ಮುಸಲ್ಮಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮುಸಲ್ಮಾನ ಇಂದ ಪುನರ್ನಿರ್ದೇಶಿತ)

ಇಸ್ಲಾಮ್ ಎಂಬ ಅರಬಿ ಪದದ ಅರ್ಥ ಶಾಂತಿ, ಸಮರ್ಪಣೆ ಎಂದಾಗಿದೆ. ಒಬ್ಬ ವ್ಯಕ್ತಿ ತನ್ನನ್ನು ತಾನೇ ಸೃಷ್ಟಿಕರ್ತನಿಗೆ ಸಮರ್ಪಿಸುವ ಮೂಲಕ ಪಡೆಯುವ ಮನಃಶಾಂತಿಯಾಗಿದೆ ಇಸ್ಲಾಮ್. ಹೆಸರೇ ಹೇಳುವಂತೆ ಇಸ್ಲಾಮ್ ಶಾಂತಿಯ ಧರ್ಮವಾಗಿದೆ. ಸೃಷ್ಟಿಸಿ ಪರಿಪಾಲಿಸುತ್ತಿರುವ ನೈಜ ದೇವನ ಆರಾಧನೆಗೆ ಪರಮ ವಿಧೇಯತೆ ಹಾಗೂ ಸಮರ್ಪಣೆಯ ಧರ್ಮವಾಗಿದೆ ಇಸ್ಲಾಮ್. ಮುಸ್ಲಿಮ್ ಅಥವಾ ಮುಸಲ್ಮಾನ್ ಅಂದರೆ ಅಲ್ಲಾಹನ ಕಲ್ಪನೆಗೆ ಶರಣಾಗುವವನು ಎಂದು ಅರ್ಥ.

ಮುಸಲ್ಮಾನ್ ಶಬ್ಧವು ಮುಸ್ಲಿಮ್ ಶಬ್ಧದ ಸಮಾನಾರ್ಥಕ ಪದವಾಗಿದೆ. ಈ ಪದವು ಅರಭಿ ಭಾಷೆಯಿಂದ ಬಂದಿದೆ. ಈ ಪದದ ಮೂಲಗಳು ಇಲ್ಲಿವೆ - ಸ್ಪ್ಯಾನಿಷ್ ಪದ ಮುಸಲ್ಮಾನ್, ಜರ್ಮನ್ ಮುಸೆಲ್ಮಾನ್ನ, ಫ್ರೆಂಚ್ ಪದ ಮುಸಲ್ಮಾನ್, ಪೋಲಿಷ್ ಪದಗಳು ಮುಜ಼ುಲ್ಮನಿನ್ ಮತ್ತು ಮುಜ಼ುಲ್ಮನ್ಸ್ಕಿ (muzułmanin ಮತ್ತು muzułmański), ಪೋರ್ಚುಗೀಸ್ ಪದ ಮುಕುಲ್ಮನೊ (muçulmano), ಇಟಾಲಿಯನ್ ಪದ ಮುಸ್ಸುಲ್ಮನೊ ಅಥವಾ ಮುಸುಲ್ಮನೊ (mussulmano or musulmano), ರೊಮೇನಿಯನ್ ಪದ ಮುಸಲ್ಮಾನ್ ಮತ್ತು ಗ್ರೀಕ್ ಪದ μουσουλμάνος. ಇಂಗ್ಲೀಷ್ ನಲ್ಲಿ ಮುಸಲ್ಮಾನ್ ಎಂದು ಕರೆಯಲ್ಪಡುತಿತ್ತು, ಹಾಗೆ ಅದು ರೂಢಿಯಾಗಿದೆ.