್ಲಿ ಬೇಜವಾಬ್ದಾರಿತನ ತೋರಿಸುತ್ತಿದ್ದುದು. ತನ್ನ ಕುಟುಂಬದ ಏಕೈಕ ಆರ್ಥಿಕ ಬೆಂಬಲವಾಗಿದ್ದ ಕಾರಣ ನಟಿಯಾಗಿ ವಿಶ್ವಾಸಾರ್ಹತೆ ಗಳಿಸುವ ನಿಟ್ಟಿನಲ್ಲಿ ಹಾನಿಕರವೆನಿಸುವ ಮಟ್ಟಿಗೆ, ಅವರು ಯಾವುದೇ ಚಿತ್ರಗಳನ್ನು ಮಾಡಲು ತಯಾರಾದರು. ಇದಕ್ಕಾಗಿ ನಂತರದಲ್ಲಿ ಅವರು ಪಶ್ಚಾತ್ತಾಪ ಪಟ್ಟರು.

ಚಿತ್ರ:Madhubala3.jpg

ಅವರಿಗೆ ಪ್ರತಿಷ್ಠಿತ ಚಿತ್ರಗಳ ಸವಾಲೊಡ್ಡುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆಯೂ ಇತ್ತು. ಉದಾಹರಣೆಗೆ ಬಿಮಲ್ ರಾಯ್‌ಬಿರಾಜ್‌ಬಹು (1954) ರೀತಿಯ ಚಿತ್ರಗಳು. ಕಾದಂಬರಿ ಓದಿದ ನಂತರ ಮಧುಬಾಲಾರು, ಚಿತ್ರದಲ್ಲಿನ ಪ್ರಮುಖ ಪಾತ್ರವನ್ನು ತಾವು ಮಾಡಲು ಅತ್ಯಂತ ಉತ್ಸುಕರಾಗಿದ್ದರು. ಆಕೆ ತನ್ನ ಮಾರುಕಟ್ಟೆ ಬೆಲೆಯನ್ನು ಕೇಳಬಹುದೆಂಬ ಕಲ್ಪನೆಯಿಂದ (ಆಗಿನ ಕಾಲದ ಅತಿ ಹೆಚ್ಚಿನ ಬೆಲೆ) ಬಿಮಲ್ ರಾಯ್‌, ತನ್ನ ಹೆಸರನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದ ಕಾಮಿನಿ ಕೌಶಲ್‌ಗೆ ಈ ಪಾತ್ರವನ್ನು ವರ್ಗಾಯಿಸುತ್ತಾರೆ. ಪಾತ್ರ ಕಳೆದುಕೊಳ್ಳುವಲ್ಲಿ ಬೆಲೆಯೇ ಪ್ರಮುಖ ಕಾರಣ ಎಂದು ಅರಿತ ನಂತರ, ಮಧುಬಾಲಾರು ಅದನ್ನು ತಾನು ಕೇವಲ ಒಂದು ರೂಪಾಯಿಗೇ ಮಾಡುತ್ತಿದ್ದೆ ಎಂದು ವ್ಯಥೆಪಡುತ್ತಾರೆ. ಇದು ಅವರು ತನ್ನನ್ನು ತಾನು ಪ್ರಬುದ್ಧ ನಟಿಯಾಗಿ ರೂಪಿಸಿಕೊಳ್ಳಬೇಕೆಂದು ಹೊಂದಿದ್ದ ಬಯಕೆಯನ್ನು ತೋರಿಸುತ್ತದೆ.

ತಾರೆಯಾಗಿ, ಮಧುಬಾಲಾ ಚಿತ್ರೋದ್ಯಮದ ಉನ್ನತ ಹಂತ ತಲುಪುತ್ತಾರೆ. ಆ ಸಮಯದಲ್ಲಿನ ಆಕೆಯ ಸಹ ಕಲಾವಿದರೆಂದರೆ ಆ ಅವಧಿಯ ಪ್ರಸಿದ್ಧಿ ಹೊಂದಿದ ಕಲಾವಿದರಾದ: ಅಶೋಕ್ ಕುಮಾರ್‌, ರಾಜ್‌ ಕಪೂರ್‌, ರೆಹ್‌ಮಾನ್‌, ಪ್ರದೀಪ್ ಕುಮಾರ್‌, ಶಮ್ಮಿ ಕಪೂರ್‌, ದಿಲೀಪ್ ಕುಮಾರ್‌, ಸುನಿಲ್ ದತ್ ಹಾಗೂ ದೇವ್ ಆನಂದ್‌. ಮಧುಬಾಲಾ ಆ ಕಾಲದ ಹಲವಾರು ಪ್ರಮುಖ ನಾಯಕಿಯರಾದ ಕಾಮಿನಿ ಕೌಶಲ್, ಸುರೈಯಾ, ಗೀತಾ ಬಾಲಿ, ನಳಿನಿ ಜಯಂತ್ ಹಾಗೂ ನಿಮ್ಮಿ ಜೊತೆಗೂ ಅಭಿನಯಿಸಿದ್ದಾರೆ. ಅವರು ಕೆಲಸ ಮಾಡಿದ ಪ್ರಮುಖ ಹಾಗೂ ಗೌರವಾನ್ವಿತ ನಿರ್ದೇಶಕರೆಂದರೆ: ಮೆಹಬೂಬ್‌ ಖಾನ್‌ (ಅಮರ್‌ ), ಗುರು ದತ್ (Mr. & Mrs' 55 ), ಕಮಲ್ ಆಮ್ರೋಹಿ (ಮಹಲ್‌ ) ಹಾಗೂ K. ಆಸಿಫ್‌ (ಮುಘಲ್-ಎ-ಆಜಂ ). ಅವರು ನಾತಾ (1955) ಎಂಬ ಚಿತ್ರ ನಿರ್ಮಾಣವನ್ನೂ ಮಾಡಿದ್ದು ಅದರಲ್ಲಿ ಅಭಿನಯಿಸಿಯೂ ಇದ್ದರು.

ಮಧುಬಾಲಾ 1950ರ ಸಮಯದಲ್ಲಿ ತಾನು ಹಲವು ರೀತಿಯಲ್ಲಿ ಬಹುಮುಖ ಪ್ರತಿಭೆಯೆಂದು ಸಾಬೀತು ಪಡಿಸಿದ್ದು, ಆ ಸಮಯದಲ್ಲಿ ಮೂಡಿಬಂದ ಎಲ್ಲ ಪ್ರಕಾರದ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಅವರು ಸೊಕ್ಕಿನಿಂದ ಮೆರೆಯುವ ಚೆಲುವಿನ ಮೂಲ ಮಹಿಳೆಯಾಗಿಯೂ ಜನಪ್ರಿಯ ಬಾದಲ್‌ ನಲ್ಲಿ (1951) ಪಾತ್ರ ನಿರ್ವಹಿಸಿದ್ದಾರೆ ಹಾಗೂ ನಂತರದಲ್ಲಿ ಬಂದ ತರಾನಾ ದಲ್ಲಿ (1951), ಹಳ್ಳಿ ಸುಂದರಿಯ ಪಾತ್ರ ಮಾಡಿದ್ದಾರೆ. ಅವರು ಸಂಗ್‌ದಿಲ್‌ ನಲ್ಲಿ (1952) ಭಾರತೀಯ ಸಂಪ್ರದಾಯಸ್ಥ ಹೆಣ್ಣಿನ ಪಾತ್ರವನ್ನೂ ನಿರ್ವಹಿಸಿದ್ದಾರೆ ಹಾಗೂ ಗುರುದತ್ತರ ಸಾಂಪ್ರದಾಯಿಕ ಶೈಲಿಯ Mr. & Mrs. ' 55 ನಲ್ಲಿ (1955) ಶ್ರೀಮಂತ ಮನೆತನದ ಅಹಮಿಕ ನಡತೆಯ ಅನೀತಾ ಆಗಿ ಒಂದು ಹಾಸ್ಯಪಾತ್ರವನ್ನು ನಿರ್ವಹಿಸಿದ್ದರು. 1956ರಲ್ಲಿ ಬಂದ ಐತಿಹಾಸಿಕ ನಾಟಕಗಳಾದ ಶಿರೀನ್-ಫರ್‌ಹಾದ್‌ ಹಾಗೂ ರಾಜ್-ಹಾಥ್‌ ಗಳಲ್ಲಿ ಕೂಡ ಯಶಸ್ವಿಯಾದರು. ಸಮಕಾಲೀನ ಪಾತ್ರಗಳಲ್ಲಿಯೂ ಯಶಸ್ಸು ಗಳಿಸಿದ ಅವರು, ಸಾಮಾಜಿಕ ಚಿತ್ರವಾದ ಕಲ್ ಹಮಾರಾ ಹೈ ನಲ್ಲಿ (1959) ಸ್ಮರಣೀಯ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಧುಬಾಲಾರು ಸಿಗರೇಟು ಸೇದುವ ನರ್ತಕಿ ಬೆಲ್ಲಾ ಹಾಗೂ ಆಕೆಯ ಹೆಚ್ಚು ಸಾಂಪ್ರದಾಯಿಕ ಹಾಗೂ ಸಾಧು ಸ್ವಭಾವದ ಸೋದರಿ ಮಧುವಿನ ಪಾತ್ರದಲ್ಲಿ ಮೋಡಿ ಮಾಡಿದ್ದರು.

ಹಠಾತ್ ಆಗಿ 1950ರ ದಶಕದ ಮಧ್ಯದಲ್ಲಿ, ಮೆಹಬೂಬ್‌ ಖಾನ್‌ಅಮರ್‌ (1954) ಸೇರಿದಂತೆ ಅವರ ಪ್ರಮುಖ ಚಿತ್ರಗಳು ಸೋಲನ್ನು ಕಂಡದ್ದರಿಂದಾಗಿ, ಅವರಿಗೆ "ಗಲ್ಲಾ ಪೆಟ್ಟಿಗೆಯ ವಿಷ" ಎಂಬ ಹಣೆಪಟ್ಟಿಯನ್ನಿತ್ತರು. 1958ರ ಸಮಯದಲ್ಲಿ ಅವರ ವೃತ್ತಿಜೀವನದಲ್ಲಿ ತಿರುವು ಕಂಡು, ಅಪರೂಪದ ಯಶಸ್ವೀ ಚಿತ್ರಗಳನ್ನು ನೀಡಿದರು, ಅವುಗಳೆಂದರೆ: ಹೌರಾ ಬ್ರಿಡ್ಜ್‌ ನಲ್ಲಿ ಅಶೋಕ್ ಕುಮಾರ್‌ ಜೊತೆಗ ನಟಿಸಿದ್ದ ಮಧುಬಾಲಾ, ಅದರಲ್ಲಿ ಕಲ್ಕತ್ತಾದ ಚೈನಾ ಟೌನ್‌ನ ಭೂಗತ ಲೋಕದೊಂದಿಗೆ ವೈಷಮ್ಯ ಕಟ್ಟಿಕೊಂಡ ಆಂಗ್ಲೊ-ಇಂಡಿಯನ್ ಕ್ಯಾಬರೆ ಗಾಯಕಿಯ ವಿಶೇಷ ಪಾತ್ರವನ್ನು ಮಾಡಿದ್ದರು. ಅವರ ಉಡುಪಿನಲ್ಲಿ ನೇತಾಡುವ ಬಂಧಕಗಳು, ಆಳವಾಗಿ ಕತ್ತರಿಸಿದ ರವಿಕೆಗಳು, ಮೈಗೆ ಅಂಟಿಕೊಂಡಂತಿರುವ ಕ್ಯಾಪ್ರಿ ಪ್ಯಾಂಟುಗಳು ಹಾಗೂ ಚೀನೀ ಮಾದರಿಯ ಉಡುಪುಗಳಿಂದಾಗಿ, ಪಾಶ್ಚಾತ್ಯ ರೂಪಕವಾಗಿ ದಿಟ್ಟತನದಿಂದ(ಆ ಸಮಯದಲ್ಲಿ) ನಟಿಸಿದ ಅವರು ದೊಡ್ಡ ಪ್ರಮಾಣದ ಪ್ರಭಾವ ಬೀರಿದ್ದರು. ಮಧುಬಾಲಾರ ಆಯೆ/ಹೇ ಮೆಹರ್‌ಬಾನ್‌ ಚಿತ್ರದಲ್ಲಿ ಆಶಾ ಭೋಂಸ್ಲೆ/ಭೋಸ್ಲೆ ಹಾಡಿರುವ ಪ್ರಖ್ಯಾತ ದೀವಟಿಗೆಯ/ವಿಫಲಪ್ರೇಮದ ಹಾಡು, ಅಭಿಮಾನಿಗಳ ಮನ ಸೂರೆ ಮಾಡಿದ್ದು, ಈಗಲೂ ಅದು ಎಲ್ಲೆಡೆ ಪ್ರಚಲಿತದಲ್ಲಿದ್ದು ಸಂಭ್ರಮಿಸಿ ಹಾಡಲಾಗುತ್ತದೆ. ಹೌರಾ ಬ್ರಿಡ್ಜ್‌ ನಂತರದಲ್ಲಿ ಬಂದ ಭರತ್ ಭೂಷಣ್‌ ಜೊತೆ ನಟಿಸಿದ ಫಗುಣ್‌/ಫಗುನ್‌ ‌, ದೇವ್ ಆನಂದ್‌ ಜೊತೆ ನಟಿಸಿದ ಕಾಲಾಪಾನಿ , ತನ್ನ ಭಾವಿ ಗಂಡ ಕಿಶೋರ್‌ ಕುಮಾರ್‌ ಜೊತೆ ನಟಿಸಿ ಬಹು ವರ್ಷ ಪ್ರದರ್ಶಿತವಾದ ಚಲ್ತಿ ಕಾ ನಾಮ್ ಗಾಡಿ , ಹಾಗೂ ಮತ್ತೊಮ್ಮೆ ಭರತ್ ಭೂಷಣ್‌ ಜೊತೆಯಾಗಿ ನಟಿಸಿದ ಬರ್‌ಸಾತ್ ಕಿ ರಾತ್‌ (1960) ಪ್ರಸಿದ್ಧ ಚಿತ್ರಗಳಾಗಿವೆ.

ಅವರ 1960ರ ಕಾಲದ ಈ ಪ್ರಚಂಡ ಯಶಸ್ಸುಗಳು, ಹಾಗೂ ಮಹಾಕಾವ್ಯವನ್ನು ಆಧರಿಸಿದ ಅತ್ಯಂತ-ದುಬಾರಿ ಬಡ್ಚೆಟ್‌ನ ಐತಿಹಾಸಿಕ ಚಿತ್ರವಾದ, ಮುಘಲ್-ಎ-ಆಜಂ ನಲ್ಲಿ ಕಾಣಿಸಿಕೊಂಡ ನಂತರ ಅವರ ಸೂಪರ್ ಸ್ಟಾರ್ ಘನತೆಯು ಮತ್ತಷ್ಟು ಹೆಚ್ಚಿತು. ಈ ಚಿತ್ರಕ್ಕೆ ಅವರಿಗೆ, ವೃತ್ತಿಜೀವನದ ಅತ್ಯುನ್ನತ ಸ್ಥಾನ ಹಾಗೂ ಭಾರತೀಯ ಚಿತ್ರರಂಗಕ್ಕೆ ಸಂಪೂರ್ಣ ದಶಕದ ಅತ್ಯುನ್ನತ ಸ್ಥಾನ ದೊರಕಿಸಿಕೊಟ್ಟಿತು ಎಂಬ ವ್ಯಾಪಕ ಗಣ್ಯತೆ ನೀಡಲಾಗಿದೆ.

ಖಾಸಗಿ ಜೀವನ ಹಾಗೂ ನ್ಯಾಯಾಲಯದಲ್ಲಿನ ವಿವಾದಾತ್ಮಕ ಪ್ರಕರಣ[ಬದಲಾಯಿಸಿ]

ನಟ ಹಾಗೂ ಅವರ ವಾಡಿಕೆಯ ಸಹನಟ ದಿಲೀಪ್ ಕುಮಾರ್‌ ಹಾಗೂ ಮಧುಬಾಲಾರ ನಡುವೆ ಬಹಳ ದಿನ ಪ್ರಣಯ ಪ್ರಸಂಗ ನಡೆದಿತ್ತು. ಅವರು ಪ್ರಥಮವಾಗಿ ಭೇಟಿಯಾಗಿದ್ದು ಜ್ವರ್ ಬಹ್‌ತಾ/ಭಾತಾ (1944) ಸೆಟ್‌ನಲ್ಲಿ, ಹಾಗೂ ಪುನಃ ಹರ್ ಸಿಂಗಾರ್‌ (1949) ಚಿತ್ರದಲ್ಲಿ ಜೊತೆಯಾಗಿ ನಟಿಸಿದರಾದರೂ ಅದು ಎಂದಿಗೂ ಪೂರ್ಣಗೊಳ್ಳಲಿಲ್ಲ ಅಥವಾ ಬಿಡುಗಡೆಯಾಗಲಿಲ್ಲ. ಎರಡು ವರ್ಷಗಳ ನಂತರ, ತರಾನಾ (1951) ಚಿತ್ರದ ಚಿತ್ರೀಕರಣದಲ್ಲಿ, ಅವರ ತೆರೆಯಾಚೆಗಿನ ಬಾಂಧವ್ಯ ಶುರುವಾಯಿತು. ಒಟ್ಟಾರೆ ಆ ಜೋಡಿಯು ನಾಲ್ಕು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದು, ತೆರೆಯ ಮೇಲೂ ಮನಮೋಹಕ ಪ್ರಣಯ ಜೋಡಿಯಾಗಿದ್ದರು.

ಮಧುಬಾಲಾ ಪ್ರಚಾರದಿಂದ ದೂರವೇ ಉಳಿದಿದ್ದು, ಯಾವತ್ತೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ (1954ರ ಬಹುತ್ ದಿನ್ ಹುಯೆ/ಹುವೆ ಚಿತ್ರದ ಪ್ರೀಮಿಯರ್‌ ಹೊರತು ಪಡಿಸಿದರೆ) ಹಾಗೂ ಅವರು ಅಪರೂಪಕ್ಕೊಮ್ಮೆ ಸಂದರ್ಶನ ನೀಡುತ್ತಿದ್ದರು. ಚಿತ್ರರಂಗ ಮಾಧ್ಯಮವು ಅವರ ಖಾಸಗೀ ಜೀವನ ಹಾಗೂ ಪ್ರಣಯ ಸಂಬಂಧವನ್ನು ಆಗ್ಗಿಂದಾಗ್ಗೆ ಚರ್ಚಿಸುತ್ತಿದ್ದು, ಅದರಲ್ಲಿ ದಿಲೀಪ್ ಕುಮಾರ್‌ರ ಹೆಸರನ್ನು ಪದೇ ಪದೇ ಉಲ್ಲೇಖಿಸಲಾಗುತ್ತಿತ್ತು. ಅವರಿಬ್ಬರೂ 1955ರಲ್ಲಿ, ತಮ್ಮ ಪ್ರಣಯ ಸಂಬಂಧವು ಚಾಲ್ತಿಯಲ್ಲಿದ್ದ ಸಮಯದಲ್ಲೇ ನಿಸ್ಸಂಕೋಚವಾಗಿ ಅಪರೂಪಕ್ಕೆಂಬಂತೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಂತರ ಈ ಗಾಳಿಮಾತುಗಳು ಸಾಬೀತಾದವು. ಬೇರೆ ಯಾವುದೇ ರೀತಿ ಚಿತ್ರದೊಂದಿಗೆ ಸಂಬಂಧಪಟ್ಟಿರದಿದ್ದರೂ ಮಧುಬಾಲಾ ದಿಲೀಪ್ ಕುಮಾರ್‌ ಜೊತೆಗೆ ಆತನ ಚಿತ್ರವಾದ ಇನ್ಸಾನಿಯತ್‌ ನ (1955) ಪ್ರೀಮಿಯರ್‌ಗೆ ಬಂದರು. ಬಹುತ್ ದಿನ್ ಹುಯೆ/ಹುವೆ (1954) ಚಿತ್ರೀಕರಣದ ಸಮಯದಲ್ಲಿ ಅಸ್ವಸ್ಥಗೊಂಡಿದ್ದ ಸಂದರ್ಭದಲ್ಲಿ ಚೆನ್ನಾಗಿ ನೋಡಿಕೊಂಡ, ನಿರ್ಮಾಪಕ ಹಾಗೂ ನಿರ್ದೇಶಕ S. S. ವಾಸನ್‌ರಿಗೆ ಕೃತಜ್ಞತೆ ಸಲ್ಲಿಸುವ ಮತ್ತೊಂದು ರೀತಿ ಇದಾಗಿರಬಹುದಾದರೂ, ಈ ಕಾಣಿಸಿಕೊಳ್ಳುವಿಕೆಯು ಮತ್ತೊಂದು ಕಾರಣಕ್ಕೆ ಗಮನಾರ್ಹವಾಗಿತ್ತು. ಪ್ರೀಮಿಯರ್‌ಗೆ ಅಧಿಕೃತವಾಗಿ ದಿಲೀಪ್‌ ಕುಮಾರ್‌ರ ಒಡನಾಡಿಯಾಗಿ ಹಾಜರಾಗುವ ಮೂಲಕ ತಮ್ಮಿಬ್ಬರ ನಡುವಿನ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡರು.

ಮಧುಬಾಲಾ ಹಾಗೂ ಕುಮಾರ್‌ ಜೊತೆಗಿನ ಪ್ರಣಯ ಬಾಂಧವ್ಯ 1951ರಿಂದ 1956ರ ನಡುವಿನ ಕೇವಲ ಐದು ವರ್ಷಗಳಲ್ಲಿ ಮುರಿದು ಬಿತ್ತು. ಅವರ ಒಡನಾಟವು ಬಹು ವಿವಾದಾತ್ಮಕವಾಗಿ ಹಾಗೂ ಸಾರ್ವಜನಿಕಗೊಂಡ ನ್ಯಾಯಾಲಯದಲ್ಲಿನ ಪ್ರಕರಣದಿಂದಾಗಿ ಕೊನೆಯಾಯಿತು. ಮಧುಬಾಲಾ ಹಾಗೂ ದಿಲೀಪ್ ಕುಮಾರ್‌ ನಟನೆಯ ಹಾಗೂ B.R. ಚೋಪ್ರಾ ನಿರ್ದೇಶನದ ನಯಾ ದೌರ್‌ (1957) ಚಿತ್ರ ತಂಡವು, ಭೋಪಾಲ್‌ ತೆರಳಿ ವಿಸ್ತೃತಗೊಂಡ ಹೊರಾಂಗಣ ಚಿತ್ರೀಕರಣ ನಡೆಸಲು ನಿರ್ಧರಿಸಿತ್ತು. ಅತಾವುಲ್ಲಾ ಖಾನ್‌ ಇದಕ್ಕೆ ಅಸಮ್ಮತಿಸಿದ್ದಲ್ಲದೇ ಭೋಪಾಲ್‌ನ ಸಂಪೂರ್ಣ ಯೋಜನೆಯು ದಿಲೀಪ್ ಕುಮಾರ್‌ಗೆ ತನ್ನ ಮಗಳ ಜೊತೆ ಪ್ರಣಯ ಮಾಡಲು ಅವಕಾಶ ನೀಡುವ ತಂತ್ರವಾಗಿದೆ ಎಂದು ಆಪಾದಿಸುತ್ತಾರೆ. ಕೊನೆಗೆ, ಚೋಪ್ರಾ ಮಧುಬಾಲಾ ತನ್ನಿಂದ ಚಿತ್ರದಲ್ಲಿ ನಟಿಸುವುದಾಗಿ ಹೇಳಿ ಮುಂಗಡ ಹಣ ಪಡೆದಿದ್ದು ಈಗ ಅದನ್ನು ಮುಗಿಸಲು ಯಾವುದೇ ರೀತಿಯ ಆಸಕ್ತಿ ತೋರಿಸುತ್ತಿಲ್ಲ ಎನ್ನುವ ಕಾರಣವೊಡ್ಡಿ ಆಕೆಯ ಮೇಲೆ ದಾವೆ ಹೂಡುತ್ತಾರೆ. ಆಕೆಯ ಬದಲು ದಕ್ಷಿಣ ಭಾರತದ ನಟಿಯಾದ ವೈಜಯಂತಿ ಮಾಲಳನ್ನು ಅಯ್ಕೆ ಮಾಡಿಕೊಳ್ಳುತ್ತಾರೆ ಕೂಡಾ. ದಿಲೀಪ್ ಕುಮಾರ್‌ರೊಂದಿಗೆ ಒಡನಾಟದ ಬದ್ಧತೆ ಇದ್ದಾಗ್ಯೂ, ಮಧುಬಾಲಾ ತನ್ನ ತಂದೆಯನ್ನು ವಿಧೇಯವಾಗಿ ಬೆಂಬಲಿಸುತ್ತಾರೆ. ಕುಮಾರ್‌ರು ಮಧುಬಾಲಾ ಮತ್ತು ಅತಾವುಲ್ಲಾ ಖಾನ್‌ ವಿರುದ್ಧ ಹಾಗೂ ನಿರ್ದೇಶಕ B.R. ಚೋಪ್ರಾ ಪರವಾಗಿ ತುಂಬಿದ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಿದರು. ಮಧುಬಾಲಾ ಮತ್ತವರ ತಂದೆ ಆ ಕೇಸನ್ನು ಸೋತರು ಹಾಗೂ ಸಾರ್ವಜನಿಕವಾಗಿ ಅಪಖ್ಯಾತಿಗೆ ಒಳಗಾದರು. ಅಲ್ಲಿಯ ತನಕ ಮಧುಬಾಲಾ ಚಿತ್ರರಂಗದಲ್ಲಿ, ವಿಶ್ವಾಸಾರ್ಹ ಹಾಗೂ ವೃತ್ತಿಪರ ನಟಿ ಎನ್ನುವ ಖ್ಯಾತಿಯನ್ನು ಕಷ್ಟಪಟ್ಟು ಸಂಪಾದಿಸಿದ್ದರು. ಈ ಘಟನೆಯ ನಂತರ ಆಕೆಯ ಬಗೆಗಿನ ಸಾರ್ವಜನಿಕ ಅಭಿಪ್ರಾಯಕ್ಕೆ ತೀವ್ರತರವಾದ ಧಕ್ಕೆ ಉಂಟಾಯಿತು. ಇದರ ಪರಿಣಾಮವಾಗಿ ಮಧುಬಾಲಾ ಹಾಗೂ ದಿಲೀಪ್ ಕುಮಾರ್‌ ಆ ಸಮಯದಿಂದ ಬೇರೆಯಾದರು.

ರೆಡಿಫ್‌ ನ್ಯೂಸ್ ಅವರ ಸಹೋದರಿಯಾದ ಮಧುರ್ ಭೂಷಣ್‌ ಜೊತೆ ಮಾತನಾಡಿದಾಗ‌, ಸನ್ನಿವೇಶದ ಬಗೆಗಿನ ಅವರ ಕಥನ ಹೀಗಿತ್ತು:[೧]

The reason Madhubala broke up with Dilip Kumar was B R Chopra's film Naya Daur, not my father. Madhubala had shot a part of the film when the makers decided to go for an outdoor shoot to Gwalior. The place was known for dacoits, so my father asked them to change the location. They disagreed because they wanted a hilly terrain. So my father asked her to quit the film. He was ready to pay the deficit. Chopra asked Dilip Kumar for help. Dilipsaab and Madhubala were engaged then. Dilipsaab tried to mediate but Madhubala refused to disobey her father. Chopra's production filed a case against her, which went on for a year. But this did not spoil their relationship. Dilipsaab told her to forget movies and get married to him. She said she would marry him, provided he apologised to her father. He refused, so Madhubala left him. That one 'sorry' could have changed her life. She loved Dilipsaab till the day she died.

ಚಲ್ತಿ ಕಾ ನಾಮ್ ಗಾಡಿ (1958) ಹಾಗೂ ಜುಮ್‌ರೂ (1961) ಚಿತ್ರೀಕರಣದ ಸಂದರ್ಭದಲ್ಲಿ ಆಕೆ ಅವರ ಪತಿ, ನಟ ಹಾಗೂ ಹಿನ್ನೆಲೆ ಗಾಯಕ ಕಿಶೋರ್‌ ಕುಮಾರ್‌ರನ್ನು ಭೇಟಿ ಮಾಡುತ್ತಾರೆ. ಆ ಸಮಯದಲ್ಲಿ ಅವರು ಬಂಗಾಳೀ ಗಾಯಕಿ ಹಾಗೂ ನಟಿ ರುಮಾ ಗುಹಾ ಥಾಕುರ್‌ತಾರನ್ನು ಮದುವೆಯಾಗಿದ್ದರು. ವಿಚ್ಛೇದನ ಪಡೆದ ನಂತರ, ಕಿಶೋರ್‌ ಕುಮಾರ್‌ ಹಿಂದೂ ಹಾಗೂ ಮಧುಬಾಲಾ ಮುಸಲ್ಮಾನರಾದ್ದರಿಂದ, ಅವರುಗಳು 1960ರಲ್ಲಿ ಸಾರ್ವಜನಿಕವಾಗಿ ರಿಜಿಸ್ಟರ್‌ ಮದುವೆ ಸಮಾರಂಭ ಏರ್ಪಡಿಸಿದರು. ಆದರೆ ಆತನ ತಂದೆತಾಯಿ ಮದುವೆಗೆ ಹಾಜರಾಗಲು ನಿರಾಕರಿಸಿದರು. ಕುಮಾರ್‌ರ ತಂದೆತಾಯಿಗಾಗಿ ಹಿಂದೂ ವಿಧಿಯ ಪ್ರಕಾರವೂ ಮದುವೆಯನ್ನು ನೆರವೇರಿಸಿದರಾದರೂ, ಮಧುಬಾಲಾರನ್ನು ಅವರು ಹೆಂಡತಿ ಎಂದು ವಾಸ್ತವವಾಗಿ ಯಾವತ್ತಿಗೂ ಒಪ್ಪಿಕೊಳ್ಳಲಿಲ್ಲ. ಕುಮಾರ್‌ ಮನೆಯಲ್ಲಿನ ಕೌಟುಂಬಿಕ ತೊಂದರೆಗಳಿಂದಾಗಿ, ಮದುವೆಯಾದ ಒಂದೇ ತಿಂಗಳಲ್ಲಿ ಮುಂಬೈಯ ಬಾಂದ್ರಾದಲ್ಲಿನ ತಮ್ಮ ಬಂಗಲೆಗೆ ವಾಪಸಾದರು. ಅವರು ಮದುವೆಯಾಗಿಯೇ ಉಳಿದಿದ್ದರೂ ಇದು ಮಧುಬಾಲಾಳ ಜೀವನದಲ್ಲಿ ಒಂದು ಕಹಿ ಘಟನೆಯಾಗಿ ಉಳಿದುಹೋಯಿತು.

ಮುಘಲ್-ಎ-ಆಜಂ ಹಾಗೂ ನಂತರದ ಸಾಧನೆಗಳು[ಬದಲಾಯಿಸಿ]

ಮುಘಲ್-ಎ-ಆಜಂ ಚಿತ್ರದಲ್ಲಿನ ದುರದೃಷ್ಟಕರ ವೇಶ್ಯೆ ಅನಾರ್ಕಲಿಯ ಪಾತ್ರವು, ಅವರು ಶ್ರೇಷ್ಠ ಹಾಗೂ ನಿರ್ಧಾರಕ ನಟಿಯಾಗಲು ಕಾರಣವಾಯಿತು. ಮಧುಬಾಲಾರ ಅನಾರೋಗ್ಯದ ತೀವ್ರತೆಯ ಬಗ್ಗೆ ಅರಿವಿಲ್ಲದ ನಿರ್ದೇಶಕ K. ಆಸಿಫ್‌, ದೀರ್ಘ ಹಾಗೂ ತ್ರಾಸದಾಯಕ ಚಿತ್ರೀಕರಣದ ಯೋಜನೆಯನ್ನು ರೂಪಿಸಿದ್ದರಿಂದ ಆಕೆಯ ದೈಹಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಯಿತು. ಈ ಶ್ರಮದಾಯಕ ಚಟುವಟಿಕೆಗಳಲ್ಲಿ ಅವಕುಠನ ಧರಿಸಿ ಉಸಿರುಗಟ್ಟಿಸುವ ಮೇಕಪ್‌ ಅಳವಡಿಸಿಕೊಂಡು ಧಗೆಯುಂಟು ಮಾಡುವ ಸ್ಟುಡಿಯೋ ದೀಪಗಳಡಿ ಪ್ರತಿಮೆಯಂತೆ ಇರುವುದು ಅಥವಾ ಭಾರದ ಸರಪಣಿಗಳಿಂದ ಕಟ್ಟಿಸಿಕೊಂಡಿರುವುದಾಗಿರುವುದು ಸೇರಿದ್ದವು. 1951ರಿಂದ 1959ರವರೆಗೂ ಮಧುಬಾಲಾ ಮುಘಲ್-ಎ-ಆಜಂ ನಲ್ಲಿ ತನ್ನ ಸಂಪೂರ್ಣ ಪ್ರತಿಭೆಯನ್ನು ಧಾರೆ ಎರೆದಿದ್ದರು. 1956ರಲ್ಲಿ ದಿಲೀಪ್ ಕುಮಾರ್‌ರಿಂದ ಬೇರೆಯಾದ ಅನಂತರ, ಮಧುಬಾಲಾ ಹಾಗೂ ಆಗಿನ ಪರಿಸ್ಥಿತಿಯಲ್ಲಿ ಆಕೆಯಿಂದ ಬೇರ್ಪಟ್ಟ ಸಹನಟನ ಜೊತೆ, ಚಿತ್ರದ ಉಳಿದ ಪ್ರಣಯದ ದೃಶ್ಯಗಳನ್ನು ಬಹಳ ಒತ್ತಡ ಹಾಗೂ ಪ್ರಯಾಸದಾಯಕವಾಗಿ ಚಿತ್ರೀಕರಿಸಲಾಯಿತು. ಈ ಭಾವುಕ ಹಾಗೂ ದೈಹಿಕ ಶ್ರಮದಾಯಕ ಅನುಭವವು ಅವರ ಆರೋಗ್ಯ ತೀವ್ರತರವಾಗಿ ಹದಗೆಡಲು ಪ್ರಮುಖ ಕಾರಣವಾಯಿತೆಂಬ ವಿಚಾರವನ್ನು ವ್ಯಾಪಕವಾಗಿ ಗ್ರಹಿಸಲಾಗಿತ್ತು.

1960ರ ಆಗಸ್ಟ್‌ 5ರಲ್ಲಿ, ಮುಘಲ್-ಎ-ಆಜಂ ಬಿಡುಗಡೆ ಹೊಂದಿತು, ಹಾಗೂ ಆ ಕಾಲಕ್ಕೆ ಅತಿ ಹೆಚ್ಚು ಆದಾಯ ತಂದುಕೊಟ್ಟ ಚಲನಚಿತ್ರವಾಗಿ ಹೊರ ಹೊಮ್ಮಿ, 15 ವರ್ಷಗಳ ಕಾಲ ಅಂದರೆ 1975ರಲ್ಲಿ ಶೋಲೆ ಬಿಡುಗಡೆ ಆಗುವವರೆಗೂ ಆ ದಾಖಲೆಯನ್ನು ಹಾಗೆಯೇ ಉಳಿಸಿಕೊಂಡಿತ್ತು. ಈಗಲೂ ಆ ಚಿತ್ರವು ಭಾರತೀಯ ಸಿನಿಮಾ ರಂಗದ (ಹಣದುಬ್ಬರವನ್ನು ಹೊಂದಿಸಲಾದ) ಸಾರ್ವಕಾಲಿಕ ಯಶಸ್ವೀ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚಿತ್ರರಂಗದ ಗೌರವಾನ್ವಿತ ಪ್ರತಿಭಾನ್ವಿತ ನಟರಾದ ಪೃಥ್ವಿರಾಜ್‌ ಕಪೂರ್‌, ದುರ್ಗಾ ಖೋಟೆ, ಹಾಗೂ ದಿಲೀಪ್ ಕುಮಾರ್‌ರಂತವರ ಜೊತೆ ಕಾರ್ಯ ನಿರ್ವಹಿಸಿದ್ದರೂ ಸಹಾ, ವಿಮರ್ಶಕರು ಹಲವು ಸ್ತರಗಳ ಪಾತ್ರ ನಿರ್ವಹಿಸಿದ ಮಧುಬಾಲಾರ ಪ್ರತಿಭೆಯನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಫಿಲ್ಮ್‌ಫೇರ್ ಪ್ರಶಸ್ತಿಗಾಗಿ ಆಯ್ಕೆಯಾದಾಗ ಸಮಯದಲ್ಲಿ ಆಕೆ ಪ್ರಬುದ್ಧ ನಟಿ ಎಂದು ಗುರುತಿಸಲ್ಪಟ್ಟರು. ಹಾಗಿದ್ದರೂ ಅವರು ಅದನ್ನು ಗೆಲ್ಲಲಾಗಲಿಲ್ಲ, ಘೂಂಘಟ್‌ (1960) ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ ಬೀನಾ ರಾಯ್‌ರವರಿಂದ ಆ ಪ್ರಶಸ್ತಿಯಲ್ಲಿ ಸೋಲು ಕಂಡರು. ಖತೀಜಾ ಅಕ್ಬರ್‌ರ ಆತ್ಮಕಥನದಲ್ಲಿ ಮಧುಬಾಲಾ (ಉಲ್ಲೇಖ ವಿಭಾಗದಲ್ಲಿ ನೋಡಿ), ದಿಲೀಪ್ ಕುಮಾರ್‌ ಅವರ ಪ್ರತಿಭೆಗೆ ಗೌರವ ಸಲ್ಲಿಸುತ್ತಾ: "ಆಕೆಯು ಬದುಕಿದ್ದರೆ, ಹಾಗೂ ತನ್ನ ಚಿತ್ರಗಳನ್ನು ಸ್ವಲ್ಪ ಎಚ್ಚರಿಕೆಯಿಂದ ಆಯ್ದುಕೊಂಡಿದ್ದರೆ, ಆಕೆ ತನ್ನ ಸಮಕಾಲೀನರಿಗಿಂತ ಶ್ರೇಷ್ಟ ಮಟ್ಟ ತಲುಪಬಹುದಿತ್ತು. ಅದರ ಹೊರತಾಗಿ ತುಂಬಾ ಸಾಮರ್ಥ್ಯವುಳ್ಳ ಹಾಗೂ ನಟನೆಯಲ್ಲಿ ಹೆಸರುವಾಸಿ ಆಗಿದ್ದರೂ, ಅವರು ಪ್ರೀತಿಪಾತ್ರ ಹಾಗೂ ಹಸನ್ಮುಖಿ ಗುಣ ಹೊಂದಿದ್ದರು. ದೇವರು ಆಕೆಗೆ ಬಹಳವನ್ನು ಕಾಣಿಕೆಯಾಗಿ ಕೊಟ್ಟಿದ್ದಾನೆ..."

1960ರಲ್ಲಿ ಒಂದರ ಹಿಂದೆ ಒಂದರಂತೆ ಬಂದು ಪ್ರಚಂಡ ಯಶಸ್ಸು ಕಂಡ ಚಿತ್ರಗಳಾದ ಮುಘಲ್-ಎ-ಆಜಂ ಹಾಗೂ ಬರ್‌ಸಾತ್ ಕಿ ರಾತ್‌ ಚಿತ್ರಗಳಿಂದಾಗಿ, ಮಧುಬಾಲಾ ತನ್ನ ವೃತ್ತಿಜೀವನದ ಉನ್ನತ ಹಂತ ತಲುಪಿ ಪ್ರಖ್ಯಾತಿ ಹೊಂದಿದರು. ಅವರಿಗೆ ಒಳ್ಳೆಯ, ಲೇಖಕ-ಬೆಂಬಲಿತ ಪಾತ್ರಗಳನ್ನು ನೀಡಲಾಯಿತು, ಆದರೆ ಹದಗೆಟ್ಟ ಅವರ ಆರೋಗ್ಯವು, ಕಲಾವಿದೆಯಾಗಿ ಹೊರಹೊಮ್ಮಲು ಹಾಗೂ ಆ ಕ್ಷಣಗಳನ್ನು ಅನುಭವಿಸಲು ಬಿಡಲಿಲ್ಲ. ಈ ಸಂದರ್ಭದಲ್ಲಿ, ಮಧುಬಾಲಾರ ಆರೋಗ್ಯವು ವಿಪರೀತ ಹದಗೆಟ್ಟು ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುವುದು ಹಾಗಿರಲಿ, ಸಧ್ಯಕ್ಕೆ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿಕೊಡಲೂ ಸಾಧ್ಯವಾಗಲಿಲ್ಲ. ಖತೀಜಾ ಅಕ್ಬರ್‌ರ ಆತ್ಮಕಥನದಲ್ಲಿ, ಅವರ ವಾಡಿಕೆಯ ಸಹ ನಟ ದೇವ್‌ ಆನಂದ್‌ ನೆನಪಿಸಿಕೊಳ್ಳುತ್ತಾ: "ಅವರು ಜೀವನದ ಉದ್ದಕ್ಕೂ ಹುರುಪಿನ ಹಾಗೂ ಜೀವನ ಚೈತನ್ಯದ ಚಿಲುಮೆ ಆಗಿದ್ದರು. ಅವರು ಯಾವಾಗಲೂ ನಗುತ್ತಿದ್ದು, ಕೆಲಸವನ್ನು ಇಷ್ಟಪಡುತ್ತಿದ್ದರು. ಆಕೆ ಅನಾರೋಗ್ಯ ಪೀಡಿತೆ ಎಂದು ಯಾರೂ ಕೂಡ ಕಲ್ಪಿಸಿಕೊಳ್ಳಲೂ ಅಸಾಧ್ಯವಾಗಿತ್ತು. ಆದರೆ ಒಂದು ದಿನ ಆಕೆ ನೀಲಿ ಬಾನಿನಲ್ಲಿ ಮರೆಯಾಗಿ ಹೋದರು...".

ಅವರ ಕೆಲವು ಚಿತ್ರಗಳು 60ರ ದಶಕದ ಆರಂಭದಲ್ಲಿ ಮಧ್ಯಂತರವಾಗಿ ಬಿಡುಗಡೆಯಾದವು. ಅವುಗಳಲ್ಲಿ ಕೆಲವೆಂದರೆ ಜುಮ್‌ರೂ (1961), ಹಾಫ್ ಟಿಕೆಟ್‌ (1962) ಹಾಗೂ ಶರಾಬಿ (1964), ಇವೆಲ್ಲಾ ಗಲ್ಲಾ ಪೆಟ್ಟಿಗೆಗೆ ಉತ್ತಮ ಆದಾಯ ತಂದು ಕೊಟ್ಟ ಚಿತ್ರಗಳಾಗಿವೆ. ಉಳಿದಂತೆ, ಆ ಸಮಯದಲ್ಲಿ ಬಂದ ಇತರೆ ಹಲವಾರು ಚಿತ್ರಗಳು ಅವರ ಆರೋಗ್ಯ ಹದಗೆಟ್ಟ ಕಾರಣ ನಂತರದಲ್ಲಿ ಅವುಗಳನ್ನು ಚಿತ್ರೀಕರಿಸಲು ಸಾಧ್ಯವಾಗಲಿಲ್ಲ. ಅಂತಹಾ ಸಮಯಗಳಲ್ಲಿ, ಸಂಕಲನಕ್ಕೆ ಹಾಗೂ ಕೆಲವು ದೃಶ್ಯದ ಚಿತ್ರೀಕರಣವು ಮಧುಬಾಲಾರಿಂದ ಸಾಧ್ಯವಾಗದಿದ್ದ ಸಂದರ್ಭಗಳಲ್ಲಿ "ನಕಲಿ ಕಲಾವಿದರನ್ನು" ಬಳಕೆ ಮಾಡಬೇಕಾದಂತ ಪರಿಸ್ಥಿತಿ ಎದುರಾಗುತ್ತಿತ್ತು. ಜ್ವಾಲಾ ಚಿತ್ರವನ್ನು 1950ರ ದಶಕದ ಕೊನೆಯಲ್ಲಿಯೇ ಚಿತ್ರೀಕರಿಸಲಾಗಿದ್ದರೂ, ಅನುಮತಿ ಸಿಗಲಿಲ್ಲವಾದ್ದರಿಂದ ಅವರು ಸತ್ತ ಎರಡು ವರ್ಷಗಳ ನಂತರ ಅಂದರೆ 1971ರಲ್ಲಿ ಅವರ ಕೊನೆಯ ಚಿತ್ರವಾಗಿ ಬಿಡುಗಡೆ ಮಾಡಲಾಯಿತು. ಪ್ರಾಸಂಗಿಕವಾಗಿ, ಮುಘಲ್-ಎ-ಆಜಂವರ್ಣಚಿತ್ರದ ದೃಶ್ಯಗಳನ್ನು ಹೊರತುಪಡಿಸಿದರೆ, ಮಧುಬಾಲಾ ನಟಿಸಿದ ಏಕೈಕ ವರ್ಣಚಿತ್ರ ಎಂದರೆ ಜ್ವಾಲಾ .

ಅಂತಿಮ ವರ್ಷಗಳು ಹಾಗೂ ಸಾವು[ಬದಲಾಯಿಸಿ]

ಮಧುಬಾಲಾರ ಆರೋಗ್ಯದ ಸ್ಥಿತಿ ತೀರಾ ಹದಗೆಟ್ಟಿದ್ದರಿಂದಾಗಿ 1960ರಲ್ಲಿ, ಲಂಡನ್‌ಗೆ ಚಿಕಿತ್ಸೆಗಾಗಿ ತೆರಳಿದರು [೪]. ಕ್ಲಿಷ್ಟಕರವಾದ ಹೃದಯ ಶಸ್ತ್ರಚಿಕಿತ್ಸೆಯು ತನ್ನ ಶೈಶವಾವಸ್ಥೆಯಲ್ಲಿದ್ದರೂ ಆಕೆಯನ್ನು ಗುಣಪಡಿಸುವ ಒಂದು ಭರವಸೆ ಮೂಡಿಸಿತ್ತು. ವೈದ್ಯಕೀಯ ಪರೀಕ್ಷೆಯ ನಂತರ, ಆಕೆ ಬದುಕುವ ಸಾಧ್ಯತೆಗಳು ತೀರಾ ಕಡಿಮೆ ಎಂಬುದನ್ನು ಅರಿತ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ತಿರಸ್ಕರಿಸಿದರು[೫]. ಅವರು ಅತಿಯಾದ ದೈಹಿಕಶ್ರಮ ಪಡದೆ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂಬ ಸಲಹೆ ನೀಡಿದರು ಹಾಗೂ ಒಂದು ವರ್ಷವಷ್ಟೇ ಬದುಕಿರಬಹುದು ಎಂಬ ಭವಿಷ್ಯದ ಅಭಿಪ್ರಾಯ ಹೇಳಿದರು. ಸಾವು ಹತ್ತಿರದಲ್ಲೇ ಇದೆ ಎನ್ನುವುದು ಗೊತ್ತಿದ್ದರೂ, ಮಧುಬಾಲಾ ಭಾರತಕ್ಕೆ ಮರಳಿದರು, ಹಾಗೂ ಊಹೆಗಳನ್ನು ಮೀರಿ ಮುಂದಿನ 9 ವರ್ಷಗಳ ಕಾಲ ಜೀವಿಸಿದ್ದರು.

ಅವರ ಆರೋಗ್ಯವು 1966ರಲ್ಲಿ ಸ್ವಲ್ಪ ಚೇತರಿಕೆ ಕಂಡ ನಂತರ, ಮಧುಬಾಲಾ ಚಾಲಾಕ್‌ ಚಿತ್ರದಲ್ಲಿ ರಾಜ್‌ ಕಪೂರ್‌ ಜೊತೆ ನಟಿಸಲು ತೀರ್ಮಾನಿಸಿದರು. ಚಿತ್ರೋದ್ಯಮ ಆಕೆಯ "ಪುನರಾಗಮನ"ವನ್ನು ಮತ್ತಷ್ಟು ಅಭಿಮಾನಿ ಬಳಗ ಹಾಗೂ ಪ್ರಚಾರದೊಂದಿಗೆ ಅಧಿಕೃತವಾಗಿ ಘೋಷಿಸಿತು. ಆ ಸಮಯದಲ್ಲಿ ತೆಗೆದ ಛಾಯಾಚಿತ್ರಗಳು ಆಗಲೂ ಸುಂದರವಾಗಿದ್ದ ಆದರೆ ಕಳೆಗುಂದಿದ ಹಾಗೂ ನಿಸ್ತೇಜವಾದ ಮಧುಬಾಲಾರನ್ನು ತೋರಿಸುತ್ತವೆ. ಹಾಗಿದ್ದರೂ, ಚಿತ್ರೀಕರಣದ ಕೆಲವೇ ದಿನಗಳಲ್ಲಿ, ಅವರ ಆರೋಗ್ಯ ಮತ್ತಷ್ಟು ಕ್ಷೀಣಗೊಂಡಿದ್ದರಿಂದ, ಅವರ ಚಿತ್ರಗಳು ಅರ್ಧಕ್ಕೇ ನಿಂತು ಬಿಡುಗಡೆಯಾಗಲಿಲ್ಲ.

ತನ್ನಿಂದ ನಟಿಸಲು ಸಾಧ್ಯವೇ ಇಲ್ಲ ಎಂದು ತಿಳಿದ ನಂತರ, ಮಧುಬಾಲಾ ಚಿತ್ರನಿರ್ಮಾಣದೆಡೆಗೆ ಗಮನ ಹರಿಸಿದರು. ಪ್ರಥಮ ಬಾರಿಗೆ, ಅವರು 1969ರಲ್ಲಿ ಫರ್ಜ್ ಔರ್ ಇಷ್ಕ್ ಎಂಬ ಚಿತ್ರದ ನಿರ್ದೇಶನ ಮಾಡಲು ಮುಂದಾದರು. ನಿರ್ಮಾಣದ ಆರಂಭಿಕ ಹಂತದಲ್ಲಿಯೇ, ಮಧುಬಾಲಾ ತಮ್ಮ 36ನೇ ಹುಟ್ಟುಹಬ್ಬದ ನಂತರ ಅನಾರೋಗ್ಯದಿಂದಾಗಿ 1969ರ ಫೆಬ್ರವರಿ 23ರಂದು ಕೊನೆಯುಸಿರೆಳೆದ ಕಾರಣ ಇದರಿಂದಾಗಿ ಆ ಚಿತ್ರ ಕೊನೆಗೂ ತಯಾರಾಗಲೇ ಇಲ್ಲ. ಅವರನ್ನು ಅವರ ಕುಟುಂಬ ಹಾಗೂ ಪತಿ ಕಿಶೋರ್‌ ಕುಮಾರ್‌ರ ಉಪಸ್ಥಿತಿಯಲ್ಲಿ ಮುಂಬೈಯ ಸಾಂತಾ ಕ್ರೂಸ್ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು[೬].

ಮಧುಬಾಲಾ ಒಂದು ಮಾದರಿ[ಬದಲಾಯಿಸಿ]

ತನ್ನ ಜೀವಿತ ಅವಧಿಯ ಅಲ್ಪ ಸಮಯದಲ್ಲಿ, ಮಧುಬಾಲಾ 70ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದರು. ಅವರನ್ನು ಕುರಿತಾಗಿ ಪ್ರಕಟಗೊಂಡ ಎಲ್ಲ ಮೂರು ಜೀವನಚರಿತ್ರೆಗಳು ಹಾಗೂ ಅನೇಕ ಲೇಖನಗಳಲ್ಲಿ, ಅವರನ್ನು ಮರ್ಲಿನ್ ಮನ್ರೊಗೆ ಹೋಲಿಸಲಾಗಿತ್ತು ಹಾಗೂ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಆಕೆಗೆ ಆ ರೀತಿಯ ಸ್ಥಾನ ದೊರಕಿತ್ತು. ಈಗಲೂ ಮಧುಬಾಲಾ ಪ್ರಖ್ಯಾತಿ ಹೊಂದಿ, ಭಾರತೀಯ ಚಿತ್ರರಂಗದ ಸುಪ್ರಸಿದ್ಧ ದಂತಕಥೆ ಆಗಿರಲು ಅವರು ಪ್ರಬುದ್ಧ ಅಥವಾ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೊದಲೇ ಸಾವನ್ನಪ್ಪಿದ್ದು ಕಾರಣವಿರಬಹುದು. ಚಲನಚಿತ್ರ ನಿಯತಕಾಲಿಕೆ 1990ರಲ್ಲಿ ನಡೆಸಿದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಅವರ ಅಭಿಮಾನಿಗಳು ಅವರನ್ನು ಆಗಲೂ ಬಹಳವಾಗಿ ಮೆಚ್ಚಿಕೊಂಡಿದ್ದನ್ನು ತೋರಿಸಿತ್ತು. ಮೀನಾ ಕುಮಾರಿ, ನರ್ಗಿಸ್, ಹಾಗೂ ನೂತನ್‌ರಂತಹ ಸಮಕಾಲೀನ ಪ್ರಖ್ಯಾತ ನಟಿಯರನ್ನು ಹಿಂದಿಕ್ಕಿ ಅತಿಹೆಚ್ಚು ಮತಗಳನ್ನು ಅಂದರೆ 58%ನಷ್ಟು ಮತಗಳನ್ನು ಪಡೆದು ಸಾರ್ವಕಾಲಿಕವಾಗಿ ಹಳೆಯ ಕಾಲದ ಶ್ರೇಷ್ಟ ನಟಿಯಾಗಿ ಮಧುಬಾಲಾ ಹೊರಹೊಮ್ಮಿದರು. ಇತ್ತೀಚೆಗೆ rediff.comನ ಅಂತರರಾಷ್ಟ್ರೀಯ ಮಹಿಳಾ ದಿನ 2007 ವಿಶೇಷದಲ್ಲಿ (ಹೊರಗಿನ ಕೊಂಡಿಗಳನ್ನು ನೋಡಿರಿ), ಮಧುಬಾಲಾರು " ಬಾಲಿವುಡ್‌'ನ ಸಾರ್ವಕಾಲಿಕ ಅತ್ಯುತ್ತಮ ನಟಿಯರ ಹತ್ತು ಸ್ಥಾನಗಳಲ್ಲಿ, ಎರಡನೇ ಸ್ಥಾನ ಗಿಟ್ಟಿಸಿಕೊಂಡರು". "ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ಮುಖ್ಯವಾಗಿ ಇರಬೇಕಾದ ಲಕ್ಷಣಗಳೆಂದರೆ "...ನಟನಾ ಕೌಶಲ್ಯಗಳು, ಸೌಂದರ್ಯ, ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ ಆದಾಯ, ಬಹುಮುಖ ಪ್ರತಿಭೆ ಹಾಗೂ ಉನ್ನತ ಸ್ಥಾನಗಳಿಂದ –ಬಾಲಿವುಡ್ ಚಿತ್ರಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಪ್ರಮುಖ ನಟಿಯರಾಗಿದ್ದದು..."

ಅವರ ಚಿತ್ರಗಳನ್ನು ಕಿರುತೆರೆಯಲ್ಲಿ ವೀಕ್ಷಣೆಯ ಕಾರಣ ಹಾಗೂ DVDಗಳ ವಿತರಣೆಯು ಚಾಲ್ತಿಗೆ ಬಂದ ನಂತರ, ಮಧುಬಾಲಾರ ಸಾಧನೆಗಳು ಅವರ ಅಭಿಮಾನಿ ಬಳಗ ಮತ್ತೆ ಹುಟ್ಟಲು ಕಾರಣವಾಯಿತು. ಸಾಕಷ್ಟು ಡಜನ್‌ಗಟ್ಟಲೆ ದೃಶ್ಯಗಳು ಹಾಗೂ ಅಭಿಮಾನಿಗಳು ಮಾಡಿದ ಸಂಕಲನಗಳನ್ನು ಅಪ್‌ಲೋಡ್ ಮಾಡಲಾಗಿದ್ದು ಅವುಗಳನ್ನು YouTubeನಂತಹ ಪ್ರಸಿದ್ಧ ವಿಡಿಯೋ ಜಾಲತಾಣಗಳಲ್ಲಿ ನೋಡಬಹುದಾಗಿದ್ದು, ಇದರಿಂದಾಗಿ ಅಭಿಮಾನಿಗಳು ಮನಃಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಯಾವುದೇ ಹಳೆಯ ಕಾಲದ ಪ್ರಸಿದ್ಧ ಹಿಂದಿ ಚಿತ್ರನಟಿಯೂ ವಿಡಿಯೋ ಹಂಚಿಕೆ ಜಾಲಗಳಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿಲ್ಲ. ಭಾರತದಲ್ಲಿ, ಬೀದಿ ಬದಿಯ ವ್ಯಾಪಾರಿಗಳು ಹಾಗೂ ಅಂಗಡಿಗಳು ಆಕೆಯ ಕಪ್ಪು & ಬಿಳುಪು ಚಿತ್ರಪಟಗಳನ್ನು ಮಾರಾಟ ಮಾಡುತ್ತಾರೆ ಹಾಗೂ ಹಿಂದಿ ಚಿತ್ರರಂಗದ ಈಗಿನ ಚಿತ್ರತಾರೆಯರ ಜೊತೆಗೆ ಅವನ್ನೂ ಇಟ್ಟಿರಲಾಗುತ್ತದೆ.

ಡಿಜಿಟಲ್ ತಂತ್ರಜ್ಞಾನ ಬಳಸಿ ವರ್ಣಖಚಿತವಾಗಿಸಲ್ಪಟ್ಟ ಮುಘಲ್-ಎ-ಆಜಂ ಚಿತ್ರದ ಪ್ರಥಮ ಆವೃತ್ತಿ 2004ರಲ್ಲಿ ಬಿಡುಗಡೆಯಾಯಿತು, ಹಾಗೂ ಅವರು ಸತ್ತ 35 ವರ್ಷಗಳ ನಂತರವೂ, ಆ ಚಲನಚಿತ್ರ ಹಾಗೂ ಮಧುಬಾಲಾ ಮತ್ತೆ ಪ್ರೇಕ್ಷಕರಿಗೆ ಮೆಚ್ಚುಗೆಯಾದರು.

ಕಳೆದ ದಶಕದಲ್ಲಿ, ಮಧುಬಾಲಾರನ್ನು ಕುರಿತು ಹಲವಾರು ಜೀವನಚರಿತ್ರೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಹಲವಾರು ಲೇಖನಗಳು ಮೂಡಿಬಂದಿದ್ದು, ಅವರ ಖಾಸಗೀ ಜೀವನದ ಹಾಗೂ ವೃತ್ತಿಯಲ್ಲಿನ ಹಲವಾರು ಅಜ್ಞಾತ ಸಂಗತಿಗಳನ್ನು ತೆರೆದಿಟ್ಟವು. ಅದರ ಫಲವಾಗಿ 2007ರಲ್ಲಿ, ಶೈನಿ ಅಹುಜಾ ಹಾಗೂ ಸೋಹಾ ಅಲಿ ಖಾನ್‌ ನಟಿಸಿರುವ ಕೋಯಾ ಕೋಯಾ ಚಾಂದ್ ಎಂಬ ಹಿಂದಿ ಚಿತ್ರವನ್ನು ನಿರ್ಮಿಸಲಾಗಿದ್ದು - ಅದರಲ್ಲಿ ಮಧುಬಾಲಾರ ಜೀವನ ಹಾಗೂ ಚಿತ್ರರಂಗದ ಇನ್ನಿತರೆ ಪ್ರಸಿದ್ಧರುಗಳ ಕೆಲವು ಘಟನೆಗಳು ಸೇರಿವೆ.

ಮಧುಬಾಲಾರ ಸವಿನೆನಪಿಗಾಗಿ 2008ರಲ್ಲಿ, ಅವರ ಭಾವಚಿತ್ರವಿರುವ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು. ಅವರ ಹಲವಾರು ಭಾವಚಿತ್ರಗಳಿರುವ ಆ ಅಂಚೆಚೀಟಿಗಳನ್ನು ಭಾರತೀಯ ಅಂಚೆ ಇಲಾಖೆ ಪರಿಮಿತ ಸಂಖ್ಯೆಗಳಲ್ಲಿ ಬಿಡುಗಡೆ ಮಾಡಿತು. ಅದನ್ನು ಪರಿಣಿತ ನಟರಾದ ನಿಮ್ಮಿ ಹಾಗೂ ಮನೋಜ್ ಕುಮಾರ್‌, ಕೇವಲ ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಬದುಕಿರುವ ಮಧುಬಾಲಾ ಕುಟುಂಬವರ್ಗದವರು ಸೇರಿದ್ದ ವೈಭವಪೂರಿತ ಸಭೆಯಲ್ಲಿ ಉದ್ಘಾಟನೆ ಮಾಡಿದರು. ಈ ರೀತಿಯಲ್ಲಿ ಗೌರವಕ್ಕೆ ಪಾತ್ರರಾದ ಮತ್ತೋರ್ವ ಭಾರತೀಯ ನಟಿ ಎಂದರೆ ನರ್ಗಿಸ್ ದತ್‌.

ಖ್ಯಾತ ನಟಿ ಹಾಗೂ 1970ರ ದಶಕದ ಕಾಮ ಕನ್ಯೆಯೆನಿಸಿದ ಜೀನತ್ ಅಮಾನ್‌, ಆಧುನಿಕ ಹಾಗೂ ಪಾಶ್ಚಾತ್ಯ ಶೈಲಿಯ ಹಿಂದಿ ಚಲನಚಿತ್ರೋದ್ಯಮದ ಪ್ರಥಮ ನಾಯಕಿ ಎಂದು ಒಪ್ಪಿಕೊಂಡಿದ್ದಾರೆ. ಅದಕ್ಕೂ ಮೊದಲು, ಅಂದರೆ 1950ರ ದಶಕದಷ್ಟು ಹಿಂದೆಯೇ ಮಧುಬಾಲಾ ಕೂಡ ಅಂತಹುದೇ ಪಾಶ್ಚಿಮಾತ್ಯ ಶೈಲಿಯ ಹಾಗೂ ಮಾಯಾಂಗನೆಯಂತಹಾ ಪಾತ್ರಗಳಲ್ಲಿ ನಟಿಸಿದ್ದಾರೆ ಎಂಬುದನ್ನು ಮರೆಯಲಾಗುತ್ತಿದೆ. ಹಿಂದಿ ಚಿತ್ರೋದ್ಯಮದ ನಾಯಕಿಯಾಗಲು, ಯೌವ್ವನದಲ್ಲಿದ್ದಾಗಲೇ ಭಾರತೀಯ ಮಹಿಳಾ ಸ್ವಭಾವವನ್ನು ಹಾಗೂ ಬಿಗುಮಾನವನ್ನು ತೊರೆದು ದಿಟ್ಟ ಹೆಜ್ಜೆ ಇಡಬೇಕಾಗಿತ್ತು. ಅದೇ ಕಾರಣಕ್ಕಾಗಿ ಮಧುಬಾಲಾ (ಹಾಗೂ ಕೆಲವು ಮಟ್ಟಿಗೆ, ಆಕೆಯ ಸಮಕಾಲೀನರಾದ ನರ್ಗಿಸ್ ) ಹಿಂದಿ ಚಿತ್ರರಂಗದ ಇಂದಿನ ಕಾಲದ ಆಧುನಿಕ ನಟಿಯರ ಮೇಲೂ ಪ್ರಭಾವ ಬೀರಿದ್ದಾರೆ.

ಕೆಲ ತುಣುಕುಗಳು[ಬದಲಾಯಿಸಿ]

 • ಮಧುಬಾಲಾರು ಮಗುವಾಗಿದ್ದಾಗ, ಗೌರವಾನ್ವಿತ ಮುಸಲ್ಮಾನ ಮೌಲ್ವಿಯೊಬ್ಬರು ಆಕೆಯು ಭವಿಷ್ಯದಲ್ಲಿ ಖ್ಯಾತಿ ಹಾಗೂ ಯಶಸ್ಸನ್ನು ಗಳಿಸುತ್ತಾರೆ, ಆದರೆ ಯೌವ್ವನದಲ್ಲಿಯೇ ಕೊರಗಿ ಸಾವನ್ನಪ್ಪುತ್ತಾರೆ ಎಂದು ತಿಳಿಸಿದ್ದರಂತೆ.[ಸೂಕ್ತ ಉಲ್ಲೇಖನ ಬೇಕು]


 • ಮಧುಬಾಲಾ ಕೇವಲ 12 ವರ್ಷದವರಿದ್ದಾಗಲೇ ಚಲನಚಿತ್ರೋದ್ಯಮಿ ಮೋಹನ್‌ ಸಿನ್ಹಾ ಕಾರು ಚಲಾಯಿಸುವುದನ್ನು ಕಲಿಸಿ ಕೊಟ್ಟರು.


 • ಅವರು ಹಾಲಿವುಡ್‌ನ ಅತ್ಯಾಸಕ್ತಿಯ ಅಭಿಮಾನಿಯಾಗಿದ್ದು, ಆಂಗ್ಲವನ್ನು ನಿರರ್ಗಳವಾಗಿ ಮಾತನಾಡುವಷ್ಟು ಕಲಿತ ನಂತರ, ತನ್ನ ಗೃಹ ಚಿತ್ರಪ್ರದರ್ಶಕದಲ್ಲಿ ಅಮೆರಿಕನ್ ಚಲನಚಿತ್ರಗಳನ್ನು ನೋಡುತ್ತಿದ್ದರು.


 • ಅವರು ಭಯಬಿದ್ದಾಗ ಅನಿಯಂತ್ರಿತ ದುಃಖದಿಂದ ಅಪಹಾಸ್ಯ ಹಾಗೂ ನಗೆಪಾಟಲಿಗೆ ಈಡಾಗಿದ್ದು, ಅದರಿಂದಾಗಿ ಕೆಲವು ಬಾರಿ ಸಹನಟ ಹಾಗೂ ನಿರ್ದೇಶಕರ ಜೊತೆ ವೈರತ್ವ ಕಟ್ಟಿಕೊಂಡಿದ್ದಾರೆ. • Mr. & Mrs. '55 ನಲ್ಲಿ (1955) ಗೀತಾ ದತ್ ಹೊರತುಪಡಿಸಿದಂತೆ, ಮಧುಬಾಲಾರ ಹಲವಾರು ಸ್ಮರಣೀಯ ಗೀತೆಗಳನ್ನು ಲತಾ ಮಂಗೇಶ್ಕರ್‌ ಆಥವಾ ಆಶಾ ಭೋಂಸ್ಲೆ/ಭೋಸ್ಲೆಯವರು ಹಾಡಿದ್ದರು. ಮಧುಬಾಲಾ ಇಬ್ಬರಿಗೂ ಅದೃಷ್ಟ ತಂದುಕೊಟ್ಟಿದ್ದರು. 1949ರಲ್ಲಿ ಮಧುಬಾಲಾರ ಮಹಲ್‌ ಚಿತ್ರಕ್ಕೆ ಚಿತ್ರೀಕರಿಸಲಾದ ಗೀತೆಗಳು ಲತಾರವರ ಆರಂಭಿಕ ಯಶಸ್ವೀ ಗೀತೆಗಳಾದವು; ಒಂಬತ್ತು ವರ್ಷಗಳ ನಂತರ, 1958ರಲ್ಲಿ ಅವರ ನಾಲ್ಕು ಚಲನಚಿತ್ರಗಳಿಗೆ ಹಾಡಿದ ಆಶಾ ಯಶಸ್ವೀ ಹಿನ್ನೆಲೆ ಗಾಯಕರಾಗಿ ಹೊರಹೊಮ್ಮಿ ತನ್ನ ಸೋದರಿ ಲತಾರಿಗೇ ಪ್ರತಿಸ್ಪರ್ಧಿಯಾದರು.


ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ
ಬಸಂತ್‌ 1942
ಮಮ್ತಾಜ್‌ ಮಹಲ್‌ 1944
ಧನ್ನಾ ಭಗತ್‌ 1945
ರಜ್‌ಪುತಾನಿ 1946
ಪೂಜಾರಿ 1946
ಪೂಲ್‌ವಾರಿ 1946
ಸಾತ್ ಸಮಂದರೋಂ ಕಿ ಮಲ್ಲಿಕಾ 1947
ಮೇರೆ ಭಗವಾನ್‌ 1947
ಖೂಬ್‌ಸೂರತ್ ದುನಿಯಾ 1947
ದಿಲ್‌-ಕಿ-ರಾಣಿ ಸ್ವೀಟ್-ಹಾರ್ಟ್ 1947
ಚಿತ್ತೂರ್ ವಿಜಯ್‌ 1947
ನೀಲ್ ಕಮಲ್‌ 1947
ಪರಾಯಿ ಆಗ್‌ 1948
ಲಾಲ್ ದುಪಟ್ಟಾ 1948
ದೇಶ್ ಸೇವಾ 1948
ಅಮರ್ ಪ್ರೇಂ 1948
ಸಿಪಾಹಿಯಾ 1949
ಸಿಂಗಾರ್‌ 1949
ಪರಾಸ್ 1949
ನೇಕಿ ಔರ್ ಬಡಿ 1949
ಮಹಲ್‌ 1949
ಇಮ್ತಿಹಾನ್ 1949
ದುಲಾರಿ 1949
ದೌಲತ್ 1949
ಅಪ್‌ರಾಧಿ 1949
ಪರ್ದೇಸ್‌ 1950
ನಿಶಾನಾ 1950
ನಿರಾಲಾ 1950
ಮಧುಬಾಲಾ 1950
ಹಸ್ತೆ ಆನ್‌‌‌ಸೂ 1950
ಬೇಕಸೂರ್ 1950
ತರಾನಾ 1951
ಸಯ್ಯಾ 1951
ನಾಜ್‌ನೀನ್ 1951
ನಾದಾನ್ 1951
ಖಜಾನಾ 1951
ಬಾದಲ್‌ 1951
ಆರಾಮ್‌ 1951
ಸಖಿ 1952
ಸಂಗ್‌ದಿಲ್‌ 1952
ರೈಲ್ ಕಾ ಡಿಬ್ಬಾ 1953
ಅರ್ಮಾನ್ 1953
ಬಹುತ್ ದಿನ್ ಹುಯೆ/ಹುವೆ 1954
ಅಮರ್‌ 1954
ತೀರಂದಾಜ್‌ 1955
ನಖಾಬ್ 1955
ನಾತಾ 1955
Mr. & Mrs. ' 55 1955
ಶಿರಿನ್ ಫರ್‌ಹಾದ್‌ 1956
ರಾಜ್‌ ಹಾತ್‌ 1956
ಧಕೆ ಕಿ ಮಾಲ್‌ಮಾಲ್‌ 1956
ಯೆಹೂದಿ ಕಿ ಲಡ್‌ಕಿ 1957
ಗೇಟ್‌‌ವೇ ಆಫ್ ಇಂಡಿಯಾ 1957
ಏಕ್ ಸಾಲ್‌ 1957
ಪೊಲೀಸ್‌ 1958
ಫಗುನ್‌ 1958
ಕಾಲಾಪಾನಿ 1958
ಹೌರಾ ಬ್ರಿಡ್ಜ್‌ 1958
ಚಲ್ತೀ ಕ ನಾಮ್ ಗಾಡಿ 1958
ಬಾಘೀ ಸಿಪಾಯಿ 1958
ಕಲ್ ಹಮಾರಾ ಹೈ 1959
ಇನ್ಸಾನ್ ಜಾಗ್ ಉಟಾ 1959
ದೋ ಉಸ್ತಾದ್‌ 1959
ಮೆಹಲೊ ಕೆ ಖ್ವಾಬ್‌ 1960
ಜಾಲಿ ನೋಟ್‌ 1960
ಬರ್‌ಸಾತ್ ಕಿ ರಾತ್‌ 1960
ಮುಘಲ್-ಎ-ಆಜಂ 1960
ಪಾಸ್‌ಪೋರ್ಟ್‌ 1961
ಜುಮ್‌ರೂ 1961
ಬಾಯ್ ಫ್ರೆಂಡ್‌ 1961
ಹಾಫ್ ಟಿಕೆಟ್ 1962
ಶರಾಬಿ 1964
ಜ್ವಾಲಾ 1971

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ http://specials.rediff.com/movies/2008/mar/25sd1.htm
 2. ೨.೦ ೨.೧ http://www.upperstall.com/people/madhubala
 3. http://www.madhubalano1.20m.com/profile.html
 4. "ಆರ್ಕೈವ್ ನಕಲು". Archived from the original on 2012-02-19. Retrieved 2010-02-04.
 5. http://www.madhubalano1.20m.com/marriage.html
 6. http://www.madhubalano1.20m.com/lastdays.html

ಪುಸ್ತಕಗಳು & ಚಲನಚಿತ್ರ ನಿಯತಕಾಲಿಕೆಗಳು:

 • ಅಕ್ಬರ್‌, ಖತೀಜಾ. ಮಹುಬಾಲಾ/ಮಧುಬಾಲಾ:ಹರ್ ಲೈಫ್,ಹರ್ ಫಿಲ್ಮ್ಸ್‌ (ಆಂಗ್ಲ). ನವದೆಹಲಿ: UBS ಪಬ್ಲಿಷರ್ಸ್‌' ಡಿಸ್ಟ್ರಿಬ್ಯೂಟರ್ಸ್‌, 1997. ISBN 978-0-7513-2886-8
 • ದೀಪ್, ಮೋಹನ್‌. ಮಧುಬಾಲಾ: ಮಿಸ್ಟರಿ ಅಂಡ್ ಮಿಸ್ಟಿಕ್ , ಮ್ಯಾಗ್ನಾ ಪಬ್ಲಿಷಿಂಗ್ Co. Ltd.
 • ರಹೇಜಾ, ದಿನೇಶ್‌. ದಿ ಹಂಡ್ರೆಡ್‌ ಲ್ಯೂಮಿನಾರಿಸ್ ಆಫ್ ಹಿಂದಿ ಸಿನೆಮಾ , ಇಂಡಿಯಾ ಬುಕ್‌ ಹೌಸ್‌ ಪಬ್ಲಿಷರ್ಸ್‌.
 • ರ್ರ್ಯೂಬೆನ್, ಬನ್ನಿ. ಫಾಲಿವುಡ್ ಫ್ಲಾಷ್‌ಬ್ಯಾಕ್ , ಇಂಡಸ್‌ ಪಬ್ಲಿಷರ್ಸ್
 • ಭಟ್ಟಾಚಾರ್ಯ, ರಿಂಕಿ . ಬಿಮಲ್ ರಾಯ್‌: ಎ ಮ್ಯಾನ್ ಆಫ್ ಸೈಲೆನ್ಸ್ , ಸೌತ್ ಏಷ್ಯಾ ಬುಕ್ಸ್
 • ರಾಜ್ಯಾಧ್ಯಕ್ಷ, ಆಶೀಶ್‌ ಅಂಡ್ ವಿಲ್ಲೆಮೆನ್‌‌, ಪೌಲ್‌. ದಿ ಎನ್‌ಸೈಕ್ಲೋಪೀಡಿಯಾ ಆಫ್ ಇಂಡಿಯನ್ ಸಿನೆಮಾ , ಫಿಟ್ಜರಿ ಡಿಯರ್‌ಬಾರ್ನ್‌ ಪಬ್ಲಿಷರ್ಸ್.
 • ಕಾರ್ಟ್, ಡೇವಿಡ್. THEATRE ARTS ನಿಯತಕಾಲಿಕೆ, ಸಂಚಿಕೆ ದಿನಾಂಕ: ಆಗಸ್ಟ್ 1952; Vol. XXXVI No. 8.

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಮಧುಬಾಲಾ&oldid=1152043" ಇಂದ ಪಡೆಯಲ್ಪಟ್ಟಿದೆ