ಇಸ್ಲಾಂ ಧರ್ಮ
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಸೂಕ್ತ ಉಲ್ಲೇಖ ಅಗತ್ಯ. ವೈಯಕ್ತಿಕ ಅಭಿಪ್ರಾಯಗಳಂತೆ ಕಾಣುವ ವಾಕ್ಯಗಳನ್ನು ತಿದ್ದಬೇಕು. |
ಈ ಲೇಖನದ ತಟಸ್ಥ ದೃಷ್ಟಿ ಕೋನವು ವಿವಾದಾಸ್ಪದವಾಗಿದೆ. ದಯವಿಟ್ಟು ಚರ್ಚೆ ಪುಟದಲ್ಲಿಯ ಮಾತುಕತೆಯನ್ನು ನೋಡಿ. ವಿವಾದವು ಬಗೆಹರಿಯುವವರೆಗೆ ಈ ಸಂದೇಶವನ್ನು ತೆಗೆಯಬೇಡಿ. |
This article is actively undergoing a major edit for a short while. To help avoid edit conflicts, please do not edit this page while this message is displayed. This page was last revised at ೧೪:೧೫, ೮ ಏಪ್ರಿಲ್ ೨೦೨೪ (UTC) (13486303 ಸೆಕೆಂಡು ಗಳ ಹಿಂದೆ). Please remove this template if this page hasn't been edited in several hours. If you are the editor who added this template, please be sure to remove it or replace it with {{Under construction}} between editing sessions. |
ಇಸ್ಲಾಂ ಧರ್ಮ | |
---|---|
الإسلام | |
Type | ಜಾಗತಿಕ ಧರ್ಮ |
Classification | ಅಬ್ರಹಾಮಿಕ್ ಧರ್ಮ |
Scripture | ಕುರ್‌ಆನ್ |
Theology | ಏಕದೇವತಾವಾದ |
Language | ಅರೇಬಿಕ್ |
Founder | ಮುಹಮ್ಮದ್ |
Origin | ಕ್ರಿ.ಶ. 7ನೇ ಶತಮಾನ |
Number of followers | 190 ಕೋಟಿ[೧] ಇವರನ್ನು ಮುಸ್ಲಿಮರು ಎಂದು ಕರೆಯಲಾಗುತ್ತದೆ. |
ಇಸ್ಲಾಮ್ (الإسلام; [ɪsˈlaːm] ( ), ಅನುವಾದ. ದೇವರ ಇಚ್ಛೆಗೆ ಶರಣಾಗುವುದು)[೨] ಅಥವಾ ಮಹಮದೀಯ ಮತ ಅಥವಾ ಮಹಮದೀಯ ಧರ್ಮವು ಎಂಬುದು ಏಕದೇವತಾವಾದದಲ್ಲಿ ಅಧಿಷ್ಠಿತವಾದ ಐಬ್ರಹೀಮಿಕ ಧರ್ಮವಾಗಿದ್ದು, ಖುರಾನ್ ಮತ್ತು ಮುಹಮ್ಮದ್ ಪೈಗಂಬರರ ಶಿಕ್ಷಣಗಳಲ್ಲಿ ಕೇಂದ್ರೀಕೃತವಾಗಿದೆ.[೩] ಇಸ್ಲಾಮ್ ಧರ್ಮದ ಅನುಯಾಯಿಗಳನ್ನು ಮುಸ್ಲಿಮರು ಅಥವಾ ಮುಸಲ್ಮಾನ (ದೇವರ ಇಚ್ಛೆಗೆ ಶರಣಾದವರು) ಅಥವಾ ಮಹಮ್ಮದೀಯ ಎಂದು ಕರೆಯಲಾಗುತ್ತದೆ.[೨] ಇಸ್ಲಾಂ ಧರ್ಮವು ಜಾಗತಿಕವಾಗಿ 190 ಕೋಟಿಗಿಂತಲೂ (2020ರ ಅಂದಾಜಿನ ಪ್ರಕಾರ) ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, ಜಗತ್ತಿನ ಒಟ್ಟು ಜನಸಂಖ್ಯೆಯ ಕಾಲು ಭಾಗವನ್ನು (25%) ಒಳಗೊಳ್ಳುತ್ತದೆ ಮತ್ತು ಜಗತ್ತಿನ ಎರಡನೆ ಅತಿದೊಡ್ಡ ಧರ್ಮವಾಗಿದೆ.[೪]
ಇಸ್ಲಾಂ ಧರ್ಮವು ಆದಮ್, ಅಬ್ರಹಾಮ್ (ಅಥವಾ ಇಬ್ರಹೀಮ್), ಮೋಸೆ, ಯೇಸು ಮುಂತಾದ ಪೂರ್ವ ಪ್ರವಾದಿಗಳ ಮೂಲಕ ಆರಂಭಿಕ ಕಾಲದಿಂದಲೇ ಅಸ್ತಿತ್ವದಲ್ಲಿರುವ ಆದಿ ಧರ್ಮದ ಸಂಪೂರ್ಣ ಮತ್ತು ಜಾಗತಿಕ ಆವೃತ್ತಿಯೆಂದು ಮುಸ್ಲಿಮರು ನಂಬುತ್ತಾರೆ.[೫] ಯಹೂದ ಧರ್ಮ ಮತ್ತು ಕ್ರೈಸ್ತ ಧರ್ಮಗಳು ಇದರ ಇತರ ಆವೃತ್ತಿಗಳಾಗಿವೆ.[೬] ಮುಸಲ್ಮಾನರು ಖುರಾನನ್ನು ದೇವರ ಅಕ್ಷರಶಃ ಮಾತುಗಳು ಮತ್ತು ಯಾವುದೇ ಹಸ್ತಕ್ಷೇಪಗಳಿಗೆ ಒಳಗಾಗದೆ ಸುರಕ್ಷಿತವಾಗಿ ಸಂರಕ್ಷಿಸಲಾದ ಗ್ರಂಥವೆಂದು ನಂಬುತ್ತಾರೆ.[೭] ಅದೇ ರೀತಿ ಅವರು ಮುಹಮ್ಮದ್ ಪೈಗಂಬರರನ್ನು ಇಸ್ಲಾಂ ಧರ್ಮದ ಪ್ರಮುಖ ಮತ್ತು ಅಂತಿಮ ಪ್ರವಾದಿಯೆಂದು ಪರಿಗಣಿಸುತ್ತಾರೆ.[೮] ಮುಹಮ್ಮದ್‌ರ ಮಾತುಗಳು ಮತ್ತು ನಡವಳಿಕೆಗಳನ್ನು ಸುನ್ನತ್ ಎಂದು ಕರೆಯಲಾಗುತ್ತಿದ್ದು ಇವುಗಳನ್ನು ಹದೀಸ್ ಎಂಬ ಹೆಸರಿನಲ್ಲಿ ಜೋಪಾನವಾಗಿ ಸಂಗ್ರಹಿಸಿಡಲಾಗಿದೆ. ಕುರ್ಆನ್ ಮತ್ತು ಹದೀಸ್ಗಳು ಇಸ್ಲಾಂ ಧರ್ಮದ ಮೂಲ ಆಧಾರಗಳಾಗಿವೆ.[೨]
ಅಲ್ಲಾಹನ ಹೊರತು ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷಿ ನುಡಿಯುವುದು, ದಿನನಿತ್ಯ ಐದು ವೇಳೆ ನಮಾಝ್ ಮಾಡುವುದು, ವಾರ್ಷಿಕವಾಗಿ ಕಡ್ಡಾಯ ದಾನ ಮಾಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ಆರ್ಥಿಕ ಹಾಗೂ ದೈಹಿಕ ಸಾಮರ್ಥ್ಯವಿರುವವರು ಹಜ್ಜ್ ನಿರ್ವಹಿಸಲು ಮಕ್ಕಾಗೆ ಹೋಗುವುದು ಇಸ್ಲಾಂ ಧರ್ಮದ ಪಂಚಸ್ತಂಭಗಳಾಗಿದ್ದು ಪ್ರತಿಯೊಬ್ಬ ಮುಸಲ್ಮಾನ ಇವುಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕಾಗಿದೆ.[೯] ಶರಿಯ ಅಥವಾ ಶರಿಯತ್ ಎಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವ ಇಸ್ಲಾಮಿಕ್ ಕಾನೂನು ಸಂಹಿತೆಯು ಮನುಷ್ಯನ ವೈಯುಕ್ತಿಕ, ಕೌಟುಂಬಿಕ, ಸಾಮಾಜಿಕ, ವ್ಯಾವಹಾರಿಕ, ರಾಜಕೀಯ ಮುಂತಾದ ಜೀವನದ ಎಲ್ಲಾ ಮಗ್ಗಲುಗಳನ್ನು ಸ್ಪರ್ಶಿಸುತ್ತದೆ.[೧೦] ಈದುಲ್ ಫಿತರ್ (ರಂಜಾನ್) ಮತ್ತು ಈದುಲ್ ಅದ್ಹಾ (ಬಕ್ರೀದ್) ಇಸ್ಲಾಂ ಧರ್ಮದ ಎರಡು ಪ್ರಮುಖ ಹಬ್ಬಗಳಾಗಿವೆ. ಮಕ್ಕಾದಲ್ಲಿರುವ ಮಸ್ಜಿದುಲ್ ಹರಾಮ್, ಮದೀನದಲ್ಲಿರುವ ಮಸ್ಜಿದ್ ನಬವಿ ಮತ್ತು ಜೆರೂಸಲೇಂನಲ್ಲಿರುವ ಮಸ್ಜಿದ್ ಅಕ್ಸಾ ಇಸ್ಲಾಂ ಧರ್ಮದ ಪ್ರಮುಖ ಧಾರ್ಮಿಕ ಸ್ಥಳಗಳಾಗಿವೆ.
ಮೂಲಭೂತ ವಿಶ್ವಾಸಗಳು
ಏಕದೇವ ವಿಶ್ವಾಸ
ಏಕದೇವ ವಿಶ್ವಾಸವು ಇಸ್ಲಾಮಿನ ಮೂಲಭೂತ ವಿಶ್ವಾಸಗಳ ಪೈಕಿ ಮೊದಲನೆಯದಾಗಿದೆ.ಈ ಜಗತ್ತು ಮತ್ತದರಲ್ಲಿರುವ ಸಕಲ ವಸ್ತುಗಳೂ ಒಬ್ಬನೇ ದೇವನ ಸ್ರಷ್ಟಿಗಳಾಗಿವೆ, ಸಮಸ್ತ ವಿಶ್ವದ ಪರಿಪಾಲಕನೂ, ಒಡೆಯನೂ, ಅಧಿಪತಿಯೂ ಅವನೇ ಆಗಿರುತ್ತಾನೆ. ಆದುದರಿಂದ ಅವನೊಬ್ಬನೇ ಎಲ್ಲ ವಿಧ ಆರಾಧನೆ ಮತ್ತು ಅರ್ಪಣೆಗಳಿಗೆ ಅರ್ಹನಾದವನು, ಅವನ ಹೊರತು ಪೂಜೆ ಮತ್ತು ಆರಾಧನೆಗೆ ಅರ್ಹನಾದವನು ಯಾರೂ ಇಲ್ಲ. ಅವನಲ್ಲದೆ ದಾಸ್ಯ ಮತ್ತು ಅನುಸರಣೆಗೆ ಯೋಗ್ಯ ಯಾರೂ ಇಲ್ಲ. ಅವನೊಂದಿಗೆ ಭಾಗೀದಾರನಾಗಿ ಯಾರೂ ಇಲ್ಲ. ಎಲ್ಲರೂ ಆತನ ಆಶ್ರಿತರು, ಅವನಿಂದ ಸಹಾಯ ಯಾಚಿಸಲು ನಿರ್ಬಂಧಿತರು. ಅವನು ಭೌತಿಕವಾದ ಒಂದು ವಸ್ತು ಅಲ್ಲದಿರುವುದರಿಂದ ಅವನಿಗೆ ನಿರ್ದಿಷ್ಟ ಬಣ್ಣ,ರೂಪ ಮತ್ತು ಸ್ಥಳ ಎಂಬ ಬಂಧನಗಳಿಲ್ಲ.ಆದ್ದರಿಂದ ಮಾನವ ಕಣ್ಣಿಗೆ ಆತನನ್ನು ನೋಡಲು ಸಾಧ್ಯವಿಲ್ಲ- ಇದು ಏಕದೇವತಾವಾದದ ಮೂಲಭೂತ ಅಂಶ.
ಪ್ರವಾದಿ ಇಬ್ರಾಹೀಮ್(ಅ)ರ ಘಟನೆಯನ್ನು ಉಲ್ಲೇಖಿಸಿ ಪವಿತ್ರ ಕುರಾನ್ ಹೇಳುತ್ತದೆ:
"ನಾವು ಇಬ್ರಾಹೀಮರಿಗೆ ಇದೇ ರೀತಿಯಲ್ಲಿ ಭೂಮಿ-ಆಕಾಶಗಳ ಸಾಮ್ರಾಜ್ಯ ವ್ಯವಸ್ಥೆಯನ್ನು ತೋರಿಸಿ ಕೊಡುತ್ತಿದ್ದೆವು.ಅವರು ದೃಢ ವಿಶ್ವಾಸವುಳ್ಳವರಾಗಬೇಕೆಂದು. ಒಮ್ಮೆ ರಾತ್ರಿಕಾಲವು ಅವರನ್ನಾವರಿಸಿದಾಗ ಅವರೊಂದು ನಕ್ಷತ್ರವನ್ನು ಕಂಡರು.'ಇದು ನನ್ನ ಪ್ರಭು 'ಎಂದರು. ಆದರೆ ಅದು ಅಸ್ತಮಿಸಿದಾಗ 'ನಾನು ಅಸ್ತಮಿಸುವವರಿಗೆ ಮಾರು ಹೋಗುವುದಿಲ್ಲ '
ಎಂದರು. ಅನಂತರ ಚಂದ್ರವು ಪ್ರಕಾಶಿಸುತ್ತಿರುವುದನ್ನು ಕಂಡಾಗ'ಇದು ನನ್ನ ಪ್ರಭು'ಎಂದರು.ಆದರೆ ಅದೂ ಮುಳುಗಿ ದಾಗ'ನನ್ನ ಪ್ರಭು ನನಗೆ ಮಾರ್ಗದರ್ಶನ ವನ್ನೀಯದಿರುತ್ತಿದ್ದರೆ ನಾನೂ ಪಥಭ್ರಷ್ಟರಲ್ಲಾಗುತ್ತಿದ್ದೆ ಎಂದರು' ತರುವಾಯ ಸೂರ್ಯನನ್ನು ಪ್ರಕಾಶಮಯವಾಗಿ ಕಂಡಾಗ 'ಇದು ನನ್ನ ಪ್ರಭು, ಇದು ಎಲ್ಲಕ್ಕಿಂತ ದೊಡ್ಡ ದಾಗಿದೆ' ಎಂದರು. ಆದರೆ ಅದೂ ಅಸ್ತಮಿಸಿದಾಗ ಇಬ್ರಾಹೀಮರು ಉದ್ಗರಿಸಿದರು:
"ಓ, ನನ್ನ ಜನಾಂಗ ಬಾಂಧವರೆ ನೀವು ಯಾವುದನ್ನೆಲ್ಲಾ ದೇವನೊಂದಿಗೆ ಸಹಭಾಗಿಗಳನ್ನಾಗಿಸುತ್ತೀರಿ ಅವುಗಳಿಂದ ನಾನು ವಿರಕ್ತನಾಗುವೆನು.(ನಂತರ ಹೇಳಿದರು) ನಾನು ಏಕನಿಷ್ಥೆಯಿಂದ ನನ್ನ ಮುಖವನ್ನು ಭೂಮಿ-ಆಕಾಶಗಳನ್ನು ಸ್ರಷ್ಟಿಸಿದವನ ಕಡೆಗೆ ತಿರುಗಿಸಿದೆನು.ನಾನು ಎಷ್ಟುಮಾತ್ರಕ್ಕೂ ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿ ಮಾಡುವವರಲ್ಲಿ ಸೇರಿದವನಲ್ಲ" (ಪವಿತ್ರ ಕುರ್ಆನ್ : ಅಧ್ಯಾಯ 66, ಸೂಕ್ತ 25-29)
ಪವಿತ್ರ ಕುರ್ಆನ್ ನೈಜ ಆರಾಧ್ಯನ ವಿವರಣೆ ನೀಡುತ್ತಾ ಹೇಳುತ್ತದೆ."ಅವನೇ ಅಲ್ಲಾಹ್ ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ. ಗೋಚರವಾಗಿರುವ ಮತ್ತು ಅಗೋಚರವಾಗಿರುವ ಎಲ್ಲವನ್ನೂ ಬಲ್ಲವನು. ಅವನು ಪರಮದಯಾಮಯನೂ ಕರುಣಾನಿಧಿಯೂ ಆಗಿರುತ್ತಾನೆ. ಅವನೇ ಅಲ್ಲಾಹ್ ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ. ಅವನು ಸಾಮ್ರಾಟನು, ಪರಮ ಪಾವನನು. ಸಾಧ್ಯಂತ ಮಂಗಲಮಯನು. ಶಾಂತಿದಾತನು, ಸಂರಕ್ಷಕನು, ಪ್ರಬಲನು, ತನ್ನ ಆಜ್ಞೆಯನ್ನು ಶಕ್ತಿಯಿಂದ ಅನುಷ್ಥಾನಿಸಿ ಬಿಡುವವನು, ಸದಾ ಸರ್ವೊನ್ನತನಾಗಿಯೇ ಇರುವವನು,ಜನರು ಮಾಡುವ ಸಹಭಾಗಿತ್ವದಿಂದ ಅಲ್ಲಾಹನು ಪರಿಶುದ್ಧನು ಸ್ರಷ್ಟಿಯ ಯೋಜನೆ ಮಾಡುವವನೂ ಅದನ್ನು ಜಾರಿ ಗೊಳಿಸುವವನೂ ಅದರಂತೆ ರೂಪ ಕೊಡುವವನೂ ಅಲ್ಲಾಹನೇ.ಅವನಿಗೆ ಅತ್ಯುತ್ತಮವಾದ ನಾಮಗಳಿವೆ. ಭೂಮಿ ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಅವನನ್ನು ಜಪಿಸುತ್ತದೆ. ಮತ್ತು ಅವನು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ. (ಪವಿತ್ರ ಕುರ್ಆನ್ :ಅಧ್ಯಾಯ ೫೯, ಸೂಕ್ತ ೨೨-೨೪) ಅಣ್ಣಾದೊರೈಯವರು ತನ್ನ ಭಾಷಣದಲ್ಲಿ ಅವರು ಇಸ್ಲಾಮಿನ ಏಕ ದೇವತ್ವವನ್ನು ವಿವರಿಸುತ್ತಾ ಹೇಳಿದ್ದರು
"ದೇವನೊಂದಿಗೆ ಯಾರನ್ನೂ ಸಹಭಾಗಿಗಳಾಗಿ ಮಾಡಬಾರದು" ಎಂಬುದು ಪ್ರವಾದಿವರ್ಯರ ಶಿಕ್ಷಣ ಗಳಲ್ಲಿ ಅತಿ ಪ್ರಾಮುಖ್ಯವಾದುದು.ಈ ಶಿಕ್ಷಣವನ್ನು ನಾನು ಮನಸಾರೆ ಗೌರವಿಸುತ್ತೇನೆ ಮತ್ತು ಅದನ್ನು ಮೆಚ್ಚುತ್ತೇನೆ. ಈ ಶಿಕ್ಷಣವನ್ನು ಏಕೆ ಇಷ್ಟೊಂದು ಗೌರವಿಸಬೇಕು? ಏಕೆಂದರೆ ಈ ಶಿಕ್ಷಣವು ಮನುಷ್ಯನನ್ನು ವಿಚಾರ ಮಾಡಲು ಪ್ರಚೋದಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ. ಮುಂದೆ ಹೇಳುತ್ತಾರೆ:ದೇವನೊಂದಿಗೆ ಇತರರನ್ನು ಸಹಭಾಗಿಗಳಾಗಿಸುವು ದೆಂದರೆ ಅವರನ್ನು ದೇವನಿಗೆ ಸಮಾನರೆಂದು ಪರಿಗಣಿಸಿದಂತಾಗುವುದು. ದೇವನ ಸಹಭಾಗಿ ಯಾರು ತಾನೇ ಆಗಲು ಸಾಧ್ಯ? ಆದುದರಿಂದಲೇ ಪ್ರವಾದಿವರ್ಯರು ಬಹುದೇವಾರಾಧನೆಯಿಂದ ಜನರನ್ನು ತಡೆದರು. ಇತರ ಧರ್ಮಗಳಲ್ಲಿ ಬಹುದೇವಾರಾಧನೆಯ ಶಿಕ್ಷಣ ಮತ್ತು ಅನುಮತಿಯಿರುವು ದರಿಂದ ನಮ್ಮಂಥವರು ಅನೇಕ ತರದ ನಷ್ಟಗಳಿಗೆ ಗುರಿಯಾಗಿದ್ದಾರೆ. ಬಹುದೇವಾರಾಧನೆಯ ಎಲ್ಲ ದಾರಿಗಳನ್ನು ಮುಚ್ಚುವ ಮೂಲಕ ಅಲ್ಲಾಹ್ ಮನುಷ್ಯನಿಗೆ ಹಿರಿಮೆ ಮತ್ತು ಔನ್ನತ್ಯವನ್ನು ನೀಡಿದೆಯಲ್ಲದೆ ನೀಚತೆ ಮತ್ತದರ ಪರಿಣಾಮಗಳಿಂದ ಅವನನ್ನು ರಕ್ಷಿಸಿದೆ." [೧೧]
ಪ್ರವಾದಿತ್ವದ ಮೇಲಿನ ವಿಶ್ವಾಸ
ಇಸ್ಲಾಮಿನ ಮೂಲಭೂತ ವಿಶ್ವಾಸಗಳ ಪೈಕಿ ಎರಡೆನೆಯದು ಪ್ರವಾದಿತ್ವದ ಮೇಲಿನ ವಿಶ್ವಾಸವಾಗಿದೆ. ಮನುಷ್ಯ ಇತಿಹಾಸದ ಆರಂಭ ಕಾಲದಿಂದಲೂ ಅಲ್ಲಾಹನು ಕೆಲವು ಚುನಾಯಿತ ವ್ಯಕ್ತಿಗಳನ್ನು ಮಾನವರ ಮಾರ್ಗದರ್ಶನಕ್ಕಾಗಿ ನಿಯೋಜಿಸುತ್ತಿದ್ದನು. ಇವರನ್ನೇ ಪ್ರವಾದಿ ಗಳೆಂದು ಕರೆಯಲಾಯಿತು. ಈ ಎಲ್ಲ ಪ್ರವಾದಿಗಳ ಮೇಲೆ ವಿಶ್ವಾಸವಿಡುವುದು ಪ್ರತಿಯೊಬ್ಬ ಮುಸ್ಲಿಮನ ಮೇಲೆ ಕಡ್ಡಾಯವಾಗಿದೆ. ಇವರ ಪೈಕಿ ಯಾವುದಾದರೊಂದು ಪ್ರವಾದಿಯನ್ನು ನಿರಾಕರಿಸಿದರೆ ಅವನು ಮುಸ್ಲಿಮನಾಗಲು ಸಾಧ್ಯವಿಲ್ಲ. ಮನುಷ್ಯ ಪ್ರಕ್ರತಿಯನ್ನು ಗ್ರಹಿಸಲು ಮತ್ತವರ ಅವಶ್ಯಕತೆಗಳನ್ನರಿಯಲು ದೇವಚರರಿಗೋ ಅಥವಾ ಮನುಷ್ಯೇತರ ಇತರ ಜೀವಿಗಳಿಗೋ ಸಾಧ್ಯವಿಲ್ಲ. ಆದರಿಂದಲೇ ಅಲ್ಲಾಹನು ಮಾನವರನ್ನೇ ಮಾನವಸುಧಾರಕರಾಗಿ ನೇಮಿಸಿದನು. ಮನುಷ್ಯರಾಗಿದ್ದರೂ ಪ್ರವಾದಿಗಳು ಶ್ರೇಷ್ಠ ಸ್ವಭಾವದವರಾಗಿದ್ದರು. ಉತ್ತಮ ಚಾರಿತ್ರ್ಯದ ಉತ್ತುಂಗಕ್ಕೇರಿದವರಾಗಿದ್ದರು. ಇತರರಂತೆ ಅವರೂ ಆಹಾರವನ್ನು ಸೇವಿಸುತ್ತಿದ್ದರು .ಮಲಮೂತ್ರ ವಿಸರ್ಜನೆ ಮಾಡುತ್ತಿದ್ದರು. ವೈವಾಹಿಕ ಜೀವನ ನಡೆಸುತ್ತಿದ್ದರು. ಸಾರ್ವಜನಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಇತರರಿಗೆ ನೀಡದ ಪ್ರತ್ಯೇಕತೆಯೊಂದನ್ನು ಅಲ್ಲಾಹನು ಅವರಿಗೆ ನೀಡಿದ್ದನು. ಅಗೋಚರವಾಗಿ ದೇವಚರರು ಬಂದು ಮಾನವರ ಮಾರ್ಗದರ್ಶನಕ್ಕಾಗಿ ಅಲ್ಲಾಹನ ಸಂದೇಶಗಳನ್ನು ನೀಡುತ್ತಿದ್ದರು. ದೇವ ಮಾರ್ಗದಿಂದ ದೂರ ಸರಿಯುತ್ತಿದ್ದ ಮಾನವಸಮೂಹವನ್ನು ದೇವಸಾನಿಧ್ಯಕ್ಕೆ ಕರೆತರಲು ಪ್ರತ್ಯೇಕ ಕಾಲ ಮತ್ತು ವಿಭಿನ್ನ ಸಮುದಾಯಗಳಲ್ಲಿ ಪ್ರವಾದಿಗಳನ್ನು ನಿಯೋಜಿಸುವುದು ಅನಿ ವಾರ್ಯವಾಗಿತ್ತು. ಹೀಗೆ ನಿಯೋಜಿಸಲ್ಪಟ್ಟ ಪ್ರವಾದಿಗಳ ಪೈಕಿ ಹ. ಮುಹಮ್ಮದ್(ಸ) ಕೊನೆಯ ಮತ್ತು ಅಂತಿಮ ಪ್ರವಾದಿಯಾಗಿರುವರು. ಇನ್ನು ಅಂತ್ಯ ದಿನದವರೆಗೆ ಬೇರೆ ಯಾವ ಪ್ರವಾದಿಯೂ ಆಗಮಿಸ ಲಿಕ್ಕಿಲ್ಲ . ಎಲ್ಲ ಪ್ರವಾದಿಗಳ ಮೇಲೆ ವಿಶ್ವಾಸವಿಡುವುದು ಕಡ್ದಾಯವಾಗಿದೆಯಾದರೂ ಪ್ರವಾದಿ ಮುಹಮ್ಮದ್(ಸ)ರನ್ನು ಮಾತ್ರ ಅನುಸರಿಸಬೇಕೆಂದು ಇಸ್ಲಾಂ ಆದೇಶಿಸುತ್ತದೆ. ಇಸ್ಲಾಮನ್ನು ಪ್ರವೇಶಿಸುವಾಗ 'ಮುಹಮ್ಮದುರ್ರಸೂಲುಲ್ಲಾಹಿ 'ಎಂದು ಹೇಳಿ ಇದನ್ನೇ ಪ್ರಖ್ಯಾಪಿಸಲಾಗುತ್ತದೆ.
ಪರಲೋಕ ವಿಶ್ವಾಸ
ಇಸ್ಲಾಮಿನ ಮೂಲಭೂತ ವಿಶ್ವಾಸಗಳ ಪೈಕಿ ಪರಲೋಕ ವಿಶ್ವಾಸವ ಒಂದಾಗಿದೆ. ಇಹಲೋಕಜೀವನ ನಶ್ವರ ಯಥಾರ್ಥ ಜೀವನ ಇದರ ನಂತರ ಬರುವ ಪರಲೋಕದ ಜೀವನವಾಗಿದೆ. ಮನುಷ್ಯ ಇಲ್ಲಿ ಮಾಡಿದ ಪ್ರತಿಯೊಂದು ಕರ್ಮದ ಮರಣಾ ನಂತರ ಜೀವನದಲ್ಲಿ ಅಲ್ಲಾಹನು ವಿಚಾರಣೆ ನಡೆಸುವನು,ಇಲ್ಲಿ ಯಾರು ಅಲ್ಲಾಹನನ್ನು ತನ್ನ ಏಕೈಕ ನೈಜಆರಾಧ್ಯನೆಂದು ಅಂಗೀಕರಿಸಿ ಆತನಿಗೆ ವಿಧೇಯತೆ ತೋರಿ ಅವನ ಅನು ಸರಣೆ ಮಾಡಿ, ಸತ್ಕರ್ಮಗಳನ್ನು ಮಾಡುತ್ತಾ ಜೀವಿಸಿರುವವರು ತಮ್ಮ ಕರ್ಮಗಳಿಗೆ ಅರ್ಹವಾದ ಪ್ರತಿಫಲ 'ಸ್ವರ್ಗ'ವನ್ನು ಪಡೆಯುವರು.ಅವರು ತಮ್ಮ ತಮ್ಮ ಕರ್ಮಗಳಿಗನುಸಾರ ಸ್ವರ್ಗದಲ್ಲಿ ಉನ್ನತ ಪದವಿಗಳಲ್ಲಿ ಅಲಂಕರಿಸಲ್ಪಡುವರು. ಅಲ್ಲಿ ಅವರಿಗಾಗಿ ಅವರು ಬಯಸಿದ್ದೆಲ್ಲವೂ ಇರುವುದು. ಅಲ್ಲಿ ಅವರಿಗೆ ಚಿಲುಮೆಗಳು ಹರಿಯುತ್ತಿರುವ ಉದ್ಯಾನಗಳಿರುವುವು. ಹಚ್ಚ ಹಸುರಾದ ಮರಗಳಿರುವ ಉದ್ಯಾನವದು.ಅಲ್ಲಿ ಅವರು ದಪ್ಪ ಗಿನ ರೇಷ್ಮೆಯ ಕವಚಗಳಿರುವ ಹಾಸುಗಳ ಮೇಲೆ ದಿಂಬಿಗೊರಗಿ ಕುಳಿತಿರುವರು. ಅಲ್ಲಿಯ ಮರಗಳು ಫಲಗಳ ಭಾರದಿಂದ ಬಾಗುತ್ತಿರುವುವು. ಈ ಸ್ವರ್ಗನಿವಾಸಿಗಳಿಗೆ ಮಾನವನಾಗಲಿ ಅಥವಾ ಜಿನ್ನ್ ಆಗಲೀ ಹಿಂದೆಂದೂ ಸ್ಪರ್ಶಿಸಿರದಂತಹ ವಜ್ರ ಮತ್ತು ಮುತ್ತುಗಳಂತೆ ಸೌಂದರ್ಯವುಳ್ಳ ಲಜ್ಜಾಪೂರ್ಣ ನಯನೆಯರಿರುವರು. ಇನ್ನು ಯಾರು ಅಲ್ಲಾಹನಿಗೆ ಅವಿಧೇಯತೆ ತೋರಿ ದುಷ್ಕರ್ಮಗಳನ್ನೆಸಗಿರುವರೋ ಅವರು ತಮ್ಮ ಕರ್ಮಗಳಿಗೆ ತಕ್ಕ ಶಿಕ್ಷೆಯನ್ನೂ ಪಡೆಯುವರು.ಶರೀರವನ್ನು ಮಾತ್ರವಲ್ಲ ಮನ ಮಸ್ತಿಷ್ಕವನ್ನೂ ಸುಟ್ಟು ಕರಕಲಾಗಿ ಸುವ 'ನರಕ' ವೆಂಬ ಅಗ್ನಿಕುಂಡವಾಗಿರುವುದು ಅವರ ವಾಸಸ್ಥಳ. ಸತ್ಯವನ್ನು ನಿಷೆಧಿಸಿದವರನ್ನು ಅಗ್ನಿಜ್ವಾಲೆ ಗಳು ಆವರಿಸಿರುವುದು. ಅಲ್ಲಿ ಅವರು ದಾಹವನ್ನು ಸಹಿಸಲಾಗದೆ ನೀರನ್ನು ಕೇಳುವರು ಆಗ ಅವರ ಬಾಯನ್ನು ಸುಟ್ಟುಹಾಕುವಂಥ ಎಣ್ಣೆಯ ಮಡ್ಡಿಯನ್ತಿರುವ ನೀರಿನಿಂದ ಅವರನ್ನು ಸತ್ಕರಿಸ ಲಾಗುವುದು. ಅಲ್ಲಿ ಅನುಕಂಪ ತೋರುವವರಾರೂ ಇರಲಾರರು. ಗಾಯದ ಕೀವು ಇವರ ಆಹಾರವಾಗಿರುವುದು.
ಇಸ್ಲಾಮಿನ ಅಧಾರ ಸ್ತಂಭಗಳು
ಇಸ್ಲಾಮಿನ ಆಚರಣೆ ಮತ್ತು ನಂಬಿಕೆಗಳು ಐದು ಅಧಾರ ಸ್ತಂಭಗಳ ಮೇಲೆ ನಿಂತಿದೆ. ಈ ನಂಬಿಕೆಗಳಿಗೆ ಅರ್ಕನುಲ್ ಇಸ್ಲಾಮ್ ಎಂದು ಹೆಸರು.
- ಸತ್ಯದ ಸಾಕ್ಷ್ಯ ವಹಿಸುವುದು
- ನಮಾಜ್ ನಿರ್ವಹಿಸುವುದು
- ಝಕಾತ್ ನೀಡುವುದು
- ರಂಜಾನ್ ತಿಂಗಳ ವ್ರತಾಚರಣೆ
- ಹಜ್ಜ್ ನಿರ್ವಹಿಸುವುದು
ಇನ್ನು ಪ್ರತಿಯೊಂದನ್ನೂ ಸವಿಸ್ತಾರವಾಗಿ ತಿಳಿಯೋಣ
ಸತ್ಯದ ಸಾಕ್ಷ್ಯ ವಹಿಸುವುದು
ಈಗ ತಾನೆ ವಿವರಿಸಿ ಬಂದಂತೆ ಇಸ್ಲಾಂ ಏಕ ದೇವತ್ವ, ಪ್ರವಾದಿತ್ವ ಮತ್ತು ಪರಲೋಕ ವಿಶ್ವಾಸಗಳಂತಹ ಮೂಲಭೂತ ನಂಬಿಕೆಗಳನ್ನೊಳಗೊಂಡಿದೆ. ಈ ನಂಬಿಕೆಗಳ ಅಂಗೀಕಾರ ಪ್ರಖ್ಯಾಪನೆಯನ್ನೇ ಸತ್ಯದ ಸಾಕ್ಷ್ಯ ವಹಿಸುವುದೆಂದು ಹೇಳಲಾಗುತ್ತದೆ. "ಸ್ರಷ್ಟಿಕರ್ತನೂ,ಪರಿಪಾಲಕನೂ ಆದ ಏಕ ಅಲ್ಲಾಹನ ಹೊರತು ಆರಾಧನೆ, ವಿಧೇಯತೆ ಮತ್ತು ಅನುಸರಣೆಗೆ ಅರ್ಹರಾದವರು ಬೇರಾರೂ ಇಲ್ಲ ಮತ್ತು ಮುಹಮ್ಮದ್(ಸ) ಅಲ್ಲಾಹನ ದಾಸರೂ ಅಂತಿಮ ದೂತರೂ ಆಗಿರುವರು" ಎಂದಾಗಿದೆ ಈ ಪ್ರಖ್ಯಾಪನೆಯ ಸಾರ.
ನಮಾಜ್ ನಿರ್ವಹಿಸುವುದು
ಎರಡೆನೆಯ ಕರ್ಮ ನಮಾಜ್ ನಿರ್ವಹಿಸುವುದಾಗಿದೆ.ಪ್ರತಿ ದಿನ ಹಗಲು ರಾತ್ರಿ ಯಾಗಿ ಐದು ಬಾರಿ ತನ್ನ ಸ್ರಷ್ಟಿಕರ್ತನೊಂದಿಗೆ ನೇರಸಂಪರ್ಕ ಸಾಧಿಸ ಬಹುದಾದ ಆರಾಧನೆಯಾಗಿದೆ ಈ ನಮಾಜ್. ನಿಜ ಜೀವ ನದ ಪ್ರತಿ ಘಳಿಗೆಯಲ್ಲೂ ಅಲ್ಲಾಹನೊಂದಿಗೆ ನಿರಂತರ ಸಂಪರ್ಕ ಸಾಧಿಸುವುದೂ ಇದರ ಮೂಲೋದ್ದೇಶ ಗಳಲ್ಲೊಂದು. ನಮಾಜ್ ಮನುಷ್ಯನ ಅಂತರಂಗವನ್ನೂ ಬಹಿರಂಗವನ್ನೂ ಕೊಳಕು ಮತ್ತು ಮಾಲಿನ್ಯಗಳಿಂದ ಶುಚಿಗೊಳಿಸುವ ಸಾಧನವೂ ಹೌದು. ಅಂಗಾಂಗಗಳನ್ನು ಶುಚಿಗೊಳಿಸದೆ ನಮಾಜ್ ನಿರ್ವಹಿಸಲು ಸಾಧ್ಯವೇ ಇಲ್ಲ. ಪವಿತ್ರ ಕುರಾನ್ ಹೇಳುತ್ತದೆ: "ಓ, ಸತ್ಯ ವಿಶ್ವಾಸಿಗಳೇ! ನೀವು ನಮಾಜಿಗೆಂದು ಹೊರಟಾಗ ನಿಮ್ಮಮುಖಗಳನ್ನು ಮತ್ತು ಮೊಣಕೈ ಗಂಟುಗಳವರೆಗೆ ಕೈಗಳನ್ನು ತೊಳೆದು ಕೊಳ್ಳಿರಿ. ಜನಾಬತ್ ಅಥವಾ ವೀರ್ಯಸ್ಖಲನಾ ನಂತರದ ಮಾಲಿನ್ಯದ ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿ ಶುದ್ಧರಾಗಿ ಕೊಳ್ಳಿರಿ. ನೀವು ಅನಾರೋಗ್ಯದಿಂದಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲಾರಾದರೂ ಮಲ ಮೂತ್ರ ವಿಸರ್ಜನೆ ಮಾಡಿ ಬಂದರೆ ಅಥವಾ ನೀವು ಸ್ತ್ರೀಯರನ್ನು ಸ್ಪರ್ಶಿಸಿದ್ದರೆ ಮತ್ತು ಆಬಳಿಕ ನೀರು ಸಿಗದೇ ಹೋದರೆ ಶುದ್ಧ ಮಣ್ಣನ್ನು ಉಪಯೋಗಿಸಿ ಕೊಳ್ಳಿರಿ. ಅದರ ಮೇಲೆ ಹಸ್ತಗಳನ್ನು ಬಡಿದು ನಿಮ್ಮ ಮುಖ ಮತ್ತು ಕೈಗಳ ಮೇಲೆ ಸವರಿಕೊಳ್ಳಿರಿ. ಅಲ್ಲಾಹ್ ನಿಮ್ಮ ಜೀವನ ವನ್ನು ಸಂಕುಚಿತಗೊಳಿಸಲಿಚ್ಚಿಸುವುದಿಲ್ಲ. ಬದಲಾಗಿನೀವು ಕ್ರತಜ್ಞರಾಗಲೆಂದು. ಅವನು ನಿಮ್ಮನ್ನು ಪರಿಶುದ್ಧಗೊಳಿಸಲಿಕ್ಕೂ ನಿಮ್ಮಮೇಲೆ ತನ್ನ ಕೊಡುಗೆಗಳನ್ನು ಪರಿಪೂರ್ಣಗೊಳಿಸಲಿಕ್ಕೂಇಚ್ಚಿಸುತ್ತಾನೆ. (ಪವಿತ್ರ ಕುರಾನ್: ಅಧ್ಯಾಯ ೫ ಸೂಕ್ತ ೬) ಪ್ರವಾದಿ ಮುಹಮ್ಮದ್(ಸ)ಈ ರೀತಿ ಹೇಳಿರುವರು: "ನಿಮ್ಮ ಪೈಕಿ ಒಬ್ಬಾತನ ಮನೆಯ ಮುಂದೆ ಒಂದು ನದಿ ಹರಿಯುತ್ತಿದೆ, ಅದರಲ್ಲಿ ಅವನು ಪ್ರತಿ ದಿನ ಐದುಬಾರಿ ಸ್ನಾನ ಮಾಡುತ್ತಾನೆಂದಾದರೆ ಅವನ ಕುರಿತು ನಿಮ್ಮ ಅಭಿಪ್ರಾಯವೇನು? ಆತನ ಶರೀರದಲ್ಲಿ ಅಲ್ಪವಾದರೂ ಮಲಿನತೆ ಅಥವಾ ಕೊಳಕು ಬಾಕಿಯಿರುವುದೇ? ಸಹಚರರು ಉತ್ತರಿಸಿದರು, ಇಲ್ಲ, ಅವನ ಶರೀರದಲ್ಲಿ ಸ್ವಲಪವೂ ಮಲಿನತೆ ಅಥವಾ ಕೊಳಕು ಬಾಕಿಯಿರಲಾರದು. ಆಗ ಪ್ರವಾದಿ(ಸ) ಹೇಳಿದರು ಇದೇತರ ಐದು ಸಮಯದ ನಮಾಜ್ ಗಳಿಂದಲೂ ಅಲ್ಲಾಹನು ವ್ಯಕ್ತಿಯ ಪಾಪಗಳನ್ನು ಕ್ಷಮಿಸಿ ಬಿಡುತ್ತಾನೆ" ಹೌದು, ನಮಾಜ್ ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ.
ಝಕಾತ್ ನೀಡುವುದು
ಇಸ್ಲಾಮಿನ ಮೂರನೇ ಕಡ್ಡಾಯ ಕರ್ಮ ಝಕಾತ್ ಆಗಿದೆ. ನಮಾಜ್ ದೈಹಿಕ ಆರಾಧನೆಯಾದರೆ ಝಕಾತ್ ಸಂಪತ್ತಿನ ಮೂಲಕ ದೇವ ಸಂಪ್ರೀತಿಯನ್ನು ಗಳಿಸುವ ಮಾರ್ಗವಾಗಿದೆ. ಒಬ್ಬ ಸ್ಥಿತಿವಂತ ಮುಸ್ಲಿಂ ತನ್ನ ಸಂಪಾದನೆಯ ನಿರ್ದಿಷ್ಟ ಭಾಗವನ್ನು ಅರ್ಹರಿಗೆ ನಿರ್ಬಂಧಿತವಾಗಿ ಕೊಡಲೇ ಬೇಕು. ಝಕಾತ್ ಸಿರಿವಂತರು ತೋರುವ ಔದಾರ್ಯವಲ್ಲದೆ ಅದು ಬಡವರ ಹಕ್ಕಾಗಿದೆ ಎಂದು ಇಸ್ಲಾಂ ತಿಳಿಸುತ್ತದೆ. ಸಂಪತ್ತಿನ ಒಡೆಯ ಅಲ್ಲಾಹನಾಗಿರುತ್ತಾನೆ.ಮನುಷ್ಯಅದರ ಮೇಲ್ವಿಚಾರಕ ಮಾತ್ರನಾಗಿರುತ್ತನೆಂದೂ ಅದು ನೆನಪಿಸುತ್ತದೆ. ಸಮಾಜಿಕ ಜೀವನದ ಕೆಲವು ಮಹತ್ತರವಾದ ಉದ್ದೇಶಗಳನ್ನು ಈಡೇರಿಸುವುದೂ ಝಕಾತಿನ ಔಚಿತ್ಯಗಳಲ್ಲೊಂದು. ಅವುಗಳಲ್ಲಿ ಮುಖ್ಯವಾದುದನ್ನು ನಾನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ. ೧. ಸಂಪತ್ತನ್ನು ಶುಚಿಗೊಳಿಸುವುದು. ಅದನ್ನು ವ್ರದ್ಧಿಸುವುದು ಮತ್ತು ಅಲ್ಲಾಹನ ಆಜ್ಞಾಪಾಲನೆಯಿಂದ ಸಂಭವನೀಯ ವಿಪತ್ತುಗಳಿಂದ ಅದನ್ನು ರಕ್ಷಿಸಿಕೊಳ್ಳುವುದು. ೨. ಲೋಭ, ಜಿಪುಣತೆ ಮತ್ತು ದುರಾಸೆಗಳಂತಹ ದುಶ್ಚಟಗಳಿಂದ ಮನುಷ್ಯ ಮನಸ್ಸನ್ನು ಸ್ವಚ್ಛಗೊಳಿಸುವುದು. ೩. ಬಡವರು ಮತ್ತು ನಿರ್ಗತಿಕರೊಂದಿಗೆ ಸಹಾನುಭೂತಿ ತೋರುವುದರ ಜೊತೆಗೆ ದರಿದ್ರರ,ವಂಚಿತರ ಮತ್ತು ಹಸಿದವರ ಅವಶ್ಯಕತೆಗಳನ್ನು ಪೂರೈಸುವುದು. ೪. ಸಾರ್ವಜನಿಕ ಹಿತಾಸಕ್ತಿಗಳನ್ನು ಕಾಪಾಡುವುದು ಮತ್ತು ಸಮಾಜವನ್ನು ಬಲಿಷ್ಠಗೊಳಿಸುವುದು.
ಇದೇ ಕಾರಣದಿಂದ ಝಕಾತ್ ನೀಡದವರಿಗೆ ಮತ್ತು ಅದನ್ನು ತಡೆಹಿಡಿದವರಿಗೆ ಕಠಿಣ ಶಿಕ್ಷೆಯಾಗುವುದೆಂದು ಪವಿತ್ರ ಕುರಾನ್ ಎಚ್ಚರಿಕೆ ನೀಡುತ್ತದೆ. ಅದು ಹೇಳುತ್ತದೆ: " ಓ ಸತ್ಯ ವಿಶ್ವಾಸಿಗಳೇ! ಗ್ರಂಥದವರ ಅಧಿಕಾಂಶ ವಿಧ್ವಾಂಸರೂ ಸಂತರೂ ಜನರ ಸಂಪತ್ತನ್ನು ಅನಧಿಕ್ರತ ವಿಧಾನಗಳಿಂದ ಕಬಳಿಸುತ್ತಾರೆ ಮತ್ತು ಅವರನ್ನು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. ಚಿನ್ನವನ್ನೂ ಬೆಳ್ಳಿಯನ್ನೂ ಸಂಗ್ರಹಿಸಿಟ್ಟು ಅವುಗಳನ್ನು ದೇವಮಾರ್ಗದಲ್ಲಿ ಖರ್ಚು ಮಾಡದವರಿಗೆ ವೇದನಾಯುಕ್ತ ಯಾತನೆಯ ಸುವಾರ್ತೆ ನೀಡಿರಿ. ಈ ಚಿನ್ನ ಬೆಳ್ಳಿಗಳ ಮೇಲೆ ನರಕಾಗ್ನಿಯನ್ನು ಉರಿಸಲಾಗುವುದು. ತರುವಾಯ ಅದರಿಂದಲೇ ಅವರ ಹಣೆಗಳಿಗೂ, ಪಾರ್ಶ್ವಗಳಿಗೂ ಮತ್ತು ಬೆನ್ನುಗಳಿಗೂ ಬರೆ ಹಾಕಲಾಗುವುದು. ನೀವು ನಿಮಗಾಗಿ ಸಂಗ್ರಹಿಸಿಟ್ಟಿದ್ದ ಸಂಪತ್ತು ಇದುವೇ, ಈಗ ನೀವು ಕೂಡಿ ಹಾಕಿದ್ದ ಸಂಪತ್ತನ್ನು ಸವಿಯಿರಿ"(ಎನ್ನಲಾಗುವುದು)(ಪವಿತ್ರ ಕುರಾನ್: ಅಧ್ಯಾಯ ೯ ಸೂಕ್ತ ೩೪-೩೬) ಮಾನ್ಯರೇ! ಒಂದು ವಿಭಾಗ ಜನರು ಸಂಪತ್ತನ್ನು ಶೇಖರಿಸಿಡುವುದು ಮತ್ತೊಂದು ವಿಭಾಗ ಜನರು ನಿರ್ಗತಿಕರಾಗಿರುವುದಕ್ಕೆ ಇಸ್ಲಾಂ ಎಂದಿಗೂ ಆಸ್ಪದ ಕೊಡುವುದಿಲ್ಲ.
ಝಕಾತ್ ನೀಡುವುದು
ಮಾನವೀಯತೆಯ ಧರ್ಮವಾದ ಇಸ್ಲಾಮಿನ ಆರ್ಥಿಕ ದರ್ಶನವು ಸಮೂಹದ ಆರ್ಥಿಕ ಭದ್ರತೆಯನ್ನು ಲಕ್ಷ್ಯವಿಟ್ಟಿದೆ. ವಿಶ್ವ ಕಂಡ ಸರಿಸಾಟಿಯಿಲ್ಲದ ಆರ್ಥಿಕ ವ್ಯವಸ್ಥೆಯನ್ನು ಇಸ್ಲಾಂ ಕೊಡುಗೆಯಿತ್ತಿದೆ. ಪ್ರಕೃತಿಯ ಧರ್ಮವಾದ ಇಸ್ಲಾಂ ಧರ್ಮವು ಮನುಕುಲದ ಉನ್ನತಿ ಹಾಗೂ ಅವನತಿಗೆ ಮುಖ್ಯ ಕಾರಣವಾದ ಆರ್ಥಿಕ ಕ್ಷೇತ್ರವನ್ನು ಶ್ರದ್ಧಾಪೂರ್ವಕ ಸಂಭಾಳಿಸುತ್ತದೆ. ಸಂಪತ್ತಿನ ನಿಜವಾದ ಮಾಲಿಕ ಸೃಷ್ಟಿಕರ್ತ ಅಲ್ಲಾಹನೆಂದೂ, ಅದರ ನಿರ್ವಹಣೆ ಮಾತ್ರ ಮನುಷ್ಯನಿಗಿದೆ ಎಂದು ತಿಳಿಹೇಳುವ ಮೂಲಕ, ಸಂಪತ್ತು ಕೆಲವರ ಕೈಯಲ್ಲಿ ಕ್ರೋಢೀಕೃತವಾಗುವುದನ್ನು ಇಸ್ಲಾಂ ನಿಷೇಧಿಸುತ್ತದೆ. ಇದಕ್ಕೋಸ್ಕರ ಇಸ್ಲಾಂ ಕಡ್ಡಾಯ ದಾನವಾದ ಝಕಾತ್‍ನ್ನು ಜಾರಿಗೊಳಿಸಿದೆ. ಶ್ರೀಮಂತನ ಔದಾರ್ಯವಲ್ಲ, ಹೊರತು ದರಿದ್ರನ ಹಕ್ಕಾಗಿದೆ ಇಸ್ಲಾಮಿನ ಝಕಾತ್.
ಧನಿಕರ ಸಾಮೂಹಿಕ ಉತ್ತರದಾಯಿತ್ವ ಝಕಾತ್‍ನ ಕಡ್ಡಾಯವಾದ ಅಂಶ ನೀಡುವ ಮೂಲಕ ಕೊನೆಗೊಳ್ಳುವುದಿಲ್ಲ. ಕಾರಣ ಕೆಲ ಪ್ರತ್ಯೇಕ ವಸ್ತುಗಳಲ್ಲಿ ಮಾತ್ರ ಝಕಾತ್ ಇದೆ. ಆ ವಸ್ತುಗಳ ವಿನಾ ಝಕಾತ್ ಇಲ್ಲ ಎಂದು ಭಾವಿಸಿ ಅವುಗಳ ಮಾಲಕರಿಗೆ ಸಮೂಹದಲ್ಲಿ ಯಾವುದೇ ಉತ್ತರದಾಯಿತ್ವವಿಲ್ಲ ಎಂಬ ಧೋರಣೆ ಅರ್ಥಶೂನ್ಯವಾಗಿದೆ. ಮಾತ್ರವಲ್ಲ, ಝಕಾತ್‍ನ ಅಂಶವಾದ ಎರಡೂವರೆ ಶತಮಾನ ವಿತರಣೆ ಬಳಿಕ ಮಿಕ್ಕಿದ್ದಲ್ಲಿ ಧನಿಕರಿಗೆ ಏನು ಬೇಕಾದರೂ ಮಾಡಬಹುದು ಎಂದಾದಲ್ಲಿ ಇಸ್ಲಾಂ ಮಂಡಿಸುವ ಆರ್ಥಿಕ ಸಮತೋಲನ ಸರಿಯಾಗಿ ಜಾರಿಯಾಗಬೇಕೆಂದಿಲ್ಲ. ಆದ್ದರಿಂದಲೇ “ಖಂಡಿತ, ಸಂಪತ್ತಿನಲ್ಲಿ ಝಕಾತ್‍ಗಿಂತಲೂ ದೊಡ್ಡ ಬಾಧ್ಯತೆಗಳಿವೆ” ಎಂದು ಪ್ರವಾದಿ (ಸ) ಹೇಳಿರುವುದು. (ತಿರ್ಮುದಿ)
ತನ್ನ ಹಾಗೂ ಕುಟುಂಬಿಕರ ಉಪಜೀವನಕ್ಕೆ ಅಗತ್ಯವಾಗಿರುವುದನ್ನು ಹೊರತುಪಡಿಸಿ ಮಿಕ್ಕಿದ್ದನ್ನು ದೀನರು ಹಾಗೂ ಬಡಬಗ್ಗರಿಗೆ ದಾನ ಮಾಡಬೇಕು ಎಂದು ಪ್ರವಾದಿ (ಸ) ಹೇಳುತ್ತಾರೆ. ಅಬೂ ಸಈದಿಲ್ ಖುದ್ರಿ (ರ) ರವರ ಉದ್ಧರಣೆಯು ಇದಕ್ಕೆ ಪುಷ್ಟಿ ನೀಡುತ್ತದೆ. ಅವರು ಹೇಳುತ್ತಾರೆ. “ಪ್ರವಾದಿ (ಸ) ಹೇಳಿದರು.: ನಿಮ್ಮಲ್ಲಿ ಯಾರ ಬಳಿ ಅಗತ್ಯಕ್ಕಿಂತ ಹೆಚ್ಚು ವಾಹನವಿದೆಯೋ ಅವರು ಇಲ್ಲದವರಿಗೆ ನೀಡಲಿ, ಆಹಾರ ಅಗತ್ಯಕ್ಕಿಂತ ಹೆಚ್ಚಿದ್ದರೆ ಅದನ್ನು ಇಲ್ಲದವರಿಗೆ ನೀಡಲಿ”. ಅವರು ಹೇಳುತ್ತಾರೆ: ಹಾಗೆ ಪ್ರವಾದಿ (ಸ) ಸಂಪತ್ತಿನ ರೂಪಗಳನ್ನು ಪರಾಮರ್ಶೆ ನಡೆಸಿದಾಗ ಅಗತ್ಯಕ್ಕಿಂತ ಹೆಚ್ಚಿನ ಪಾಲಿನಲ್ಲಿ ನಮಗೆ ಯಾವುದೇ ಹಕ್ಕಿಲ್ಲವೆಂಬುದನ್ನು ನಾವು ಅರ್ಥೈಸಿಕೊಂಡೆವು. (ಮುಸ್ಲಿಂ)
ಪವಿತ್ರ ಖುರಾನ್ ಹಲವು ಸ್ಥಳಗಳಲ್ಲಿ ದಾನಧರ್ಮದ ಪ್ರಾಧಾನ್ಯತೆಯನ್ನು ಒತ್ತಿ ಹೇಳುತ್ತದೆ. “ಅಲ್ಲಾಹನ ಮಾರ್ಗದಲ್ಲಿ ಧನ ವ್ಯಯಿಸಿರಿ. ನಿಮಗೆ ನೀವೇ ಅನಾಹುತ ತಂದುಕೊಳ್ಳಬೇಡಿರಿ.”(2-195).
“ಓ ಸತ್ಯವಿಶ್ವಾಸಿಗಳೇ, ವ್ಯಾಪಾರ, ಗೆಳೆತನ, ಶಿಫಾರಸು ಯಾವುದೂ ಇಲ್ಲದ ಒಂದುದಿನ ಬರುವ ಮುನ್ನವೇ ಈಗ ನಿಮಗೆ ನಾವಿತ್ತುದರಿಂದ ಧರ್ಮ ಕಾರ್ಯಕ್ಕೆ ವೆಚ್ಚ ಮಾಡಿರಿ. ” (2-254)
“ಓ ಸತ್ಯ ವಿಶ್ವಾಸಿಗಳೇ, ನೀವು ಸಂಪಾದಿಸಿದ ಉತ್ತಮ ಸೊತ್ತುಗಳಿಂದಲೂ ಭೂಮಿಯಲ್ಲಿ ನಾವು ಹೊರಡಿಸಿದ ಉತ್ತಮ ಬೆಳೆಗಳಿಂದಲೂ ಖರ್ಚು ಮಾಡಿರಿ.” (2-267)
“ಇರುಳೂ ಹಗಲೂ ಗುಪ್ತವಾಗಿಯೂ ಜಾಹೀರಾಗಿಯೂ ತಮ್ಮ ಧನಗಳನ್ನು ದಾನ ನೀಡುವವರಿಗೆ ಅವರ ಪ್ರಭುವಿನ ಬಳಿ ಪ್ರತಿಫಲವಿದೆ” (2-274)
“ಸತ್ಯವಿಶ್ವಾಸಿಗಳಿಗೆ ಹೇಳಿರಿ; ಅವರು ನಮಾಝನ್ನು ಸಂಸ್ಥಾಪಿಸಲಿ. ಯಾವುದೇ ಕ್ರಯ ವಿಕ್ರಯವೂ ಗೆಳೆತನವೂ ಪ್ರಯೋಜನಕ್ಕೆ ಬಾರದ ಆ ದಿನ ಬರುವುದಕ್ಕೆ ಮುಂಚೆಯೇ ನಾವು ಅವರಿಗೆ ನೀಡಿದ ಸಂಪತ್ತಿನಿಂದ ರಹಸ್ಯವಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡಲಿ” (14-31)
“ಆದುದರಿಂದ ನಿಮ್ಮಿಂದ ಸಾಧ್ಯವಿರುವುದಷ್ಟು ನೀವು ಅಲ್ಲಾಹನನ್ನು ಭಯಪಡಿರಿ. ನೀವು ಆಲಿಸಿರಿ ಅನುಸರಿಸಿರಿ ಮತ್ತು ನಿಮಗೆ ಗುಣಕರವಾಗುವ ರೀತಿಯಲ್ಲಿ ಸಂಪತ್ತನ್ನು ಖರ್ಚು ಮಾಡಿರಿ”(64-16)
ದೈವ ಸಂಪ್ರೀತಿ, ಪರಲೋಕ ಮೋಕ್ಷ ಹಾಗೂ ಸ್ವರ್ಗ ಪ್ರವೇಶ ಲಭಿಸಲು ಕಾರಣವಾಗುವ ವಿಶೇಷ ಕರ್ಮವಾಗಿದೆ ದಾನಧರ್ಮ. ಪವಿತ್ರ ಖುರಾನ್ ಹಾಗೂ ಪವಿತ್ರ ಸುನ್ನತ್ ದಾನಧರ್ಮದ ಹಲವಾರು ಸವಿಶೇಷತೆಗಳನ್ನು ಒತ್ತಿ ಹೇಳಿದೆ. ಅವುಗಳಲ್ಲಿ ಕೆಲವು:
1. ಅಲ್ಲಾಹನ ಕೋಪ ಶಮನ ಮಾಡುವುದು. ಮುಆವಿಯ ಬಿನ್ ಹೈದ (ರ)ರಿಂದ ನಿವೇದನೆ: ಪ್ರವಾದಿ (ಸ) ಹೇಳುತ್ತಾರೆ: “ಖಂಡಿತ ರಹಸ್ಯವಾದ ದಾನಧರ್ಮ ದಾನಧರ್ಮ ಅನುಗ್ರಹಿಯೂ ಉನ್ನತನೂ ಆದ ಅಲ್ಲಾಹನ ಕೋಪವನ್ನು ತಣಿಸುತ್ತದೆ.” (ಮಜ್‍ಮಉ ಝವಾಇದ್)
2. ಪಾಪ ಮೋಕ್ಷಕ್ಕೆ ಹೇತುವಾಗುತ್ತದೆ. ಪ್ರವಾದಿ (ಸ) ಹೇಳುತ್ತಾರೆ. “ನೀರು ಬೆಂಕಿಯನ್ನು ನಂದಿಸುವಂತೆ ದಾನಧರ್ಮವು ಪಾಪವನ್ನು ದೂರ ಮಾಡುತ್ತದೆ.”(ತಿರ್ಮುದಿ). ಮಾತ್ರವಲ್ಲದೆ, ಪಾಪಮೋಕ್ಷದ ಪ್ರಧಾನ ಕಾರಣವಾಗಿ ದಾನವನ್ನು ಖುರಾನ್ ಪರಿಚಯಿಸುತ್ತದೆ. “ನಿಮ್ಮ ಪ್ರಭುವಿನ ಕ್ಷಮಾದಾನ ಹಾಗೂ ಭೂಮಿ ಮತ್ತು ಆಕಾಶಗಳಷ್ಟು ವಿಶಾಲವಾದ ಸ್ವರ್ಗದ ಕಡೆಗೆ ಧಾವಿಸಿರಿ. ಸ್ವರ್ಗವನ್ನು ಧರ್ಮನಿಷ್ಟರಿಗಾಗಿ ಕಾಯ್ದಿರಿಸಲಾಗಿದೆ. ಅವರು ಸಂತೋóದ ಸಮಯದಲ್ಲೂ ಕಷ್ಟದ ಸಮಯದಲ್ಲೂ ದಾನ ಧರ್ಮ ಮಾಡುವರು.” (3-133,134)
3. ಖಬ್‍ರ್‍ನಲ್ಲಿ ಸಮಾಧಾನವಿರುವುದು. ಪ್ರವಾದಿವರ್ಯರು ಹೇಳುತ್ತಾರೆ: “ಖಂಡಿತ, ದಾನವು ಖಬ್‍ರ್‍ವಾಸಿಗಳಿಗೆ ಖಬ್‍ರಿನ ತಾಪವನ್ನು ಕಡಿಮೆ ಮಾಡುತ್ತದೆ.” (ಬೈಹಖಿ)
4. ನರಕದಿಂದ ಶ್ರೀರಕ್ಷೆ. ಪ್ರವಾದಿ (ಸ) ಹೇಳಿದರು. “ಒಂದು ಒಣ ಖರ್ಜೂರದ ಸೀಳನ್ನು ನೀಡಿಯಾದರೂ ನೀವು ನರಕವನ್ನು ಭಯಪಡಿರಿ” (ಬುಖಾರಿ, ಮುಸ್ಲಿಂ). ಅಬೂ ಸೀದಿಲ್ ಖುದ್ರಿ (ರ)ರಿಂದ ನಿವೇದನೆ: ಪ್ರವಾದಿ (ಸ) ಸ್ತ್ರೀ ಸಮೂಹಕ್ಕೆ ಹೇಳುತ್ತಾರೆ. “ಸ್ತ್ರೀಯರೇ, ನೀವು ದಾನ ನೀಡಿರಿ. ನಿಮ್ಮನ್ನು ನಾನು ನರಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡಿದ್ದೆನು.” ಆಗ ಅವರ ಕೇಳಿದರು. “ಇದಕ್ಕೆ ಕಾರಣವೇನು ಪ್ರವಾದಿವರ್ಯರೇ?”. ಪ್ರವಾದಿ (ಸ) ಉತ್ತರಿಸಿದರು: “ನೀವು ಶಾಪವಾಕ್ಯವನ್ನು ವರ್ಧಿಸುತ್ತೀರಿ. ಗಂಡನಿಗೆ ಕೃತಘ್ನರಾಗುತ್ತೀರಿ.”(ಬುಖಾರಿ). ಈ ಹದೀಸ್ ವ್ಯಾಖ್ಯಾನಿಸಿ ಇಮಾಮ ಇಬ್ನು ಹಜರ್(ರ) ಬರೆಯುತ್ತಾರೆ. “ಸದಖ ಶಿಕ್ಷೆಯನ್ನು ತಡೆಯುತ್ತದೆ ಹಾಗೂ ಸೃಷ್ಟಿಗಳ ಪಾಪವನ್ನು ಮನ್ನಿಸುತ್ತದೆ ಎಂಬುದಕ್ಕೆ ಈ ಹದೀಸ್ ಪುರಾವೆಯಾಗಿದೆ.” (ಫತ್ಹುಲ್ ಬಾರಿ).
5. ದೈಹಿಕ ಅನಾರೋಗ್ಯ ಶಮನವಾಗುವುದು. ಪ್ರವಾದಿ(ಸ) ಪ್ರಸ್ತಾಪಿಸುತ್ತಾರೆ. “ನಿಮ್ಮಲ್ಲಿನ ರೋಗಿಗಳಿಗೆ ಸದಖ ಮೂಲಕ ಚಿಕಿತ್ಸೆ ನೀಡಿರಿ” (ಬೈಹಖಿ)
6. ಮಾನಸಿಕ ರೋಗಿಗಳಿಗೆ ಶಮನ. ಅಬೂ ಹುರೈರಾ(ರ) ರಿಂದ ನಿವೇದನೆ: ಪ್ರವಾದಿ (ಸ) ಹೇಳುತ್ತಾರೆ. “ಒಬ್ಬರು ಪ್ರವಾದಿ(ಸ)ರೊಂದಿಗೆ ಹೃದಯ ಕಾಠಿಣ್ಯದ ಬಗ್ಗೆ ಹೇಳುತ್ತಾರೆ. ಆಗ ಅವರು ಹೇಳಿದರು.: ಹೃದಯವು ಮೃದುವಾಗಲು ತಾವು ಬಯಸುತ್ತಿರುವಿರಾದರೆ ನಿರ್ಗತಿಕರಿಗೆ ಆಹಾರ ನೀಡಿರಿ, ಅನಾಥರ ತಲೆ ಸವರಿರಿ” (ಮುಸ್ನದು ಅಹ್ಮದ್).
7. ಸಂಪತ್ತಿನಲ್ಲಿ ಸಮೃದ್ದಿ ಉಂಟಾಗುವುದು. ಅಬೂ ಹುರೈರಾರಿಂದ ನಿವೇದನೆ: ನಬಿ(ಸ) ಹೇಳಿದರು: “ದಾನ ಸಂಪತ್ತನ್ನು ಕಡಿತಗೊಳಿಸಲಾರದು” (ಮುಸ್ಲಿಂ). ಅಲ್ಲಾಹನು ಹೇಳುತ್ತಾನೆ: “ಹೇಳಿರಿ, ನನ್ನ ಪ್ರಭು ತನ್ನ ದಾಸರಲ್ಲಿ ತಾನಿಚ್ಚಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ. ತಾನಿಚ್ಚಿಸಿದವರಿಗೆ ಪರಿಮಿತಗೊಳಿಸುತ್ತಾನೆ ನೀವು (ದೇವಮಾರ್ಗದಲ್ಲಿ) ಏನನ್ನು ಖರ್ಚು ಮಾಡಿದರೂ ಅದಕ್ಕೆ ಬದಲಾಗಿ ಅವನು ನಿಮಗೆ ಇನ್ನಷ್ಟು ಕೊಡುತ್ತಾನೆ” (34-39).
8. ವಿಪತ್ತುಗಳನ್ನು ತಡೆಯುವುದು. ಪ್ರವಾದಿ(ಸ) ಹೇಳುತ್ತಾರೆ. “ಧರ್ಮವು ವಿಪತ್ತನ್ನು ತಡೆಯುತ್ತದೆ.”(ತಬ್‍ರಾನಿ). ಸೂರ್ಯಗ್ರಹಣವುಂಟಾದ ಸಂದರ್ಭದಲ್ಲಿ ಜನರೆಲ್ಲರೂ ಅಸ್ವಸ್ಥರಾದಾಗ ನಬಿ(ಸ) ಅವರಿಗೆ ಹೇಳಿದರು. “ನೀವು ಗ್ರಹಣವನ್ನು ಕಂಡರೆ
ಅಲ್ಲಾಹನೊಂದಿಗೆ ಪ್ರಾರ್ಥಿಸಿರಿ. ಅವನನ್ನು ಹೊಗಳಿರಿ. ನಮಾಝ್ ನಿರ್ವಹಿಸಿರಿ. ದಾನ ನೀಡಿರಿ”(ಬುಖಾರಿ). ಈ ಹದೀಸ್ ವ್ಯಾಖ್ಯಾನಿಸಿ ಇಬ್ನು ದಖೀಖಿಲ್ ಈದ್(ರ) ಬರೆಯುತ್ತಾರೆ. ಅಪಾಯಕಾರಿಯಾದ ವಿಪತ್ತುಗಳನ್ನು ತಡೆಯಲು ಸದಖ ನೀಡುವು ಸುನ್ನತ್ತೆಂದು ಇಲ್ಲಿ ವೇದ್ಯವಾಗುತ್ತದೆ. (ಇಹ್‍ಕಾಮುಲ್ ಇಹ್ಕಾಂ)
9. ಸಂಪತ್ತು ವೃದ್ಧಿಸುವುದು. ಪ್ರವಾದಿ (ಸ) ವರ್ತಕರೊಂದಿಗೆ ಹೇಳಿದರು: “ಓ ವರ್ತಕ ಸಮೂಹವೇ, ಖಂಡಿತ ಪಿಶಾಚಿ ಹಾಗೂ ಆತನ ಸಂಗಡಿಗರು ನಿಮ್ಮ ವ್ಯಾಪಾರದಲ್ಲಿ ಬಂದು ಸೇರುತ್ತಾರೆ. ಆದ್ದರಿಂದ ನೀವು ನಿಮ್ಮ ವ್ಯಾಪಾರದೊಂದಿಗೆ ಸದಖವನ್ನು ಬೆರೆಸಿರಿ”(ತಿರ್ಮುದಿ).
10. ದಾನಿಯು ಅಲ್ಲಾಹನ ಪ್ರೀತಿಗೆ ಪಾತ್ರನಾಗುತ್ತಾನೆ. ಇಬ್ನು ಉಮರ್(ರ) ಹೇಳುತ್ತಾರೆ. ಓರ್ವ ವ್ಯಕ್ತಿ ಪ್ರವಾದಿಯರ ಬಳಿ ಬಂದು ಕೇಳಿದರು. ಅಲ್ಲಾಹನ ದೂತರೇ, ಜನರ ಪೈಕಿ ಅಲ್ಲಾಹನಿಗೆ ಪ್ರೀತಿಪಾತ್ರನಾರು?, ಕರ್ಮಗಳ ಪೈಕಿ ಅಲ್ಲಾಹನಿಗೆ ಇಷ್ಟವಾದುದು ಏನು?. ಅವರು ಹೇಳುತ್ತಾರೆ. “ಜನರಿಗೆ ಹೆಚ್ಚು ಉಪಕಾರಿಯಾದವನನ್ನು ಅಲ್ಲಾಹನು ಬಲು ಇಷ್ಟಪಡುತ್ತಾನೆ. ಒಬ್ಬ ವಿಶ್ವಾಸಿಯನ್ನು ಸಂತುಷ್ಟಿಗೊಳಿಸುವುದು, ಅವನ ಪ್ರಯಾಸವನ್ನು ದೂರೀಕರಿಸುವುದು, ಆತನ ಸಾಲ ತೀರಿಸುವುದು ಹಾಗೂ ಆತನನ್ನು ಹಸಿವು ಮುಕ್ತನನ್ನಾಗಿಸುವು ಅಲ್ಲಾಹನಿಗೆ ಇಷ್ಟವಾದ ಕರ್ಮವಾಗಿದೆ.”(ತಬ್‍ರಾನಿ). ಉಮರ್(ರ) ಹೇಳುತ್ತಾರೆ. “ಕರ್ಮಗಳು ಪರಸ್ಪರ ತಮ್ಮ ಮಹಿಮೆಗಳನ್ನು ಹೇಳುವುದು. ಆಗ ಸದಖ ಹೇಳುತ್ತz.É “ನಾನು ನಿಮ್ಮಲ್ಲಿ ಬಲು ಶ್ರೇಷ್ಠನು’ ” (ಇಬ್ನು ಖುಝೈಮಾ)
11. ಯಥಾರ್ಥ ಪುಣ್ಯ ಲಭಿಸುವುದು. ಅಲ್ಲಾಹು ಹೇಳುತ್ತಾನೆ: “ನಿಮಗೆ ಪ್ರಿಯವಾದ ವಸ್ತುಗಳಿಂದ ನೀವು ವೆಚ್ಚ ಮಾಡುವವರೆಗೂ ನೀವು ಪುಣ್ಯ ಪಡೆಯಲಾರಿರಿ. ನೀವು ಏನೇ ವೆಚ್ಚ ಮಾಡಿದರೂ ಅಲ್ಲಾಹನು ಅದರ ಬಗ್ಗೆ ಚೆನ್ನಾಗಿ ತಿಳಿದಿರುತ್ತಾನೆ ”(3-92). ಇಮಾಂ ಬುಖಾರಿ ಉದ್ಧರಿಸುತ್ತಾರೆ: ಈ ಆಯತ್ ಅವತೀರ್ಣಗೊಂಡಾಗ ಅಬೂ ತಲ್ಹಾ(ರ) ಪ್ರವಾದಿಶ್ರೇಷ್ಠರ ಬಳಿ ಬಂದು ಹೇಳಿದರು. “ಅಲ್ಲಾಹನು ಆತನ ಗ್ರಂಥದಲ್ಲಿ ನಿಮಗೆ ಪ್ರಿಯವಾದುದನ್ನು ದಾನ ಮಾಡಿರಿ” ಎಂದು ಹೇಳುತ್ತಾನೆ. ನನ್ನ ಸಂಪತ್ತಿನಲ್ಲಿ ನನಗೆ ಬಲು ಇಷ್ಟವಾದ ಬೈರೂಹಾಅï ತೋಟವನ್ನು ನಾನು ದಾನ ನೀಡಿದ್ದೇನೆ (ಬುಖಾರಿ). ಪ್ರಸ್ತುತ ಸೂಕ್ತ ಅವತೀರ್ಣಗೊಂಡಾಗ ಝೈದ್ ಬಿನ್ ಹಾರಿಸತ್(ರ) ರವರು ತಮಗಿಷ್ಟವಾದ ಕುದುರೆಯನ್ನು ದಾನ ಮಾಡಿದರು (ಜಾಮಿಉಲ್ ಬಯಾನ್). ಅಬ್ದುಲ್ಲಾ ಬಿನ್ ಉಮರ್ ಹೇಳುತ್ತಾರೆ. “ಪವಿತ್ರ ಖುರಾನಿನ ಪ್ರಸ್ತುತ ಸೂಕ್ತ ಅವತೀರ್ಣಗೊಂಡಾಗ, ಅಲ್ಲಾಹನು ನನಗೆ ನೀಡಿದ ಅನುಗ್ರಹಗಳನ್ನು ಜ್ಞಾಪಿಸಿಕೊಂಡೆನು. ಗುಲಾಮ ಸ್ತ್ರೀಗಳಿಗಿಂತ ಇಷ್ಟವಾದ ಒಂದೂ ಅಂದು ನನ್ನ ಬಳಿ ಇರಲಿಲ್ಲ. ಕೂಡಲೇ ನಾನು ಹೇಳಿದೆನು. ಅಲ್ಲಾಹನ ಪ್ರೀತಿಗೋಸ್ಕರ ನಾನು ಆಕೆಯನ್ನು ದಾಸ್ಯಮುಕ್ತಿಗೊಳಿಸಿದ್ದೇನೆ.”(ಮುಸ್ತದ್ರಕ್).
12. ಅಂತ್ಯ ದಿನದಂದು ಸದಖವು ನೆರಳನ್ನೀಯುವುದು. ಉಖ್‍ಬತ್ ಬಿನ್ ಆಮಿರ್ ಹೇಳುತ್ತಾರೆ: ಪ್ರವಾದಿಯವರು ಹೀಗೆನ್ನುವುದನ್ನು ನಾನು ಕೇಳಿದನು: ಪ್ರತಿಯೋರ್ವರೂ ಅವರು ನೀಡಿದ ಸದಖದ ನೆರಳಿನಡಿಯಲ್ಲಿರÀುತ್ತಾರೆ.(ಮುಸ್ನದ್ ಅಹ್ಮದ್)
13. ದೇವದೂತರ ಪ್ರಾರ್ಥನೆ ಲಭಿಸುತ್ತದೆ. ರಸೂಲ್ (ಸ) ಹೇಳಿದರು. ಪ್ರಭಾತ ವೇಳೆಯಲ್ಲಿ ಇಬ್ಬರು ಮಲಕುಗಳು ಇಳಿದು ಬರುತ್ತಾರೆ. ಅವರಲ್ಲೊಬ್ಬರು ‘ಅಲ್ಲಾಹನೇ ದಾನ ನೀಡುವವನಿಗೆ ನೀನು ಬದಲಿ ನೀಡು’ ಎಂದೂ ಇನ್ನೊಬ್ಬರು ‘ದಾನ ನೀಡದವನಿಗೆ ಹಾನಿ ಮಾಡು’ ಎಂದು ಪ್ರಾರ್ಥಿಸುತ್ತಿರುತ್ತಾರೆ.(ಬುಖಾಋಇ, ಮುಸ್ಲಿಂ)
14. ಪ್ರತಿಫಲ ದ್ವಿಗುಣವಾಗುವುದು. ಅಲ್ಲಾಹನು ಹೇಳುತ್ತಾನೆ: “ಅಲ್ಲಾಹನಿಗೆ ಉತ್ತಮ ಸಾಲ ನೀಡುವವನು ಯಾರಿದ್ದಾನೆ? ಹಾಗಾದರೆ ಅದನ್ನು ಅಲ್ಲಾಹನು ಧಾರಾಳಪಟ್ಟು ವರ್ಧಿಸುತ್ತಾನೆ. ಅಲ್ಲಾಹನು ಹಿಗ್ಗಿಸುತ್ತಾನೆ, ಕುಗ್ಗಿಸುತ್ತಾನೆ”(2-245). “ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತನ್ನು ಖರ್ಚು ಮಾಡುವವರ ಉಪಮೆ, ಒಂದು ಧಾನ್ಯ ಮೊಳೆತು ಅದರಿಂದ ಏಳು ಟಿಸಿಲೊಡೆದು ಪ್ರತಿಯೊಂದು ಟಿಸಿಲಲ್ಲಿ ತಲಾ ನೂರು ಧಾನ್ಯಗಳು ಬೆಳೆದಂತೆ. ಅಲ್ಲಾಹನು ತಾನಿಚ್ಛಿಸಿದವರಿಗೆ ದ್ವಿಗುಣಗೊಳಿಸುತ್ತಾನೆ”(2-261). “”ದಾನಿಗಳಾದ ಪುರುಷರಿಗೂ, ದಾನಿಗಳಾದ ಸ್ತ್ರೀಯರಿಗೂ ಮತ್ತು ಅಲ್ಲಾನಿಗೆ ಶ್ರೇóಠ ಸಾಲವನ್ನು ನೀಡಿದವರಿಗೆ ಖಂಡಿತವಾಗಿಯೂ ಇಮ್ಮಡಿಯಾಗಿ ಕೊಡಲಾಗುವುದು”(57-18).
15. ಒಂದೇ ದಿನ ದಾನಧರ್ಮದೊಂದಿಗೆ ವೃತಾನುಷ್ಠಾನ, ರೋಗಿಯ ಸಂದರ್ಶನ, ಮಯ್ಯಿತ್ ಹಿಂಬಾಲಿಸುವವರಿಗೆ ಸ್ವರ್ಗವು ಖಚಿತ. ಅಬೂಹುರೈರಾ(ರ) ಹೇಳುತ್ತಾರೆ: ಒಂದು ದಿನ ಪ್ರವಾದಿಯವರು ಸಹಾಬಿಗಳೊಂದಿಗೆ ಕೇಳುತ್ತಾರೆ. ‘ನಿಮ್ಮ ಪೈಕಿ ಉಪವಾಸಿಗರು ಯಾರಿದ್ದಾರೆ?’. ಅಬೂಬಕರ್ ಹೇಳಿದರು: ‘ನಾನು’ ಎಂದು. ಪ್ರವಾದಿಯವರು ಪುನಃ ಕೇಳಿದರು: ಇಂದು ಮಯ್ಯಿತ್‍ನ್ನು ಹಿಂಬಾಲಿಸಿದವರು ಯಾರಿದ್ದಾರೆ?. ಅಬೂಬಕರ್(ರ) ಹೇಳುತ್ತಾರೆ; ನಾನಿದ್ದೇನೆ. ಪ್ರವಾದಿಯವರು ಕೇಳುತ್ತಾರೆ: ಇಂದು ನಿರ್ಗತಿಕನಿಗೆ ಆಹಾರ ನೀಡಿದವರು ಯಾರಿದ್ದಾರೆ?. ಆಗ ಅಬೂಬಕರ್‍ರವರು ‘ನಾನು’ ಎಂದರು. ಪ್ರವಾದಿಯವರ ನಂತರದ ಪ್ರಶ್ನೆ ‘ಇಂದು ರೊಗಿಯನ್ನು ಸಂದರ್ಶಿಸಿದವರು ಯಾರು?’. ಆಗಲೂ ಅಬೂಬಕರ್‍ರವರ ಬಳಿಯಿಂದ ನಾನು ಎಂಬ ಉತ್ತರ ಬಂದಾಗ ಪ್ರವಾದಿಯವರು ‘ಈ ನಾಲ್ಕು ಕಾರ್ಯಗಳು ಒಬ್ಬರ;ಲ್ಲಿ ಮೇಳೈಸಿದರೆ ಆತ ಸ್ವರ್ಗ ಪ್ರವೇಶಿಸದಿರಲಾರ’ (ಮುಸ್ಲಿಂ).
16. ಪ್ರತ್ಯೇಕ ಕವಾಟದ ಮೂಲಕ ಸ್ವರ್ಗ ಪ್ರವೇಶ ಸಾಧ್ಯವಾಗುವುದು. ಅಬೂ ಹುರೈರಾರಿಂದ ನಿವೇದನೆ: ಪ್ರವಾದಿ (ಸ) ಹೇಳುತ್ತಾರೆ: ನಮಾಝ್ ನಿರ್ವಹಿಸುವವರನ್ನು ನಮಾಝ್‍ನ ಕವಾಟದ ಮೂಲಕ ಆಹ್ವಾನಿಸಲಾಗುವುದು. ಈಹಾದ್ ನಡೆಸಿದ ವಿಭಾಗವನ್ನು ಜಿಹಾದ್‍ನ ಕವಾಟದ ಮೂಲಕ ಸ್ವರ್ಗಕ್ಕೆ ಆಹ್ವಾನಿಸಲಾಗುವುದು. ಹಾಗೂ ಸದಖ ನೀಡಿದವರನ್ನು ಸದಖದ ಕವಾಟದ ಮೂಲಕ ಕರೆಯಲಾಗುವುದು.(ಬುಖಾರಿ).
17. ಸರ್ವ ಸತ್ಕರ್ಮಗಳ ಹಾದಿ ಸುಗಮವಾಗುವುದು. “ಯಾರು ದಾನ ನೀಡುತ್ತಾರೆ. ಹಾಗೂ ಅಲ್ಲಾಹನನ್ನು ಭಯಪಡುತ್ತಾನೆ. ಹಾಗೂ ಅತ್ಯುತ್ತಮವಾದುದನ್ನು ಸತ್ಯವೆಂದು ಅಂಗೀಕರಿಸುತ್ತಾನೆ. ಅವನಿಗೆ ನಾವು ಸ್ವರ್ಗಕ್ಕಿರುವ ಹಾದಿ ಸುಗಮಗೊಳಿಸುವೆವು.” (ಖುರಾನ್, 92/5-7). ಸುಗಮವಾದುದು ಎಂಬುದರ ಉದ್ದೇಶ ವಿವಿಧ ಸತ್ಕರ್ಮಗಳಿಗೆ ಮಾರ್ಗದರ್ಶನ ಲಭಿಸುವುದು ಎಂದು ವ್ಯಾಖ್ಯಾನಕಾರರು ಉಲ್ಲೇಖಿಸುತ್ತಾರೆ. (ಖುರ್ತುಬಿ).
18. ದಾನ ನೀಡಿದ್ದು ಎಂದೆಂದಿಗೂ ಶೇಷವಾಗಿರುತ್ತದೆ. ಮನೆಯಲ್ಲಿ ಕೊಯ್ದ ಆಡಿನ ಬಗ್ಗೆ ಅದರಲ್ಲಿ ಏನಾದರೂ ಬಾಕಿಯಿದೆಯೇ? ಎಂದು ಪ್ರವಾದಿ (ಸ) ಆಇಶ(ರ)ರೊಂದಿಗೆ ಕೇಳುತ್ತಾರೆ. ಆಗ ಆಇಶಾರವರು ಆದರ ತೊಡೆಯಲ್ಲದ ಒಂದೂ ಬಾಕಿಯಿಲ್ಲ ಎಂದಾಗ ತೊಡೆಯಲ್ಲದ ಎಲ್ಲವೂ ಬಾಕಿಯಾಯಿತು ಎಂದು ಪ್ರವಾದಿ(ಸ) ಹೇಳುತ್ತಾರೆ.*(ಮುಸ್ಲಿಂ). ಖುರಾನ್ ಹೇಳುತ್ತದೆ: “ನೀವು ನೀಡಿದ ದಾನ ನಿಮಗೇ ನೀಡಿಕೊಂಡ ದಾನ. ಅಲ್ಲಾಹನ ಒಲವನ್ನು ಮಾತ್ರ ಬಯಸಿ ದಾನ ನೀಡಿರಿ. ನಿಮ್ಮ ದಾನದ ಸಂಪೂರ್ಣ ಫಲ ನಿಮಗೆ ಲಭ್ಯ. ನೀವು ಅನೀತಿಗೊಳಗಾಗುವುದಿಲ್ಲ”(2-272).
19. ದಾಸನು ಮಾಲೀಕನಾದ ಅಲ್ಲಾಹನ ಕರಾರು ಪಾಲಿಸಿದಂತೆ. ಸಹಜೀವಿಗಳಿಗೆ ದಾನ ನೀಡುವ ಮೂಲಕ ಸೃಷ್ಟಿಕರ್ತನೊಂದಿಗಿನ ಕರಾರನ್ನು ಮನುಷ್ಯ ಪಾಲಿಸುತ್ತಾನೆ. ಖುರನ್ ಹೇಳುತ್ತದೆ: “ನಿಜವಾಗಿಯೂ ಅ;ಲ್ಲಾಹನು ಸತ್ಯವಿಶ್ವಾಸಿಗಳಿಂದ ಅವರ ತನು_ಧನಗಳನ್ನು ಸ್ವರ್ಗದ ಬದಲಿಗೆ ಖರೀದಿ ಮಾಡುತ್ತಾನೆ”. (9-111)
20. ದಾನಧರ್ಮವು ಅಲ್ಲಾಹನ ಬಗ್ಗೆ ಇರುವ ಒಳ್ಳೆಯ ಧೋರಣೆ ಹಾಗೂ ಸಾತ್ವಿಕ ಈಮಾನಿನ ಲಕ್ಷಣವಾಗಿದೆ. ಒಳ್ಳೆ ಕಾರ್ಯಗಳಿಗೆ ಧನ ವಿನಿಯೋಗ ಮಾಡದಿರುವುದು ಹಾಗೂ ಸಂಪತ್ತು ಕಡಿಮೆಯಾಗುವುದೆಂದು ಭಾವಿಸಿ ದಾನ ನೀಡದಿರುವುದು ಅಲ್ಲಾಹನ ಬಗ್ಗೆ ಇರುವ ಕೆಟ್ಟ ಚಿಂತನೆಯ ಫಲವೆಂದೇ ಭಾವಿಸಬಹುದು ಎಂಬುದನ್ನು ಸ್ಪಷ್ಟಪಡಿಸಿದ ಬಳಿಕ ಇಮಾಂ ಖುರ್ತುಬಿ ಹೇಳುತ್ತಾರೆ: ದಾಸನು ಅಲ್ಲಾಹನ ಕುರಿತು ಒಳ್ಳೆಯ ಧೋರಣೆ ಇರುವವನಾದರೆ ಸಂಪತ್ತು ಕಡಿಮೆಯಾಗಬಹುದೆಂಬ ಭಯ ಆತನಲ್ಲಿರಲಾರದು. ಕಾರಣ ದಾನಕ್ಕೆ ಬದಲಾಗಿ ಅಲ್ಲಾಹನು ಹೇರಳವಾಗಿ ನೀಡುವನೆಂದು ಅಲ್ಲಾಹನು ಸ್ಪಷ್ಟವಾಗಿ ಹೇಳಿದ್ದಾನೆ. (ಖುರ್ತುಬಿ)
ರಂಜಾನ್ ತಿಂಗಳ ವ್ರತಾಚರಣೆ
ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ರಂಜಾನ್ ತಿಂಗಳ ಸಂಪೂರ್ಣ ವ್ರತಾಚರಣೆ ಯಾಗಿದೆ. ಮಾನವಕಲ್ಯಾಣಕ್ಕಾಗಿ ಪ್ರವಾದಿ ಮುಹಮ್ಮದ್(ಸ)ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರಾನ್ ಅವತೀರ್ಣಗೊಂಡಿತು. ಇದರ ಗೌರವಾರ್ಹ ಪ್ರತಿವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು. ಪ್ರಭಾತಕಾಲ ದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇತರ ಸಮಯಗಳಲ್ಲಿ ಧರ್ಮಸಮ್ಮತ ವಾದ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ. ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ.
ಹಜ್ಜ್ ನಿರ್ವಹಿಸುವುದು
ಬೈಬಲ್‍ನ ಸೂಕ್ತೋಕ್ತಿಗಳಲ್ಲಿ ‘ಹಜ್ಜ್’ ಎಂಬ ಅನುಷ್ಠಾನ
ಜುನೈದ್ ಖಲೀಲ್ ನೂರಾನಿ
ಹಜ್ಜ್ ಇಸ್ಲಾಮಿನ ಪ್ರಧಾನ ಆರಾಧನಾ ಕರ್ಮವಾಗಿದೆ. ಲೋಕ ಮುಸ್ಲಿಮರು ಪ್ರತೀ ವರ್ಷ ಹಜ್ಜ್ ಕರ್ಮಕ್ಕಾಗಿ ಮಕ್ಕಾದ ಪುಣ್ಯಭೂಮಿಯಲ್ಲಿ ಒಂದುಗೂಡುತ್ತಾರೆ. ಪವಿತ್ರ ಹಜ್ಜ್ ಕರ್ಮವು ಹೆಚ್ಚು ಕಡಿಮೆ ಪ್ರವಾದಿ ಇಬ್ರಾಹೀಂ (ಅಬ್ರಹಾಂ) ಮತ್ತು ಅವರ ಕುಟುಂಬದ ತ್ಯಾಗಭರಿತ ಜೀವನದ ಸ್ಮರಣೆಯಾಗಿದೆ. ಹಾಜರಾ (ಹಾಗರಾ) ‘ಸಫಾ-ಮರ್ವ’ ಮಲೆಗಳಲ್ಲಿ ನೀರಿಗಾಗಿ ಅಂಡಲೆದದ್ದು ಹಾಗೂ ಪುತ್ರ ಇಸ್ಮಾಈಲ್ (ಇಷ್ಮಾಯೇಲ್) ರನ್ನು ಹೋಮ (ಬಲಿ) ಮಾಡಲು ಕೊಂಡು ಹೋಗುವಾಗ ತನ್ನನ್ನು ಅದರಿಂದ ಹಿಮ್ಮುಖನನ್ನಾಗಿಸಲು ಬಂದ ಸಾತಾನ್ (ಪಿಶಾಚಿ)ಯನ್ನು ಕಲ್ಲೆಸೆದು ಓಡಿಸಿದ್ದು.... ಹೀಗೆ ಹಲವಾರು ವಿದ್ಯಮಾನಗಳನ್ನು ಮುಸ್ಲಿಮರು ಹಜ್ಜ್ ಕರ್ಮದ ಮೂಲಕ ಸ್ಮರಿಸುತ್ತಾರೆ. ಬೈಬಲ್‍ನ ಹಳೆಯ ಒಡಂಬಡಿಕೆಯ ಆದಿಕಾಂಡ 21,22 ನೇ ಅಧ್ಯಾಯಗಳಲ್ಲಿ ಈ ಕ್ಷಣಗಳನ್ನು ವಿವರಿಸಲಾಗಿದೆ.
ಹಜ್ಜ್‍ನ ಕುರಿತಾದ ಹಲವಾರು ಪರಾಮರ್ಶೆಗಳನ್ನು ಬೈಬಲ್‍ನಲ್ಲಿ ಕಾಣಬಹುದು. ಅದನ್ನು ಗಮನಿಸೋಣ.
“ನಾನು ಇನ್ನು ಮುಂದೆ ಸಮಸ್ತ ಜನಾಂಗಗಳನ್ನೂ ಸಕಲ ಭಾಷೆಯವರನ್ನೂ ಒಟ್ಟಿಗೆ ಬರಮಾಡುವೆನು. ಅವರು ಬಂದು ನನ್ನ ಮಹಿಮೆಯನ್ನು ನೋಡುವರು.” (ಯೆಶಾಯನು 66:18)
ಈ ಭವಿಷ್ಯ ನುಡಿಯು (prediction) ಮುಸ್ಲಿಮರ ಹಜ್ಜ್ ಕರ್ಮಗಳ ಮೂಲಕ ಸಾಕ್ಷಾತ್ಕಾರವಾಗುತ್ತದೆ. ಕಾರಣ ಕರಿಯ, ಬಿಳಿಯ ಎಂಬ ವ್ಯತ್ಯಾಸವಿಲ್ಲದೆ ಸಕಲ ಜನತೆಯೂ ವಿವಿಧ ಭಾಷಿಕರೂ ಪವಿತ್ರ ಹಜ್ಜ್ ಕರ್ಮಕ್ಕಾಗಿ ಮಕ್ಕಾದಲ್ಲಿ ಒಂದುಗೂಡುತ್ತಾರೆ. ಹಜ್ ನಿರ್ವಹಿಸುವಾಗ ಅವರು ಪ್ರತ್ಯೇಕವಾಗಿ ದೇವ ಮಹಿಮೆಯ ಉದ್ಗಾರ ಮಾಡುತ್ತಾರೆ.
ಹಿಬ್ರೂ ವಂಶಜರು ತಮ್ಮ ಪಿತಾಮಹರಾದ ಅಬ್ರಹಾಮರಿಂದ ವಾರೀಸಾಗಿ ಪಡೆದ ಶಿಲೋಪಾಸನೆಯ (ಶಿಲೆ ಪ್ರದಕ್ಷಿಣೆ) ಬಗ್ಗೆ ಬೈಬಲ್ ಪರಾಮರ್ಶಿಸುವುದನ್ನು ಕಾಣಬಹುದು. ಇದು ವಿಗ್ರಹಾರಾಧನೆಯಲ್ಲ. ದೇವರಾಧನೆ ಲಕ್ಷ್ಯವಾಗಿಸಿ ಪ್ರತಿಷ್ಠಾಪಿಸಲಾದ ಒಂದು ಪ್ರತ್ಯೇಕ ಕಲ್ಲಿನ ಬಳಿ ನಡೆಸಲಾಗುವ ದೇವಾರಾಧನೆ ಮಾತ್ರವಾಗಿದೆ. ಇದು ಮುಸ್ಲಿಂಗಳ ಹಜ್ ಕರ್ಮದೊಂದಿಗೆ ಥಳುಕು ಹೊಂದಿದೆ. ಹಜ್ ಎಂಬ ಪದವು ಹಿಬ್ರೂ ಹಾಗೂ ಇನ್ನಿತರ ಸೆಮಿಟಿಕ್ ಭಾಷೆಗಳ ಪದೋದ್ಪತ್ತಿಯಾಗಿದೆ. ಮತ್ತು ಅರ್ಥದಲ್ಲಿ ಕಿಂಚಿತ್ತೂ ವ್ಯತ್ಯಾಸವಿಲ್ಲದೆ ಉಪಯೋಗಿಸಲ್ಪಟ್ಟಿದೆ. ಹಿಬ್ರೂ ಕ್ರಿಯಾ ಪದವು hಚಿರಿಚಿರಿ ಹಾಗೂ ಅರಬಿಯ hಚಿರಿಚಿರಿ ಒಂದೇ ರೀತಿಯದ್ದೆ. ಸೆಮಿಟ್ (ಅಬ್ಜದ್ ಹವ್ವಝ್) ಅಕ್ಷರಮಾಲೆಯ ಮೂರನೇ ಅಕ್ಷರವಾದ gemel ನ ಉಚ್ಚಾರಣೆಯಲ್ಲಿರುವ ವ್ಯತ್ಯಾಸ ಮಾತ್ರ ಅದರ ನಡುವೆ ಇದೆ. ಅರಬಿಯಲ್ಲಿ ಅದನ್ನು ‘ಜ’ ಎಂದು ಉಚ್ಚರಿಸಲಾಗುತ್ತದೆ. ಹಿಬ್ರೂವಿನಲ್ಲಿ ‘ಗ’ ಎಂದು ಉಚ್ಚರಿಸಲಾಗುತ್ತದೆ. ಇದೇ ಹಗಾಗ್ (haggag) ಎಂಬ ಪದವನ್ನು ಮೋಷೆಯ ನಿಯಮದಲ್ಲೂ ಪ್ರಯೋಗಿಸಲಾಗಿದೆ.
ಹರ್ಷೋಲ್ಲಾಸ ಹಾಗೂ ಸ್ತೋತ್ರಗಳಿಂದ ಪುಳಕಿತವಾದ ಧಾರ್ಮಿಕ ಉತ್ಸವವನ್ನು ನಿರ್ವಹಿಸುವ ಲಕ್ಷ್ಯದೊಂದಿಗೆ ನಿಯಮಾನುಸಾರವಾಗಿ ಶರವೇಗದಲ್ಲಿ ಪ್ರದಕ್ಷಿಣೆ ನಿರ್ವಹಿಸುವುದು ಎಂದಾಗಿದೆ ಈ ಪದದ ಅರ್ಥ. ಮಧ್ಯ ಪ್ರಾಚ್ಯದ ರಾಷ್ಟ್ರಗಳಲ್ಲಿ ನಡೆಯುವ ಉತ್ಸವ ದಿನಗಳಲ್ಲೂ ವಿವಾಹ ಸಮಾರಂಭಗಳಲ್ಲೂ ಕ್ರೈಸ್ತರು ಹಿಗ್ಗ ( higga) ಎಂಬ ಕರ್ಮವನ್ನು ಇಂದಿಗೂ ಅನುಷ್ಠಾನಗೈಯ್ಯುತ್ತಾರೆ.
ಯಾಕೋಬನು ಬೇರ್- ಶೇಬ ಬಿಟ್ಟು ಖಾರಾನಿಗೆ ನಡೆಸುತ್ತಿದ್ದ ಯಾತ್ರಾ ಮಧ್ಯೆ ಒಂದು ಅದ್ಭುತವಾದ ನಿಚ್ಚಣಿಗೆ ದರ್ಶಿಸಿದ ಬಗೆಯನ್ನು ಆದಿಕಾಂಡದಲ್ಲಿ (ಆದಿಕಾಂಡ 28:10-16) ವಿವರಿಸಲಾಗಿದೆ.
“ಹೊತ್ತಾರೆ ಅವನು ಎದ್ದಾಗ ತಾನು ತಲೆದಿಂಬಿಗೆ ಇಟ್ಟುಕೊಂಡಿದ್ದ ಕಲ್ಲನ್ನು ಕಂಬವಾಗಿ ನಿಲ್ಲಿಸಿ ಅದರ ತುದಿಯಲ್ಲಿ ಎಣ್ಣೆ ಹೊಯ್ದನು. ಆ ಸ್ಥಳಕ್ಕೆ ಬೇತೆಲ್ ಎಂದು ಹೆಸರಿಟ್ಟನು.” (ಆದಿಕಾಂಡ 28:18,19)
ದೇವರಿಗೆ ಹರಕೆ ಹೊತ್ತು ಯಾಕೋಬ ಈ ರೀತಿ ಹೇಳುತ್ತಾರೆ : “ ನಾನು ಕಂಬವಾಗಿ ನಿಲ್ಲಿಸಿರುವ ಈ ಕಲ್ಲು ದೇವರ ಮನೆಯಾಗುವುದು.” (ಆದಿಕಾಂಡ 28:22)
ಮಗದೊಂದೆಗೆ ಯಾಕೋಬ ಹಾಗೂ ಲಾಬೋನ್ ಸೇರಿ ಒಂದು ಕಲ್ಲಿನ ರಾಶಿ ನಿರ್ಮಿಸಿದಾಗಿ ಬೈಬಲ್ ಹೇಳುತ್ತದೆ.
“ಆಗ ಯಾಕೋಬನು ಕಲ್ಲನ್ನು ತೆಗೆದುಕೊಂಡು ಕಂಬವಾಗಿ ನಿಲ್ಲಿಸಿದನು. ಯಾಕೋಬನು ತನ್ನ ಕಡೆಯವರಿಗೆ ಕಲ್ಲುಗಳನ್ನು ಕೂಡಿಸಿರಿ ಎಂದು ಹೇಳಲು ಅವರು ಕಲ್ಲುಗಳನ್ನು ಕೂಡಿಸಿ ಕುಪ್ಪೆಯನ್ನು ಮಾಡಿದಾಗ ಅವರೆಲ್ಲರೂ ಆ ಕುಪ್ಪೆಯ ಬಳಿಯಲ್ಲಿ ಸಹಭೋಜನವನ್ನು ಮಾಡಿದರು. ಆ ಕುಪ್ಪೆಗೆ ಲಾಬಾನನು ‘ಯಗರಸಾಹದೂತ’ ಎಂದೂ ಯಾಕೋಬನು ಗಲೇದ್ ಎಂದೂ ಹೆಸರಿಟ್ಟರು. ಅದಕ್ಕೆ ಮಿಚ್ಪಾ ಎಂದು ಹೆಸರಾಯಿತು.” (ಆದಿಕಾಂಡ 31:45-49).
ತರುವಾಯ ಅದು ಇಸ್ರಾಯೀಲ್ ಐತಿಹ್ಯದಲ್ಲಿ ಒಂದು ಸಮ್ಮೇಳನ ಕೇಂದ್ರವಾಗಿಯೂ ಆರಾಧನಾ ಸ್ಥಳವಾಗಿಯೂ ಮಾರ್ಪಟ್ಟಿತು.
ಮಿಚ್‍ಪಾ ಎಂಬ ಪದದ ಅನುವಾದ ಕಾವಲುಗೋಪುರ ಎಂದಾಗಿದೆ. ಸೆಮಿಟಿಕ್ ನಾಮಗಳಲ್ಲಿನ ಂsmಚಿ zಚಿಚಿಜಿ ಎಂಬ ಬಗೆಯಿಂದ ಬಂದದ್ದಾಗಿದೆ ಇದು. ಇದು ಶಿಲೆ ಎಂಬ ಅರ್ಥ ಹೊಂದಿರುವ ಸಫಾ (safa) ಎಂಬ ಪುರಾತನ ಪದದಿಂದ ನಿಷ್ಟನ್ನಗೊಂಡ ಒಂದು ಪದವಾಗಿದೆ. ಒಂದು ಕಟ್ಟಡವನ್ನೋ ಸ್ಥಳವನ್ನೋ ಮಿಚ್‍ಪಾ ಎಂಬ ಪದವು ಸೂಚಿಸುತ್ತದೆ. ಶಿಲೆಗೆ ಹಿಬ್ರೂವಿನಲ್ಲಿ ಕಯಲಿ ಎಂದೂ ಅರಬಿಯಲ್ಲಿ ಹಜರ್ ಎಂಬುವುದು ಸಾಧಾರಣ ಪ್ರಯೋಗ. ಸಿರಿಯ್ ಭಾಷೆಯಲ್ಲಿ ಕಿಪ (kipa) ಎಂದೂ ಹೇಳಲಾಗುತ್ತದೆ. ಆದರೆ ಒಂದು ಪ್ರತ್ಯೇಕ ಸ್ಥಳವನ್ನೋ ವ್ಯಕ್ತಿಯನ್ನೋ ಶಿಲೆಯಾಗಿ ಬಣ್ಣಿಸುವಾಗ ಸಫಾ ಎಂಬುವುದು ಸಾಧಾರಣ ಪ್ರಯೋಗ ಎಂದು ಅರ್ಥೈಸಲಾಗುತ್ತದೆ. ಆಗ ಒಂದು ಸಫಾ ಸ್ಥಾಪಿತವಾದ ಸ್ಥಳ ಅಥವಾ ಪ್ರದೇಶ ಎಂಬುವುದೇ ಮಿಚ್ಪಾ ಎಂದಾಗುತ್ತದೆ. ಕಲ್ಲು ರಾಶಿಯಲ್ಲಿ ಪ್ರತಿಷ್ಠಾಪಿಸಲಾದ ಆ ಶಿಲೆಗೆ ಮಿಚ್‍ಪಾ ಎಂದು ನಾಮಕರಣ ಮಾಡುವಾಗ ಸುತ್ತಲೂ ಕಟ್ಟಡಗಳಿರಲಿಲ್ಲ ಎಂಬುವುದನ್ನು ಕಾಣಬಹುದಾಗಿದೆ. (ಒಂದು ‘ಸಫಾ’ನೆಲೆನಿಂತಿರುವ ಸ್ಥಳಕ್ಕೆ ಮಿಸ್ಫಾ ಎಂದು ಹೇಳಲಾಗುತ್ತದೆ).
ಪ್ರತಿಷ್ಠಾಪಿಸಲ್ಪಟ್ಟ ಶಿಲೆ ಮಾತ್ರವಲ್ಲ, ಅದು ಸ್ಥಾಪಿತವಾದ ಸ್ಥಳವೂ ಪಾವನ ಸ್ಮಾರಕವಾಗಿದೆ. ಆದ್ದರಿಂದಲೇ ಪಾವನ ಸ್ಮಾರಕವಾದ ಕಟ್ಟಡದ ಸುತ್ತಲೂ ಮುಸ್ಲಿಮರು ಹಜ್ಜ್ (ಹಿಬ್ರೂವಿನ ಹಿಗ್ಗ) ಅನುಷ್ಠಾನಗೈಯ್ಯುವುದು.
(ಕೃಪೆ:ಮುಹಮ್ಮದ್ ನೆಬಿ ಬೈಬಲಿಲ್-ಫಾದರ್ ಬೆಂಜಮಿನ್ ಕೆಲ್‍ದಾನಿ)
ಇದೇ ರೀತಿ ಇಸ್ಲಾಮಿನ ಪಂಚ ಸ್ತಂಭಗಳ ಬಗ್ಗೆ ಬೈಬಲ್‍ನ ಪರಾಮರ್ಶೆಯನ್ನು ಕಾಣಬಹುದು.
ಐದನೆಯ ಮತ್ತು ಕೊನೆಯ ಕಡ್ಡಾಯಕರ್ಮ ಹಜ್ಜ್ ನಿರ್ವಹಿಸುವುದಾಗಿದೆ. ಆರ್ಥಿಕವಾಗಿಯೂ ದೈಹಿಕವಾಗಿಯೂ ಸಾಮರ್ಥ್ಯವುಳ್ಳವರು ನಿರ್ಬಂಧಿತರಾಗಿ ಕೈಗೊಳ್ಳಲೇಬೇಕಾದ ಅರೇಬಿಯಾದಲ್ಲಿರುವ ಮಕ್ಕಾನಗರದ ತೀರ್ಥಯಾತ್ರೆಯ ಹೆಸರೇ ಹಜ್ಜ್ ಆಗಿರುತ್ತದೆ. ಹಜ್ಜ್ ವಿಶ್ವಸಹೋದರತೆಯನ್ನು ಪ್ರತಿಪಾದಿಸುವ ಮಹಾ ಸಮ್ಮೇಳನವಾಗಿದೆ. ಸಕಲ ಮನುಷ್ಯರೂ ಅಲ್ಲಾಹನ ದಾಸರು ಮತ್ತು ಅವನ ಅನುಸರಣೆ ಮಾಡಬೇಕಾದವರು ಮತ್ತು ಆತನ ಅನುಸರಣೆಯಲ್ಲಿಯೇ ಸಮಾನತೆ ಮತ್ತು ಸಮಾಧಾನ ಕಂಡುಕೊಳ್ಳಬೇಕಾದವರು ಎಂಬ ತಾತ್ಪರ್ಯವನ್ನು ಹಜ್ಜ್ ನೀಡುತ್ತದೆ. ಯತಾರ್ಥದಲ್ಲಿ ಏಕ ದೇವತ್ವವನ್ನು ಬಲವಾಗಿ ಪ್ರತಿಪಾದಿಸುವ ಇಸ್ಲಾಂ, ಮಾನವೀಯ ಏಕತೆಯನ್ನು ಸಾಧಿಸಿ ತೋರಿಸಿದ ಏಕೈಕ ಧರ್ಮವಾಗಿದೆ.
ಪ್ರಮುಖ ಪಂಗಡಗಳು
ಪ್ರಮುಖ ಹಬ್ಬಗಳು
ಜಿಹಾದ್
ಇಸ್ಲಾಮ್ ಧರ್ಮದಲ್ಲಿ ಜಿಹಾದ್ ಅಂದರೆ ಹೋರಾಡು ಎಂದರ್ಥ. ತನ್ನ ಕಾಮನೆಗಳ ವಿರುದ್ಧ ಹೋರಾಡುವುದು ಒಂದು ಜಿಹಾದ್ ಆಗಿದೆ. ಈಗಿರುವಂತೆ ಭಯೋತ್ಪಾದನಾ ಕೃತ್ಯಗಳಿಗೂ ಜಿಹಾದಿಗೆ ಯಾವುದೆ ಸಂಬಂಧವಿಲ್ಲ. ಜಿಹಾದ್ ಎಂಬ ಪದವು ಬಹಳ ಗಾಢವಾದ ಅರ್ಥವನ್ನು ಹೊಂದಿದೆ.
ಇಸ್ಲಾಂ ತುಳಿದು ಬಂದ ಹಾದಿ
ಸರಿಸುಮಾರು ೧೪೫೦ ವರ್ಷಗಳ ಹಿಂದೆ ಅರೇಬಿಯಾ ಮರುಭೂಮಿಯಲ್ಲಿರುವ ಮಕ್ಕಾನಗರಿಯ ಇತಿಹಾಸವು ಅತ್ಯದ್ಭುತ ತಿರುವನ್ನು ಕಂಡಿತು. ತನ್ನ ಬಾಲ್ಯದಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದವru ತನ್ನ ೪೦ನೇ ವಯಸ್ಸಿನಲ್ಲಿ ಮರಳುಗಾಡಿನಲ್ಲಿ ಕ್ರಾಂತಿಯ ಬಿರುಗಾಳಿಯನ್ನೆಬ್ಬಿಸಿದ ರೋಚಕ ಕಥೆಯಿದು. ಅಚ್ಚರಿ ಮೂಡಿಸುವ ಈ ಕ್ರಾಂತಿಯು ಬಿರುಗಾಳಿಯಂತೆ ಅಖಂಡ ಅರಬ್ ದೇಶ ಮಾತ್ರವಲ್ಲ ಇಡೀ ಜಗತ್ತನ್ನೇ ವ್ಯಾಪಿಸಿತು.ತಂದೆಯ ಮುಖವನ್ನು ನೋಡದ ಬಾಲ್ಯದಲ್ಲೇ ತಾಯಿಯ ವಿಯೋಗದ ವೇದನೆಯನ್ನನುಭವಿಸಿದ ಮತ್ತದರ ಬೆನ್ನಲ್ಲೇ ಪ್ರೀತಿಯ ತಾತರನ್ನೂ ಕಳಕೊಂಡು ಒಬ್ಬಂಟಿಗನಾಗಿ ಸಂಕಷ್ಟದಲ್ಲಿ ಸಿಲುಕಿದ ಓರ್ವ ನಿರಕ್ಷರಿ ಅನಾಥನ ಮೂಲಕ ಮಾನವ ಜಗತ್ತಿಗೆ ದೊರೆತ ಅನುಗ್ರಹೀತ ಹಾಗೂ ಅವಿಸ್ಮರಣೀಯ ಕ್ರಾಂತಿಯ ಕಥೆಯಿದು. ಈ ಕ್ರಾಂತಿಯ ಹೆಸರೇ'ಇಸ್ಲಾಂ'ಆಗಿದೆ. ಆದಿ ಮಾನವನೂ ಮೊತ್ತ ಮೊದಲ ಪ್ರವಾದಿಯೂ ಆದ ಹ. ಆದಮ್ (ಅ)ರಿಂದ ಹಿಡಿದು ಮಾನವ ಮಾರ್ಗದರ್ಶನಕ್ಕಾಗಿ ಹಂತ ಹಂತವಾಗಿ ಆಗಮಿಸುತ್ತಿದ್ದ ಪ್ರವಾದಿಗಳ ಸರಪಳಿಯ ಕೊನೆಯ ಕೊಂಡಿಯಾಗಿ ಈ ಮಹಾನ್ ಕ್ರಾಂತಿಕಾರಿ ಪ್ರವಾದಿಯು ಜಗತ್ತಿಗಾಗಮಿಸಿದರು. ಅವರೇನೂ ಹೊಸ ಸಂದೇಶವನ್ನು ನೀಡಲಿಲ್ಲ ಬದಲಾಗಿ ತನಗಿಂತ ಮುಂಚೆ ಪ್ರತ್ಯೇಕ ಕಾಲ ಮತ್ತು ಸಮುದಾಯಗಳಲ್ಲಿ ಆಗಮಿಸುತ್ತಿದ್ದ, ಪ್ರವಾದಿಗಳೆಂದು ಕರೆಯಲ್ಪಡುತ್ತಿದ್ದ ಸತ್ಪುರುಷರು ನೀಡಿದ "ಏಕ ಮತ್ತು ನೈಜ ಆರಾಧ್ಯನಾದ ಅಲ್ಲಾಹನನ್ನು ಮಾತ್ರ ಆರಾಧಿಸಿರಿ" ಎಂಬ ಸಂದೇಶವನ್ನೇ ಅವರೂ ಸಾರಿದರು. ಆಡಮ್ ಎಂದು ನಾಮಾಂಕಿತರಾದ ಹ.ಆದಂ, ನೋಹಾ ಎಂದು ಕರೆಯಲ್ಪಡುವ ಹ.ನೂಹ್, ಅಬ್ರಹಾಂ ಎಂದು ಪ್ರಸಿದ್ಧರಾದ ಹ.ಇಬ್ರಾಹೀಂ, ಡೇವಿಡ್ ಎಂದು ಪ್ರಖ್ಯಾತ ರಾದ ಹ.ದಾವೂದ್, ಮೋಸೆಸ್ ಎಂದು ನಾಮಪಡೆದ ಹ.ಮೂಸಾ, ಏಸುಕ್ರಿಸ್ತ ಎಂದು ಆರಾಧ್ಯ ಪಟ್ಟಕ್ಕೇರಿ ಸಲ್ಪಟ್ಟ ಹ. ಈಸಾ ಈ ಏಲ್ಲಾ ಗತಕಾಲದ ಪ್ರವಾದಿಗಳೂ ಇದೇ ಸಂದೇಶವನ್ನು ತನ್ನ ತನ್ನ ಸಮುದಾಯಗಳ ಮುಂದಿಟ್ಟಿದ್ದರು. ನಲ್ವತ್ತು ವರ್ಷಗಳ ಕಾಲ ಪ್ರತಿಯೊಂದು ನಿಮಿಷವನ್ನೂ ತನ್ನದೇ ಸಮಾಜದಲ್ಲಿ ಅವರು ಕಳೆದಿದ್ದರು. ತನ್ನ ಉತ್ತಮ ಗುಣನಡತೆ ಮತ್ತು ಪಾವನ, ಪರಿಶುದ್ಧ ಸ್ವಭಾವದಿಂದಾಗಿ ಬಾಲ್ಯದಿಂದಲೇ ಸಮಾಜದ ಪ್ರತಿ ಯೊಬ್ಬ ಸದಸ್ಯನ ಕಣ್ಮಣಿಯಾಗಿದ್ದ ಇವರ ಪ್ರಾಮಾಣಿಕತೆ ಮತ್ತು ಸತ್ಯವಂತಿಕೆ ಜನಜನಿತವಾಗಿತ್ತು, ಆದ್ದರಿಂದಲೇ ಇಡೀ ಜನಾಂಗವೇ ಅವರನ್ನು'ಅಲ್ ಅಮೀನ್' ಅರ್ಥಾತ್ ಪ್ರಾಮಾಣಿಕ ಮತ್ತು 'ಅಸ್ಸಾದಿಕ್' ಅರ್ಥಾತ್ ಸತ್ಯವಂತ ಎಂಬ ಬಿರುದಿನಿಂದ ಕರೆಯುತ್ತಿತ್ತು. ಎಂದೂ ಯಾರನ್ನೂ ದುಃಖಿಸದ ಇವರು ಸ್ವಯಂ ಇತರರಿಗಾಗಿ ದುಃಖವನ್ನು ಸಹಿಸುತ್ತಿದ್ದರು. ಅವರು ಮೂರ್ತಿಪೂಜಕರ ಜನಾಂಗದಲ್ಲಿದ್ದರು. ಆದರೆ ಅವರೆಂದೂ ಮೂರ್ತಿಪೂಜೆ ಮಾಡಿದವರಲ್ಲ. ವಿಗ್ರಹಾರಾಧನೆಯನ್ನು ಅವರು ದ್ವೇಷಿಸುತ್ತಿದ್ದರು. ಯಾವ ವಸ್ತುವೂ ಪೂಜಾರ್ಹವಲ್ಲವೆಂದು ಅವರ ಅಂತರಾತ್ಮವೇ ಹೇಳುತ್ತಿತ್ತು. ದೇವನು ಕೇವಲ ಒಬ್ಬನೇ ಆಗಿರಲು ಸಾಧ್ಯ ಎಂದು ಅವರ ಮನಸ್ಸು ಸ್ವಯಂ ಸಾಕ್ಷ್ಯವಹಿಸುತ್ತಿತ್ತು. ಆ ಅಜ್ಞಾನಿ ಜನಾಂಗದ ಮಧ್ಯೆ ಅವರು ಕಲ್ಲಿನ ರಾಶಿಯಲ್ಲಿರುವ ವಜ್ರದಂತೆ ಮಿನುಗುತ್ತಿದ್ದರು ಅಥವಾ ಗಾಢ ಅಂಧಕಾರದಲ್ಲಿ ಅವರೊಂದು ಪ್ರಾಕಾಶಮಾನ ದೀಪವಾಗಿದ್ದರು. ನಲವತ್ತನೇ ವಯಸ್ಸಿನಲ್ಲಿ ಅವರು ತನ್ನ ಸುತ್ತಲಿರುವ ಅಂಧಕಾರವನ್ನು ಕಂಡು ಗಾಬರಿಗೊಳ್ಳುತ್ತಾರೆ. ಅಜ್ಞಾನ, ಅನೀತಿ, ದುರ್ನಡತೆ, ಅಶಿಸ್ತು, ಬಹುದೇವ ವಿಶ್ವಾಸ ಮತ್ತು ವಿಗ್ರಹಾರಾಧನೆಯ ಒಂದು ಭಯಂಕರ ಸಮುದ್ರವು ಅವರನ್ನು ಸುತ್ತುವರಿದಿತ್ತು. ಈ ಉಸಿರು ಕಟ್ಟುವ ವಾತಾವರಣದಿಂದ ಅವರು ಹೊರ ಬರ ಬಯಸುತ್ತಿದ್ದರು ಮಾತ್ರವಲ್ಲ ತನ್ನಸುತ್ತ ಕವಿದಿರುವ ಅಂಧಕಾರವನ್ನು ದೂರೀಕರಿಸುವ ಜ್ಯೋತಿಯೊಂದನ್ನು ಶೋಧಿಸುತ್ತಿದ್ದರು. ಈ ಕೆಟ್ಟು ಹೋದ ವಿಶ್ವವನ್ನು ಅಳಿಸಿ ಒಂದು ಹೊಸ ವಿಶ್ವವನ್ನು ಕಟ್ಟಿ ಬೆಳೆಸ ಬಯಸುತ್ತಿದ್ದರು. ಅದಕ್ಕಾಗಿ ಅವರು ಜನವಾಸ ದಿಂದ ದೂರ ಮಕ್ಕಾನಗರಿಯ ಹೊರ ಭಾಗದ ಲ್ಲಿದ್ದ ಒಂದು ಬೆಟ್ಟದ ಗವಿಯಲ್ಲಿ ಏಕಾಂತ ಮತ್ತು ಪ್ರಶಾಂತ ವಾತಾವರಣದಲ್ಲಿ ದಿನಕಳೆಯ ತೊಡಗಿದರು. ಅಲ್ಲಿ ಉಪವಾಸವಿದ್ದು ತಮ್ಮ ಆತ್ಮ, ಮನಸ್ಸು ಮತ್ತು ಮಸ್ತಿಷ್ಕವನ್ನು ಇನ್ನಷ್ಟು ಶುದ್ಧವೂ ಪಾವನವೂ ಆಗಿ ಮಾರ್ಪಡಿಸುತ್ತಿದ್ದರು. ಧ್ಯಾನ ಚಿಂತನೆಗಳಲ್ಲಿ ನಿರತ ರಾಗುತ್ತಿದ್ದರು. ಇದ್ದಕ್ಕಿದ್ದಂತೆ ಒಂದು ದಿನ ಅವರ ಬಳಿ ದೇವಚರರಾದ'ಜಿಬ್ರೀಲ್' ಬಂದು ತಾವು ಸ್ರಷ್ಟಿಕರ್ತನ ಕಡೆಯಿಂದ ಆತನ ಸಂದೇಶವಾಹಕರಾಗಿದ್ದೀರೆಂದು ಹೇಳಿ ಅವರಿಗೆ ದೇವನಿದರ್ಶನಗಳನ್ನು ನೀಡಿದರು. ಹೀಗೆ ಅವರು ಗುಹೆಯ ಏಕಾಂತದಿಂದ ಹೊರ ಬರುತ್ತಾರೆ.ಮತ್ತು ತಮ್ಮ ಜನಾಂಗದ ಮುಂದೆ ಹೋಗಿ "ಈ ವಿಗ್ರಹಗಳು ಯಾವ ಕೆಲಸಕ್ಕೂ ಬರಲಾರವು. ಇವುಗಳನ್ನು ಬಿಟ್ಟು ಬಿಡಿ. ಈ ಭೂಮಿ, ಈ ಸೂರ್ಯ, ಈ ನಕ್ಷತ್ರಗಳು, ಈ ಭೂಮಿ-ಆಕಾಶಗಳಲ್ಲಿರುವ ಎಲ್ಲ ಶಕ್ತಿಗಳು ಒಬ್ಬ ದೇವನ ಸ್ರಷ್ಟಿಗಳು. ಅವನೇ ನಿಮ್ಮ ಸ್ರಷ್ಟಿಕರ್ತನು, ಪರಿಪಾಲಕನು, ಅನ್ನದಾತನು, ಜೀವನ ಮರಣಗಳನ್ನು ನೀಡುವವನು. ಎಲ್ಲವನ್ನೂ ತೊರೆದು ಆತನನ್ನೇ ಪೂಜಿಸಿರಿ. ಎಲ್ಲರನ್ನೂ ಬಿಟ್ಟು ಅವನಲ್ಲೇ ನಿಮ್ಮ ಅಗತ್ಯಗಳನ್ನು ಬೇಡಿರಿ. ನೀವು ಮಾಡುತ್ತಿರುವ ಈ ಕಳ್ಳತನ,ಲೂಟಿ ,ಮದ್ಯಪಾನ, ಜೂಜಾಟ ,ವ್ಯಭಿಚಾರ ಎಲ್ಲವೂ ಮಹಾಪಾಪಗಳಾಗಿವೆ, ಅವುಗಳನ್ನು ತೊರೆಯಿರಿ" ಎಂದು ಹೇಳುತ್ತಾರೆ. [೧೨] . ಸತ್ಯಪಥದ ಸಂದೇಶವಾಹಕರಾಗಿ ಕಾರ್ಯರಂಗಕ್ಕಿಳಿದ ಈ ಪ್ರವಾದಿಯನ್ನು ಕುಟುಂಬ ಸಮೇತ ಇಡೀ ಸಮುದಾಯವೇ ಪ್ರತಿರೋಧಿಸಿತು. ಈ ಪ್ರತಿರೋಧವೇ ಕ್ರಮೇಣ ದ್ವೇಷ ಮತ್ತು ಹಿಂಸೆಯ ರೂಪ ತಾಳಿತು. ಪ್ರವಾದಿ ಮತ್ತು ಅವರ ಅನುಯಾಯಿಗಳೂ ಸಮಾಜದ ಹಿಂಸೆ ಮತ್ತು ಅತಿಕ್ರಮಣಕ್ಕೆ ಗುರಿಯಾದರು. ಹಿಂಸೆಯು ಅತಿರೇಕಕ್ಕೆ ತಲುಪಿದಾಗ ಅವರಪೈಕಿ ಕೆಲವರು ಪ್ರವಾದಿಯವರ ಆದೇಶದ ಮೇರೆಗೆ ಸಮುದ್ರದಾಚಿನ ದೇಶವಾದ ಅಬಿಸೀನಿಯಾಕ್ಕೆ ವಲಸೆ ಹೋಗುತ್ತಾರೆ ಆದರೆ ಶತ್ರುಗಳು ಅಲ್ಲೂ ಇವರನ್ನು ಹಿಂಬಾಲಿಸಿ ಕೊಂಡು ಹೋಗುತ್ತಾರೆ. ಕ್ರೈಸ್ತ ಧರ್ಮಾನುಯಾಯಿಯಾದ ಅಲ್ಲಿಯ ಅರಸ ನಜ್ಜಾಶಿಯ ಮುಂದೆ ಮುಸಲ್ಮಾನರ ವಿರುದ್ಧ ದೂರನ್ನು ನೀಡಿ ಇವರನ್ನು ನಮಗೆ ಹಿಂತಿರುಗಿಸಬೇಕೆಂದು ವಿನಂತಿಸುತ್ತಾರೆ. ಆಗ ಸ್ತ್ರೀ-ಪುರುಷರನ್ನೊಳಗೊಂಡ ಸರಿಸುಮಾರು ನೂರು ಜನರ ತಂಡವನ್ನು ಪ್ರತಿನಿಧಿಸುತ್ತಾ ಪ್ರವಾದಿ ಯವರ ಪ್ರೀತಿಯ ಚಿಕ್ಕಪ್ಪರಾದ ಅಬೂತಾಲಿಬರ ಮಗನಾದ ಹ.ಜಾಫರ್(ರ)ರಾಜನ ಮುಂದೆ ಒಂದು ಭಾಷಣ ಮಾಡುತ್ತಾರೆ. ಅವರು ಹೇಳಿದರು,
"ಹೇ ಮಹಾರಾಜರುಗಳೇ! ನಾವು ಅಜ್ಞಾನದಲ್ಲಿದ್ದೆವು, ವಿಗ್ರಹಗಳನ್ನು ಪೂಜಿಸುತ್ತಿದ್ದೆವು ಸತ್ತ ಪ್ರಾಣಿಗಳನ್ನು ತಿನ್ನುತ್ತಿದ್ದೆವು, ದುಷ್ಕ್ರತ್ಯಗಳನ್ನೆಸಗುತ್ತಿದ್ದೆವು, ವ್ಯಭಿಚಾರ ಮತ್ತು ಅತ್ಯಾಚಾರಗಳಲ್ಲಿ ತಲ್ಲೀನರಾಗಿದ್ದೆವು, ನೆರೆಯವರನ್ನು ಉಪದ್ರವಿಸುತ್ತಿದ್ದೆವು, ಸ್ವತಃ ನಮ್ಮ ಸಹೋದರನನ್ನೇ ಅಕ್ರಮ ಮತ್ತು ಅನ್ಯಾಯಕ್ಕೆ ಗುರಿಪಡಿಸುತ್ತಿದ್ದೆವು,ನಮ್ಮ ಪೈಕಿಯ ಬಲಾಡ್ಯರು ದುರ್ಬಲರನ್ನು ತಿಂದೇಬಿಡುತ್ತಿದ್ದರು, ನಾವು ವ್ಯರ್ಥ ಮಾತುಗಳನ್ನಾಡುತ್ತಿದ್ದೆವು, ಯಾವುದೇ ಕಾನೂನು ಮತ್ತು ನಿಯಮಗಳಿಗೆ ನಾವು ಬದ್ಧರಾಗಿರಲಿಲ್ಲ, ಹೀಗಿರುವಾಗ ಅಲ್ಲಾಹನು ನಮ್ಮ ಬಳಿ ನಮ್ಮಿಂದಲೇ ಒಬ್ಬ ಮಹಾತ್ಮರನ್ನು ಕಳುಹಿಸಿದನು. ಅವರು ಕುಲೀನರೂ ಉತ್ತಮ ವಂಶ ಪರಂಪರೆಯುಳ್ಳವರೂ ಆಗಿದ್ದರು. ಅವರ ಸತ್ಯ ಸಂಧತೆ, ಪ್ರಾಮಾಣಿಕತೆ, ಪಾವಿತ್ರ್ಯತೆ ಮತ್ತು ಪರಿಶುದ್ಧತೆಯನ್ನು ನಾವೆಲ್ಲರೂ ಚೆನ್ನಾಗಿ ಅರಿತಿದ್ದೆವು, ಅವರು ನಮಗೆ ಏಕದೇವ ವಿಶ್ವಾಸದ ಸಂದೇಶವನ್ನು ನೀಡಿದರು. ಆ ಏಕ ನೈಜ ಆರಾಧ್ಯ ನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿಸಬಾರದು, ಕಲ್ಲುಗಳನ್ನೂ, ಮೂರ್ತಿಗಳನ್ನೂ ಪೂಜಿಸಬಾರದು ಎಂದವರು ನಮಗೆ ತಿಳಿ ಹೇಳಿದರು. ಸತ್ಯವನ್ನೇ ನುಡಿಯಿರಿ, ಕೆಡುಕುಗಳಿಂದ ಮತ್ತು ದುಶ್ಚಟಗಳಿಂದ ದೂರವಿರಿ, ವಾಗ್ಧಾನವನ್ನು ಪಾಲಿಸಿರಿ ಎಂದವರು ನಮಗೆ ಉಪದೇಶಿಸಿದರು. ಅವರು ನಮಗೆ ವಿನಮ್ರನಾಗುವ, ನಮಾಝ್ ನಿರ್ವಹಿಸುವ, ದಾನ ಧರ್ಮ ನೀಡುವ ಮತ್ತು ವ್ರತಾಚರಿಸುವ ಆದೇಶಗಳನ್ನು ನೀಡಿದರು. ಈ ಮಾತುಗಳಿಂದಲೇ ನಮ್ಮ ಸಮುದಾಯ ನಮ್ಮ ಶತ್ರುವಾಯಿತು ಅವರು ನಮ್ಮನ್ನು ದ್ವೇಷಿಸತೊಡಗಿದರು ಮತ್ತು ಸಾಧ್ಯವಾದಷ್ಟು ನಮ್ಮನ್ನು ಹಿಂಸಿಸಿದರು. ಏಕ ಅಲ್ಲಾಹನನ್ನು ಆರಾಧಿಸುವುದನ್ನು ಬಿಟ್ಟು ಪುನಃ ಕಲ್ಲು, ಮರ ಮತ್ತು ಅವುಗಳಿಂದ ಸ್ವತಃ ನಾವೇ ತಯಾರಿಸಿದ ಮೂರ್ತಿಗಳನ್ನು ಪೂಜಿಸುವಂತೆ ಈಗ ಅವರು ನಮ್ಮನ್ನು ಬಲಾತ್ಕರಿಸುತ್ತಿದ್ದಾರೆ. ಹೇ ಮಹಾರಾಜರುಗಳೇ ! ನಾವು ಅವರಿಂದ ಬಹಳ ಕಷ್ಟ ಹಾಗೂ ತೊಂದರೆಗಳನ್ನು ಅನುಭವಿಸಿದ್ದೇವೆ. ಸಹಿಸಲಸಾಧ್ಯವಾದ ಹಿಂಸೆಗೆ ಗುರಿಯಾಗಿದ್ದೇವೆ. ಕೊನೆಗೆ ತಮ್ಮ ದೇಶದಲ್ಲಿ ಆಶ್ರಯ ಪಡೆಯಲೆಂದು ವಲಸೆ ಬಂದಿದ್ದೇವೆ......"
ಪವಿತ್ರ ಕುರ್ಆನಿನಲ್ಲಿ ಅಲ್ಲಾಹನು ಹೇಳುತ್ತಾನೆ :
"ಹೇ ಜನರೇ! ನಿಮ್ಮನ್ನೂ ನಿಮ್ಮ ಪೂರ್ವಿಕರನ್ನೂ ಸ್ರಷ್ಟಿಸಿದ ನಿಮ್ಮ ಪ್ರಭುವಿನ ದಾಸ್ಯಾರಾಧನೆ ಮಾಡಿರಿ. ಹೀಗೆ ಮಾಡಿದರೆ ನೀವು ರಕ್ಷಣೆ ಹೊಂದಬಹುದು. ಅವನೇ ಭೂಮಿಯನ್ನುನಿಮಗೆ ಹಾಸನ್ನಾಗಿ ಹಾಸಿದನು. ನಿಮಗಾಗಿ ಆಕಾಶವನ್ನು ಮೇಲ್ಛಾವಣಿ ಮಾಡಿದನು. ಮೇಲ್ಭಾಗದಿಂದ ಮಳೆ ಸುರಿಸಿದನು.ಅದರ ಮೂಲಕ ತರತರದ ಬೆಳೆಗಳನ್ನು ಉತ್ಪಾದಿಸಿ ನಿಮಗೆ ಆಹಾರ ಒದಗಿಸಿದನು. ಇದನ್ನು ನೀವು ಅರಿತಿರುತ್ತ ಇತರ ರನ್ನು ಅಲ್ಲಾಹನಿಗೆ ಪ್ರತಿಸ್ಪರ್ಧಿಗಳನ್ನಾಗಿ ಮಾಡದಿರಿ.
ಪವಿತ್ರ ಕುರ್ಆನ್:ಅಧ್ಯಾಯ 2,ಸೂಕ್ತ 22
ಪ್ರಸಿದ್ಧ ವ್ಯಕ್ತಿಗಳು ಕಂಡಂತೆ
ಅಣ್ಣಾದೊರೈ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಶ್ರೀ ಅಣ್ಣಾದೊರೈಯವರು ೧೯೫೭ ರ ಅಕ್ಟೋಬರ್ ೭ ರಂದು ಪ್ರವಾದಿಜೀವನ ಕುರಿತು ಒಂದು ಭಾಷಣ ಮಾಡಿದ್ದರು ಅದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ ವೆನಿಸುತ್ತದೆ.ತನ್ನಭಾಷಣದಲ್ಲಿ ಅಣ್ಣಾದೊರೈಯವರು ಈ ರೀತಿ ಹೇಳಿದ್ದರು.
"ಇಸ್ಲಾಂ ಧರ್ಮದ ತತ್ವಗಳು ಮತ್ತು ವಿಶ್ವಾಸಗಳ ಅಗತ್ಯ ಆರನೇ ಶತಮಾನದಲ್ಲಿದ್ದಂತೆಯೇ ಇಂದಿನ ಜಗತ್ತಿಗೂ ಇದೆ. ಇಂದು ಜಗತ್ತು ಅನೇಕ ಸಿದ್ಧಾಂತಗಳ ಹುಡುಕಾಟದಲ್ಲಿ ಎಡವಿ ಬೀಳುತ್ತಿದೆ; ಎಲ್ಲಿಯೂ ಅದಕ್ಕೆ ತ್ರಪ್ತಿ ಲಭಿಸಿಲ್ಲ. ಇಸ್ಲಾಂ ಕೇವಲ ಒಂದು ಧರ್ಮವಲ್ಲ. ಅದು ಒಂದು ಜೀವನ ಸಿದ್ಧಾಂತ ಮತ್ತು ಅತ್ಯುತ್ತಮ ಜೀವನ ವ್ಯವಸ್ಥೆ ಯಾಗಿದೆ.ಈ ಜೀವನ ಕ್ರಮವನ್ನು ಲೋಕದ ಅನೇಕ ರಾಷ್ಟ್ರಗಳು ಪಾಲಿಸುತ್ತಿವೆ."
ಇಸ್ಲಾಮೀ ಜೀವನ ಸಿದ್ಧಾಂತ ಮತ್ತು ಇಸ್ಲಾಮೀ ಜೀವನ ವ್ಯವಸ್ಥೆಯನ್ನು ನಾವು ಹೊಗಳುವುದು ಏಕೆ? ಅಣ್ಣಾದೊರೈಯವರು ಹೇಳುತ್ತಾರೆ
"..ಇಸ್ಲಾಮೀ ಜೀವನ ಸಿದ್ಧಾಂತವು ಮನುಷ್ಯ ಮನಸ್ಸಿನಲ್ಲಿ ಏಳುವ ಎಲ್ಲ ಸಂಶಯಗಳಿಗೆ ಅತ್ಯುತ್ತಮ ರೀತಿಯಲ್ಲಿ ಉತ್ತರನೀಡುತ್ತದೆ ಎಂಬುದಕ್ಕಾಗಿ ಮಾತ್ರ." [೧೩]
ಇಸ್ಲಾಮಿನ ಇನ್ನೊಂದು ಗುಣ ವಿಶೇಷತೆಯೇನಂದರೆ ಯಾರು ಆ ಧರ್ಮವನ್ನು ಸ್ವೀಕರಿಸದನೋ ಅವನು ಕುಲ-ಗೋತ್ರಗಳ ಭೇದಭಾವವನ್ನು ಮರೆತೇ ಬಿಟ್ಟನು.ಮುದಗತ್ತೂರಿನಲ್ಲಿ (ತಮಿಳುನಾಡಿನ ಒಂದು ಊರು) ಪರಸ್ಪರ ಕತ್ತು ಕೊಯ್ಯುತ್ತಿದ್ದ ಜನರು ಇಸ್ಲಾಂ ಸ್ವೀಕರಿಸ ತೊಡಗಿದಾಗ ಇಸ್ಲಾಂ ಅವರನ್ನು ಅಣ್ಣ ತಮ್ಮಂದಿರಾಗಿ ಮಾರ್ಪಡಿಸಿತು.ಎಲ್ಲ ಭೇದಭಾವವೂ ಕೊನೆಗೊಂಡಿತು.ನೀಚ ಕುಲದವರು ನೀಚರಾಗಿ ಉಳಿಯಲಿಲ್ಲ.ಎಲ್ಲರೂ ಸನ್ಮಾನ್ಯರೂ ಗೌರವಾನ್ವಿತರೂ ಆಗಿ ಮಾರ್ಪಟ್ಟರು. ಎಲ್ಲರೂ ಸಮಾನ ಹಕ್ಕುಗಳನ್ನೂ ಹೊಂದಿದವರಾಗಿ ಪರಸ್ಪರ ಸಹೋದರತೆಯ ಬಂಧನದಲ್ಲಿ ಬಿಗಿಯಲ್ಪಟ್ಟಿತು.[೧೪]
ಗಾಂಧೀಜಿಯ
ಇದೇರೀತಿ ಮಹಾತ್ಮ ಗಾಂಧೀಜಿಯವರೊಮ್ಮೆ ಹೇಳಿದ್ದರು
"ಒಂದು ವೇಳೆ ನಾನು ಭಾರತದ ಸರ್ವಾಧಿ ಕಾರಿ ಯಾದರೆ ಒಂದು ಕಾಲದಲ್ಲಿ ಇಸ್ಲಾಮೀ ಸಾಮ್ರಾಜ್ಯದ ಖಲೀಫರಾಗಿದ್ದ ಉಮರ್ ರಂತೆ ಆಡಳಿತ ನಡೆಸುತ್ತೇನೆ"
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ
ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ.
ನ್ಯಾಯ ಸ್ಥಾಪಿಸುವಲ್ಲಿ ವಿಜಯಿಯಾಗಿದ್ದ ಉಮರ್(ರ) ರವರ ಆಡಳಿತಾವಧಿಯು ಎಲ್ಲ ವಿಧ ದಲ್ಲೂ ಮಾದರೀ ಆಡಳಿತವಾಗಿತ್ತು. ಮಕ್ಕಾನಗರದ ಸಾಮಾನ್ಯ ಆಡು ಮೇಯಿಸುವವನ ಮಗನಾಗಿದ್ದ ಉಮರ್ ರನ್ನು'ಖಲೀಫ'ರನ್ನಾಗಿ ಮಾಡಿದುದೇ ಇಸ್ಲಾಂ ಮತ್ತು ಇಸ್ಲಾಮೀ ಸಿದ್ಧಾಂತವಾಗಿತ್ತು.
ಡಾ .ಹೆಚ್ ಮೈಕಲ್ ಹಾರ್ಟ್
ಡಾ .ಹೆಚ್ ಮೈಕಲ್ ಹಾರ್ಟ್ ಮನುಷ್ಯ ಚರಿತ್ರೆಯಲ್ಲಿ ಸಾಧನೆಗಳನ್ನು ಮಾಡಿದ ನೂರುಜನ ಗಣ್ಯರ ಕುರಿತಂತೆ ಒಂದು ಗ್ರಂಥ ರಚಿಸುತ್ತಾರೆ ಆದರೆ ಅವರೆಲ್ಲರ ಪೈಕಿ ಮುಹಮ್ಮದ್(ಸ)ರಿಗೆ ಮೊದಲ ಸ್ಥಾನ ಕೊಡಲು ಅವರು ನಿರ್ಬಂಧಿತರಾಗುತ್ತಾರೆ. ಏಕೆಂದರೆ ಕೇವಲ ಇಪ್ಪತ್ತಮೂರು ವರ್ಷಗಳ ಅಲ್ಪ ಅವಧಿಯಲ್ಲಿ ಜೀವನದ ಎಲ್ಲ ರಂಗಗಳಲ್ಲಿಯೂ ಸ್ವಾಸ್ಥ್ಯವನ್ನು ಕಳೆದು ಕೊಂಡಂತಹ ಸಮಾಜದಲ್ಲಿ ತನ್ನ ವಿಚಾರಗಳನ್ನು ಕಾರ್ಯ ರೂಪಕ್ಕೆ ತಂದು ಒಂದು ಆದರ್ಶಪೂರ್ಣ ಜನಸಮೂಹವನ್ನು ಕಟ್ಟಿಬೆಳೆಸಿ ಅಡಿಯಿಂದ ಮುಡಿವರೆಗೆ ಪೂರ್ಣ ಪ್ರಮಾಣದಲ್ಲಿ ಬದಲಾದ ಒಂದು ರಾಷ್ಟ್ರವನ್ನು ಸ್ಥಾಪಿಸಿ ತೋರಿಸಿದ ಹೆಗ್ಗಳಿಕೆ ಇಡೀ ಮಾನವ ಇತಿಹಾಸದಲ್ಲೇ ಕೇವಲ ಮುಹಮ್ಮದ್(ಸ)ರಿಗೆ ಮಾತ್ರ ಸೇರಿದ್ದಾಗಿದೆ. ನ್ಯಾಯ ಸ್ಥಾಪಿಸುವಲ್ಲಿ ವಿಜಯಿಯಾಗಿದ್ದ ಉಮರ್(ರ) ರವರ ಆಡಳಿತಾವಧಿಯು ಎಲ್ಲ ವಿಧ ದಲ್ಲೂ ಮಾದರೀ ಆಡಳಿತವಾಗಿತ್ತು. ಮಕ್ಕಾನಗರದ ಸಾಮಾನ್ಯ ಆಡು ಮೇಯಿಸುವವನ ಮಗನಾಗಿದ್ದ ಉಮರ್ ರನ್ನು'ಖಲೀಫ'ರನ್ನಾಗಿ ಮಾಡಿದುದೇ ಇಸ್ಲಾಂ ಮತ್ತು ಇಸ್ಲಾಮೀ ಸಿದ್ಧಾಂತವಾಗಿತ್ತು.
ಡಾ .ಹೆಚ್ ಮೈಕಲ್ ಹಾರ್ಟ್
ಡಾ .ಹೆಚ್ ಮೈಕಲ್ ಹಾರ್ಟ್ ಮನುಷ್ಯ ಚರಿತ್ರೆಯಲ್ಲಿ ಸಾಧನೆಗಳನ್ನು ಮಾಡಿದ ನೂರುಜನ ಗಣ್ಯರ ಕುರಿತಂತೆ ಒಂದು ಗ್ರಂಥ ರಚಿಸುತ್ತಾರೆ ಆದರೆ ಅವರೆಲ್ಲರ ಪೈಕಿ ಮುಹಮ್ಮದ್(ಸ)ರಿಗೆ ಮೊದಲ ಸ್ಥಾನ ಕೊಡಲು ಅವರು ನಿರ್ಬಂಧಿತರಾಗುತ್ತಾರೆ. ಏಕೆಂದರೆ ಕೇವಲ ಇಪ್ಪತ್ತಮೂರು ವರ್ಷಗಳ ಅಲ್ಪ ಅವಧಿಯಲ್ಲಿ ಜೀವನದ ಎಲ್ಲ ರಂಗಗಳಲ್ಲಿಯೂ ಸ್ವಾಸ್ಥ್ಯವನ್ನು ಕಳೆದು ಕೊಂಡಂತಹ ಸಮಾಜದಲ್ಲಿ ತನ್ನ ವಿಚಾರಗಳನ್ನು ಕಾರ್ಯ ರೂಪಕ್ಕೆ ತಂದು ಒಂದು ಆದರ್ಶಪೂರ್ಣ ಜನಸಮೂಹವನ್ನು ಕಟ್ಟಿಬೆಳೆಸಿ ಅಡಿಯಿಂದ ಮುಡಿವರೆಗೆ ಪೂರ್ಣ ಪ್ರಮಾಣದಲ್ಲಿ ಬದಲಾದ ಒಂದು ರಾಷ್ಟ್ರವನ್ನು ಸ್ಥಾಪಿಸಿ ತೋರಿಸಿದ ಹೆಗ್ಗಳಿಕೆ ಇಡೀ ಮಾನವ ಇತಿಹಾಸದಲ್ಲೇ ಕೇವಲ ಮುಹಮ್ಮದ್(ಸ)ರಿಗೆ ಮಾತ್ರ ಸೇರಿದ್ದಾಗಿದೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಬರ್ನಾಡ್ ಷಾ
ಪ್ರಸಿದ್ಧ ತತ್ವಜ್ಞಾನಿ ಹಾಗೂ ಖ್ಯಾತ ಚಿಂತಕನಾದ ಬರ್ನಾಡ್ ಷಾ ಹೇಳುವಂತೆ
"ಆಧುನಿಕ ಲೋಕದ ಎಲ್ಲ ವಿಧ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಅದಕ್ಕಿರುವ ಒಂದೇ ಒಂದು ಮಾರ್ಗ ಮುಹಮ್ಮದರಂತಹ ಓರ್ವ ವ್ಯಕ್ತಿಯನ್ನು ಸರ್ವಾಧಿಕಾರಿಯನ್ನಾಗಿ ಮಾಡುವುದಾಗಿದೆ."
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ
ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ.
ಅದೇ ಪ್ರಕಾರ ಅದೇ ಪ್ರಕಾರ
"ಲೋಕದಲ್ಲಿ ಶಾಶ್ವತವಾಗಿ ಉಳಿಯುವ ಒಂದು ಧರ್ಮವಿದ್ದರೆ ಅದು ಇಸ್ಲಾಂ ಮಾತ್ರ ವಾಗಿದೆ ."
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ
ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ.
ಎಂದೂ ಬರ್ನಾಡ್ ಷಾ ಹೇಳಿರುತ್ತಾನೆ.
- 8 Dec, 2016
- ಶರೀಯತ್
- ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ, ತ್ರಿವಳಿ ತಲಾಖ್ ಪದ್ಧತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಲಹಾಬಾದ್ ಹೈಕೋರ್ಟ್, ಈ ಪದ್ಧತಿಯು ಅತ್ಯಂತ ಕ್ರೂರ ಹಾಗೂ ಅವಹೇಳನಕಾರಿ ಎಂದು ಅಭಿಪ್ರಾಯಪಟ್ಟಿದೆ. ದಂಪತಿ ನಡುವೆ ಹೊಂದಾಣಿಕೆಗೆ ಸಾಧ್ಯವೇ ಇಲ್ಲ ಎಂದಾಗ ಕೊನೆ ಕ್ಷಣದಲ್ಲಿ ವಿಚ್ಛೇದನ ನೀಡಬೇಕು ಎಂದು ಮುಸ್ಲಿಂ ಕಾನೂನಿನಲ್ಲಿ ಉಲ್ಲೇಖಿತವಾಗಿದೆ. ದಂಪತಿಯನ್ನು ಒಟ್ಟಿಗೆ ಮಾಡುವ ಎಲ್ಲಾ ವಿಧಾನಗಳು ವಿಫಲವಾದಾಗ ಮಾತ್ರ ‘ತಲಾಖ್’ ಮೊರೆ ಹೋಗಬೇಕು. ಆದರೆ, ಈಗ ಈ ಎಲ್ಲಾ ಆಶಯಗಳಿಗೆ ವಿರುದ್ಧವಾಗಿ ಆಚರಣೆ ನಡೆಯುತ್ತಿದೆ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.[೧೫]
- ತ್ರಿವಳಿ ತಲಾಖ್: ಚರ್ಚೆಗೆ ಮುಕ್ತವಾದಲ್ಲಿ ತಪ್ಪೇನಿದೆ ? ಸಾರಾ ಅಬೂಬಕರ್;22 Apr, 2017:ಮುಸ್ಲಿಂ ವೈವಾಹಿಕ ನಿಯಮಗಳು ಧಾರ್ಮಿಕ ನಿಯಮ ಹೇಗಾಗುತ್ತದೆ? ಮುಸ್ಲಿಂ ವಿವಾಹದ ಮುಖ್ಯ ಕ್ರಮ ‘ನಿಕಾಹ್’ ಆಗಿದೆ. ಇದು ಹುಡುಗಿಯ ತಂದೆ ಮತ್ತು ಹುಡುಗನ ತಂದೆಯ ನಡುವೆ ನಡೆಯುವ ಒಂದು ಒಪ್ಪಂದ. ಅಲ್ಲಿಯೂ ಆ ಕ್ರಮ ನಡೆಯುವಾಗ ಆ ಹೆಣ್ಣಿನ ಉಪಸ್ಥಿತಿ ಇಲ್ಲ.ಅಲ್ಲಿಯೂ ಆ ಕ್ರಮ ನಡೆಯುವಾಗ ಆ ಹೆಣ್ಣಿನ ಉಪಸ್ಥಿತಿ ಇಲ್ಲ. ಇದಕ್ಕೆ ನಾಲ್ಕು ಜನ ಸಾಕ್ಷಿ ಗಳೂ ಇರುತ್ತಾರೆ. ಇಬ್ಬರು ಗಂಡಸರ ನಡುವೆ ನಡೆಯುವ ಈ ಒಪ್ಪಂದ ಹೇಗೆ ಧರ್ಮವಾಗುತ್ತದೆ? ಮುಸ್ಲಿಂ ವೈವಾಹಿಕ ಸಂಬಂಧಗಳಲ್ಲಿ ಮಹಿಳೆಯರಿಗೆ ಏನೇನೂ ರಕ್ಷಣೆ ಇಲ್ಲದ ಕಾರಣ, ಈಗಿರುವ ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಪಡಿಸಿ ಮಹಿಳೆಯರಿಗೆ ಭದ್ರತೆ ದೊರೆಯುವಂತೆ, ವಿಚ್ಛೇದನವು ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಾದಂತಹ ನಿಯಮ ಜಾರಿ ಆಗಬೇಕು ಎಂದು ಮಹಿಳೆಯರು ಹೋರಾಡತೊಡಗಿದೊಡನೆ ‘ಅದು ನಮ್ಮ ಧಾರ್ಮಿಕ ನಿಯಮ, ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ’ ಎಂದು ಮುಸ್ಲಿಂ ಪುರುಷರು ಕಿರುಚಾಡತೊಡಗುತ್ತಾರೆ[೧೬]
‘ಖುಲಾ’ ಸ್ವಾತಂತ್ರ್ಯ
- ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಮಹಿಳೆಗೆ ರಕ್ಷಣೆ ಇಲ್ಲ ಎಂದು ವಾದಿಸುವವರಿಗೆ ಪುರುಷರ ‘ತಲಾಖ್’ ನಂತೆ ಮಹಿಳೆಯರ ‘ಖುಲಾ’ ಸ್ವಾತಂತ್ರ್ಯವೇಕೆ ಕಾಣುತ್ತಿಲ್ಲ? ತ್ರಿವಳಿ ತಲಾಖ್‌ಅನ್ನು ರದ್ದುಗೊಳಿಸಿದ ತಕ್ಷಣ ಮಹಿಳೆಗೆ ಎಲ್ಲಾ ರೀತಿಯ ರಕ್ಷಣೆ ಲಭಿಸಿಬಿಡುತ್ತದೆಯೇ? ಮುಸ್ಲಿಂ ಪುರುಷರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವಂತಹ ಸಂದರ್ಭದಲ್ಲಿ ಮುಸ್ಲಿಂ ಮಹಿಳೆ ಹೇಗೆ ತಾನೇ ಸುರಕ್ಷಿತವಾಗಿ ಇರಬಲ್ಲಳು? ಇಂಥ ಸ್ಥಿತಿಯಲ್ಲಿ ಮಹಿಳೆಗಾಗಿ ಅನುಷ್ಠಾನಗೊಂಡಿರುವ ‘ಖುಲಾ’ ಸ್ವಾತಂತ್ರ್ಯವನ್ನು ಕಾರ್ಯರೂಪಕ್ಕೆ ತರಲು ಹೋರಾಡಬೇಕೇ ವಿನಾ ಪುರುಷರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದಕ್ಕಲ್ಲ.[೧೭]
- ಖುಲಾ, ಎಂದರೆ ಸ್ತ್ರೀ ತನ್ನ ಪತಿಯಿಂದ ಬಿಡುಗಡೆಯನ್ನು ಕೇಳುವ ಸ್ವಾತಂತ್ರ್ಯ. ಆದರೆ, ಪುರುಷಪ್ರಧಾನ ಮನೋವೃತ್ತಿ ಇದನ್ನು ಅತ್ಯಂತ ಕಠಿಣ ಮತ್ತು ಅವಹೇಳನಕಾರಿಯಾಗಿ ಮಾಡಿದೆ. ‘ನಿನಗೆ ಹಕ್ಕು ಬೇಕಾ? ಅದನ್ನು ನೀನು ಹೇಗೆ ಅನುಭವಿಸುತ್ತೀಯೋ ನೋಡೋಣ’ ಎಂದು ಪುರುಷಸಮಾಜ ಬಡಪಾಯಿ ಸ್ತ್ರೀಯರಿಗೆ ಬೆದರಿಕೆಯ ಸವಾಲು ಹಾಕಿದಂತಿದೆ ಈ ಖುಲಾ ಪದ್ಧತಿ.[೧೮]
ಏಕಕಾಲ ತಲಾಕ್ -ವಿಚ್ಛೇದನ ಕ್ರಮ ನಿಯಮ ಬಾಹಿರ
- ವಿವಾದಿತ ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಐವರು ನ್ಯಾಯಮೂರ್ತಿಗಳ ಭಿನ್ನ ನಿಲುವಿನ ಹೊರತಾಗಿಯೂ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ದಿ.22 ಆಗಸ್ಟ್, 2017 ಮಂಗಳವಾರ ಈ ಪದ್ಧತಿಯನ್ನು ರದ್ದುಗೊಳಿಸುವ ತೀರ್ಪು ನೀಡಿದೆ. ಸಂವಿಧಾನ ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳು ವಿಭಿನ್ನ ನಂಬುಗೆ ಮತ್ತು ಧಾರ್ಮಿಕ ಹಿನ್ನೆಲೆಯಿಂದ ಬಂದಿದ್ದರೂ ಈ ಪದ್ಧತಿ ಕೊನೆಗೊಳಿಸುವ ಆದೇಶ ಹೊರಡಿಸಿದ್ದಾರೆ. ಸಿಖ್ ಧರ್ಮಕ್ಕೆ ಸೇರಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ಮುಸ್ಲಿಂ ಧರ್ಮಕ್ಕೆ ಸೇರಿದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರು ತ್ರಿವಳಿ ತಲಾಖ್ ಮಾನ್ಯತೆ ಎತ್ತಿಹಿಡಿದರು. ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ರೋಹಿಂಗ್ಟನ್ ನಾರಿಮನ್ ಮತ್ತು ಉದಯ್ ಲಲಿತ್ ಅವರು ತ್ರಿವಳಿ ತಲಾಖ್ ಸಂವಿಧಾನ ಬಾಹಿರ ಎಂದು ಅಭಿಪ್ರಾಯಪಟ್ಟರು. ಕುರಿಯನ್ ಜೋಸೆಫ್ ಕ್ರೈಸ್ತರಾದರೆ, ಯು.ಯು. ಲಲಿತ್ ಅವರು ಹಿಂದು. ರೋಹಿಂಗ್ಟನ್ ಎಫ್. ನಾರಿಮನ್ ಜೋರಾಸ್ಟ್ರಿಯನ್ ಧರ್ಮಕ್ಕೆ ಸೇರಿದವರು. ಬಹುಮತದ (3:2) ತೀರ್ಪಿನ ಆಧಾರದ ಮೇಲೆ ಸುಪ್ರೀಂಕೋರ್ಟ್ ತ್ರಿವಳಿ ತಲಾಖ್ ರದ್ದುಪಡಿಸಿದೆ. [೧೯]
ನೋಡಿ
ನೋಡಿ-ಹೆಚ್ಚಿನ ಓದಿಗೆ
- ತಲಾಖ್ ಎಂಬ ತೂಗುಗತ್ತಿ;ಸಾರಾ ಅಬೂಬಕರ್;27 Oct,2016 Archived 2016-11-02 ವೇಬ್ಯಾಕ್ ಮೆಷಿನ್ ನಲ್ಲಿ.
- ಮಹಿಳಾ ಹಕ್ಕುಗಳ ಚರ್ಚೆಗೆ ಇನ್ನಷ್ಟು ಬಲ;10 Dec, 2016 Archived 2016-12-10 ವೇಬ್ಯಾಕ್ ಮೆಷಿನ್ ನಲ್ಲಿ.
- ‘ತ್ರಿವಳಿ ತಲಾಖ್ ಬೇಡ’;ಸುಚೇತನಾ ನಾಯ್ಕ;12 Dec, 2016 Archived 2016-12-12 ವೇಬ್ಯಾಕ್ ಮೆಷಿನ್ ನಲ್ಲಿ.
- ತಲಾಖ್: ಸ್ತ್ರೀವಾದಿ ವಿರುದ್ಧ ಪುರುಷವಾದಿ;ರಂಜಾನ್ ದರ್ಗಾ;17 May, 2017 Archived 2017-05-17 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
- ↑ "Religious Composition by Country, 2010-2050" (in English). Retrieved 17-02-2023.
{{cite web}}
: Check date values in:|access-date=
(help)CS1 maint: unrecognized language (link) - ↑ ೨.೦ ೨.೧ ೨.೨ "Islam". www.britannica.com (in English). Retrieved 2022-05-09.
{{cite web}}
: CS1 maint: unrecognized language (link) - ↑ Esposito, John L. (2009). Esposito, J. L. (ed.). "Islam" in "The Oxford Encyclopedia of the Islamic World" (in English). Oxford University Press. ISBN 978-0-19-530513-5.
{{cite book}}
: CS1 maint: unrecognized language (link) - ↑ "Religious Composition by Country, 2010-2050" (in English). Retrieved 17-02-2023.
{{cite web}}
: Check date values in:|access-date=
(help)CS1 maint: unrecognized language (link) - ↑ Reeves, J. C. (2004). Bible and Qurʼān: Essays in scriptural intertextuality. Leiden: Brill. p. 177. ISBN 90-04-12726-7.
- ↑ "Religion: Three Religions, One God". Archived from the original on 17-02-2023. Retrieved 17-02-2023.
{{cite web}}
: Check date values in:|access-date=
and|archive-date=
(help) - ↑ Bennet, Clinton (2010). Interpreting the Qur'an: a guide for the uninitiated (in English). Continuum International Publishing Group. p. 101. ISBN 978-0-8264-9944-8.
{{cite book}}
: CS1 maint: unrecognized language (link) - ↑ "Muhammad: Prophet of Islam". Retrieved 17-02-2023.
{{cite web}}
: Check date values in:|access-date=
(help) - ↑ "Pillars of Islam". Retrieved 17-02-2023.
{{cite web}}
: Check date values in:|access-date=
(help) - ↑ Campo, Juan E. (2009). Encyclopedia Of Islam. Facts On File. p. 620.
- ↑ ಅಡಿಯಾರ್ ರ ಪುಸ್ತಕ "ನಾನ್ ಕಾದಲಿಕ್ಕುಂ ಇಸ್ಲಾಂ"(ನಾನು ಪ್ರೀತಿಸುವ ಇಸ್ಲಾಂ )ಪುಟ 39.ಅನುವಾದಕರು:ಇಬ್ರಾಹೀಂ ಸಯೀದ್
- ↑ ಸಯ್ಯದ್ ಅಬುಲ್ ಆಲಾಮೌದೂದಿಯವರ ಪುಸ್ತಕ'ಇಸ್ಲಾಂ ಧರ್ಮ' ಅನುವಾದಕರು:ಇಬ್ರಾಹೀಂ ಸಯೀದ್
- ↑ ಅಡಿಯಾರ್ ರ ಪುಸ್ತಕ "ನಾನ್ ಕಾದಲಿಕ್ಕುಂ ಇಸ್ಲಾಂ"(ನಾನು ಪ್ರೀತಿಸುವ ಇಸ್ಲಾಂ )ಪುಟ 38.ಅನುವಾದಕರು:ಇಬ್ರಾಹೀಂ ಸಯೀದ್
- ↑ ಅಡಿಯಾರ್ ರ ಪುಸ್ತಕ "ನಾನ್ ಕಾದಲಿಕ್ಕುಂ ಇಸ್ಲಾಂ"ನಾನು ಪ್ರೀತಿಸುವ ಇಸ್ಲಾಂ, ಪುಟ 40. ಅನುವಾದಕರು:ಇಬ್ರಾಹೀಂ ಸಯೀದ್
- ↑ http://www.prajavani.net/news/article/2016/12/08/457670.html
- ↑ "ತ್ರಿವಳಿ ತಲಾಖ್: ಚರ್ಚೆಗೆ ಮುಕ್ತವಾದಲ್ಲಿ ತಪ್ಪೇನಿದೆ ? ಸಾರಾ ಅಬೂಬಕರ್;22 Apr, 2017;". Archived from the original on 2017-06-14. Retrieved 2017-04-23.
- ↑ "ತಲಾಖ್, ಖುಲಾ ಮತ್ತು ಮುಸ್ಲಿಂ ಪುರುಷ;ಡಾ. ಷಾಕಿರಾ ಖಾನಂ;1 Jun, 2017". Archived from the original on 2017-06-03. Retrieved 2017-06-03.
- ↑ "'ಖುಲಾ' ಕುರಿತು ಒಂದಷ್ಟು ಖುಲಾಸಾ;ಎಂ. ಅಬ್ದುಲ್ ರೆಹಮಾನ್ ಪಾಷ;3 Jun, 2017". Archived from the original on 2017-06-02. Retrieved 2017-06-03.
- ↑ ನಿಲುವು: ಒಮ್ಮತದ ತೀರ್ಪು ಪ್ರಜಾವಾಣಿ ವಾರ್ತೆ 2೪ Aug, 2017[ಶಾಶ್ವತವಾಗಿ ಮಡಿದ ಕೊಂಡಿ]
ಆಧಾರ ಗ್ರಂಥಗಳು
- Bennet, Clinton (2010). Interpreting the Qur'an: a guide for the uninitiated (in English). Continuum International Publishing Group. p. 101. ISBN 978-0-8264-9944-8.
{{cite book}}
: CS1 maint: unrecognized language (link)
ಬಾಹ್ಯ ಕೊಂಡಿಗಳು
- ಕನ್ನಡದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಮಾಹಿತಿ
- cennet - ವಿಶೇಷ ಪುಟಗಳು ಇಸ್ಲಾಂ ಧರ್ಮ
- ವರ್ತಮಾನದ-ಅಗ್ನಿದಿವ್ಯ-ಮತ್ತು-ಇಸ್ಲಾಮ್:[[೧]]
- CS1 errors: dates
- CS1 maint: unrecognized language
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಚೊಕ್ಕಗೊಳಿಸಬೇಕಿರುವ ಲೇಖನಗಳು
- ಚೊಕ್ಕಗೊಳಿಸಬೇಕಿರುವ ಎಲ್ಲಾ ಪುಟಗಳು
- Cleanup tagged articles with a reason field
- Wikipedia pages needing cleanup
- NPOV disputes
- All NPOV disputes
- Pages actively undergoing a major edit
- Articles containing Arabic-language text
- ಉಲ್ಲೇಖವಿಲ್ಲದ ಲೇಖನಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಧರ್ಮ
- ಇಸ್ಲಾಂ ಧರ್ಮ
- ಇಸ್ಲಾಮ್